ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಉದಯೋನ್ಮುಖ ಯುವ ಯಕ್ಷಗಾನ ಕಲಾವಿದರನ್ನು ಪುರಸ್ಕರಿಸುವ ಕಾರ್ಯ ಶ್ಲಾಘನೀಯ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಡಿಸೆ೦ಬರ್ 31 , 2013
ಯಕ್ಷಗಾನ ರಂಗದಲ್ಲಿ ತೊಡಗಿಸಿಕೊಂಡ ಕೇವಲ ಖ್ಯಾತನಾಮ ಕಲಾವಿದರನ್ನೇ ಪದೆ ಪದೆ ಸನ್ಮಾನಿಸುವ ಬದಲು ಉದಯೋನ್ಮುಖ ಯುವ ಕಲಾವಿದರನ್ನು ಗೌರವಿಸುವುದು ಹೆಚ್ಚು ಸೂಕ್ತ. ಯಕ್ಷಗಾನ ಕಲೆಯತ್ತ ಯುವ ಪ್ರೇಕ್ಷಕರು ಮತ್ತು ಹೊಸ ಕಲಾವಿದರು ಹಿಂದೆ ಸರಿಯುತ್ತಿರುವ ಈ ಕಾಲಘಟ್ಟದಲ್ಲಿ ಯುವ ಕಲಾವಿದರನ್ನು ಸನ್ಮಾನಿಸಿದಾಗ ಅವರ ಜವಬ್ದಾರಿ ಹೆಚ್ಚುವುದರೊಂದಿಗೆ ಇನ್ನಷ್ಟು ಯುವಕರನ್ನು ಈ ಕಡೆಗೆ ಸೆಳೆಯಲು ಸಾದ್ಯ ಈ ನಿಟ್ಟಿನಲ್ಲಿ ಕಾರ್ಕಳ ಬೊಳೆಂತಡ್ಕ ಪೈ ಕುಟುಂಬದ ಸದಸ್ಯರು ನಾಲ್ವರು ಯುವ ಕಲಾವಿದರನ್ನು ಹಾಗೂ ಒಬ್ಬ ಮೇಳದ ಒಬ್ಬ ಕೆಲಸಗಾರನನ್ನು ಸನ್ಮಾನಿಸಿ ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದು ಮಣಿಪಾಲ ಎಂ. ಐ. ಟಿ ಯ ಪ್ರಾದ್ಯಾಪಕ ಎಸ್. ವಿ. ಉದಯ ಕುಮಾರ ಶೆಟ್ಟಿಯವರು ಹೇಳಿದರು.

ಅವರು ಕಾರ್ಕಳದ ಬೊಳೆಂತಡ್ಕ ಪೈ ಕುಟುಂಬದವರು ವರ್ಷಂಪ್ರತಿ ನೆಡಿಸಿಕೊಂಡು ಬರುತ್ತಿರುವ ಶ್ರೀ ಸಾಲಿಗ್ರಾಮ ಮೇಳದ ಬಯಲಾಟ ಕಾರ್ಯಕ್ರಮದ ವೇದಿಕೆಯಲ್ಲಿ ಯುವ ಉದಯೋನ್ಮುಖ ಕಲಾವಿದರಾದ ತುಂಬ್ರಿ ಬಾಸ್ಕರ, ವಂಡಾರು ಗೋವಿಂದ ಮೊಗವೀರ, ನಾಗರಾಜ ಭಂಡಾರಿ, ಯುವ ಬಾಗವತ ಸೂರಾಲು ರವಿ ಕುಮಾರ್, ಮತ್ತು ಡೇರ ಕೆಲಸಗಾರರಾದ ನಾಗು ಇವರನ್ನು ಪೈ ಕುಟುಂಬಸ್ಥರ ಪರವಾಗಿ ಸನ್ಮಾನಿಸಿ ಮಾತನಾಡಿದರು.

ಕುಟುಂಬದ ಹಿರಿಯರಾದ ಪಾಂಡುರಂಗ ಪಾಟಕ್ ಅದ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಖ್ಯಾತ ಚಾರ್ಟರ್ಡ್ ಎಕೌಂಟೆಂಟ್ ಬಿ. ಶಿವಾನಂದ ಪೈ ಕಲಾವಿದರನ್ನು ಪರಿಚಯಿಸಿ ಅಭಿನಂದನಾ ಬಾಷಣ ಮಾಡಿದರು. ಸನ್ಮಾನಿತರ ಪರವಾಗಿ ತುಂಬ್ರಿ ಬಾಸ್ಕರನವರು ಮಾತನಾಡಿದರು. ಪೈ ಕುಟುಂಬದ ಹಿರಿಯ ಸದಸ್ಯ ಪಾಂಡುರಂಗ ಪೈ ಉಪಸ್ಥಿತರಿದ್ದರು. ಕೃಷ್ಣಾನಂದ ಪೈ ಸ್ವಾಗತಿಸಿರು. ಮಹೇಶ ಪೈ ಧನ್ಯವಾದವಿತ್ತರು. ವಿಘ್ನೇಶ ಪೈ ಕಾರ್ಯಕ್ರಮ ಸಂಯೋಜಿದರು. ಬಳಿಕ ಸಾಲಿಗ್ರಾಮ ಮೇಳದ ಕಲಾವಿದರಿಂದ ಶ್ರೀ ರಾಮ ಪಟ್ಟಾಭಿಷೇಕ - ದ್ರೋಣಪರ್ವ - ರುಕ್ಮಾವತಿ ಕಲ್ಯಾಣ ಪ್ರಸಂಗಗಳ ಪ್ರದರ್ಶನ ನೆರವೇರಿತು.


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ