ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಯಕ್ಷದೇಗುಲದ ಯಕ್ಷಗಾನ ಉತ್ಸವ ಮತ್ತು ಯಕ್ಷದೇಗುಲ ಸನ್ಮಾನ

ಲೇಖಕರು :
ಕೋಟ ಸುದರ್ಶನ ಉರಾಳ
ಗುರುವಾರ, ಏಪ್ರಿಲ್ 2 , 2015
28-03-2015ರಂದು ಯಕ್ಷದೇಗುಲ ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡಾನ್ ಬಾಸ್ಕೋ ಸಭಾಂಗಣದಲ್ಲಿ ಮೂರು ದಿನದ ಯಕ್ಷಗಾನ ಉತ್ಸವದ ಚಾಲನೆ ಮತ್ತು ಯಕ್ಷದೇಗುಲ ಸನ್ಮಾನ- 2014ರ ಸನ್ಮಾನ ನಡೆಯಿತು. ಯಕ್ಷಗಾನ ಉತ್ಸವಕ್ಕೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಯಕ್ಷದೇಗುಲ ಸನ್ಮಾನವನ್ನು ನೆರವೇರಿಸಿದ ಡಾ. ಎಂ. ಪ್ರಭಾಕರ ಜೋಷಿಯವರು `` ಭಿನ್ನ ವಿಚಾರಧಾರೆಯನ್ನು ಹೊಂದಿರುವ ಯಕ್ಷದೇಗುಲದ ಮೋಹನ್ ರು ನೇರವಾದ ದಿಟ್ಟವಾಗಿ ಮಾರ್ಗದರ್ಶನ ಮಾಡುವಲ್ಲಿ, ಅಲ್ಲದೇ ಕಲೆಯ ಉತ್ಕರ್ಷವನ್ನು ತೋರಿಸುವಲ್ಲಿ ಮೆರೆದವರು. ಕಳೆದ 34 ವರ್ಷದಿಂದ ತಂಡದೊಂದಿಗೆ, ಕಲಾವಿದರನ್ನು, ಕಲೆಯನ್ನು ಬೆಳೆಸಿದ್ದಾರೆ. ಹಾಗೆ ಇಂದು ಯಕ್ಷದೇಗುಲ ಸನ್ಮಾನ ಸ್ವೀಕರಿಸುತ್ತಿರುವ ಮಾಧವ ನಾಯ್ಕರು ಯಕ್ಷಗಾನ ಕ್ಷೇತ್ರದಲ್ಲಿ ಶಿಸ್ತಿಗೊಳಗಾಗಿ ವಿನಯಶೀಲತೆಯಿಂದ ವ್ಯವಹರಿಸಿದವರು. ಕೋಟ ಶಿವರಾಮ ಕಾರಂತರ ಜೊತೆಗೆ ನಿರಂತರ 30ವರ್ಷಗಳ ಕಾಲ ಯಕ್ಷರಂಗದಲ್ಲಿ ಹಲವು ವೇಷಗಳ ಮೂಲಕ ತಮ್ಮದೇ ಛಾಪನ್ನು ಒತ್ತಿದ ಪೇತ್ರಿ ಮಾಧವ ನಾಯ್ಕರಲ್ಲಿ ಕಲಾ ಪರಿಣತಿಯನ್ನು ಮೀರಿದ ಸಾಮಥ್ರ್ಯ ಪ್ರತಿಭೆ ಇದೆ. ಅವರು ಪ್ರಸ್ತುತ ಗೌರವಕ್ಕೆ ಅರ್ಹರು`` ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ ಕುಮಾರ್ ಕಲ್ಕೂರರವರು ಮಾತನಾಡಿ ಯಕ್ಷದೇಗುಲ ನಮ್ಮ ಮಂಗಳೂರಿನಲ್ಲಿ ಯಕ್ಷಗಾನ ಉತ್ಸವ ನಡೆಸುತ್ತಿರುವುದು ಸಂತೋಷದ ವಿಚಾರ. ಹಾಗೆಯೇ ವಿಶ್ವ ಪರ್ಯಟನೆ ಮಾಡಿದ ಮಾಧವ ನಾಯ್ಕರಿಗೆ ಸನ್ಮಾನ ಮಾಡಿರುವುದು ಸ್ತುತ್ಯಾರ್ಹ. ಹಾಗೆಯೇ ಮಾಧವ ನಾಯ್ಕರಿಗೆ ರಾಷ್ಟ್ರ, ದೇಶ ಮನ್ನಣೆ ಸಿಗಲಿ. ಮತ್ತು ಯಕ್ಷದೇಗುಲ ಯಕ್ಷಗಾನ ಉತ್ಸವ ಯಶಸ್ವಿಯಾಗಲಿ ಎಂದರು. ಅತಿಥಿಯಾಗಿ ಭಾಗವಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಂದ್ರಹಾಸ ರೈ ಮತ್ತು ಕಲಾ ಸಾಹಿತಿಯಾದ ಜನಾರ್ಧನ ಹಂದೆಯವರು ಕಾರ್ಯಕ್ರಮಕ್ಕೆ ಶುಭ ಕೋರಿದರು.

ವೇದಿಕೆಯಲ್ಲಿ ಜಿ. ಕೆ. ಭಟ್ ಸೇರಾಜ್, ಯಕ್ಷದೇಗುಲ ಅಧ್ಯಕ್ಷರಾದ ಬಾಲಕೃಷ್ಣ ಭಟ್, ಕಾರ್ಯದಶರ್ಿ ಕೆ. ಮೋಹನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯಕ್ಷದೇಗುಲ ಸನ್ಮಾನ -2014ರ ಸನ್ಮಾನವನ್ನು ರೂ.10000/- ನಗದಿನೊಂದಿಗೆ ಹಿರಿಯ ಬಣ್ಣದ ವೇಷದಾರಿಯಾದ ಪೇತ್ರಿ ಮಾಧವ ನಾಯ್ಕರಿಗೆ ಸನ್ಮಾನಿಸಲಾಯಿತು. ಹಾಗೆಯೇ ಕಲ್ಕೂರ ಪ್ರಶಸ್ತಿಯನ್ನು ಯಕ್ಷದೇಗುಲದ ರೂವಾರಿ ಕೆ. ಮೋಹನ್ ರಿಗೆ ನೀಡಿ ಗೌರವಿಸಲಾಯಿತು.

ಯಕ್ಷಗಾನ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮಕ್ಕೆ ಸ್ವಾಗತವನ್ನು ಜಿ.ಕೆ.ಭಟ್ ಸೇರಾಜ್ ಮಾಡಿದರು. ಬಾಲಕೃಷ್ಣ ಭಟ್ ವಂದಿಸಿ ಬಾಗವಹಿಸಿದ ಗಣ್ಯರಿಗೆ ಸ್ಮರಣಿಕೆ ನೀಡಿದರು. ನಿರೂಪಣೆಯನ್ನು ರಾಘವೇಂದ್ರ ತುಂಗ ಮತ್ತು ಮಾಧುರಿ ಶ್ರೀರಾಮ್ ರವರು ನಿರ್ವಹಿಸಿದರು. ಈ ಮೂರು ದಿನದ ಉತ್ಸವಕ್ಕೆ ಕಲ್ಕೂರ ಪ್ರತಿಷ್ಠಾನ, ಕರ್ನಾಟಕ ಬ್ಯಾಂಕ್ ಮತ್ತು ಕರ್ನಾಟಕ ಯಕ್ಷಧಾಮ ದವರು ಸಹಕಾರ ನೀಡಿದರು. ನಂತರ ಮಾಯಾಮೃಗ ಯಕ್ಷಗಾನ ಪ್ರದರ್ಶನ ನಡೆಯಿತು. ಭಾಗವತರಾಗಿ ಲಂಬೊದರ ಹೆಗಡೆ, ದೇವರಾಜ್ ದಾಸ್, ಮದ್ದಲೆಯಲ್ಲಿ ಗಣಪತಿ ಭಟ್ ಯಲ್ಲಾಪುರ, ಚಂಡೆಯಲ್ಲಿ ರಾಕೇಶ್ ಮಲ್ಯ ಮತ್ತು ಮಾಧವನವರು ಸಹಕರಿಸಿದರು. ರಾಮನಾಗಿ ಸುಜಯೀಂದ್ರ ಹಂದೆ, ಲಕ್ಷಣನಾಗಿ ನವೀನ್ ಕೋಟ, ಸೀತೆಯಾಗಿ ಕಡ್ಲೆ ಗಣಪತಿ ಹೆಗಡೆ, ಮಾಯಾ ಶೂರ್ಪನಖೆಯಾಗಿ ಮಾಧವ ನಾಗೂರು, ಘೋರ ಶೂರ್ಪನಖೆಯಾಗಿ ಗಣೇಶ ಉಪ್ಪುಂದ, ರಾವಣನಾಗಿ ತಮ್ಮಣ್ಣ ಗಾಂವ್ಕರ್, ಜಟಾಯುವಾಗಿ ನರಸಿಂಹ ತುಂಗ, ಮಾಯಾ ಜಿಂಕೆಯಾಗಿ ಉದಯ್ ಬೋವಿ, ಸನ್ಯಾಸಿ ರಾವಣನಾಗಿ ವಿಶ್ವನಾಥ ಶೆಟ್ಟಿಯವರು ನಿರ್ವಹಿಸಿದರು. ರಂಗದ ಹಿಂದೆ ರಾಜು ಪೂಜಾರಿ ಮತ್ತು ಬಾಲಕೃಷ್ಣ ಭಟ್ ಸಹಕರಿಸಿದರು. ಕಾರ್ಯಕ್ರಮ ಸಂಯೋಜನೆಯನ್ನು ಕೋಟ ಸುದರ್ಶನ ಉರಾಳರು ಮಾಡಿದರು.

*****************************Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ