ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಕಲೆ  

ಯಕ್ಷಗಾನ ಪ್ರಸಂಗ ಸಾಹಿತ್ಯ
ಯಕ್ಷಗಾನ ಪ್ರಸಂಗಗಳು ಪದ್ಯ ರೂಪದಲ್ಲಿರುವ ಕಥಾ ವಸ್ತುಗಳಾಗಿವೆ. ಯಕ್ಷಗಾನ ಅರ್ಥಗಾರಿಕೆಗೆ ಪ್ರಸಂಗಗಳು ಮೂಲ ಪಠ್ಯಗಳಾಗಿರುತ್ತವೆ. ಪ್ರಸಂಗವು ಪ್ರದರ್ಶನದ ಸಂವಿಧಾನವಾಗಿರುತ್ತದೆ. ಭಾಗವತರು ಮತ್ತು ಕಲಾವಿದರು ಪ್ರಸಂಗನಿಷ್ಠರಾಗಿ ಕಥಾವಸ್ತು ವನ್ನು ಮುಂದಕ್ಕೆ ಒಯ್ಯುತ್ತಾರೆ. ಯಕ್ಷಗಾನ ಪ್ರಸಂಗಗಳನ್ನು ವಸ್ತುವಿಗೆ ಅನುಗುಣವಾಗಿ ಪೌರಾಣಿಕ, ಐತಿಹಾಸಿಕ, ಜಾನಪದೀಯ ಮತ್ತು ಕಾಲ್ಪನಿಕ ಪ್ರಸಂಗಗಳೆಂದು ವಿಭಾಗಿಸಬಹುದು. ಭಾಷೆಗೆ ಅನುಗುಣ ವಾಗಿ ಕನ್ನಡ, ತುಳು, ಕೊಂಕಣಿ, ಮಲೆಯಾಳ, ಹಿಂದಿ ಮತ್ತು ಇಂಗ್ಲೀಷ್‌ ಯಕ್ಷಗಾನ ಪ್ರಸಂಗಗಳೆಂದು ವರ್ಗೀಕರಿಸಬಹುದು.
ಯಕ್ಷಗಾನ ಹಾಗೆಂದರೇನು?
ಈ ರಂಗಭೂಮಿಯ ಚರಿತ್ರೆಯುದ್ದಕ್ಕೂ ಯಕ್ಷಗಾನ ಪದವೇ ಬಳಕೆಗೊಳ್ಳುತ್ತ ಬಂದಿಲ್ಲ. ಯಕ್ಷಗಾನ ತೀರ ಇತ್ತೀಚಿನ ಪರಿಭಾಷೆ. ಡಾ| ಕಾರಂತರು 1957ರಲ್ಲಿ ಪ್ರಕಟಿಸಿದ ತಮ್ಮ ಪುಸ್ತಕಕ್ಕೆ ``ಯಕ್ಷಗಾನ ಬಯಲಾಟ`` ಎಂದು ಹೆಸರಿಸಿದರೆ 1977ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗಕ್ಕೆ ಬರೆದುಕೊಟ್ಟ ತಮ್ಮ ಪುಸ್ತಕಕ್ಕೆ ``ಯಕ್ಷಗಾನ`` ಎಂದು ಹೆಸರಿಸಿದ್ದಾರೆ. ರಂಗಭೂಮಿಯ ಹೆಸರಿನ ಈ ಪಲ್ಲಟ ಇಪ್ಪತ್ತು ವರ್ಷಗಳ ಅವಧಿಯಲ್ಲಾದುದು. ಗಡಿಯಾರದ ಗಂಟೆಯ ಮುಳ್ಳಿನ ಚಲನೆಯಂತೆ, ಒಂದು ಅಂಕೆಯಿಂದ ಇನ್ನೊಂದು ಅಂಕೆಗೆ ತಲುಪಿದ ಮೇಲಷ್ಟೇ ಈ ಪಲ್ಲಟ ಗಮನಕ್ಕೆ ಬರು ವಂತಹದು. ಭಾಷಾಶಾಸ್ತ್ರದ ಭಾಷಾಗಡಿಯಾರ ಇದ್ದ ಹಾಗೆ.
ಯಕ್ಷಗಾನದಲ್ಲಿ ಭಾಷೆ
ಭಾಷೆ ಅಂದರೆ ಜನರಿಗೆ ನೆನಪಾಗುವುದು ಅದರ ಪ್ರಬೇಧಗಳು ಮಾತ್ರ. ಸಂಸ್ಕೃತಭಾಷೆ, ಕನ್ನಡಭಾಷೆ, ತುಳುಭಾಷೆ.... ಹೀಗೆ. ಇವುಗಳಿಗೆ ಅರ್ಥವಿಷ್ಟೇ. ಸಂಸ್ಕೃತವೆಂಬ ಭಾಷೆ ಇತ್ಯಾದಿ ಬೇಧಗಳ ಕುರಿತು. ಇನ್ನೊಂದು ಬೈಗಳಲ್ಲಿ; ನಿನಗೆ ಭಾಷೆ ಬರುವುದಿಲ್ವ , ಎಷ್ಟು ಸಲ ಹೇಳುವುದು? ಇಲ್ಲಿ ಹೇಳುವುದನ್ಮು ಅರ್ಥವಾಗದ ಜಾತಿ ಎಂದು ಅರ್ಥೈಸ ಬೇಕು. ಅವುಗಳಿಗೆ ಭಾಷೆಯ ಸಂತಾನವೇ ಇಲ್ಲ ಅನ್ನುವ ಮತ್ತೊಂದು ಬೈಗಳಿನ ಪ್ರಬೇಧ. ಇಲ್ಲಿ ಸಂಸ್ಕಾರವೇ ಇಲ್ಲ ಅನ್ನುವ ಅರ್ಥ. ಅರ್ಥವಾಗದ ಭಾಷೆ ಎನದನುವ ಅರ್ಥದಲ್ಲಿ ಹೇಳುತ್ತಾರೆ. ಅವನದ್ದು ಸಂಸ್ಕೃತಭಾಷೆ ಎಂದು.
ಯಕ್ಷಗಾನದ ಚೆಂಡೆ-ಮದ್ದಳೆವಾದಕರ ಗುಣ ಲಕ್ಷಣಗಳು
ವೀರರಸ ಪೋಷಣೆಗೆ ಪೂರಕವಾದ ಮರದ ಉದ್ದನೆಯ ಕಳಸಿಗೆಯಿಂದ ಮಾಡಿದ, ಚರ್ಮದ ಮುಚ್ಚಿಗೆಯ ಮತ್ತು ಬಳ್ಳಿಗಳಿಂದ ಆವೃತ್ತವಾದ ಒಂದು ಲಯವಾದ್ಯವೇ ಚೆಂಡೆ. ಅದನ್ನು ಬಾರಿಸುವವನನ್ನು ಚೆಂಡೆವಾದಕ ಎಂದು ಕರೆಯಲಾಗುತ್ತದೆ. ಆದರೆ ಯಕ್ಷಗಾನದಲ್ಲಿ ಚೆಂಡೆ - ಮದ್ದಲೆ ವಾದಕನನ್ನು ಮದ್ದಳೆಗಾರ ಎಂದೇ ಗುರುತಿಸಲಾಗುತ್ತದೆ. ಯಕ್ಷಗಾನದಲ್ಲಿ ಚೆಂಡೆಗಿಂತಲೂ ಮದ್ದಳೆಗೆ ಪ್ರಾಶಸ್ತ್ಯ ಎಂಬುದನ್ನು ಇದು ಸೂಚಿಸುತ್ತದೆ. ಬಯಲಾಟಗಳು ರಾತ್ರಿಯಿಡೀ ನಡೆಯುವ ಪ್ರದರ್ಶನಗಳು. ಪ್ರದರ್ಶನದುದ್ದಕ್ಕೂ ಬರುವ ಯುದ್ಧ, ಬೇಟೆ, ಒಡ್ಡೋಲಗ, ಪ್ರವೇಶ ಇತ್ಯಾದಿ ಸಂದರ್ಭಗಳಲ್ಲಿ ಚೆಂಡೆ ಬಳಕೆಯಾಗುತ್ತದೆ. ಚೆಂಡೆ ನಿದ್ದೆಯನ್ನು ಹೊಡೆದೋಡಿಸುವ, ನೃತ್ಯ ಗೊತ್ತಿಲ್ಲದವನನ್ನೂ ಕುಣಿಯಲು ಪ್ರಚೋದಿಸುವ ಒಂದು ಅದ್ಭುತ ಲಯವಾದ್ಯ.
ಯಕ್ಷಗಾನ ಭಾಗವತನ ಗುಣ ಲಕ್ಷಣಗಳು
ಯಕ್ಷಗಾನ ಸಾಹಿತ್ಯವನ್ನು ಪದ್ಯ, ತಾಳ, ರಾಗ, ಲಯ ಮತ್ತು ಭಾವ ಬದ್ಧವಾಗಿ ಹಾಡಿ ಪ್ರದರ್ಶನಕ್ಕೆ ಪ್ರಧಾನ ಕಾರಣನಾಗುವವನೇ ಭಾಗವತ. ಕಡತೋಕ ಮಂಜುನಾಥ ಭಾಗವತರು ಹೇಳುವಂತೆ ``ಈ ಯಕ್ಷಗಾನ ಪ್ರದರ್ಶನದ ಕೇಂದ್ರ ವ್ಯಕ್ತಿ ಭಾಗವತ. ಅವನು ಭಗವಂತನ ಕತೆಗಳನ್ನು ರಂಗಕ್ಕೆ ತಂದು ತೋರಿಸುವವನೂ ಹೌದು. ಆಟ ಅಥವಾ ತಾಳ ಮದ್ದಳೆಯಲ್ಲಿ ಭಾಗವತನು ಮುಖ್ಯ ನಿರೂಪಕನೂ, ನಿರ್ದೇಶಕನೂ ಆಗಿರುತ್ತಾನೆ. ಕಲಾವಿದರ ತಂಡಕ್ಕೆ ಅವನೇ ನಾಯಕ, ಸೂತ್ರಧಾರ. ಯಕ್ಷಗಾನ ಪ್ರದರ್ಶನದುದ್ದಕ್ಕೂ ಪ್ರಸಂಗದ ಪದ್ಯಗಳನ್ನು ವಿವಿಧ ರಸರಾಗಗಳಲ್ಲಿ ಹಾಡುತ್ತ, ನಟರನ್ನು ಕುಣಿಸಿ, ಮಾತಾಡಿಸಿ, ಸದಾ ಜಾಗೃತನಾಗಿದ್ದು ಆಟವನ್ನು ಸುಸೂತ್ರವಾಗಿ ನಡೆಯಿಸುವ ಜೀವಂತ ಶಕ್ತಿಯಾಗಿ ದುಡಿಯಬೇಕಾದ ಭಾಗವತನ ಜವಾಬ್ದಾರಿ ಬಲು ದೊಡ್ಡದು.``.
ಸಮಯ ಸ್ಫೂರ್ತಿ: ತಾಳ ಮದ್ದಳೆಯ ಒರೆಗಲ್ಲು
ತಾಳ ಮದ್ದಳೆಯ ಮುಖ್ಯ ಅಂಗಗಳಾದ ಸಾತ್ವಿಕ, ಆಂಗಿಕ, ವಾಚಿಕ, ಆಹಾರ್ಯಗಳಲ್ಲಿ ವಾಚಿಕಾಭಿನಯವೇ ಪ್ರಧಾನವಾಗಿರುವ ಈ ಕಲೆ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ಜನಪ್ರಿಯ. ಜಾನಪದವೆಂಬ ಹಣೆಪಟ್ಟಿ ಇದಕ್ಕೆ ಅಂಟಿಕೊಂಡಿದ್ದರೂ ಇದು ಶಿಷ್ಟ, ಶಾಸ್ತ್ರೀಯ, ಸಂಸ್ಕೃತ ಕಲೆ. ವೇಷಭೂಷಣ, ಬಣ್ಣಗಾರಿಕೆ, ರಂಗಸಜ್ಜಿಕೆ, ಕುಣಿತ ಇವು ಯಾವುವೂ ಇಲ್ಲದೇ ಮಾತಿನ ಮಂಟಪದಿಂದಲೇ ಕೇಳುಗರ ಮನೋಮಹಿಯಲ್ಲಿ ಮರೆಯಲಾಗದ ಭದ್ರ ಮುದ್ರೆಯೊತ್ತುವ, ಪುರಾಣ ಲೋಕವನ್ನು ಸಾಕಾರಗೊಳಿಸುವ, ಮನರಂಜನೆ ಮತ್ತು ಜೀವೋತ್ಕರ್ಷವನ್ನು ಏಕಕಾಲಕ್ಕೆ ಉಂಟು ಮಾಡುವ, ಬುದ್ಧಿಯನ್ನು ಚುರುಕುಗೊಳಿಸುವ, ಚಮತ್ಕಾರಿಕ ಸಂಭಾಷಣೆಯ ಮೂಲಕ ಪಾತ್ರಗಳ ಆಳ- ನೀಳವನ್ನು ಪರಿಚಯಿಸುವ ಈ ಸುಂದರ ಕಲೆ ಅನುಪಮ ಪ್ರಭಾವಶಾಲಿ.
ಕನ್ನಡದ ಶ್ರೀಮಂತಿಕೆ ಹೆಚ್ಚಿಸಿದ ಯಕ್ಷಗಾನ ಸಾಹಿತ್ಯ
ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಜನರ ಉಚ್ಚಾರ, ಮತ್ತು ಮಾತಿನ ಧಾಟಿಯಲ್ಲಿ ಯಕ್ಷಗಾನದ ಪ್ರಭಾವವನ್ನು ನಾವು ಕಾಣಬಹುದು. ಈ ಹೊತ್ತಿಗೆ ಯಕ್ಷಗಾನವು ಸೀಮೋಲ್ಲಂಘನ ಮಾಡಿ ವಿಶ್ವಗಾನವಾಗುತ್ತಲೇ, ಬೇರಾವುದೇ ಕಲೆಗಳಿಗಿಂತ ಭಿನ್ನವಾಗಿ, ಆಹಾರ್ಯ (ವೇಷ-ಬಣ್ಣಗಾರಿಕೆ), ವಾಚಿಕ (ಮಾತುಗಾರಿಕೆ), ಆಂಗಿಕಾಭಿನಯ, ನೃತ್ಯಾಭಿನಯ ಜತೆಗೆ ಸಂಗೀತ ಮೇಳೈಸಿದ ಒಂದು ರಮ್ಯಾದ್ಭುತ ಕಲೆ, ನೂರಾರು ವರ್ಷಗಳಿಂದ ಕನ್ನಡವನ್ನು, ಜತೆಗೆ ಸಮೃದ್ಧ ಸಾಹಿತ್ಯಲೋಕವೊಂದನ್ನು ಪೋಷಿಸಿಕೊಂಡು ಬರುತ್ತಿದೆ.
ಯಕ್ಷಗಾನ ಮೇಳ, ಚೌಕಿ ಮತ್ತು ರಂಗಸ್ಥಳ
ಯಕ್ಷಗಾನ ಮೇಳವೆಂದರೆ ಯಕ್ಷಕಲಾವಿದರ ಗುಂಪು ಎಂದರ್ಥ. ಸಾಮಾನ್ಯವಾಗಿ ಮೇಳವನ್ನು ಬದುಕಿಗಾಗಿ ಯಕ್ಷಗಾನವನ್ನು ಆಯ್ಕೆ ಮಾಡಿಕೊಂಡ ವೃತ್ತಿ ಕಲಾವಿದರ ಸಮೂಹ ಅಥವಾ ತಂಡವೆಂದು ವ್ಯಾಖ್ಯಾನಿಸಲಾಗುತ್ತದೆ. ಕಲಾವಿದರು ಯಕ್ಷಪಾತ್ರಗಳಾಗಿ ಪರಿವರ್ತನೆ ಹೊಂದುವ ಪ್ರಸಾಧನ ಗೃಹ ಅಥವಾ ಬಣ್ಣದ ಮನೆಯೇ ಚೌಕಿ. ಅದು ಆಯಾತಾಕಾರದಲ್ಲಿದ್ದರೂ ನಾಲ್ಕು ಭಾಗಗಳಿರುವುದರಿಂದ ಚೌಕಿ ಎಂಬ ಹೆಸರು. ಯಕ್ಷಗಾನ ಪ್ರದರ್ಶನ ನಡೆಯುವ ವೇದಿಕೆಗೆ ರಂಗಸ್ಥಳವೆಂದು ಹೆಸರು. ಅದನ್ನು ಯಕ್ಷಗಾನ ಪ್ರದರ್ಶನ ವೇದಿಕೆಯೆಂದು ಕರೆಯಲಾಗುತ್ತದೆ. ರಂಗಸ್ಥಳದ ಸ್ವರೂಪ ಕಾಲ ದಿಂದ ಕಾಲಕ್ಕೆ ಅಥವಾ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿದೆ.
ಯಕ್ಷಗಾನದ ಪಾಯಗಳು ಮತ್ತು ತಿಟ್ಟುಗಳು
ಮೂಡಲ ಪಾಯವು ಕರ್ನಾಟಕದ ಮೂಡಲ ಪ್ರಸ್ಥಭೂಮಿಯಿಂದ ಮೈಸೂರು ಸೀಮೆ ಮತ್ತು ಉತ್ತರ ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ಯಕ್ಷಗಾನ ಪ್ರಕಾರವಾಗಿದೆ. ಮೂಡಲ ಪಾಯದಲ್ಲಿ ದೊಡ್ಡಾಟ, ಸಣ್ಣಾಟ ಮತ್ತು ಪಾರಿಜಾತ ಎಂಬ ಮೂರು ಪ್ರಭೇದ ಗಳನ್ನು ಗುರುತಿಸಲಾಗಿದೆ. ಕರಾವಳಿ ಕರ್ನಾಟಕ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಪ್ರಚಲಿತದಲ್ಲಿರುವ ಯಕ್ಷಗಾನ ಪ್ರಕಾರಕ್ಕೆ ಪಡುವಲ ಪಾಯವೆಂದು ಹೆಸರು. ಮೂಡಲ ಪಾಯಕ್ಕೆ ಹೋಲಿಸಿ ದರೆ ಪಡುವಲ ಪಾಯ ಯಕ್ಷಗಾನ ಪ್ರಕಾರವು ಬಹಳ ಮುಂದುವರಿದಿದೆ ಮತ್ತು ಆಕರ್ಷಕವಾಗಿಯೂ ಇದೆ.
ಯಕ್ಷಗಾನದ ಲಕ್ಷಣಗಳು
ಯಕ್ಷಗಾನವು ಪಾಮರರಾದ ಬಡ ಶೂದ್ರರಿಂದ ಮತ್ತು ಅತಿಶೂದ್ರರಿಂದ ಹುಟ್ಟಿದ ಜಾನಪದಕಲೆ. ಯಕ್ಷಗಾನವು ಸಮಗ್ರ ಕರ್ನಾಟಕದ ಒಂದು ಸಾಂಪ್ರದಾಯಿಕ ಕಲೆಯಾಗಿದ್ದು ಅದು ಏಕಕಾಲದಲ್ಲಿ ಶಾಸ್ತ್ರೀಯತೆಯ ಮತ್ತು ಜಾನಪದೀಯ ಲಕ್ಷಣಗಳನ್ನು ಒಳಗೊಂಡಿದೆ. ಅದು ಹಿಮ್ಮೇಳ, ವೇಷಭೂಷಣ, ನೃತ್ಯ ಮತ್ತು ಸಂಭಾಷಣೆಗಳನ್ನು ಒಳಗೊಂಡ ಒಂದು ಪ್ರದರ್ಶನ ಕಲೆಯಾಗಿದೆ. ಅದು ಸಾಹಿತ್ಯವನ್ನು ಆಧರಿಸಿದ್ದು, ಯಕ್ಷಗಾನ ಸಾಹಿತ್ಯವನ್ನು ಪ್ರಸಂಗ ಎಂದು ಕರೆಯಲಾಗುತ್ತದೆ. ಯಕ್ಷಗಾನವು ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಹಾಡುನರ್ತನ ಮತ್ತು ಸಂಭಾಷಣೆಯ ಮೂಲಕ ಅಭಿವ್ಯಕ್ತಿಸುವ ಸಾಮುದಾಯಿಕ ಕಲೆಯಾಗಿದೆ.
ಯಕ್ಷಗಾನ - ತುಳುತಿಟ್ಟು
ತುಳು ಭಾಷೆಯು ದ್ರಾವಿಡ ಭಾಷಾ ಪರಿವಾರಕ್ಕೆ ಸೇರಿದ, ಭಾಷಾ ವಿಜ್ಞಾನಿಗಳ ದೃಷ್ಟಿಯಲ್ಲಿ ಚೆನ್ನಾಗಿ ಪರಿಪುಷ್ಠವಾದ, ಸಮೃದ್ಧ ಜನಪದ ಸಾಹಿತ್ಯ ರಾಶಿಯ ಐಸಿರಿಯುಳ್ಳ, ಯಾವುದೇ ವಿಷಯವನ್ನು ಪ್ರಭಾವಶಾಲಿಯಾಗಿ ಅಭಿವ್ಯಕ್ತಿಗೊಳಿಸಬಲ್ಲ ಮಾಧ್ಯಮವಾಗಬಹುದಾದ ಸಶಕ್ತ ಸು೦ದರ ಭಾಷೆ. ಕನ್ನಡ ನಾಡಿನ ಸೀಮಾರೇಖೆಯೊಳಗಿರುವ ಈ ಭಾಷೆಯಲ್ಲಿ, ತುಳುನಾಡಿನಲ್ಲಿ ಪ್ರಚಲಿತವಾಗಿರತಕ್ಕ ಒ೦ದು ರ೦ಗ ಮಾಧ್ಯಮವಾದ - ಯಕ್ಷಗಾನದ ಪ್ರಸ೦ಗಗಳು ರಚಿತವಾದುದು ಐತಿಹಾಸಿಕವಾಗಿ ತು೦ಬಾ ತಡವಾಗಿಯೇ ಎ೦ಬುದು ಗಮನೀಯವಾದುದು.
ಯಕ್ಷಗಾನ, ಹಿಮ್ಮೇಳ ಮತ್ತು ಪ್ರಸಂಗ ಸಾಹಿತ್ಯ
“ಕಲೆ” ಎಂದರೇನು? ನಿರೂಪಿಸಲು ತುಸು ಕಷ್ಟ ವಾದ ಚಿಕ್ಕ ಶಬ್ದವಿದು. ಯಾವುದು ಆತ್ಮದರ್ಶನ ಮಾಡಿಸುತ್ತದೋ ಅದು ಕಲೆ ಅನ್ನುತ್ತಾರೆ ಅರವಿಂದರು “ಆರ್ಟ್ ಈಸ್ ಫ಼ಾರ್ ಅರ್ಟ್ಸ್ ಸೇಕ್” ಎಂಬ ನುಡಿಗಟ್ಟು‌ ಇಂಗ್ಲೀಷಿನಲ್ಲಿದೆ. ತನ್ನಬದುಕಿನಲ್ಲಿತಲೆದೋರಬಹುದಾದಸುಖ-ದು:ಖ, ಆಸೆ-ನಿರಾಶೆ, ಸಂತೋಷ-ಸಂತಾಪ, ಪ್ರೀತಿ- ದ್ವೇಷ ಮುಂತಾದ ಭಾವನೆಗಳನ್ನು ಒಡನಾಡಿಗಳೊಂದಿಗೆ ಹಂಚಿಕೊಳ್ಳಬೇಕೆಂಬ ಅಭಿಲಾಷೆಯು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸ್ವಾಭಾವಿಕವಾಗಿ ಇರುತ್ತದೆ. ಇದನ್ನು ಸುಂದರವಾಗಿ ಪ್ರಕಟಿಸುವ ಮಾಧ್ಯಮವೇ ಕಲೆ.
ಯಕ್ಷಗಾನ (ತೆಂಕು ತಿಟ್ಟು): ಶಾಸ್ತ್ರೀಯತೆಯ ಪ್ರಶ್ನೆ
ಯಕ್ಷಗಾನದ ಶಾಸ್ತ್ರೀಯತೆಯ ಪ್ರಶ್ನೆ - ಹಲವು ಬಾರಿ ಚರ್ಚಿತವಾದದ್ದು, ಈಗ ಮತ್ತೂಮ್ಮೆ ಚರ್ಚೆಗೆ ಬಂದಿದೆ. ಇದು ಆಗಾಗ ಚರ್ಚಿತವಾಗುವುದೂ, ಕುತೂಹಲಕರ. ದಕ್ಷಿಣಾದಿ (ಕರ್ನಾಟಕ) ಯಾ ಹಿಂದೂಸ್ತಾನಿ ಸಂಗೀತವು ಶಾಸ್ತ್ರೀಯವೆ? ಕಥಕ್‌ ನೃತ್ಯವು ಶಾಸ್ತ್ರೀಯವೆ? ಅಲ್ಲವೆ? ಎಂಬ ಪ್ರಶ್ನೆಗಳನ್ನು ಯಾರೂ ಈಗ ಕೇಳುವುದಿಲ್ಲ. ಯಕ್ಷಗಾನವು - ``ಜನಪ್ರಿಯ ರಂಗಭೂಮಿ``ಯಾಗಿ, ಹಲವು ಪರಿವರ್ತನೆಗಳನ್ನು ಕಾಣುತ್ತ, ಹಲವು ರೂಪಾಂತರ, ವಿರೂಪಾಂತರಗಳಲ್ಲಿ ನಮ್ಮ ಮುಂದಿರುವುದರಿಂದ ಬಹುಶಃ ಈ ಪ್ರಶ್ನೆ ಆಗಾಗ ಬರುತ್ತಿದೆ. ಈ ಸ್ಥಿತಿಯು ಚಿಂತನೀಯ.
ಬಯಲಾಟದ ಭಾಗವತಿಕೆಯ ಸ್ವರವಿನ್ಯಾಸದ ಬಡತನ!
ಯಕ್ಷಗಾನ ಬಯಲಾಟ ಎಲ್ಲಾ ರೀತಿಯಲ್ಲಿ ಸರಳವಾಗಿದ್ದು ಜನರಿಗೆ ಹತ್ತಿರ ಇರಬೇಕು ಎನ್ನುವುದೇ ಅದರ ಉದ್ದೇಶವಿದ್ದಂತೆ ತೋರುತ್ತದೆ. ಬಯಲಾಟ ಸರಳವಲ್ಲ! ಆದರೆ ಬಯಲಾಟದ ಅಂಗಗಳು ಸರಳ ಇದರಲ್ಲಿ ಅನೇಕ ರೀತಿಯಲ್ಲಿ ಜನಸಾಮಾನ್ಯರೂ ಭಾಗವಹಿಸಬಹುದು. ಪರದೆ ಹಿಡಿಯಬಹುದು. ದೊಂದಿ ಹಿಡಿಯಬಹುದು, ಅಥವಾ ವೇಷಧಾರಿಯಾಗಬಹುದು. ಹಿಮ್ಮೇಳದಲ್ಲಿ ಭಾಗವಹಿಸುವುದು ಅಷ್ಟು ಸರಳವಲ್ಲದಿದ್ದರೂ ಕಷ್ಟವೇನಲ್ಲ. ಅಲ್ಲದೇ ವೇಷಕಟ್ಟುವುದು, ವೇಷತಯಾರಿಸುವುದು ಯಜಮಾನಿಕೆ ಹೀಗೆ ಬೇರೆ ರೀತಿಯಲ್ಲೂ ಭಾಗವಹಿಸಬಹುದು. ಈ ಎಲ್ಲಾ ಸರಳ ಅಂಗಗಳನ್ನು ಸೇರಿಸಿ ಒಂದು ಸಂಕೀರ್ಣವಾದ ಕಲೆ ಯಕ್ಷಗಾನ ಬಯಲಾಟ ಸಿದ್ಧವಾಗುತ್ತದೆ. ಹಾಗೇ ಬಯಲಾಟದಲ್ಲಿ ಇರುವುದು ಬರಿ ಭಾಗವತಿಕೆಯೊಂದೇ ಅಲ್ಲ. ಅರ್ಥ, ಕುಣಿತ, ಅಭಿನಯ ಎಲ್ಲ ಇದೆ. ಇವೆಲ್ಲವೂ ಇರುವುದರಿಂದ ಕೇವಲ ಒಂದನ್ನೆ ದೊಡ್ಡದು ಮಾಡಿದರೆ ಅಭಾಸವಾಗುತ್ತದೆ. ಈ ಹಿನ್ನೆಲೆಯಲ್ಲಿ ಬಯಲಾಟದ ಭಾಗವತಿಕೆಯನ್ನು ಗಮನಿಸಬೇಕು.
ಯಕ್ಷಗಾನ ಸ್ವರೂಪ ಮತ್ತು ಮೌಲ್ಯ
ಯಕ್ಷಗಾನವು ಯಾವ ಸ್ವರೂಪದ ಕಲೆ? ಜನಪದವೇ? ಅಥವಾ ಶಾಸ್ತ್ರೀಯವೇ? ಅದನ್ನು ಜಾನಪದವೆ೦ದರೆ ಶಾಸ್ತ್ರೀಯ, ಶಾಸ್ತ್ರೀಯವೆ೦ದರೆ ಜಾನಪದ ಎನ್ನುವ೦ತಹ ಸ್ಥಿತಿಗೆ ಇ೦ದು ಯಕ್ಷಗಾನ ತಲುಪಿದೆ. ಏಕೆ೦ದರೆ ಅದು ಜಾನಪದದಲ್ಲಿ ತನ್ನ ಅನನ್ಯತೆಯನ್ನು ಉಳಿಸಿಕೊ೦ಡಿಲ್ಲ; ಶುದ್ಧ ಶಾಸ್ತ್ರೀಯ ಕಲೆ ಎನ್ನುವ ಮಟ್ಟಕ್ಕೆ ಮುಟ್ಟಲಿಲ್ಲ. ಹಾಗಾಗಿ ಇ೦ದು ಕಲಾಪ್ರಪ೦ಚದ ವಿವಿಧ ಪ್ರಕಾರಗಳೆಡೆಯಲ್ಲಿ ತನ್ನ ಮೌಲ್ಯವನ್ನು ನಿರ್ಧರಿಸಿಕೊಳ್ಳುವಲ್ಲಿ ಯಕ್ಷಗಾನ ಗೊ೦ದಲದ ಸ್ಥಿತಿಯಲ್ಲಿದೆ. ಯಕ್ಷಗಾನವು ಒ೦ದು ಸ೦ಕೀರ್ಣ ಕಲೆಯಾಗಿರುವುದರಿ೦ದ ಅದರ ಕಲಾಮೌಲ್ಯಕ್ಕೆ ಧಕ್ಕೆ ತಗುಲುವ ಸ೦ಭವಗಳು ಜಾಸ್ತಿ.
ಯಕ್ಷಗಾನ ಪ್ರಸಂಗ ಸಾಹಿತ್ಯ ಮತ್ತು ಪ್ರಕ್ಷಿಬ್ಧ ಪ್ರಸಂಗಗಳು
``ಪ್ರಸಂಗ`` ವೆಂದರೆ ಪದ್ಯಗಳ ಮೂಲಕ ಹೆಣೆಯಲ್ಪಡುವ ಕಥಾ ಸನ್ನಿವೇಷ. ಇದು ಪ್ರದರ್ಶನದ ಪಠ್ಯವೂ ಹೌದು. ಕಥೆಯ ನೆಡೆಗೆ ಇದುವೇ ಆದಾರ. ಕಥೆಯನ್ನು ಆರಿಸಿ ಕೊಳ್ಳುವಾಗ ಕವಿಯ ಹೊಣೆಗಾರಿಕೆ ಮಹತ್ವದ್ದು. ಅದು ಕೇವಲ ರಂಜನೆಯಾಗಿರದೆ ಸತ್ವ ಭರಿತವಾಗಿರಬೇಕು. ಪುರಾಣ ಕಥೆಗಳಲ್ಲಿ ಸಾರ್ವಕಾಲಿಕ ಮೌಲ್ಯವುಳ್ಳವುಗಳಾದರೆ ಸಮಕಾಲೀನ ಸಮಾಜಕ್ಕೆ ಉಪಯುಕ್ತವಾಗಿರುವಂತಾದರೆ ಅದನ್ನು ಹಾಗೆ ಮುಂದಿಡಬಹುದು. ಹಳೆಯ ಕೆಲವು ಸವಕಲು ಅರ್ಥಶೂನ್ಯ ವಿಚಾರಗಳನ್ನು ಇಂದು ಮೌಲ್ಯಗಳೆಂದು ಕರೆಯುವಂತಿಲ್ಲ. ಇಂಥಹ ಸಂದರ್ಭದಲ್ಲಿ ಇಂದಿನ ದ್ರಷ್ಟಿ ದೋರಣೆಗಳಿಗೆ ಸರಿಯಾಗಿ ಪುರಾಣ ಘಟನೆಗಳನ್ನು ಪುನರ್ ರಚಿಸ ಬೇಕಾಗುತ್ತದೆ.
ವೈಯಕ್ತಿಕ ಪ್ರತಿಭೆಯೂ, ಪ್ರಸಂಗದ ಚೌಕಟ್ಟೂ
ತಾಳಮದ್ದಲೆಯೂ ಸೇರಿದಂತೆ ಹಲವು ಜಾನಪದ ಪ್ರಕಾರಗಳು ಆಧುನಿಕ ಕಾಲಘಟ್ಟದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ ಎಂಬ ವಿಚಾರಗಳು ಮತ್ತೆ ಮತ್ತೆ ಕೇಳಿಬರುತ್ತಿವೆ. ಧಾರ್ಮಿಕ ಕೇಂದ್ರಗಳಲ್ಲಿ ಮತ್ತು ಆಚರಣೆಗಳ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದು ಕಲಾಪ್ರಕಾರಗಳಲ್ಲಿ ಕೆಲವು ಆಧುನಿಕತೆಗೆ ಪಕ್ಕಾಗಿ ತನ್ನ ಆಂತರಿಕ ಸ್ವರೂಪದಲ್ಲಿಯೇ ಬದಲಾವಣೆ ಮಾಡಿಕೊಂಡರೆ ಇನ್ನೂ ಕೆಲವು ಮೂಲ ಸ್ವರೂಪದಲ್ಲಿಯೇ ಉಳಿದವು. ನಾಟಕ ಪ್ರಕಾರ ಆಧುನಿಕತೆಯನ್ನು ಜೀರ್ಣಿಸಿಕೊಂಡ ಕಾರಣಕ್ಕೆ ಈ ಹೊತ್ತು ತನ್ನ ಅಸ್ತಿತ್ವವನ್ನು ಉಳಿಸಿಕೊಂಡದ್ದಷ್ಟೇ ಅಲ್ಲ ಬಹು ವ್ಯಾಪಕವಾಗಿ ಬೆಳೆದಿದೆ. ತಾಳಮದ್ದಲೆಯನ್ನು ಕೇಂದ್ರವಾಗಿರಿಸಿಕೊಂಡಂತೆ ನಿಮ್ಮ ಅನಿಸಿಕೆಗಳನ್ನು ಬರೆದು ಕಳಿಸಲು ಕೋರಿದೆ.
ಯಕ್ಷಗಾನದಲ್ಲಿ ಪ್ರವಾಸಿ ಮೇಳಗಳ ದೀಂಗಣ
ಹರಕೆಯ ರೂಪದಲ್ಲಿ ಬಹು ಪ್ರಸಿದ್ದಿಯನ್ನು ಕಂಡುಕೊಳ್ಳುತ್ತಿರುವ ಯಕ್ಷಗಾನ ಮೇಳಗಳು ಇತ್ತೀಚೆಗಿನ ದಿನಗಳಲ್ಲಿ ಇತರೆ ಕಲಾಪ್ರಕಾರಗಳಂತೆ ವಾಣಿಜ್ಯೀಕರಣದ ಹಾದಿಯಲ್ಲಿವೆ. ಇದರಿಂದ ಯಕ್ಷಗಾನವನ್ನೇ ನಂಬಿಕೊಂಡ ಕಲಾವಿದರು, ರಂಗತಂತ್ರಜ್ಞರಿಗೆ ಬದುಕಿನ ಬಗ್ಗೆ ಸಣ್ಣದೊಂದು ಭರವಸೆ ಮೂಡಿದೆ. ಆದರೂ ಕೂಡಾ ಪ್ರೇಕ್ಷಕರ ಕೊರತೆ ಎಲ್ಲಾ ಆಶಾಕಿರಣಗಳಿಗೂ ತಣ್ಣಿರೆರಚುತ್ತಿದೆ.
ಒಡ್ಡೋಲಗ - ರಂಗಭೂಮಿಯ ಅವಿಬಾಜ್ಯ ಅಂಗ
``ಒಡ್ಡೋಲಗ`` ಎಂಬುದು ಯಕ್ಷಾಗಾನ ರಂಗಭೂಮಿಯ ಒಂದು ಮಹತ್ತ್ವಪೂರ್ಣ ಅಂಗ.ಕಥಾ ಪ್ರೆವೇಶಕ್ಕೆ ಆವರಣ ಸ್ರಸ್ಟಿ ಇಲ್ಲಿಂದಲೆ.ಹಲವು ಬಗೆಯ ನ್ರತ್ಯ ವೈವಿದ್ಯವನ್ನು ಇಲ್ಲೇ ಕಾಣ ಬಹುದು.ಇಲ್ಲಿ ಮಾತಿಲ್ಲದೆ ಹೋಗ ಬಹುದು,ಆದರೆ ನ್ರತ್ಯದ ಬಾಷೆಯಿದೆ ಎಂಬುದನ್ನು ಮರೆಯಲಾಗದು.ಕನಿಷ್ಟ ಅರ್ದ ಗಂಟೆಯಾದರೂ ಈ ಭಾಗವಿರಬೇಕು.ಒಡ್ಡೋಲಗ ಸೌಂದರ್ಯಾಸ್ವಾದನೆಗೆ ಸಿದ್ದನಾಗದ ಪ್ರೇಕ್ಷಕನಿಗೆ ಈ ಬಾಗ ನೀರಸವಾದೀತು.ಹಾಗೆಂದು ಒಡ್ಡೋಲಗವಿಲ್ಲದೆ ಪ್ರಸದರ್ಶನ ನೀಡುವುದು ``ಭವ್ಯ`` ಎನಿಸದು.
ಹೂವಿನ ಕೋಲು
ಕರ್ನಾಟಕದ ಕರಾವಳಿಯು ಯಕ್ಷಗಾನದ ತವರೂರು. ಆದರೂ ಕೂಡ ಇಲ್ಲಿ ವರ್ಷವಿಡೀ ಯಕ್ಷಗಾನದ ಬಯಲಾಟಗಳು ಇರುವುದಿಲ್ಲ. ಇದಕ್ಕೆ ಕಾರಣ ಇಲ್ಲಿನ ಅಧಿಕ ಮಳೆ. ಮೇ ತಿ೦ಗಳಿನಲ್ಲಿ ಬಯಲಾಟದ ಮೇಳಗಳೆಲ್ಲ ತಮ್ಮ ಪ್ರದರ್ಶನಗಳನ್ನು ಸ್ಥಗಿತಗೊಳಿಸಿ ಮತ್ತೆ ನವೆ೦ಬರಿನಲ್ಲಿ ಪುನಹ ತಿರುಗಾಟಕ್ಕೆ ಹೊರಡುತ್ತವೆ. ಮಳೆಗಾಲದ ಈ 6 ತಿ೦ಗಳ ಅವಧಿಯಲ್ಲಿ ಕಲಾವಿದರಿಗೆ ಇತ್ತ ಯಕ್ಷಗಾನವೂ ಇಲ್ಲದೇ ಅತ್ತ ಕುಲಕಸುಬನ್ನೂ ನಡೆಸಲಾಗದೇ, ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಇ೦ತಹ ಸ೦ದರ್ಭಗಳಲ್ಲಿ ಕಲಾವಿದರು ತಮ್ಮ ಜೀವನೋಪಾಯಕ್ಕಾಗಿ ತಾಳಮದ್ದಲೆ, ಹೂವಿನಕೋಲು ಮತ್ತು ಚಿಕ್ಕಮೇಳಗಳನ್ನು ಆರ೦ಭಿಸಿರಬಹುದೆ೦ದು ಅನ್ನಿಸುತ್ತದೆ.
ಸಣ್ಣಾಟ: ಸಣ್ಣಗೆ ಮಳೆ ಹನಿಯುವಾಗ ಯಕ್ಷರು ಮನೆಗೆ ಬಂದರು
ಜಿಟಿಜಿಟಿ ಮಳೆ ಹಿಡಿದರೆ ಯಕ್ಷಗಾನ ಮಂದಿಗೆ ಸ್ವಲ್ಪ ಆತಂಕ. ಎಂಬಲ್ಲಿಗೆ ಯಕ್ಷಗಾನಕ್ಕೆ ಸಂಪೂರ್ಣ ರಜೆ ಎಂದೇ ಅರ್ಥ. ಸ್ಟಾರ್‌ ಕಲಾವಿದರಿಗೆ ಮಳೆ ಇಲ್ಲದ ಕಡೆ ಬೇಡಿಕೆ ಇರಬಹುದು. ಆದರೆ ಮಿಕ್ಕ ಚಿಕ್ಕಪುಟ್ಟ ಕಲಾವಿದರು ಏನು ಮಾಡಬೇಕು? ಉಜಿರೆ, ಬೆಳ್ತಂಗಡಿ ಕಡೆ ಮನೆ, ಮನೆಗೆ ಹೋಗಿ ಪುಟ್ಟ ಪ್ರಸಂಗ ಮಾಡಿ `ಆಟ` ಮುಗಿಸುತ್ತಾರೆ. ಇದೇನಿದು ಚಿಕ್ಕಮೇಳ?
ಮಾರುತಿ ಓಮ್ನಿಯಲ್ಲಿ ಆಗಮನ. ಸಂಖ್ಯೆ ಐದನ್ನು ಮೀರದು. ಜಡಿ ಮಳೆ ಇರಲಿ, ಬಿರುಗಾಳಿ ಇರಲಿ. ಸರಸರನೆ ಮನೆಯೊಳಗೆ ಬರುತ್ತಾರೆ. ದೇವರ ಚಿತ್ರ ಇಟ್ಟು ಪೂಜೆಗೆ ಅಣಿಯಾಗುತ್ತಾರೆ. ಪುರುಷ ಹಾಗೂ ಸ್ತ್ರೀ ವೇಷ ಇರುತ್ತದೆ. ಒಬ್ಬರು ಭಾಗವತರು. ಒಬ್ಬರು ಮದ್ದಳೆಯವರು. ಮನೆಯವರು ಒಟ್ಟು ಸೇರಿದ ಕೂಡಲೇ `ರತಿಯು ಮನ್ಮಥನ ಕರೆದು . . .` ಎಂದು ಭಾಗವತರು ಹಾಡುತ್ತಾರೆ. ಒಟ್ಟು 10 ನಿಮಿಷದ ಕಾರ್ಯಕ್ರಮ. ಮನೆಯವರು ಕೊಟ್ಟ ಕಾಣಿಕೆ ಪಡೆದು ನೆರೆ ಮನೆಗೆ ಪಯಣ. ಇದು ಮಳೆಗಾಲದಲ್ಲಿ ಈಗ ಕಂಡು ಬರುವ ಚಿಕ್ಕಮೇಳದ ಪಯಣ.
ಕನ್ನಡ ಭಾಷೆ - ಅರ್ಥಗಾರಿಕೆ ವಿಚಾರಸಂಕಿರಣ
ಕನ್ನಡ ಭಾಷೆಗೆ ಸುಮಾರು ಒಂದು ಸಾವಿರ ವರ್ಷವನ್ನು ಮೀರಿದ ಇತಿಹಾಸವಿದೆ. ಪ್ರಾಚೀನ ಹಳಗನ್ನಡದಿಂದ ಹಿಡಿದು ಇಂದಿನ ಆಧುನಿಕ ಹೊಸಗನ್ನಡದವರೆಗೆ ಅದರ ವ್ಯಾಪ್ತಿ ಹರಡಿಕೊಂಡಿದೆ. ಇಷ್ಟಿದ್ದರೂ ಈ ಕನ್ನಡ ಏಕರೂಪಿಯಾಗಿಲ್ಲ. ಬಹುಮುಖೀಯಾದ ವೈವಿಧ್ಯಮಯ ಕನ್ನಡಗಳು ಹಿಂದೆ ಇದ್ದವು ಎನ್ನುವುದು ಕವಿರಾಜಮಾರ್ಗಕಾರನ `ಸಾವಿರದ ದೇಸಿಯಿಂದ ವಾಸುಕಿಗೆ ಬೇಸರ` ಎಂಬ ಮಾತಿನಿಂದ ತಿಳಿಯುತ್ತದೆ. ಹೊಸಗನ್ನಡವು ದೇಸಿಕನ್ನಡ, ಪ್ರಾದೇಶಿಕ ಕನ್ನಡ, ಶಾಸ್ತ್ರೀಯ ಕನ್ನಡ, ಸಂಸ್ಕೃತ ಭೂಯಿಷ್ಠ ಕನ್ನಡ, ಗ್ರಾಂಥಿಕ ಕನ್ನಡ, ಆಡುನುಡಿಯ ಕನ್ನಡ, ಶಾಸನಭಾಷೆಯ ಕನ್ನಡ, ದಸ್ತಾವೇಜು, ಕಂದಾಯ ಇಲಾಖೆ ಕನ್ನಡ... ಹೀಗೆ ದೊಡ್ಡ ಪಟ್ಟಿಯೇ ಸಿದ್ಧವಾಗುತ್ತದೆ. ಜಾತಿ, ಬುಡಕಟ್ಟು, ಮತ, ಧರ್ಮಗಳ ಹಿನ್ನೆಲೆಯಿಂದ ಕೂಡ ಕನ್ನಡ ಭಾಷಾರೂಪ ಭಿನ್ನತೆ ಪಡೆದಿದೆ. ಈ ವಿವಿಧತೆಗಳೇ ಕನ್ನಡದ ಶಕ್ತಿಯಾಗಿದೆ, ಕನ್ನಡ ಭಾಷಾ ಸಮೃದ್ಧಿಗೂ ಕಾರಣವಾಗಿದೆ.
``ತರ್ಕಮದ್ದಲೆ`` ಒ೦ದು ಸಾಧ್ಯತೆ
ಯಕ್ಷಗಾನ ರಂಗಭೂಮಿಯ ವಿಶಾಲವಾದ ಸಾಧ್ಯತೆಗಳ ಚೌಕಟ್ಟಿನಲ್ಲಿ ಕೇವಲ ಪ್ರಯೋಗದ ದೃಷ್ಟಿಯಿಂದ ರೂಪಿಸಬಹುದಾದ ಒಂದು ರಂಗ ಕಲ್ಪನೆಯೇ ``ತರ್ಕಮದ್ದಲೆ`` – ತಾಳಮದ್ದಲೆ ಎಂಬ ಚಾಲ್ತಿಯಲ್ಲಿರುವ ಪದ್ಧತಿಯ ಹೆಸರಿನ ಬಲದಿಂದಲೇ ಈ ಹೆಸರನ್ನು ರೂಪಿಸಲಾಗಿದೆ. ಆದರೆ ಈ ಕಲ್ಪನೆ ಯಕ್ಷಗಾನದ ಸುಧಾರಣೆ ಅಥವಾ ಪರಿವರ್ತನೆ ಇತ್ಯಾದಿ ದೃಷ್ಟಿಕೋನಗಳನ್ನು ಖಂಡಿತ ಹೊಂದಿಲ್ಲ. ಹೊಂದಲೂ ಬಾರದು. ಆದರೆ ಯಕ್ಷಗಾನದ ಸ್ಥೂಲ – ಪರೋಕ್ಷ ಪ್ರೇರಣೆ ಇದಕ್ಕಿದೆ. ಇಲ್ಲಿಯೇ ಹೇಳಬೇಕು-ಇದು ಯಕ್ಷಗಾನಕ್ಕೆ ಏನೋ ಹೊಸ ಪ್ರೇರಣೆ ನೀಡುವಂಥದ್ದಲ್ಲ ಮತ್ತು ಅಂಥ ಉದ್ದೇಶವೂ ಈ ಪ್ರಯತ್ನಕ್ಕಿರಬಾರದು. ಕೇವಲ ಒಂದು ರಂಗಪ್ರಯತ್ನವಾಗಿ ಇದರ (ರಂಗ ಪ್ರಯತ್ನಕ್ಕೆ ಯಾರಾದರೂ ಮನಸ್ಸು ಮಾಡಿದರೆ ಅಂಥ ಪ್ರಯತ್ನದ) ಇತಿಮಿತಿಗಳನ್ನು ಧಾರಾಳವಾಗಿ ವಿಮರ್ಶಿಸಲು, ಟೀಕಿಸಲು ವಿಶ್ಲೇಷಿಸಲು ಅವಕಾಶವಿರುವ ಒಂದು ರಂಗ ಸಾಧ್ಯತೆ ಇದು.
ಯಕ್ಷಗಾನ ಭಾಗವತಿಕೆ ಮತ್ತು ಛಂದಸ್ಸು
ಯಕ್ಷಗಾನ ಛಂದಸ್ಸಿನ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ಹಲವಾರು ವಿದ್ವಾಂಸರು ಈ ಬಗ್ಗೆ ಸಾಕಷ್ಟು ಅಭ್ಯಾಸ ಮಾಡಿದ್ದಾರೆ. ಹಿಂದಿನ ಹಲವಾರು ಪ್ರಸಂಗಗಳ, ಪದ್ಯಗಳ ಸತ್ವಗಳನ್ನು, ಮೌಲ್ಯಗಳನ್ನು ಬಿಡಿ ಬಿಡಿಯಾಗಿ ತೆರೆದಿಟ್ಟು ಯಕ್ಷಗಾನ ಸಾಹಿತ್ಯ ಎಷ್ಟು ಶ್ರೀಮಂತವಾಗಿದೆ ಎಂಬುದನ್ನು ತಿಳಿಸಿದವರಿ ದ್ದಾರೆ. ಯಕ್ಷಗಾನ ಛಂದಸ್ಸಿನ ಬಗ್ಗೆ ನಿರ್ಣಯಾತ್ಮಕವಾಗಿ ಮಾತನಾಡುವ ಹಲವರು ಇಂದು ಇದ್ದಾರೆಂಬುದು ಸಂತೋಷದ ವಿಷಯ.
ಯಕ್ಷಗಾನ ಸಂಗೀತ
ಪ್ರತಿಯೊಂದು ಕಲೆಯೂ ರೂಪುಗೊಳ್ಳುವಾಗ ಒಂದು ನಿರ್ದಿಷ್ಟ ಉದ್ದೇಶವನ್ನು ಹೊಂದಿರುತ್ತದೆ, ಒಂದು ಗುರಿ ಇರಿಸಿಕೊಳ್ಳುತ್ತದೆ, ಒಂದು ನಿರ್ದಿಷ್ಟ ರಸಿಕ ವರ್ಗವನ್ನು ಗಮನದಲ್ಲಿರಿಸಿಕೊಳ್ಳುತ್ತದೆ. ಇದಕ್ಕೆ ಅನುಗುಣವಾಗಿ ಅದರ ಎಲ್ಲ ಅಂಗಗಳು ಕಾರ್ಯ ನಿರ್ವಹಿಸುತ್ತವೆ. ಆ ಕಾಲದ ಲಭ್ಯ ಪರಿಕರಗಳನ್ನು, ಕಲಾಸೂತ್ರಗಳನ್ನು ಅಳವಡಿಸಿಕೊಂಡು ಅದು ಒಂದು ಖಚಿತ ರೂಪವನ್ನು ಪಡೆಯುತ್ತದೆ. ಇದು ಕಲೆಯ ಮೂಲಸ್ವರೂಪವಾಗಿರುತ್ತದೆ.
ಅರ್ಥಗಾರಿಕೆಯಲ್ಲಿ ಧಾಟಿ ಮತ್ತು ಭಾಷೆ
ಯಕ್ಷಗಾನದಲ್ಲಿ ಪ್ರಧಾನವಾದುದು ಅರ್ಥಗಾರಿಕೆ. ಆಟ ಮತ್ತು ಕೂಟಗಳೆ೦ಬ ಎರಡು ಪ್ರಭೇದಗಳಿರುವ ಯಕ್ಷಗಾನದ ಬಯಲಾಟಗಳಲ್ಲಿ ಮಾತುಗಾರಿಕೆಯೇ ಮುಖ್ಯವಲ್ಲ. ಪ್ರಸ೦ಗದ (ಕಥೆಯ) ನಿರ೦ತರತೆಯ ಕೊ೦ಡಿಯಾಗಿ ಮಾತ್ರವೇ ಅರ್ಥಗಾರಿಕೆ ಕಾಣಿಸಿಕೊಳ್ಳುತ್ತದೆ. ಆದರೆ ಕೂಟಗಳಲ್ಲಿ (ತಾಳಮದ್ದಳೆ) ಅರ್ಥಗಾರಿಕೆಯೇ ಪ್ರಧಾನವಾಗಿದ್ದು ಅದು ಜನಾಕರ್ಷಣೆಯ ಲಕ್ಷ್ಯವೂ ಆಗಿದೆ. ಬಯಲಾಟದಲ್ಲಿರುವ ರ೦ಗಭೂಮಿಯ ಎಲ್ಲವನ್ನೂ ಕೂಟಗಳಲ್ಲಿ ಕೇವಲ ಮಾತುಗಾರಿಕೆಯಿ೦ದ ಕಲ್ಪಿಸಬೇಕಾಗುತ್ತದೆ. ಇದು ಕಲಾವಿದನ ಪ್ರತಿಭೆಗೆ ತಕ್ಕ೦ತೆ ಹಿಗ್ಗಲೂಬಹುದು, ಕುಗ್ಗಲೂಬಹುದು. ಏನಿದ್ದರೂ ಅದಕ್ಕೆ ಯಕ್ಷಗಾನದ್ದೇ ಆದ ಸ್ವಭಾವ ಇದೆ. ಶೈಲಿ ಇದೆ.
ಪ್ರಸ೦ಗ ಮತ್ತು ಅರ್ಥ
ಯಕ್ಷಗಾನ ಪ್ರದರ್ಶನದ ಎರಡು ರೂಪಗಳಾದ ಆಟ, (ವೇಷ ಸಹಿತ) ತಾಳಮದ್ದಲೆ (ವೇಷರಹಿತ, ಬೈಠಕ್) ಗಳಿಗೆ ಆಧಾರವಾಗಿರುವುದು ಯಕ್ಷಗಾನ ಎ೦ಬ ಕಾವ್ಯ, ಅಥವಾ ಯಕ್ಷಗಾನ ಪ್ರಸ೦ಗವೆ೦ದು ಕರೆಯಲಾಗುವ, ಪದ್ಯಗಳ ಮೂಲಕ ಕಥೆಯನ್ನು ನಿರೂಪಿಸುವ ಸಾಹಿತ್ಯ ಜಾತಿ. ಅ೦ದರೆ ಪ್ರಸ೦ಗದ ಹಾಡುಗಳನ್ನು ಆಧರಿಸಿ ಪ್ರದರ್ಶನದ ಸ೦ಗೀತ, ನೃತ್ಯ, ರ೦ಗವಿಧಾನ ಮತ್ತು ಮಾತುಗಾರಿಕೆಗಳು ಸಾಗುತ್ತವೆ. ನಾಟಕವಲ್ಲದ ಒ೦ದು ರಚನೆಯನ್ನಾಧರಿಸಿ, ನಾಟಕ ರೂಪವೊ೦ದು ಸಿದ್ಧವಾಗುತ್ತದೆ. ಇದರಲ್ಲಿ ಆಧಾರವಾಗಿರುವ ಪ್ರಸ೦ಗ ಮತ್ತು ಅದರ ಪ್ರದರ್ಶನದಲ್ಲಿ ಬರುವ ಮಾತು, ಅಥವಾ ಅರ್ಥ - ಅರ್ಥಗಾರಿಕೆಗಳ ಸ೦ಬ೦ಧವನ್ನು ಒ೦ದಿಷ್ಟು ಪರಿಶೀಲಿಸುವುದು ಈ ಬರಹದ ಉದ್ದೇಶ.
ಯಕ್ಷಗಾನ ಎಲ್ಲಿಂದ ಹೇಗೆ ಬೆಳೆದು ಬಂತು - ಒಂದು ವಿಚಾರ
ಯಕ್ಷಗಾನ ಆಟವೆಂಬುದು ಯಾವ ಕಾಲದಲ್ಲಿ ಪ್ರಸಿದ್ಧಿಗೆ ಬಂದಿತು, ಎಂಬ ಪ್ರಶ್ನೆಗೆ ನಿಖರವಾಗಿ ಕೊಡಬಹುದಾದ ಉತ್ತರವೆಂದರೆ ವಿಜಯ ನಗರದ ಅವಸಾನದ ನಂತರದಲ್ಲಿ. ಎಂದರೆ ಕ್ರಿ.ಶ. 1614ರಲ್ಲಿ ತಂಜಾವರದ ಅರಸು ಸಂಗೀತ ಪ್ರೇಮಿ ರಘುನಾಥ ನಾಯಕನು ಬರೆದ ರುಕ್ಮಿಣಿ ಕೃಷ್ಣ ವಿವಾಹವೆಂಬ ಯಕ್ಷಗಾನ ಪ್ರಬಂಧವೆಂಬ ಕೃತಿ ಯಕ್ಷಗಾನದಲ್ಲಿ ಭಾಗವತನೇ ಪ್ರಧಾನ. ವಿದ್ಯಾರಣ್ಯರ ಕಾಲದಲ್ಲೇ ಭಾಗವತ ವಾಙ್ಮಯವು ವಿಫುಲವಾಗಿ ಬೆಳೆದಿದ್ದು, ಇದರ ಒಂದು ಶಾಖೆಯಾಗಿ ದಾಸ ಸಾಹಿತ್ಯ ಪ್ರಚಲಿತಗೊಂಡು ವಿಷಯ ಸರ್ವವಿದಿತ. ಪುರಂದರದಾಸರು ಅನಸೂಯ ಕಥೆ ಎಂಬ ಯಕ್ಷಗಾನ ಪ್ರಬಂಧವನ್ನು ರಚಿಸಿದ್ದರೆಂದು ಹೇಳಲಾಗುತ್ತಿದೆ.
ಸ್ತ್ರೀವೇಷ: ಸ್ವರೂಪ ಮತ್ತು ಅನ್ವೇಷಣೆ
1945 ರ ದಶಕದ, ನನ್ನ ಹದಿಮೂರು, ಹದಿನಾಲ್ಕರ ಹರಯದಲ್ಲಿ, ಯಕ್ಷಗಾನ ರ೦ಗ ಪ್ರವೇಶ ಮಾಡಿದ ನಾನು, ಬಾಲಗೋಪಾಲಾದಿಯಾಗಿ, ಪು೦ಡುವೇಷ (ಅಭಿಮನ್ಯು, ಬಭ್ರುವಾಹನ ಇತ್ಯಾದಿ) ಗಳ ಮೂಲಕ ಅಭ್ಯಾಸದ ಹ೦ತಕ್ಕೆ ಬ೦ದು, ಸಾಮಾನ್ಯ ಇಪ್ಪತ್ತನೇ ಹರಯದಲ್ಲಿ ಪ್ರಧಾನ ಸ್ತ್ರೀಪಾತ್ರಗಳ ಸ್ಥಾನಕ್ಕೇರಿದೆ. ಆ ಕಾಲದ ಯಕ್ಷಗಾನ ಕ್ಷೇತ್ರದಲ್ಲಿ ಸಮಕಾಲೀನರಾಗಿ, ಪ್ರಸಿದ್ಧ ಸ್ತ್ರೀಪಾತ್ರಧಾರಿಗಳಾಗಿದ್ದವರು ಪುರುಷೋತ್ತಮ ಭಟ್ಟರು ಹಾಗೂ ದಿವ೦ಗತ ಕರ್ಗಲ್ಲು ಸುಬ್ಬಣ್ಣ ಭಟ್ಟರು. ಇವರ ಮಾರ್ಗದರ್ಶನ ಹಾಗೂ ಒಡನಾಟದಿ೦ದ, ನನ್ನ ಸ್ತ್ರೀ ಪಾತ್ರಗಳು ಹ೦ತ ಹ೦ತವಾಗಿ ಬೆಳೆದವು. ಯಕ್ಷಗಾನದ ಪ್ರಧಾನ ಸ್ತ್ರೀ ಪಾತ್ರಗಳ ಕುರಿತು, ಹಿ೦ದಿನಿ೦ದಲೂ ಒಬ್ಬರನ್ನೊಬ್ಬರು ಅನುಸರಣೆ ಮಾಡಿದ್ದಾರೆಯೇ ಹೊರತು, ಸ್ವ೦ತ ಚಿ೦ತನೆ ನಡೆಸಿದವರು ಬಹಳ ವಿರಳ. ಆ ಕಾಲಕ್ಕೆ ಪಾತ್ರಗಳ ಚೌಕಟ್ಟಿನ ಹಾಗೂ ಪದ್ಯಗಳ ಪರಿಧಿಯೊಳಗೆ ಸ೦ಚರಿಸಿದರೆ ಸಾಕಾಗಿತ್ತು.
ಬಹುರೂಪ: ತುಳು ಯಕ್ಷಗಾನಗಳು
ಕರಾವಳಿ ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಯಕ್ಷಗಾನದಲ್ಲಿ ಮುಖ್ಯವಾದ ಎರಡು ಪ್ರಾದೇಶಿಕ ಪ್ರಭೇದಗಳಿವೆ. ಅವುಗಳೆಂದರೆ ಕರಾವಳಿಯ ದಕ್ಷಣ ಭಾಗದಲ್ಲಿ ಪ್ರಚಲಿತದಲ್ಲಿರುವ ತೆಂಕುತಿಟ್ಟು ಮತ್ತು ಉತ್ತರ ಭಾಗದಲ್ಲಿ ಕಂಡು ಬರುವ ಬಡಗುತಿಟ್ಟು. ಎರಡೂ ಭಾಗದ ಯಕ್ಷಗಾನಗಳಿಗೆ ಆಧಾರವಾಗಿರುವ ಪ್ರಸಂಗ ಪುಸ್ತಕಗಳು ಬಹುತೇಕ ಸಾಮಾನ್ಯವೇ ಆಗಿದ್ದರೂ ಅದನ್ನು ರಂಗದಲ್ಲಿ ಪ್ರಸ್ತುತ ಪಡಿಸುವರೀತಿಯಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಬಣ್ಣ, ಕುಣಿತ, ಮಾತುಗಾರಿಕೆ ಮತ್ತು ನೃತ್ಯದಲ್ಲಿ ನಾವು ಬದಲಾವಣೆಗಳನ್ನು ಗಮನಿಸಬಹುದು. 1980 ರದಶಕದಲ್ಲಿ ಆಗ ಬಹಳ ಜನಪ್ರಿಯವಾಗಿದ್ದ ತೆಂಕುತಿಟ್ಟು ಯಕ್ಷಗಾನದಲ್ಲಿ ಇನ್ನೊಂದು ಭಾಷಿಕ ಪ್ರಬೇಧ ಕಾಣಿಸಿಕೊಂಡಿದ್ದು ವಿದ್ವಾಂಸರು ಅದನ್ನು ತುಳು ತಿಟ್ಟು ಎಂದು ಕರೆದರು. ಏಕೆಂದರೆ ಈ ಬದಲಾಣೆಯು ಅದುವರೆಗೆ ಕನ್ನಡದಲ್ಲಿ ಪ್ರದರ್ಶಿತವಾಗುತ್ತದ್ದ ಯಕ್ಷಗಾನವನ್ನು ತುಳುವಿನೆಡೆಗೆ ಕರೆದೊಯ್ದಿತು.
ಕರ್ನಾಟಕದ ಕರಾವಳಿಯ ಶಾಸ್ತ್ರೀಯ ಕಲೆ - ಯಕ್ಷಗಾನ
ಯಕ್ಷಗಾನದ ಮೊದಲ ಉಲ್ಲೇಖ ಸಾರ್ಣದೇವನ ``ಸ೦ಗೀತ ರತ್ನಾಕರ``ದಲ್ಲಿ (1210 ಕ್ರಿಶ) ``ಜಕ್ಕ`` ಎ೦ದು ಆಗಿದ್ದು ಮು೦ದೆ ``ಯಕ್ಕಲಗಾನ`` ಎ೦ದು ಕರೆಯಲ್ಪಟ್ಟಿತ್ತು ಎ೦ಬುದು ಒ೦ದು ಅಭಿಪ್ರಾಯ. ಗ೦ಧರ್ವ ಗ್ರಾಮ ಎ೦ಬ ಈಗ ನಶಿಸಿ ಹೋಗಿರುವ ಗಾನ ಪದ್ದತಿಯಿ೦ದ ಗಾನ ಮತ್ತು ಸ್ವತ೦ತ್ರ ಜಾನಪದ ಶೈಲಿಗಳಿ೦ದ ನೃತ್ಯ ರೂಪಗೊ೦ಡಿತೆ೦ದು ಶಿವರಾಮ ಕಾರ೦ತರ ``ಯಕ್ಷಗಾನ ಬಯಲಾಟ`` ಎ೦ಬ ಸ೦ಶೋಧನಾ ಪ್ರಭ೦ದಗಳ ಸ೦ಕಲನದಲ್ಲಿ ಹೇಳಿದೆ.1500 ರಷ್ಟರಲ್ಲಿ ವ್ಯವಸ್ತಿತವಾಗಿ ಯಕ್ಷಗಾನ ರೂಢಿಯಲ್ಲಿತ್ತು ಎ೦ಬುದು ಬಹಳ ವಿದ್ವಾ೦ಸರು ಒಪ್ಪುವ ವಿಚಾರ.
ತಾಳಮದ್ದಲೆ ಎಂಬ ಮಾತಿನ ನವನೀತ
ಯಕ್ಷಗಾನದ ಬಗ್ಗೆ ನಿಮಗೆಲ್ಲ ತಿಳಿದೇ ಇರುತ್ತದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಬಹು ಪ್ರಸಿದ್ದ ಕಲೆ ಅದು. ಯಕ್ಷಗಾನ ತಾಳಮದ್ದಲೆ, ಯಕ್ಷಗಾನದಿಂದ ಪ್ರೇರಿತವಾದ ಆದರೆ ಯಕ್ಷಗಾನಕ್ಕಿಂತ ಭಿನ್ನವಾಗಿ ಬೆಳೆದ ಪ್ರಾಕಾರ. ಗೆಳೆಯ ಸುಧನ್ವ ತಾಳಮದ್ದಲೆ ಬಗೆಗೊಂದಿಷ್ಟನ್ನ ಇಲ್ಲಿ ಬರೆದಿದ್ದಾನೆ. ಅದರ ಜೊತೆಗೊಂದಿಷ್ಟು ವಿಚಾರಗಳನ್ನ ನನಗೆ ಹಂಚಿಕೊಳ್ಳಬೇಕು ಅನ್ನಿಸಿತು.

ನನ್ನಪ್ಪ ಯಕ್ಷಗಾನ ಅರ್ಥಧಾರಿ, ಪ್ರಸಂಗ ಕರ್ತೃ. ಹೀಗಾಗಿ, ತಾಳಮದ್ದಲೆ ಎಂದರೇನು ಎಂದು ನೆಟ್ಟಗೆ ಅರ್ಥವಾಗುವ ಮುಂಚೆಯೇ, ಭಾಗವತರ ಹಿಂದೆ ಕೂತು ಹಾರ್ಮೋನಿಯಂ ಗಾಳಿ ಹಾಕುತ್ತಿದ್ದವನು ನಾನು. ಆಮೇಲೆ, ದಿನಗಳೆದ ಹಾಗೆ ತಾಳಮದ್ದಲೆಯ ರುಚಿ ಸಿಕ್ಕಿತು, ಇಷ್ಟವಾಗತೊಡಗಿತು. ಬೆಂಗಳೂರಿಗೆ ಬಂದ ಮೇಲೆ ಇತರೆಲ್ಲಾ ವಿಷಯಗಳಂತೆ, ತಾಳಮದ್ದಲೆಯನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ.
ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ