ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಬಸವ ಯೋಜನೆ ಕೈಕೊಟ್ಟಾಗ ಕೈ ಹಿಡಿದ ಕಲಾರಂಗ

ಲೇಖಕರು : ವಿಜಯ ಕರ್ನಾಟಕ
ಶನಿವಾರ, ಜೂನ್ 11 , 2016
ಜೂನ್ 11 , 2016

ಬಸವ ಯೋಜನೆ ಕೈಕೊಟ್ಟಾಗ ಕೈ ಹಿಡಿದ ಕಲಾರಂಗ

ಉಡುಪಿ : ಸರಕಾರ ಬಸವ ಯೋಜನೆಯಲ್ಲಿ ಮನೆ ಮಂಜೂರುಗೊಳಿಸಿ ಅರ್ಧದಲ್ಲಿ ಕೈಕೊಟ್ಟರೆ, ಉಡುಪಿಯ ಯಕ್ಷಗಾನ ಕಲಾರಂಗ ಮನೆ ನಿರ್ಮಿಸಿ ಹಸ್ತಾಂತರಿಸಿ ನೆರವಾಗಿದೆ. ಇದರಿಂದಾಗಿ ಕುಕ್ಕೆಹಳ್ಳಿ ಗ್ರಾಮ ಹೊಸಂಗಡಿಯ ಸುಪ್ರಿತಾ ಎನ್ನುವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಕುಟುಂಬ ಮಳೆಗಾಲದಲ್ಲೂ ಬೆಚ್ಚಗೆ ಮಲಗುವಂತಾಗಿದೆ.

ಎರಡನೇ ಕ್ಲಾಸ್‌ ಕಲಿತಿರುವ ಹೊಸಂಗಡಿ ಲಲಿತಾ ಮತ್ತು ಮೂರನೇ ತರಗತಿ ಓದಿರುವ ಕಾರ್ಕಳ ಬೈಲೂರು ಸುಧಾಕರ ದಂಪತಿಗೆ ಸುಹಾಸಿನಿ ಮತ್ತು ಸುಪ್ರಿತಾ ಎಂಬ ಇಬ್ಬರು ಮಕ್ಕಳು. ಸುಧಾಕರ್‌ ಕುಡಿತದ ದಾಸರಾಗಿ ತೊಂದರೆ ಕೊಡತೊಡಗಿದ್ದರಿಂದ ಲಲಿತಾ ತನ್ನಿಬ್ಬರು ಮಕ್ಕಳೊಂದಿಗೆ ಹೊಸಂಗಡಿಗೆ ವಾಪಸಾಗಿ ಅಲ್ಲಿ ಗುಡಿಸಲು ಕಟ್ಟಿಕೊಂಡು ಮಕ್ಕಳನ್ನು ಓದಿಸುತ್ತಿದ್ದರು. ಕೆಲವು ವರ್ಷಗಳ ಬಳಿಕ ಒಂದೇ ಕೊಠಡಿಯ ಸಿಮೆಂಟ್‌ ಶೀಟ್‌ನ ಮನೆಯಲ್ಲಿ ವಾಸಿಸುತ್ತಿದ್ದು, ಮನೆಗಾಗಿ ಗ್ರಾಮ ಪಂಚಾಯಿತಿ ಮೂಲಕ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು.

ಇವರ ಸ್ಥಿತಿ ನೋಡಿ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾಗಿತ್ತು. 1.20 ಲಕ್ಷ ರೂ.ನಲ್ಲಿ ಒಟ್ಟು 39 ಸಾವಿರ ರೂ. ನೀಡಿದ್ದರಿಂದ ಪಂಚಾಂಗ ಕಟ್ಟಿ ಗೋಡೆ ನಿರ್ಮಿಸುವ ಹೊತ್ತಿಗೆ ಅಧಿಧಿಕಾರಿಗಳು ಕೈಕೊಟ್ಟು ಉಳಿದ ಹಣವೇ ಬಾರದೆ ಗೋಡೆ ಅರ್ಧದಲ್ಲಿಯೇ ಬಾಕಿಯಾಗಿತ್ತು.

ನೆರವಿಗೆ ಬಂದ ಕಲಾರಂಗ:

ದೊಡ್ಡ ಮಗಳು ಪಿಯುಸಿ ಮುಗಿಸಿದಾಗ ಓದಿದ್ದು ಸಾಕು ಎಂದು ಕೆಲಸಕ್ಕೆ ಕಳುಹಿಸಿದ್ದರು. ಸುಹಾಸಿನಿ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಎರಡನೆ ಮಗಳು ಸುಪ್ರಿತಾ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 76 ಅಂಕ ಪಡೆದರೂ, ಅಕ್ಕನೊಡನೆ ಕೆಲಸಕ್ಕೆ ಹೋಗುವಂತೆ ಅಮ್ಮ ಹೇಳಿದ್ದರು. ಓದುವ ಇಚ್ಚೆ ಇದ್ದ ಸುಪ್ರಿತಾಗೆ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ನಲ್ಲಿದ್ದ ದಿವ್ಯಾ ಎಂಬ ಗೆಳತಿಯೊಬ್ಬಳು ಅದರ ವಿಳಾಸ ನೀಡಿದ್ದಳು. ಅದರಂತೆ ವಿದ್ಯಾಪೋಷಕ್‌ ಸಂಪರ್ಕಿಸಿದ್ದರಿಂದ ಆಕೆ ಪಿಯುಸಿಗೆ ಹೋಗುವಂತಾಗಿತ್ತು. ಅಲ್ಲಿ ಪರಿಚಯವಾದ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್‌ಗೆ ತನ್ನ ಮನೆ ಅರ್ಧದಲ್ಲಿ ನಿಂತಿರುವ ಬಗ್ಗೆ ಏಪ್ರಿಲ್‌ನಲ್ಲಿ ತಿಳಿಸಿ ಬೇಸರ ಪಟ್ಟಿದ್ದಳು.

ಯಕ್ಷಗಾನ ಕಲಾರಂಗದವರು ಇವರ ಮನೆಗೆ ಭೇಟಿ ನೀಡಿ ಮನೆ ವೀಕ್ಷಿಸಿ ಮನೆ ಕಟ್ಟಿಕೊಡಲು ತೀರ್ಮಾನಿಸಿದ್ದಾರೆ. ಎರಡೇ ತಿಂಗಳಲ್ಲಿ ವಿವಿಧ ದಾನಿಗಳ ನೆರವಿನಿಂದ ಮನೆ ನಿರ್ಮಿಸಿ ನೀಡಿದ್ದಾರೆ.

ಮನೆ ಹಸ್ತಾಂತರ

ಮನೆ ಹಸ್ತಾಂತರ ಕಾರ್ಯಕ್ರಮ ಬುಧವಾರ ನಡೆದಿದೆ. ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮನೆ ಉದ್ಘಾಟಿಸಿ ಹಸ್ತಾಂತರಿಸಿದ್ದಾರೆ. ಸುಪ್ರಿತಾಳ ಮುಂದಿನ ವಿದ್ಯಾಭ್ಯಾಸದ ಖರ್ಚನ್ನು ಕಾಣಿಯೂರು ಮಠದಿಂದ ಭರಿಸುವುದಾಗಿ ಭರವಸೆ ನೀಡಿದ್ದಾರೆ.

ಕಲಾರಂಗ ಅಧ್ಯಕ್ಷ ಗಣೇಶ್‌ ರಾವ್‌, ಮುರಳಿ ಕಡೆಕಾರ್‌, ವಿಶ್ವನಾಥ ಶೆಣೈ, ಭುವನೇಂದ್ರ ಕಿದಿಯೂರು, ಪುರುಷೋತ್ತಮ ಪಟೇಲ್‌, ಎಂ.ಎಲ್‌.ಸಾಮಗ, ಎಸ್‌.ವಿ.ಭಟ್‌, ಗಂಗಾಧರ ರಾವ್‌, ಶೃಂಗೇಶ್ವರ್‌, ನಾರಾಯಣ ಹೆಗಡೆ, ಕಿಶನ್‌ ಹೆಗ್ಡೆ, ಭುವನಪ್ರಸಾದ್‌ ಹೆಗ್ಡೆ, ಅಶೋಕ್‌, ಶಿವಣ್ಣ, ರಾಮ ಕುಲಾಲ, ಗಂಗಾಧರ ಆಚಾರ್ಯ, ದಿನೇಶ್‌, ಕೃಷ್ಣಮೂರ್ತಿ, ಸುಧಾಕರ ಕುಲಾಲ್‌, ಲಲಿತಾ, ಸುಹಾಸಿನಿ, ಸುಪ್ರಿತಾ ಮತ್ತಿತರರು ಉಪಸ್ಥಿತರಿದ್ದರು.

ಕೃಪೆ : vijaykarnataka


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ