ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ನಶಿಸುತ್ತಿರುವ ಯಕ್ಷಗಾನ ಕಲೆಯ ಪುನರುಜ್ಜೀವನಕ್ಕೆ ಸಮಕಾಲೀನ ಗಾಣಿಗ ಕಲಾವಿದರ ಕೊಡುಗೆಯೂ ಅಪಾರ : ಎಸ್.ವಿ.ಶೆಟ್ಟಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಸೆಪ್ಟೆ೦ಬರ್ 28 , 2013
ಕುಂದಾಪುರ : ಯಕ್ಷಗಾನಕ್ಕೆ ಪ್ರಥಮ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಹಾರಾಡಿ ರಾಮಗಾಣಿಗರ ಕುಟುಂಬದ ಕುಷ್ಟ ಗಾಣಿಗ, ಮಹಾಬಲ ಗಾಣಿಗ, ನಾರಾಯಣ ಗಾಣಿಗ, ಬಸವ ಗಾಣಿಗರೂ ಸೇರಿದಂತೆ,ಸುಮಾರು ಇಪ್ಪತ್ತು ಮಂದಿ ಕಲಾವಿದರೊಂದಿಗೆ ಹೆರಂಜಾಲು ಕುಟುಂಬ, ವಂಡ್ಸೆ ಕುಟುಂಬ, ನಾವುಂದ ಮಹಾಬಲ ಗಾಣಿಗ, ಸುರ್ಗಿಕಟ್ಟೆ ಬಸವ ಗಾಣಿಗ, ಉದ್ಯಾವರ ಬಸವಗಾಣಿಗ, ಕೋಡಿ ಶಂಕರ ಗಾಣಿಗರಂತ ದೀಮಂತ ಕಲಾವಿದರಿಂದ ಈ ಬಾಗದ ಯಕ್ಷಗಾನ ಕಲೆ ಅರವತ್ತರ ದಶಕದಲ್ಲಿ ಉತ್ತುಂಗಕ್ಕೆ ಏರಲು ಸಾದ್ಯವಾದದ್ದು ಸತ್ಯವಾದರೂ ಈ ಮಹಾನ್ ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವಲ್ಲಿ ಸಮಕಾಲೀನ ಗಾಣಿಗ ಕಲಾವಿದರ ಕೊಡುಗೆಯೂ ಅಷ್ಟೇ ಗಮನಾರ್ಹ ಎಂದು ಮಣಿಪಾಲ ವಿಶ್ವ ವಿದ್ಯಾನಿಲಯದ ಪ್ರಾದ್ಯಾಪಕ, ಹವ್ಯಾಸಿ ಬಾಗವತ ಎಸ್.ವಿ.ಉದಯ ಕುಮಾರ ಶೆಟ್ಟರು ಅಭಿಪ್ರಾಯ ಪಟ್ಟರು.

--
ಅವರು ಕುಂದಾಪುರದಲ್ಲಿ ನೆಡೆದ ಯಕ್ಷಗಾನಕ್ಕೆ ಗಾಣಿಗ ಸಮಾಜದವರ ಕೊಡುಗೆ ಬಗ್ಗೆ ನೆಡೆದ ಗೋಷ್ಟಿಯಲ್ಲಿ ವಿಚಾರ ಮಂಡಿಸಿ ಮಾತನಾಡಿದರು.ಸುಮಾರು ಮೂರು ಮೇಳಕ್ಕಗುವಷ್ಟು ಕಲಾವಿದರಿರುವ ಈ ಸಣ್ಣ ಸಮಾಜದಲ್ಲಿ ಕುಂಜಾಲು ಶೈಲಿಯ ಹಿರಿಯ ಬಾಗವತ ಹೆರಂಜಾಲು ಗೋಪಾಲ ಗಾಣಿಗ, ಐರೋಡಿ ರಾಮ ಗಾಣಿಗ, ಹರಾಡಿ ಅಣ್ಣಪ್ಪ ಗಾಣಿಗರಂತ ಬಾಗವತರೂ, ಕೆಮ್ಮಣ್ಣು ಆನಂದ, ಸುರಗಿಕಟ್ಟೆ ಬಸವ ಗಾಣಿಗ, ಬಿರ್ತಿ ಬಾಲಕ್ರಷ್ಣ ಗಾಣಿಗ ರಂತ ವಾದಕರೂ, ವಂಡ್ಸೆ ನಾರಾಯಣ ಗಾಣಿಗ, ಹರಾಡಿ ಸರ್ವೋತ್ತಮ ಗಾಣಿಗ, ಕೋಡಿ ವಿಶ್ವನಾಥ ಗಾಣಿಗ, ಆಜ್ರಿ ಗೋಪಾಲ ಗಾಣಿಗ, ಉದ್ಯಾವರ ಜಯಕುಮಾರ,ಹರಾಡಿ ರಮೇಶ ಗಾಣಿಗ,ಉಪ್ಪುಂದ ಶ್ರೀದರ ಗಾಣಿಗ, ಹೊಸಂಗಡಿ ಕೃಷ್ಣ ಗಾಣಿಗ ಪ್ರವೀಣ ಗಾಣಿಗ, ಸಂಜೀವ ಗಾಣಿಗರಂತ ಮೇರು ಕಲಾವಿದರಿದ್ದಾರೆ ಇದರಲ್ಲಿ ಸುಮಾರು ಹದಿನೈದು ಮಂದಿ ಈಗಲೂ ವಿವಿದ ವೃತ್ತಿ ಮೇಳಗಳಲ್ಲಿ ಸೇವೆ ಸಲ್ಲಿಸುತಿದ್ದಾರೆ.

ಮ೦ದಾರ್ತಿ ಮೇಳಕ್ಕೂ ಗಾಣಿಗರಿಗೂ ಅನ್ಯೋನ್ಯ ಸಂಬಂದವಿದ್ದು ಇಂದಿಗೂ ಅತೀ ಹೆಚ್ಚು ಮಂದಿ ಗಾಣಿಗ ಕಲಾವಿದರು ಮ೦ದಾರ್ತಿ ಮೇಳದಲ್ಲೇ ಗುರುತಿಸಿಕೊಂಡಿರುವುದು ಗಮನಾರ್ಹ ಎಂದರು. ಈಗಿನ ತಲೆಮಾರಿನ ಈರ್ವರು ಮೇರು ಕಲಾವಿದರಾದ ಆಜ್ರಿ ಗೋಪಾಲ ಗಾಣಿಗ ಮತ್ತು ಕೋಡಿ ವಿಶ್ವನಾಥ ಗಾಣಿಗರು ಕ್ರಮವಾಗಿ ಮ೦ದಾರ್ತಿ ಮತ್ತು ಸೌಕೂರು ಮೇಳದಲ್ಲಿ ನಿರಂತರ ಒಂದೇ ಮೇಳದಲ್ಲಿ 25ಕ್ಕೂ ಅದಿಕ ವರ್ಷದಿಂದ ಸೇವೆ ಸಲ್ಲಿಸುತ್ತಿರುವುದು ಗಾಣಿಗರಿಗೂ ದೇವಿಯ ಕ್ಷೇತ್ರಕ್ಕೂ ಇರುವ ಅನ್ಯೋನ್ಯತೆಯನ್ನು ಸೂಚಿತ್ತದೆ, ಮ೦ದಾರ್ತಿ ಮೇಳದಲ್ಲಿ ಒಬ್ಬರಾದರೂ ಗಾಣಿಗ ಕಲಾವಿದರು ಇರಬೇಕೆಂಬ ಪ್ರತೀತಿ ಇದೆ ಎಂದು ಉದಯ ಕುಮಾರ ಶೆಟ್ಟರು ಅಭಿಪ್ರಾಯ ಪಟ್ಟರು. ಉಡುಪಿ ಲೋಕಸಭಾ ಸದಸ್ಯರಾದ ಕೆ.ಜಯಪ್ರಕಾಶ ಹೆಗ್ಡೆ ಮಾತನಾಡಿದರು.
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ