ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
`ಶ್ರೀ ಹರಿಮಾಯೆ` ಆನಿಮೇಶನ್ ಯಕ್ಷಗಾನ ಸಿಡಿ ಬಿಡುಗಡೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಜುಲೈ 9 , 2013
ಮೂಡಬಿದಿರೆ: ಯಕ್ಷಗಾನಕ್ಕೆ ಆಧುನಿಕ ಸ್ಪರ್ಶ ನೀಡಿ ಗ್ರಾಫಿಕ್ ಮತ್ತು ಆನಿಮೇಶನ್ (ಜೀವಚೇತನ) ತಂತ್ರಜ್ಞಾನ ಅಳವಡಿಸಿ ತಯಾರಿಸಲಾದ ಯಕ್ಷಗಾನ ವಿ.ಸಿ.ಡಿ "ಶ್ರೀ ಹರಿಮಾಯೆ" ಬಿಡುಗಡೆ ಮತ್ತು ಭಾಗ್ಯ ಟೆಲಿ ಚಿತ್ರದ ಪ್ರದರ್ಶನ ಜುಲೈ 4ರಂದು ಅಮರಶ್ರೀ ಚಿತ್ರ ಮಂದಿರದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕ ಶೇಖರ ಅಜೆಕಾರು ತಿಳಿಸಿದ್ದಾರೆ.

ಪ್ರಕಾಶ್ ಕಾಬೆಟ್ಟು ಅವರ ಹಾರರ್ ಚಲನಚಿತ್ರ "ಭವ"ದ ಬಿಡುಗಡೆ ಪ್ರಯುಕ್ತ ಶ್ರೀ ವಿದ್ಯಾ ಸಂಸ್ಥೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಈ ಎರಡೂ ಚಿತ್ರಗಳನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರದರ್ಶನ ಮಾಡಲಾಗುತ್ತಿದೆ. ಮುಂಬಯಿಯ ಶ್ರೀ ಭ್ರಾಮರಿ ಯಕ್ಷ ನೃತ್ಯ ಕಲಾ ನಿಲಯದ ಕಟೀಲು ಸದಾನಂದ ಶೆಟ್ಟಿಯವರ ಪರಿಕಲ್ಪನೆಯಲ್ಲಿ ಸಂತೋಷ್ ಶೆಟ್ಟಿ.ಕಟೀಲು ಅವರ ತಾಂತ್ರಿಕ ಸಂಯೋಜನೆಯಲ್ಲಿ ಹೊರಬಂದಿರುವ - ಈ ಸಿಡಿಯನ್ನು ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಬಿಡುಗಡೆ ಮಾಡಲಿದ್ದಾರೆ. ಪಿಂಗಾರ ಪತ್ರಿಕೆಯ ಸಂಪಾದಕ ರೇಮಂಡ್ ಡಿ’ಕುನ್ಹ ತಾಕೋಡೆ, ಭವ ಚಿತ್ರದ ನಿರ್ಮಾಪಕ- ನಿರ್ದೇಶಕ ಪ್ರಕಾಶ್ ಕಾಬೆಟ್ಟು ಸಹಿತ ಅತಿಥಿಗಳು ಭಾಗವಹಿಸಲಿರುವರು."ಯಕ್ಷಗಾನದಲ್ಲಿ ಹೊಸ ಪ್ರಯೋಗ ಮಾಡಬೇಕು ಅದರ ಮೂಲ ಸ್ವರೂಪಕ್ಕೆ ದಕ್ಕೆ ಬಾರದ ರೀತಿಯಲ್ಲಿ ಹಿಮ್ಮೇಳ-ಮುಮ್ಮೇಳ ಉಳಿಸಿಕೊಂಡು ದೃಶ್ಯವನ್ನು ತಾಂತ್ರಿಕವಾಗಿ ಸಂಯೋಜನೆಗೊಳಿಸಿ ಮುಂದಿನ ಜನಾಂಗಕ್ಕೆ ನೀಡುವ ಆಶಯದೊಂದಿಗೆ ಈ ಸಿಡಿ ನಿರ್ಮಾಣಗೊಳಿಸಿದ್ದೇವೆ" ಎಂದು ಸದಾನಂದ ಶೆಟ್ಟಿ ಕಟೀಲು ಅಭಿಪ್ರಾಯ ಪಟ್ಟಿದ್ದಾರೆ.

ಮುಂಬಯಿಯಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುತ್ತಿರುವ 7 ಮಂದಿ ಮಕ್ಕಳು ಯಕ್ಷಗಾನ ಕಲಿತು ಇದರಲ್ಲಿ ಅಭಿನಯಿಸಿದ್ದಾರೆ.ಮುಂಬಯಿಯ ಹಿರಿಯ ಕಲಾವಿದರು ಧ್ವನಿ ನೀಡಿದ್ದಾರೆ. ಪ್ರಸಿದ್ಧ ಯುವ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಹಾಡಿದ್ದಾರೆ. ವೇದಮೂರ್ತಿ, ಪೆರ್ಣಂಕಿಲ ಹರಿದಾಸ್ ಭಟ್, ಹರಿಕೃಷ್ಣ ಪುನರೂರು, ಶ್ರೀಮತಿ ಸುಶೀಲ ಶೆಟ್ಟಿ, ಕಳತ್ತೂರು ವಿಶ್ವನಾಥ ಜೆ.ಶೆಟ್ಟಿ, ಸುಧಾಕರ ಜಿ.ಪೂಜಾರಿ ಪೊವಾಯಿ, ಸುರೇಂದ್ರ ಕುಮಾರ್ ಹೆಗ್ಡೆ, ಸರಳ ಬಿ.ಶೆಟ್ಟಿ, ಶೇಖರ ಅಜೆಕಾರು ಮೊದಲಾದವರು ಈ ಯಕ್ಷಗಾನ ದೃಶ್ಯ ತಟ್ಟೆಯ ಬಿಡುಗಡೆಯಲ್ಲಿ ಸಹಾಯ ಮಾಡಿದ್ದಾರೆ ಎಂದು ಸದಾನಂದ ಶೆಟ್ಟಿ ಕಟೀಲು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಹೊಸತು : ಯಕ್ಷಗಾನದಲ್ಲಿ ದೇವಲೋಕ, ಹಿಮಾಲಯ ಯಾವುದೇ ದೃಶ್ಯವನ್ನು ಮಾತಿನ ಮೂಲಕ ಕಟ್ಟಿಕೊಡಲಾಗುತ್ತದೆ. ಆದರೆ ಈ ಹೊಚ್ಚ ಹೊಸ ಪ್ರಯೋಗದಲ್ಲಿ ದೃಶ್ಯಗಳು ನೈಜ ಸನ್ನವೇಶದಲ್ಲಿ ನಡೆಯುವಂತೆ ತಾಂತ್ರಿಕ ಸ್ಪರ್ಶ ನೀಡಲಾಗಿದೆ. ಬೆಳ್ಳಿಬೆಟ್ಟದಲ್ಲಿ ಕಾಣಿಸಿಕೊಳ್ಳುವ ಈಶ್ವರ-ಪಾರ್ವತಿ, ಭಸ್ಮಾಸುರನ ಜನನ, ಕಾನನದಲ್ಲಿ ಭಸ್ಮಾಸುರನ ನೃತ್ಯ, ಭಸ್ಮಾಸುರ ಭಸ್ಮವಾಗುವ ದೃಶ್ಯ, ಶೇಷ ಶಯನ ಶ್ರೀಹರಿ ಹೀಗೆ ನೈಜ ಸನ್ನಿವೇಶಗಳನ್ನು ಒಳಗೊಂಡು "ಶ್ರೀಹರಿ ಮಾಯೆ" ಈ ಪ್ರಸಂಗ ಮೂಡಿ ಬಂದಿದೆ. ಈಗಾಗಲೇ ಮಾಧ್ಯಮದ ಮತ್ತು ಯಕ್ಷ ಪ್ರೇಮಿಗಳ ಗಮನವನ್ನು ತನ್ನತ್ತ ಸೆಳೆದಿರುವ ಈ ಪ್ರಯೋಗ ಜನಸಾಮಾನ್ಯರಿಗೂ ದೊರೆಯುವಂತಾಗಿದೆ.

ಯಕ್ಷಗಾನದ ಬೆಳವಣಿಗೆಯ ಹೊಸ ಆಯಾಮ ಇದು ಕೂಡ ಎಂದು ಯಕ್ಷ ವಿಮರ್ಶಕರು ಅಭಿಪ್ರಾಯ ಪಟ್ಟಿದ್ದು ಯಕ್ಷಾಭಿಮಾನಿಗಳ ಕಲಾವಿದರ ಸಲಹೆ ಸಸಹಕಾರದೊಂದಿಗೆ ಈ ಪ್ರಯೋಗದ ಮುಂದಿನ ಹೆಜ್ಜೆಯಾಗಿ ಇನ್ನೆರಡು ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ ಎಂದು ಸದಾನಂದ ಶೆಟ್ಟಿ ಕಟೀಲು ಅವರು ತಿಳಿಸಿದ್ದಾರೆ.

ಕೃಪೆ : http://www.nammabedra.com/


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ