ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟರಿಗೆ ಪ್ರತಿಷ್ಟಿತ ಕರ್ನಾಟಕ ಸರ್ಕಾರದ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಡಿಸೆ೦ಬರ್ 3 , 2014
ಯಕ್ಷಗಾನ ವಿಮರ್ಶಕ, ಹವ್ಯಾಸಿ ಭಾಗವತ, ನಿರ್ದೇಶಕ ವಿವಿದ ಪತ್ರಿಕೆಗಳ ಅಂಕಣಗಾರ ಮಣಿಪಾಲದ ಪ್ರತಿಷ್ಟಿತ ಎಂ. ಐ. ಟಿ. ಯಲ್ಲಿ ಮೆಕ್ಯಾನಿಕಲ್ ಇಂಜಿನೀಯರಿಂಗ್ ವಿಭಾಗದಲ್ಲಿ ಕಳೆದ 26 ವರ್ಷಗಳಿಂದ ಪ್ರಾಧ್ಯಾಪಕರಾಗಿರುವ ಎಂ. ಟೆಕ್. ಪದವೀಧರ ಪ್ರೊ. ಎಸ್. ವಿ. ಉದಯಕುಮಾರ ಶೆಟ್ಟರಿಗೆ ಈ ಸಾಲಿನ ಪ್ರತಿಷ್ಟಿತ ಕರ್ನಾಟಕ ಸರ್ಕಾರದ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿಯು ರೂ 10,000/- ಮೊತ್ತ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಫ಼ೆಬ್ರವರಿ 2015 ರಂದು ಸಾಲಿಗ್ರಾಮದಲ್ಲಿ ನೆರವೇರಲಿದೆ. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡುವರು. ಕನ್ನಡ ಸಂಸ್ಕ್ರತಿ ಸಚಿವೆ ಉಮಾಶ್ರೀ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ವೃತ್ತಿಯಲ್ಲಿ ತಾಂತ್ರಿಕ ಕಾಲೇಜಿನ ಪ್ರಾಧ್ಯಾಪಕರಾದ ಎಸ್. ವಿ. ಉದಯಕುಮಾರ ಶೆಟ್ಟರು ಪ್ರವೃತ್ತಿಯಲ್ಲಿ ಯಕ್ಷಗಾನ ಭಾಗವತರು, ಚೆಂಡೆವಾದಕರು ಹಾಗೂ ವಿಮರ್ಶಕರು. ಯಕ್ಷಗಾನವನ್ನೇ ತನ್ನ ಉಸಿರಾಗಿರಿಸಿಕೊಂಡಿರುವ ಇವರು ಪ್ರಸಿದ್ದ ಭಾಗವತ ನೀಲಾವರ ರಾಮಕೃಷ್ಣಯ್ಯನವರಿಂದ ಯಕ್ಷಗಾನ ಭಾಗವತಿಕೆ ಅಭ್ಯಾಸ ಮಾಡಿದವರು.

ದೂರದರ್ಶನ ಆಕಾಶವಾಣಿಗಳಲ್ಲಿ 25 ವರ್ಷದಿಂದ ನಿರಂತರ ಕಾರ್ಯಕ್ರಮ ನೀಡುತ್ತಿರುವವರು. ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಇವರು, ಒಂದಕ್ಕೊಂದು ಸಂಬಂದವಿರದ ಇಂಜಿನೀಯರಿಂಗ್‌ನಲ್ಲಿ ಸ್ನಾತಕೋತ್ತರ ಪದವೀದರರು. ಪತ್ರಿಕೆಗಳಲ್ಲಿ ನೂರಾರು ಯಕ್ಷಗಾನ ಕಲಾವಿದರನ್ನು ಪರಿಚಯಿಸಿದ ಕೀರ್ತಿಗೆ ಭಾಜನರಾದವರು. ಇವರ ಹಲವಾರು ವಿಮರ್ಶಾ ಬರಹಗಳು ವಿವಿಧ ಸ್ಮರಣ ಸಂಚಿಕೆಯ ಪುಟಗಳನ್ನು ಅಲಂಕರಿಸಿವೆ.

ವಿವಿಧ ಸಂಘಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ಸೀತಾನಧಿ ಗಣಪಯ್ಯ ಶೆಟ್ಟಿ ಸಂಸ್ಮರಣಾ ಸಮಿತಿ, ಪಳ್ಳಿ ಸೋಮನಾಥ ಹೆಗ್ಡೆ ಸಂಸ್ಮರಣಾ ಸಮಿತಿ ಉಪಾದ್ಯಕ್ಷರಾಗಿ, ಕುಂದಾಪುರ ಎಂ. ಎಂ. ಹೆಗ್ಡೆ ಪ್ರತಿಷ್ಟಾನದ ಕಾರ್ಯದರ್ಶಿಯಾಗಿ, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಬ್ರಹ್ಮಾವರ ಅಜಪುರ ಕರ್ನಾಟಕ ಸಂಘದ ಸದಸ್ಯರಾಗಿ, ನೀಲಾವರ ಮಹಾಬಲ ಶೆಟ್ಟಿ ಸಂಸ್ಮರಣಾ ಸಮಿತಿಯ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸುತಿದ್ದಾರೆ.

ಹಿರಿಯ ಕಲಾವಿದರಾದ ಜಲವಳ್ಳಿ ವೆಂಕಟೇಶ ರಾವ್, ಅರಾಟೆ ಮಂಜುನಾಥ, ಐರೋಡಿ ಗೋವಿಂದಪ್ಪ, ರಾಮ ನಾಯರಿ, ಕುಂಜಾಲು ರಾಮಕೃಷ್ಣ ಕೋಡಿ ವಿಶ್ವನಾಥ ಗಾಣಿಗ ಮುಂತಾದವರ ಸನ್ಮಾನ ಸಮಿತಿಯ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಇವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸೀತಾನಧಿ ಪ್ರಶಸ್ತಿ, ಬೈಕಾಡಿ ಕೃಷ್ಣಯ್ಯ ಸ್ಮಾರಕ ಯಕ್ಷಶ್ರೀ ಪ್ರಶಸ್ತಿ ಸಹಿತ ಹಲವಾರು ಸನ್ಮಾನಗಳು ವಿವಿಧ ಮೇಳಗಳ ವೇದಿಕೆಯಲ್ಲಿ ನಡೆದಿವೆ. ಮೂಲತ ಶ್ರೀ ಕ್ಷೇತ್ರ ಮಂದಾರ್ತಿಯವರಾದ ಇವರು ಮಂದಾರ್ತಿ ಮೇಳ ನೀಡುವ ಹಾರಾಡಿ ರಾಮಗಾಣಿಗ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದಾರೆ. ಇವರ ಇಬ್ಬರು ಪುತ್ರರಾದ ಮಯೂರ್ ಶೆಟ್ಟಿ ಮತ್ತು ಮಾಣಿಕ್ಯ ಶೆಟ್ಟಿಮಣಿಪಾಲದ ಎಂ. ಐ. ಟಿ ಯಲ್ಲಿ ಅಂತಿಮ ಮತ್ತು ಪ್ರಥಮ ವರ್ಷದ ಇಂಜಿನೀಯರಿಂಗ್ ಓದುತಿದ್ದಾರೆ. ಪತ್ನಿ ನೀರಜಾ ಮತ್ತು ಮಕ್ಕಳೊಂದಿಗೆ ಮಣಿಪಾಲದ ಮನೆ “ಮಂದಿರಾ”ದಲ್ಲಿ ವಾಸಿಸುತಿದ್ದಾರೆ.

************`www.bayalata.com`ನಲ್ಲಿ ಪ್ರಕಟಗೊ೦ಡ ಎಸ್. ವಿ. ಉದಯಕುಮಾರ ಶೆಟ್ಟರ ಲೇಖನಗಳು


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ