ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ  

ಸುದ್ದಿಗಳು - 2016

ರಾಜಾಂಗಣದಲ್ಲಿ ರಂಜಿಸಿದ ಧಾರೇಶ್ವರ ಯಕ್ಷಬಳಗದವರ ಶ್ರೀ ಕೃಷ್ಣ ಅಷ್ಟಾಹ
ಪರ್ಯಾಯ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಬಡಗುತಿಟ್ಟಿನ ಹಿರಿಯ ಭಾಗವತ ಧಾರೇಶ್ವರರ ಸಾರಥ್ಯದಲ್ಲಿ ಧಾರೇಶ್ವರ ಬಳಗದವರು ಎಂಟು ದಿನ ಉಡುಪಿ ರಾಜಾಂಗಣದಲ್ಲಿ ಪ್ರದರ್ಶಿಸಿದ ಶ್ರೀ ಕೃಷ್ಣನ ಬಾಲಲೀಲೆಯಿಂದ ಆರಂಬಿಸಿ ಪ್ರಭುದ್ದ ರಾಜಕಾರಿಣಿಯಾದ ಶ್ರೀಕೃಷ್ಣ, ಕೌರವ ಪಾಂಡವರ ನಡುವೆ ಸಂದಾನ ನಡುಸುವವರೆಗೆ ವಿವಿಧ ಪ್ರಸಂಗಗಳು ಹಲವಾರು ದಾಖಲಿಸುವ ಅಂಶಗಳೊಂದಿಗೆ ಸಹ್ರದಯ ಯಕ್ಷಗಾನಾಭಿಮಾನಿಗಳ ಮನತಣಿಸುವಲ್ಲಿ ಯಶಸ್ವಿಯಾಯಿತು. ಎಂಟು ದಿನ ಶ್ರೀ ಕೃಷ್ಣನ ಜನ್ಮ-ಬಾಲ್ಯ-ವಿವಾಹ-ಪ್ರಭುದ್ದತೆಯ ಮೇಲೆ ಬೆಳಕು ಚೆಲ್ಲುವ ಎಂಟು ಕಥಾನಕಗಳು ಇಂತಹ ಸಣ್ಣ ಪುಟ್ಟ ದೋಷಗಳ ಹೊರತಾಗಿಯೂ ಯಶಸ್ವಿ ಪ್ರಯೋಗ ಎನ್ನಬಹುದು. ಈ ನಿಟ್ಟಿನಲ್ಲಿ ಶ್ರೀ ದಾರೇಶ್ವರ ಯಕ್ಷ ಬಳಗದ ಸರ್ವ ಸದಸ್ಯರೂ ಅಭಿನಂದನಾರ್ಹರು.
``ಗಾನ ಗಂಧರ್ವ`` ಪದ್ಯಾಣ ಗಣಪತಿ ಭಟ್ಟರಿಗೆ 60ರ ಸಂಭ್ರಮದ ಸನ್ಮಾನ
ಸುಮಾರು 70ರ ದಶಕದಲ್ಲಿ ಯಕ್ಷಗಾನದ ಭವಿಷ್ಯದ ಬಗ್ಗೆ ಕಾಡುತ್ತಿದ್ದ ಚಿಂತನೆ ಪ್ರಸಕ್ತ ದಿನಗಳಲ್ಲೂ ಕಾಣಿಸುತ್ತಿದೆ. ಹೀಗಾಗಿ ಯಕ್ಷಗಾನದ ಮುಂದಿನ ಪರಂಪರೆಗೆ ಯಾರು ಎಂಬ ಬಗ್ಗೆ ನಮ್ಮೊಳಗೆ ಗಂಭೀರ ಚಿಂತನೆ ಮಾಡುವ ಆವಶ್ಯಕತೆ ಇದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಯಕ್ಷಗಾನದ ಹಿರಿಯ, ಪ್ರಸಿದ್ಧ ಭಾಗವತ ``ಗಾನ ಗಂಧರ್ವ`` ಪದ್ಯಾಣ ಗಣಪತಿ ಭಟ್ಟರಿಗೆ 60ರ ಸಂಭ್ರಮದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ (ಜೂ. 4, ಜೂ. 5) ಮಂಗಳೂರು ಪುರಭವನದಲ್ಲಿ ಆಯೋಜಿಸಲಾದ ದ್ವಿದಿನ ಕಲೋತ್ಸವದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಂ. ಎಲ್‌. ಸಾಮಗ ಮತ್ತು ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರಿಗೆ ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ
ಉಡುಪಿಯ ಯಕ್ಷಗಾನ ಕಲಾರಂಗವು ವರ್ಷ ಪೆರ್ಲ ಕೃಷ್ಣ ಭಟ್‌ ಪ್ರಶಸ್ತಿಯನ್ನು ಪ್ರೊ| ಎಂ. ಎಲ್‌. ಸಾಮಗರವರಿಗೆ 29-5-2016ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು , ಮಟ್ಟಿ ಮುರಲೀಧರ ರಾವ್‌ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಸಿದ್ಧಕಟ್ಟೆಗೆ ತೆರಳಿ ಅಜ್ಜಿಬೆಟ್ಟು ನಿವಾಸದಲ್ಲಿ ತೀವ್ರ ಅನಾರೋಗ್ಯದಿ೦ದ ಇದೀಗ ಚೇತರಿಸುತ್ತಿರುವ ಹಿರಿಯ ಕಲಾವಿದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರಿಗೆ ಪ್ರದಾನ ಮಾಡಲಾಯಿತು.
ಅಚ್ಚುಕಟ್ಟಾಗಿ ಸ೦ಪನ್ನಗೊ೦ಡ ಯಕ್ಷಧ್ರುವ ಪಟ್ಲ ಸಂಭ್ರಮ - 2016
ಖ್ಯಾತ ಭಾಗವತ ಸತೀಶ್‌ ಶೆಟ್ಟಿ ಪಟ್ಲ ಸ್ಥಾಪಕಾಧ್ಯಕ್ಷತೆಯ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ವತಿಯಿಂದ ಮಂಗಳೂರು ಪುರಭವನದಲ್ಲಿ ರವಿವಾರ ಬೆಳಗ್ಗಿನಿಂದ ರಾತ್ರಿಯವರೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ``ಯಕ್ಷಧ್ರುವ ಪಟ್ಲ ಸಂಭ್ರಮ`` ಸಂಪನ್ನಗೊಂಡಿತು. ಯಕ್ಷಗಾನದ ಹಿರಿಯ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ ಅವರಿಗೆ 1 ಲಕ್ಷ ರೂ. ನಗದು, ಬೆಳ್ಳಿ ಪದಕ ಸಹಿತ ``ಪಟ್ಲ ಪ್ರಶಸ್ತಿ`` ಹಾಗೂ ಖ್ಯಾತ ಅರ್ಥಧಾರಿ ಜಬ್ಟಾರ್‌ ಸಮೋ ಸಂಪಾಜೆ ಅವರಿಗೆ ``ಯಕ್ಷ ಗೌರವ`` ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. 15 ಮಂದಿ ಅಶಕ್ತ ಕಲಾವಿದರಿಗೆ ಹಾಗೂ ಇಬ್ಬರು ಕಲಾವಿದರಿಗೆ ಮರಣೋತ್ತರ ಗೌರವಧನವಾಗಿ ತಲಾ 50,000 ರೂ. ವಿತರಿಸಲಾಯಿತು.
ಹಾಸ್ಯ ಚಕ್ರವರ್ತಿ ಹಳ್ಳಾಡಿ ಜಯರಾಮ ಶೆಟ್ಟಿಯವರಿಗೆ ಅಭಿಮಾನಿಗಳ ಅಭಿನಂದನೆ
ಬಡಗುತಿಟ್ಟಿನ ರಾಜಹಾಸ್ಯ ಎಂದು ಗುರುತಿಸಲ್ಪಟ್ಟ ಹಳ್ಳಾಡಿ ಜಯರಾಮ ಶೆಟ್ಟರಿಗೆ ಈಗ ವರುಷ ಅರವತ್ತರ ಹರೆಯ ಹಾಗೂ ಐವತ್ತರ ಯಕ್ಷಗಾನ ತಿರುಗಾಟ. ಇದನ್ನು ಅರ್ಥಪೂರ್ಣಗೊಳಿಸಲು ಅವರ ಅಭಿಮಾನಿಗಳು ಎಪ್ರಿಲ್ 17 ಆದಿತ್ಯವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಕಾರ್ಯಕ್ರಮ ಇರಿಸಿಕೊಂಡಿದ್ದಾರೆ. ಬಳಿಕ ಖ್ಯಾತ ಕಲಾವಿದರಿಂದ ಚಂದ್ರಾವಳಿ ವಿಲಾಸ ಎಂಬ ಹಾಸ್ಯ ಪ್ರಸಂಗದ ಪ್ರದರ್ಶನವಿದೆ.
ಯಕ್ಷಗಾನ ಪ್ರಿಯರ ಮನೆ-ಮನ ತಲುಪುವಲ್ಲಿ ಯಶಸ್ಸಿಯಾದ Efollo ಆ್ಯಪ್
ಕೆಲಸದ ಒತ್ತಡದಲ್ಲಿ ಕೆಟ್ಟು ಹೋಗಿದ್ದ ಮನಸ್ಸು ರಿಲ್ಯಾಕ್ಸ್ ಬಯಸಿತ್ತು. ಒಂದು ಯಕ್ಷಗಾನ ನೋಡುವ ಮನಸ್ಸಾಗಿತ್ತು. ನೋಡುವ ಬಯಕೆ ಇದ್ದರೂ ಇಂದು ಎಲ್ಲಿ,ಯಾವ ಮೇಳದ ಯಕ್ಷಗಾನವಿದೆ ಎಂಬ ಮಾಹಿತಿ ಸರಿಯಾಗಿ ಸಿಕ್ಕಿರಲಿಲ್ಲ. ಅಲ್ಲಿ ಇಲ್ಲಿ ಜಾಲಾಡಿದ್ದಾಯ್ತು. ಆದ್ರೆ ಪ್ರಶ್ನೆ ಹಾಗೆ ಉಳಿದಿತ್ತು. ಆಗ ನನ್ನ ಆಪ್ತರು ಕೊಟ್ಟ ಸಲಹೆ Efollo ಆ್ಯಪ್. ತಕ್ಷಣ ಮೊಬೈಲ್ ಎತ್ತಿಕೊಂಡು ಆ್ಯಪ್ ಡೌನ್ ಲೋಡ್ ಮಾಡಿದೆ. ಯಸ್ ನನಗೆ ಬೇಕಾದ ಮಾಹಿತಿ ಅಲ್ಲಿತ್ತು. ಒಂದೊಳ್ಳೆ ಯಕ್ಷಗಾನ ನೋಡಿ ಬರುವ ಅವಕಾಶ ಸಿಕ್ಕಿತು.
ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ “ಯಕ್ಷಗಾನ ಪ್ರಾತ್ಯಕ್ಷಿತೆ”
ಧಿರ ವಯ್ಯಾರೋ ಬಹುಪರಾಕ್, ಶರಧಿ ಗಂಭಿರೋ ಬಹುಪರಾಕ್, ಕಸ್ತೂರಿ ಕೋಲಾಹಲೋ ಸ್ವಾಮಿ ಪರಾಕ್, ಸ್ವಾಮಿ ಪರಾಕ್, ಭೂಮಿ ಪರಾಕ್, ದೇವ ಪರಾಕ್, ಸ್ವಾಮಿ ಪರಾಕ್ ಎಂದು ಕೋಡಂಗಿ ನೃತ್ಯಗಾರರು ಚೌಕಿಯಲ್ಲಿ ಗಣಪತಿ ಪೂಜೆ ಮುಗಿಸಿ ದಿವಟಿಕೆ ಹಿಡಿದು ಭಾಗವತರು, ಚಂಡೆ, ಮದ್ದಲೆಯೊಂದಿಗೆ ಬಹುಪರಾಕ್ ಹಾಕುತ್ತಾ ರಂಗಕ್ಕೆ ಬಂದು ಗಜವದನನನ್ನು ಧ್ಯಾನಿಸಿ ಕಾರ್ಯಕ್ರಮಕ್ಕೆ ವಿಘ್ನಬಾರದಂತೆ ರಂಗದಲ್ಲಿ ಕೊಂಡಾಡುತ್ತಾರೆ.
ಐರೋಡಿ ಗೋವಿಂದಪ್ಪನವರಿಗೆ ಗುರು ವೀರಭದ್ರ ನಾಯಕ್ ಸಂಸ್ಮರಣೆ ಪ್ರಶಸ್ತಿ
ಬಡಗು ತಿಟ್ಟಿನ ಬ್ರಹ್ಮಾವರ ವಲಯದ ಪ್ರಭಲ ಎರಡು ಶೈಲಿಗಳಲ್ಲಿ ಒಂದಾದ ಮಟ್ಪಾಡಿ ಶೈಲಿಯ ಪ್ರಾತಿನಿದಿಕ ಕಲಾವಿದ ದಶಾವತಾರಿ ವೀರಭದ್ರ ನಾಯಕರು ಜನಿಸಿ ವರ್ಷ ನೂರ ಹತ್ತು ಸಂದಿದೆ. ಕಳೆದ ವರ್ಷಗಳಲ್ಲಿ ಅವರ ಜನ್ಮಶತಮಾನೋತ್ಸವ ಅಲ್ಲಲ್ಲಿ ಅಚರಣೆ ಆಗಿದೆ. ಈ ವರ್ಷ ಅವರ ಹುಟ್ಟೂರು ಮಟಪಾಡಿ ಯಕ್ಷಗಾನ ಮಂಡಳಿಯ ಸುವರ್ಣ ಮಹೋತ್ಸವ ಆಚರಣೆ ಆಗುತ್ತಿದೆ ಈ ಸಂದರ್ಭದಲ್ಲಿ ನಾಯ್ಕರ ಸಂಸ್ಮರಣೆ ಮತ್ತು ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪನವರಿಗೆ ವೀರಭದ್ರ ನಾಯ್ಕ್ ಸಂಸ್ಮರಣಾ ಪ್ರಶಸ್ತಿ ನೀಡಲಾಗುತ್ತದೆ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಫ಼ೆಬ್ರವರಿ 27ರಂದು ಮಟಪಾಡಿಯಲ್ಲಿ ನೆರವೇರಲಿದೆ.ಈ ಸಂದರ್ಬದಲ್ಲಿ ಇದೊಂದು ಅ ಮಹಾನ್ ಕಲಾವಿದರಿಗೆ ಅರ್ಪಿಸುವ ನುಡಿ ನಮನ.
ಕಾಸರಗೋಡಿಗೆ ಯಕ್ಷಗಾನ ಮ್ಯೂಸಿಯಂ
``ನಮ್ಮ ಕಾಸರಗೋಡಿದು, ಯಕ್ಷಗಾನದ ಬೀಡಿದು...`` ಎಂಬ ಕವಿತೆಯ ಸಾಲುಗಳನ್ನು ಪ್ರಾಥಮಿಕ ತರಗತಿಗಳ ಪಠ್ಯ ಪುಸ್ತಕದಲ್ಲಿ ಅನೇಕರು ಓದಿದ್ದೇವೆ. ಈ ಪದ್ಯದ ಸಾಲುಗಳು ಪ್ರಸ್ತುತ ಮತ್ತಷ್ಟು ಸಾರ್ಥಕತೆ ಪಡೆದಿವೆ. ಯಕ್ಷಗಾನ ಕಲೆಗೆ ಪ್ರಾಧಾನ್ಯತೆ ನೀಡಿದ ಕಾಸರಗೋಡಿನಲ್ಲಿ ಇಂದಿಗೂ ಯಕ್ಷಗಾನ ಬೆಳೆಯುತ್ತಿದ್ದು, ಇದಕ್ಕೆ ಇನ್ನಷ್ಟು ಪ್ರಸಿದ್ಧಿ ನೀಡಲು ಯಕ್ಷಗಾನ ಮ್ಯೂಸಿಯಂ ಸಿದ್ಧವಾಗಿದೆ.
ಯಕ್ಷಗಾನದ `ಕೃಷ್ಣ` ಕಣ್ಣಿಮನೆ ಗಣಪತಿ ಭಟ್ ಇನ್ನಿಲ್ಲ
ಖ್ಯಾತ ಯಕ್ಷಗಾನ ಕಲಾವಿದ ಕಣ್ಣಿಮನೆ ಗಣಪತಿ ಭಟ್(47) ವಿಧಿವಶರಾಗಿದ್ದಾರೆ. ಬಹು ಅಂಗಾಗ್ಯ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ನಿಧನರಾದರು. ಅನಾರೋಗ್ಯ ಪೀಡಿತರಾಗಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಗಯಾಗದೇ ಅವರು ವಿಧಿವಶರಾದರು.
ಪುಂಡರೀಕಾಕ್ಷ ಉಪಾದ್ಯಾಯರಿಗೆ ನಿಟ್ಟೂರು ಬೋಜಪ್ಪ ಸುವರ್ಣ ಪ್ರಶಸ್ತಿ
ಉಡುಪಿಯ ಅತೀ ಹಿರಿಯ ಹವ್ಯಾಸಿ ಸಂಸ್ಥೆ 65ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಉಡುಪಿ ಗುಂಡಿಬೈಲಿನ ಯಕ್ಷಗಾನ ಕಲಾಕ್ಷೇತ್ರ ಪ್ರತಿ ವರ್ಷ ನೀಡುತ್ತಿರುವ ಸಂಸ್ಥೆಯ ಸ್ಥಾಪಕ ಸದಸ್ಯ ನಿಟ್ಟೂರು ಬೋಜಪ್ಪ ಸುವರ್ಣ ಪ್ರಶಸ್ತಿಗೆ ಈ ವರ್ಷ ಹಿರಿಯ ಸ್ತ್ರೀವೇಷಧಾರಿ ಪುಂಡರೀಕಾಕ್ಷ ಉಪಾದ್ಯಾಯರು ಭಾಜನರಾಗುತಿದ್ದಾರೆ. ಪ್ರಶಸ್ತಿ ಪ್ರದಾನ ಫೆಬ್ರವರಿ 12 ಭಾನುವಾರ ಸಂಸ್ಥೆಯ ಕಲಾಭವನದಲ್ಲಿ ನೆರವೇರಲಿದೆ. ಯಕ್ಷಲೋಕದ ಮೂರುತಿಟ್ಟುಗಳಿಗೆ ಸಮಾನ ನ್ಯಾಯ ಒದಗಿಸಿ ಸುಮಾರು ಐದು ದಶಕಗಳ ಕಾಲ ತೆಂಕು ಬಡಗುತಿಟ್ತನ್ನು ಶ್ರೀಮಂತಗೊಳಿಸಿದ ಪುಂಡರೀಕಕ್ಷ ಉಪಾದ್ಯಾಯರಿಗೆ ಬೋಜಪ್ಪ ಸುವರ್ಣ ಪ್ರಶಸ್ತಿ ಯೋಗ್ಯವಾಗಿಯೇ ಸಲ್ಲುತ್ತಿದೆ.
ಸುದ್ದಿಗಳು - 2015

ಅವಿಸ್ಮರಣೀಯ ಯಕ್ಷೋತ್ಸವ ರಜತ ಸಂಭ್ರಮ
ನಾಡಿನಾದ್ಯಂತ ಕಲಾರಸಿಕರನ್ನು ಸೆಳೆಯುತ್ತ ಬಂದಿರುವ ಸಂಪಾಜೆ ಯಕ್ಷೋತ್ಸವಕ್ಕೆ ಈ ಬಾರಿ ರಜತ ಸಂಭ್ರಮ. ಅದಕ್ಕಾಗಿಯೇ ಈ ಬಾರಿ ಹತ್ತು ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸರಣಿ ತಾಳಮದ್ದಲೆ ವರ್ಷದುದ್ದಕ್ಕೂ ಅಲ್ಲಲ್ಲಿ ನಡೆದು ರಜತೋತ್ಸವ ಸಂಭ್ರಮಕ್ಕೆ ನಾಂದಿ ಹಾಡುತ್ತಾ ಬಂತು. ರಜತ ಸಂಭ್ರಮ ಕ್ಕಾಗಿ ಮೂರು ರಂಗಸ್ಥಳದಲ್ಲಿ ಶ್ರೀದೇವಿ ಮಹಾತ್ಮೆಯನ್ನು ಆಯೋಜಿಸಿದ್ದರೆ ವಾರದ ಅನಂತರ ಯಕ್ಷೋತ್ಸವವನ್ನು ಇನ್ನಷ್ಟು ವೈಭವಯುತವಾಗಿ ನಡೆಸಲಾಯಿತು. ಪ್ರತಿಷ್ಠಾನದ ವತಿಯಿಂದ 367 ಮಂದಿಗೆ ಆರ್ಥಿಕ ನೆರವು ನೀಡಲಾಯಿತು.
ಸಾರ್ಥಕ ಅರ್ಥಗಾರಿಕೆ - ವೇಷಭೂಷಣ ಶಿಬಿರ
ಯಕ್ಷಗಾನದಲ್ಲಿ ಆಹಾರ್ಯಾಭಿನಯವು ಒಂದು ಪ್ರಮುಖ ಅಂಗ. ಆಹಾರ್ಯವು ಬಣ್ಣಗಾರಿಕೆ ಮತ್ತು ಉಡುಪು-ತೊಡುಪುಗಳನ್ನು ಒಳಗೊಂಡಿದೆ. ವೇಷಭೂಷಣವೆಂದರೆ ವೇಷ (ಮುಖವರ್ಣಿಕೆ) ಮತ್ತು ಅದಕ್ಕೆ ತಕ್ಕುದಾದ ಉಡುಗೆ - ತೊಡುಗೆಗಳು. ಯಕ್ಷಗಾನ ವೇಷಭೂಷಣಗಳು ಶೈಲಿಬದ್ಧವೂ ಆಕಾರ ಶುದ್ಧವೂ ಪ್ರಮಾಣ ಬದ್ಧವೂ ಆಗಿದ್ದು, ಆಕರ್ಷಣೀಯವಾಗಿವೆ. ಬಣ್ಣಗಾರಿಕೆಯಲ್ಲಿ ಬಳಸಲ್ಪಡುವ ವಿವಿಧ ಬಣ್ಣಗಳು, ರೇಖೆಗಳು, ನಾಮಗಳು, ಮುದ್ರೆಗಳು ಆಯಾ ಪಾತ್ರಗಳ ಶೀಲ-ಸ್ವಭಾವಗಳನ್ನು ಪ್ರತಿನಿಧಿಸುತ್ತವೆ. ಮುಖವರ್ಣಿಕೆಗೆ ಹೊಂದುವಂತೆ ಶಿರೋಭೂಷಣವೇ ಆದಿಯಾಗಿ ಆಭರಣಗಳಿರುತ್ತವೆ. ಇದಕ್ಕೊಂದು ದೀರ್ಘ‌ ಪರಂಪರೆಯೇ ಇದೆ.
ಯಕ್ಷಗಾನದಿಂದ ಪುರಾಣ ಪರಿಚಯದ ಮಹತ್ಕಾರ್ಯ: ಪೇಜಾವರ ಶ್ರೀ
ರೈತರು ಬೆಳೆದ ಫ‌ಸಲನ್ನು ನಾವು ಉಪಯೋಗಿಸುತ್ತೇವೆ. ಅನಂತರ ರೈತರನ್ನು ಮರೆತು ಬಿಡುತ್ತೇವೆ. ಅಂತೆಯೇ ಯಕ್ಷಗಾನದಿಂದ ಆನಂದ ಪಡೆಯುತ್ತೇವೆ. ಕಲಾವಿದರನ್ನು ಮರೆತು ಬಿಡುತ್ತೇವೆ. ಹೀಗಾಗಕೂಡದು. ಯಕ್ಷಗಾನ ಕಲಾವಿದರನ್ನು ಗುರುತಿಸುತ್ತಿರುವ ಯಕ್ಷಗಾನ ಕಲಾರಂಗದ ಸೇವೆ ಆದರ್ಶವಾದುದು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಯಕ್ಷಪೂರ್ಣಿಮ ಸಮಾರೋಪದ ಹೈಲೈಟ್‌: ವಿಕಾರವಲ್ಲದ ವಿಕಾಸದಲ್ಲಿ ರಂಗ ಸೊಬಗು
ಒಂದು ಕಾಲಘಟ್ಟದಲ್ಲಿ ಬಾಳಿದ ಮಹನೀಯರ ಬದುಕಿನ ಓದು ಆ ಕಾಲದ ಸಾಮಾಜಿಕ ಸ್ಥಿತಿಗೆ ದ್ಯೋತಕವಾಗು ತ್ತದೆ. ಭೂತಕಾಲದ ಮಹತ್ತುಗಳು ಭವಿಷ್ಯತ್ಕಾಲದಲ್ಲಿ ಮಹತ್ವ ಪಡೆದು ಅದು ವರ್ತಮಾನವನ್ನು ಪ್ರತಿನಿಧಿಸುತ್ತದೆ. ಕಾಸರಗೋಡು ಜಿಲ್ಲೆಯ ಕೀರ್ತಿಶೇಷ ಸಿರಿಬಾಗಿಲು ವೆಂಕಪ್ಪಯ್ಯ ಮತ್ತು ದೇಶಮಂಗಲ ಕೃಷ್ಣ ಕಾರಂತರ ಬದುಕನ್ನು ಓದುವ ಕ್ಷಣವೊಂದು ಸಮನಿಸಿತ್ತು. ಮಧೂರು ಪರಕ್ಕಿಲ ಶ್ರೀ ಮಹಾದೇವ ಸನ್ನಿಧಿಯಲ್ಲಿ ಜರಗಿದ (ಅ.24) ದಿನ ಪೂರ್ತಿ ಕಲಾಪವು ಇವರ ಸಾಧನೆ ಮತ್ತು ವ್ಯಕ್ತಿತ್ವಕ್ಕೆ ಬೆಳಕು ಹಾಯಿಸಿತ್ತು.
ಚಿಟ್ಟಾಣಿ ಸಪ್ತಾಹ ಸಮಾರೋಪ ಸಾಧಕರಿಬ್ಬರಿಗೆ ಪುರಸ್ಕಾರ
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ, ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಆಯೋಜಿಸಿರುವ ಚಿಟ್ಟಾಣಿ ಸಪ್ತಾಹ 2015ರ ಸಮಾರೋಪ ಸಮಾರಂಭದಲ್ಲಿ ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಹಾಗೂ ಹವ್ಯಾಸಿ ಕಲಾವಿದ ಬನ್ನಂಜೆ ನಾರಾಯಣರಿಗೆ ಟಿ.ವಿ. ರಾವ್‌ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಲಾಯಿತು.
ಪೈಲಾರು ಯಕ್ಷೋತ್ಸವಕ್ಕೆ ಐದು
ಸುಳ್ಯ ತಾಲೂಕಿನ ಅಮರಮುಟ್ನೂರು ಗ್ರಾಮದ ಪೈಲಾರು ಎಂಬ ಕುಗ್ರಾಮ ಯಾವ ಆಧುನಿಕ ಸಂಪರ್ಕ ವನ್ನೂ ಹೊಂದಿಲ್ಲ. ಆದರೆ ಈ ಪುಟ್ಟ ಹಳ್ಳಿ ಈಗ ಯಕ್ಷಗಾನ ಜಗತ್ತೇ ಬೆರಗಿನಿಂದ ಕಣ್ಣು-ಕಿವಿ ಅರಳಿಸಿ ನೋಡುವಂತೆ, ಅಲ್ಲಿನ ಕಲಾಸಾಧನೆಯ ಸುದ್ದಿ ಮಾತಾಡುವಂತೆ ಮಾಡು ತ್ತಿದೆ. ಇದಕ್ಕೆ ಕಾರಣ ``ಫ್ರೆಂಡ್ಸ್‌ ಕ್ಲಬ್‌`` ಎಂಬ ಹೆಸರಿನಲ್ಲಿ ಈ ಊರಿನ ಒಂದಷ್ಟು ತರುಣರು ಕೈಗೊಂಡ ಯಕ್ಷೋಪಾಸನೆ.
ಯಕ್ಷಗಾನ ಕಲೆ ಭಾರತೀಯ ಸಂಸ್ಕೃತಿಯ ವಾಹಿನಿ: ಒಡಿಯೂರುಶ್ರೀ
ಭಾರತೀಯ ಸಂಸ್ಕೃತಿಯ ವಾಹಿನಿಯಾಗಿರುವ ಯಕ್ಷಗಾನ ಸುಸಂಸ್ಕೃತ ಬದುಕಿಗೆ ದಾರಿ. ಸಂಗೀತ, ಸಾಹಿತ್ಯ ಸಂಸ್ಕೃತಿಯ ಸಮ್ಮಿಳಿತವಾಗಿರುವ ಯಕ್ಷಗಾನಕ್ಕೆ ಸರಕಾರದ ಸಹಕಾರವೂ ಹೆಚ್ಚಬೇಕು. ಸಾಧಕರನ್ನು ಮಾತ್ರವಲ್ಲದೆ ಅಶಕ್ತರಿಗೆ ನೆರವಾಗುವ, ಕಟೀಲು ಮೆಳದ ಭಾಗವತ ಪಟ್ಲ ಸತೀಶ್ ಶೆಟ್ಟಿ ನೇತತ್ವದಲ್ಲಿ ಆರಂಭಗೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಧ್ಯೇಯ ಅತ್ಯಂತ ಸ್ತುತ್ಯರ್ಹ ಎಂದು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಇದೇ ಸಂದರ್ಭ ತೆಂಕು-ಬಡಗು ತಿಟ್ಟಿನ ಹನ್ನೊಂದು ಮಂದಿ ಅಶಕ್ತ ಕಲಾವಿದರಿಗೆ ತಲಾ 50 ಸಾವಿರ ರೂ.ನ ಚೆಕ್, ಚಿನ್ನದ ಪದಕ, ಸ್ಮರಣಿಕೆ, ಶಾಲು ಸಹಿತ ನೆರವು ಹಸ್ತಾಂತರಿಸಲಾಯಿತು.
ಧರ್ಮಸ್ಥಳ ಮೇಳ: ಇನ್ನು ಕಾಲಮಿತಿ ಪ್ರದರ್ಶನ
ಎರಡು ಶತಮಾನಗಳಿಗೂ ಅಧಿಕ ಇತಿಹಾಸವಿರುವ ತೆಂಕುತಿಟ್ಟಿನ ಪ್ರತಿಷ್ಠಿತ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ ಮುಂದಿನ ತಿರುಗಾಟದಿಂದ ಕಾಲಮಿತಿಯ ಯಕ್ಷಗಾನ ಪ್ರದರ್ಶನಕ್ಕೆ ಸಜ್ಜಾಗಿದೆ. ಮೂರು ವರ್ಷಗಳ ಕಾಲ ಚಿಂತನ-ಮಂಥನ, ಸರ್ವರ ಅಭಿಪ್ರಾಯ ಸಂಗ್ರಹ ಮತ್ತು ಈಗಾಗಲೇ ಕೆಲವು ಮೇಳಗಳ ಯಶಸ್ವಿ ಪ್ರಯೋಗವನ್ನು ಗಮನದಲ್ಲಿಟ್ಟುಕೊಂಡು ಧರ್ಮಸ್ಥಳ ಮೇಳವನ್ನು ಕಾಲಮಿತಿ ಪ್ರಯೋಗಕ್ಕೆ ಒಳಪಡಿಸಲಾಗುತ್ತಿದೆ ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.
``ತ್ರಿಶ೦ಕು ಸ್ವರ್ಗ`` ತಾಳಮದ್ದಳೆ ವೀಡಿಯೊ ಲೋಕಾರ್ಪಣೆ
ತ್ರಿಶ೦ಕು ಸ್ವರ್ಗ ಕಥೆಯು ಈಗಲೂ ಕುತೂಹಲಗಳನ್ನು ಉಳಿಸಿಕೊ೦ಡ ಪೌರಾಣಿಕ ಆಸಕ್ತಿದಾಯಕ ಕಥಾನಕ. ವಿನೂತನ ಚಿ೦ತನೆಯಲ್ಲಿ ಮೂಡಿಬ೦ದ ಈ ಯಕ್ಷಗಾನ ಪ್ರಸ೦ಗವನ್ನು ಮರು ಸೃಷ್ಟಿಸಿದವರು ಬೆ೦ಗಳೂರಿನ ಪ್ರಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀ.ಪಿ.ಎಸ್.ಆಚಾರ್ ಪಣಕಜೆಯವರು. ಹಲವು ವರ್ಷಗಳ ಹಿ೦ದೆಯೇ ಸ೦ಸ್ಕೃತದ ಮಧ್ಯಮ ವ್ಲಾಯೋಗದ ಅಧಾರದಿ೦ದ ರಚಿತವಾದ “ಭಕ್ತೆ ಹಿಡಿ೦ಬೆ“ (ಭೀಮ ಘಟೋದ್ಕಜ ಕಾಳಗ) ತಾಳಮದ್ದಳೆ ವೀಡಿಯೊವು ಜನಪ್ರಿಯಗೊ೦ಡಿದ್ದು, ಈಗ ತ್ರಿಶ೦ಕು ಸ್ವರ್ಗದ ೪ ಗ೦ಟೆಗಳ ದೃಶ್ಯ-ಶ್ರವಣ ರೂಪದ ತಾಳಮದ್ದಳೆ ವೀಡಿಯೊವು ಲೋಕಾರ್ಪಣೆಗೊಳ್ಳಲಿದೆ.
ಯಕ್ಷಸಾಧಕರಿಗೆ ಸಮ್ಮಾನ
ಮೂಡುಬಿದಿರೆಯ ಯಕ್ಷಸಂಗಮ ಕಳೆದ 15 ವರ್ಷಗಳಿಂದ ಪ್ರತಿವರ್ಷ ಇಬ್ಬರು ಯಕ್ಷಗಾನ ಕಲಾವಿದರನ್ನು ಸಮ್ಮಾನಿಸುತ್ತ ಬಂದಿದೆ. 16ನೇ ವರ್ಷದ ಈ ಸಾಲಿನ ಕಾರ್ಯಕ್ರಮ ಜು.25, 2015ರಂದು ರಾತ್ರಿ 9.00ಕ್ಕೆ ನಡೆಯಲಿದ್ದು , ಸುಪ್ರಸಿದ್ಧ ಅಗರಿ ರಘುರಾಮ ಭಾಗವತರು ಹಾಗೂ ಹಿರಿಯ ಬಣ್ಣದ ವೇಷಧಾರಿ ದಾಸನಡ್ಕ ರಾಮ ಕುಲಾಲ್‌ ಇವರನ್ನು ಸಮ್ಮಾನಿಸಲಿದೆ.
ಉಜಿರೆ ಮಹಿಳಾ ಯಕ್ಷಗಾನ ಸಪ್ತಾಹ: ಸ್ಪರ್ಧೆಗೂ ಮಿಗಿಲೆನಿಸಿತು ಪ್ರದರ್ಶನ
ನಲುವತ್ತು ವರ್ಷಗಳ ಮಹಿಳಾ ಯಕ್ಷಗಾನದ ಇತಿಹಾಸದಲ್ಲಿ ದಾಖಲಾರ್ಹ ಪ್ರದರ್ಶನವಾದದ್ದು ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ನೇತೃತ್ವದಲ್ಲಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಮೇ 18ರಿಂದ 24ರ ತನಕ ಮಹಿಳಾ ಯಕ್ಷಗಾನ ಬಯಲಾಟ ಸಪ್ತಾಹ. ಉಜಿರೆಯ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ನಡೆದ ಇದು ಐತಿಹಾಸಿಕ ಮಹಿಳಾ ಯಕ್ಷಗಾನ ಸಮಾವೇಶವಾಗಿತ್ತು.
ಯಕ್ಷದೇಗುಲದ ಯಕ್ಷಗಾನ ಉತ್ಸವ ಮತ್ತು ಯಕ್ಷದೇಗುಲ ಸನ್ಮಾನ
ಭಿನ್ನ ವಿಚಾರಧಾರೆಯನ್ನು ಹೊಂದಿರುವ ಯಕ್ಷದೇಗುಲದ ಮೋಹನ್ ರು ನೇರವಾದ ದಿಟ್ಟವಾಗಿ ಮಾರ್ಗದರ್ಶನ ಮಾಡುವಲ್ಲಿ, ಅಲ್ಲದೇ ಕಲೆಯ ಉತ್ಕರ್ಷವನ್ನು ತೋರಿಸುವಲ್ಲಿ ಮೆರೆದವರು. ಕಳೆದ 34 ವರ್ಷದಿಂದ ತಂಡದೊಂದಿಗೆ, ಕಲಾವಿದರನ್ನು, ಕಲೆಯನ್ನು ಬೆಳೆಸಿದ್ದಾರೆ. ಹಾಗೆ ಇಂದು ಯಕ್ಷದೇಗುಲ ಸನ್ಮಾನ ಸ್ವೀಕರಿಸುತ್ತಿರುವ ಮಾಧವ ನಾಯ್ಕರು ಯಕ್ಷಗಾನ ಕ್ಷೇತ್ರದಲ್ಲಿ ಶಿಸ್ತಿಗೊಳಗಾಗಿ ವಿನಯಶೀಲತೆಯಿಂದ ವ್ಯವಹರಿಸಿದವರು.
ಯಕ್ಷ ವೇದಿಕೆಯಲ್ಲಿ ಜೀವ ಪಡೆದ `ಜಗಜಟ್ಟಿ ಬಾಚ`
ಬ್ರಾಹ್ಮಣ ಕುಲದಲ್ಲಿ ಹುಟ್ಟಿ, ಜಟ್ಟಿಕಾಳಗದಲ್ಲಿ ಪರಿಣತಿ ಸಾಧಿಸಿ ಸಾಹಸಗಳ ಮೂಲಕ ತುಳು ನಾಡಿನ ಅಭಿಮಾನ ಮೂರ್ತಿಯಾಗಿ ಬೆಳೆದ ಪುಳ್ಕೂರು ಬಾಚನ ಕಥೆ ಯಕ್ಷಗಾನ ವಾಗಿ ಪ್ರಸ್ತುತಿಗೊಂಡು ಜನಮನ್ನಣೆ ಪಡೆದಿದೆ. ಪೌರಾಣಿಕ-ಕಾಲ್ಪನಿಕ ವಸ್ತುಗಳನ್ನು ಯಕ್ಷಗಾನದ ನಾಲ್ಕು ಕಂಬಗಳ ನಡುವೆ ಪ್ರದರ್ಶಿಸಬಹುದು. ಆದರೆ ಬಾಚ ಇಂದಿಗೆ ಮೂರು ತಲೆಮಾರುಗಳ ಹಿಂದೆ ಜೀವಿಸಿದ್ದವನು. ಇಂಥ ವ್ಯಕ್ತಿಯೊಬ್ಬನ ಜೀವನಗಾಥೆಯನ್ನು ಯಕ್ಷಗಾನವಾಗಿ ಪ್ರದರ್ಶಿಸು ವುದು ಅಷ್ಟು ಸುಲಭವಲ್ಲ.
ಯಕ್ಷದೇಗುಲ-2014 ಪ್ರಶಸ್ತಿಗೆ ಪೇತ್ರಿ ಮಾಧವ ನಾಯ್ಕರು ಆಯ್ಕೆ
ಕಳೆದ 34 ವರ್ಷದಿಂದ ಸದಾ ಚಟುವಟಿಕೆಯಿಂದಿರುವ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಶ್ರೀ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ, ನಾಗರಾಜ್ ಪ್ರಶಸ್ತಿ ಹೀಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿ ವಿಜೇತ ಬೆಂಗಳೂರಿನ ಯಕ್ಷದೇಗುಲ ತಂಡದ “ಯಕ್ಷದೇಗುಲ ಸನ್ಮಾನ-2014 ರ ಸನ್ಮಾನಕ್ಕೆ ಅಭಿಜಾತ ಯಕ್ಷಗಾನ ಕಲಾವಿದ ಪೇತ್ರಿ ಮಾಧವ ನಾಯ್ಕರು ಆಯ್ಕೆ ಆಗಿದ್ದಾರೆ.
ನಂದಿದ ಯಕ್ಷರಂಗದ ಜ್ವಾಲೆ, ಮೋಹಕ ಸ್ತ್ರೀ ವೇಷಧಾರಿ ಅರಾಟೆ ಮಂಜುನಾಥ ವಿಧಿವಶ
ತನ್ನ ಜೀವಿತದಲ್ಲಿ ದೀರ್ಘಕಾಲ ಸಾಲಿಗ್ರಾಮ ಮೇಳವೊಂದರಲ್ಲೆ ಸೇವೆ ಸಲ್ಲಿಸಿ ಸುಮಾರು ಎಪ್ಪತ್ತು ಎಂಬತ್ತರ ದಶಕದಲ್ಲಿ ಇಂದಿಗೂ ಚಿರನೂತನವಾದ ಪದ್ಮಪಾಲಿ, ನಾಗಶ್ರೀ, ಕಾಂಚನಶ್ರೀ, ಶ್ರೀದೇವಿ ಬನಶಂಕರಿ, ರತಿರೇಖಾ, ಚೆಲುವೆ ಚಿತ್ರಾವತಿ, ಚೈತ್ರ ಪಲ್ಲವಿ, ವಸಂತಸೇನೆ ಮುಂತಾದ ಸಾಮಾಜಿಕ ಪ್ರಸಂಗಗಳಿಗೆ ಅನಿವಾರ್ಯ ಸ್ತ್ರೀ ವೇಷಧಾರಿಯಾಗಿದ್ದ ಮೋಹಕ ನಟ ಅರಾಟೆ ಮಂಜುನಾಥ ನಾಯ್ಕರು ಇನ್ನಿಲ್ಲ. ಬಡಗುತಿಟ್ಟು ಯಕ್ಷಗಾನದ ಸ್ತ್ರೀವೇಷಧಾರಿಗಳಲ್ಲಿ ಅಗ್ರ ಪಂಕ್ತಿಯ ಹೆಸರು ಅರಾಟೆ ಮಂಜುನಾಥನವರದ್ದು. ಯಕ್ಷಗಾನದ ಇತಿಹಾಸದಲ್ಲಿ ಕಲಾವಿದನೊಬ್ಬ ಅದರಲ್ಲೂ ಸ್ತ್ರೀಪಾತ್ರದಾರಿಯೊಬ್ಬರು ಬಹು ಪ್ರಸಿದ್ದಿ ಪಡೆದು ಸಮಾಜದಲ್ಲಿ ಕಲಾವಿದರ ಗಡಣದಲ್ಲಿ ರಾಜಕೀಯ ರಂಗದಲ್ಲೂ ವಿಶಿಷ್ಟ ವ್ಯಕಿತ್ವದಿಂದ ಮೇರುಪಂಕ್ತಿಯಲ್ಲಿ ಗುರುತಿಸಿಕೊಂಡಿದ್ದು ‌ಅಪರೂಪದ ಸಾಧನೆ.
ಕಳಚಿದ ನಡುತಿಟ್ಟಿನ ಸಾಂಪ್ರದಾಯದ ಕೊಂಡಿ, ಮೊಳಹಳ್ಳಿ ಹಿರಿಯ ನಾಯ್ಕ ಇನ್ನಿಲ್ಲ
ಸುಮಾರು ಅರುವತ್ತರ ದಶಕದಲ್ಲಿ ಬಡಗುತಿಟ್ಟಿನ ಬಯಲಾಟ ರಂಗಸ್ಥಳವನ್ನು ಆಳಿದ ಹಾರಾಡಿ-ಮಟ್ಪಾಡಿತಿಟ್ಟುಗಳ ಪ್ರಾತಿನಿಧಿಕ ಕಲಾವಿದ ಸುಮಾರು 60 ವರ್ಷ ಕಲಾಸೇವೆ ಮಾಡಿದ ಕಲಾವಿದ ಮೊಳಹಳ್ಳಿ ಹಿರಿಯ ನಾಯ್ಕರು ಇನ್ನಿಲ್ಲ. ಶರಣರ ಬದುಕನ್ನು ಮರಣದಲ್ಲಿ ನೋಡು ಎನ್ನುವ ಹಾಗೆ ಬಹಳ ಸುಖದ ಸಾವು ಅವರದ್ದು. 60ರ ದಶಕದಲ್ಲಿ ಬಡಗುತಿಟ್ಟು ಯಕ್ಷಗಾನದ ರಂಗಸ್ಥಳದ ರಾಜನೆಂದೇ ಖ್ಯಾತಿ ಹೊಂದಿದ್ದ ಹಿರಿಯ ಪುರುಷ ವೇಷಧಾರಿ ಮೊಳಹಳ್ಳಿ ಹಿರಿಯ ನಾಯ್ಕರು ವಯೋಸಹಜ ಅಸೌಖ್ಯದಿಂದ ನಿಧನರಾಗಿದ್ದಾರೆ.
ಶೃಂಗೇರಿಯಲ್ಲಿ ಮಯ್ಯ ``ಮಲೆನಾಡು ರಾಷ್ಟ್ರೀಯ ಉತ್ಸವ``
ಮಯ್ಯ ಸಂಸ್ಥೆ ಪ್ರಾಯೋಜಕತ್ವದ ``ಮಲೆನಾಡು ರಾಷ್ಟ್ರೀಯ ಉತ್ಸವ `` ಜನವರಿ 14 ರಿಂದ 19, 2015ರ ತನಕ ಶೃಂಗೇರಿಯಲ್ಲಿ ನಡೆಯಲಿದೆ. ಜ.14ರಿಂದ ಪ್ರತಿದಿನ ಸಂಜೆ 5.30 ರಿಂದ ರಾತ್ರಿ 10.00 ರ ತನಕ ಸಂಗೀತ, ನಾಟ್ಯ, ಯಕ್ಷಗಾನ, ನಾಟಕ, ಪ್ರಶಸ್ತಿ ಪ್ರದಾನಗಳ ಸಂಗಮ ಕಾಣಬಹುದು.ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಖ್ಯಾತಿಯ ಪ್ರಸಿದ್ಧ ಕಲಾವಿದರ ಸಮ್ಮಿಲನವಾಗಲಿದೆ.
ಕಟೀಲಿನಲ್ಲಿ ಯಕ್ಷಗಾನ ಮೂರು ದಿನಗಳ ಬಯಲಾಟ ಸಂಭ್ರಮ
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಆಶ್ರಯದಲ್ಲಿ ಜನವರಿ 9ರಿಂದ 11ರತನಕ ಕಟೀಲಿನಲ್ಲಿ ಯಕ್ಷಗಾನ ಬಯಲಾಟ ಸಂಭ್ರಮ ನಡೆಯಲಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ ನಡೆಯುವ ಮಕ್ಕಳ ಯಕ್ಷಗಾನ, ಮಹಿಳಾ ಯಕ್ಷಗಾನ, ಹವ್ಯಾಸಿ ಯಕ್ಷಗಾನದ ಪರಿಕಲ್ಪನೆಯ ಈ ಯಕ್ಷಗಾನ ಬಯಲಾಟ ಸಂಭ್ರಮದಲ್ಲಿ ಮಕ್ಕಳ, ಹವ್ಯಾಸಿ, ಮಹಿಳಾ ಯಕ್ಷಗಾನ ಬಗ್ಗೆ ವಿಚಾರಗೋಷ್ಟಿ, ತೆಂಕು ಬಡಗು ಮೂಡಲಪಾಯ ಯಕ್ಷಗಾನ, ಸಣ್ಣಾಟ, ಬೊಂಬೆಯಾಟ, ಸಂಗ್ಯಾಬಾಳ್ಯ ಪ್ರದರ್ಶನ, ಐವತ್ತಕ್ಕೂ ಹೆಚ್ಚು ವಿದ್ವಾಂಸರ ಉಪಸ್ಥಿತಿಯಲ್ಲಿ 6 ವಿಚಾರ ಗೋಷ್ಟಿಗಳು ಆಯೋಜಿಸಲಾಗಿದೆ.
ಸುದ್ದಿಗಳು - 2014

ಯಕ್ಷಾಂಗಣ ಟ್ರಸ್ಟ್, ಬೆಂಗಳೂರು - ಯಕ್ಷಗಾನ ಉತ್ಸವ ಮತ್ತು ಸನ್ಮಾನ
ಕಳೆದ ಹದಿನಾಲ್ಕು ವರ್ಷಗಳಿಂದ ಯಕ್ಷಗಾನ ಕಲೆಯ ಕುರಿತಾಗಿ ಗಮನಾರ್ಹ ಕೆಲಸ ನಡೆಸಿಕೊಂಡು ಬಂದಿರುವ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್‌ನವರು ಡಿಸೆಂಬರ್ 11 ರಿಂದ 13 ರ ತನಕ ಉಡುಪಿ ಜಿಲ್ಲೆಯಲ್ಲಿ ಯಕ್ಷಗಾನ ಉತ್ಸವ ನಡೆಸಲಿದೆ. ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು ಐದು ದಶಕಗಳ ಕಾಲ ಕಲಾವಿದರಾಗಿ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರಾದ ಶ್ರೀ ಮೊಳಹಳ್ಳಿ ಹೆರಿಯ ನಾಯ್ಕರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಚೆಂಡೆಯ ವಾದನದಲ್ಲಿ ಅದ್ವಿತೀಯತೆ ತೋರಿ, ಯಕ್ಷಕಲೆಯ ಮಿನುಗುತಾರೆಯಾಗಿ ಕಾಣಿಸಿಕೊಂಡ ಶ್ರೀ ಮಂದಾರ್ತಿ ರಾಮರವರಿಗೆ ಯಕ್ಷಾಂಗಣ ಟ್ರಸ್ಟ್‌ನ “ಯಕ್ಷಸನ್ಮಾನ-2014 ರ ಸನ್ಮಾನದೊಂದಿಗೆ ಪ್ರಶಸ್ತಿ ಪತ್ರ ಮತ್ತು 10,000/-ರೂ ನೀಡಲಿದ್ದಾರೆ.
ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟರಿಗೆ ಪ್ರತಿಷ್ಟಿತ ಕರ್ನಾಟಕ ಸರ್ಕಾರದ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ
ಯಕ್ಷಗಾನ ವಿಮರ್ಶಕ, ಹವ್ಯಾಸಿ ಭಾಗವತ, ನಿರ್ದೇಶಕ ವಿವಿದ ಪತ್ರಿಕೆಗಳ ಅಂಕಣಗಾರ ಮಣಿಪಾಲದ ಪ್ರತಿಷ್ಟಿತ ಎಂ. ಐ. ಟಿ. ಯಲ್ಲಿ ಮೆಕ್ಯಾನಿಕಲ್ ಇಂಜಿನೀಯರಿಂಗ್ ವಿಭಾಗದಲ್ಲಿ ಕಳೆದ 26 ವರ್ಷಗಳಿಂದ ಪ್ರಾಧ್ಯಾಪಕರಾಗಿರುವ ಎಂ. ಟೆಕ್. ಪದವೀಧರ ಪ್ರೊ. ಎಸ್. ವಿ. ಉದಯಕುಮಾರ ಶೆಟ್ಟರಿಗೆ ಈ ಸಾಲಿನ ಪ್ರತಿಷ್ಟಿತ ಕರ್ನಾಟಕ ಸರ್ಕಾರದ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ ಲಭಿಸಿದೆ. ಪತ್ರಿಕೆಗಳಲ್ಲಿ ನೂರಾರು ಯಕ್ಷಗಾನ ಕಲಾವಿದರನ್ನು ಪರಿಚಯಿಸಿದ ಕೀರ್ತಿಗೆ ಭಾಜನರಾದ ಇವರ ಹಲವಾರು ವಿಮರ್ಶಾ ಬರಹಗಳು ವಿವಿಧ ಸ್ಮರಣ ಸಂಚಿಕೆಯ ಪುಟಗಳನ್ನು ಅಲಂಕರಿಸಿವೆ.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಪ್ರಶಸ್ತಿ ಪ್ರಕಟ
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು 2012, 2013, 2014ನೇ ಸಾಲಿನ `ಪಾರ್ತಿಸುಬ್ಬ` ಪ್ರಶಸ್ತಿಗೆ ಮತ್ತು 2013, 2014ರ ವಾರ್ಷಿಕ ಗೌರವ ಪ್ರಶಸ್ತಿಗೆ 19 ಕಲಾವಿದರು ಹಾಗೂ ಒಂದು ಸಂಸ್ಥೆಯನ್ನು ಆಯ್ಕೆ ಮಾಡಿದೆ. ಮಂಗಳೂರಿನ ಯಕ್ಷಗಾನ ಕಲಾವಿದ ಡಾ. ಶಿಮಂತೂರು ನಾರಾಯಣ ಶೆಟ್ಟಿ (2012), ಬೆಂಗಳೂರಿನ ಸೂತ್ರದ ಸಲಾಕೆಗೊಂಬೆ ಕಲಾವಿದ ಎಂ.ಆರ್.ರಂಗನಾಥ ರಾವ್ (2013) ಮತ್ತು ಮೈಸೂರಿನ ಯಕ್ಷಗಾನ ಸಾಹಿತಿ ಜಿ.ಎಸ್.ಭಟ್ (2014) ಅವರನ್ನು ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಯಕ್ಷಗಾನ ಯಾನ: ಇದು ವೃತ್ತಿ ಮೇಳಗಳ ಜೈತ್ರಯಾತ್ರೆ
ಕಾರ್ತಿಕ ಮಾಸದ ಚುಮುಚುಮು ಚಳಿಯಲ್ಲಿ ಶುರುವಾಗುವ ಇವರ ಆಟ-ತಿರುಗಾಟ ಕೊನೆಗೊಳ್ಳುವುದು ಮುಂಗಾರು ಮಳೆಯ ಹನಿಗಳ ಸಿಂಚನವಾಗುವ ಕೆಲವೇ ದಿನಗಳ ಹಿಂದೆ. ಮನೆ, ಹೆಂಡತಿ ಮಕ್ಕಳನ್ನು ಬಿಟ್ಟು ಜೀವನದ ಬಂಡಿ ಸಾಗಿಸುವ ಸಲುವಾಗಿ ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನ ಆಖ್ಯಾನಗಳನ್ನು ಪ್ರದರ್ಶಿಸುವ ಸಮಯ. ಕಲಾವಿದರಿಗೆ ಇಲ್ಲಿ ಒಂದಷ್ಟು ದಿನಗೂಲಿ ಸಿಗುವುದರ ಜತೆಗೆ ತಾವೊಬ್ಬ ಕಲಾವಿದನೆಂದು ಜನ ಗುರುತಿಸುತ್ತಾರೆಂಬ ಖುಷಿ. ಯಕ್ಷಗಾನದ ಮೂಲಕ ಕಲಾಸೇವೆ ಮಾಡುತ್ತೇವೆನ್ನುವ ಸಾರ್ಥಕ್ಯ.
ಯಕ್ಷಗಾನ ಅಪ್ಪಟ ಸ್ವದೇಶಿ; ನಾಟಕಕ್ಕೆ ಪಾಶ್ಚಾತ್ಯ ಸ್ಪರ್ಶ
ಯಕ್ಷಗಾನ ಸಂಪೂರ್ಣ ಸ್ವದೇಶಿ. ಅಂತೆಯೇ ಯಕ್ಷಗಾನದ ಪಾತ್ರಗಳು ಕೂಡ ಅಪ್ಪಟ ಸ್ವದೇಶಿ. ಆದರೆ ರಂಗಭೂಮಿಯಲ್ಲಿ ಪಾಶ್ಚಾತ್ಯ ಸ್ಪರ್ಶ, ಪ್ರಭಾವ ಇದೆ ಎಂದು ಹಿರಿಯ ಕಲಾವಿದ, ಪ್ರಸಾಧನ ತಜ್ಞ ಪುರುಷೋತ್ತಮ ತಳ್‌ವಾಟ ಹೇಳಿದರು. ಅವರು ನ.16ರಂದು ಯಕ್ಷಗಾನ ಕಲಾರಂಗವು ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಕಾಣಿಯೂರು ಮಠ, ಯಕ್ಷಗಾನ ಅಕಾಡೆಮಿ ಹಾಗೂ ಉಡುಪಿ ಪ್ರಸ್‌ ಫೋಟೋಗ್ರಾಫ‌ರ್ ಅಸೋಸಿಯೇಷನ್‌ (ಉಪ್ಪಾ) ಸಹಯೋಗದಲ್ಲಿ ರಾಜಾಂಗಣದಲ್ಲಿ ಆಯೋಜಿಸಿದ್ದ ಯಕ್ಷಗಾನದ ದೈತ್ಯಪ್ರತಿಭೆ ಬಣ್ಣದ ಮಾಲಿಂಗ ಶತಮಾನ ಸ್ಮರಣಾರ್ಥ ಬಣ್ಣದ ಬಿನ್ನಾಣ-ತೆಂಕುತಿಟ್ಟಿನ ಬಣ್ಣದ ವೇಷಧಾರಿಗಳ ಸಮ್ಮಿಲನದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಕ್ಷಗಾನ ಕಲಾರಂಗ : ಯಕ್ಷ ಸನ್ಮಾನ
ಯಕ್ಷಗಾನ ಲೋಕದ ಪ್ರತಿಷ್ಠಿತ ಸಂಸ್ಥೆಯೊಂದರ ಕಾರ್ಯಕ್ರಮ ಆದಿತ್ಯವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಹಾಗಾಗಿ ಅದನ್ನು ಕಾಣುವ ಒಂದು ಅವಕಾಶವೂ ಒದಗಿಬಂತು. ಯಕ್ಷಗಾನ ಕಲಾರಂಗ ಉಡುಪಿ, ಯಕ್ಷಗಾನದ ಒಂದು ಪ್ರತಿಷ್ಠಿತ ಸಂಸ್ಥೆ. ಹಾಗಾಗಿ ಅದರ ಕಾರ್ಯಕ್ರಮಗಳು ಸಹಜವಾಗಿ ಬಹಳ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ನಲ್ವತ್ತರ ಪ್ರಬುದ್ಧ ವಯಸ್ಸಿನ ಒಂದು ಸಂಸ್ಥೆಯ ಸಂಭ್ರಮದ ಕಾರ್ಯಕ್ರಮ. ಸಂಭ್ರಮದ ಸ್ಮರಣೆಯಲ್ಲಿ ಯಕ್ಷಗಾನ ರಂಗದ ಬಹುಮಾನ್ಯ ಹಿರಿಯ ಕಲಾವಿದರಿಗೆ ಸನ್ಮಾನ. ಪ್ರತಿಯೊಬ್ಬ ಯಕ್ಷಗಾನ ಅಭಿಮಾನಿಯೂ ಅಭಿಮಾನ ಪಟ್ಟುಕೊಳ್ಳಬೇಕಾದ ಒಂದು ಕಾರ್ಯಕ್ರಮ.
ಕಣ್ಮನ ತಣಿಸಿದ ನಾಡ ಚಾವಡಿ ಬಳಗದ ಕುಶಲವ ಯಕ್ಷಗಾನ ಪ್ರದರ್ಶನ
-
ಯಕ್ಷಾಂಗಣ: ಯಕ್ಷರ ಚೆನ್ನನ ಸ್ಮತಿ
ಯಕ್ಷಗಾನ ರಂಗದಲ್ಲಿ ಕೀರ್ತಿಶೇಷ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರದು ವಿಶಿಷ್ಟ ವ್ಯಕ್ತಿತ್ವ. ಯಾರ ಜಾಡನ್ನೂ ಹಿಡಿಯದೆ ಭಿನ್ನ ಶೈಲಿಯಲ್ಲಿ ಹಂತಹಂತವಾಗಿ ಜನಾಕರ್ಷಣೆಯನ್ನು ಹೆಚ್ಚಿಸಿ ಕೊಂಡಿದ್ದ ಅವರು ಇನ್ನೂ ಹತ್ತಿಪ್ಪತ್ತು ವರ್ಷ ಈ ಕ್ಷೇತ್ರದಲ್ಲಿ ತಾರಾವರ್ಚಸ್ಸಿನಿಂದ ಮೆರೆಯಬಲ್ಲವರಾಗಿದ್ದರು. ಆದರೆ ಯಕ್ಷ ಕಲಾರಸಿಕರಿಗೆ ಆ ಯೋಗವಿಲ್ಲ. ಚೆನ್ನಪ್ಪ ಶೆಟ್ಟರು ರಂಗ ದಿಂದ ಮಾತ್ರವಲ್ಲ, ಇಹದಿಂದಲೇ ದೂರ ಸರಿದರು.
ಯಕ್ಷಪ್ರಯೋಗಕ್ಕೆ 17ರ ಹರೆಯ
-
ಯಕ್ಷಗಾನ ಕಲಾರಂಗ ನಲುವತ್ತರ ಅಭಿಮಾನದ ಪ್ರಶಸ್ತಿ ಪುರಸ್ಕೃತರು
ಸದಭಿರುಚಿಯ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸುವ ಉದ್ದೇಶದ ಸಮಾನಾಸಕ್ತರ ಒಕ್ಕೂಟವಾಗಿ 1975ರಲ್ಲಿ ಆರಂಭಗೊಂಡು ನಾಲ್ಕು ದಶಮಾನಗಳನ್ನು ಹಾದು ಬಂದಿರುವ ಯಕ್ಷಗಾನ ಕಲಾರಂಗ ಈಗ ತನ್ನ ಕಾರ್ಯಕ್ಷೇತ್ರವನ್ನು ದಶದಿಕ್ಕುಗಳಲ್ಲಿ ವಿಸ್ತರಿಸಿಕೊಂಡಿದೆ. ಯಕ್ಷಗಾನ ಪ್ರದರ್ಶನಗಳ ಆಯೋಜನೆಯಷ್ಟೇ ಅಲ್ಲದೆ, ಯಕ್ಷಗಾನ ಕಲೆ - ಕಲಾವಿದರ ಕ್ಷೇಮ ಚಿಂತನೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯುದಯಕ್ಕೆ ವಿದ್ಯಾಪೋಷಕ್‌ - ಹೀಗೆ ವಿಶಾಲ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದೆ. ನಲುವತ್ತು ವರ್ಷಗಳನ್ನು ಪೂರೈಸಿದ ಸಂಭ್ರಮದ ಸಮಾರಂಭ ಜತೆಗೆ ಪ್ರತಿವರ್ಷದಂತೆ ಕಲಾಸಂಸ್ಥೆಗೆ, ಕಲಾವಿದರಿಗೆ ನೀಡುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮತ್ತು ಕಾಲಮಿತಿಯ ಎರಡು ಯಕ್ಷಗಾನ ಆಖ್ಯಾನಗಳ ಪ್ರದರ್ಶನ ನವೆಂಬರ್‌ 9ರಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8.30ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ದಶಕದ ಮಿರುಗಿನಲ್ಲಿ ಎಡನೀರು ಮೇಳ
ಕಾಸರಗೋಡು ಜಿಲ್ಲೆಯ ಎಡನೀರು ಶ್ರೀಮಠವು ಕಲಾರಾಧನೆಯ ಕ್ಷೇತ್ರ. ಇಲ್ಲಿ ಸದಾ ಸಂಗೀತ, ನೃತ್ಯ, ಯಕ್ಷಗಾನ ಸುಧೆಯ ಅಮೃತಪಾನ. ದಕ್ಷಿಣಾಮೂರ್ತಿ ಶ್ರೀ ಗೋಪಾಲಕೃಷ್ಣ ದೇವರ ಸಾನ್ನಿಧ್ಯ. ಈತ ಕಲಾಪ್ರಿಯ. ಇಲ್ಲಿನ ಗುರುಗಳಾದ ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರಿಗೆ ಯಕ್ಷಗಾನ ಆರಾಧನೆ. ಇದೇ ಉಸಿರು. ಇದು ಸದಾ ಹಸಿರು. ಯಕ್ಷಗಾನದ ಉದ್ಧಾಮರ ವಾಗ್ಝರಿಯಲ್ಲಿ ಮಿಂದ ತಾಣವಿದು ನಡೆಯುತ್ತಿದ್ದ ತಾಳಮದ್ದಳೆಗಳೆಲ್ಲಾ ವಿದ್ವತ್ಗೋಷ್ಠಿಯ ತರಹ. ಪೌರಾಣಿಕ ವಿಚಾರಗಳ ಸೂಕ್ಷ್ಮಾತಿಸೂಕ್ಷ್ಮಗಳ ಮಥನ. ಇದರಿಂದ ತೆಗೆದ ನವನೀತವನ್ನುಣಿಸಿದ ಕಲಾವಿದರ ಗಾಥೆಗಳನ್ನು ಸ್ವಾಮೀಜಿಯವರು ಹೇಳತೊಡಗಿಸಿದರೆ ಒಂದು ಕಾಲಘಟ್ಟದ ಯಕ್ಷ ಸಮೃದ್ಧತೆ ಅನಾವರಣಗೊಳ್ಳುತ್ತದೆ.
ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯರವರಿಗೆ ಸೀತಾನದಿ ಪ್ರಶಸ್ತಿ
ಯಕ್ಷಗಾನ ರಂಗದ ಪ್ರಸಿದ್ದ ಪ್ರಸಂಗಕರ್ತ ತಾಳಮದ್ದಳೆ ಅರ್ಥದಾರಿ. ವಾಗ್ಮಿ, ಸಾಹಿತಿ ಆದರ್ಶ ಅದ್ಯಾಪಕನಾಗಿ ಖ್ಯಾತಿವೆತ್ತ ದಿ. ಸೀತಾನದಿ ಗಣಪಯ್ಯ ಶೆಟ್ಟರ 27ನೇ ವರ್ಷದ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಅಕ್ಟೋಬರ್ 12 ಭಾನುವಾರದಂದು ಗಣ್ಯರ ಉಪಸ್ಥಿತಿಯಲ್ಲಿ ನೆರವೇರಲಿದೆ. ಈ ಸಾಲಿನ ಸೀತಾನದಿ ಪ್ರಶಸ್ತಿಗೆ ಬಾಜನರಾಗುವವರು ತೆಂಕುತಿಟ್ಟಿನ ಗಾನಕೋಗಿಲೆ ಬಿರುದಾಂಕಿತ ಪ್ರಸಿದ್ದ ಭಾಗವತರಾದ ದಿನೇಶ ಅಮ್ಮಣ್ಣಾಯರು. ತೆಂಕುತಿಟ್ಟು ಯಕ್ಷಾಗಾನದ ಸಮಕಾಲೀನ ಅಗ್ರಪಂಕ್ತಿಯ ಭಾಗವತರಲ್ಲಿ ದಿನೇಶ ಅಮ್ಮಣ್ಣಾಯರು ಒಬ್ಬರು. ಆದುನಿಕ ಹಿಮ್ಮೇಳಪ್ರೀಯರಿಂದ ಗಾನಕೋಗಿಲೆ, ಮದುರ ಗಾನದ ಸಿರಿ, ಯಕ್ಷ ಸಂಗೀತ ಕೌಸ್ತುಭ ಮುಂತಾದ ಬಿರುದನ್ನು ಪಡೆದ ಇವರು ಬಹುಬೇಡಿಕೆಯ ಭಾಗವತರು.
ನೆಬ್ಬೂರರಿಗೆ 2014ರ ``ಕಾಳಿಂಗ ನಾವಡ ಪ್ರಶಸ್ತಿ``
ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆ ಹನುಮಂತನಗರದ ಕೆ.ಹೆಚ್. ಕಲಾಸೌಧದಲ್ಲಿ-೨೦೧೪ರ ಸಾಲಿನ “ಕಾಳಿಂಗ ನಾವಡ ಪ್ರಶಸ್ತಿ” ಯನ್ನು, ೧೦ ಸಾವಿರ ನಗದು ಹಣ, ಪ್ರಶಸ್ತಿ ಪತ್ರ, ಸ್ಮರಣಿಕೆಯೊಂದಿಗೆ ವೃತ್ತಿಪರ ಯಕ್ಷಗಾನದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ, ಹಿರಿಯ ಭಾಗವತ ನೆಬ್ಬೂರು ನಾರಾಯಣ ಹೆಗಡೆ ಅವರಿಗೆ ನೀಡಿ ಗೌರವಿಸಿತು. ಧ್ವಜಪುರದ ನಾಗಪ್ಪಯ್ಯ ರಚಿಸಿದ ಅಂಬರೀಷ್ ಭಟ್ ನಿರ್ದೇಶನದಲ್ಲಿ ದಮಯಂತಿ ಪುನರ್ ವಿವಾಹ ಯಕ್ಷಗಾನ, ಪ್ರದರ್ಶನ ಕೂಡಾ ಪ್ರೇಕ್ಷಕರನ್ನು ಮೋಡಿಗೊಳಿಸಿತು.
ಸ್ವಸಂತೋಷಕ್ಕಾಗಿ ಯಕ್ಷಗಾನ : ಕೆ.ಮೋಹನ್
ಯಕ್ಷಗಾನ ರಂಗಭೂಮಿಯಲ್ಲಿ ನಾನು ತೊಡಗಿಕೊಂಡಿದ್ದು ನನ್ನ ಸಂತೋಷಕ್ಕಾಗಿ. ಮನಪೂರ್ವಕವಾಗಿ ಅದರಲ್ಲಿ ತೊಡಾಗಿಸಿಕೊಂಡಿದ್ದೇನೆ. ಇದನ್ನು ನಾನು ಕಲಾ ಸೇವೆಯೆಂದು ಭ್ರ್ರಮಿಸುವುದಿಲ್ಲ ಎಂದು ಯಕ್ಷದೇಗುಲದ ಗೌರವ ಕಾರ್ಯದರ್ಶಿಗಳಾದ ಶ್ರೀ ಕೆ. ಮೋಹನ್ ನುಡಿದರು.
ಕಲಾ ಕದ೦ಬ ಉತ್ಸವ - 2014
ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆ ಪ್ರತಿ ವರ್ಷ ಯಕ್ಷಗಾನ ಕ್ಷೇತ್ರದ ಪ್ರತಿಭಾನ್ವಿತರೋರ್ವರಿಗೆ ಪ್ರಶಸ್ತಿಯನ್ನು ನೀಡುತಿದ್ದು, ಈ ಬಾರಿಯ “ಕಾಳಿಂಗ ನಾವಡ ಪ್ರಶಸ್ತಿ-೨೦೧೪” ಪ್ರಶಸ್ತಿಯನ್ನು, ವೃತ್ತಿಪರ ಯಕ್ಷಗಾನದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ, ಹಿರಿಯ ಭಾಗವತ ನೆಬ್ಬೂರು ನಾರಾಯಣ ಹೆಗಡೆ ಅವರನ್ನು ಆಯ್ಕೆ ಮಾಡಿದೆ.
ಲಂಡನ್‌ನೆಡೆಗೆ ಯಕ್ಷ ನಡಿಗೆ
ಯಕ್ಷಗಾನಕ್ಕೆ ಒಂದು ಹೊಸ ದಿಶೆಯನ್ನು ತೋರಿಸಲು ಯಕ್ಷಗಾನ ಲಂಡನ್‌ ಯಕ್ಷಗಾನ ಸ್ಪರ್ಧೆ ಸಿದ್ಧ ವಾಗಿದೆ. ಸಾವಿರಕ್ಕಿಂತಲೂ ಮಿಕ್ಕಿದ ಯಕ್ಷ ಕಲಾವಿದರು ಈ ಲಂಡನ್‌ ಯಕ್ಷಗಾನ ಸ್ಪರ್ಧೆ (ಎಲ್‌ವೈಸಿ)ಯ ಭಾಗ ವಾಗಿದ್ದಾರೆ. ಚಂದ್ರಗಿರಿಯ ಮಡಿಲಿಂದ ಉದ್ಭವಿಸಿದ ಈ ಯಕ್ಷಗಾನ ನೇತ್ರಾವತಿಯನ್ನು ಹಾದು, ಕಾರವಾರದ ವರೆಗೂ ತೆಂಕುತಿಟ್ಟು -ಬಡಗುತಿಟ್ಟುಗಳೆಂಬ ಎರಡು ಪ್ರಭೇದಗಳಲ್ಲಿ ಮೆರೆಯುತ್ತಿದೆ. ಅವಕ್ಕೆ ಇನ್ನಷ್ಟು ಮೆರುಗನ್ನು ನೀಡುವುದಕ್ಕಾಗಿ ಈ ಸ್ಪರ್ಧೆ ಆಯೋಜಿಸಲ್ಪಟ್ಟಿದೆ. ಸಣ್ಣ ಯಕ್ಷಕಲಾವಿದರಿಂದ ಹಿಡಿದು ಶ್ರೇಷ್ಠ ಕಲಾವಿದರವರೆಗೂ, ಹವ್ಯಾಸಿಗಳಿಂದ ಹಿಡಿದು ವೃತ್ತಿಪರರವರೆಗೂ ಇಂದು ಎಲ್‌ವೈಸಿ ಮನೆ ಮಾತಾಗಿದೆ.
ಕಮ್ತಿಯವರ ಯಕ್ಷಗಾನ ಪ್ರೀತಿ
ಯಕ್ಷಗಾನದ ತವರೂರೆನಿಸಿದ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಕ್ಷಗಾನದ ಪ್ರದರ್ಶನಗಳು ಕ್ಷೀಣಿಸುತ್ತಿವೆ, ಕಲಾಪೋಷಕರು ಕಡಿಮೆಯಾಗುತ್ತಿದ್ದಾರೆ ಎನ್ನುವ ಆತ೦ಕದಲ್ಲಿಯೆ, ಕಳೆದ 3-4 ವರ್ಷಗಳಲ್ಲಿ ರಾಜಧಾನಿ ಬೆ೦ಗಳೂರಿನಲ್ಲಿ ಯಕ್ಷಗಾನ ಪ್ರದರ್ಶನಗಳ ಸ೦ಖ್ಯೆ ಗಣನೀಯವಾಗಿ ಏರಿಕೆಯಾಗಿರುವುದು ಕಲಾಭಿಮಾನಿಗಳಿಗೆ ಹಾಗೂ ಕಲಾವಿದರಿಗೆ ಸ೦ತಸದ ವಿಷಯ. ನವೆ೦ಬರ್ ತಿ೦ಗಳಿನಿ೦ದ ಮೇ ತಿ೦ಗಳಿನವರೆಗೆ ಮೇಳದ ಆಟಗಳಲ್ಲಿ ವ್ಯಸ್ತರಾಗಿರುವ ಕಲಾವಿದರು, ಜೂನ್ ನಿ೦ದ ಒಕ್ಟೋಬರ್ ತಿ೦ಗಳಿನವರೆಗೆ ರಾಜಧಾನಿ ಬೆ೦ಗಳೂರು ಸೇರಿದ೦ತೆ ರಾಜ್ಯದ ಇತರೆಡೆ ಬಿಡುವಿಲ್ಲದ ಪ್ರದರ್ಶನಗಳನ್ನು ನೀಡುತ್ತಿರುವುದು ಕಲಾಭಿಮಾನಿಗಳ ಹಾಗೂ ಕಲಾಪೋಷಕರ ಸ೦ಖ್ಯೆ ಏರಿಕೆಯಾಗಿರುವುದು ಕಾರಣ.
ಕಟೀಲು ತಾಳಮದ್ದಳೆ ಸಪ್ತಾಹ ದಶಾಹ - ಮ೦ತ್ರ ಮಹಾರ್ಣವ
ಶ್ರೀ ದುರ್ಗಾಪರಮೇಶ್ವರೀ ದೇಗುಲದ ಆಸರೆಯಲ್ಲಿ ನಡೆಯುವ ಯಕ್ಷಗಾನ ತಾಳಮದ್ದಲೆ ಸಪ್ತಾಹಕ್ಕೆ ಈ ವರ್ಷ ಹತ್ತರ ಸಂಭ್ರಮ. ಹಾಗಾಗಿ ಈ ಬಾರಿ ಹತ್ತು ದಿನಗಳ ತಾಳಮದ್ದಲೆ ``ದಶಾಹ``, ಪರಿಕಲ್ಪನೆ ಮಂತ್ರ ಮಹಾರ್ಣವ ಎಂಬುದು. ತಾ.11ರಿಂದ 20ರವರೆಗೆ ದಿನಂಪ್ರತಿ ಸಂಜೆ 4:30ರಿಂದ ತಾಳಮದ್ದಲೆ ನಡೆಯಲಿದೆ.
ಕಟೀಲು ಯಕ್ಷಗಾನ ಮೇಳದ ದೇವಿ ಪಾತ್ರಧಾರಿ ಕಡಂದೇಲು ಪುರುಷೋತ್ತಮ ಭಟ್ ನಿಧನ
ಕ್ಷಗಾನದ ಹಿರಿಯ ಕಲಾವಿದ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಯಕ್ಷಗಾನ ಕಲಾ ಮಂಡಳಿಯ ಶ್ರೀದೇವಿ ಪಾತ್ರಧಾರಿ, ಶತಾಯುಷಿ ಕಡಂದೇಲು ಪುರುಷೋತ್ತಮ ಭಟ್ (100) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಟೀಲಿನಲ್ಲಿ ವಾಸವಾಗಿರುವ ಕಡಂದೇಲು ಪುರುಷೋತ್ತಮ ಭಟ್ ಆರಂಭದಲ್ಲಿ ಮೂಲ್ಕಿ, ಕೊರಕ್ಕೋಡು, ಇರಾ, ಕುಂಡಾವು ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿದ್ದು, ಬಳಿಕ ಸುಮಾರು 30 ವರ್ಷಗಳ ಕಾಲ ಕಟೀಲು ಮೇಳದಲ್ಲಿ ಪುರುಷ ಹಾಗೂ ಸ್ತ್ರೀಪಾತ್ರ ನಿರ್ವಹಿಸಿ 1970ರಲ್ಲಿ ನಿವೃತ್ತಿ ಹೊಂದಿದ್ದರು.
ಶ್ರೀಕೃಷ್ಣ ಯಕ್ಷ ಸಭಾ ಸಪ್ತಾಹ ಗೌರವಪಾತ್ರ ಕಲಾವಿದರು
ಮಂಗಳೂರು ಕದ್ರಿಯ ಶ್ರೀಕೃಷ್ಣ ಯಕ್ಷಸಭಾ ಸಂಸ್ಥೆಯು ಪ್ರತಿ ವರ್ಷ ದಂತೆ ಈ ವರ್ಷವು ಸಪ್ತ ಕಲಾರತ್ನರನ್ನು ಗೌರವಿಸಲಿದೆ. ಜೂನ್‌ 30ರಿಂದ ಜುಲೈ 7ರವರೆಗೆ ಮಂಗಳೂರು ಪುರಭವನದಲ್ಲಿ ಉತ್ತಮ ಪೌರಾಣಿಕ ಪ್ರಸಂಗಗಳನ್ನು ಸಂಜೆಯ ವೇಳೆಗೆ ಕಾಲಮಿತಿಗೆ ಹೊಂದಿಸಿ ಪ್ರದರ್ಶಿಸುವುದರ ಜತೆಗೆ ಉಭಯ ತಿಟ್ಟುಗಳ ಕಲಾಸಾಧಕರನ್ನು ಸಮ್ಮಾನಿಸುತ್ತಿರುವುದು ಉಲ್ಲೇಖನಾರ್ಹ.
ಯಕ್ಷಗಾನ ಕಲಾರಂಗದ ತಾಳಮದ್ದಲೆ ಸಪ್ತಾಹ ಯಜ್ಞಾಶ್ವದ ಸಪ್ತಕೂಟ ಸಂಚಲನ
ಉಡುಪಿಯ ಯಕ್ಷಗಾನ ಕಲಾರಂಗವು ಕಳೆದ ಹದಿನೈದು ವರ್ಷ ಗಳಿಂದ ನಡೆಸಿಕೊಂಡು ಬರುತ್ತಿರುವ ಯಕ್ಷಗಾನ ತಾಳಮದ್ದಳೆ ಸಪ್ತಾಹವು ಇತ್ತೀಚೆಗೆ ರಾಜಾಂಗಣದಲ್ಲಿ ಯಶಸ್ವಿಯಾಗಿ ಜರಗಿ ಪೌರಾಣಿಕ ಲೋಕದ ಅನಾವರಣವು ಸಾರ್ಥಕವಾಗಿ ಆಯಿತು. ಕರಾವಳಿಯಲ್ಲಿ ವಿಸ್ತರಿಸಿರುವ ಈ ಅನನ್ಯ ಕಲೆಯು ಕಲಾವಿದರ ಸಾಹಿತ್ಯಿಕ ಒಲುಮೆಯಿಂದಲೇ ಪರಿಪುಷ್ಟ ವಾದುದು. ಈ ಕಲಾಪರಂಪರೆಯ ಉಳಿವಿಗೆ ಮತ್ತು ಬೆಳವಣಿಗೆಗೆ ಉಡುಪಿಯ ಕಲಾರಂಗದ ಕೊಡುಗೆ ಅನನ್ಯ. 2014 ಮೇ 20ರಿಂದ 26ರ ತನಕ ಜರಗಿದ ಈ ಏಳು ತಾಳಮದ್ದಳೆಗಳನ್ನು ``ಪಾಂಡವಾಶ್ವಮೇಧ`` ಎಂಬ ಶೀರ್ಷಿಕೆಯ ಅಡಿಯಲ್ಲಿ ಸಂಘಟಿಸಲಾಗಿತ್ತು.
ಕಳಚಿದ ಬಡಗುತಿಟ್ಟು ಹಾಸ್ಯದ ಕೊಂಡಿ, ಕುಂಜಾಲು ರಾಮಕೃಷ್ಣ ಹಾಸ್ಯಗಾರ್ ಇನ್ನಿಲ್ಲ
ಬಡಗುತಿಟ್ಟು ಹಾಸ್ಯಗಾರಿಕೆಯಲ್ಲಿ ಮನೆಮಾತಾದ, ಪೌರಾಣಿಕ ಹಾಸ್ಯ ಪಾತ್ರಗಳಿಗೆ ತನ್ನದೇ ಶೈಲಿಯಲ್ಲಿ ಜೀವತುಂಬಿ ಕುಂಜಾಲು ಹಾಸ್ಯ ಶೈಲಿ ಎನ್ನುವ ಹೊಸ ಹಾಸ್ಯ ಶೈಲಿಯನ್ನು ಹುಟ್ಟು ಹಾಕಿದ ಅಭಿನವ ಯಕ್ಷಗಾನದ ತೆನ್ನಾಲಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರುತ ಹಾಸ್ಯರಾಜ ಕುಂಜಾಲು ರಾಮಕೃಷ್ಣ ಇನ್ನಿಲ್ಲ.
ಸ್ವೀಕರಿಸಲಾಗದ ನಿಧನ ಚೆನ್ನಪ್ಪ ಶೆಟ್ಟಿ ಅಗಲಿಕೆ
ಸಾಧನೆಯಲ್ಲಿ ಛಲಗಾರ, ವ್ಯವಸಾಯದ ನಿಷ್ಠಾವಂತ ಕಲಾಕಾರ, ಅಧ್ಯಯನದಲ್ಲಿ ಸತತ ವಿದ್ಯಾರ್ಥಿ, ರಂಗದಲ್ಲಿ ಸಮರ್ಥ ವರಿಷ್ಠ ಸಾಧಕ - ನಮ್ಮ ಆತ್ಮೀಯ ಕಲಾವಿದ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಅಗಲಿಯೇ ಹೋದರು. ಅವರ ಬಳಗ, ಕುಟುಂಬ, ಮಿತ್ರವಲಯ ಒಪ್ಪಿಕೊಳ್ಳ ಲಾಗದ ಘಟನೆ ಇದು. ದೃಢ ಆರೋಗ್ಯದ, ಶಿಸ್ತುಬದ್ಧ ಜೀವನದ, ನಿವ್ಯಸನಿ ಚೊಕ್ಕ ವ್ಯಕ್ತಿಗೆ ಈ ಬಗೆಯ ಅನಿರೀಕ್ಷಿತ ಅಂತ್ಯವೆ? ಅರ್ಥವಾಗುವುದಿಲ್ಲ.
ಮಾತು ಮೌನವಾಯಿತು
ಅದು ನಾವೆಲ್ಲ ಬುದ್ದಿ ಮಲೆತು ಆಟನೋಡುವ ಹುಚ್ಚು ಹಿಡಿಸಿಕೊಂಡ ಬಾಲ್ಯದ ಸಮಯ. ಅಕ್ಕಪಕ್ಕದ ಬಯಲುಗಳಲ್ಲಿ ನಡೆಯುವ ಕಟೀಲು ಮೇಳದ ಆಟಗಳು ಇರುಳಲ್ಲೂ ಹಗಲಲ್ಲೂ ಕಾಡುತ್ತಿದ್ದವು. ಶುಲ್ಕವಿಲ್ಲದೇ ಸಿಗುತ್ತಿದ್ದ ಧಾರಾಳ ಮನರಂಜನೆಯಲ್ಲಿ ಕಟೀಲು ಮೇಳದ ಆಟಗಳೆಂದರೆ ಬಾಲ್ಯದ ಬಲು ಮುಖ್ಯ ಹಂತ ಎಂದು ಈಗ ಅನಿಸುತ್ತದೆ. ಕೈಯಲ್ಲಿ ನಾಲ್ಕಾಣೆಯ ಪಾವಲಿಯಲ್ಲೇ ಬೆಳಗು ಮಾಡುತ್ತಿದ್ದ ಕಟೀಲು ಮೇಳದ ಆಟಗಳೆಷ್ಟು ಅಪ್ಯಾಯಮಾನವಾಗಿತ್ತೋ ಅದರಲ್ಲಿ ನಿಯಮಿತವಾಗಿ ಕಾಣುವ ವೇಷಗಳು ಆ ಕಲಾವಿದರ ಮುಖವೂ ಅಪ್ಯಾಯಮಾನವಾಗಿತ್ತು. ಅಂತಹ ಮುಖಗಳಲ್ಲಿ ಕಂಡು ಬಂದ ಸುಂದರ ಮುಖವೇ ಶ್ರೀ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿಯವರದ್ದು.
ಫೆ.14ರಿಂದ ಯಕ್ಷಗಾನ ಸಾಹಿತ್ಯ ಸಮ್ಮೇಳನ
ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಬೆಂಗಳೂರು ಆಶ್ರಯದಲ್ಲಿ 9 ನೇ ಅಖೀಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನವು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಫೆ.14ರಿಂದ ಮೂರು ದಿನ ಅದ್ಧೂರಿಯಾಗಿ ನಡೆಯಲಿದೆ. ಯಕ್ಷಗಾನದ ಎಲ್ಲಾ ಪ್ರಕಾರಗಳಿಂದ ಆಯ್ದ ಶ್ರೇಷ್ಠ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿವೆ. ಯಕ್ಷಗಾನ ರಂಗದಲ್ಲಿ ಸಾಧನೆ ಮಾಡಿದ ಹಲವು ಹಿರಿಯರನ್ನು ಸನ್ಮಾನಿಸಲಾಗುವುದು.
ಕಲಾಭಿಮಾನಿಗಳಿಂದಲೇ ಗಂಡುಕಲೆ ಉಳಿಯಲು ಸಾಧ್ಯ : ಎನ್‌. ಆರ್‌. ರಾವ್‌
ಪದವೀಧರ ಯಕ್ಷಗಾನ ಸಮಿತಿ (ರಿ.) ತನ್ನ 40ನೇ ವರ್ಷಚರಣೆಯ ಪ್ರಯುಕ್ತ ಮಹಾನಗರ ಮತ್ತು ಉಪನಗರ, ನವಿ ಮುಂಬಯಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ನಿರಂತರವಾಗಿ ನಡೆಸಲ್ಪಟ್ಟ ಐದು ದಿನಗಳ ಯಕ್ಷಗಾನ ಸಮ್ಮೇಳನ ಕಾರ್ಯಕ್ರಮವು ಜ. 26 ರಂದು ಸಮಾಪ್ತಿಗೊಂಡಿತು. ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ, ಶ್ರೀ ಪೇಜಾವರ ಮಠ, ನವಿಮುಂಬಯಿ ಕನ್ನಡ ಸಂಘ ವಾಶಿ, ಶ್ರೀ ಅಂಬಿಕಾ ದೇವಸ್ಥಾನ ವಿದ್ಯಾ ವಿಹಾರ್‌, ಬಿ. ಎಸ್‌. ಕೆ. ಬಿ. ಅಸೋಸಿಯೇಶನ್‌ ಸಯನ್‌ ಸಹಯೋಗದೊಂದಿಗೆ ಯಕ್ಷಗಾನ ಸಮ್ಮೇಳನ, ಯಕ್ಷಗಾನ ತಾಳಮದ್ದಳೆ, ಕಮ್ಮಟವನ್ನು ಆಯೋಜಿಸಿತ್ತು.
ಗೆಜ್ಜೆ ಕಟ್ಟಲು ಸಿದ್ಧರಾಗಿದ್ದಾರೆ 210 ವಿದ್ಯಾರ್ಥಿಗಳು
ಯಕ್ಷಗಾನ ಕ್ಷೇತ್ರದಲ್ಲಿ ಹೊಸ ಹೆಜ್ಜೆಯನ್ನಿಟ್ಟುಕೊಂಡು ಚಿಕ್ಕದೊಂದು ಅಳಿಲ ಸೇವೆಗೆ ಮುಂದಾಗಿದೆ ಕಾರ್ಕಳದ ಯಕ್ಷ ಕಲಾರಂಗ. ಒಂದೂವರೆ ವರ್ಷದ ಹಿಂದೆ ಹುಟ್ಟಿಕೊಂಡ ಈ ಸಂಸ್ಥೆಯು ಮಕ್ಕಳಲ್ಲಿ ಅಭಿರುಚಿಯನ್ನು ಮೂಡಿಸುವ ಪ್ರಯತ್ನಕ್ಕೆ ಕೆಹಾಕಿದೆ. ಪರಿಣಾಮ ಇದೀಗ 210 ಬಾಲ ಕಲಾವಿದರು ಗೆಜ್ಜೆಕಟ್ಟಿ ಕುಣಿಯಲು ಸಜ್ಜಾಗಿದ್ದಾರೆ.
ಯಕ್ಷಗಾನ ಎಂಬುದು ದೇವರ ಕೆಲಸ ಮಾಡಿದಂತೆ : ಕಿಶನ್ ಹೆಗ್ಡೆ
ಹಿರ್ಗಾನ ಶ್ರೀ ಕುಂದೇಶ್ವರ ದೇವಸ್ಥಾನ ಜಾತ್ರೆ ಸಂದರ್ಭ ಐದು ಮೇಳಗಳ ಸಂಚಾಲಕ ಬೈಲೂರು ಕಿಶನ್ ಹೆಗ್ಡೆ ಅವರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕಿಶನ್ ಹೆಗ್ಡೆ, ಯಕ್ಷಗಾನ ಎಂದರೆ ಕೇವಲ ಕಲೆ ಅಲ್ಲ, ಅದು ಸಂಸ್ಕೃತಿ, ಧರ್ಮ.ದೇವರ ಕೆಲಸ ಮಾಡಿದಂತೆಯೇ ಶ್ರದ್ಧೆಯಿಂದ ಮಾಡಡಬೇಕು. ಪರಂಪರೆ ಹಿರಿಯರಿಂದ ಯುವಜನಾಂಗದತ್ತ ಸಾಗುವಲ್ಲಿ ಹಿಂದೆ ಬಿದ್ದಿದ ಎಂಬ ಕೂಗು ಇರುವ ನಡುವೆಯೂ ಕುಂದೇಶ್ವರದಂಥ ಊರಿನಲ್ಲಿ ಯುವ ಸಮೂಹ ಬಯಲಾಟ ಸತವಾಗಿ ಪ್ರದರ್ಶಿಸುತ್ತಿರುವುದು ಯಕ್ಷಗಾನಕ್ಕೆ ಒಳ್ಳೆ ಭವಿಷ್ಯ ಇರುವುದನ್ನು ಸೂಚಿಸುತ್ತದೆ ಎಂದರು.
ಬಲ್ಲಿರೇನಯ್ಯ ಮಾಸ ಪತ್ರಿಕೆಯ ವಿದ್ಯುಕ್ತ ಲೋಕಾರ್ಪಣೆ
ಬಲ್ಲಿರೇನಯ್ಯ ಮಾಸ ಪತ್ರಿಕೆಯ ವಿದ್ಯುಕ್ತ ಲೋಕಾರ್ಪಣೆ, ಇದೇ ಶನಿವಾರ ಬೆ೦ಗಳೂರಿನಲ್ಲಿ ನಡೆಯಲಿದೆ. ಯಕ್ಷಗಾನದ ರಂಗಸ್ಥಳದಲ್ಲಿ ಬಣ್ಣ ಬಣ್ಣದ ಯಕ್ಷ ವೇಷಗಳು ಗೆಜ್ಜೆ ಕಟ್ಟಿ ಹೆಜ್ಜೆ ಇಟ್ಟು ಮರೆಯಾದರೂ, ಅವೆಲ್ಲ ವನ್ನು ನೆನಪಿನ ರಂಗಸ್ಥಳದಲ್ಲಿ ಕಟ್ಟಿ ಕೊಡುವ ಯಕ್ಷಗಾನ ಮಾಸಪತ್ರಿಕೆಗಳ ಅಕ್ಷರ ಕೈಂಕರ್ಯ ಸುಲಭದ ಮಾತಲ್ಲ. ನೋಂದಾವಣೆ, ಲೇಖನ-ಚಿತ್ರ ಸಂಗ್ರಹ, ಅಂಚೆ- ಸಂಚಿಕೆಗಳ ವಿತರಣೆ, ಮುದ್ರಾ ರಾಕ್ಷಸನ ಪೀಡೆ ಹೀಗೆ ಹತ್ತು ಹಲವು ನೋವುಗಳ ನಡುವೆಯೂ ಸಕಾಲದಲ್ಲಿ ನಮ್ಮನ್ನು ತಲುಪುವ ಹೊಣೆ ಹೊತ್ತ ಸಂಪಾದಕರದು ಆತ್ಯಂತಿಕ ಸುಖ ನೀಡುವ ಪ್ರಸವ ವೇದನೆ.
ಕನ್ನಡ ಶ್ರೀಮಂತಗೊಳಿಸಿದ ಕಲೆ ಯಕ್ಷಗಾನ: ಮೊಗಸಾಲೆ
ಕೆರೆಮನೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ 80 ವರ್ಷಗಳ ಸಂಭ್ರಮಾಚರಣೆ ಮತ್ತು ಯಕ್ಷಗಾನ ರಂಗಕಲೆಯಲ್ಲಿ ಹಾಸ್ಯಪಾತ್ರದ ಮೂಲಕ ಮನೆಮಾತಾದ ಹಿರಿಯ ಹಾಸ್ಯಕಲಾವಿದ ಕುಂಜಾಲು ರಾಮಕೃಷ್ಣ ನಾಯಕ್ ಬ್ರಹ್ಮಾವರ ಇವರಿಗೆ ಯಕ್ಷಗಾನದ ಸ್ತ್ರೀ ವೇಷದ ಪಾತ್ರಕ್ಕೆ ತಾರಾಮೌಲ್ಯ ತಂದುಕೊಟ್ಟಿರುವ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನದೊಂದಿಗೆ ಐದು ದಿನಗಳ ಕೆರೆಮೆನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವಕ್ಕೆ ತೆರೆ ಎಳೆಯಲಾಯಿತು.
ಯಕ್ಷಗಾನ - ಭಾರತೀಯ ಸಂಸ್ಕೃತಿ ಪ್ರತೀಕ : ಬಳ್ಕೂರು ಕೃಷ್ಣ ಯಾಜಿ
ಯಕ್ಷಗಾನ ಕಲೆ ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ಹೆಸರಾಂತ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ ಹೇಳಿದರು. ಗುಣವಂತೆಯ ಯಕ್ಷಾಂಗಣದಲ್ಲಿ ಇಡಗುಂಜಿ ಯಕ್ಷಗಾನ ಮಂಡಳಿ ಏರ್ಪಡಿಸಿದ್ದ ಐದು ದಿನಗಳ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ನಾಲ್ಕನೇ ದಿನದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕನ್ನಡ ಶ್ರೀಮಂತಗೊಳಿಸಿದ ಕಲೆ ಯಕ್ಷಗಾನ: ಮೊಗಸಾಲೆ
ಕೆರೆಮನೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ 80 ವರ್ಷಗಳ ಸಂಭ್ರಮಾಚರಣೆ ಮತ್ತು ಯಕ್ಷಗಾನ ರಂಗಕಲೆಯಲ್ಲಿ ಹಾಸ್ಯಪಾತ್ರದ ಮೂಲಕ ಮನೆಮಾತಾದ ಹಿರಿಯ ಹಾಸ್ಯಕಲಾವಿದ ಕುಂಜಾಲು ರಾಮಕೃಷ್ಣ ನಾಯಕ್ ಬ್ರಹ್ಮಾವರ ಇವರಿಗೆ ಯಕ್ಷಗಾನದ ಸ್ತ್ರೀ ವೇಷದ ಪಾತ್ರಕ್ಕೆ ತಾರಾಮೌಲ್ಯ ತಂದುಕೊಟ್ಟಿರುವ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನದೊಂದಿಗೆ ಐದು ದಿನಗಳ ಕೆರೆಮೆನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವಕ್ಕೆ ತೆರೆ ಎಳೆಯಲಾಯಿತು.
ಕಲಾ ಕದಂಬ ಆರ್ಟ್ ಸೆಂಟರ್ ಸಂಸ್ಥೆ `ಮಾಸದ ಮೆಲುಕು-34` : ರತ್ನಾವತಿ ಕಲ್ಯಾಣ
ಕಲಾ ಕದಂಬ ಆರ್ಟ್ ಸೆಂಟರ್ ಸಂಸ್ಥೆಯು ಪ್ರತೀ ತಿಂಗಳೂ ರಾಧಾಕೃಷ್ಣ ಉರಾಳರ ಪರಿಕಲ್ಪನೆ- ನಿರ್ದೇಶನನದಲ್ಲಿ ನೀಡುತ್ತಾ ಬಂದಿರುವ `ಮಾಸದ ಮೆಲುಕು` ಸರಣಿಯ 34 ನೇ ಸಾಂಸ್ಕೃತಿಕ ಕಾರ್ಯಕ್ರಮ ದಿನಾಂಕ 26 ನೇ ಭಾನುವಾರ ಸಂಜೆ 6-00 ಕ್ಕೆ ಮನೋರಂಜಿನಿ ಸಭಾಂಗಣದಲ್ಲಿ ನಡೆಯಲಿದೆ. ಶ್ರೀ ಸಿದ್ಧಿ ಗಣಪತಿ ದೇವಾಲಯದ ಮನೋರಂಜಿನಿ ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ, ಕೆ.ಎಸ್.ಆರ್.ಟಿ.ಸಿ. ಬಡಾವಣೆ, ಚಿಕ್ಕಲಸಂದ್ರ, ಮನೋರಂಜಿನಿ ಸಭಾಂಗಣದಲ್ಲಿ ಅಂದು ಕವಿ ಮುದ್ದಣ ಬರೆದಿರುವ ರತ್ನಾವತಿ ಕಲ್ಯಾಣ ಪ್ರಸಂಗ ಪ್ರದರ್ಶನಗೊಳ್ಳಲಿದೆ.
ಯಕ್ಷಗಾನ ಪರಿಪೂರ್ಣ ಕಲೆ: ಶ್ರೀನಿವಾಸ ಕಪ್ಪಣ್ಣ
ಇಡೀ ಕರ್ನಾಟದಲ್ಲಿ ಪರಿಪೂರ್ಣವಾದ ಕಲೆ ಯಕ್ಷಗಾನ ಮಾತ್ರ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಅಭಿಪ್ರಾಯಪಟ್ಟರು. ಅವರು ಸೋಮವಾರ ಗುಣವಂತೆಯ ಯಕ್ಷಾಂಗಣದಲ್ಲಿ ಕೆರೆಮನೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಏರ್ಪಡಿಸಿದ ಐದು ದಿನಗಳ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಮೂರನೇ ದಿನದ ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿಯವರಿಗೆ ಸನ್ಮಾನ
ಯಕ್ಷಗಾನಕ್ಕೆ ಪ್ರೇಕ್ಷಕರು ಕಡಿಮೆಯಾಗುತಿದ್ದು, ಮೇಳಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಲಾವಿದರ ಕೊರತೆಯಿಂದ ಮೇಳಗಳನ್ನು ನೆಡೆಸುವುದು ದುಸ್ಸಾಹಸದ ಕೆಲಸ ಎಂದು ಬೈಂದೂರು ಕ್ಷೇತ್ರದ ಶಾಸಕ ಗೋಪಾಲ ಪೂಜಾರಿಯವರು ಹೇಳಿದರು. ಅವರು ಕುಂದಾಪುರದಲ್ಲಿ ಪೆರ್ಡೂರು ಮೇಳದ ವೇದಿಕೆಯಲ್ಲಿ ನಡೆದ ಪ್ರಂಸಂಗಕರ್ತ ಕಂದಾವರ ರಘುರಾಮ ಶೆಟ್ಟಿಯವರ ಸನ್ಮಾನ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದರು.
ದಿ.ನಗರ ಜಗನ್ನಾಥ ಶೆಟ್ಟಿ ದಶಮ ವರ್ಷದ ಸಂಸ್ಮರಣೆ, ಯಕ್ಷಗಾನ ಬಯಲಾಟ ಪ್ರದರ್ಶನ
ಬಡಗುತಿಟ್ಟಿನ ರಂಗಸ್ಥಳ ರಾಜ ಎಂಬ ಖ್ಯಾತಿಯ ಸವ್ಯಸಾಚಿ ಕಲಾವಿದ ನಗರ ಜಗನ್ನಾಥ ಶೆಟ್ಟಿಯವರು ನಮ್ಮನ್ನಗಲಿ ಇಂದಿಗೆ ವರ್ಷ ೧೦ ಸಂದಿದೆ. ಅವರ ಅಭಿಮಾನಿ ವರ್ಗದವರು ಸಂಸ್ಮರಣಾ ಸಮಿತಿ ರಚಿಸಿಕೊಂಡು ಇದೇ ಬರುವ ಫೆಬ್ರವರಿ 8ರ ಶನಿವಾರ ರಾತ್ರಿ ಕುಂದಾಪುರದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸಂಸ್ಮರಣಾ ಸಮಾರಂಭ ಮತ್ತು ಅವರು ದೀರ್ಘಕಾಲ ಸೇವೆ ಸಲ್ಲಿಸಿದ ಮೇಳಗಳಲ್ಲಿ ಒಂದಾದ ಶ್ರೀ ಪೆರ್ಡೂರು ಮೇಳದವರಿಂದ ಪೌರಾಣಿಕ ಪ್ರಸಂಗಗಳ ಪ್ರದರ್ಶನವಿರಿಕೊಂಡಿದ್ದಾರೆ. ನಗರದವರು ತೀರಿಕೊಂಡ ಹತ್ತನೇ ವರ್ಷದಲ್ಲಿ ಅವರನ್ನು ನೆನಪಿಸಿಕೊಂಡು ಕುಟುಂಬಕ್ಕೆ ಧನ ಸಹಾಯ ಮಾಡುವ ಉದ್ದೇಶದಿಂದ ಹುಟ್ಟಿಕೊಂಡ ಸಂಸ್ಮರಣಾ ಸಮಿತಿಯ ಕಾರ್ಯ ಶ್ಲಾಘನೀಯವಾಗಿದೆ.
ಮಂದ ಬೆಳಕಿನ ಮಾಟ ಮತ್ತು ಸೌಹಾರ್ದದ ಮೇಲಾಟ
ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಸೋದೆ ವಾದಿರಾಜ ಮಠದ ಆಶ್ರಯದೊಂದಿಗೆ ಪರ್ಯಾಯ ಶ್ರೀ ವಿಶ್ವವಲ್ಲಭ ತೀರ್ಥರ ಪರ್ಯಾಯ ಮಂಗಲೋತ್ಸವದ ಪ್ರಯುಕ್ತ ತೆಂಕುತಿಟ್ಟಿನ ಎರಡು ಮಹತ್ವದ ಪ್ರದರ್ಶನಗಳು ಜರಗಿದವು. ಒಂದು, ದೊಂದಿ- ಮಂದ ಬೆಳಕಿನ ಪ್ರದರ್ಶನ, ಇನ್ನೊಂದು ಅವಳಿ ರಂಗಸ್ಥಳಗಳಲ್ಲಿ ಏಕ ಕಥಾನಕ (ಜೋಡಾಟ). ಮಂದ ಬೆಳಕಿನಲ್ಲಿ ಪುರಾತನ ಕಲಾವೈಭವದೊಂದಿ- ಮಂದ ಬೆಳಕಿನ ಪ್ರದರ್ಶನಕ್ಕೆ ಆಯ್ದುಕೊಂಡ ಎರಡು ಆಖ್ಯಾನಗಳಲ್ಲಿ ಒಂದು ಕುಂಭಕರ್ಣ ದಮನ - ಶ್ರೀರಾಮಚಂದ್ರನ ದುಷ್ಟ ಶಿಕ್ಷಣದ ವ್ಯಕ್ತಿತ್ವವನ್ನು ಮೆರೆಸುವಂಥ ರಾಮಾಯಣದ ಕಥಾನಕ. ಹಿಮ್ಮೇಳದವರೊಂದಿಗೆ ಬಾಲಗೋಪಾಲರು ರಂಗಸ್ಥಳಕ್ಕೆ ಆಗಮಿಸುತ್ತಿ ದ್ದಂತೆ ರಂಗಸ್ಥಳದ ಸುತ್ತ ಇದ್ದ ದೊಂದಿಗಳು ಉರಿಯಲಾರಂಭಿಸಿ ಕತ್ತಲಾವರಿಸಿದ್ದ ರಂಗಸ್ಥಳದೊಳಗೆ ವೇಷಗಳು.
ಯಕ್ಷಲೋಕ ಸೃಷ್ಟಿಸಿದ ಮಹಿಳಾ ಯಕ್ಷಗಾನ
ಕನ್ನಡ–ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿಯ ಯಕ್ಷಗಾನ ಸಂಶೋಧನಾ ಕೇಂದ್ರ ಹಮ್ಮಿಕೊಂಡ ರಾಜ್ಯ ಮಟ್ಟದ ಎರಡು ದಿವಸಗಳ ‘ಮಹಿಳಾ ಯಕ್ಷಗಾನ ಸಂಭ್ರಮ’ ಅಭೂತಪೂರ್ವ ಯಶಸ್ಸು ಕಂಡಿತು. ಯಕ್ಷಗಾನದ ಹೊಸ ಪ್ರಯೋಗಗಳಲ್ಲಿ ಅಪರೂಪವೆನಿಸಿದ ಈ ಕಾರ್ಯಕ್ರಮ ಎರಡು ದಿನ ಕಾಲ ಯಕ್ಷ ರಸದೌತಣ ಉಣಬಡಿಸಿತು. ಪುರುಷ ಪಾತ್ರಗಳನ್ನು ಮೀರಿಸುವಂತೆ ಇಲ್ಲಿ ವಿವಿಧ ಪ್ರಸಂಗಗಳನ್ನು ಪ್ರದರ್ಶಿಸಿದ ರಾಜ್ಯದ ವಿವಿಧೆಡೆಯಿಂದ ಬಂದ ಮಹಿಳೆಯರ ಹತ್ತು ಯಕ್ಷಗಾನ ತಂಡಗಳು ಯಕ್ಷಗಾನದ ಬಗ್ಗೆ ಹಲವು ಹೊಸ ಚಿಂತನೆ ಬಿತ್ತಲು ಕಾರಣವಾದವು.
ಪ್ರಸಂಗಕರ್ತೆಯಾಗಿ ಮಿಂಚಿದ ಸುರೇಖಾ ಆಚಾರ್ಯ
ಗಂಡುಕಲೆ ಎಂದು ಹೆಸರಾದ ಯಕ್ಷಗಾನ ಕ್ಷೇತ್ರದಲ್ಲಿ ಈಗ ಸದ್ದಿಲ್ಲದೆ ಮಹಿಳೆಯರು ವಿಕ್ರಮ ಸಾಧಿಸುತ್ತಿದ್ದಾರೆ. ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಸುರೇಖಾ ಆಚಾರ್ಯ ಈ ಸಾಲಿನ ಮತ್ತೊಂದು ಪ್ರತಿಭೆ. ಪಾತ್ರ, ಅರ್ಥಗಾರಿಕೆ, ಭಾಗವತಿಕೆ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತಿರುವಂತೆಯೇ ಇದೀಗ ಸುರೇಖಾ ಆಚಾರ್ಯ ಪ್ರಸಂಗಕರ್ತೆಯಾಗಿ ಕಾಣಿಸಿಕೊಂಡು ಹುಬ್ಬೇರಿಸಿದ್ದಾರೆ. ಸುರೇಖಾ ಅವರು `ಸಾಗರಿ ಸಾಮುದ್ರಿಕಾ` ಎಂಬ ವಿಶಿಷ್ಟ ಪ್ರಸಂಗವನ್ನು ಛಂದೋಬದ್ಧವಾಗಿ ರಚಿಸಿದ್ದು, ಸಾಲಿಗ್ರಾಮ ಮೇಳ ಈ ಬಾರಿಯ ತಿರುಗಾಟದ ನೂತನ ಕಲಾ ಕಾಣಿಕೆಯಾಗಿ ಆಯ್ಕೆ ಮಾಡಿ ಗೌರವಿಸಿದೆ. ಮನುಜ ಕುಲಕ್ಕೆ ಹಣೆಬರಹವನ್ನು ಮೀರಿ ನಿಲ್ಲಲಾಗದು.
ಜನವರಿ 18ರಿಂದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ
ಕರಾವಳಿಯ ಹೆಮ್ಮೆಯ ಯಕ್ಷಗಾನ ಕಲೆಗೆ ಅನುಪಮ ಸೇವೆ ಸಲ್ಲಿಸಿರುವ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇದರ ಸಂಘಟನೆಯಲ್ಲಿ, ವಿವಿಧ ಕಲಾಪ್ರಕಾರಗಳಿಗೆ ವೇದಿಕೆ ಕಲ್ಪಿಸಿರುವ, ‘ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ–5’ ಗುಣವಂತೆಯ ಯಕ್ಷಾಂಗಣದಲ್ಲಿ ಜ. 18ರಿಂದ 22ರ ವರೆಗೆ 5 ದಿನಗಳ ಕಾಲ ನಡೆಯಲಿದೆ. ನಾಟ್ಯೋತ್ಸವದ ಸಂದರ್ಭದಲ್ಲಿ ಕೆರೆಮನೆ ಶಿವರಾಮ ಹೆಗಡೆ ಮತ್ತು ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ, ನಾಟ್ಯೋತ್ಸವ ಸನ್ಮಾನ, ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರದ 80ರ ಸಂಭ್ರಮ, ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಚಂದನ ವಾಹಿನಿಯಲ್ಲಿ ಜನವರಿ 19ರಿಂದ `ಸಂಪೂರ್ಣ ರಾಮಾಯಣ` ಯಕ್ಷಗಾನ ಧಾರಾವಾಹಿ
ಯಕ್ಷಗಾನ ಕಲೆ- ಕಲಾವಿದರ ಶ್ರೇಯಸ್ಸಿಗಾಗಿ 10 ವರ್ಷಗಳ ಹಿಂದೆ ಹುಟ್ಟಿಕೊಂಡ `ಯಕ್ಷ ಸಂಗೀತ -ನಾಧ ವೈಭವಂ` ಸಂಸ್ಥೆ ನಿರ್ಮಿಸಿರುವ `ಸಂಪೂರ್ಣ ರಾಮಾಯಣ` ಯಕ್ಷಗಾನ ಧಾರಾವಾಹಿ ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ 19ರಿಂದ ಪ್ರತಿ ಭಾನುವಾರ ಮಧ್ಯಾಹ್ನ 1.30ರಿಂದ 2.30 ನಡುವೆ ಪ್ರಸಾರವಾಗಲಿದೆ. ಸಂಸ್ಥೆಯ ಅಧ್ಯಕ್ಷ, ಧಾರವಾಹಿಯ ನಿರ್ದೇಶಕ, ಖ್ಯಾತ ಭಾಗವತ ನಾರಾಯಣ ಶಬರಾಯ ಜಿ.ಎಂ. ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸುದ್ದಿಗಳು - 2013

ಉದಯೋನ್ಮುಖ ಯುವ ಯಕ್ಷಗಾನ ಕಲಾವಿದರನ್ನು ಪುರಸ್ಕರಿಸುವ ಕಾರ್ಯ ಶ್ಲಾಘನೀಯ
ಯಕ್ಷಗಾನ ರಂಗದಲ್ಲಿ ತೊಡಗಿಸಿಕೊಂಡ ಕೇವಲ ಖ್ಯಾತನಾಮ ಕಲಾವಿದರನ್ನೇ ಪದೆ ಪದೆ ಸನ್ಮಾನಿಸುವ ಬದಲು ಉದಯೋನ್ಮುಖ ಯುವ ಕಲಾವಿದರನ್ನು ಗೌರವಿಸುವುದು ಹೆಚ್ಚು ಸೂಕ್ತ. ಯಕ್ಷಗಾನ ಕಲೆಯತ್ತ ಯುವ ಪ್ರೇಕ್ಷಕರು ಮತ್ತು ಹೊಸ ಕಲಾವಿದರು ಹಿಂದೆ ಸರಿಯುತ್ತಿರುವ ಈ ಕಾಲಘಟ್ಟದಲ್ಲಿ ಯುವ ಕಲಾವಿದರನ್ನು ಸನ್ಮಾನಿಸಿದಾಗ ಅವರ ಜವಬ್ದಾರಿ ಹೆಚ್ಚುವುದರೊಂದಿಗೆ ಇನ್ನಷ್ಟು ಯುವಕರನ್ನು ಈ ಕಡೆಗೆ ಸೆಳೆಯಲು ಸಾದ್ಯ ಈ ನಿಟ್ಟಿನಲ್ಲಿ ಕಾರ್ಕಳ ಬೊಳೆಂತಡ್ಕ ಪೈ ಕುಟುಂಬದ ಸದಸ್ಯರು ನಾಲ್ವರು ಯುವ ಕಲಾವಿದರನ್ನು ಹಾಗೂ ಒಬ್ಬ ಮೇಳದ ಒಬ್ಬ ಕೆಲಸಗಾರನನ್ನು ಸನ್ಮಾನಿಸಿ ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದು ಮಣಿಪಾಲ ಎಂ. ಐ. ಟಿ ಯ ಪ್ರಾದ್ಯಾಪಕ ಎಸ್. ವಿ. ಉದಯ ಕುಮಾರ ಶೆಟ್ಟಿಯವರು ಹೇಳಿದರು.
ಕುಂಬಳೆ ಸುಂದರರಾವ್‌ಗೆ ಅಗರಿ ಪ್ರಶಸ್ತಿ ಪ್ರದಾನ
ಯಕ್ಷಗಾನ ಕಲೆ ನಿರಂತರ ಚಲನಶೀಲತೆ ಒಳಗೊಂಡಿದ್ದು, ಅದರ ಬಹುತ್ವವನ್ನು ಅನೇಕ ವಿನ್ಯಾಸಗಳ ಹಿನ್ನೆಲೆಯಲ್ಲಿ ಚರ್ಚಿಸಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್‌ ಪೈ ಯಕ್ಷಗಾನ ಕೇಂದ್ರದ ನಿರ್ದೇಶಕ ಡಾ| ಕೆ ಚಿನ್ನಪ್ಪ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಡಿ. 25ರಂದು ಸುರತ್ಕಲ್‌ ಗೋವಿಂದದಾಸ ಕಾಲೇಜ್‌ನ ಸಭಾಂಗಣದಲ್ಲಿ ಸುರತ್ಕಲ್‌ನ ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣ ವೇದಿಕೆ ಹಾಗೂ ಸುರತ್ಕಲ್‌ ಗೋವಿಂದದಾಸ ಕಾಲೇಜ್‌ನ ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರ ಇವರ ಸಹಯೋಗದಲ್ಲಿ ನಡೆದ ಅಗರಿ ಸಂಸ್ಮರಣಾ ವೇದಿಕೆಯ ದಶಮಾನೋತ್ಸವ, ಯಕ್ಷಗಾನ ಕಲಾವಿದ ಕುಂಬಳೆ ಸುಂದರ ರಾವ್‌ ಅವರಿಗೆ ಅಗರಿ ಪ್ರಶಸ್ತಿ ಪ್ರದಾನ ಮತ್ತು ಆಗರಿ ಸಂಸ್ಮರಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಿರಿಯಡ್ಕ ಮೇಳದ ವೀರಭದ್ರನ ವೇಷಕ್ಕೆ ರಜತ ಕಿರೀಟ ಸಮರ್ಪಣೆ
ಹಿರಿಯಡಕ ಪೇಟೆಯವರು ಹಾಗೂ ಕ್ಷೇತ್ರಾಭಿಮಾನಿಗಳ ಸಹಕಾರದಿಂದ ನೀಡಲಾದ, ವೀರಭದ್ರನ , ವೀರಭದ್ರನ ವೇಷಕ್ಕೆ ಉಪಯೋಗಿಸುವ ಬೆಳ್ಳಿಯ ಯಕ್ಷಗಾನದ ಕಿರೀಟ ಸಮರ್ಪಣಾ ಸಮಾರಂಭ್ಹವು ಬಾನುವಾರ ಸಂಜೆ ಹಿರಿಯಡ್ಕ ಶ್ರೀ ವೀರಭದ್ರ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಹಾಕಿದ ಹಿರಿಯಡ್ಕ ಮೇಳದ ರಂಗ ವೇದಿಕೆಯಲ್ಲಿ ನೆಡೆಯಿತು. ಬೆಳ್ಳಿಯ ಕಿರೀಟವನ್ನು ಹಿರಿಯ ಮದ್ದಳೆ ವಾದಕ, ಜಾನಪದ ತಜ್ನ ಹಿರಿಯಡಕ ಗೋಪಾಲ ರಾವ್ ಮೇಳಕ್ಕೆ ಸಮರ್ಪಿಸಿ ಶುಭ ಹಾರೈಸಿದರು.
ಕರಾವಳಿಯ ಗಂಡು ಮೆಟ್ಟಿನ ಕಲೆಯ ಅಂತರಂಗ ಬಿಡಿಸಿಟ್ಟ ಪ್ರಾತ್ಯಕ್ಷಿಕೆ
ಇದೊಂದು ವಿಶೇಷ ಕಾರ್ಯಕ್ರಮ. ಕರಾವಳಿ ಕರ್ನಾಟಕದ ಯಕ್ಷಗಾನ ವೇಷಗಳ ವರ್ಣ ವೆಭವ ಇಲ್ಲಿ ಸಾಕಾರಗೊಂಡಿತು. ಯಕ್ಷಗಾನವನ್ನಷ್ಟೇ ನೋಡಿದವರಿಗೆ ಅಲ್ಲಿ ಬಳಕೆಯಾಗುವ ವೇಷಗಳ ಬಗ್ಗೆ ಅಪೂರ್ವ ಒಳನೋಟ ಪಡೆಯುವ ಅವಕಾಶ ಸಿಕ್ಕಿತು. ಇದು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌ನ ಜನಪದ ಸಿರಿ ವೇದಿಕೆಯಲ್ಲಿ ಭಾನುವಾರ ನಡೆದ ವಿಶಿಷ್ಟ ಕಾರ್ಯಕ್ರಮ. ರಾಜ ವೇಷದ ಭೂಷಣ, ಬಣ್ಣದ ವೇಷಗಳ ರೌದ್ರ ಮುಖವರ್ಣಿಕೆ, ಸ್ತ್ರೀ ವೇಷಗಳ ಶೃಂಗಾರ, ಪುಂಡುವೇಷಗಳ ೀಂಗಣ ಎಲ್ಲವೂ ವೇದಿಕೆಯಲ್ಲಿ ಅನುರಣನ.
ಯಕ್ಷಗಾನ ಕನ್ನಡದ ಹೆಗ್ಗುರು: ಡಾ| ಜೋಶಿ
ಕನ್ನಡದ ಹೆಗ್ಗುರುತುಗಳಲ್ಲಿ ಒಂದಾದ ಕರಾವಳಿ ಯಕ್ಷಗಾನ ಪರಂಪರೆ ಕನ್ನಡ ಮನಸ್ಸನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು. ವಿದ್ಯಾಗಿರಿಯ ನಾಡೋಜ ಎಚ್‌.ಎಲ್‌. ನಾಗೇಗೌಡ ವೇದಿಕೆಯಲ್ಲಿ ರವಿವಾರ ನಡೆದ ಆಳ್ವಾಸ್‌ ವಿಶ್ವ ನುಡಿಸಿರಿ ವಿರಾಸತ್‌ - 2013ರ `ಜಾನಪದ ಸಿರಿ` ವಿಭಾಗದಲ್ಲಿ `ಕರಾವಳಿ ಕರ್ನಾಟಕದ ಯಕ್ಷಗಾನ ಪರಂಪರೆಗಳು` ಕುರಿತು ಅವರು ಪರಿಚಯಾತ್ಮಕ ಉಪನ್ಯಾಸವಿತ್ತರು. `ಯಕ್ಷಗಾನ ಬಯಲಾಟವು ನಾಟ್ಯಶಾಸ್ತ್ರಕ್ಕಿಂತ ಪ್ರಾಚೀನ. ಎಲ್ಲ ಕಲೆಗಳಂತೆ ಕಾಲೋಚಿತ, ಕಲೋಚಿತ ಸಂರಕ್ಷಣೆ, ಪರಿಷ್ಕರಣೆ, ಸಂವರ್ಧನೆ ಹಾಗೂ ವಿಸ್ತರಣೆಗೆ ಒಳಪಟ್ಟಾಗ ಮಾತ್ರ ಉಳಿದು ಬೆಳೆಯಲು ಸಾಧ್ಯ ಎಂದರು.
``ಬ್ಲಾಗಿಲನು ತೆರೆದು... `` - ಯಕ್ಷಸಾಹಿತ್ಯದ ಮಾದರಿಗಳು
‘ಯಕ್ಷಚಿಂತನ’ ಯಕ್ಷಗಾನ ಕಲೆಯ ವಿರಾಟ್‌ ಸ್ವರೂಪದ ತುಣುಕುಗಳನ್ನು ಕಾಣಿಸುವ ಒಂದು ಬರಹರೂಪಿ ಪ್ರಯತ್ನ. ರಾಜ್‌ಕುಮಾರ್‌ ಅವರ ಈ ಬ್ಲಾಗ್‌ ಯಕ್ಷಗಾನ ಪ್ರಸಂಗಗಳು, ಕಲಾವಿದರ ಪರಿಚಯ ಹಾಗೂ ಪ್ರಸಂಗಗಳ ಕಥನದ ವಿಶ್ಲೇಷಣೆಯನ್ನೂ ನಡೆಸುತ್ತದೆ. ಯಕ್ಷಗಾನದ ಬಗೆಗಿನ ಬ್ಲಾಗಿಗರ ಆಸಕ್ತಿ ಪ್ರತಿಬರಹದಲ್ಲೂ ಸ್ಪಷ್ಟವಾಗಿ ಕಾಣಿಸುತ್ತದೆ. ಯಕ್ಷಕಲೆಯ ಸಹೃದಯಿ ವೀಕ್ಷಕನಾಗಿ ಅದರ ಸಾಧ್ಯತೆಗಳನ್ನು ಹಂಚಿಕೊಳ್ಳಲು ಬಯಸುವ ರಾಜ್‌ಕುಮಾರ್‌ ಅವರಿಗೆ ಒಳ್ಳೆಯ ಭಾಷೆಯೂ ಇರುವುದರಿಂದ ಈ ಬ್ಲಾಗಿನ ಓದು ರುಚಿಕರವಾಗಿದೆ. ಆರಾಧನೆ, ಅಭಿಮಾನ, ಶುಷ್ಕ ಮಾಹಿತಿ ಅಥವಾ ಕಾರ್ಯಕ್ರಮಗಳ ಪಟ್ಟಿಗೆ ಸೀಮಿತವಾದ ಬರವಣಿಗೆ ಇದಾಗಿರದೆ ಒಳನೋಟಗಳನ್ನುಳ್ಳ ಬರಹಗಳು ಇಲ್ಲಿ ಸಂಕಲನಗೊಂಡಿವೆ. ಈ ಬರಹಗಳಿಗೆ ಪ್ರಬಂಧದ ಧಾಟಿಯೂ ಇರುವುದು ಗಮನಾರ್ಹ.
ಕೆರೆಯ ನೀರನು ಕೆರೆಗೆ ಚೆಲ್ಲಿ : ಚಿಟ್ಟಾಣಿ ಕಲಾಮ೦ದಿರ
ಯಕ್ಷರಂಗದ ಮೇರು ಕಲಾವಿದ 80ರ ಹೊಸ್ತಿಲಲ್ಲಿರುವ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಮನೆತುಂಬ ಪ್ರಶಸ್ತಿ, ಪುರಸ್ಕಾರ, ಫಲಕಗಳು ಹರಡಿಕೊಂಡಿವೆ. ಅವುಗಳನ್ನು ಸರಿಯಾಗಿ ಜೋಡಿಸಿಡಲೂ ಸಾಧ್ಯವಾಗದಷ್ಟು ತುಂಬಿಕೊಂಡಿವೆ. ಇನ್ನು ಮುಂದೆ ಅವುಗಳೆಲ್ಲ ಪದ್ಮಶ್ರೀ ಚಿಟ್ಟಾಣಿ ಕಲಾಮಂದಿರದಲ್ಲಿ ಕಂಗೊಳಿಸಲಿವೆ. ಚಿಟ್ಟಾಣಿ ಅವರಿಗೆ ದೊರೆತ ಪ್ರಶಸ್ತಿ, ಪುರಸ್ಕಾರಗಳು ಅಂದವಾಗಿ, ವ್ಯವಸ್ಥಿತವಾಗಿ ಪ್ರದರ್ಶನಗೊಳ್ಳಲಿವೆ. ಚಿಟ್ಟಾಣಿ ಅವರ ಮನೆಯಲ್ಲಿ ಎರಡು ಶೋಕೇಸ್‌ಗಳಿವೆ. ಅವುಗಳೆಲ್ಲ ಭರ್ತಿಯಾಗಿವೆ. ಮತ್ತೆ ಪ್ರಶಸ್ತಿ ಫಲಕಗಳನ್ನು ಗೋಡೆಗೆ ಅಂಟಿಸಲು ಆರಂಭಿಸಿದರು. ಗೋಡೆಯೂ ಸಾಲದಾಯಿತು. ಈಗ ನೆಲದ ಮೇಲೆ ಸ್ಮರಣಿಕೆಗಳನ್ನು, ಪ್ರಶಸ್ತಿಗಳನ್ನು ಅನಿವಾರ್ಯವಾಗಿ ಇಡುವ ಪರಿಸ್ಥಿತಿ ಉಂಟಾಗಿದೆ. ನೆಲದ ತುಂಬ ಹರಡಿಕೊಳ್ಳುತ್ತಿವೆ. ಚಿಟ್ಟಾಣಿ ಅವರಿಗೆ ಇವುಗಳನ್ನೆಲ್ಲ ಎಲ್ಲಿ ಇಡಬೇಕೆನ್ನುವುದೇ ದೊಡ್ಡ ಸಮಸ್ಯೆಯಾಗಿತ್ತು.
ಮನೆ ಬಾಗಿಲಲ್ಲೇ ಚಿಟ್ಟಾಣಿ ‘ಅರ್ಜುನ’ ಸ್ವಾಗತ
ಆ ಮನೆಗೆ ನೀವು ಹೋದರೆ 24 ಗಂಟೆಯೂ ಬಾಗಿಲಲ್ಲೇ ಅರ್ಜುನ ವೇಷಧಾರಿ ಚಿಟ್ಟಾಣಿ ಕೈ ಮುಗಿದು, ನಸು ನಕ್ಕು ಸ್ವಾಗತಿಸುತ್ತಾರೆ... ಪದ್ಮಶ್ರೀ ಪುರಸ್ಕೃತ, ಯಕ್ಷಗಾನ ರಂಗದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಮನೆಯ ಎದುರು ಬಾಗಿಲಲ್ಲಿ ಅರ್ಜುನ ವೇಷದ ಕಲಾಕೃತಿಯನ್ನು ಕುಮಟಾ ಮೂರೂರು ಕಲ್ಲಬ್ಬೆಯ ಶಿವರಾಮ ಆಚಾರಿ ಚಿಟ್ಟಾಣಿಯೇ ಬಾಗಿಲಲ್ಲಿ ಜೀವ ತಳೆದಂತೆ ರೂಪಿಸಿದ್ದಾರೆ. ಹೊನ್ನಾವರದಿಂದ 20 ಕಿ.ಮೀ. ದೂರದ ಗೇರುಸೊಪ್ಪ ರಸ್ತೆಯಲ್ಲಿ ಚಿಟ್ಟಾಣಿ ಮನೆಯಿದೆ. ವರ್ಷದ ಹಿಂದೆ 25ರಿಂದ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಗೃಹಪ್ರವೇಶೋತ್ಸವ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಸ್ವಾಮಿಗಳ ಉಪಸ್ಥಿತಿಯಲ್ಲಿ ನಡೆದಿತ್ತು.
ಪುಂಡರಿಕಾಕ್ಷ ಉಪಾಧ್ಯಾಯ ಅವರಿಗೆ `ಕಲ್ಕೂರ ಯಕ್ಷಸಿರಿ ಪುರಸ್ಕಾರ`
ಯಕ್ಷಗಾನ ನವರಸಗಳಿಂದ ಸಮ್ಮಿಳಿತ ಕಲೆಯಾಗಿದ್ದು, ಇತರ ಕಲಾ ಪ್ರಕಾರಗಳಿಗಿಂತ ಭಿನ್ನವಾಗಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಹರಿನಾರಾಯಣ ಅಸ್ರಣ್ಣ ಅಭಿಪ್ರಾಯಪಟ್ಟರು. ಕಲ್ಕೂರ ಪ್ರತಿಷ್ಠಾನ ವತಿಯಿಂದ, ಕರ್ಣಾಟಕ ಬ್ಯಾಂಕ್‌ ಸಹಯೋಗದಲ್ಲಿ ನಡೆದ ಕಲ್ಕೂರ ಯಕ್ಷ ಸಿರಿ ಪುರಸ್ಕಾರ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಸ್ತ್ರೀ ಪಾತ್ರಧಾರಿ ಪುಂಡರಿಕಾಕ್ಷ ಉಪಾಧ್ಯಾಯ ಅವರಿಗೆ `ಕಲ್ಕೂರ ಯಕ್ಷಸಿರಿ ಪುರಸ್ಕಾರ` ನೀಡಿ ಗೌರವಿಸಲಾಯಿತು.
ಇಂದಿನಿಂದ `ಯಕ್ಷಗಾನ ಜ್ಞಾನಯಜ್ಞ` ಸಪ್ತಾಹ
ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ನೀಗಿಸುವ ವಿನೂತನ ಪ್ರಯತ್ನಕ್ಕೆ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮುಂದಾಗಿದ್ದಾರೆ. `ಯಕ್ಷಗಾನ ಜ್ಞಾನಯಜ್ಞ` ಎಂಬ ತಾಳಮದ್ದಳೆ ಸಪ್ತಾಹವನ್ನು ನವೆಂಬರ್ 15ರಿಂದ 21ರವರೆಗೆ ಆಯೋಜಿಸಿದ್ದಾರೆ. ಯಕ್ಷಪ್ರೇಮಿಗಳೇ ಇದಕ್ಕೆ ದಾತಾರರು. ನಾಗೂರು ಸಮೀಪದ ಶ್ರೀ ಗೋಪಾಲಕೃಷ್ಣ ಕಲಾಮಂದಿರಲ್ಲಿ ನಿರ್ಮಿಸಿರುವ ದಿ.ತೆಕ್ಕಟೆ ಆನಂದ ಮಾಸ್ತರ್ ಸ್ಮರಣ ವೇದಿಕೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕಿರಿಮಂಜೇಶ್ವರ, ನಾಗೂರು ಹಾಗೂ ಸುತ್ತಲಿನ ಪ್ರದೇಶಗಳ ನಾಗರಿಕರೇ ಈ ಪ್ರಯತ್ನಕ್ಕೆ ಸಹಕಾರಿಗಳಾಗಿ ನಿಂತಿದ್ದಾರೆ.
ಯಕ್ಷಗಾನ ಮೂಲಸ್ವರೂಪ ಬದಲಿಸುವುದು ಸರಿಯಲ್ಲ:ಶಿವಾನಂದ ಹೆಗಡೆ ಕೆರೆಮನೆ
ಯಾವುದೇ ಕಲಾಪ್ರಾಕಾರದ ಕುರಿತು ಚಿಂತನೆಗಳು,ಚರ್ಚೆಗಳು ಆಗಬೇಕಾದ ಅವಶ್ಯಕವಿದ್ದು ಆದರೆ ಅದರ ಆವರಣ ಹೊರತುಪಡಿಸಿ ಬದಲಾವಣೆ ಮಾಡುವುದು ಸೂಕ್ತವಲ್ಲ ಎಂದು ಗುಣವಂತೆಯ ಮಯ ಯಕ್ಷಗಾನ ಕೇಂದ್ರದ ನಿರ್ದೇಶಕ ಶಿವಾನಂದ ಹೆಗಡೆ ಕೆರಮನೆ ಹೇಳಿದರು. ಯಕ್ಷಗಾನದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿದ್ದು, ಪೌರಾಣಿಕ ಪ್ರಸಂಗಗಳ ಜಾಗದಲ್ಲಿ ಸಿನೆಮಾ ಕತೆಗಳು ಬರುತ್ತಿವೆ, ಪ್ರೇಕ್ಷಕರಿಗಾಗಿ ಈ ಬದಲಾವಣೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಪ್ರೇಕ್ಷಕರಿಗಾಗಿ ಯಕ್ಷಗಾನದ ಮೂಲಸ್ವರೂಪ ಬದಲಿಸುವುದು ಸರಿಯಲ್ಲ,ಕೆಲವೊಂದು ಪ್ರಾಕಾರಗಳು ಮೂಲ ಸ್ವರೂಪದಲ್ಲಿದ್ದರೆ ಚೆಂದ,ಪ್ರೇಕ್ಷಕರೂ ಅದನ್ನೇ ಒಪ್ಪುತ್ತಾರೆ ಎಂದು ಅವರು ಹೇಳಿದರು.
ಮಹಿಳಾ ಯಕ್ಷಗಾನ ತಾಳಮದ್ದಳೆ ಸ್ಪರ್ಧೆ ಸಮಾರೋಪ
ಮಹಿಳೆಯರಲ್ಲೂ ಯಕ್ಷಗಾನದ ಬಗ್ಗೆ ಅಭಿಮಾನ; ಅಭಿರುಚಿ ಕಡಿಮೆಯಾಗಿಲ್ಲ. ಪುರುಷ ಪ್ರಧಾನ ಯಕ್ಷಗಾನ ಕಲೆಗೆ ಮಹಿಳೆಯರೂ ಲಗ್ಗೆಯಿಟ್ಟಿದ್ದಾರೆ. ಮಹಿಳೆಯರು ಪುರುಷರಗೊಂದಿಗೆ ಜತೆಗೂಡಿ ಕಲೆಯ ಪ್ರೌಢಿಮೆಯನ್ನು ಬೆಳೆಸುವುದರ ಜತೆಗೆ ಹಿಮ್ಮೇಳದಲ್ಲೂ ಅಭಿರುಚಿ ಬೆಳೆಸಿಕೊಳ್ಳಬೇಕಾಗಿದೆಯೆಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯರು ನೀಡಿದರು. ಅವರು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಆಳ್ವಾಸ್‌ ವಿಶ್ವನುಡಿಸಿರಿ ವಿರಾಸತ್‌ - 2013 ಅಂಗವಾಗಿ ಮಹಿಳಾ ಯಕ್ಷಗಾನ ತಾಳಮದ್ದಳೆ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ರಂಗ ಪ್ರದರ್ಶನ ಕಾಣಲಿದೆ ವಿದ್ಯಾರ್ಥಿಯ ಯಕ್ಷ ಪ್ರಸಂಗ!
ಪ್ರತಿಭಾನ್ವಿತ ವಿದ್ಯಾರ್ಥಿಯೊಬ್ಬ ರಚಿಸಿದ ಯಕ್ಷಗಾನ ಪ್ರಸಂಗದ ಪ್ರದರ್ಶನ ನ. 12ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ದ್ವಿತೀಯ ಬಿ.ಎ. ವಿದ್ಯಾರ್ಥಿ ಶಿವಕುಮಾರ್ ಬಿ.ಎ.(18) ಅಳಗೋಡು ಪುರಾಣ ಆಧರಿತ ಮಹೀಂದ್ರ ಮಹಭಿಷ ಯಕ್ಷಗಾನ ನೂತನ ಪ್ರಸಂಗ ರಚಿಸಿದ್ದು ಚಿಟ್ಟಾಣಿ ಮೇಳದಿಂದ ಪ್ರದರ್ಶನಗೊಳ್ಳಲಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ನಿಟ್ಟೂರು ಅಳಗೋಡಿನ ಅನಂತಮೂರ್ತಿ ಭಟ್, ಗೀತಾ ದಂಪತಿ ಪುತ್ರನಾದ ಶಿವಕುಮಾರ್ ಶೈಕ್ಷಣಿಕ ಬಿಡುವಿನ ವೇಳೆಯಲ್ಲಿ ಪೌರಾಣಿಕ ಕಥಾಭಾಗವನ್ನು ರಸಾತ್ಮಕವಾಗಿ ಬರೆದಿದ್ದಾರೆ. ಮನೆಯಲ್ಲಿ ಯಕ್ಷಗಾನ ಕಲಿಕೆಗೆ ನೀಡಿದ ಪ್ರೋತ್ಸಾಹವೇ ಪ್ರಸಂಗ ರಚನೆಗೆ ಪ್ರೇರಣೆ.
ರಾಜ್ಯ ಪ್ರಶಸ್ತಿಗೆ ಅರ್ಜಿಯೇ ಮಾನದಂಡವಲ್ಲ: ಸಾಮಗ
ರಾಜ್ಯ ಪ್ರಶಸ್ತಿಗೆ ಅರ್ಹರು ಅರ್ಜಿ ಸಲ್ಲಿಸುವುದು ಈ ನಿಟ್ಟಿನ ಆಯ್ಕೆ ಸಮಿತಿಯ ಮಾಹಿತಿಗಾಗಿ ಅಗತ್ಯ. ಹಾಗೆಂದು ಅರ್ಜಿದಾರರು ನೀಡಿದ ಎಲ್ಲ ಮಾಹಿತಿ ಸತ್ಯವೇ ಅಸತ್ಯವೇ ಎಂದು ಪರಿಶೀಲಿಸುವುದು ಆಯ್ಕೆದಾರರಿಗೆ ಬಿಟ್ಟ ವಿಚಾರವಾಗಿದ್ದು, ಅರ್ಜಿ ಆಧರಿಸಿ ಎಂದೂ ಪ್ರಶಸ್ತಿ ದೊರೆಯುವುದಿಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ನಿಕಟ ಪೂರ್ವ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ ಹೇಳಿದರು. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪಡೆದ ಯಕ್ಷಗಾನ ಕಲಾವಿದ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ್ ಅವರಿಗೆ ಶನಿವಾರ ಕೃಷ್ಣಾಪುರದಲ್ಲಿ ನೀಡಲಾದ ನಾಗರಿಕ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಡುಪಿ ಯಕ್ಷಗಾನ ಕಲಾರಂಗ: ಯಕ್ಷಗಾನ ಪ್ರಶಸ್ತಿ ಪ್ರಕಟ
ಉಡುಪಿಯ ಯಕ್ಷಗಾನ ಕಲಾರಂಗವು ಪ್ರತಿವರ್ಷ ನೀಡುವ ಯಕ್ಷಗಾನ ಪ್ರಶಸ್ತಿಯ 2013ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆಗೊಂಡಿದೆ. ಈ ಬಾರಿ ಎರಡು ಪ್ರಶಸ್ತಿಗಳ ಸೇರ್ಪಡೆಯ ಜತೆಗೆ ಒಟ್ಟು 15 ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. 25,000 ರೂ. ನಗದು ಪುರಸ್ಕಾರವನ್ನೊಳಗೊಂಡ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಯನ್ನು ಬೆಳಿಯೂರು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಗೆ ನೀಡಲಾಗುವುದು ಎಂದು ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್‌ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ: ಯಕ್ಷಗಾನ ಕಲಾವಿದರ ಕಡೆಗಣನೆ
ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಅರ್ಹ ಯಕ್ಷಗಾನ ಕಲಾವಿದರನ್ನು ಹಾಗೂ ಯಕ್ಷಗಾನಕ್ಕಾಗಿಯೆ ದುಡಿಯುತ್ತಿರುವವರನ್ನು ಕಡೆಗಣಿಸಿರುವುದು ಯಕ್ಷಗಾನ ವಲಯದಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹತೆ ಇದ್ದೂ ಕಳೆದ ಹಲವು ವರ್ಷಗಳಿಂದ ಪ್ರಶಸ್ತಿಯಿಂದ ವಂಚಿತರಾಗುತ್ತಿರುವ ಕಲಾವಿದರ ಸಂಖ್ಯೆ ಬಡಗು ಹಾಗೂ ತೆಂಕು ಹೀಗೆ ಎರಡು ತಿಟ್ಟುಗಳಲ್ಲಿಯೂ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಸಾಕಷ್ಟು ಜನರಿದ್ದಾರೆ. ನಿರಂತರವಾಗಿ ಯಕ್ಷಗಾನ ರಂಗದಲ್ಲಿ ತೊಡಗಿಕೊಂಡು ಸತತ ಸಾಧನೆ ಮಾಡುತ್ತಿರುವ ಕೃಷ್ಣ ಯಾಜಿ ಬಳ್ಕೂರ, ಹಿಮ್ಮೇಳದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ ಅದ್ವಿತೀಯ ಮೃದಂಗ ವಾದಕ ಶಂಕರ ಭಾಗವತ ಯಲ್ಲಾಪುರ, ಯಕ್ಷ ಸೇವೆಯನ್ನು ಸಮರ್ಥವಾಗಿ ನಡೆಸುತ್ತಿರುವ ಗೋಪಾಲ ಆಚಾರ್ಯ ತೀರ್ಥಹಳ್ಳಿ, ಹೆಮ್ಮೆಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಎಂ.ಎ. ನಾಯ್ಕ ಸೇರಿದಂತೆ ಕಲಾವಿದರ ಸಮೂಹವೇ ಬಡಗು ತಿಟ್ಟಿನಲ್ಲಿದೆ.
20 ಗಂಟೆಗಳ ನಾನ್‌ಸ್ಟಾಪ್ ಯಕ್ಷಗಾನ
ಬರೋಬ್ಬರಿ 20 ಗಂಟೆಗಳ ನಾನ್‌ಸ್ಟಾಪ್ ಯಕ್ಷಗಾನ. 1215 ನಿಮಿಷಗಳ ಅವಿರತ ಹೆಜ್ಜೆ-ಗೆಜ್ಜೆ, ಚೆಂಡೆ-ಮದ್ದಳೆಗಳ ಅನುರಣನ. ಇದು ಯಕ್ಷಗಾನ ಲೋಕದ ಮಹಾ ಉತ್ಸವ ಎಂದೇ ಪರಿಗಣಿತವಾಗಿರುವ ಸಂಪಾಜೆ ಯಕ್ಷೋತ್ಸವ 2013ರ ರಸದೌತಣ.
ಶನಿವಾರ ಸಂಜೆ ಸರಿಯಾಗಿ 5 ಗಂಟೆಗೆ- ಶ್ರೀ ಗುರುಗಣಾಪತಯೇ ನಮಃ ಎಂದು ಆರಂಭಗೊಂಡ ಯಕ್ಷ ಸಂಭ್ರಮಕ್ಕೆ ಮಂಗಳ ಹಾಡಿದ್ದು ಭಾನುವಾರ 1.15ಕ್ಕೆ. ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ಕಲ್ಲುಗಂಡಿ ಶಾಲಾ ವಠಾರದಲ್ಲಿ ನಡೆದದ್ದು ಕಾಳಿದಾಸ -ವೀರಚಂದ್ರಧ್ವಜ-ತ್ರಿಪುರ ಮಥನ ಮತ್ತು ಮತ್ಸ್ಯಾವತಾರ ಪ್ರಸಂಗಗಳ ಪ್ರದರ್ಶನ. 10 ಮಂದಿ ಸುಪ್ರಸಿದ್ಧ ಭಾಗವತರು, 12 ಮಂದಿ ಚೆಂಡೆ, ಮದ್ದಳೆ, ಗಾರುಡಿಗರು 15 ಬಣ್ಣದ ವೇಷಗಳ ಅಬ್ಬರದ ಹೋರು ಮತ್ತು ತೆಂಕು ಬಡಗಿನ 77 ಪ್ರಖ್ಯಾತ ಕಲಾವಿದರು ಕಟ್ಟಿದ ಯಕ್ಷ ವೈಭವ ಬಲು ಜೋರು.
ಯಕ್ಷಗಾನ ಜ್ಞಾನ ಸಮೃದ್ದ ಕಲೆ: ಎಡನೀರು ಶ್ರೀ
ಯಕ್ಷಗಾನ ಎಲ್ಲ ರೀತಿಯಲ್ಲಿ ಜ್ಞಾನ ಸಮೃದ್ಧ ಕಲೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು. ಈ ಕೆಲಸ ಎಲ್ಲರಿಂದಲೂ ಆಗಬೇಕು ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ತಿಳಿಸಿದರು. ಅವರು ರವಿವಾರ ಸುಳ್ಯ ಸ್ನೇಹ ಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಮತ್ತು ಯಕ್ಷಗಾನ ಕಲಾ ಪರಿಷತ್‌ನ ರಾಜ್ಯ ಮಟ್ಟದ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ನವೆ೦ಬರ್ 5ರಿಂದ ಚಿಟ್ಟಾಣಿ ಯಕ್ಷಗಾನ ಸಪ್ತಾಹ
ಉಡುಪಿಯ ಚಿಟ್ಟಾಣಿ ಅಭಿಮಾನ ಬಳಗ, ಯಕ್ಷಗಾನ ಕಲಾ ರಂಗ ಹಾಗೂ ಪರ್ಯಾಯ ಸೋದೆ ಮಠದ ಆಶ್ರಯದಲ್ಲಿ ನ.5ರಿಂದ 11ರವರೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಚಿಟ್ಟಾಣಿ ಯಕ್ಷಗಾನ ಸಪ್ತಾಹ ನಡೆಯಲಿದೆ ಎಂದು ಅಭಿಮಾನಿ ಬಳಗದ ಸಂಚಾಲಕ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದ ಅವರು, ನ.5ರಂದು ಸಂಜೆ 6 ಗಂಟೆಗೆ ಪರ್ಯಾಯ ಸೋದೆ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕ ಪ್ರಮೋದ್ ಮಧ್ವರಾಜ್ ಹಾಗೂ ಚೆನ್ನೈ ಕರ್ನಾಟಕ ಸಂಘದ ಅಧ್ಯಕ್ಷ ಪಿ. ನಾರಾಯಣ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಚಿಟ್ಟಾಣಿ ರಾಮಚಂದ್ರಗೆ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ
ಯಕ್ಷಗಾನದ ಪರಮೋಚ್ಛ ಕಲಾವಿದ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಯನ್ನು ಪದ್ಮಶ್ರೀ ಪುರಸ್ಕೃತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಇವರಿಗೆ ಹಾಗೂ ಯಕ್ಷಗಾನದ ಸರ್ವ ಸಮರ್ಥ ಕಲಾವಿದ ಕೆರೆಮನೆ ಗಜಾನನ ಹೆಗಡೆ ಹೆಸರಿನಲ್ಲಿ ಸ್ಥಾಪಿತವಾದ ಪ್ರಶಸ್ತಿ ಹಾಸ್ಯ ಚಕ್ರವರ್ತಿ ಕುಂಜಾಲು ರಾಮಕೃಷ್ಣ ನಾಯಕ್ ಇವರಿಗೆ ಘೋಷಿಸಲಾಗಿದೆ ಎಂದು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇದರ ನಿರ್ದೇಶಕ ಶಿವಾನಂದ ಹೆಗಡೆ ಕೆರೆಮನೆ ತಿಳಿಸಿದ್ದಾರೆ.
2013ರ ಪ್ರತಿಷ್ಠಿತ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಯನ್ನು ಬಡಗು ತಿಟ್ಟಿನ ಮೇರು ನಟ ಚಿಟ್ಟಾಣಿ ರಾಮಚಂದ್ರ ಹೆಗಡೆ ಇವರಿಗೆ ನೀಡಲು ಮಂಡಳಿ ನಿರ್ಧರಿಸಿದ್ದು, ಈ ಪ್ರಶಸ್ತಿ ರು. 10 ಸಾವಿರ ಮೊತ್ತ ಪ್ರಶಸ್ತಿ ಪತ್ರ ಮತ್ತು ಗೌರವ ಒಳಗೊಂಡಿದೆ.
ಕಿರುತೆರೆಯಲ್ಲಿ ಯಕ್ಷ ರಾಮಾಯಣ
ಸಂಪೂರ್ಣ ರಾಮಾಯಣವನ್ನು ಕಿರು ತೆರೆಯಲ್ಲಿ ಬಿತ್ತರಿಸುವ ನಿಟ್ಟಿನಲ್ಲಿ ಉಡುಪಿಯ ಒಳಕಾಡು ಮಾರುತಿ ಲೇನ್‌ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಕಳೆದ ಎಂಟು ದಿನಗಳಿಂದ ಯಕ್ಷಗಾನ ಪ್ರದರ್ಶನದ ಚಿತ್ರೀಕರಣ ನಡೆಯುತ್ತಿದೆ. ಪೆರಂಪಳ್ಳಿಯ ಯಕ್ಷ ಸಂಗೀತ ನಾದ ವೈಭವಂ ವತಿಯಿಂದ 200ರಿಂದ 250 ಕಂತಿನ ಯಕ್ಷಗಾನದ ಚಿತ್ರೀಕರಣ ನಡೆಯಲಿದ್ದು ಈಗಾಗಲೇ 30ರಿಂದ 40 ಕಂತಿನ ಚಿತ್ರೀಕರಣ ನಡೆದಿದೆ. ಇನ್ನೆರಡು ದಿನದ ಚಿತ್ರೀಕರಣ ಬಾಕಿಯಿದೆ.
ಕೋಳ್ಯೂರಿಗೆ ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ ಪ್ರದಾನ
ಯಕ್ಷಗಾನ ಕಲೆಗೆ ಸಮಾನವಾದ ಇನ್ನೊಂದು ಕಲೆಯಿಲ್ಲ. ಸರ್ವತೋಮುಖ ಕಲಾ ಪ್ರೌಢಿಮೆ ಮೆರೆಯಲು ಯಕ್ಷಗಾನದಿಂದ ಮಾತ್ರ ಸಾಧ್ಯ. ಸಂಗೀತ, ನೃತ್ಯ, ನವರಸ ಭಾವಗಳನ್ನು ತೋರ್ಪಡಿಸಲು ಯಕ್ಷಗಾನದಲ್ಲಿ ಮಾತ್ರ ಸಾಧ್ಯ ಎಂದು ಉಡುಪಿ ಪುತ್ತಿಗೆ ಮಠದ ಜಗದ್ಗುರು ಮಧ್ವಾಚಾರ್ಯ ಸಂಸ್ಥಾನನದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ನಗರದ ಪುರಭವನದಲ್ಲಿ ಬುಧವಾರ ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಡೆದ ಡಾ| ಕೋಳ್ಯೂರು ರಾಮಚಂದ್ರ ರಾವ್‌ ಅವರಿಗೆ ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಸುಳ್ಯದಲ್ಲಿ ಮೇಳೈಸುತ್ತಿರುವ ಯಕ್ಷ ಸಂಭ್ರಮ
ಪ್ರತಿದಿನ ಮೂರ್ನಾಲ್ಕು ಪ್ರಸಂಗಗಳ ಪ್ರದರ್ಶನ. ಪಾತ್ರದ ಬಗ್ಗೆ ಉಪನ್ಯಾಸ, ಅಗಲಿದ ಯಕ್ಷ ದಿಗ್ಗಜರ ಸಂಸ್ಮರಣೆ, ಮುಖವರ್ಣಿಕೆ ವಿವರಣೆ, ಪ್ರಸಿದ್ಧ ಯಕ್ಷ ಕಲಾವಿದರ ಸಮಾಗಮ. ಇದು ಅ. 27ರವರೆಗೆ ಸುಳ್ಯದ ಸ್ನೇಹ ಶಾಲೆಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಮತ್ತು ಯಕ್ಷಗಾನ ಕಲಾ ರಾಜ್ಯ ಮಟ್ಟದ ಕಾರ್ಯಗಾರದ ಸಾರಾಂಶ. ಅ. 17ರಿಂದ ಕಾರ್ಯಾಗಾರ ನಡೆಯುತ್ತಿದೆ. ಪ್ರತಿದಿನ ರಾತ್ರಿ 10 ಗಂಟೆಯವರೆಗೆ ಪ್ರದರ್ಶನ. ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಈ ಕಾರ್ಯಾಗಾರ ನಡೆಯುತ್ತಿದೆ.
ಕಟೀಲಿನಲ್ಲಿ ಮಕ್ಕಳಾಟದ ಕಲಾ ಪರ್ವ
ಭಳಿರೇ..ಶಹಬ್ಬಾಸ್...ಕಟೀಲಿನ ಶ್ರೀ ದುರ್ಗಾ ಮಕ್ಕಳ ಮೇಳದ ಬಾಲ ಕಲಾವಿದರು ಮೇಳದ ಪಂಚಮ ವರ್ಷದ ಕಲಾ ಪರ್ವದಲ್ಲಿ ಮಹತ್ವದ ದಾಖಲೆಯೊಂದನ್ನು ಬರೆಯಿಸಿದ್ದಾರೆ. ಅ. 20ರಂದು ಕಟೀಲು ದೇವಳದ ರಥಬೀದಿಯಲ್ಲಿ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದವರು ಪ್ರಸ್ತುತ ಪಡಿಸುವ ``ಪಂಚವಟಿ`` ಮೇಳದ ನೂರನೇ ಪ್ರದರ್ಶನವಾಗಿ ಮೂಡಿ ಬರಲಿದೆ. ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳಕ್ಕೆ 5 ವರ್ಷಗಳಲ್ಲಿ ದಾಖಲಾದ ಒಟ್ಟು ವಿದ್ಯಾರ್ಥಿಗಳು 139. ಅವರಲ್ಲಿ ಹುಡುಗಿಯರು 112, ಹುಡುಗರು 29. ಸಂಖ್ಯಾ ಬಲದಲ್ಲಿ ಹುಡುಗಿಯರು ಶತಕ ದಾಟಿದ್ದಾರೆ. ಮೇಳದಲ್ಲಿ ಹಾಗೂ ತರಬೇತಿ ತರಗತಿಗಳಲ್ಲಿರುವವರು 5ರಿಂದ 10ನೇ ತರಗತಿ ವರೆಗೆ ಶಾಲೆ ಕಲಿಯುವ ಮಕ್ಕಳು. ವರ್ಷಂಪ್ರತಿ ಉಚಿತ ಪ್ರವಾಸ, ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಮೂಲಕ ಉತ್ತೇಜನ ನೀಡಲಾಗುತ್ತದೆ. ಮೇಳದಲ್ಲಿ ಮತ್ತು ತರಗತಿಗ ಳಲ್ಲಿ ಕೇವಲ ಕಟೀಲು ಶಾಲೆಗಳ ಮಕ್ಕಳು ಮಾತ್ರವಲ್ಲದೆ ಅವಿಭಜಿತ ದ.ಕ, ಉಡುಪಿ ಜಿಲ್ಲೆಗಳ ನಾನಾ ಕಡೆಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ.
ಮರೆಯಲಾರದ ಕಾರ್ಯಕ್ರಮ - ಕಲಾಪ್ರಕಾಶ ಪ್ರತಿಷ್ಟಾನದ ರಜತೋತ್ಸವ ಸಂಭ್ರಮ
ಬೃಹನ್ಮುಂಬಯಿಯ ಮಹಾಜನತೆಗೆ ಕಳೆದ 25 ವರ್ಷದಿಂದ ಯಕ್ಷಗಾನದ ವಿವಿದ ಪ್ರಾಕಾರಗಳ ಸವಿಯನ್ನು ಉಣಿಸಿಕೊಂಡು ಬರುತ್ತಿರುವ, ಗೌರವಾನ್ವಿತ ಕಲಾಸಂಘಟಕ ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್ ಸಾರಥ್ಯದ ಸಾಂಸ್ಕ್ರತಿಕ ಸಂಘಟನೆ ಕಲಾಪ್ರಕಾಶ ಪ್ರತಿಷ್ಟಾನದ ಬೆಳ್ಳಿ ಹಬ್ಬ ಕಾರ್ಯಕ್ರಮ ಮುಂಬೈ ಕುರ್ಲಾ ಪೂರ್ವ ಬಂಟರ ಭವನದಲ್ಲಿ ವೈವಿದ್ಯಮಯ ಯಕ್ಷಗಾನ ಸಂಬಂದಿ ಕಾರ್ಯಕ್ರಮದೊಂದಿಗೆ ದಿನಪೂರ್ತಿ ನೆಡೆಯಿತು.
ಬಂಟರ ಭವನದಲ್ಲಿ ಪ್ರಕಾಶಮಾನಗೊಂಡ ಕಲಾ ಪ್ರಕಾಶ ಪ್ರತಿಷ್ಠಾನದ ರಜತೋತ್ಸವ ಸಂಭ್ರಮ
ಬೃಹನ್ಮುಂಬಯಿಯಲ್ಲಿನ ಗೌರವಾನ್ವಿತ ಕಲಾ ಸಂಘಟಕ ಪ್ರಕಾಶ್ ಎಂ.ಶೆಟ್ಟಿ ಸುರತ್ಕಲ್ ಸಾರಥ್ಯದ ಸಾಂಸ್ಕೃತಿಕ ಸಂಘಟನೆ ಪ್ರಸಿದ್ಧಿಯ ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿ ಸಂಸ್ಥೆಯು ಇಂದಿಲ್ಲಿ ಬುಧವಾರ ಕುರ್ಲಾ ಪೂರ್ವದಲ್ಲಿನ ಬಂಟರ ಭವನದಲ್ಲಿ ದಿನಪೂರ್ತಿ ಕಾರ್ಯಕ್ರಮಗಳೊಂದಿಗೆ ರಜತೋತ್ಸವ ಸಂಭ್ರಮಿಸಿತು. ಶ್ರೀ ಉಮಾಮಹೇಶ್ವರೀ ದೇವಸ್ಥಾನ ಜೆರಿಮರಿ ಇದರ ಶ್ರೀ ಎಸ್.ಎನ್.ಉಡುಪ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮೀರಾರೋಡ್ನ ಶ್ರೀ ಸಾಣೂರು ಸಾತಿಂಜ ಜನಾರ್ಧನ ಭಟ್ ಪಾದಾರ್ಪಣೆಗೈದು ದೀಪ ಪ್ರಜ್ವಲಿಸಿ ಪ್ರತಿಷ್ಠಾನದ ಬೆಳ್ಳಿ ಬೆಳಕು ಸಂಭ್ರಮಕ್ಕೆ ಶುಭಾಶೀರ್ವಾದಗೈದರು.
ಪ್ರಮದೆಯರ ಯಕ್ಷ ಹೆಜ್ಜೆ
ತಂದೆಯ ಯಕ್ಷಗಾನ ನೋಡಿ ಪುತ್ರಿಯರೂ ಯಕ್ಷಗಾನ ಕಲಾವಿದರಾದ ಯಶಸ್ವಿಗಾಥೆ ಇದು.ಏಕವ್ಯಕ್ತಿ ಯಕ್ಷಗಾನದಿಂದ ಪ್ರಸಿದ್ಧರಾಗಿರುವ ಮಂಟಪ ಪ್ರಭಾಕರ ಉಪಾಧ್ಯಾಯ ನಿಮಗೆ ಗೊತ್ತು. ಅವರ ಇಬ್ಬರು ಪುತ್ರಿಯರೂ ಯಕ್ಷಗಾನ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ದಂತ ವೈದ್ಯೆಯಾಗಲು ಎಂಡಿಎಸ್ ಓದುತ್ತಿರುವ ಹಿರಿಯ ಪುತ್ರಿ ಮಾಧುರಿ ಹಾಗೂ ಎಂ.ಟೆಕ್ ಓದಿ ಬೆಂಗಳೂರಿನಲ್ಲಿ ಗ್ಲೋಬಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಪ್ರಮದಾ ಒಟ್ಟಿಗೇ ಯಕ್ಷಗಾನ ಪ್ರದರ್ಶನ ನೀಡುತ್ತಾರೆ. ಜೊತೆಗೆ ಪ್ರಭಾಕರ ಅವರ ಯಕ್ಷಗಾನ ಇರುವ ಕಡೆಯಲ್ಲೂ ಪ್ರದರ್ಶನ ಕೊಡುತ್ತಾರೆ.
ಸುರತ್ಕಲ್‌: ಅಗರಿ ಯಕ್ಷ ವೈಭವಕ್ಕೆ ಚಾಲನೆ
ಯಕ್ಷಗಾನ ನಿತ್ಯಾನ್ವೇಷಣಶಾಲಿ ಕಲೆಯಾಗಿದ್ದು ಕಾಲ ಕಾಲಕ್ಕೆ ಸ್ಥಿತ್ಯಂತರಗಳನ್ನು ಪಡೆದು ಪೌರಾಣಿಕ ಲೋಕವನ್ನು ಅಧುನಿಕ ಕಾಲಕ್ಕೂ ಪ್ರವಹಿಸುವಂತೆ ಮಾಡಿದ ಶ್ರೇಷ್ಠ ಕಲಾಪ್ರಕಾರವಾಗಿದೆ ಎಂದು ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಮತ್ತು ಕಾರ್ಯಕ್ರಮ ಮುಖ್ಯಸ್ಥ ಡಾ| ವಸಂತ ಕುಮಾರ್‌ ಪೆರ್ಲ ಹೇಳಿದರು.
ನಶಿಸುತ್ತಿರುವ ಯಕ್ಷಗಾನ ಕಲೆಯ ಪುನರುಜ್ಜೀವನಕ್ಕೆ ಸಮಕಾಲೀನ ಗಾಣಿಗ ಕಲಾವಿದರ ಕೊಡುಗೆಯೂ ಅಪಾರ : ಎಸ್.ವಿ.ಶೆಟ್ಟಿ
ಯಕ್ಷಗಾನಕ್ಕೆ ಪ್ರಥಮ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಹಾರಾಡಿ ರಾಮಗಾಣಿಗರ ಕುಟುಂಬದ ಕುಷ್ಟ ಗಾಣಿಗ, ಮಹಾಬಲ ಗಾಣಿಗ, ನಾರಾಯಣ ಗಾಣಿಗ, ಬಸವ ಗಾಣಿಗರೂ ಸೇರಿದಂತೆ,ಸುಮಾರು ಇಪ್ಪತ್ತು ಮಂದಿ ಕಲಾವಿದರೊಂದಿಗೆ ಹೆರಂಜಾಲು ಕುಟುಂಬ, ವಂಡ್ಸೆ ಕುಟುಂಬ, ನಾವುಂದ ಮಹಾಬಲ ಗಾಣಿಗ, ಸುರ್ಗಿಕಟ್ಟೆ ಬಸವ ಗಾಣಿಗ, ಉದ್ಯಾವರ ಬಸವಗಾಣಿಗ, ಕೋಡಿ ಶಂಕರ ಗಾಣಿಗರಂತ ದೀಮಂತ ಕಲಾವಿದರಿಂದ ಈ ಬಾಗದ ಯಕ್ಷಗಾನ ಕಲೆ ಅರವತ್ತರ ದಶಕದಲ್ಲಿ ಉತ್ತುಂಗಕ್ಕೆ ಏರಲು ಸಾದ್ಯವಾದದ್ದು ಸತ್ಯವಾದರೂ ಈ ಮಹಾನ್ ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವಲ್ಲಿ ಸಮಕಾಲೀನ ಗಾಣಿಗ ಕಲಾವಿದರ ಕೊಡುಗೆಯೂ ಅಷ್ಟೇ ಗಮನಾರ್ಹ ಎಂದು ಮಣಿಪಾಲ ವಿಶ್ವ ವಿದ್ಯಾನಿಲಯದ ಪ್ರಾದ್ಯಾಪಕ, ಹವ್ಯಾಸಿ ಬಾಗವತ ಎಸ್.ವಿ.ಉದಯ ಕುಮಾರ ಶೆಟ್ಟರು ಅಭಿಪ್ರಾಯ ಪಟ್ಟರು.
ಮನಸ್ಸಿಗೆ ಮುದನೀಡುವ ತಾಳಮದ್ದಲೆ
ತಾಳಮದ್ದಲೆ ಮನಸ್ಸಿಗೆ ಮುದ ನೀಡುವಷ್ಟೇ ಬೌದ್ಧಿಕ ಕಸರತ್ತು ಪ್ರದರ್ಶಿಸುವ ಕಲೆ. ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ತಾಳಮದ್ದಲೆಗೆ ವಿಶೇಷ ಪ್ರಾಶಸ್ತ್ಯವಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ತಾಳಮದ್ದಲೆ ಕಾರ್ಯಕ್ರಮ ಸಾಂಸ್ಕೃತಿಕ ವೈಶಿಷ್ಟ್ಯತೆಗಳಲ್ಲೊಂದಾಗಿದೆ. ಸಾರ್ವತ್ರಿಕವಾದ ತಾಳಮದ್ದಲೆ ಕಾರ್ಯಕ್ರಮವೂ ನಡೆಯುತ್ತದೆ. ಅದೇ ರೀತಿ ಅನೇಕರು ತಮ್ಮ ಸ್ವಂತ ಖರ್ಚಿನಲ್ಲಿ ಮನೆಯಂಗಳದಲ್ಲೇ ಬೇರೆ ಬೇರೆ ಸಂದರ್ಭಗಳಲ್ಲಿ ತಾಳಮದ್ದಲೆ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ಎರಡು ದಶಕಗಳಿಗೂ ಪೂರ್ವ ಗ್ರಾಮೀಣ ಪ್ರದೇಶದ ಮನರಂಜನೆಯ ಕೇಂದ್ರಬಿಂದುವೇ ತಾಳಮದ್ದಲೆಯಾಗಿತ್ತು. ಆಧುನಿಕ ತಂತ್ರಜ್ಞಾನ ಸ್ಪರ್ಧೆ ನಡುವೆಯೂ ತಾಳಮದ್ದಲೆ ಕಲಾಪ್ರಿಯರ ಮನಸ್ಸಿನಲ್ಲಿ ಸ್ಥಿರವಾಗುಳಿದಿದೆ.
ಸುಳ್ಯದಲ್ಲಿ ರಾಜ್ಯ ಮಟ್ಟದ 10 ದಿನಗಳ ಯಕ್ಷಗಾನ ಕಲಾ ಕಾರ್ಯಾಗಾರ
ಯಕ್ಷಗಾನದಲ್ಲಿ ಮುಖ್ಯವಾಗಿ ಮಹಾಭಾರತದ ಭಾಗ ಒಂದು ಪರ್ವ ಇದ್ದಂತೆ. ಯಕ್ಷಗಾನದಲ್ಲಿ ಅಳವಡಿಸಲಾದ ಪ್ರಸಂಗ, ಪಾತ್ರ, ನಿರ್ವಹಣೆ ಕುರಿತಂತೆ ಹಳೆಗನ್ನಡ ಸಾಹಿತ್ಯ ಮತ್ತು ಕಲೆ ಬಗ್ಗೆ ರಾಜ್ಯ ಮಟ್ಟದ ಕಾರ್ಯಾಗಾರಕ್ಕೆ ಸುಳ್ಯದಲ್ಲಿ ವೇದಿಕೆ ಸಿದ್ಧವಾಗಿದೆ.

ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ, ಇಲ್ಲಿನ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ ಸಂಯೋಜನೆಯಲ್ಲಿ ಈ ಕಾರ್ಯಾಗಾರ ಅ. 17ರಿಂದ 27ರವೆರೆಗೆ ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ. ಹಳೆಗನ್ನಡ ಸಾಹಿತ್ಯ, ಯಕ್ಷಗಾನ ಪ್ರಸಂಗಗಳು ಮತ್ತು ಯಕ್ಷಗಾನ ರಂಗಭಾಷೆ ಕುರಿತಂತೆ ಯಕ್ಷಗಾನ ಪರಂಪರೆಯ ಕೊಂಡಿ ಎನಿಸಿರುವ ಬಲಿಪ ನಾರಾಯಣ ಭಾಗವತ ಅವರ ನಿರ್ದೇಶನದಲ್ಲಿ ನಡೆಯಲಿದೆ.
ಅಜ್ಜನ ಹೆಜ್ಜೆ.... ಮೊಮ್ಮಗಳ ಪ್ರಸಂಗ !
ಗಂಡುಕಲೆ ಎಂಬ ಖ್ಯಾತಿಯನ್ನು ಸಂಪಾದಿಸಿಕೊಂಡ ಯಕ್ಷಗಾನ ಕ್ಷೇತ್ರಕ್ಕೆ ಇತ್ತೀಚಿನ ದಶಕಗಳಲ್ಲಿ ಸಾಕಷ್ಟು ಮಹಿಳೆಯರು ಪ್ರವೇಶಿಸುತ್ತಿದ್ದಾರೆ. ರಂಗಸ್ಥಳದಲ್ಲಿ ಪುರುಷರಷ್ಟೇ ಸರ್ವ ಸಮರ್ಥವಾಗಿ ರಂಜಿಸಿ, ಕಲಾ ಪ್ರತಿಭೆಯನ್ನು ತೋರುವುದರೊಂದಿಗೆ ಗಂಡುಕಲೆ ಎಂಬ ಅರ್ಥವನ್ನು ಧೀಮಂತಿಕೆ ಎಂಬಂತೆ ನಿರೂಪಿಸುತ್ತಿದ್ದಾರೆ. ಇಲ್ಲಿ ಮಹಿಳಾ ವೇಷಧಾರಿಗಳ ಸಂಖ್ಯಾಬಲ ಅಧಿಕವಾಗುತ್ತಿದೆ. ಅಂತೆಯೇ ಇತ್ತೀಚೆಗೆ ಯಕ್ಷಗಾನ ಕವಯಿತ್ರಿಯರೂ ಅಲ್ಲಲ್ಲಿ ಉದಯವಾಗುವುದರೊಂದಿಗೆ ಕಲಾಲೋಕದಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದಾರೆ. ಅಂತಹ ಉದಯೋನ್ಮುಖ ಯಕ್ಷಗಾನ ಪ್ರಸಂಗಕರ್ತೆಯಾಗಿ ರತ್ನಾ ಆರ್. ಹೆಗಡೆ ಎಂಬ ಯುವತಿ ಇದೀಗ ಪರಿಚಿತವಾಗುತ್ತಿದ್ದಾರೆ.
ಯಕ್ಷ ನಂದನದ ಇಂಗ್ಲಿಷ್‌ ದೇವೀ ಮಹಾತ್ಮೆ
ಕೀರ್ತಿಶೇಷ ಪಿ.ವಿ. ಐತಾಳರು ಆರಂಭಿಸಿದ ಆಂಗ್ಲ ಭಾಷಾ ಸಂಭಾಷಣೆಯ ತಂಡ ``ಯಕ್ಷನಂದನ`` ಇತ್ತೀಚೆಗೆ ತನ್ನ ಸಂಸ್ಥಾಪಕರ ಸಂಸ್ಮರಣೆಯನ್ನು ಮಂಗಳೂರಿನ ಪುರಭವನದಲ್ಲಿ ನಡೆಸಿತು. ಶ್ರೀದೇವಿ ಮಹಾತ್ಮೆ ಆಟವನ್ನು ಎಂಟೂವರೆ ತಾಸುಗಳ ಕಾಲ (ಅಂದರೆ ಪೂರ್ಣ ರಾತ್ರಿ) ನಡೆಸಿದ್ದು ಈಗ ಇತಿಹಾಸ. ಪಿ.ವಿ. ಐತಾಳರು ಸ್ವರ್ಗಸ್ಥರಾದ ಮೇಲೆ ಪ್ರತೀ ವರ್ಷವೂ ನಡೆಯುವಂತೆ 16ನೇ ವರ್ಷದ ಅವರ ಸಂಸ್ಮರಣೆಯ ಕಾರ್ಯಕ್ರಮದಲ್ಲಿ ಈ ಯಕ್ಷಗಾನವನ್ನು ಏರ್ಪಡಿಸಲಾಗಿತ್ತು.
ಕಲಾಪೋಷಕ ಕಲಾವಿದ
ಚೇವಾರು ಚೆಂಡೆ ಕಮ್ತಿಯವರ ಮನೆ ಹಿಂದೆ ಯಕ್ಷಗಾನ ಕಲಾಲಯವಾಗಿತ್ತು. ಪ್ರಸಿದ್ಧ ಚೆಂಡೆ ವಾದಕರಾಗಿದ್ದ ಚೇವಾರು ರಾಮಕೃಷ್ಣ ಕಾಮತ್‌, ಮೃದಂಗ ವಾದಕರಾಗಿದ್ದ ಜನಾರ್ದನ ಕಾಮತ್‌, ಕಲಾವಿದರಾಗಿದ್ದ ಕೇಶವ ಕಾಮತ್‌, ಗೋಪಾಲ ಕಾಮತ್‌, ದಿನಕರ ಕಾಮತ್‌, ಶಂಕರ ಕಾಮತ್‌, ಚಿದಾನಂದ ಕಾಮತ್‌ರವರ ಕುಟುಂಬದ ಮೇಳ ಇಲ್ಲಿ ಸದಾ ಸಕ್ರಿಯವಾಗಿತ್ತು. ಚೆಂಡೆ- ಮದ್ದಳೆಯ ನಿನಾದ ಈ ಮನೆಯಲ್ಲಿ ರಾತ್ರಿ ಹಗಲೆನ್ನದೆ ಅನುರಣಿಸಿ ಸುತ್ತ ಮುತ್ತಲು ಕಲಾವಾಸನೆ ಸೂಸುತ್ತಿತ್ತು. ಪ್ರಸಿದ್ಧ ಚೆಂಡೆ ವಾದಕ ಚೇವಾರು ರಾಮಕೃಷ್ಣ ಕಾಮತ್‌ ಹಲವಾರು ವರ್ಷಗಳ ಕಾಲ ತೆಂಕುತಿಟ್ಟಿನ ಮೇಳಗಳಲ್ಲಿ ಮೇರು ಕಲಾವಿದನಾಗಿ ಮೆರೆದು ಕೀರ್ತಿಶೇಷರಾಗಿರುವರು.
ವಿದ್ವಾನ್ ಪೆರ್ಲ ಕಷ್ಣ ಭಟ್ ನಿಧನ
ಯಕ್ಷಗಾನದ ಅರ್ಥಗಾರಿಕೆ, ಸಾಹಿತ್ಯ, ನಾಟಕ, ಸಾರ್ವಜನಿಕ ಸೇವೆ, ಅಧ್ಯಾಪನವೇ ಮೊದಲಾದ ಅನೇಕ ಚಟುವಟಿಕೆಗಳಲ್ಲಿ ನಿರಂತರ ಸೇವೆ ಸಲ್ಲಿಸಿದ ಬಹುಮುಖಿ ವ್ಯಕ್ತಿತ್ವದ ಹಿರಿಯ ವಿದ್ವಾಂಸ ಪೆರ್ಲ ಕೃಷ್ಣ ಭಟ್ (90) ಸೋಮವಾರ ವಯೋ ಸಹಜ ಅನಾರೋಗ್ಯದಿಂದ ಪೆರ್ಲದ ಸ್ವಗಹದಲ್ಲಿ ನಿಧನರಾದರು. 1923 ಮೇ 16ರಂದು ಪಡ್ರೆಯ್ಲಿ ಜನಿಸಿದ ಅವರು ಸಂಸ್ಕೃತದಲ್ಲಿ ವಿದ್ವಾನ್, ಹಿಂದಿ ರಾಷ್ಟ್ರಭಾಷಾ ಪ್ರವೀಣ, ಆಂಗ್ಲ ಭಾಷೆಯಲ್ಲಿ ಇಂಟರ್‌ಮೀಡಿಯೇಟ್ ಶಿಕ್ಷಣ ಪಡೆದಿದ್ದರು. ತಂದೆ ಪಡ್ರೆ ಗುರು ಶ್ರೀಪತಿ ಶಾಸ್ತ್ರಿ ಹಾಗೂ ತಾಯಿ ನೇತ್ರಾವತಿ ಅವರ ಸಾಧನೆಗೆ ಬೆಂಬಲವಾದವರು.
ನಾಲ್ಕು ಪ್ರಮುಖ ಘೋಷಣೆ: ಕಟೀಲಿಗೆ 6ನೇ ಯಕ್ಷಗಾನ ಮೇಳ
ಯಕ್ಷಲೋಕದ ರಾಜಧಾನಿ ಎಂದೇ ಪ್ರಸಿದ್ಧಿ ಪಡೆದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಗುರುವಾರ ನಾಲ್ಕು ಮಹತ್ವದ ಫೋಷಣೆಗಳನ್ನು ಮಾಡಲಾಗಿದೆ. ಆರನೇ ಮೇಳ ಪ್ರಾರಂಭ, ಮಳೆಗಾಲದಲ್ಲಿ ರಥಬೀದಿಯಲ್ಲಿ ಕಾಲಮಿತಿ ಯಕ್ಷಗಾನ, ವೃದ್ಧ ಸೇವಾರ್ಥಿಗಳಿಗೆ ವಿಶೇಷ ಆದ್ಯತೆ, ಒಂದು ತಿಂಗಳು ಮುಂಚಿತವಾಗಿ ತಿರುಗಾಟ ಆರಂಭದಂಥ ನಿರ್ಧಾರಕ್ಕೆ ಬರಲಾಗಿದೆ.
ಕ್ಯಾಪ್ಟನ್ ಸಿ.ಪಿ. ಕೃಷ್ಣನ್ ಪ್ರಶಸ್ತಿ ಪ್ರಧಾನ
ಕೆರೆಮನೆ ಶಿವಾನ೦ದ ಹೆಗಡೆಯವರಿಗೆ ಖ್ಯಾತ ನಟಿ ಹಾಗೂ ನೃತ್ಯಗಾರ್ತಿ ವೈಜಯಂತಿಮಾಲಾ ಬಾಲಿ ಅವರು ಕಥಕ್ಕಳಿಯಲ್ಲಿ ದೊಡ್ಡ ಹೆಸರಾದ ಮತ್ತೂರು ಗೋವಿಂದಕುಟ್ಟಿ ಹಾಗೂ ಕಲಾಮಂಡಲಂ ವಾಸು ಪಿಶಾರೊಡಿ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ಕ್ಯಾಪ್ಟನ್‌ ಸಿ.ಪಿ. ಕೃಷ್ಣ ನಾಯರ್‌ ಅವರ ಹೆಸರಿನ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಕಟೀಲು 6ನೇ ಮೇಳ ಆರಂಭಕ್ಕೆ ನಿರ್ಧಾರ
ರಾಜ್ಯದಲ್ಲೇ ಪ್ರಥಮ ಬಾರಿಗೆ 2013-14ನೇ ಸಾಲಿನಿಂದ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳದಲ್ಲಿ 6 ಮೇಳಗಳ ತಿರುಗಾಟ ಆರಂಭವಾಗಲಿದೆ.
ಯಕ್ಷಗಾನ ಪ್ರಿಯೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳದಲ್ಲಿ ಈಗಾಗಲೇ 5 ಯಕ್ಷಗಾನ ಮೇಳಗಳು ತಿರುಗಾಟ ನಡೆಸುತ್ತಿದ್ದು, ಭಕ್ತರ ಆಶಯದಂತೆ ಹಾಗೂ ಯಕ್ಷಗಾನದ ಹೆಚ್ಚಿನ ಬೇಡಿಕೆಯನ್ನು ಪರಿಶೀಲಿಸಿ 2013-14ನೇ ಸಾಲಿನಲ್ಲಿ ನೂತನವಾಗಿ 6ನೇ ಮೇಳವನ್ನು ದೇವಳಕ್ಕೆ ಯಾವುದೇ ರೀತಿಯ ಖರ್ಚು ಬಾರದ ರೀತಿಯಲ್ಲಿ ಆರಂಭಿಸಲು ಹಾಗೂ 2014ನೇ ಸಾಲಿನಿಂದ ದೇವಳದ ರಥಬೀದಿಯಲ್ಲಿ ಮೇ ತಿಂಗಳಿನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಕಾಲ ಮಿತಿಯ ಯಕ್ಷಗಾನ ಆರಂಭಿಸಲು ನಿರ್ಧರಿಸಲಾಗಿದೆ ಎಂದು ದೇವಳ ಆಡಳಿತಾಧಿಕಾರಿ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದರು.
`ಮಕ್ಕಳಲ್ಲಿಯೂ ಯಕ್ಷಗಾನ ಅಭಿರುಚಿ ಬೆಳೆಸಿ` - ಪ್ರದೀಪ ಕುಮಾರ ಕಲ್ಕೂರು
ಯಕ್ಷಗಾನ ಕಲೆಯ ಕುರಿತು ಪ್ರತೀ ಮನೆಯಲ್ಲೂ ಆಸಕ್ತಿ ಬೆಳೆಯಬೇಕು. ಪ್ರತಿ ಮಗುವಿನಲ್ಲೂ ಯಕ್ಷಗಾನದ ಸದಭಿರುಚಿ ಕಲಿಸಬೇಕು. ಕಲೆಯ ಇನ್ನಷ್ಟು ಸೀಮೋಲಂಘನಕ್ಕೆ ಸಾಂಘಿಘಿಕ ಪ್ರಯತ್ನ ಆಗಬೇಕು ಎಂದು ದಕ್ಷಿಣ ಕನ್ನಡದ ಕಲ್ಕೂರು ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರು ಆಶಿಸಿದರು.
ನಗರದ ಟಿಎಂಎಸ್‌ ಸಭಾಂಗಣದಲ್ಲಿ ಶನಿವಾರ ಸಂಜೆ ಮಂಗಳೂರಿನ ಯಕ್ಷಗಾನ ರಂಗ ಚಿಂತನ ಹಮ್ಮಿಕೊಂಡ ಕೆರೆಮನೆ ಶಂಭು ಹೆಗಡೆ ಜಯಂತಿ, ವಜ್ರಮಹೋತ್ಸವ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಂಭು ಹೆಗಡೆ ಉತ್ತರ ಕನ್ನಡದ ರಂಗಸ್ಥಳ
ಶಂಭು ಹೆಗಡೆ ಉತ್ತರ ಕನ್ನಡದ ರಂಗಸ್ಥಳ. ಅವರೊಬ್ಬ ರಂಗ ಚಿಂತನ ಕೇಂದ್ರವಾಗಿದ್ದರು. ಅವರನ್ನು ಕಳೆದುಕೊಂಡಿದ್ದು ರಂಗ ಚಿಂತಕನನ್ನು ಕಳೆದುಕೊಂಡಂತಾಗಿದೆ ಎಂದು ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ ಅಭಿಪ್ರಾಯಪಟ್ಟರು.
ನಗರದ ಟಿಎಂಎಸ್ ಸಭಾಭವನದಲ್ಲಿ ಶನಿವಾರ ಯಕ್ಷಗಾನ ರಂಗ ಚಿಂತನ ಬಳಗದಿಂದ ಆಯೋಜಿಸಲಾಗಿದ್ದ ಶಂಭು ಹೆಗಡೆ ಜನ್ಮದಿನೋತ್ಸವ ಮತ್ತು 75ನೇ ವರ್ಷಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಂಭು ಹೆಗಡೆಯವರು ಯಕ್ಷಗಾನ ಪ್ರಸಂಗದ ನಂತರ ಮಾಡಿದ ಭಾಷಣಗಳನ್ನು ಸಂಗ್ರಹಿಸಿದ್ದರೆ ಅದು ರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನಾ ಗ್ರಂಥವಾಗುತ್ತಿತ್ತು. ಅಧ್ಯಯನದ ವಸ್ತುವಾಗುತ್ತಿತ್ತು ಎಂದು ಹೇಳಿದರು.
ಶೇಣಿ ಪ್ರಶಸ್ತಿ ಪ್ರದಾನದ ಎತ್ತರದ ಶ್ರೇಣಿ
ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ದಂತಕಥೆ ಎನಿಸಿದ ಶೇಣಿ ಗೋಪಾಲಕೃಷ್ಣ ಭಟ್ಟರ ಹೆಸರಿನಲ್ಲಿ ಪ್ರದಾನ ಮಾಡುವ ವಾರ್ಷಿಕ `ಶೇಣಿ ಪ್ರಶಸ್ತಿ ಸಮಾರಂಭ`ವು ಕಾಸರಗೋಡಿನ ಶೇಣಿಯಿಂದ ತನ್ನ ಅಭಿಯಾನವನ್ನು ಆರಂಭಿಸಿ ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳನ್ನು ಹಾದು ಉತ್ತರ ಕನ್ನಡದ ಶಿರಸಿಯಲ್ಲಿ ಸಂಭ್ರಮಿಸಿದ್ದು ಶೇಣಿ ವಿಶ್ವಸ್ಥ ಮಂಡಳಿ ಹಾಗೂ ಶಿರಸಿಯ `ಯಕ್ಷಸಂಭ್ರಮ`ದ ಒಂದು ಯಶಸ್ವೀ ಪ್ರಯತ್ನ. ಕಳೆದ ಜುಲೈ 20 ಹಾಗೂ 21ರಂದು ನಡೆದ ಈ ಕಾರ್ಯಕ್ರಮ ಅನೇಕ ಕಾರಣಗಳಿಂದ ಒಂದು ಆದರ್ಶ ಕಾರ್ಯಕ್ರಮವೆನಿಸಿತು.
ಯಕ್ಷಗಾನದಿಂದ ದೇಶೀಯ ಸಂಸ್ಕೃತಿಯನ್ನು ಉಳಿಸೋಣ - ಪ್ರೊ| ಎಂ. ಎಲ್‌. ಸಾಮಗ
ಡಾ| ಶಿವರಾಮ ಕಾರಂತರು ವಿಶಿಷ್ಟ್ಯ, ಅಪೂರ್ವ ವಿಚಾರ ಪೂರಿತ, ವಿಚಿತ್ರ, ಅದ್ಭುತ, ಇತ್ಯಾದಿಗಳನ್ನೊಳಗೊಂಡಂತೆ ಅವರದೇ ಚಿಂತನೆಯ ದಾರಿಯಲ್ಲಿ ಯಕ್ಷಗಾನವನ್ನು ಸೃಷ್ಟಿಸಿದ್ದಾರೆ. ಯಕ್ಷಗಾನ ಸಂಗೀತ ಮಾಧುರ್ಯಕ್ಕೆ ವಿಶೇಷ ಆದ್ಯತೆ ನೀಡಿ ಅದನ್ನು ಎತ್ತರಕ್ಕೆ ತರುವ ಪ್ರಯತ್ನ ಮಾಡಿ ವಿದೇಶಿಯರ ಗಮನವನ್ನೂ ಸೆಳೆದಿದ್ದಾರೆ. ಆ ಮೂಲಕ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಅವಿಸ್ಮರಣೀಯ ಪ್ರಯೋಗಗಳನ್ನು ಪ್ರದರ್ಶಿಸಿದ್ದಾರೆ. ಉಡುಪಿಯ ಯಕ್ಷ ಕೇಂದ್ರ ಆರಂಭವಾದ ದಿನದಿಂದ ಯಕ್ಷಗಾನವನ್ನು ಅತ್ಯಂತ ಗಾಢವಾಗಿ ಪ್ರೀತಿಸುವಂತೆ ಪ್ರೇಕ್ಷಕರನ್ನು ಸೃಷ್ಟಿಗೊಳಿಸಿದೆ. ಇಂದು ಕಾರ್ಪೂರೇಟ್‌ ಜಗತ್ತು ಕೂಡಾ ಶಾಸ್ತ್ರೀಯ ಕಲೆಗಳಿಗೆ, ಯಕ್ಷಗಾನಕ್ಕೆ ಈ ಮೂಲಕ ಆಕರ್ಷಿತಗೊಂಡು ಪ್ರಾಯೋಜಕತ್ವದ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಅಭಿಮಾನದ ಸಂಗತಿ ಎಂದು ಪ್ರೊ| ಎಂ. ಎಲ್‌. ಸಾಮಗ ಅವರು ನುಡಿದರು.
ಅಜೆಕಾರು ಕಲಾಭಿಮಾನಿ ಬಳಗದ ಯಶಸ್ವೀ ಸರಣಿ ತಾಳಮದ್ದಳೆ
ಮುಂಬಯಿಯ ಸಮರ್ಥ ಕಲಾವಿದರು ವಯೋಮಾನದಿಂದ, ಕಾರಣಾಂತರದಿಂದ ನೇಪಥ್ಯಕ್ಷೆ ಸರಿದಾಗ ಕೆಲಕಾಲ ಮುಂಬಯಿ ತಾಳಮದ್ದಳೆ ಕ್ಷೇತ್ರ ಸತ್ವಕಳಗೊಂಡಾಗ, ಅಜೆಕಾರು ಬಳಗ ಮುಂಬಯಿಗೆ ಸುಪ್ರಿಸಿದ್ಧ ಕಲಾವಿದವರನ್ನು ತರಿಸಿ ತಾಳಮದ್ದಳೆ ಕಾರ್ಯಕ್ರಮ ಸಂಯೋಜಿಸುವ ಉಪಕ್ರಮ ಹಮ್ಮಿಕೊಂಡಿತು. ಅಜೆಕಾರು ಬಳಗದ ರೂವಾರಿ ಬಾಲಕೃಷ್ಣ ಶೆಟ್ಟಿಯವರ ದಶಕದ ಪರಿಶ್ರಮ ಇದೀಗ ಸಾರ್ಥಕವಾಗಿದೆ.
ಪದಚ್ಯುತಿ: ಅಕಾಡೆಮಿ ಅಧ್ಯಕ್ಷರು ನ್ಯಾಯಾಲಯಕ್ಕೆ
ಅಕಾಡೆಮಿ ಸ್ವಾಯತ್ತ ಸಂಸ್ಥೆಯಾಗಿದ್ದು, ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಅಕಾಡೆಮಿ ಅಧ್ಯಕ್ಷರನ್ನು ಪದಮುಕ್ತಗೊಳಿಸುವುದು ನ್ಯಾಯ ಸಮ್ಮತವಲ್ಲ. ಈ ನಿಟ್ಟಿನಲ್ಲಿ ಅಕಾಡೆಮಿ ಬೈಲಾ ಉಲ್ಲಂ ಸಿ, ವಜಾಗೊಳಿಸಿರುವುದರ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಿದ್ದೇವೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್‌ ಮತ್ತು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎಲ್‌. ಸಾಮಗ ತಿಳಿಸಿದ್ದಾರೆ. ಈ ಕುರಿತು ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಮಾತನಾಡಿದರು.
ಯಕ್ಷಗಾನದಲ್ಲಿ ಬದಲಾವಣೆ ಕುರಿತು ಸಮಾಲೋಚನಾ ಸಭೆ
ಪರಿವರ್ತನೆ ಸದಾ ಆಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದು ಬದಲಾವಣೆಗಳನ್ನು ನಾವು ಅಪೇಕ್ಷಿಸದಿದ್ದರೂ ಅದಾಗಿ ನಡೆಯುತ್ತಿರುತ್ತದೆ. ಅದಕ್ಕೆ ಹೊಂದಿಕೊಂಡು ಹೇಗೆ ಮುನ್ನಡೆಯುವುದು ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ. ಯಕ್ಷಗಾನದಲ್ಲಿ ಕಾಲಮಿತಿಯನ್ನು ಅಳವಡಿಸಿಕೊಳ್ಳುವ ಕುರಿತು ಎರಡು ತಿಂಗಳಿನಲ್ಲಿ ತೆಂಕು, ಬಡಗಿನ ಎಲ್ಲ ಮೇಳಗಳ ಯಜಮಾನರು, ಸಂಚಾಲಕರ ಸಭೆ ಕರೆದು ಇನ್ನಷ್ಟು ವಿಷಯ ವಿಮರ್ಶೆ ಮಾಡಲಾಗುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ವಿದ್ಯಾ ಕೋಳ್ಯೂರ್ ಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಪುರಸ್ಕಾರ
ಯಕ್ಷಗಾನದಲ್ಲಿ ಅಪಾರ ಸಾಧನೆ ಮಾಡಿರುವ ವಿದ್ಯಾ ಕೋಳ್ಯೂರು ಅವರನ್ನು ಕೇಂದ್ರದ ಸಂಗೀತ ನಾಟಕ ಅಕಾಡೆಮಿ 2011ನೆಯ ಸಾಲಿನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.
ಇವರು ಯಶೋಧ ಮತ್ತು ಸುಪ್ರಸಿದ್ಧ ಯಕ್ಷಗಾನ ಕಲಾವಿದ ಡಾ.ಕೋಳ್ಯೂರು ರಾಮಚಂದ್ರ ರಾವ್ ಅವರ ಸುಪುತ್ರಿ ವಿದ್ಯಾ ಕೋಳ್ಯೂರು, ಸೀತೆ, ದಾಕ್ಷಾಯಿಣಿ, ದ್ರೌಪದಿ, ಮಾಯಾ ಶೂರ್ಪನಖಿ, ಮಾಯಾ ಪೂತನಿ, ಸತ್ಯಭಾಮೆ, ದಮಯಂತಿ ಮುಂತಾದ ವೈವಿಧ್ಯಮಯ ಪಾತ್ರಗಳಲ್ಲಿ ಅವರ ತಂದೆಯ ಹಾದಿಯಲ್ಲೇ ಮುನ್ನಡೆದು, ಪ್ರೇಕ್ಷಕರ ಮನ ಮುಟ್ಟಿದ್ದು ಮಾತ್ರವಲ್ಲ, ಕೃಷ್ಣ, ಸುಧನ್ವ ಮುಂತಾದ ಪುರುಷ ಪಾತ್ರಗಳಲ್ಲೂ ಮಿಂಚಿದ್ದಾರೆ.
ಬೆಳಗಾನ ನೋಡೋರಿಲ್ಲ ಯಕ್ಷಗಾನಕ್ಕೂ ಕಾಲಮಿತಿ?
ಕರಾವಳಿಯಲ್ಲಿ ವೃತ್ತಿ ಮೇಳಗಳು ಇಡೀ ರಾತ್ರಿ ಪ್ರದರ್ಶಿಸುವ ಗಂಡುಮೆಟ್ಟಿನ ಕಲೆ ಯಕ್ಷಗಾನವನ್ನು ಇನ್ನು ಮುಂದೆ ಕಾಲಮಿತಿಗೆ ಒಳಪಡಿಸಿದರೆ ಹೇಗೆ?

ಅಂದರೆ ರಾತ್ರಿಪೂರ್ತಿ ಎಂಟು ಗಂಟೆ ಕಾಲ ಪ್ರದರ್ಶನಗೊಳ್ಳುವ ಯಕ್ಷಗಾನ ಪ್ರಸಂಗವನ್ನು ಕೇವಲ ನಾಲ್ಕೈದು ಗಂಟೆಗಳಿಗೆ ಸೀಮಿತಗೊಳಿಸುವುದು ಸಾಧ್ಯವೇ? ಇದರಿಂದ ಯಕ್ಷಗಾನ ಪ್ರಸಂಗದ ರಸಾನುಭವಕ್ಕೆ, ಕಥಾ ಹಂದರಕ್ಕೆ ತೊಡಕಾಗುತ್ತದೆಯೇ? ಕಾಲಮಿತಿ ಎಂದರೆ ಎಷ್ಟು ಗಂಟೆಯವರೆಗೆ? ಹರಕೆ ಪ್ರದರ್ಶನಗಳ ಕಥೆ ಏನು? ಹೀಗೆ ಒಂದೊಂದು ಜಿಜ್ಞಾಸೆಗೂ ಶೀಘ್ರವೇ ಉತ್ತರ ಸಿಗಲಿದೆ.
ದೋಗ್ರ ಪೂಜಾರಿ ಪ್ರಶಸ್ತಿ ಪಾತ್ರರು - ಕೊಕ್ಕಡ ಈಶ್ವರ ಭಟ್‌
ತೆಂಕು -ಬಡಗು ತಿಟ್ಟುಗಳ ವಿವಿಧ ಯಕ್ಷಗಾನ ಮಂಡಳಿಗಳಲ್ಲಿ ಸುಮಾರು 5 ದಶಕಗಳ ಕಾಲ ಸೇವೆ ಸಲ್ಲಿಸಿ ಈಗ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಬಳಿ ಪಟ್ರಮೆಯಲ್ಲಿ ನಿವೃತ್ತ ಜೀವನ ಕಳೆಯುತ್ತಿರುವ ಈಶ್ವರ ಭಟ್ಟರ ಕಲಾಸೇವೆ ಉಲ್ಲೇಖ ನೀಯವಾದುದು. 1941ರಲ್ಲಿ ಜನಿಸಿದ ಭಟ್ಟರು 6ನೇ ತರಗತಿಯ ಶೈಕ್ಷಣಿಕ ವಿದ್ಯಾಭ್ಯಾಸದ ಬಳಿಕ ಯಕ್ಷಗಾನದತ್ತ ಆಕರ್ಷಿತರಾಗಿ ಅಧ್ಯಯನಕ್ಕೆ ಮುಂದಾದರು. ಪೆರುವೋಡಿ ನಾರಾಯಣ ಭಟ್‌ ಮತ್ತು ಕುಡಾನ ಗೋಪಾಲ ಕೃಷ್ಣ ಭಟ್‌ ಇವರ ಗುರುಗಳು. ದಯಾನಂದ ನಾಗೂರು, ಈಶ್ವರ ಭಟ್ಟರ ಬಡಗುತಿಟ್ಟು ನಾಟ್ಯ ಗುರುಗಳು.
`ಶ್ರೀ ಹರಿಮಾಯೆ` ಆನಿಮೇಶನ್ ಯಕ್ಷಗಾನ ಸಿಡಿ ಬಿಡುಗಡೆ
ಯಕ್ಷಗಾನಕ್ಕೆ ಆಧುನಿಕ ಸ್ಪರ್ಶ ನೀಡಿ ಗ್ರಾಫಿಕ್ ಮತ್ತು ಆನಿಮೇಶನ್ (ಜೀವಚೇತನ) ತಂತ್ರಜ್ಞಾನ ಅಳವಡಿಸಿ ತಯಾರಿಸಲಾದ ಯಕ್ಷಗಾನ ವಿ.ಸಿ.ಡಿ `ಶ್ರೀ ಹರಿಮಾಯೆ` ಬಿಡುಗಡೆ ಮತ್ತು ಭಾಗ್ಯ ಟೆಲಿ ಚಿತ್ರದ ಪ್ರದರ್ಶನ ಜುಲೈ 4ರಂದು ಅಮರಶ್ರೀ ಚಿತ್ರ ಮಂದಿರದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕ ಶೇಖರ ಅಜೆಕಾರು ತಿಳಿಸಿದ್ದಾರೆ.
ಶ್ರೀಕೃಷ್ಣ ಯಕ್ಷ ಸಭಾ ಪುರಸ್ಕಾರ ಪಾತ್ರರು
ಮಂಗಳೂರು: ಕದ್ರಿಯ ಶ್ರೀಕೃಷ್ಣ ಯಕ್ಷ ಸಭಾದ ಪ್ರಸಕ್ತ ವರ್ಷದ ಪುರಸ್ಕಾರ ಪಡೆಯುತ್ತಿರುವ ಸಪ್ತ ಸಾಧಕರಾದ ಕಾಸರಗೋಡು ಸುಬ್ರಾಯ ಹೊಳ್ಳ, ಪುತ್ತೂರು ಗಂಗಾಧರ, ನಗ್ರಿ ಮಹಾಬಲ ರೈ , ಬೋಳಾರ ಸುಬ್ಬಯ್ಯ ಶೆಟ್ಟಿ , ದೇವಕಾನ ಕೃಷ್ಣ ಭಟ್‌, ಹೆರಂಜಾಲು ಗೋಪಾಲ ಗಾಣಿಗ , ವೇಣೂರು ಸದಾಶಿವ ಕುಲಾಲ್`ರವರ ಕಿರು ಪರಿಚಯವನ್ನು ಸಮ್ಮಾನದ ನಿಟ್ಟಿನಲ್ಲಿ ಉಲ್ಲೇಖೀಸುವುದು ಸಕಾಲಿಕ.
`ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆ ಸಲ್ಲದು` - ಡಾ| ಡಿ. ವೀರೇಂದ್ರ ಹೆಗ್ಗಡೆ
ಕಲೆಯೆಂಬುದು ನಿಂತ ನೀರಲ್ಲ. ವಿವಿಧ ಕಲಾ ಪ್ರಾಕಾರಗಳಲ್ಲಿ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಪ್ರತಿಭಾನ್ವಿತ ಕಲಾವಿದರ ಮುಖಾಂತರ ಯಕ್ಷಗಾನದಲ್ಲಿಯೂ ಅಂತಹ ಪರಿವರ್ತನೆಗಳು ನಡೆದಿವೆ. ಆದರೆ ಪರಿವರ್ತನಾ ದಿಕ್ಕಿನಲ್ಲಿ ಸಾಗುವಾಗ ಯಕ್ಷರಂಗದ ಪಾರಂಪರಿಕ, ಸಾಂಪ್ರದಾಯಿಕ ಮತ್ತು ಮೂಲ ಸ್ವರೂಪಗಳನ್ನು ಉಳಿಸಿಕೊಳ್ಳಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯಪಟ್ಟರು.
ಯಕ್ಷಗಾನ ಕಲಿಕೆಗೆ ಇಂಗ್ಲೀಷ್‌ ಅನುವಾದಿತ ಸಾಹಿತ್ಯದ ಕೊರತೆ - ಡಾ| ಬಿ.ಎ. ವಿವೇಕ ರೈ
ಯಕ್ಷಗಾನ ಕಲೆ ರಾಜ್ಯದಲ್ಲಿ ಮೇಲ್ಮಟ್ಟದ ಪ್ರಸಿದ್ಧಿ ಹೊಂದಿದ್ದರೂ ದೇಶ ಹಾಗೂ ವಿದೇಶಗಳಲ್ಲಿ ಯಕ್ಷಗಾನ ಒಂದು ಐಚ್ಚಿಕ ವಿಷಯವಾಗಿ ಕಲಿಯುವವರಿಗೆ ಬೇಕಾದ ಇಂಗ್ಲೀಷ್‌ ಅನುವಾದಿತ ಸಾಹಿತ್ಯದ ಕೊರತೆಯಿದೆ. ಇದನ್ನು ಸರಿದೂಗಿಸಲು ಯಕ್ಷಗಾನ ಕ್ಷೇತ್ರದ ದಿಗ್ಗಜರು, ಖ್ಯಾತ ಬರಹಗಾರರು ಮುಂದಾಗಬೇಕು ಎಂದು ಹಂಪಿ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ, ಸಂಶೋಧಕ ಡಾ| ಬಿ.ಎ. ವಿವೇಕ ರೈ ಹೇಳಿದರು.
`ರಘುರಾಮಾಭಿನಂದನ` : ``ಕರಾವಳಿಯ ಯಕ್ಷಗಾನ ಕಲಾಭಿಮಾನಿ ಸ್ವಾಭಿಮಾನಿ`` - ಪ್ರೊ.ಎಂ.ಎಲ್ ಸಾಮಗ
ಮಂಗಳೂರು: ``ಯಕ್ಷಗಾನ ಕಲಾಭಿಮಾನಿಗಳು ಸ್ವಾಭಿಮಾನಿಗಳೂ ಹೌದು. ಕರಾವಳಿಯಲ್ಲಿ ಯಕ್ಷಗಾನ ಕಲೆ ಬೆಳೆದಿರುವುದು ಕಲಾಭಿಮಾನಿಗಳ ಪ್ರೋತ್ಸಾಹದಿಂದ. ಇಲ್ಲಿನ ಜನ ಇಷ್ಟದ ಕಲೆಯನ್ನು ಪೋಷಿಸಲು ಸರ್ಕಾರದ ಬಿಡಿಗಾಸಿಗೆ ಕೈಚಾಚುವುದಿಲ್ಲ`` ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಂ.ಎಲ್ ಸಾಮಗ ಅವರು ಅಭಿಪ್ರಾಯಪಟ್ಟರು.

ಇಲ್ಲಿನ ಪುರಭವನದಲ್ಲಿ ಶುಕ್ರವಾರ ಆರಂಭವಾದ ತೆಂಕುತಿಟ್ಟಿನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಅವರ ಮೂರು ದಿನಗಳ ಅಭಿನಂದನಾ ಕಾರ್ಯಕ್ರಮ ``ರಘುರಾಮಾಭಿನಂದನ`` ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ಸಂಭಾಷಣೆರಹಿತ ಯಕ್ಷಗಾನ ಪರಿಪೂರ್ಣವಲ್ಲ` - ಎಂ.ಎಲ್.ಸಾಮಗ
`ಕನ್ನಡ ಅರ್ಥವಾಗದವರಿಗಾಗಿ ಮಾತಿಲ್ಲದ, ಅಭಿನಯ ಪ್ರಧಾನವಾದ ಯಕ್ಷಗಾನ ಪ್ರಯೋಗಗಳು ನಡೆದಿವೆ. ಆದರೆ, ಸಂಭಾಷಣೆ ಇಲ್ಲದ ಯಕ್ಷಗಾನವನ್ನು ಪರಿಪೂರ್ಣ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ` ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎಲ್.ಸಾಮಗ ಅವರು ಅಭಿಪ್ರಾಯಪಟ್ಟರು. ಪಣಂಬೂರಿನ ಪಿ.ವಿ.ಐತಾಳರ ಇಂಗ್ಲಿಷ್ ಯಕ್ಷಗಾನ ಬಳಗ- `ಯಕ್ಷನಂದನ`ವು ಪುರಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಪಿ.ವಿ.ಐತಾಳರ 16ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾ ಕೋಳ್ಯೂರುಗೆ `ಕಲಾಶ್ರೀ-2013` ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಬೆಳುವಾಯಿಯ ಶ್ರೀಯಕ್ಷದೇವ ಮಿತ್ರಕಲಾಮಂಡಳಿ ಆಶ್ರಯದಲ್ಲಿ ಮೂಡುಬಿದಿರೆ ಪದ್ಮಾವತಿ ಕಲಾಮಂದಿರದಲ್ಲಿ `ಯಕ್ಷ ವೈಭವ 2013` 4ನೇ ದಿನದ ಕಾರ್ಯಕ್ರಮದಲ್ಲಿ ಶ್ರೀಮತಿ ವನಜಾಕ್ಷಿ ಅಮ್ಮ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಕೊಡಮಾಡುವ `ಕಲಾಶ್ರೀ ಪ್ರಶಸ್ತಿ-2013`ಯನ್ನು ವಿದ್ಯಾ ಕೋಳ್ಯೂರು ಅವರಿಗೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿದ್ಯಾ ಕೋಳ್ಯೂರು, ಯಕ್ಷಗಾನ ಗಂಡುಕಲೆ ಎನ್ನುವುದು ಅದರ ಶ್ರೇಷ್ಠತೆಗೆ ಸಲ್ಲುವ ಗೌರವೇ ಹೊರತು ಅದು ಪುರುಷರಿಗೆ ಮಾತ್ರ ಸೀಮಿತವಾದದ್ದು ಎಂದಲ್ಲ. ಯಕ್ಷಗಾನವನ್ನು ಯಾವುದೇ ತಾರತಮ್ಯವಿಲ್ಲದೆ ಪ್ರೋತ್ಸಾಹಿಸಬೇಕಾಗಿದೆ. ಪಾರಂಪರಿ ಕಲೆಯಾದ ಯಕ್ಷಗಾನವು ಶಿಸ್ತಿನ ಚೌಕಟ್ಟಿನಿಂದ ಹೊರಬಂದಾಗ ಅದನ್ನು ಪ್ರಜ್ಞಾವಂತ ಪ್ರೇಕ್ಷಕರು ಪ್ರಶ್ನಿಸಬೇಕು ಎಂದು ಹೇಳಿದರು.
ಕರ್ಕಿಯ ನಾರಾಯಣ ಹಾಸ್ಯಗಾರಗೆ `ಶೇಣಿ ಪ್ರಶಸ್ತಿ`
ಯಕ್ಷಗಾನದ ದಿಗ್ಗಜ ಶೇಣಿ ಗೋಪಾಲಕೃಷ್ಣ ಭಟ್ಟರ ನೆನಪಿನಲ್ಲಿ ನೀಡುವ `ಶೇಣಿ ಪ್ರಶಸ್ತಿ` ಈ ಬಾರಿ ಹಿರಿಯ ಯಕ್ಷ ಕಲಾವಿದ ಹೊನ್ನಾವರ ತಾಲ್ಲೂಕಿನ ಕರ್ಕಿಯ ನಾರಾಯಣ ಹಾಸ್ಯಗಾರ ಅವರಿಗೆ ದೊರೆತಿದೆ. ಸುರತ್ಕಲ್‌ನ ಶೇಣಿ ಗೋಪಾಲಕೃಷ್ಣ ಭಟ್ಟ ವಿಶ್ವಸ್ತ ಮಂಡಳಿ, ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಜುಲೈ 20 ಹಾಗೂ 21ರಂದು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 20,000 ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಮಂಡಳಿಯ ಸಹ ಕೋಶಾಧಿಕಾರಿ ವಾಸುದೇವ ರಂಗಭಟ್ಟ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದರು.
ಕಟೀಲು ಯಕ್ಷಗಾನ ತತ್ಕಾಲ್‌ ಬುಕ್ಕಿಂಗ್‌ ವ್ಯವಸ್ಥೆ
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಐದು ಯಕ್ಷಗಾನ ಬಯಲಾಟ ಮೇಳಗಳಿದ್ದರೂ ಮುಂದಿನ 25 ವರ್ಷಗಳ ತನಕ 10,000ಕ್ಕೂ ಮಿಕ್ಕಿ ಯಕ್ಷಗಾನ ಬಯಲಾಟಗಳು ಬುಕ್ಕಿಂಗ್‌ ಆಗಿದ್ದು, ಶೀಘ್ರದಲ್ಲಿ ಹರಕೆ ಬಯಲಾಟ ನೀಡುವ ಉದ್ದೇಶದಿಂದ ತತ್ಕಾಲ್‌ ಬುಕ್ಕಿಂಗ್‌ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಆಡಳಿತಾಧಿಕಾರಿ ಡಾ| ಹರೀಶ್‌ ಕುಮಾರ್‌ ತಿಳಿಸಿದ್ದಾರೆ. ಅವರು ಶನಿವಾರ ಕಟೀಲು ದೇವಳದಲ್ಲಿ ನಡೆದ ಆಡಳಿತ ಸಮಿತಿ ಸಭೆಯ ಬಳಿಕ ಮಾಹಿತಿ ನೀಡಿದರು.
ಮಾತಿನ ಮಾಣಿಕ್ಯಗಳಿಗೆ ಮುದ್ದಣ ಪುರಸ್ಕಾರ
ಕಲೆಗಾಗಿ ದುಡಿಯುತ್ತಿರುವ ಈರ್ವರು ಕಲಾ ಸೇವಕರಿಗೆ ಈ ಬಾರಿಯ ಮುದ್ದಣ ಪುರಸ್ಕಾರ - 2013 ನೀಡಿ ಗೌರವಿಸಲಾಗುತ್ತಿದೆ. ಸಾಹಿತ್ಯ ಕ್ಷೇತ್ರ ಕಂಡ ಶ್ರೇಷ್ಠ ಕವಿಗಳಲ್ಲಿ ಓರ್ವರಾದ ನಂದಳಿಕೆ ಲಕ್ಷ್ಮೀನಾರಾಯಣಯ್ಯನ (ಮುದ್ದಣ) ಹೆಸರಿನಲ್ಲಿ ಕೊಡಮಾಡುವ ಮುದ್ದಣ ಪುರಸ್ಕಾರವನ್ನು ಡಾ| ಎಂ. ಪ್ರಭಾಕರ ಜೋಶಿ ಮತ್ತು ಅಂಬಾತನಯ ಮುದ್ರಾಡಿಯವರಿಗೆ ಜುಲೈ 5, 2013ರಂದು ಸುರತ್ಕಲ್‌ ಮಹಮ್ಮಾಯಿ ದೇವಳದಲ್ಲಿ ನೀಡಿ ಗೌರವಿಸಲಾಗುತ್ತದೆ.
ವಾಚಿಕವಾಗಿಯೂ ಗೆದ್ದ ಕಾಳಗ ಪ್ರಸಂಗಗಳು
`ಕೆಲವು ಕಾಳಗ ಪ್ರಸಂಗಗಳು ರಂಗಾಭಿನಯಕ್ಕೇ ಹೊರತು ಮಾತೇ ಪ್ರಧಾನವಾದ ತಾಳಮದ್ದಲೆಗೆ ಸಲ್ಲ` ಎಂಬ ಅಭಿಪ್ರಾಯವು ಸಮರ್ಥನೀಯವಲ್ಲ ಎಂಬುದನ್ನು ರುಜುವಾತುಪಡಿಸಿದ `ಕಾಳಗ ಸಪ್ತಕ` ಉಡುಪಿಯ ಕಲಾರಂಗದವರು ಆಯೋಜಿಸಿದ ಒಂದು ಯಶಸ್ವೀ ತಾಳಮದ್ದಲೆ ಸಪ್ತಾಹ. ಉಡುಪಿ ರಾಜಾಂಗಣದಲ್ಲಿ ಮೇ 20ರಿಂದ 26ರವರೆಗೆ ನಡೆದ ಈ ಸಪ್ತಾಹದ ಆರಂಭ ಕಾರ್ತವೀರ್ಯಾರ್ಜುನ ಕಾಳಗದಿಂದ. ಕಾರ್ತವೀರ್ಯ ನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರದು ಯಶಸ್ವೀ ಪಾತ್ರ ಚಿತ್ರಣ. ವಿವಿಧ ಪಾತ್ರಗಳೊಂದಿಗೆ ವಿವಿಧ ಸ್ತರ, ಶೈಲಿಗಳಲ್ಲಿ ನಡೆಸಿದ ಸಂವಾದ ಅಮೋಘ. ವೀರರಸ ಪರಿಪುತವಾದ ಅವರ ಮಾತುಗಳಲ್ಲಿ ಕಾರ್ತವೀರ್ಯಾರ್ಜುನನ ಸಮಗ್ರ ಚಿತ್ರಣವಿತ್ತು.
ಶೀನಪ್ಪ ಭಂಡಾರಿ ನಿಧನಕ್ಕೆ ಸಂತಾಪ
ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದ, ಹಲವು ಮೇಳಗಳ ಸಂಘಟಕ ಮತ್ತು ಪ್ರಯೋಗಶೀಲ ಪ್ರವೃತ್ತಿಯ ಪುತ್ತೂರು ಶೀನಪ್ಪ ಭಂಡಾರಿ ಅವರ ನಿಧನಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ದಯಾನಂದ ಪೈ ಮತ್ತು ಪಿ.ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ತನ್ನ ಗಾಢ ಸಂತಾಪವನ್ನು ವ್ಯಕ್ತಪಡಿಸಿದೆ.

ನಿರಂತರ ಎಪ್ಪತೈದು ವರ್ಷಗಳ ತಿರುಗಾಟ ಮಾಡಿದ್ದ ಪುತ್ತೂರು ಶೀನಪ್ಪ ಭಂಡಾರಿಯವರ ಬದುಕಿನ ಏಳುಬೀಳುಗಳನ್ನು ದಾಖಲಿಸಿ ಯಕ್ಷಭಂಡಾರಿ ಎಂಬ ಹೆಸರಿನಲ್ಲಿ ಕೃತಿಯನ್ನು ಯಕ್ಷಗಾನ ಅಧ್ಯಯನ ಕೇಂದ್ರವು ಪ್ರಕಟಿಸಿದೆ.
ಯಕ್ಷಗಾನದ ಅಂತರಂಗಿಕ ಸತ್ವ ಹೊರಬರಲಿ - ಎಡನೀರು ಶ್ರೀ
ಯಕ್ಷಗಾನ ಕೇವಲ ತೀಟೆ ತೀರಿಸಿಕೊಳ್ಳುವ ಕಲಾ ಮಾಧ್ಯಮವಾಗದೆ ಅದರ ಅಂತರಂಗಿಕ ಸತ್ವ, ಭಾವ, ರಸ ಹೊರಹೊಮ್ಮಿಸುವ ಮಾಧ್ಯಮವಾಗಲಿ ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಹೇಳಿದರು. ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿ ಬೆಳುವಾಯಿ ಆಯೋಜಿಸಿದ 16ನೇ ವರ್ಷದ ``ಯಕ್ಷ ವೈಭವ -2013`` ಉದ್ಘಾಟಿಸಿ, ಮಂಡಳಿಯ ನೂತನ ವೆಬ್‌ಸೈಟ್‌ ( www.yakshadeva.com ) ಅನಾವರಣಗೊಳಿಸಿ ಅವರು ಮಾತಾಡಿದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎಲ್‌. ಸಾಮಗ ಅಧ್ಯಕ್ಷತೆ ವಹಿಸಿದ್ದರು.
ಬಲ್ಲಿರೇನಯ್ಯ? ತಾಳಮದ್ದಲೆಗೆ ನಾವೇ ಸರಿ ಎನ್ನುವ ನಾರಿಯರು
ಯಕ್ಷಗಾನದ ಪ್ರಮುಖ ವಿಭಾಗ ತಾಳಮದ್ದಲೆ. ಭಾಗವತಿಕೆ, ಹಿಮ್ಮೇಳ ಮತ್ತು ಲಯಬದ್ಧವಾದ ಮಾತುಗಾರಿಕೆಗಳು ಇದರ ಜೀವಾಳ. ಈ ಹಿಂದೆ ಪುರುಷರೇ ಸಕ್ರಿಯವಾಗಿ ತೊಡಗಿಕೊಂಡಿದ್ದ ತಾಳಮದ್ದಲೆ ಎಂಬ ಕಲಾರೂಪ ಇದೀಗ ಮಹಿಳೆಯರ ಪ್ರವೇಶದೊಂದಿಗೆ ವಿಭಿನ್ನ ಬೆಳವಣಿಗೆ ಕಂಡುಕೊಳ್ಳತೊಡಗಿದೆ.
ಹೀಗೆ ತಾಳಮದ್ದಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಲಾರಾಧನೆ ಮಾಡುತ್ತಿರುವ ಸಂಘಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶ್ರೀ ಆಂಜನೇಯ ಮಹಿಳಾ ತಾಳಮದ್ದಲೆ ಸಂಘವೂ ಒಂದು. ಕಳೆದ 8 ವರ್ಷಗಳಿಂದ ತಾಳಮದ್ದಲೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಈ ಸಂಘ, ಹಲವಾರು ಕಡೆ ಯಶಸ್ವಿ ಕಾರ್ಯಕ್ರಮಗಳನ್ನು ನೀಡಿದೆ.
ರಾಜ್ಯ ಪ್ರಶಸ್ತಿ ವಿಜೇತ, ತೆ೦ಕುತಿಟ್ಟಿನ ಕಲಾವಿದ ಶ್ರೀ ಪುತ್ತೂರು ಶೀನಪ್ಪ ಭ೦ಡಾರಿ ಇನ್ನಿಲ್ಲ
ರಾಜ್ಯ ಪ್ರಶಸ್ತಿ ವಿಜೇತ, ತೆ೦ಕುತಿಟ್ಟಿನ ಪ್ರಸಿಧ್ಧ ಕಲಾವಿದರಾದ ಶ್ರೀ ಪುತ್ತೂರು ಶೀನಪ್ಪ ಭ೦ಡಾರಿ (88) ರವರು, ಅಲ್ಪ ಕಾಲದ ಅಸೌಖ್ಯದಿ೦ದಾಗಿ ಪುತ್ತೂರಿನ ಆಸ್ಪತ್ರೆಯೊ೦ದರಲ್ಲಿ (ಜೂನ್ 24ರ೦ದು) ನಿಧನ ಹೊ೦ದಿದ್ದಾರೆ. ಶ್ರೀಯುತರು ಧರ್ಮಪತ್ನಿ, 5 ಗ೦ಡು ಮಕ್ಕಳು, 2 ಹೆಣ್ಣು ಮಕ್ಕಳು ಹಾಗೂ ಅಪಾರ ಸ೦ಖ್ಯೆಯ ಅಭಿಮಾನಿಗಳನ್ನು ಅಗಲಿರುತ್ತಾರೆ.
ಹೊಸನಗರ ಮೇಳ ಯಕ್ಷಗಾನ ಕಲೆಯನ್ನು ಬೆಳೆಸುತ್ತಿದೆ
ಮುಂಬಯಿ : ಯಕ್ಷಗಾನ ರಂಗವು ಆಧುನಿಕತೆಯ ದಾಳಿಗೆ ತುತ್ತಾಗುತ್ತಿರುವ ಈ ಸಂದರ್ಭದಲ್ಲಿ ಸಂಪ್ರದಾಯ ಬದ್ಧವಾಗಿ ಕಾಲಮಿತಿಯ ಯಕ್ಷಗಾನವನ್ನು ಪ್ರದರ್ಶಿಸುವುದರ ಮೂಲಕ ಯಕ್ಷಗಾನ ಕಲೆಯನ್ನು ಬೆಳೆಸುವ ಕೆಲಸವನ್ನು ಹೊಸನಗರ ಮೇಳವು ಮಾಡುತ್ತಿದೆ ಎಂದು ಕರ್ನಾಟಕ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಭರತ್‌ ಕುಮಾರ್‌ ಪೊಲಿಪು ಅವರು ತಿಳಿಸಿದರು.
ಪ್ರಸಿದ್ಧ ಯಕ್ಷಗಾನ ಪ್ರಸಂಗಕರ್ತ ಡಾ. ವೈ ಚಂದ್ರಶೇಖರ ಶೆಟ್ಟಿ ನಿಧನ
ಪ್ರಸಿದ್ಧ ಯಕ್ಷಗಾನ ಪ್ರಸಂಗಕರ್ತ, ನಾಟಕ ನಿರ್ದೇಶಕ, ರಂಗಭೂಮಿ ಕಲಾವಿದ ಹಾಗೂ ಹಿರಿಯ ವೃತ್ತಿಪರ ವೈದ್ಯ ಡಾ.ವೈ ಚಂದ್ರಶೇಖರ ಶೆಟ್ಟಿ (72) ಅಲ್ಪಕಾಲದ ಅಸೌಖ್ಯದಿಂದಾಗಿ ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕುಂದಾಪುರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆದುಕೊಂಡಿದ್ದ ಅವರು, ಎಂಬಿಬಿಎಸ್ ಪದವಿಯ ಬಳಿಕ ವೈದ್ಯರಾಗಿ ಸರ್ಕಾರಿ ಸೇವೆಗೆ ಸೇರಿದ್ದರು. ಕಂಡ್ಲೂರು, ಕುಂದಾಪುರ ಸೇರಿದಂತೆ ಜಿಲ್ಲೆಯ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.
ಯಕ್ಷ ವೈಭವ - ಹದಿನಾರರ ಶೋಭೆ , ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ ಬೆಳುವಾಯಿ
ಮನಮೋಹಕ, ಅದ್ಭುತ ರಂಗಕ್ರಿಯೆ ಹಾಗೂ ಪ್ರದರ್ಶನ ವಿಧಾನದ ಭವ್ಯತೆಯ ಮೂಲಕ ನೋಡುಗನನ್ನು ನಿಬ್ಬೆರಗಾಗಿಸುವ ಆ ಮೂಲಕ ಸನಾತನ ಸಂದೇಶಗಳನ್ನು ಕಥಾ ರೂಪದಲ್ಲಿ ಸಾದರಪಡಿಸುವ ರಾತ್ರಿಯನ್ನು ಬೆಳಗುವ ಕಲೆ ಯಕ್ಷಗಾನ.

ಯಕ್ಷಗಾನ ಸಂಬಂಧಿಯಾಗಿ ನೀಡಲಾಗುವ, ನಿರೂಪಿಸ ಲಾಗುವ, ಬರೆಯಲಾಗುವ ಎಲ್ಲಾ ವ್ಯಾಖ್ಯೆಗಳೂ ಕಲಾ ಸೊಬಗಿನ ಪೂರ್ಣ ಆಸ್ವಾದನೆಗೆ ಅಥವಾ ಸಮಗ್ರ ಪ್ರಸ್ತುತಿಗೆ ಕಡಿಮೆ ಎಂದೇ ಅನ್ನಿಸುವುದು ಈ ಕಲೆಯ ಭ್ರಾಮಕಗುಣ ಮತ್ತು ಪರಿಪೂರ್ಣತೆಯ ಸ್ವರೂಪದಿಂದ. ಭೌಮದಲ್ಲಿ ಕಲೆಯ ವಿಕಸನ ವಿಧಾನವೇ ವಿಲಕ್ಷಣ. ಈ ಸಾಮರ್ಥ್ಯದಿಂದಲೇ ದಿವ್ಯವನ್ನು ಸೃಷ್ಟಿಸುವ ಸಾಧ್ಯತೆ, ಮೌಲ್ಯ ಬೋಧನೆ, ನೀತಿ ಪಾಠಗಳೆಲ್ಲವೂ ಸಾಧ್ಯ. ಇದು ಆರಾಧನಾ ರಂಗ ಕಲೆ. ಕಂಡು ಆನಂದಿಸಬಹುದಾದ್ದರಿಂದ ಇದು ಪ್ರದರ್ಶನ ಕಲೆ.
ಯಕ್ಷಗಾನ ಕೃತಿ: ಅರ್ಜಿ ಆಹ್ವಾನ
ಬೆಂಗಳೂರು: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಯಕ್ಷಗಾನ ಬಯಲಾಟದ ವಿವಿಧ ಕಲಾಪ್ರಕಾರ ಕುರಿತು ಕೃತಿ ಪ್ರಕಟಿಸಿರುವ ಲೇಖಕರಿಂದ ಬಹುಮಾನಕ್ಕೆ ಅರ್ಜಿ ಆಹ್ವಾನಿಸಿದೆ.

ಆಯ್ಕೆಯಾದ ಕೃತಿಗೆ 5 ಸಾವಿರ ನಗದು ಬಹುಮಾನವನ್ನು ನೀಡಲಾಗುವುದು. ಸಂಶೋಧನೆ, ವಿಮರ್ಶೆ, ಜೀವನ ಚರಿತ್ರೆ ಸೇರಿದಂತೆ ಯಕ್ಷಗಾನದ ವಿವಿಧ‌ ಆಯಾಮಗಳ ಕುರಿತು ರಚಿಸಿರುವ ಲೇಖಕರೂ ಅರ್ಜಿ ಸಲ್ಲಿಸಬಹುದು.
ಸುದ್ದಿಗಳು - 2012

ಉಡುಪಿ ಕಲಾರಂಗ ಪ್ರಶಸ್ತಿ ಪ್ರಕಟ
ಕಲಾರಂಗ ಉಡುಪಿ ಇದರ 2012ರ ಪ್ರಶಸ್ತಿ ಪ್ರಕಟವಾಗಿದೆ. ಈ ಸಾಲಿನ ವಿಶ್ವೇಶತೀರ್ಥ ಪ್ರಶಸ್ತಿಯು ಕಾಸರಗೋಡು ಜಿಲ್ಲೆಯ ಪೆರ್ಲದ ಪಡ್ರೆ ಚಂದು ಯಕ್ಷಗಾನ ನಾಟ್ಯ ತರಬೇತಿ ಕೇಂದ್ರಕ್ಕೆ ಪ್ರಾಪ್ತವಾಗಿದೆ.
ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಎರಡು ವರುಷಗಳ ಗೌರವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಘೋಷಣೆಯಾಗಿದೆ
ಏಕೈಕ ಮಹಿಳಾ ವೃತ್ತಿ ಭಾಗವತ ಲೀಲಾಗೆ ಅಕಾಡೆಮಿ ಪ್ರಶಸ್ತಿ
ಕನ್ನಡ ಕರಾವಳಿಯಷ್ಟೇ ಏಕೆ, ಕೇರಳದ ಉತ್ತರ ಭಾಗದ ಕರಾವಳಿಯಲ್ಲಿಯೂ ಚೆಂಡೆಯ ಸದ್ದು ಕೇಳದವರಿಲ್ಲ, ಮದ್ದಳೆಯ ಧೋಂ-ಕಾರಕ್ಕೆ ತಲೆದೂಗದವರಿಲ್ಲ, ರಂಗಸ್ಥಳದ ಗೆಜ್ಜೆಯ ಸದ್ದಿಗೆ ಮನಸೋಲದವರಿಲ್ಲ. ಪರಶುರಾಮ ಸೃಷ್ಟಿಯೆಂದೇ ಕರೆಯಲಾಗುವ ಮಣ್ಣಿನ ಕಣ ಕಣದಲ್ಲಿಯೂ ಯಕ್ಷಗಾನದ ಸುವಾಸನೆಯಿದೆ, ಜನರ ನಾಡಿ ಮಿಡಿತವೂ ಯಕ್ಷಗಾನದೊಂದಿಗೆ ಮಿಳಿತವಾಗಿದೆ.
ರಂಗಸ್ಥಳದಿಂದ ನಿರ್ಗಮಿಸಿದ ಯಕ್ಷಗಾನದ ಮಹಾಬಲ
ಕರ್ನಾಟಕದ ಕರಾವಳಿಯ ಗಂಡುಕಲೆಯೆನಿಸಿದ ಯಕ್ಷಗಾನದ ಅಗ್ರಗಣ್ಯ ಸರ್ವೋತ್ಕೃಷ್ಟ ಕಲಾವಿದರಲ್ಲೊಬ್ಬರಾದ ಕೆರೆಮನೆ ಮಹಾಬಲ ಹೆಗಡೆ ಅವರ ನಿಧನದೊಂದಿಗೆ ಬಡಗುತಿಟ್ಟಿನ ಪರಂಪರೆಯ ಕೊಂಡಿಯೊಂದು ಕಳಚಿಬಿದ್ದಂತಾಗಿದೆ.

ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಕಲಾವಿದ ಅಳಿದರೂ ಕಲೆಗೆ ಅಳಿವಿಲ್ಲ ಎಂಬೊಂದು ಸತ್ಯವಾಕ್ಯದ ಹಿಂದೆ ಧಾವಿಸಿದರೆ ಧುತ್ತನೇ ಎದುರಾಗುವ ಹೆಸರು ಕೆರೆಮನೆ ಎಂಬ ಅಗ್ರಗಣ್ಯ ಯಕ್ಷಗಾನ ಕುಟುಂಬ. ಅಂಥ ಪರಂಪರೆಯ ಅನರ್ಘ್ಯ ಕೊಂಡಿಯಾಗಿದ್ದ, ಯಕ್ಷಗಾನ ಮಾತ್ರವಲ್ಲದೆ, ಸಂಗೀತ, ಭಜನೆ, ನಾಟಕ, ಭಜನೆ... ಹೀಗೆ ಜೀವನವನ್ನು ಬೆಳಗಬಲ್ಲ ಕಲೆಗಳ ಹೂರಣದಲ್ಲಿ ಮಿಂದೆದ್ದು ಅವುಗಳಲ್ಲಿಯೂ ಮಹಾಬಲರೆನ್ನಿಸಿಕೊಂಡ ಕೆರೆಮನೆ ಮಹಾಬಲ ಹೆಗಡೆ ಇಂದು ನಮ್ಮನ್ನಗಲಿದ್ದಾರೆ.
ಕಡತೋಕ ಶೈಲಿಯ ರೂವಾರಿ ಮಂಜುನಾಥ ಭಾಗವತರು ಇನ್ನಿಲ್ಲ
ಐದು ದಶಕಗಳ ಕಾಲ ತಮ್ಮ ಕಂಠ ಸಿರಿಯಿಂದ ಯಕ್ಷಗಾನ ಪ್ರಿಯರನ್ನು ರಂಜಿಸಿದ್ದ, ಯಕ್ಷಗಾನದ ಪರಂಪರೆಯ ಕೊಂಡಿ, ತೆಂಕು-ಬಡಗು ತಿಟ್ಟುಗಳ ಸವ್ಯಸಾಚಿ ಕಡತೋಕ ಮಂಜುನಾಥ ಭಾಗವತರು ಸೋಮವಾರ ನಿಧನರಾಗಿದ್ದಾರೆ.

ಅವರಿಗೆ 85 ವರ್ಷ ವಯಸ್ಸಾಗಿತ್ತು. ತೆಂಕು ತಿಟ್ಟಿನ ಅಗ್ರಗಣ್ಯ ಮೇಳಗಳಲ್ಲೊಂದಾದ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯೊಂದರಲ್ಲೇ 35 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದ ಕಡತೋಕ ಭಾಗವತರು, ಕಡತೋಕ ಶೈಲಿಯನ್ನೇ ಹುಟ್ಟು ಹಾಕಿದವರು. ಮೂಲತಃ ಉತ್ತರ ಕನ್ನಡದ ಕುಮಟಾ ತಾಲೂಕಿನವರಾಗಿದ್ದ ಅವರು, ಕೆಲ ಕಾಲದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ