``ಉಡುಪಿ ಕ್ಷೇತ್ರ ಮಹಾತ್ಮೆ`` ನೂತನ ಯಕ್ಷಗಾನ ಪ್ರಸಂಗ ಬಿಡುಗಡೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಆಗಸ್ಟ್ 3 , 2016
|
ಆಗಸ್ಟ್ 3 , 2016
|
``ಉಡುಪಿ ಕ್ಷೇತ್ರ ಮಹಾತ್ಮೆ`` ನೂತನ ಯಕ್ಷಗಾನ ಪ್ರಸಂಗ ಬಿಡುಗಡೆ
ಉಡುಪಿ :
ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಶ್ರೀ ಸುಬ್ರಮಣ್ಯೇಶ್ವರ ಯಕ್ಷಗಾನ ಮಂಡಳಿಯ ನೂತನ ರಂಗಸ್ಥಳದ ಉದ್ಘಾಟನೆ ಹಾಗೂ ನೂತನ ಪ್ರಸಂಗ ಉಡುಪಿ ಕ್ಷೇತ್ರ ಮಹಾತ್ಮೆಯನ್ನು ಪರ್ಯಾಯ ಶ್ರೀ ಪೇಜಾವರ ಮಠಾದೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಬಿಡುಗಡೆ ಮಾಡಿದರು.
ಶ್ರೀ ವಿಶ್ವಪ್ರಸನ್ನ ತೀರ್ಥರು ಉಪಸ್ಥಿತರಿದ್ದರು. ಉಭಯ ಶ್ರೀಗಳು ನೂತನ ಪ್ರಸಂಗಕ್ಕೆ ಶುಭ ಹಾರೈಸಿದರು. ಅಂಬಲಪಾಡಿ ಜನಾರ್ಧನ ಮಹಾಕಾಳಿ ದೇವಸ್ಥಾನದ ದರ್ಮದರ್ಶಿ ವಿಜಯ ಬಲ್ಲಾಳರು ಅದ್ಯಕ್ಷತೆ ವಹಿಸಿದ್ದರು. ಮಣಿಪಾಲ ಎಂ. ಐ. ಟಿ. ಪ್ರಾದ್ಯಾಪಕ ಎಸ್. ವಿ. ಉದಯಕುಮಾರ ಶೆಟ್ಟರು ಶುಬಾಶಂಸನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಕಛೇರಿ ಎಜಿಎಂ. ವಿದ್ಯಾಲಕ್ಷ್ಮಿ, ವಾರ್ತಾ ಇಲಾಖಾದಿಕಾರಿ ರೋಹಿಣಿ, ಕಿದಿಯೂರು ಉದಯ ಕುಮಾರ ಶೆಟ್ಟಿ, ನಗರಸಭೆ ಸ್ಥಾಯೀ ಸಮಿತಿ ಸದಸ್ಯ ಪ್ರಶಾಂತ ಭಟ್. ಜಿಲ್ಲಾ ಬಿ. ಜೆ. ಪಿ ಉಪಾದ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ, ಪ್ರಕಾಶ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.
ಸಂಘದ ಅದ್ಯಕ್ಷ ದಾಮೋದರ ಭಟ್ ಸ್ವಾಗತಿಸಿ ಮಹಾಬಲ ಕುಂದರ್ ದನ್ಯವಾದವಿತ್ತರು. ಬಳಿಕ ಮಂಡಳಿಯ ಕಲಾವಿದರು ಮತ್ತು ಅತಿಥಿ ಕಲಾವಿದರಾದ ಬಾಗವತ ಎಸ್. ವಿ. ಉದಯಕುಮಾರ್ ಶೆಟ್ಟಿ. ಕಲಾವಿದರಾದ ಎಂ. ಎಲ್. ಸಾಮಗರ ಕೂಡುವಿಕೆಯಿಂದ ಉಡುಪಿ ಕ್ಷೇತ್ರ ಮಹಾತ್ಮೆ ಪ್ರಸಂಗದ ಪ್ರದರ್ಶನ ನೆರವೇರಿತು. ಉಭಯ ಶ್ರೀಗಳು ಪ್ರದರ್ಶನವನ್ನು ಸಂಪೂರ್ಣ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
|
|
|