ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನ ಅಧ್ಯಯನಕ್ಕೆ ಸರ್ಕಾರದ ಪ್ರೋತ್ಸಾಹ ಅಗತ್ಯ : ಡಾ.ರಮಾನಂದ ಬನಾರಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಜುಲೈ 2 , 2015
ಜುಲೈ 02, 2015

ಯಕ್ಷಗಾನ ಅಧ್ಯಯನಕ್ಕೆ ಸರ್ಕಾರದ ಪ್ರೋತ್ಸಾಹ ಅಗತ್ಯ : ಡಾ.ರಮಾನಂದ ಬನಾರಿ

ಸುಳ್ಯ : ಇಲ್ಲಿನ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆಯಲ್ಲಿ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಯಕ್ಷದ್ರೋಣ ಬಣ್ಣದ ಮಾಲಿಂಗ ಸ್ಮರಣಾರ್ಥ ಯಕ್ಷ ಸಂಭ್ರಮ ಕಾರ್ಯಕ್ರಮ ಭಾನುವಾರ ನಡೆಯಿತು.

ಸುಳ್ಯದ ರಂಗಮನೆಯಲ್ಲಿ ಭಾನುವಾರ ನಡೆದ ಯಕ್ಷ ಸಂಭ್ರಮವನ್ನು ಹಿರಿಯ ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಹಿರಿಯ ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿ ಉದ್ಘಾಟಿಸಿದರು. ಯಕ್ಷ ಸಂಭ್ರಮ ಎನ್ನುವುದು ಹಿಮ್ಮೇಳ ಮತ್ತು ಕಲಾ ಪ್ರೇಮಿಗಳ ಸಮ್ಮಿಲನ. ಅಧ್ಯಯನ ಕೇಂದ್ರ ಗಳು ಸುಗ್ಗಿಯ ಕೇಂದ್ರಗಳು. ಈ ಬಗ್ಗೆ ಸರ್ಕಾರವು ಗಣನೀಯ ಸಹಕಾರ ಕೊಡ ಬೇಕು.

ಅಧ್ಯಯನ ಕೇಂದ್ರ ಎನ್ನುವುದು ಗೌರವದ ಪದನಾಮ. ಅಧ್ಯಾಪನ, ಅಧ್ಯ ಯನ, ಸಂಘಟನೆ, ಪ್ರದರ್ಶನ, ದಾಖ ಲಾತಿ ಇವುಗಳನ್ನೆಲ್ಲ ಪ್ರತ್ಯೇಕ ಅಧ್ಯಯನ ಮಾಡಬಹುದು. ಅದರಂತೆ ನಾಟ್ಯ, ಅರ್ಥಗಾರಿಕೆ, ಹಿಮ್ಮೇಳ, ವೇಷಭೂಷಣ ಹೀಗೆ ಇವುಗಳನ್ನೆಲ್ಲ ಒಂದೊಂದಾಗಿ ಅಧ್ಯಯನಕ್ಕೆ ಒಳಪಡಿಸಬಹುದು. ಮಾಡುವ ಕೆಲಸವೆಲ್ಲವೂ ಪ್ರಾಮಾಣಿಕ ವಾಗಿ ಪರಿಪೂರ್ಣಗೊಳಿಸಬೇಕು ಎಂದರು.

ಹಿಮ್ಮೇಳ, ಮುಮ್ಮೇಳ ಕಲಾವಿದರ ಜತೆಗೆ ಕಲಾರಸಿಕರೂ ಯಕ್ಷಕಲೆಯ ಬಗ್ಗೆ ಗೌರವ ತಾಳಿದರೆ ಕಲೆ ಉಳಿದೀತು. ಅದು ಬಿಟ್ಟು ಪೂರ್ವಾಗ್ರಹದಿಂದ ಕಲಾ ವಿದರನ್ನು ಪ್ರೋತ್ಸಾಹಿಸಬಾರದು ಎಂದು ಹೇಳಿದರು.

ಹಿರಿಯ ಕಲಾವಿದರಾದ ಪ್ರೊ.ಎಂ. ಎಲ್.ಸಾಮಗ, ಕೆ.ಗೋವಿಂದ ಭಟ್, ಡಾ.ಕೋಳ್ಯೂರು ರಾಮಚಂದ್ರ ರಾವ್, ಡಾ.ಪ್ರಭಾಕರ ಜೋಷಿ, ರಾಧಾಕೃಷ್ಣ ಕಲ್ಚಾರ್, ತಾರಾನಾಥ ಬಲ್ಯಾಯ ವರ್ಕಾಡಿ, ಸುಜನಾ ಸುಳ್ಯ, ಹಿಮ್ಮೇಳದವ ರಾದ ಸುಬ್ರಾಯ ಸಂಪಾಜೆ, ರಮೇಶ್ ಭಟ್ ಪುತ್ತೂರು, ಕುಮಾರ ಸುಬ್ರಹ್ಮಣ್ಯ, ಜಗನ್ನಿವಾಸ ರಾವ್ ಪುತ್ತೂರು ಇದ್ದರು.

‘ಪಾದುಕಾ ಪ್ರಧಾನ ಮತ್ತು ಸೀತಾ ಪಹರಣ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಅರ್ಥಧಾರಿಗಳಾಗಿ ಯಕ್ಷ ರಂಗದ ದಿಗ್ಗಜರಾದ ಎಂ.ಎಲ್.ಸಾಮಗ, ಕೆ.ಗೋವಿಂದ ಭಟ್, ಕೋಳ್ಯೂರು ರಾಮ ಚಂದ್ರ ರಾವ್, ಪ್ರಭಾಕರ ಜೋಷಿ, ರಾಧಾಕೃಷ್ಣ ಕಲ್ಚಾರ್, ತಾರಾನಾಥ ಬಲ್ಯಾಯ ವರ್ಕಾಡಿ, ಭಾಗವತರಾಗಿ ಸುಬ್ರಾಯ ಸಂಪಾಜೆ, ರಮೇಶ್ ಭಟ್ ಪುತ್ತೂರು ದ್ವಂದ್ವ ಹಾಡುಗಾರಿಕೆಯಲ್ಲಿ ಹಾಗೂ ಹಿಮ್ಮೇಳದಲ್ಲಿ ಕುಮಾರ ಸುಬ್ರ ಹ್ಮಣ್ಯ, ಜಗನ್ನಿವಾಸ ರಾವ್ ಪುತ್ತೂರು ಭಾಗವಹಿಸಿದ್ದರು.

ಬಳಿಕ ಯಕ್ಷಗುರು ಸಬ್ಬಣಕೋಡಿ ರಾಮ ಭಟ್ ಅವರ ನಿರ್ದೇಶನದಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷ ನಾಟ್ಯ ತರಬೇತಿ ಕೇಂದ್ರದ ಮಕ್ಕಳ ಮೇಳ ಪೆರ್ಲ ಇವರಿಂದ ಶಶಿಪ್ರಭಾ ಪರಿಣಯ ಯಕ್ಷಗಾನ ಬಯಲಾಟ ನಡೆಯಿತು. ರಂಗಮನೆ ನಿರ್ದೇಶಕ ಜೀವನ್‌ ರಾಮ್ ಸುಳ್ಯ ಸ್ವಾಗತಿಸಿದರು. ಅಧ್ಯಯನ ಕೇಂದ್ರದ ಸಂಚಾಲಕ ಪ್ರಕಾಶ್ ಮೂಡಿತ್ತಾಯ ವಂದಿಸಿದರು. ಸುಂದರ್ ಕೇನಾಜೆ ನಿರೂಪಿಸಿದರು.


ಕೃಪೆ : Prajavani

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ