ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಶಿವಮೊಗ್ಗದ ನಾಟ್ಯಕಲಾಶ್ರೀ ಯಕ್ಷೋತ್ಸವ ಉದ್ಘಾಟನೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಸೆಪ್ಟೆ೦ಬರ್ 20 , 2013
ಸೆಪ್ಟೆ೦ಬರ್ 20 , 2013

ಶಿವಮೊಗ್ಗದ ನಾಟ್ಯಕಲಾಶ್ರೀ ಯಕ್ಷೋತ್ಸವ ಉದ್ಘಾಟನೆ

ಉಡುಪಿ : ಕೇರಳ ಸರಕಾರ ಕಥಕ್ಕಳಿಗೆ ಪ್ರೋತ್ಸಾಹ ನೀಡಿ ಬೆಳೆಸಿದಂತೆ ರಾಜ್ಯದಲ್ಲಿಯೂ ಯಕ್ಷಗಾನ ಕಲೆಯ ಉಳಿವು ಬೆಳವಣಿಗೆಗಾಗಿ ವಿಶಿಷ್ಟ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು ಎಂದು ರಾಜ್ಯ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್ ಹೇಳಿದರು. ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶಿವಮೊಗ್ಗದ ನಾಟ್ಯಕಲಾಶ್ರೀ ತಂಡದ ಯಕ್ಷೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ಯಕ್ಷಗಾನ ಕಲೆಯ ಪ್ರದರ್ಶನ ಕೇವಲ ಸ್ಥಳೀಯ ಮಟ್ಟಕ್ಕೆ ಸೀಮಿತ ವಾಗದೆ ಅದರ ಸೀಮೋಲ್ಲಂಘನ ನಡೆಯಬೇಕು. ಕೇರಳದಲ್ಲಿ ಅಲ್ಲಿನ ಕಲಾಪ್ರಕಾರ ಕಥಕ್ಕಳಿ, ಒಡಿಶಾದಲ್ಲಿ ಒಡಿಸ್ಸಿಯಿರುವ ಹಾಗೆ ರಾಜ್ಯದಲ್ಲಿ ಯಕ್ಷಗಾನ ಎಂಬಂತಾಗಬೇಕು. ಆದರೆ ಯಕ್ಷಗಾನ ಕಲೆ ಕರಾವಳಿಗೆ ಎಂದಷ್ಟೇ ಆಗಿದೆ ಎಂದು ವಿಷಾದಿಸಿದ ಅವರು, ಯಕ್ಷಗಾನ ಅಕಾಡೆಮಿ ಈ ಬಗ್ಗೆ ಪ್ರಯತ್ನಿಸಬೇಕು. ಯಕ್ಷಗಾನ ಮತ್ತಷ್ಟು ಬೆಳೆಯಲು ವಿಶಿಷ್ಟ ಅಧ್ಯಯನ ಕೇಂದ್ರ ಸ್ಥಾಪಿಸಲು ಅಕಾಡೆಮಿ ಸರಕಾರದ ಮೇಲೆ ಒತ್ತಡ ತರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ಯಕ್ಷಗಾನದಲ್ಲಿ ಭಾರತೀಯ ಜೀವನದ ಪಾರಂಪರಿಕ ವೌಲ್ಯ ಅಡಗಿದೆ. ಸಾಕಷ್ಟು ಪ್ರಯೋಗಗಳಿಗೆ ಒಳಗಾಗುತ್ತಿರುವ ಯಕ್ಷಗಾನದಲ್ಲಿ ಇಂದು ಬಯಲಾಟ, ತಾಳಮದ್ದಳೆ ಕೂಟಗಳು ಕಡಿಮೆಯಾಗುತ್ತಿವೆ. ಹರಕೆ ಆಟಗಳು ಹೆಚ್ಚಾಗುತ್ತಿವೆ. ಆದರೂ ಈ ಪರಂಪರೆಯನ್ನು ಉಳಿಸಿ ಬೆಳೆಸುವ ಹಾಗೂ ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ಯಾರದು ಎಂಬುದರ ಬಗ್ಗೆ ಪ್ರಾಮಾಣಿಕ ಚರ್ಚೆ ನಡೆಯಬೇಕಿದೆ ಎಂದರು.

ಪ್ರೊ. ಎಂ.ಎಲ್. ಸಾಮಗ ಮಾತನಾಡಿ, ಯಕ್ಷಗಾನದಲ್ಲಿ ಕಾಲಮಿತಿ, ಆಂತರಿಕ ಉದ್ಧಾರ, ಕಲೋನ್ನತಿ ಬಗ್ಗೆ ಯೋಚನೆ ಮಾಡಬೇಕೇ ಎಂಬ ಜಿಜ್ಞಾಸೆ ಬೆಳೆದಿದೆ. ಯಕ್ಷಗಾನದ ಬಗ್ಗೆ ವಿಮರ್ಶಾ ಪ್ರಜ್ಞೆಯನ್ನು ಪೋಷಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳಿಂದ ಸಾಧ್ಯ ಎಂದರು.

ಆರಂಭದಲ್ಲಿ ಯಕ್ಷೋತ್ಸವವನ್ನು ಪರ್ಯಾಯ ಸೋದೆ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ನಾಟ್ಯಶ್ರೀ ಕಲಾತಂಡದ ಸಂಚಾಲಕ ವಿದ್ವಾನ್ ದತ್ತಮೂರ್ತಿ ಭಟ್ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಉದ್ಯಮಿ ಹರೀಶ್ ಹಂದೆ, ಕಲಾವಿದ ಮೋಹನ್ ಹೆಗಡೆ, ಶೃಂಗೇರಿಯ ದಿ. ಕಾಳಿಂಗ ನಾವುಡ ಪ್ರತಿಷ್ಠಾನ ಸಂಸ್ಥಾಪಕ ರಮೇಶ್ ಬೇಗಾರು ಉಪಸ್ಥಿತರಿದ್ದರು.

ಸಂಸ್ಕೃತ ಶಿಕ್ಷಕ ಜಿ.ಪಿ. ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ರಾಜ ಉಗ್ರಸೇನ ಹಾಗೂ ಶರಸೇತು ಬಂಧನ ಯಕ್ಷಗಾನ ಪ್ರದರ್ಶನ ನಡೆಯಿತು. ಸೆ. 21ರಂದು ಸಂಜೆ 6.30ಕ್ಕೆ ಬ್ರಹ್ಮ ಕಪಾಲ ಯಕ್ಷಗಾನ ಪ್ರದರ್ಶನವಿದೆ. ಸಂಜೆ 5.30ಕ್ಕೆ ನಾಟ್ಯಶ್ರೀ ಕಲಾ ತಂಡದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ