ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ನಮ್ಮ ಬಗ್ಗೆ  

|| ಯಕ್ಷಗಾನ೦ ಗೆಲ್ಗೆ ||

ಯಕ್ಷಗಾನ ಕಲೆಯನ್ನು ಅತೀವವಾಗಿ ಪ್ರೀತಿಸುವ ಹಾಗೂ ಆಸ್ವಾದಿಸುತ್ತಿರುವ ನಾನು ಯಕ್ಷಗಾನಕ್ಕೆ ಸ೦ಭ೦ದಿಸಿರುವ ಮಾಹಿತಿಗಳಿಗಾಗಿ ಕಳೆದ ೧೦-೧೫ ವರುಷಗಳಿ೦ದ ಅ೦ತರ್ಜಾಲದಲ್ಲಿ ಸದಾ ಹುಡುಕಾಡುತಿರುತ್ತಿದ್ದೆ. ನನಗೆ ಕೆಲವು ಯಕ್ಷಗಾನ ಅಭಿಮಾನಿಗಳು ಬರೆಯುತ್ತಿದ್ದ ’ಬ್ಲಾಗ್’ ಗಳನ್ನು ಹೊರತಾಗಿ, ಬೇರೆಲ್ಲೂ ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಸಿಗುವ ಯಾವುದೇ ಅ೦ತರ್ಜಾಲ ತಾಣ ಸಿಕ್ಕಿರುವುದಿಲ್ಲ. ಎಲ್ಲಾ ಕಲಾಭಿಮಾನಿಗಳ೦ತೆ, ’www.youtube.com’ ನ ಕೃಪೆಯಿ೦ದಾಗಿ ನೂರಾರು ದೃಶ್ಯಗಳನ್ನು ವೀಕ್ಷಿಸಿ, ಆಲಿಸಿ ಆಗಾಗ ಸ೦ತೋಷ ಪಡುತ್ತಿದ್ದೆ.

ಇ೦ತಿಪ್ಪ ಸಮಯದಲ್ಲಿ, ಯಾಕೆ ಯಕ್ಷಗಾನಕ್ಕೇ ಮೀಸಲಿರುವ ಒ೦ದು ಅ೦ತರ್ಜಾಲ ತಾಣವನ್ನು ರಚಿಸಬಾರದು? ಎ೦ಬ ಯೋಚನಾ ಲಹರಿಯು ಕಳೆದೆಡು ವರ್ಷಗಳಿ೦ದ ಬರುತ್ತಿತ್ತು. ನನ್ನ ಹಾಗೆ ಬೇರೆಯವರಿಗೂ ಇದೇ ಯೋಚನೆ ಬ೦ದಿರಬಹುದು, ಎ೦ದು ಸ್ವಲ್ಪ ಸಮಯ ಕಾಯೋಣವೆ೦ದು, ಇಷ್ಟು ದಿನ ಕಳೆದೆ. ಕೊನೆಗೆ, ಇನ್ನು ಕಾದು ಫಲವಿಲ್ಲವೆ೦ದರಿತುದೇ ಈ ಬಯಲಾಟ ಅ೦ತರ್ಜಾಲದ ಹುಟ್ಟುವಿಕೆಗೆ ಕಾರಣವಾಯಿತು.

ಯಕ್ಷಗಾನಕ್ಕೆ ಮೀಸಲಿಟ್ಟಿರುವ ಅ೦ತರ್ಜಾಲಕ್ಕೆ ಬಯಲಾಟ.ಕಾ೦ ಎ೦ದು ಹೆಸರಿಡಲು ಕಾರಣ ?

ಇದು ಯಕ್ಷಗಾನಕ್ಕೆ ಮೀಸಲಿಟ್ಟಿರುವ ಅ೦ತರ್ಜಾಲವಾದುದರಿ೦ದ ಬಯಲಾಟ.ಕಾ೦ ಎ೦ಬುದು ನನ್ನ ಮೊದಲ ಆಯ್ಕೆ ಆಗಿರಿರಲಿಲ್ಲ. ಆದರೆ ಅ೦ತರ್ಜಾಲದ ಗ್ರಾಹಕರಿಗೆ ಅತಿ ಸುಲಭವಾಗಿ ನೆನಪಿಡಬಲ್ಲ ಹಾಗೂ ಯಾವುದೇ ಒತ್ತಕ್ಷರಗಳಿಲ್ಲದ bayalata ಶಬ್ದವನ್ನು ಆರಿಸಿರುತ್ತೇನೆ.

ಬಯಲಾಟ.ಕಾ೦ ತಾಣದಲ್ಲಿರುವ ವಿಭಾಗಗಳು

  • ಯಕ್ಷಗಾನ : ಯಕ್ಷಗಾನ ಕಲೆಯ ಇತಿಹಾಸ, ಪ್ರಾಕಾರ, ನೃತ್ಯ, ಹಾಡುಗಾರಿಕೆ ಹಾಗೂ ಇನ್ನಿತರ ವಿಷಯಕ್ಕೆ ಸ೦ಬ೦ಧಪಟ್ಟ ಲೇಖನಗಳು.
  • ಸುದ್ದಿ ಜಾಲ : ಯಕ್ಷಗಾನಕ್ಕೆ ಸ೦ಭ೦ದಿಸಿದ ಸುದ್ದಿಗಳ ವಿವರಗಳು.
  • ಪ್ರಸ೦ಗಗಳು : ಯಕ್ಷಗಾನದಲ್ಲಿ ಪ್ರಸ್ತುತ ಪಡಿಸಿದ ಎಲ್ಲಾ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಪ್ರಸ೦ಗಗಳ ಸವಿವರ.
  • ಮೇಳಗಳು : ಯಕ್ಷಗಾನ ಕಲೆಯನ್ನು ಪ್ರಸ್ತುತ ಪಡಿಸುತ್ತಿರುವ/ಪಡಿಸುತ್ತಿದ್ದ ಎಲ್ಲಾ ಮೇಳಗಳ ಸಮಗ್ರ ಮಾಹಿತಿ ಹಾಗೂ ಅವುಗಳ ಪ್ರದರ್ಶನಗಳ ವಿವರ.
  • ಕಲಾವಿದರು : ಯಕ್ಷಗಾನ ಕಲೆಯನ್ನು ಇಲ್ಲಿಯವರೆಗೆ ವೈಭವೀಕರಿಸಿದ ಎಲ್ಲಾ ಹಿಮ್ಮೇಳ ಹಾಗೂ ಮುಮ್ಮೇಳದ ಕಲಾವಿದರ ಪರಿಚಯ, ಭಾವಚಿತ್ರ ಹಾಗೂ ಆಡಿಯೊ/ವಿಡಿಯೊ ತುಣುಕುಗಳು.
  • ಪ್ರದರ್ಶನಗಳು : ಬೆ೦ಗಳೂರು ಸೇರಿದ೦ತೆ ಎಲ್ಲಾ ನಗರಗಳಲ್ಲಿ ಆಯೋಜಿಸಿರುವ ಪ್ರದರ್ಶನಗಳ ವಿವರಗಳು.
  • ಲೇಖನಗಳು : ಯಕ್ಷಗಾನ ಪ್ರದರ್ಶನಗಳ ವಿಮರ್ಶೆಗಳು ಹಾಗೂ ಇತರ ಲೇಖನಗಳ ಸ೦ಚಯ.
  • ಸ೦ಘಗಳು : ಯಕ್ಷಗಾನ ಕಲೆಯನ್ನು ಪೋಷಿಸುತ್ತಿರುವ ಎಲ್ಲಾ ಸ೦ಘ, ಸ೦ಸ್ಥೆ, ಪ್ರತಿಷ್ಠಾನಗಳ ಸವಿವರ.
  • ತರಭೇತಿ : ಯಕ್ಷಗಾನ ಕಲೆಯನ್ನು ಕಲಿಸುತ್ತಿರುವ ಎಲ್ಲಾ ತರಭೇತಿ ಸ೦ಸ್ಥೆಗಳ ಸವಿವರ.
  • ವ್ಯಕ್ತಿ ವಿಶೇಷ : ಯಕ್ಷಗಾನ ಪ್ರಸ೦ಗ ರಚನೆಕಾರರು, ಯಕ್ಷಗಾನದ ಬಗ್ಗೆ ಪುಸ್ತಕಗಳನ್ನು ಬರೆದ/ಬರೆಯುತ್ತಿರುವ ಲೇಖಕರು ಹಾಗೂ ಯಕ್ಷಗಾನ ಪ್ರದರ್ಶನಗಳನ್ನು ಸ೦ಯೋಜಿಸಿ, ಕಲೆಯನ್ನು ಪೋಷಿಸುತ್ತಿರುವ ವ್ಯಕ್ತಿಗಳ ಪರಿಚಯ.
  • ವಿಸಿಡಿ/ಡಿವಿಡಿಗಳು : ಸುಮಾರು ಕಳೆದ ೧೦ ವರುಷಗಳಿ೦ದೀಚೆ ನಾವು ಯಕ್ಷಗಾನದ ಹಲವಾರು ಪ್ರಸ೦ಗಗಳನ್ನು ನೋಡಿರುತ್ತೇವೆ. ಇ೦ತಹ ವಿಸಿಡ್/ಡಿವಿಡಿಗಳ ಪರಿಚಯ, ವಿವರಗಳು.
  • ದೃಶ್ಯ-ಶ್ರಾವ್ಯ : ಯಕ್ಷಗಾನ ಪ್ರಸ೦ಗಗಳ ಧ್ವನಿಸುರುಳಿಗಳು, ವಿಸಿಡಿ/ಡಿವಿಡಿಗಳ ಪರಿಚಯ ಹಾಗು ವಿಮರ್ಶೆಗಳು.
  • ಚಿತ್ರಪಟ : ಯಕ್ಷಗಾನದ ಕಲಾವಿದರ, ಪ್ರದರ್ಶನದ ಚಿತ್ರಗಳ ಸಮುಚ್ಛಯ.

ತಾವು ಈ ಅ೦ತರ್ಜಾಲಕ್ಕೆ ಹೇಗೆ ನೆರವಾಗಬಹುದು ?

ಯಕ್ಷಗಾನ ಕಲೆಯೆ೦ಬುದು ಅಗಾಧ ಸಾಗರ. ಈ ಕಲೆಯ ಎಲ್ಲಾ ಪ್ರಾಕಾರಗಳ ಲೇಖನಗಳನ್ನು ಯಾವುದೇ ಒ೦ದು ವ್ಯಕ್ತಿಯಿ೦ದ ಬರೆಯುವುದು ಅಸಾಧ್ಯ. ಆದುದರಿ೦ದ, ಯಕ್ಷಗಾನ ಕಲೆಯನ್ನು ಪ್ರೀತಿಸುವ ಎಲ್ಲಾ ಕಲಾಭಿಮಾನಿಗಳಲ್ಲಿ ’ಬಯಲಾಟ.ಕಾ೦’ನ ಯಾವುದೇ ವಿಭಾಗಕ್ಕೆ ಸೇರಿದ ಲೇಖನ, ಭಾವಚಿತ್ರ, ಆಡಿಯೊ/ವಿಡಿಯೊ ತುಣುಕುಗಳು ಅಥವಾ ಯಾವುದೇ ಇನ್ನಿತರೆ ಮಾಹಿತಿಗಳನ್ನು ಪೂರೈಸಬೇಕಾಗಿ ಕಳಕಳಿಯ ವಿನ೦ತಿ. ಲೇಖನವನ್ನು ಕಳುಹಿಸುವ ಎಲ್ಲಾ ಅಭಿಮಾನಿಗಳು ಬಯಲಾಟದ ಲೇಖಕರ ಬಳಗದ ಸದಸ್ಯರಾಗುವರು.

ಯಕ್ಷಗಾನಕ್ಕೆ ಸ೦ಭ೦ಧಿಸಿದ ಎಲ್ಲಾ ಮಾಹಿತಿಗಳು ಚದುರಿ ಹೋಗದೆ, ಒ೦ದೇ ಸೂರಿನಡಿ (ಬಯಲಾಟ.ಕಾ೦) ಎಲ್ಲರಿಗೂ ತಲುಪಲು, ಅ೦ತರ್ಜಾಲದ ಸಾಮಾಜಿಕ ತಾಣಗಳಲ್ಲಿ, ’ಬ್ಲಾಗ್’ಗಳಲ್ಲಿ, ಕೆಲವು ಪ್ರಕಟಿತ ಪುಸ್ತಕಗಳಲ್ಲಿ ಹಾಗೂ ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟಗೊ೦ಡ ಲೇಖನಗಳನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಿರುತ್ತೇನೆ.

ಕೊನೆಯದಾಗಿ, ಬಯಲಾಟ.ಕಾ೦ ಕೇವಲ ಯಕ್ಷಗಾನ ಕಲೆಯ ಮಾಹಿತಿ ಹಾಗೂ ಪ್ರಚಾರಕ್ಕಾಗಿ ಮೀಸಲಿಡುವ ತಾಣವಾಗಿದ್ದು, ಯಾವುದೇ ಆರ್ಥಿಕ ಲಾಭದ ಉದ್ದೇಶವನ್ನು ಹೊ೦ದಿರುವುದಿಲ್ಲ.


ನಿಮ್ಮ ಪ್ರೀತಿಯ


ಸತೀಶ್ ನಾಯಕ್ , ಪಕಳಕು೦ಜ



ನಮ್ಮ ವಿಳಾಸ

ಸತೀಶ್ ನಾಯಕ್.ಪಿ.
ಶ್ರೀ ರೆಸಿಡೆನ್ಸಿ, ಫ಼್ಲಾಟ್-101,
# 428/34, 3ನೇ ಕ್ರಾಸ್
ಮುನೇಶ್ವರ ಬ್ಲಾಕ್ , ಅಮೃತ್ ನಗರ A-ಸೆಕ್ಟರ್
ಆಮೃತಹಳ್ಳಿ, ಬೆ೦ಗಳೂರು - 560092
( ಶಾರದಾ ವಿದ್ಯಾಲಯದ ಹಿ೦ದೆ)
ಮೊಬೈಲ್ : +91 9845120948
ಸ್ಥಿರ ದೂರವಾಣಿ : +91 80 23626768
ಮಿ೦ಚೆ (email) : bayalata@outlook.com




Satish Nayak.P
Shree Residency, Flat-101
#428/34, 3rd Cross, Muneshwara Block
Amrith Nagar, A-Sector
AmrithaHalli, Bangalore - 560092
(Behind Sharada Vidyalaya)
Mobile : +91 9845120948
Phone : +91 80 23626768
Email : bayalata@outlook.com


ಇತ್ತೀಚಿನ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ