ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಹೊಸನಗರ ಮೇಳ ಯಕ್ಷಗಾನ ಕಲೆಯನ್ನು ಬೆಳೆಸುತ್ತಿದೆ

ಲೇಖಕರು : ಉದಯವಾಣಿ
ಶನಿವಾರ, ಜೂನ್ 22 , 2013
ಮುಂಬಯಿ : ಯಕ್ಷಗಾನ ರಂಗವು ಆಧುನಿಕತೆಯ ದಾಳಿಗೆ ತುತ್ತಾಗುತ್ತಿರುವ ಈ ಸಂದರ್ಭದಲ್ಲಿ ಸಂಪ್ರದಾಯ ಬದ್ಧವಾಗಿ ಕಾಲಮಿತಿಯ ಯಕ್ಷಗಾನವನ್ನು ಪ್ರದರ್ಶಿಸುವುದರ ಮೂಲಕ ಯಕ್ಷಗಾನ ಕಲೆಯನ್ನು ಬೆಳೆಸುವ ಕೆಲಸವನ್ನು ಹೊಸನಗರ ಮೇಳವು ಮಾಡುತ್ತಿದೆ ಎಂದು ಕರ್ನಾಟಕ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಭರತ್‌ ಕುಮಾರ್‌ ಪೊಲಿಪು ಅವರು ತಿಳಿಸಿದರು.

ಅತಿಥಿ ಗಣ್ಯರು ಭಾಗವತ ಪದ್ಯಾಣ ಗಣಪತಿ ಭಟ್‌ ಮತ್ತು ಸಂಪಾಜೆ ಸೀನಪ್ಪ ರೈ ಅವರನ್ನು ಸಮ್ಮಾನಿಸಿದರು
ಅವರು ಜೂ. 22 ರಂದು ಮಾಟುಂಗಾ ಪಶ್ಚಿಮದ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಶ್ರೀರಾಮಚಂದ್ರಪುರ ಹೊಸನಗರ ಮೇಳದ ವತಿಯಿಂದ ಕಳೆದ 7 ದಿನಗಳ ಕಾಲ ನಡೆದ ಯಕ್ಷಗಾನ ಸಪ್ತಾಹದ ಸಮರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಕ್ಷಗಾನ ಕಲೆಯು ಅದರ ಮೂಲ ಸ್ವರೂಪಕ್ಕೆ ತೊಂದರೆಯಾಗದಂತೆ ಉತ್ತಮ ರೀತಿಯಲ್ಲಿ ಪ್ರದರ್ಶಿಸಿದರೆ, ಪ್ರೇಕ್ಷಕರು ಅದನ್ನು ಸಂತೋಷದಿಂದ, ಉತ್ಸಾಹದಿಂದ ಸ್ವೀಕರಿಸುತ್ತಾರೆ ಎಂಬುದು ಹೊಸನಗರ ಮೇಳವು ಕಳೆದ 7 ದಿನಗಳಿಂದ ತುಂಬಿದ ಸಭಾಗೃಹದಲ್ಲಿ ಪ್ರದರ್ಶಿಸಿದ ಯಕ್ಷಗಾನವೇ ಸಾಕ್ಷಿಯಾಗಿದೆ. ಇಂತಹ ಕಲೆಯನ್ನು ಪ್ರೋತ್ಸಾಹಿಸುತ್ತಿರುವ ಪ್ರಕಾಶ್‌ ಭಟ್‌ ಹಾಗೂ ರವೀಂದ್ರ ಭಂಡಾರಿಯವರು ನಿಜವಾಗಿಯೂ ಅಭಿನಂದನೀಯರು. ಈ ಸಮಾರಂಭದಲ್ಲಿ ಸಮ್ಮಾನಿಸಲ್ಪಟ್ಟ ಹಿರಿಯ ಭಾಗವತ ಪದ್ಯಾಣ ಗಣಪತಿ ಭಟ್‌ ಹಾಗೂ ಹಿರಿಯ ಕಲಾವಿದ ಸಂಪಾಜೆ ಸೀನಪ್ಪ ರೈ ಅವರನ್ನು ಸಮ್ಮಾನಿಸುವುದರೊಂದಿಗೆ ಉತ್ತಮ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ಹೊಸನಗರದ ಮೇಳದ ಹಿರಿಯ ಭಾಗವತ ಪದ್ಯಾಣ ಗಣಪತಿ ಭಟ್‌ ಹಾಗೂ ಹಿರಿಯ ಕಲಾವಿದ ಸಂಪಾಜೆ ಸೀನಪ್ಪ ರೈ ಅವರನ್ನು ಫಲಪುಷ# ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.

ಸಮಾರಂಭದಲ್ಲಿ ಆಶೀರ್ವಾಚನ ನೀಡಿದ ಪೇಜಾವರ ಮಠದ ಪ್ರಬಂಧಕ ಪ್ರಕಾಶ ಆಚಾರ್ಯ ಅವರು ಮಾತನಾಡುತ್ತಾ, ಯಕ್ಷಗಾನ ಸಪ್ತಾಹದ ಮೂಲಕ ಹಿಂದೂಗಳ ಪವಿತ್ರ ಗ್ರಂಥಗಳ ಕಥೆಗಳನ್ನು ತಿಳಿಯಪಡಿಸುವುದರೊಂದಿಗೆ ಭಾಗವತ ಸಪ್ತಾಹದಂತಹ ಪುಣ್ಯಕಾರ್ಯ ನಡೆಸಿದಂತಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಐಕಳ ಹರೀಶ್‌ ಶೆಟ್ಟಿ ಮಾತನಾಡಿ ನಮ್ಮ ಪವಿತ್ರವಾದ ಕಲೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಪ್ರಕಾಶ್‌ ಭಟ್‌ ಅವರು ಮಾಡುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಮುಂಬಯಿ ಮಹಾನಗರದ ಯಕ್ಷಗಾನ ಪ್ರೇಮಿಗಳಿಗೆ ಒಂದು ಉತ್ತಮ ಯಕ್ಷಗಾನವನ್ನು ನೋಡುವ ಅವಕಾಶವನ್ನು ಅವರನ್ನು ಕಲ್ಪಿಸಿದ್ದಾರೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಪೊಲ್ಯ ಉಮೇಶ್‌ ಶೆಟ್ಟಿ ಅವರು ಮಾತನಾಡಿ, ಉತ್ತರ ಭಾರತದಲ್ಲಿ ಪವಿತ್ರ ದೇವಸ್ಥಾನಗಳು ಹಾಗೂ ನದಿಗಳು ಹರಿಯುತ್ತಿದ್ದರೆ, ದಕ್ಷಿಣ ಭಾರತದಲ್ಲಿ ಯಕ್ಷಗಾನದಂತಹ ಪವಿತ್ರ ಕಲೆಗಳು ಹಿಂದೂ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ಮಾಡುತ್ತಿದೆ ಎಂದರು.

ಉದ್ಯಮಿ ಬಿ. ಗಣಪತಿ ಅವರು ಮಾತನಾಡಿ, ಹಿಂದೂ ಧರ್ಮದ ಕಥೆಗಳನ್ನು ಯಕ್ಷಗಾನದ ಮೂಲಕ ತೋರಿಸಿ, ಹಿಂದೂ ಧರ್ಮದ ಬಗ್ಗೆ ಜನರಿಗೆ ತಿಳಿಸುವ ಕಾರ್ಯವನ್ನು ಪ್ರಕಾಶ್‌ ಭಟ್‌ ಪರಿವಾರದವರು ಮಾಡುತ್ತಿದ್ದಾರೆ. ಅವರ ಈ ಕಾರ್ಯವನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕೆಂದರು.

ಸಮ್ಮಾನ ಸ್ವೀಕರಿಸಿದ ಭಾಗವತ ಪದ್ಯಾಣ ಗಣಪತಿ ಭಟ್‌ ಮತ್ತು ಸಂಪಾಜೆ ಸೀನಪ್ಪ ರೈ ಅವರು ಮಾತನಾಡಿ, ಇದು ಓರ್ವ ಕಲಾವಿದನಿಗೆ ಸಂದ ಗೌರವ. ಮುಂಬಯಿ ಮಹಾನಗರದಲ್ಲಿ ಇಂತಹ ಸಮ್ಮಾನ ಸಂದಿರುವುದು ನಮಗೆ ಸಂತಸವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷಗಾನ ಸಪ್ತಾಹದ ಸಂಯೋಜಕರಾದ ಪ್ರಕಾಶ್‌ ಭಟ್‌ ಅವರು, ಕಳೆದ 7 ದಿನಗಳಿಂದ ಈ ಯಕ್ಷಗಾನ ಸಪ್ತಾಹಕ್ಕೆ ಮುಂಬಯಿ ಕಲಾ ಪ್ರೇಮಿಗಳು ತುಂಬು ಹೃದಯದಿಂದ ಪ್ರೋತ್ಸಾಹಿಸಿದ್ದಾರೆ. ಪ್ರತಿದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಕ್ಷಗಾನ ಮೇಲಿನ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಶ್ರೀರಾಮಚಂದ್ರ ಮಠದಿಂದ ನಡೆಯುವ ಗೋರಕ್ಷಣಾ ಕಾರ್ಯಕ್ರಮದ ಬಗ್ಗೆ ತಿಳಿಸಿ, ಗೋವುಗಳ ರಕ್ಷಣೆ ಮಾಡಬೇಕೆಂದು ಸಭಿಕರಲ್ಲಿ ವಿನಂತಿಸಿದರು.

ವೇದಿಕೆಯಲ್ಲಿ ಇನ್ನೋರ್ವ ಸಂಯೋಜಕ ರವೀಂದ್ರ ಭಂಡಾರಿ ಅವರು ಉಪಸ್ಥಿತರಿದ್ದರು. ಪ್ರಕಾಶ್‌ ಭಟ್‌ ಮತ್ತು ಈಶ್ವರಿ ಪ್ರಕಾಶ್‌ ಭಟ್‌ ದಂಪತಿ ಹಾಗೂ ರವೀಂದ್ರ ಭಂಡಾರಿ ಅವರಿಗೆ ಸಭಿಕರು ಎದ್ದು ನಿಂತು ಚಪಾ#ಳೆ ತಟ್ಟುವುದರ ಮೂಲಕ 7 ದಿನಗಳ ಕಾಲ ಯಕ್ಷಗಾನದ ಸವಿಯನ್ನು ಉಣಿಸಿದಕ್ಕೆ ಧನ್ಯವಾದ ಸಮರ್ಪಿಸಿದರು. ಯಕ್ಷಗಾನ ಯಶಸ್ವಿಯಾಗಲು ಸಹಕರಿಸಿದ ಪೇಜಾವರ ಸತ್ಯಾನಂದರಾವ್‌, ಈಶ್ವರಿ ಪ್ರಕಾಶ್‌ ಭಟ್‌ ಹಾಗೂ ಪೂರ್ಣಚಂದ್ರ ಸತ್ಯಾನಂದ ರಾವ್‌ ಅವರನ್ನು ಹೂಗುಚ್ಚನೀಡಿ ಗೌರವಿಸಿಸಲಾಯಿತು.

ಹಿರಿಯ ಕಲಾವಿದ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಅವರು ಅಭಿನಂದನೆ ಭಾಷಣೆಗೈದರು. ಪತ್ರಕರ್ತ ದಯಾಸಾಗರ್‌ ಚೌಟ ಅವರು ಕಾರ್ಯಕ್ರಮ ನಿರೂಪಿಸಿದರು. ಸುಪ್ರೀಯಾ ಭಟ್‌ ಅವರು ವಂದಿಸಿದರು.

ಕೃಪೆ : http://www.udayavani.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ