ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನದಲ್ಲಿ ನೈತಿಕ ಮೌಲ್ಯ ಪ್ರತಿಪಾದನೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಒಕ್ಟೋಬರ್ 26 , 2013
ಒಕ್ಟೋಬರ್ 26 , 2013

ಯಕ್ಷಗಾನದಲ್ಲಿ ನೈತಿಕ ಮೌಲ್ಯ ಪ್ರತಿಪಾದನೆ

ಮಂಗಳೂರು : ಯಕ್ಷಗಾನ ಕಲೆಯ ಸರ್ವಾಂಗೀಣ ವಿಕಾಸಕ್ಕೆ ಸಂಪ್ರದಾಯ ಪಾಲನೆಯ ಜತೆಗೆ ಕಾಲಾನುಸಾರಿ ವಿಚಾರಗಳು ಅಗತ್ಯ. ಕರಾವಳಿಯ ಈ ಕಲೆಯು ಸಂಸ್ಕಾರ, ನೈತಿಕ ಮೌಲ್ಯವನ್ನು ಪ್ರತಿಪಾದಿಸುತ್ತದೆ ಎಂದು ಶ್ರೀ ಕ್ಷೇತ್ರ ಮಾಣಿಲದ ಮೋಹನದಾಸ ಸ್ವಾಮೀಜಿ ಹೇಳಿದರು.

ನಾಟಕ ರಚನೆಗಾರ, ಯುವ ಪ್ರಸಂಗಕರ್ತ ಜಿ.ಕೆ.ಶ್ರೀನಿವಾಸ್‌ ಸಾಲ್ಯಾನ್‌ ಅವರಿಗೆ ಮಂಗಳೂರು ಪುರಭವನದಲ್ಲಿ ಕಲಾಭಿಮಾನಿಗಳ ಹಾಗೂ ಕಲಾವಿದರ ಸಂಘಟನೆಯ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಸಾಲ್ಯಾನ್‌ ಅವರನ್ನು ಶಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಧಾರ್ಮಿಕ ಮುಖಂಡರಾದ ಪದವಿನಂಗಡಿಯ ಪುರುಷೋತ್ತಮ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಜಿ.ಕೆ.ಶ್ರೀನಿವಾಸ್‌ ಸಾಲ್ಯಾನ್‌ ಅವರ 2ನೇ ನೂತನ ಪ್ರಸಂಗ 'ಕಾಡಕಾಮಿನಿ' ಅನ್ನು ಶ್ರೀ ಕ್ಷೇತ್ರ ಮಾಣಿಲ ಸ್ವಾಮೀಜಿ ಬಿಡುಗಡೆ ಮಾಡಿದರು.ಮನಪಾ ಸದಸ್ಯ ಹರಿನಾಥ್‌, ಯಕ್ಷಗಾನ ಕಲಾವಿದ ಎಂ.ಕೆ. ರಮೇಶ್‌ ಆಚಾರ್ಯ, ವಿಶ್ವನಾಥ ಶೆಟ್ಟಿ, ಮರವೂರು ಭಾಸ್ಕರ್‌ ಸಿ.ಮೂಲ್ಯ, ಗೋಪಾಲ್‌ ಸುವರ್ಣ ಸುಂಕದಕಟ್ಟೆ, ಪುತ್ತೂರು ಗಂಗಾಧರ ಭಂಡಾರಿ ಮತ್ತು ಪ್ರಮೋದ್‌ ಭಟ್‌ ಉಪಸ್ಥಿತರಿದ್ದರು. ಬಳಿಕ ಕನ್ನಡ, ತುಳು ಯಕ್ಷಗಾನ ಪ್ರಸಂಗ ನಡೆಯಿತು.

ಕೃಪೆ : http://udayavani.com/


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ