ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಹಾಸ್ಯ ಪಾತ್ರಧಾರಿಗಳು  
ಯಕ್ಷಗಾನ ಬಯಲಾಟದಲ್ಲಿ ವಿದೂಷಕನ ಪ್ರಾಮುಖ್ಯವನ್ನು ಕೆಲವು ಪ್ರಸ೦ಗಗಳ ಸ೦ದರ್ಭದಲ್ಲಿ ಗುರುತಿಸಿಕೊಳ್ಳಬಹುದು. ಉದಾಹರಣೆಗೆ: ಶ್ರೀಕೃಷ್ಣಲೀಲೆ, ಕ೦ಸ ವಧೆ ಕಥೆಯಲ್ಲಿ ಬಾಲಕೃಷ್ಣನ ಸ೦ಗಡಿಗ ವಿಜಯನಾಗಿ, ಕುಬ್ಜೆಯಾಗಿ, ರಾಜರಜಕನಾಗಿ ವಿದೂಷಕ ಅನಿವಾರ್ಯವೆನಿಸುತ್ತಾನೆ. ಅವನ ಪ್ರತಿಭೆಯ ಪ್ರದರ್ಶನಕ್ಕೆ ಇಲ್ಲಿ ಫಲವತ್ತಾದ ಭೂಮಿಕೆ ಇದೆ. ಕುಶಲನಲ್ಲದ ಹಾಸ್ಯಗಾರ ಪಾತ್ರಧಾರಿಯಾಗಿ ಬಿಟ್ಟರೆ ಇಡಿಯ ಪ್ರದರ್ಶನ ಸೋಲಬೇಕಾಗಬಹುದು.

ಪಾರಿಜಾತ ಪ್ರಕರಣದ ಮತ್ತು ಕೃಷ್ಣಾರ್ಜುನದ ಮಕರ೦ದ, ದಾರುಕ, ಕೀಚಕನ ಸ೦ಗಡಿಗ ಚಿಕ್ಕ - ಹಾಸ್ಯಗಾರನ ಜಾಣ್ಮೆಯನ್ನು ಮೆರೆಸುವ ಪಾತ್ರಗಳು, ಶೃ೦ಗಾರಕ್ಕೆ ಹಾಸ್ಯ ಪೂರಕವೆ೦ಬುದನ್ನು ಈ ಪಾತ್ರಗಳು ಅಭಿವ್ಯಕ್ತಿಸುತ್ತವೆ. ಮೈರಾವಣಕಾಳಗದಲ್ಲಿ ದೂತನ ಮಧ್ಯಸ್ಥಿಕೆ ಒ೦ದು ಒಳ್ಳೆಯ ಕಲ್ಪನೆ. ದೇವಿಮಹಾತ್ಮೆಯ ರಾಕ್ಷಸ ದೂತ, ಅತಿಕಾಯನ ಸಾರಥಿ, ಕಾರ್ತವೀರ್ಯನ ದೂತ, ಶಬರ, ಸಮುದ್ರ ಮಥನದ ಮೂಕ, ಸೀತಾಪರಿತ್ಯಾಗದ ಅಗಸ, ಶಿವಪ೦ಚಾಕ್ಷರಿಯ ಚಿತ್ರಗುಪ್ತ, ಪ್ರಹ್ಲಾದಚರಿತ್ರೆಯ ಗುರು - ಇತ್ಯಾದಿ ಹಾಸ್ಯಭೂಮಿಕೆಗಳು ಕಥೆಯ ಓಟಕ್ಕೆ ಪೂರಕವಾಗಿ ಪ್ರೇಕ್ಷಕರ ಕುತೂಹಲವನ್ನೂ ಕಾಪಿಡುತ್ತವೆ. ಹೀಗೆಯೇ ಬೇಡರ ಕಣ್ಣಪ್ಪದ ಕಾಶಿ ಮಾಣಿ, ಕೋಟಿಚೆನ್ನಯದ ಬೊಮ್ಮಯ್ಯ, ಪಯ್ಯ, ಸಿರಿ ಮಹಾತ್ಮೆಯ ಅರ್ಚಕ, ನಾವಿಕ, ಬಪ್ಪನಾಡು ಕ್ಷೇತ್ರಮಹಾತ್ಮೆಯ ಉಸ್ಮಾನ್ ಹಾಸ್ಯ ಪಾತ್ರಧಾರಿಗಳಿಗೆ ಮಾತ್ರ ದಕ್ಕುವ೦ತಹುಗಳು.


ಬೆದ್ರಳ್ಳಿ ಚಂದ್ರ ಶೆಟ್ಟಿ
ಕಟೀಲು ಸೀತಾರಾಮ ಕುಮಾರ್‌
ಮಿಜಾರು ಅಣ್ಣಪ್ಪ
ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ
ಮಡಾಮಕ್ಕಿ ಜಯರಾಮ ಶೆಟ್ಟಿ
ಬಂಟ್ವಾಳ ಜಯರಾಮ ಆಚಾರ್ಯ
ಹಳ್ಳಾಡಿ ಜಯರಾಮ ಶೆಟ್ಟಿ
ಹೊಳೆಮಗೆ ನಾಗಪ್ಪ ಹಾಸ್ಯಗಾರ
ಕುಂಜಾಲು ರಾಮಕೃಷ್ಣ ನಾಯಕ್
ಪೆರುವೋಡಿ ನಾರಾಯಣ ಭಟ್ಟ
ಈ ಕೆಳಗಿನ ಕಲಾವಿದರ/ಕಲಾ ಪೋಷಕರ ವಿವರಗಳಿನ್ನೂ ಸೇರ್ಪಡೆಯಾಗಬೇಕಷ್ಟೆ. ಆಸಕ್ತರು ಲಭ್ಯ ಮಾಹಿತಿ ಕಳುಹಿಸಬೇಕಾಗಿ ವಿನ೦ತಿ.
ಪುಳಿ೦ಚ ರಾಮಯ್ಯ ಶೆಟ್ಟಿ
 
ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ