ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಯಕ್ಷಗಾನದ `ಕೃಷ್ಣ` ಕಣ್ಣಿಮನೆ ಗಣಪತಿ ಭಟ್ ಇನ್ನಿಲ್ಲ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಫೆಬ್ರವರಿ 18 , 2016
ಖ್ಯಾತ ಯಕ್ಷಗಾನ ಕಲಾವಿದ ಕಣ್ಣಿಮನೆ ಗಣಪತಿ ಭಟ್(47) ವಿಧಿವಶರಾಗಿದ್ದಾರೆ. ಬಹು ಅಂಗಾಗ್ಯ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ನಿಧನರಾದರು. ಅನಾರೋಗ್ಯ ಪೀಡಿತರಾಗಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಗಯಾಗದೇ ಅವರು ವಿಧಿವಶರಾದರು.

ವಿಶಿಷ್ಟ ಹಾಗೂ ಲಯಬದ್ಧ ಕುಣಿತಕ್ಕೆ ಹೆಸರಾಗಿದ್ದ ಕಣ್ಣಿಮನೆ ಅವರನ್ನು ಕಳೆದುಕೊಂಡ ಯಕ್ಷ ಲೋಕ ಬರಿದಾಗಿದೆ. ಅವರ ಅಪಾರ ಅಭಿಮಾನಿಗಳಲ್ಲಿ ನೋವು ಮನೆ ಮಾಡಿದ್ದು ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಡಗು ತಿಟ್ಟಿನ ಲಯಬದ್ಧದ ಕುನಿತಗಾರ ಇನ್ನಿಲ್ಲ ಎಂಬುದನ್ನು ಅಭಿಮಾನಿ ವರ್ಗ ಒಪ್ಪಿಕೊಳ್ಳುತ್ತಿಲ್ಲ.

ಸದಾ ಯಕ್ಷಗಾನಕ್ಕೆ ಹೊಸತನವನ್ನು ನೀಡಿದ್ದ ಕಣ್ಣಿಮನೆ ರಂಗದ ಮೇಲೆ ಸಂಚಲನವನ್ನೇ ಸೃಷ್ಟಿಸುತ್ತಿದ್ದರು. ಅವರ ಕೃಷ್ಣ, ಲವ-ಕುಶ, ಸುಧನ್ವ ಪಾತ್ರಗಳನ್ನು ಅಭಿಮಾನಿ ವರ್ಗ ಮರೆಯಲು ಸಾಧ್ಯವಿಲ್ಲ. ಅಭಿಮನ್ಯು ಪಾತ್ರಗಳಿಗೆ ಜೀವ ತುಂಬುತ್ತಿದ್ದ ಕಣ್ಣಿಮನೆ ಇನ್ನು ನೆನಪು ಮಾತ್ರ. ಸಾಲಿಗ್ರಾಮ, ಮಂದರ್ತಿ, ಪೆರ್ಡೂರು ಮೇಳಗಳಲ್ಲಿ ವೇಷ ಹಾಕುತ್ತಿದ್ದ ಕಣ್ಣಿಮನೆ ಯುವ ಯಕ್ಷ ಅಭಿಮಾನಿಗಳ ಫೆವರೇಟ್ ಆಗಿದ್ದರು. ಅತಿಥಿ ಕಲಾವಿದರಾಗಿಯೂ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದರು. ಕಳೆದ ನವೆಂಬರ್ ವೇಳೆ ಶಿರಸಿಯಲ್ಲಿ ಬಣ್ಣ ಹಚ್ಚಿದ್ದು ಅವರ ಕೊನೆಯ ಪ್ರದರ್ಶನವಾಗಿತ್ತು.

*********************


ಕೃಪೆ : kannada.oneindia.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ