ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಯಕ್ಷಗಾನ ಎಂಬುದು ದೇವರ ಕೆಲಸ ಮಾಡಿದಂತೆ : ಕಿಶನ್ ಹೆಗ್ಡೆ

ಲೇಖಕರು : ಉದಯವಾಣಿ
ಶುಕ್ರವಾರ, ಜನವರಿ 31 , 2014
ಹಿರ್ಗಾನ ಶ್ರೀ ಕುಂದೇಶ್ವರ ದೇವಸ್ಥಾನ ಜಾತ್ರೆ ಸಂದರ್ಭ ಐದು ಮೇಳಗಳ ಸಂಚಾಲಕ ಬೈಲೂರು ಕಿಶನ್ ಹೆಗ್ಡೆ ಅವರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಿಶನ್ ಹೆಗ್ಡೆ, ಯಕ್ಷಗಾನ ಎಂದರೆ ಕೇವಲ ಕಲೆ ಅಲ್ಲ, ಅದು ಸಂಸ್ಕೃತಿ, ಧರ್ಮ.ದೇವರ ಕೆಲಸ ಮಾಡಿದಂತೆಯೇ ಶ್ರದ್ಧೆಯಿಂದ ಮಾಡಡಬೇಕು. ಪರಂಪರೆ ಹಿರಿಯರಿಂದ ಯುವಜನಾಂಗದತ್ತ ಸಾಗುವಲ್ಲಿ ಹಿಂದೆ ಬಿದ್ದಿದ ಎಂಬ ಕೂಗು ಇರುವ ನಡುವೆಯೂ ಕುಂದೇಶ್ವರದಂಥ ಊರಿನಲ್ಲಿ ಯುವ ಸಮೂಹ ಬಯಲಾಟ ಸತವಾಗಿ ಪ್ರದರ್ಶಿಸುತ್ತಿರುವುದು ಯಕ್ಷಗಾನಕ್ಕೆ ಒಳ್ಳೆ ಭವಿಷ್ಯ ಇರುವುದನ್ನು ಸೂಚಿಸುತ್ತದೆ ಎಂದರು.

ಸಾಲಿಗ್ರಾಮ ಡೇರೆ ಮೇಳ, ಹಿರಿಯಡ್ಕ, ಹಾಲಾಡಿ, ಮಡಾಮಕ್ಕಿ, ಸೌಕೂರು ಮೇಳಗಳ ಯಜಮಾನಿಕೆ ವಹಿಸುವ ಮೂಲಕ ಯಕ್ಷ ಸಂಸ್ಕೃತಿಯನ್ನು ಪೋಷಿಸುತ್ತಿರುವ ಕಿಶನ್ ಹೆಗ್ಡೆ, ಯಕ್ಷಗಾನದ ಸಮಥ ಯಜಮಾನ ಹೆಸರು ಗಳಿಸಿದವರು. ಪಳ್ಳಿ ಸೋಮನಾಥ ಹೆಗ್ಡೆ ಅವರ ಮಾರ್ಗದಶನದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಪರಂಪರೆ ಉಳಿಸಿ, ಬೆಳೆಸುತ್ತಿರುವ ಕಿಶನ್ ಹೆಗ್ಡೆ, ಯಕ್ಷರಂಗ ಕಂಡ ಅಪರೂಪದ ಸಂಘಟಕ ಎಂದು ಅಭಿನಂದನೆ ಭಾಷಣ ಮಾಡಿದ ಪತ್ರಕತ ಜಿತೇಂದ್ರ ಕುಂದೇಶ್ವರ ಹೇಳಿದರು.

ಕ್ಷೇತ್ರ ಧರ್ಮದರ್ಶಿ ದಿ.ರಾಘವೇಂದ್ರ ಭಟ್ ಮೇಳದ ಸಂಚಾಲಕರಾಗಿ, ಧಮದರ್ಶಿಗಳಾಗಿ, ಯಕ್ಷಗಾನ, ನಾಟಕ ಸಂಘಗಳನ್ನು ಕಟ್ಟಿ ಯುವ ಕಲಾವಿದರನ್ನು ರೂಪಿಸಿದವರು. ಅವರ ನೆನಪಲ್ಲಿ ಆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ, ಕುಂದೇಶ್ವರ ದೇವರ ಅನುಗ್ರಹ ರೂಪವಾಗಿ ಕುಂದೇಶ್ವರದ ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಧರ್ಮದರ್ಶಿ ಕೃಷ್ಣರಾಜೇಂದ್ರ ಭಟ್ ಹೇಳಿದರು.

ಹಿರಿಯ ಯಕ್ಷಗಾನ ಕಲಾವಿದ ನಡಿಬೆಟ್ಟು ಧಮರಾಜ ಕಟ್ಟಡ, ಲಕ್ಷ್ಮೀಪುರ ದೇಗುಲದ ಮಾಜಿ ಆಡಳಿತ ಮೊಕ್ತೇಸರ ಬಾಬಣ್ಣ ವಾಗ್ಲೆ, ಉದ್ಯಮಿ ಸಿರಿಯಣ್ಣ ಶೆಟ್ಟಿ ಇದ್ದರು. ಅಶ್ವತ್ಥನಾರಾಯಣ ವಾಗ್ಲೆ, ಪ್ರಕಾಶ್ ವಾಗ್ಲೆ, ಯಶವಂತ್, ಸದಾಶಿವ, ಶಂಕರ ಅಂಬೇಲ್ಕರ್ ಸಹಕರಿಸಿದರು.

ಕುಂದೇಶ್ವರದಲ್ಲಿ ಮಂಗಳವಾರದಿಂದ ಆರಂಭಗಂಡು ಶುಕ್ರವಾರ ವರೆಗೆ ಧಾಮಿಕ, ಸಾಂಸ್ಕೃತಿಕ ಕಾಯಕ್ರಮಗಳು ವಿಜೃಂಬಣೆಯಿಂದ ನಡೆದವು.ಕೃಪೆ : http://www.udayavani.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ