ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನಗಳು  

ಇತಿಹಾಸದ ಪುಟಕ್ಕೆ ಸಂದು ಹೋದ ಯಕ್ಷ ವಾಚಸ್ಮತಿ : ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ
ತೆಂಕುತಿಟ್ಟು ಮತ್ತು ಬಡಗುತಿಟ್ಟು ರಂಗಸ್ಥಳವನ್ನು ತನ್ನ ವಾಕ್ಚಾತುರ್ಯದಿಂದ ಶ್ರೀಮಂತಗೊಳಿಸಿ ತಾಳ ಮದ್ದಳೆಯ ಕ್ಷೇತ್ರದಲ್ಲಿಯೂ ಬಹು ಬೇಡಿಕೆಯ ಕಲಾವಿದರಾಗಿ ಅಭಿಮಾನಿಗಳಿಂದ ಯಕ್ಷ ವಾಚಸ್ಮತಿ ಎಂಬ ಬಿರುದನ್ನು ಪಡೆದ ಹಿರಿಯ ಕಲಾವಿದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರು ಅನಾರೋಗ್ಯದಿಂದ ಇಂದು ಬೆಳಿಗ್ಗೆ 9. 15 ಕ್ಕೆ ನಿಧನ ಹೊಂದಿದರು. ಯಕ್ಷರಂಗಕ್ಕೆ ತೀವೃ ಆಘಾತ ತಂದ ಸುದ್ದಿ ಇದು. ಕಳೆದ ಐದು ತಿಂಗಳಿಂದ ಅನಾರೋಗ್ಯದಿಂದಿದ್ದ ಶೆಟ್ಟರ ನಿಧನ ಯಕ್ಷರಂಗಕ್ಕೆ ದೊಡ್ಡ ನಷ್ಟವನ್ನೇ ತಂದಿದೆ. ಸದಾ ನಗುಮೊಗದ, ಸರಳ, ನಿಗರ್ವಿ ವ್ಯಕ್ತಿತ್ವದ ಶೆಟ್ಟರು ಇನ್ನೀಗ ನೆನಪು ಮಾತ್ರವಾಗಿ ಇತಿಹಾಸದ ಪುಟಕ್ಕೆ ಸಂದು ಹೋದರು ಎಂದು ಬರೆಯುವುದೇ ವೇದನೆಯ ವಿಷಯ.
ಇಡಗುಂಜಿ ಮೇಳಕ್ಕೆ ಕನ್ನಡ ಸಂಸ್ಕೃತಿ ಇಲಾಖೆಯಿಂದ ಧನಸಹಾಯ ನಿರಾಕರಣೆ
ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಇಂತಹ ಸರಕಾರದ ಸಂಸ್ಥೆಗಳೂ ಕೂಡ ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ದಾಟಿಸಿ ಬೆಳೆಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿರುವ ಇಂತಹ ಸಂಸ್ಥೆಗಳಿಗೆ ನೀಡುವ ಅಲ್ಪ ಸಹಾಯವನ್ನೂ ವಿಳಂಬಗೊಳಿಸಿದರೆ ಅಥವಾ ಪೂರ್ವಸೂಚನೆಯಿಲ್ಲದೆ ನಿಲ್ಲಿಸಿದರೆ ನಷ್ಟವಾಗುವುದು ಯಾರಿಗೆ ಎನ್ನುವ ಕುರಿತು ಚಿಂತಿಸಬೇಕಿದೆ. ಈ ಸಂಸ್ಥೆಗಳನ್ನು ಬಹಳ ಕಷ್ಟಪಟ್ಟು ನಡೆಸುತ್ತಿರುವುದು ಈ ನಮ್ಮ ಸಂಸ್ಕೃತಿಯ ಭಾಗವಾಗಿರುವ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವುದಕ್ಕಾಗಿ. ಯಕ್ಷಗಾನ ಕಲೆ ಉಳಿದು ಬೆಳೆಯಬೇಕಿದ್ದಲ್ಲಿ ಇಂತಹ ಸಂಸ್ಥೆಗಳು ಜೀವಂತವಾಗಿರಬೇಕು. ಇದಕ್ಕೆ ಸರಕಾರದ ಧನಸಹಾಯ ಅತೀ ಅವಶ್ಯ.
ಜಗಜ್ಯೋತಿ ಬಸವೇಶ್ವರ ಚರಿತೆ : ಯಕ್ಷಗಾನ ಪ್ರಸಂಗಗಳಿಗೆ ವಚನಗಳ ಬೆಸುಗೆ
ನಗರದ ಡಿವಿಎಸ್ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ವಿದ್ವಾನ್‌ ದತ್ತಮೂರ್ತಿ ಭಟ್ ಅವರು ಸಮಾನತೆಯ ಹರಿಕಾರ ಬಸವಣ್ಣನವರ ಜೀವನ ಚರಿತ್ರೆ, ವಚನ ಮಾಲಿಕೆ, ಬಸವತತ್ವ ಒಳಗೊಂಡ ವಿಚಾರಗಳನ್ನು ಯಕ್ಷಗಾನ ಪ್ರಸಂಗಕ್ಕೆ ಅಳವಡಿಸಿ, ನಾಡಿನ ಮೂಲೆ ಮೂಲೆಯಲ್ಲೂ ಪ್ರದರ್ಶನ ನೀಡಿದ್ದಾರೆ. ಎನ್ನುವಂತೆ ಮಲೆನಾಡು–ಕರಾವಳಿ ಭಾಗದ ಜನಪ್ರಿಯ ಯಕ್ಷಗಾನಕ್ಕೂ, ಉತ್ತರ ಕರ್ನಾಟಕದಲ್ಲಿ ಸಮಾನತೆಯ ಕಹಳೆ ಮೊಳೆಗಿಸಿದ 12ನೇ ಶತಮಾನದ ಕ್ರಾಂತಿಪುರುಷ ಬಸವಣ್ಣನ ವಚನ ಸಾಹಿತ್ಯಕ್ಕೂ ಎಲ್ಲಿಯ ಸಂಬಂಧ. ಆದರೂ, ಇಂತಹ ಸಂಬಂಧ ಬೆಸೆದವರು ನಗರದ ನಾಟ್ಯಶ್ರೀ ಕಲಾ ತಂಡದ ದತ್ತಮೂರ್ತಿ ಭಟ್‌.
ಕಾಳಿಂಗ ನಾವಡರು ಸೃಷ್ಟಿಸಿದ ಭಾಗವತಿಕೆಯ ಹೊಸ ಶೈಲಿ
ಯಕ್ಷಗಾನ ಭಾಗವತಿಯಲ್ಲಿ ಕ್ರಾಂತಿ ಮೂಡಿಸಿದ 25 ವರ್ಷದ ಹಿಂದೆ ನಮ್ಮನ್ನಗಲಿದ, ಯಕ್ಷಗಾನ ಭಾಗವತಿಕೆಯ ಯುಗ ಪ್ರವರ್ಥಕ ಕಾಳಿಂಗ ನಾವಡರು ಯಕ್ಷಗಾನ ಭಾಗವತಿಕೆಗೆ ಹೊಸದೊಂದು ಶೈಲಿಯನ್ನು ಹುಟ್ಟು ಹಾಕಿದವರು. ತಮ್ಮ ಕಂಚಿನ ಕಂಠದಿಂದ ಹೊಸ ಹೊಸ ಯಕ್ಷಗಾನೇತರ ರಾಗಗಳನ್ನು ಪರಿಚಯಿಸಿದ ಇವರು ಭೈರವಿ, ಮಧ್ಯಮಾವತಿ, ಮೋಹನ, ಬಿಲಹರಿ, ಸಾವೇರಿ, ಕಾಂಬೋದಿ ಮುಂತಾದ ಹಳೆಯ ರಾಗಗಳಿಗೆ ಹೊಸ ಸಂಚಾರ ನೀಡಿದವರು. ಚಾಂದ್, ಬೇಹಾಗ್, ಬಹುದಾರಿ, ಚಾರುಕೇಶಿ, ಅಬೇರಿ , ರೇವತಿ ಮುಂತಾದ ಯಕ್ಷಗಾನದಲ್ಲಿ ಬಳಕೆಯಾಗದ ರಾಗಗಳನ್ನು ಬಳಸಿಕೊಂಡು ಯಕ್ಷಗಾನಕ್ಕೆ ಹೊಸ ಹಿಮ್ಮೇಳಾಸಕ್ತರನ್ನು ಮುಖ್ಯವಾಗಿ ಯುವ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡರು. ಆದರೆ ನಾವಡರ ಹೊಸ ಶೈಲಿ ಬಡಗುತಿಟ್ಟಿನ ಇನ್ನೊಂದು ಮೂರನೇ ಹೊಸ ಶೈಲಿ ಎಂದು ಎಲ್ಲಿಯೂ ದಾಖಲಾಗದಿದ್ದದ್ದು ಯಕ್ಷಗಾನದ ದೌರ್ಭಾಗ್ಯವೇ ಸರಿ.
ಹಾಸ್ಯಗಾರರ ಅಗ್ರಜ ಮಿಜಾರು ಅಣ್ಣಪ್ಪ
ಮಂಗಳೂರು ತಾಲೂಕಿನ ಪುಟ್ಟ ಗ್ರಾಮವಾದ ಮಿಜಾರು ಇಂದು ವಿಶ್ವವ್ಯಾಪಿ ಹೆಸರು ಗಳಿಸಿದ್ದುದಾದರೆ, ಅದು ಯಕ್ಷರಂಗದ ಸುಪ್ರಸಿದ್ಧ ಹಾಸ್ಯ ಕಲಾವಿದ ಅಣ್ಣಪ್ಪ ಹಾಸ್ಯಗಾರರಿಂದಾಗಿ ಎಂದರೆ ಅತಿಶಯೋಕ್ತಿಯಲ್ಲ. ಮಿಜಾರು ಅಣ್ಣಪ್ಪ ಯಕ್ಷರಂಗದ ಅನಘ ರತ್ನ. ತಮ್ಮ ಹಾಸ್ಯ ಚಟಾಕಿಗಳಿಂದ, ಚುಟುಕು ಗಾದೆಗಳನ್ನು ಸಂದಭೋಚಿತವಾಗಿ ಉಲ್ಲೇಖೀಸಿ ಹಾಸ್ಯ ಸುರಿಸುವ ಶೈಲಿಯಿಂದ, ಶುದ್ಧ ತುಳುವಿನಲ್ಲಿ ನುಡಿಕಟ್ಟುಗಳನ್ನು, ಸಂಭಾಷಣೆಗಳನ್ನು ತನ್ನದೇ ಶೈಲಿಯಲ್ಲಿ ಪ್ರಸ್ತುತ ಪಡಿಸುವ ವಿಧಾನದಿಂದ ಅವರು ಹಲವು ತಲೆಮಾರುಗಳ ಯಕ್ಷಪ್ರಿಯರ ಹೃದಯ ಸಿಂಹಾಸನದಲ್ಲಿ ಆಸೀನರಾಗಿದ್ದಾರೆ.
ಶೀನಪ್ಪ ರೈಗಳ ಆರು ದಶಕಗಳ ಯಕ್ಷ ತಿರುಗಾಟದ ಸಾರ್ಥಕ್ಯ
ತನ್ನ 13ನೇ ವಯಸ್ಸಿನಲ್ಲಿ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿ ಕಳೆದ ಆರು ದಶಕಗಳಿಂದ ಯಕ್ಷ ಸಾಮ್ರಾಜ್ಯ ವನ್ನಾಳುತ್ತಿರುವ ಸಂಪಾಜೆ ಶೀನಪ್ಪರೈಗಳು ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದವರು. ಈ ವರ್ಷ ಯಕ್ಷ ತಿರುಗಾಟದ 60ರ ಸಂಭ್ರಮವನ್ನು ಸದ್ದುಗದ್ದಲವಿಲ್ಲದೆ ಆಚರಿಸಿಕೊಳ್ಳುತ್ತಿರುವ ರೈಗಳು ಕಲೆಯೊಂದಿಗೆ ಬದುಕನ್ನು ಕಟ್ಟಿ ಕಲಾ ಸಮೃದ್ಧಿಯಿಂದ ರಸಿಕ ಜನಪ್ರೀತಿಯನ್ನು ಪಡೆದವರು. ಈ ಕಲಾಸಾಧನೆಯ ಸಂತೃಪ್ತಿ - ಸಂಭ್ರಮವನ್ನು ದೇವಿಯ ಸೇವಾರೂಪವಾದ ಯಕ್ಷಗಾನ ಬಯಲಾಟ ಏರ್ಪಡಿಸುವ ಮೂಲಕ ತನ್ನ ಸುತ್ತಲಿನ ಕಲಾಭಿಮಾನಿಗಳ ಜತೆಗೆ ಆಚರಿಸಲು ನಿರ್ಧರಿಸಿದ್ದಾರೆ.
ಭಾವದಲೆಯಲಿ ಮೀಯಲು ಪಾತ್ರಗಳು ಕಾಯುತ್ತಿವೆ!
ಒಂದು ಕಾಲಘಟ್ಟವಿತ್ತು. ಸ್ತ್ರೀಪಾತ್ರಗಳಿಗೆ ಕಲಾವಿದರು ರೂಪುಗೊಳ್ಳುವುದು ತೀರಾ ಕಡಿಮೆ. ಹವ್ಯಾಸಿ ರಂಗದಲ್ಲಂತೂ ನಿರ್ಲಕ್ಷಿತ. ಮೇಳಗಳ ಹೊರತಾದ ಆಟಗಳಲ್ಲೆಲ್ಲಾ ಸ್ತ್ರೀ ಪಾತ್ರಗಳಿಲ್ಲದ ಪ್ರಸಂಗಗಳನ್ನು ಆಯ್ದುಕೊಳ್ಳಲಾಗುತ್ತಿತ್ತು. ಆಗ ರಂಗದಲ್ಲಿ ಸ್ತ್ರೀಯಾಗುತ್ತಿದ್ದ ಬೆರಳೆಣಿಕೆಯ ಕಲಾವಿದರಿಗೆ ಅವಕಾಶಗಳ ಸುಗ್ಗಿ. ಅಭಿವ್ಯಕ್ತಿಗಿಂತಲೂ ರಂಗಕ್ಕೆ ಪಾತ್ರವು ಪ್ರವೇಶಿಸಿದರೆ ಸಾಕು! ಈಗ ಹಾಗಲ್ಲ. ಸ್ತ್ರೀಪಾತ್ರಧಾರಿಗಳ ಸಂಖ್ಯೆ ಹೆಚ್ಚಾಗಿದೆ. ಪಾತ್ರವನ್ನು ಮಾಡಲು ಒಲವಿದೆ, ಮುಜುಗರವಿಲ್ಲ. ಶರೀರ, ಶಾರೀರ, ಒನಪು, ಒಯ್ಯಾರಗಳನ್ನು ರೂಢಿಸಿಕೊಂಡ ಕಲಾವಿದರು ಸಾಕಷ್ಟಿದ್ದಾರೆ. ವಿವಿಧ ಭಂಗಿಗಳ ಚಿತ್ರಗಳು ಫೇಸ್ಬುಕ್ಕಿನಲ್ಲಿ ಇಣುಕುತ್ತವೆ. ಅಬ್ಬಾ.. ಸ್ತ್ರೀಯರನ್ನು ನಾಚಿಸುವ ರೂಪ. ಕಲಾವಿದರ ಶ್ರಮ ಗುರುತರ. ಇದೊಂದು ಉತ್ತಮ ಬೆಳವಣಿಗೆ.
ಹಿಂದಿನ ಕಾಲದ ಟೆಂಟ್ ಮೇಳದ ಸ್ವಾರಸ್ಯಗಳು
ಒಂದು ಕಾಲದಲ್ಲಿ 13 ಕ್ಕೂ ಹೆಚ್ಚು ಟೆಂಟ್ ಮೇಳಗಳಿದ್ದವು. ಮೇಳ ನಡೆಸುವುದು ಆರ್ಥಿಕವಾಗಿ ಲಾಭದಾಯಕವಲ್ಲದ ಕಾರಣ ಒಂದೊಂದೇ ಮೇಳಗಳು ನೇಪಥ್ಯಕ್ಕೆ ಸರಿಯುವಂತಾಯಿತು. ಈಗ ಸಾಲಿಗ್ರಾಮ, ಪೆರ್ಡೂರು ಎರಡು ಟೆಂಟ್ ಮೇಳಗಳು ಮಾತ್ರ ಉಳಿದಿದೆ. ಒಂದು ಕಾಲದಲ್ಲಿ ಕರ್ನಾಟಕ, ಸುರತ್ಕಲ್ ಮುಂತಾದ ಮೇಳಗಳ ಪ್ರದರ್ಶನದ ಕಾಂಟ್ರಾಕ್ಟ್ ಸಿಗಬೇಕಾದರೆ ವಸೂಲಿಬಾಜಿ ಮಾಡಿಸಬೇಕಾಗಿತ್ತು. ಅಷ್ಟು ಬೇಡಿಕೆಯಿತ್ತು. ಟೆಂಟ್ ಆಟ ನೋಡುವುದೇ ಒಂದು ಗಮ್ಮತ್ತು. ಆ ಮರದ ಈಸೀಚೇರ್ ನಲ್ಲಿ ಕಡ್ಲೆ, ಚರುಮುರಿ ತಿನ್ನುತ್ತಾ ಆಟ ನೋಡುವುದರಲ್ಲಿ ಇರುವ ಆನಂದ ಈಗಿನ ಪ್ಲಾಸ್ಟಿಕ್ ಖುರ್ಚಿಯಲ್ಲಿ ಸಿಗುವುದಿಲ್ಲ. ಪ್ರತೀ ವರ್ಷ ಕಲಾವಿದರು ಒಂದು ಮೇಳದಿಂದ ಇನ್ನೊಂದು ಮೇಳಕ್ಕೆ ``ಹಾರು``ವಲ್ಲೂ ಪ್ರೇಕ್ಷಕರ ಆಸಕ್ತಿಯಿತ್ತು.
ಬಾಹುಕನ ಭಾವುಕ ಅಂತರಂಗ
``ನಳಚರಿತ್ರೆ ಸಿನೆಮಾದಲ್ಲಿ ನಟ ಕೆಂಪೇಗೌಡರ `ಬಾಹುಕ` ಪಾತ್ರ ನನ್ನನ್ನು ಆಕರ್ಶಿಸಿತು. ಪಾತ್ರದ ನಡೆ, ಗೂನು ಬೆನ್ನು, ಮುಖದ ಭಾವ, ವೇಷ ಮತ್ತು ನಟನೆಗೆ ಮಾರುಹೋದೆ.`` ಹಾಸ್ಯಗಾರ್ ಪೆರುವೋಡಿ ನಾರಾಯಣ ಭಟ್ಟರು `ಬಾಹುಕ`ನನ್ನು ತಾನು ಚಿತ್ರಿಸಿದ್ದ ಆರಂಭದ ದಿವಸಗಳನ್ನು ನೆನಪಿಸಿಕೊಂಡರು. ಪೆರುವೋಡಿಯವರ `ಬಾಹುಕ` ಒಂದು ಕಾಲಘಟ್ಟದಲ್ಲಿ ಯಕ್ಷರಂಗದಲ್ಲಿ ಸಂಚಲನ ಮೂಡಿಸಿತ್ತು. ಬದುಕಿನಲ್ಲಿ ರಸ, ಭಾವಗಳು ಶುಷ್ಕವಾಗಿರುವಾಗ ಇಂತಹ ಪ್ರಸಂಗಗಳನ್ನು ಸ್ವೀಕರಿಸುವ ಪ್ರೇಕ್ಷಕರು ಎಷ್ಟಿದ್ದಾರೆ, ಎಂದು ಪ್ರಶ್ನಿಸುವ ಪೆರುವೋಡಿ ನಾರಾಯಣ ಭಟ್ಟರಿಗೆ ಈಗ ಎಂಭತ್ತೆಂಟರ ಹರೆಯ. ಉಮೇದು ಬಂದರೆ ಈಗಲೂ ಬಾಹುಕ, ಪಾಪಣ್ಣನಾಗುತ್ತಾರೆ!
ಯಕ್ಷಗಾನದಲ್ಲಿ ಪರಂಪರೆಯ ಪ್ರಜ್ಞೆ
ಯಕ್ಷಗಾನಕ್ಕೊಂದು ವಿಶಿಷ್ಟವಾದ ಪರಂಪರೆ ಇದೆಯೆಂದೂ, ಅದನ್ನು ನಾವು ಕೈಬಿಡಬಾರದೆಂದೂ ಬಹಳ ವರ್ಷಗಳಿಂದ ಹೇಳುತ್ತಾ ಬಂದಿದ್ದೇವೆ. ನಮ್ಮ ಜನತೆ ಪರಂಪರೆಯೆಂದು ಗುರುತಿಸುವುದು ಯಾವುದನ್ನು? ನಾವು ಕೇಳಿದ್ದನ್ನು, ಕಂಡದ್ದನ್ನು ಮತ್ತು ಮೆಚ್ಚಿದ್ದನ್ನು! ಕೆಲವೊಮ್ಮೆ ಅದು ಬದಲಾಗುತ್ತಾ ಹೋಗುತ್ತದೆ. ಕಾಲಕ್ಕೆ ತಕ್ಕಂತೆ ಮಾರ್ಪಾಡಾಗುತ್ತದೆ. ಜಾನಪದದಲ್ಲಿ ಅದು ಸಹಜ. ಪ್ರಕೃತ ನಾವು ನೋಡುತ್ತಿರುವ ಯಕ್ಷಗಾನವು ಈ ರೂಪಕ್ಕೆ ಬರಬೇಕಾದರೆ ಎಷ್ಟೋ ಅವಸ್ಥಾಂತರಗಳನ್ನು ಅದು ಪಡೆದಿರಲೇಬೇಕು. ಅನೇಕ ಬದಲಾವಣೆಗಳಿಗೆ ಅದು ಒಗ್ಗಿರಬೇಕು - ಎಂಬ ಸತ್ಯಾಂಶವನ್ನು ನಾವು ಮರೆಯುವಂತಿಲ್ಲ.
ಗಂಡುಕಲೆಯ ರಂಗಸ್ಥಳದೊಳು ಮಹಿಳೆಯರ ಪ್ರವೇಶ
ಯಕ್ಷಗಾನದ ಭಾರೀ ವೇಷಭೂಷಣಗಳನ್ನು ಹೊತ್ತು ಕುಣಿಯುವುದು ನಾಜೂಕಿನ (ಸ್ತ್ರೀ) ದೇಹಕ್ಕೆ ಸರಿಹೊಂದುವುದಿಲ್ಲ ಎಂಬ ಕಾರಣಕ್ಕೆ ಯಕ್ಷಗಾನಕ್ಕೂ ಮಹಿಳೆಗೂ ಆಗಿ ಬರುವುದಿಲ್ಲ ಎಂದು ‘ಪುರುಷ ಕಲೆ’ಯಾಗಿಯೇ ಉಳಿದಿದ್ದ ಈ ಕಲೆಯಲ್ಲಿ ವಯೋಮಾನದ ಹಂಗಿಲ್ಲದೇ ಕಲಾವಿದೆಯರು ಮುನ್ನುಗ್ಗುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರು ತೆಂಕುತಿಟ್ಟು ಯಕ್ಷಗಾನದಲ್ಲಿ ಹಿಮ್ಮೇಳಕ್ಕೂ ಪ್ರವೇಶ ಪಡೆದು ರಂಗವೇರಿದ್ದಾರೆ. ಐದು ಶತಮಾನಕ್ಕೂ ಹೆಚ್ಚಿನ ಇತಿಹಾಸ ಇರುವ ತೆಂಕು ತಿಟ್ಟು ಮತ್ತು ಬಡಗು ತಿಟ್ಟು ಶೈಲಿಯ ಯಕ್ಷಗಾನದ ರಂಗಸ್ಥಳಗಳಲ್ಲಿ ಮಹಿಳೆಯರು ಗುರುತಿಸಿಕೊಂಡು 2–3 ದಶಕಗಳೇ ಕಳೆದಿವೆ. ಇಡೀ ಪ್ರಸಂಗ ನಿರ್ವಹಿಸುವಷ್ಟು ಕಲಾವಿದೆಯರು ಬೆಳೆದಿದ್ದಾರೆ.
ಯಕ್ಷಗಾನ ಪ್ರದರ್ಶನದ ಪ್ರಚಾರಗಳ ಆಧುನೀಕರಣ
ಬಯಲು ಸೀಮೆಯ ಹಳ್ಳಿಯಲ್ಲಿದ್ದೆ. ಅಲಂಕೃತ ಟ್ರಾಕ್ಟರಿಗೆ ಧ್ವನಿವರ್ಧಕ ಬಿಗಿದು ಸಿನೆಮಾ ಪ್ರಚಾರ ಸಾಗುತ್ತಿತ್ತು. ಟ್ರಾಕ್ಟರ್ ಹಿಂದೆ ಏನಿಲ್ಲವೆಂದರೂ ಐವತ್ತಕ್ಕೂ ಮಿಕ್ಕಿ ಮಕ್ಕಳು, ಯುವಕರ ಹಿಂಡು ಅನುಸರಿಸುತ್ತಿತ್ತು. ತೆಳುಕಾಗದದ ಸಿನೆಮಾದ ಕರಪತ್ರ ಹಳ್ಳಿ ತುಂಬುವಷ್ಟು ಕೈಯಿಂದ ಕೈಗೆ ಬದಲಾಗುತ್ತಿದ್ದುವು. ಊರು ಹೊಸ ಸಿನೆಮಾವನ್ನು ಸ್ವಾಗತಿಸಲು ಸಜ್ಜಾಗುತ್ತಿತ್ತು. ರಿಕ್ಷಾ, ಜೀಪ್, ಅಂಬಾಸಿಡರ್ ಕಾರಿನಲ್ಲಿ ``ಬನ್ನಿರಿ, ನೋಡಿರಿ, ಆನಂದಿಸಿರಿ`` ಎನ್ನುವ ಸ್ಲೋಗನ್ ಕೇಳಿದರೆ ಸಾಕು, ಹಳ್ಳಿ ಅಲರ್ಟ ಆಗುತ್ತದೆ. ಕರಪತ್ರಗಳನ್ನು ಆಯಲು ಮಕ್ಕಳ ತಂಡ ಸಿದ್ಧವಾಗುತ್ತದೆ. ಒಂದರ್ಧ ಗಂಟೆಯಲ್ಲಿ ಇಡೀ ಹಳ್ಳಿಯಲ್ಲಿ ಯಕ್ಷಗಾನದ್ದೇ ಸುದ್ದಿ.
ಅಭಿಮಾನಿಗಳ ಕಣ್ಣಲ್ಲಿ ಶಾಶ್ವತವಾಗಿ ಅಶ್ರುವಿಳಿಸಿದ ಯಕ್ಷ ಕಣ್ಮಣಿ
ಕಣ್ಣಿ. ಅವರನ್ನು ಯಕ್ಷಲೋಕ ಕರೆಯುತ್ತಿದ್ದುದೇ ಹಾಗೆ. ಯಕ್ಷಗಾನ ಕರಪತ್ರದಲ್ಲಿಯೂ ಅಷ್ಟೆ. ಕಣ್ಣಿ ಅವರ ಕೃಷ್ಣ, ಕಣ್ಣಿ ಅವರ ಅಭಿಮನ್ಯು, ಕಣ್ಣಿ ಚಂದ್ರಹಾಸ, ಕಣ್ಣಿ ಲವ ಹೀಗೆ ಪ್ರಚಾರ ಮಾಡಲಾಗುತ್ತಿತ್ತು. ಕಣ್ಣಿ ಸಾಲ್ವ ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ ಎಂದೇ ಅವರ ಅಭಿಮಾನಿಗಳು ಹೇಳುತ್ತಿದ್ದರು. ಯಕ್ಷಗಾನ ರಂಗದಲ್ಲಿ ಕಣ್ಣಿಮನೆ ಗಣಪತಿ ಭಟ್‌ ಒಬ್ಬ ಅಜಾತ ಶತ್ರು. ಯಾರ ಜೊತೆಯೂ ಪಾತ್ರ ಮಾಡುವುದಿಲ್ಲ ಎಂಬ ಮಾತೇ ಇರಲಿಲ್ಲ. ಅವರಿಗೆ ಅವರೇ ಶತ್ರುವಾಗಿದ್ದರು. ಜೀವನದಲ್ಲಿ ಒಂದಿಷ್ಟು ಶಿಸ್ತು ರೂಢಿಸಿಕೊಂಡಿದ್ದರೆ ಅವರು ಕಿರೀಟ ವೇಷಕ್ಕೂ ಏರುತ್ತಿದ್ದರು. ಅವರ ಕೀರ್ತಿ ಕಿರೀಟ ಇನ್ನಷ್ಟು ಹೆಚ್ಚುತ್ತಿತ್ತು. ಅಂತಹ ಕಲಾವಿದನೊಬ್ಬ ಅಭಿಮಾನಿಗಳ ಕಣ್ಣಲ್ಲಿ ನೀರನ್ನು ಶಾಶ್ವತವಾಗಿ ಇರಿಸಿ ಇಹಲೋಕ ತ್ಯಜಿಸಿ ಬಿಟ್ಟರು.
ಅಜ್ರಿ ಗೋಪಾಲ ಗಾಣಿಗ ಮತ್ತು ನರಾಡಿ ಬೋಜರಾಜ ಶೆಟ್ಟರಿಗೆ ಮಂದಾರ್ತಿ ಮೇಳದ ಸಂಸ್ಮರಣಾ ಪ್ರಶಸ್ತಿ
ಯಕ್ಷಗಾನ ಕಲಾಭಿಮಾನಿ, ಕಲಾವಿದರ ಶ್ರೇಯೋಭಿವೃದ್ದಿಗಾಗಿ ಹಲವಾರು ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಿಗಿಸಿಕೊಂಡು ಬಯಲಾಟದ ಕಲಾವಿದರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿರುವ ಕಾವಡಿ ಸರಕಾರಿ ಪ್ರೌಡಶಾಲೆಯ ದೈಹಿಕ ಶಿಕ್ಷಕ ಚೇರ್ಕಾಡಿ ಅನಿಲಕುಮಾರ ಶೆಟ್ಟರು ಅಕಾಲದಲ್ಲಿ ದೈವಾದೀನರಾಗಿದ್ದು ಅವರ ಪ್ರಥಮ ವರ್ಷದ ಸಂಸ್ಮರಣೆಯಂದು ಶ್ರೀ ಮಂದಾರ್ತಿ ಮೇಳದ ಇಬ್ಬರು ಎರಡನೇ ವೇಷಧಾರಿಗಳಾದ ಆಜ್ರಿ ಗೋಪಾಲ ಗಾಣಿಗ ಮತ್ತು ನರಾಡಿ ಬೋಜರಾಜ ಶೆಟ್ಟರಿಗೆ ಅವರ ಸಂಸ್ಮರಣಾ ಪ್ರಶಸ್ತಿಯನ್ನು ನೀಡಲಾಗುವುದು.
ತಾಳಮದ್ದಳೆಯಲ್ಲಿ ಸಮಕಾಲೀನ ರಾಜಕೀಯದ ಪ್ರಸ್ತಾಪ
ತಾಳಮದ್ದಳೆಯಲ್ಲಿ ಆಗಾಗ ಪ್ರಚಲಿತ ರಾಜಕೀಯದ ಬಗ್ಗೆ ಉಲ್ಲೇಖವಾಗಿ ಜನರಂಜನೆ ಒದಗುವುದುಂಟು. ಶೇಣಿ, ಕಂಬ್ಳೆ, ಡಾ|| ಜೋಷಿ ಮೊದಲಾದವರ ಅರ್ಥಗಳಲ್ಲಿ ಧಾರಾಳ ಸಮಕಾಲೀನ ರಾಜಕೀಯದ ಘಟನೆಯು ಸಮಯೋಚಿತವಾಗಿ ಬರುವುದನ್ನು ನಾವು ಕಂಡಿದ್ದೇವೆ. ತಾಳಮದ್ದಳೆಯ ದಿಗ್ಗಜ ಅರ್ಥಧಾರಿಗಳಾದ ಶೇಣಿಯವರ, ಪ್ರಭಾಕರ ಜೋಶಿಯವರ, ಕು೦ಬ್ಳೆಯವರ ಕೆಲವು ಉವಾಚಗಳಿಲ್ಲಿವೆ.
ಪತಂಗ ಚಲನೆಯ ರಜತ ಚಂದ್ರ
ರಂಗದ ಮೇಲಿನ ಜೀವನಕ್ಕೆ ರಜತಪರ್ವವನ್ನು ಆಚರಿಸುವ ಚಂದ್ರಶೇಖರರ ವೇಷ ಕಾಣುವಾಗ ಅದಾಗಲೇ ಇಪ್ಪತ್ತೈದು ಕಳೆಯಿತೆ ? ಎಂಬ ಅನುಮಾನ ಬರುವುದು ಸಹಜ. ದಣಿವರಿಯದ ಸುಂದರ ನಾಟ್ಯ ನೋವರಿಯದ ನಗುಮುಖ, ಪಾತ್ರಕ್ಕೆ ಒಪ್ಪುವ ಹಿತಮಿತವಾದ ಪರಿಶುದ್ದ ಮಾತುಗಾರಿಕೆ. ಎಲ್ಲವನ್ನು ಮೀರಿ ನಿಲ್ಲುವ ಸರಳ ಹಾಗು ವಿನಮ್ರ ನಡತೆ ಹೀಗೆ ಓರ್ವ ಪುಂಡುವೇಷಧಾರಿಯಾಗಿಯೋ ಕಲಾವಿದನಾಗಿಯೋ ಯೋಗ್ಯತೆಗಳು ಏನಿರಬೇಕೋ ಅದೆಲ್ಲವನ್ನು ಹೊಂದಿಕೊಂಡ ರಂಗದ ಪಾದರಸ ಚಲನೆಗೆ ಇಪ್ಪತೈದರ ರಂಗಾನುಭವ ಎಂದರೆ ಅಚ್ಚರಿಯಾಗುತ್ತದೆ.
ಮಾತಿನ ಲೋಕದ ಮೆಲುಕು
1953-54 ಇಸವಿಯ ಆಜೂಬಾಜು. ಕಲಾಭಿಮಾನಿ ಕಾಂದಿಲ ವೆಂಕಟ್ರಾಯರ ಯಜಮಾನಿಕೆಯಲ್ಲಿ ಕೂಡ್ಲು ಮೇಳ ಸಂಪನ್ನವಾಗಿತ್ತು. ರಂಗದಲ್ಲಿ ಮಾತುಗಾರಿಕೆಯನ್ನು ಅಪೇಕ್ಷಿಸಿದ ಕಾಲಘಟ್ಟವದು. ಆಗ `ಆಟ ನೋಡುವ` ಪ್ರೇಕ್ಷಕರಲ್ಲಿ ಬೌದ್ಧಿಕತೆಯಿತ್ತು. 1967-68. ಮಾತುಗಾರಿಕೆಯನ್ನು ಪ್ರೀತಿಸಿದ ಪ್ರೇಕ್ಷಕರ ನಂತರದ ಪೀಳಿಗೆಗೆ ಮಾತುಗಾರಿಕೆ ದೀರ್ಘ ಅಂತ ಅನ್ನಿಸಿತು. ಅವರ ಮನಃಸ್ಥಿತಿಗೆ `ಬೋರ್` ಆಯಿತು! 1995-96 - `ಮಾತು ಹೆಚ್ಚಾಯಿತು` ಎನ್ನುವವರು ಕಡಿಮೆಯಾದರು. `ಕುಣಿತ ಹೆಚ್ಚಾಯಿತು` ಕೂಗು ಎದ್ದಿತು. ಈಗ ಪೂರ್ಣಪ್ರಮಾಣದ ಪ್ರೇಕ್ಷಕರು ತೀರಾ ಕಡಿಮೆ. ಹೊಸತಾಗಿ ಆಸಕ್ತಿ ರೂಢಿಸಿಕೊಂಡ ಪ್ರೇಕ್ಷಕರಿದ್ದಾರಲ್ಲಾ, ಅವರ ಅಭಿರುಚಿಗಳೇ ಬೇರೆ. ಯಕ್ಷಗಾನದ ಆಸಕ್ತಿಗಳಿಗೆ ಈಗಿನ ಜೀವನ ವಿಧಾನವು ಸ್ಪಂದಿಸುವುದಿಲ್ಲ....
ವರ್ತಮಾನಕ್ಕೆ ಸ್ಪಂದಿಸಿದ ಯಕ್ಷಗಾನದ ಅಭಿಮನ್ಯು
ಅಭಿಮನ್ಯು ವಧೆಯ ಯಕ್ಷಕಥನವನ್ನು ಶಿವರಾಮ ಕಾರಂತರು ರಂಗದ ಮೇಲೆ ಬ್ಯಾಲೆಯಾಗಿ ಅದ್ಭುತವಾಗಿ ತಂದಿದ್ದರು. ಕಾರಂತರು ಯಕ್ಷಗಾನದ ಎಷ್ಟೊಂದು ಸಾಧ್ಯತೆಗಳನ್ನು ಬಳಸಿದ್ದರು ಎಂದು ಬೆರಗಿನಿಂದ ಹೇಳಿಕೊಳ್ಳುವ ಬನ್ನಂಜೆ ಸಂಜೀವ ಸುವರ್ಣರು, ಆ ರಂಗರೂಪ ವನ್ನು ನೇರವಾಗಿ ಅನುಸರಿಸುವುದರಿಂದ ಏನೂ ಸಾಧಿಸಲಾಗದು, ಅದನ್ನು ಭಿನ್ನವಾಗಿ ಮರುರೂಪಿಸುವುದು ಮತ್ತು ರಂಗಸಾಧ್ಯತೆಗಳನ್ನು ವಿಸ್ತರಿಸುವುದೇ ಕಾರಂತರಿಗೆ ಸಲ್ಲಿಸಬಹುದಾದ ನಿಜವಾದ ಗೌರವ ಎಂದು ಭಾವಿಸಿದವರು. ಹಾಗಾಗಿ, ಹೊಸದಾದ ``ಚಕ್ರವ್ಯೂಹ``ವನ್ನು ದಿಲ್ಲಿಯ ಎನ್‌ಎಸ್‌ಡಿ ವಿದ್ಯಾರ್ಥಿಗಳಿಂದ ವಿಶಿಷ್ಟವಾದ ``ಅಭಿಮನ್ಯು ಕಾಳಗ``ವನ್ನು ಪ್ರಸ್ತುತಪಡಿಸುವಲ್ಲಿ ಸಫ‌ಲರಾಗಿದ್ದಾರೆ.
ಶಬರಿಮಲೆ ಕ್ಷೇತ್ರ ಮಹಾತ್ಮೆ : ಅಯ್ಯಪ್ಪ ಆಖ್ಯಾನಕ್ಕೆ ಅರ್ಧ ಶತಮಾನ
ಕದಿರುದ್ಯಾವರ ವಾಸುದೇವ ನಾಯ್ಕ್ ಎನ್ನುವ ಕವಿ ``ಶಬರಿಮಲೆ ಕ್ಷೇತ್ರ ಮಹಾತ್ಮೆ`` ಪ್ರಸಂಗವನ್ನು ರಚಿಸಿದ್ದರು. ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಕೀರ್ತಿಶೇಷ ರತ್ನವರ್ಮ ಹೆಗ್ಗಡೆಯವರು ಪ್ರಸಂಗವನ್ನು ಓದಿ, ಅಧ್ಯಯನ ಮಾಡಿ ಒಪ್ಪಿಗೆ ನೀಡಿದ್ದರು. ನಾರಾಯಣ ಕಾಮತ್ ಆಗ ಮೇಳದ ವ್ಯವಸ್ಥಾಪಕರಾಗಿದ್ದರು. ಕಡತೋಕ ಮಂಜುನಾಥ ಭಾಗವತರು ಮತ್ತು ಪುತ್ತೂರು ನಾರಾಯಣ ಹೆಗ್ಡೆಯವರು ಪ್ರಸಂಗದ ಸನ್ನಿವೇಶ, ಪದ್ಯಗಳು, ವೇಷಭೂಷಣ, ರಂಗನಡೆಗಳ ಕುರಿತು ನಿರ್ದೇಶನ ಮಾಡಿದ್ದರು. ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ಮೊದಲ ಪ್ರದರ್ಶನ ಜರುಗಿತ್ತು.
ಬೋಳಾರ ನಾರಾಯಣ ಶೆಟ್ಟಿ ಪ್ರಶಸ್ತಿ ಮಾನ್ಯರು
ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಒಂಟಿ ಸಲಗನಂತೆ ಮೆರೆದ ಬೋಳಾರ ನಾರಾಯಣ ಶೆಟ್ಟರ ಜನ್ಮಶತಮಾನೋತ್ಸವ ವರ್ಷ ಇದು. ಶತಮಾನ ಸ್ಮರಣೆಯ ಸುಸಂದರ್ಭದಲ್ಲಿ ಸುಮಾರು ಎರಡು ದಶಕಗಳ ಕಾಲ ಕರ್ನಾಟಕ ಮೇಳದಲ್ಲಿ ಅವರ ಒಡನಾಡಿ ಕಲಾವಿದರಾಗಿದ್ದ ಹಿರಿಯ ವೇಷಧಾರಿ ಬಾಯಾರು ರಘುನಾಥ ಶೆಟ್ಟಿ ಅವರಿಗೆ ಶತಮಾನೋತ್ಸವ ಪ್ರಶಸ್ತಿ ಕೊಡಮಾಡಲಾಗಿದೆ. ಈ ವರ್ಷದ ``ಬೋಳಾರ ಪ್ರಶಸ್ತಿ``ಯನ್ನು ಈ ವರ್ಷ ಖ್ಯಾತ ಸ್ತ್ರೀವೇಷಧಾರಿಗಳಾದ ಪುಂಡರೀಕಾಕ್ಷ ಉಪಾಧ್ಯಾಯ ಮತ್ತು ಸಂಜಯ ಕುಮಾರ ಶೆಟ್ಟಿ ಅವರಿಗೆ ನೀಡಲಾಗಿದೆ.
ಸೊಂಟತ್ರಾಣದ ವೇಗವು ಪಾತ್ರದ ವೇಗವಲ್ಲ!
ದೇವೇಂದ್ರನ ಪ್ರವೇಶಕ್ಕೂ, ಇಂದ್ರಜಿತುವಿನ ಪ್ರವೇಶಕ್ಕೂ ವ್ಯತ್ಯಾಸವಿದೆ. ರಂಗಕ್ರಿಯೆಗಳಲ್ಲೂ ಬದಲಾವಣೆಯಿದೆ. ಅಭಿಮನ್ಯು, ಬಬ್ರುವಾಹನ.. ಪಾತ್ರಗಳ ನಡೆಗಳು ವಿಭಿನ್ನ. ಕಲಾವಿದನಿಗೆ ತಾಳಗತಿಯ ಜ್ಞಾನವಿದ್ದರೆ ಕಾಲಪ್ರಮಾಣದ ಕುಣಿತಗಳಿಂದ ರಂಗಕ್ಕೆ ನ್ಯಾಯ ಸಲ್ಲಿಸಬಹುದು. ಸಮಯ ಇಲ್ಲವೆಂದು ಗತಿಯನ್ನು ಬೇಕಾದಂತೆ ಬದಲಿಸಿದರೆ ಅಧೋಗತಿ! ಕಾಲಪ್ರಮಾಣಕ್ಕೆ ಅನುಗುಣವಾಗಿಯೇ ಪಾತ್ರಗಳು ರಂಗಪ್ರವೇಶ ಮಾಡಬೇಕು. ಒಂದೊಂದು ಪಾತ್ರಕ್ಕೆ ಒಂದೊಂದು ವೇಗ. ಕಾಲಪ್ರಮಾಣಗಳ ನಿರ್ವಹಣೆಯು ಪ್ರೇಕ್ಷಕರ ಮೇಲೆ ಗಣನೀಯ ಪರಿಣಾಮ ಕೊಡುತ್ತದೆ.
ಅಪೂರ್ವ ಯಕ್ಷಸಾಧಕ ಜಲವಳ್ಳಿಯವರಿಗೆ ಯಕ್ಷದೇಗುಲ-2015 ರ ಪುರಸ್ಕಾರ
ಯಕ್ಷಗಾನ ಕಲೆಯ ಪಾರಂಪರಿಕ ಅನುಭವ, ಶಾಸ್ತ್ರಬದ್ಧ ಕಲಿಕೆ, ಪುರಾಣ ಜ್ಞಾನ, ಪಾತ್ರ ಪರಿಕಲ್ಪನೆ, ಸನ್ನಿವೇಷ ಸೃಷ್ಟಿ, ವೇಷ ಸೌಂದರ್ಯದ ಕುರಿತು ಗಂಭೀರ ಚಿಂತನೆಗಳನ್ನು ಮೇಳೈಸಿಕೊಂಡು ಪರಿಪೂರ್ಣ ಕಲಾವಿದರಾಗಿ ರೂಪುಗೊಂಡ ಜಲವಳ್ಳಿಯವರು ಎತ್ತರದ ನಿಲುವಿನ ಆಕರ್ಷಕ ವೇಷ, ವೇಷಕ್ಕೊಪ್ಪುವ ಕುಣಿತ, ಸಭಿಕರ ಗಮನವನ್ನು ಸೆಳೆಯುವ ಸ್ವರಭಾವ, ಎರಡನೇ ವೇಷದ ಗತ್ತು-ಗೈರತ್ತು, ಅತಿ ಎನಿಸದ ಮಿತವಾದ ರಂಗ ಸಂಚಾರಗಳ ಮೂಲಕ ಯಕ್ಷರಂಗದಲ್ಲಿ ತನ್ನದೇ ಛಾಪು ಮೂಡಿಸಿ ಅಭಿಜಾತ ಕಲಾವಿದರೆನಿಸಿಕೊಂಡವರು. ಬೆಂಗಳೂರಿನ ಯಕ್ಷದೇಗುಲ - 2015 ರ ಪ್ರಶಸ್ತಿಗೆ ಈ ವರ್ಷ ಜಲವಳ್ಳಿ ವೆಂಕಟೇಶ್ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ.
ಅರವತ್ತರ ತಿರುವಿನಲ್ಲಿ ಯಕ್ಷ ಯಾಜಿ
ಹೌದು, ಬಳ್ಕೂರು ಕೃಷ್ಣ ಯಾಜಿ ಅವರಿಗೆ 60 ವರ್ಷ ಆಯ್ತು. ವಯಸ್ಸಾಗಿದ್ದಕ್ಕೆ ಯಾಜಿ ಅವರಿಗೆ ಬೇಜಾರೇನಿಲ್ಲ. ಯಕ್ಷಗಾನ ರಂಗದಲ್ಲಿ 40 ವರ್ಷ ದುಡಿದ ಅವರು ಈ ರಂಗಕ್ಕೆ ಸಾಕಷ್ಟು ಕೊಟ್ಟಿದ್ದಾರೆ. ಅದಕ್ಕೂ ಹೆಚ್ಚು ಪಡೆದುಕೊಂಡಿದ್ದಾರೆ. ಅವರು ಈಗ ಮಾಗಿದ ಯಾಜಿ. ವಯಸ್ಸಿಗೆ ಸಹಜವಾದ ಗಾಂಭೀರ್ಯ ಅವರಲ್ಲಿ ತುಂಬಿದೆ. ಮಾತು ಘನವಾಗಿದೆ. ಅಭಿನಯ ಸೊಗಸಾಗಿದೆ. ಹೆಜ್ಜೆ ಬದ್ಧವಾಗಿದೆ. ಕಾಲ ಕಾಲಕ್ಕೆ ಬದಲಾಗುತ್ತಲೇ ಬಂದ ಯಕ್ಷಗಾನ ಯಾವಾಗಲೂ ಸಕಾಲಿಕವೆ. ಹೀಗಿದ್ದರೂ ಯಾಜಿಗೆ 60 ಎನ್ನುವುದು ಕೇವಲ ಸಂಭ್ರಮಕ್ಕೆ ಕಾರಣವಾಗಿಲ್ಲ. ಯಕ್ಷಗಾನ ಪ್ರೇಮಿಗಳಲ್ಲಿ ಆತಂಕಕ್ಕೂ ಕಾರಣವಾಗಿದೆ. ಯಾಜಿಗೆ 60 ವರ್ಷ ಆಯ್ತು.
ಯಕ್ಷಗಾನದ ಸಮೃದ್ಧಿಗಾಗಿ ಕೇಂದ್ರ ಸರಕಾರದ ನೆರವು ಅಗತ್ಯ
ಕರ್ನಾಟಕ ಜಾನಪದ ಕಲೆಗಳಲ್ಲಿ ಅತೀ ಹೆಮ್ಮೆಯ, ಆಕರ್ಷಣೀಯ, ಶಾಸ್ತ್ರೀಯ, ಪ್ರಾಚೀನ, ನಾವೀಣ್ಯವನ್ನು ಅಳವಡಿಸಿಕೊಂಡ ಕಲೆ ಎಂದರೆ ಅದು ಯಕ್ಷಗಾನ. ಕರ್ನಾಟಕದ ಗಂಡುಕಲೆ ಎಂದು ಪ್ರಚಲಿತಕ್ಕೆ ಬಂದ ಯಕ್ಷಗಾನ ಕಲೆ ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕುಣಿತ, ಸಂಭಾಷಣೆ, ಭಾಗವತಿಕೆಗಳಿಂದ ಸಮಾವೇಶ‌ಗೊಂಡು, ಚೆಂಡೆ- ಮದ್ದಳೆ,ತಾಳ, ಮೃದಂಗ ನಾದದಿಂದ ಶೃಂಗಾರ ಮುಕ್ತವಾಗಿ ಪ್ರೇಕ್ಷಕರ ಮನಸ್ಸನ್ನು ತಣಿಸಲು ಸಮರ್ಥವಾಗಿದೆ.
ಹಕ್ಕು ಸ್ವಾಮ್ಯವೆಂಬ ಭೂತ
ನಮ್ಮಿಂದ ಅಪರಿಹಾರ್ಯವಾದ ದುರಿತಗಳು ಎದುರಾದಾಗ ಭಗವಂತನಿಗೆ ಶರಣಾಗುವುದು ಸ್ವಾಭಾವಿಕ. ಈ ದುರಿತ ಪರಿಹಾರಕ್ಕಾಗಿ ಮಂತ್ರ ಅಥವಾ ಶ್ಲೋಕ ಪಾರಾಯಣವನ್ನು ಮಾಡುತ್ತೇವೆ. ಇದೊಂದು ಆತ್ಮ ತೃಪ್ತಿ. ಇದರಿಂದ ಬಸವಳಿದ ಜೀವನದಲ್ಲಿ ಕಿಂಚಿತ್ತಾದರೂ ಆತ್ಮವಿಶ್ವಾಸ ಗಳಿಸುವ ನಂಬಿಕೆ. ಹೀಗೆ ಮಂತ್ರ ಜಪವನ್ನು ಮಾಡುವಾಗ ಪ್ರತೀ ಮಂತ್ರಕ್ಕೆ ಒಂದು ಋಷಿ ಛಂದಸ್ಸು ಎಂಬುದಿದೆ. ಅದನ್ನು ಕಡ್ಡಾಯವಾಗಿ ಪಠಿಸಲೇ ಬೇಕು. ಇಲ್ಲವಾದರೆ ನಾವು ಗೈಯ್ಯುವ ಕರ್ಮದ ಸತ್ಫಲ ಸಿಗದೇ ಉದ್ದೇಶ ಸಿದ್ಧಿಯಾಗುವುದಿಲ್ಲ. ಗುರು ಮುಖೇನ ಮಂತ್ರೋಪದೇಶವಾದಲ್ಲಿ ಈ ಛಂದಸ್ಸಿನ ಬಗ್ಗೆ ತಿಳಿಯುವುದು ಸಾಧ್ಯವಾಗುತ್ತದೆ. ಏನು ಈ ಛಂದಸ್ಸು?
ಯಕ್ಷಮಂಗಳ ಪ್ರಶಸ್ತಿ ಪಾತ್ರರು
ಮಂಗಳೂರು ವಿಶ್ವವಿದ್ಯಾನಿಲಯದ ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಸಕ್ತ ವರ್ಷದ ``ಯಕ್ಷಮಂಗಳ`` ಪ್ರಶಸ್ತಿಗೆ ಐವರು ಸಾಧಕರು ಆಯ್ಕೆಯಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇದೇ ನ.7ರಂದು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತದೆ. ನಾಲ್ವರು ಯಕ್ಷಗಾನ ಸಾಧಕರಿಗೆ 25 ಸಾವಿರ ರೂ. ನಗದು, ಸ್ಮರಣಿಕೆ ಸಹಿತ ಕೊಡಮಾಡಲ್ಪಡುವ ಈ ಪ್ರಶಸ್ತಿ ಅರ್ಹ ಪುರಸ್ಕಾರ. 10 ಸಾವಿರ ರೂ. ನಗದು ಮತ್ತು ಸ್ಮರಣಿಕೆಯಿಂದ ಕೂಡಿದ ಯಕ್ಷ ಮಂಗಳ ಕೃತಿ ಪ್ರಶಸ್ತಿ ಯಕ್ಷಗಾನ ಗ್ರಂಥ ರಚನಾಸಕ್ತರಿಗೆ ಪ್ರೇರಕವಾಗಿದೆ.
ಪೊಳಲಿ ಯಕ್ಷೋತ್ಸವ ಸಮ್ಮಾನಿತ ಕಲಾರತ್ನಗಳು
ಫ‌ಲ್ಗುಣೀ ನದಿ ತಟದಲ್ಲಿ ಮೆರೆಯುತ್ತಿರುವ ಮಾತೆ ರಾಜರಾಜೇಶ್ವರಿಯ ಆಡುಂಬೊಲವಾದ ಪೊಳಲಿಯ ಪವಿತ್ರ ಸ್ಥಳದಲ್ಲಿ ಯಕ್ಷಗಾನ ಕಲಾ ಸೇವೆಗಾಗಿ 1996ರಲ್ಲಿ ಉದಯಿಸಿದ ಸಂಸ್ಥೆ ಯಕ್ಷಕಲಾ ಪೊಳಲಿ. ಯಕ್ಷ ಕ್ಷೇತ್ರದಲ್ಲಿ ಯಥಾಸಾಧ್ಯ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆಯ 20ನೇ ವಾರ್ಷಿಕೋತ್ಸವವು ಶ್ರೀ ಕ್ಷೇತ್ರ ಪೊಳಲಿಯ ರಾಜಾಂಗಣದಲ್ಲಿ ಅಕ್ಟೋಬರ್ 17ರಂದು ಸಂಪನ್ನಗೊ೦ಡಿತು. ಈ ಸಂದರ್ಭದಲ್ಲಿಆರು ಮಂದಿ ಯಕ್ಷಕಲಾ ಸಾಧಕರಿಗೆ ಸಮ್ಮಾನಿಸಲಾಯಿತು.
ಕಲಾವಿದ ಕುಟುಂಬದ ಕಾಣ್ಕೆ : ಪೂರ್ವರಂಗಕ್ಕೆ ಹೊಳಪು
ಯಕ್ಷಗಾನದ ಪೂರ್ವರಂಗವು ಕಾಲಮಿತಿಯ ಜಂಝಾವಾತಕ್ಕೆ ತೂರಿಹೋಗುವ ಆಪಾಯಕ್ಕೆ ಸಾಕ್ಷಿಯಾಬೇಕಾದುದು ಕಾಲ ತಂದಿಟ್ಟ ಕಾಣ್ಕೆ! ``ಬೇಕೋ-ಬೇಡ್ವೋ`` ನಿಲುವುಗಳು ಮಾತಿನಲ್ಲಿ ಹಾರಿಹೋಗುತ್ತಿವೆ. ಪೂರ್ವರಂಗವನ್ನು ಕುಣಿವ ಕಲಾವಿದರ ಅಭಾವವೂ ಇಲ್ಲದಿಲ್ಲ. ಕುಣಿಸುವ ಹಿಮ್ಮೇಳದ ಶಕ್ತತೆಯೂ ವಿರಳ. ಈ ತಲ್ಲಣಗಳ ಮಧ್ಯೆ ಕೆಲವು ಮೇಳಗಳಲ್ಲಿ ಪೂರ್ವರಂಗ ಜೀವಂತವಾಗಿರುವುದು ಸಮಾಧಾನ. ಈಚೆಗಂತೂ ಪೂರ್ವರಂಗವನ್ನೇ ಮುಖ್ಯ ವಸ್ತುವಾಗಿಟ್ಟುಕೊಂಡು ಪ್ರದರ್ಶನಗಳು ನಡೆದಿರುವುದು ಉಳಿವಿನತ್ತ ಮಹತ್ತರ ಹೆಜ್ಜೆ.
ಯಕ್ಷಗಾನ ಕ್ಷೇತ್ರದಲ್ಲಿ - ಹಕ್ಕುಸ್ವಾಮ್ಯ ಅಥವಾ ಕೃತಿಸ್ವಾಮ್ಯ
ಪ್ರಾಮಾಣಿಕತನವೆನ್ನುವುದು 84 ಲಕ್ಷ ಕೋಟಿ ಜೀವರಾಶಿಗಳಲ್ಲಿ ಸರ್ವಶ್ರೇಷ್ಠನೆನ್ನಿಸಿದ ಮತ್ತು ವಿಶೇಷ ಚಿಂತನಾ ಸಾಮರ್ಥ್ಯವುಳ್ಳ ಮಾನವನಲ್ಲಿ ಇರಬೇಕು. ನಾವು ಒಬ್ಬರಿಗೆ ಶ್ರೇಯವನ್ನು ಕೊಡುವುದರಲ್ಲಿ ಅಥವಾ ಗುರುತಿಸುವುದರಲ್ಲಿ ಕಳೆದುಕೊಳ್ಳುದೇನಿದೆ? ಪ್ರತಿಯೊಬ್ಬರಿಗೂ ಅವರದ್ದಾದ ಹಕ್ಕನ್ನು ಅನುಭವಿಸಗೊಟ್ಟು ನಾವು ನಮ್ಮ ಜವಾಬ್ದಾರಿಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದರೆ ಜೀವನವೂ ಉಜ್ವಲವಾಗುತ್ತದೆ, ಸಮಾಜವೂ ಸುಸಂಸ್ಕೃತವಾಗಿ ಉತ್ತಮ ಸಮಾಜವೆಂದೆನ್ನಿಸಲ್ಪಡುತ್ತದೆ, ಅಷ್ಟು ಮಾತ್ರವಲ್ಲದೇ ಹಲವು ವಿನಾ ಕ್ಲೇಶಗಳಿಗೆ ಆಸ್ಪದವಿಲ್ಲದಂತಾಗುತ್ತದೆ. ಅಲ್ಲವೇ?
ವಿದ್ಯಾಧರ ಜಲವಳ್ಳಿ - ಬೆಳವಣಿಗೆ ಬಳ್ಳಿ
ವಸ್ತ್ರವಿನ್ಯಾಸದ ಮೆರುಗು, ಕುಣಿತದ ಶ್ರೀಮಂತಿಕೆ, ಮಾತುಗಾರಿಕೆಯ ಅಬ್ಬರದಲ್ಲಿ ಪ್ರೇಕ್ಷಕರನ್ನು ರಂಜಿಸುವ ಕಲೆಯ ಮತ್ತೊಂದು ಹೆಸರೇ ಯಕ್ಷಗಾನ. ಕಳೆದ 25 ವರ್ಷಗಳಿಂದ ಯಕ್ಷಗಾನವನ್ನೇ ವೃತ್ತಿಯಾಗಿಸಿಕೊಂಡು ತಮ್ಮದೇ ವಿಶೇಷ ಶೈಲಿಯ ಮೂಲಕ ಜನಪ್ರಿಯತೆ ಗಳಿಸಿದ ಕಲಾವಿದ ವಿದ್ಯಾಧರ ರಾವ್‌ ಜಲವಳ್ಳಿ. ರಂಗದಲ್ಲಿ ಸದಾ ಹೊಸತನ್ನು ನೀಡುವ ಅವರ ಅರ್ಥಗಾರಿಕೆ ಚೆಂದ. ಕುಣಿತ ಇನ್ನೂ ಅಂದ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಜಲವಳ್ಳಿಯ ವಿದ್ಯಾಧರ ಅವರ ಯಕ್ಷಗಾನ ಬದುಕಿಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ‘ಜಲವಳ್ಳಿ ಯಕ್ಷ ಜೀವನದ 25’ ಕಾರ್ಯಕ್ರಮ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು (ಅಕ್ಟೋಬರ್‌ 3) ನಡೆಯಲಿದೆ. ಇದೇ ಹಿನ್ನೆಲೆಯಲ್ಲಿ ಅವರು ತಮ್ಮ ವೃತ್ತಿ ಪಯಣದ ಕುರಿತು ಮಾತನಾಡಿದ್ದಾರೆ.
ಮತ್ತೆ ಮತ್ತೆ ಬಲ್ಲಾಳರು
ಪರಿಮಿತಿಯೊಳಗೆ ಅಪರಿಮಿತ ಕಲಾ ಸೌಂದರ್ಯಾಭಿವ್ಯಕ್ತಿಯನ್ನು ಸಾಧಿಸಲು ಹೊರಟವರ ನಡೆಯನ್ನು ನೋಡುವುದೇ ಒಂದು ರೋಚಕ ಅನುಭವ. ಇದೇ ಕಣ್ಣಿನಲ್ಲಿ ನಾನು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರನ್ನು ನೋಡಬಯಸುವುದು. ಅಲ್ಲ, ಅವರೇ ನನ್ನಲ್ಲಿ ಜಿಗಿಜಿಗಿದು ಪುಟಿಪುಟಿದು ಮತ್ತೆ ಬರುತ್ತಾರೆ. ಹಾಗೆಂದು ಬಲ್ಲಾಳರೇನೂ ಪರಿಪೂರ್ಣ -ಕಲಾ ಸೌಂದರ್ಯಾಭಿವ್ಯಕ್ತಿಯ ತುತ್ತತುದಿಯೆಂದು ಹೇಳುವ ಅನುಭವ ನನಗಿಲ್ಲ. ಯಾಕೆಂದರೆ ನನ್ನ ಕೇಳ್ಮೆಯ ಪರಿಧಿಗೆ ದೊರಕದ ಬಲ್ಲಾಳರ ಗುರುಗಳೂ, ನನ್ನ ಪರಮಗುರುಗಳೂ ಆದ ಕುದುರೆಕೂಡ್ಲು ರಾಮ ಭಟ್ಟರ (ಹಿರಿಯ) ವಾದನ ವಿಸ್ಮಯ ಮತ್ತು ನಿಡ್ಲೆ ನರಸಿಂಹ ಭಟ್ಟರ ನುಡಿತದ ಸೌಂದರ್ಯ ಅನ್ಯಾದೃಶ ಎಂಬುದನ್ನು ಕೇಳಿಬಲ್ಲೆ.
ಅಭಿವ್ಯಕ್ತಿಯ ಅಭಿಮಾನದಿಂದ ರಂಗಸುಖ
``ಅಭಿಮಾನಿಗಳು ಚೌಕಿಯಲ್ಲಿ ಹೆಚ್ಚು ಹೊತ್ತು ಕಾಲ ಕಳೆಯಕೂಡದು. ಪ್ರದರ್ಶನ ನೋಡುತ್ತಾ ಅಭಿವ್ಯಕ್ತಿಗೆ ಅಭಿಮಾನ, ಮೆಚ್ಚುಗೆ ಸೂಚಿಸಿದರೆ ಕಲಾವಿದನಿಗೆ ಹೆಮ್ಮೆ. ವೇಷ ತಯಾರಿಯ ಪ್ರಕ್ರಿಯೆಯನ್ನು ಪೂರ್ತಿ ನೋಡಿಬಿಟ್ಟರೆ ರಂಗದಲ್ಲಿ ಪಾತ್ರವಾಗಿ ಕಲಾವಿದನನ್ನು ಸ್ವೀಕರಿಸಲು ಕಷ್ಟವಾಗುತ್ತದೆ`` ಹಿರಿಯ ಕಲಾವಿದರೊಬ್ಬರು ಯಕ್ಷಗಾನದ ಬಣ್ಣದ ಮನೆ(ಚೌಕಿ)ಯಲ್ಲಿ ಆಡಿದ ಮನದ ಮಾತು ಮನನೀಯ. ಎಷ್ಟು ಮಂದಿಗೆ ಹಿತವಾಯಿತೋ ಗೊತ್ತಿಲ್ಲ. ನನಗಂತೂ ಚಿಂತನೆಗೆ ಅವಕಾಶ ಮಾಡಿಕೊಟ್ಟಿತ್ತು. ಇಂತಹುದೇ ಪ್ರಶ್ನೆಯೊಂದು ವಾಟ್ಸಪ್ ಸಾಮಾಜಿಕ ತಾಣದಲ್ಲೂ ಹರಿದು ಬಂದ ನೆನಪು.
ಚಿಕ್ಕ ಮೇಳದ ದೊಡ್ಡ ಹೆಜ್ಜೆ
``ಯಕ್ಷಗಾನ ಹೈಟೆಕ್ ಆಗತ್ತಿದೆ. ಕಲಾವಿದರು ಇನ್ಸ್ಟಂಟ್ ಆಗುತ್ತಿದ್ದಾರೆ..`` - ಸಮಾರಂಭವೊಂದರಲ್ಲಿ ಮಾತಿನ ಮಧ್ಯೆ ಮಿಂಚಿದ ಗಣ್ಯರೊಬ್ಬರ ಮಾತು. ಹೌದು, ಯಕ್ಷಗಾನವನ್ನು ನೋಡುವ, ಅನುಭವಿಸುವ, ಅರ್ಥ ಮಾಡುವ ಮನಃಸ್ಥಿತಿ ಬದಲಾಗಿದೆ. ಸಮಗ್ರತೆಯ ನೋಟಕ್ಕೆ ಮಸುಕು ಬಂದಿದೆ. ಬಿಡಿಬಿಡಿಯಾದ ಮಾದರಿಗಳು ಚಿಗುರಿವೆ. ಹೈಟೆಕ್ಕಿನ ಪಾಶಕ್ಕೆ ಸಿಗದ ಕಲಾವಿದರು ಎಷ್ಟಿಲ್ಲ? ಅವರದನ್ನು ಅಪೇಕ್ಷೆ ಪಡುವುದಿಲ್ಲ ಬಿಡಿ. ಆದರೆ ಬದುಕಿನ ಪ್ರಶ್ನೆ ಬಂದಾಗ ಮೇಳದ ತಿರುಗಾಟದಿಂದ ಆರು ತಿಂಗಳು ಹೊಟ್ಟೆ ತಂಪಾಗುತ್ತದೆ.
ಯಕ್ಷಗಾನ ಪ್ರೀತಿಯ ಅಲೆಯಲ್ಲಿ
ಕರ್ನಾಟಕದ ವಿಶಿಷ್ಟ ಕಲೆ ಯಕ್ಷಗಾನ ತನ್ನದೇ ಆದ ವಿಶೇಷ ಶೈಲಿಯಿಂದ ಮನಸೂರೆಗೊಂಡ ಕಲಾಪ್ರಕಾರ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಹುಟ್ಟಿಕೊಂಡ ಈ ಕಲೆ ಇದೀಗ ರಾಜ್ಯದಾದ್ಯಂತ ಅಷ್ಟೇ ಅಲ್ಲದೆ ದೇಶ ವಿದೇಶಗಳಲ್ಲೂ ಜನಪ್ರಿಯಗೊಳ್ಳುತ್ತಿದೆ. ಮೊನ್ನೆಯಷ್ಟೇ ರವೀ೦ದ್ರ ಕಲಾಕ್ಷೇತ್ರದಲ್ಲಿ ನಡೆದ ತೆ೦ಕು ತಿಟ್ಟಿನ ‘ದೇವಿ ಮಹಾತ್ಮೆ‘ ಯಕ್ಷಗಾನಕ್ಕೆ ರವೀ೦ದ್ರ ಕಲಾಕ್ಷೇತ್ರದಲ್ಲಿ ಕಿಕ್ಕಿರಿದ ಜನಸ೦ದಣಿ ಹಾಗೂ ಅದರ ನೇರ ಪ್ರಸಾರವನ್ನು ನೋಡಲು ಸಂಸ ಬಯಲು ರಂಗಮಂದಿರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಸೇರಿದ್ದುದು ಇನ್ನೂ ಹಸಿರಾಗಿರುವ ಯಕ್ಷಗಾನ ಪ್ರೀತಿಗೆ ನಿದರ್ಶನ.
ಶ್ರದ್ಧೆ - ವಾಸ್ತವಗಳ ಮಿಳಿತದ ಕಾಲಮಿತಿ
ಕಾಲಮಿತಿ ಯಕ್ಷಗಾನದ ಮಾತುಕತೆಗಳು ಮರುಜೀವ ಪಡೆಯುತ್ತಿದೆ. ಶ್ರದ್ಧೆಯ ನೆರಳಿನಲ್ಲಿ ಕಟು ವಿಚಾರಗಳು ತೀಕ್ಷ್ಮವಾಗಿರುತ್ತದೆ. ಕಲೆಯೊಂದರ ಔನ್ನತ್ಯಕ್ಕಿದು ಒಳಸುರಿ. ವಾಸ್ತವಕ್ಕೆ ಬಂದಾಗ ರಾಜಿಯ ಛಾಯೆ. ಸಾಂಸ್ಕೃತಿಕ ಪಲ್ಲಟಗಳ ಮಧ್ಯೆ ಪರಂಪರೆಯ ಸೌಂದರ್ಯವನ್ನು ಉಳಿಸಿಕೊಳ್ಳುವ ಎಚ್ಚರ. ಹಾಗಾಗಿ ಶ್ರದ್ಧೆ ಮತ್ತು ವಾಸ್ತವಗಳನ್ನು ಮಿಳಿತಗೊಳಿಸಲೇ ಬೇಕಾಗಿದೆ. ಆಟವೇ ಇರಲಿ, ಕೂಟವೇ ಇರಲಿ, ರಾತ್ರಿಯಿಡೀ ನಡೆಯುವ ಕಲಾಪ. ಪ್ರದರ್ಶನದ ಹಿಂದು ಮುಂದಿನ ವಿಮರ್ಶೆಗಳಲ್ಲಿ ಸಾಂಸ್ಕೃತಿಕ ಗಟ್ಟಿತನಗಳಿದ್ದ ಕಾಲಕ್ಕೆ ಹಿರಿಯರು ಸಾಕ್ಷಿಗಳಾಗುತ್ತಾರೆ. ಅಲ್ಲೋ ಇಲ್ಲೋ ರಾತ್ರಿಯಿಡೀ ಬಿಟ್ಟರೆ ತಾಳಮದ್ದಳೆಗಳು ಕಾಲಮಿತಿಗೊಂಡಿವೆ. ಆಟಗಳೂ ಅದೇ ಜಾಡಿನಲ್ಲಿ ಜಾರಿವೆ, ಜಾರುತ್ತಿವೆ.
ಪ್ರೇಮರೂಪಕ ರಾಧಾಂತರಂಗ
ಕಡತೋಕಾ ಅರ್ಪಿತಾ ಹೆಗಡೆ ಮತ್ತು ಕೊಂಡದ ಕುಳಿ ಅಶ್ವಿ‌ನಿ ಹೆಗಡೆ ಮಹಿಳಾ ಯಕ್ಷ ಭೂಮಿಕೆಯ ಸಮರ್ಥ ಕಲಾವಿದೆ ಯರು. ತಮ್ಮ ಕುಣಿತ ಅಭಿನಯಗಳಿಂದ ಕಲಾಭಿಮಾನಿಗಳ ಮನಸೂರೆಗೊಂಡು ಪ್ರಸಿದ್ಧಿ ಪಡೆದವರು. ಇವರೀರ್ವರೂ ಜತೆಯಲ್ಲಿ ಸೇರಿ ಪ್ರದರ್ಶಿಸುತ್ತಿರುವ ಯಕ್ಷರೂಪಕ ರಾಧಾಂತರಂಗ. ಹೀಗೊಂದು ಕಲ್ಪನೆ ಹೊಳೆದದ್ದು ಅರ್ಪಿತಾಗೆ. ಇದು ತುಂಬಾ ಚೆನ್ನಾಗಿದೆ ಎಂದು ಹೇಳಿದ್ದು ಅಶ್ವಿ‌ನಿ. ಹಾಡು ಹೊಸೆದು ಅದಕ್ಕೊಂದು ರೂಪ ಕೊಟ್ಟವರು ದಿವಾಕರ ಹೆಗಡೆ. ಪ್ರೋತ್ಸಾಹದ ನೆಲೆಯೊದಗಿಸಿದವರು ಸಿರಿಕಲಾಮೇಳದ ಸುರೇಶ ಹೆಗಡೆ ಕಡತೋಕಾ.
ಯಕ್ಷಗಾನ ಸಮಗ್ರ ರಂಗಭೂಮಿ ಕಲೆ
ಹೀಗೆಂದು ಬಹುತೇಕರು ಯಕ್ಷಗಾನವನ್ನು ವ್ಯಾಖ್ಯಾನಿಸುವುದಿದೆ. ಗಂಡುಕಲೆ ಎಂದರೇನು? ಯಾಕೆ ಇಂತಹದೊಂದು ವಿಶೇಷಣದಿಂದ ಯಕ್ಷಗಾನವನ್ನು ಕರೆಯುತ್ತಾರೆ ಎಂದು ಚಿಂತಿಸಬೇಕಾಗಿದೆ. ಒಂದು ಕಲಾಪ್ರಕಾರವನ್ನ ಗಂಡು, ಹೆಣ್ಣು ಎಂದು ವಿಭಾಗಿಸಬಹುದೆ? ವಿಭಾಗಿಸಲು ಸಾಧ್ಯವೆ ಮತ್ತು ಸಾಧುವೆ ಎಂದು ಪ್ರಶ್ನಿಸಿಕೊಂಡರೆ ದಾರಿ ಸಿಗಬಹುದೆ?. ಯಕ್ಷಗಾನ ಎಂಬ ಕಲೆ ಕೇವಲ ವೀರರಸ ಪ್ರಧಾನ ಎಂಬ ಕಾರಣಕ್ಕೆ ಮತ್ತು ಚೆಂಡೆ, ಮದ್ದಲೆ ತಾಡನ ವಿದಾನ, ಏರು ಶ್ರುತಿಯಲ್ಲಿ ಮಾತಾಡುವುದು ಇದನ್ನೆಲ್ಲ ಲೆಕ್ಕಕ್ಕೆ ಹಿಡಿದು ನಾವು ಇದನ್ನ ಗಂಡುಕಲೆ ಎಂದು ಕರೆಯುತ್ತಿದ್ದೇವೆಯೋ?
ಯಕ್ಷಗಾನ ಇಡೀ ರಾತ್ರಿ ಬೇಡ ನಡು ರಾತ್ರಿ ಸಾಕು
ಬ್ರಿಟೀಷರ ಕಾಲದಲ್ಲಿ ಮೈಸೂರು ಅರಮನೆಯಲ್ಲಿ , ದಿಲ್ಲಿ ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನ ನೀಡಿದ, ಎರಡು ಶತಮಾನಗಳ ಇತಿಹಾಸದ ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮಂಡಳಿ ಅನಿವಾರ್ಯವಾಗಿ ಈ ವರ್ಷದಿಂದ ಕಾಲಮಿತಿಯ ಯಕ್ಷಗಾನ ಪ್ರದರ್ಶನಕ್ಕೆ ಸಜ್ಜಾಗಿದೆ. ಮೂರು ವರ್ಷ ಚಿಂತನ - ಮಂಥನ ನಡೆಸಿ ಸರ್ವರ ಅಭಿಪ್ರಾಯ ಸಂಗ್ರಹಿಸಿ ರಾತ್ರಿ 7ರಿಂದ ಮಧ್ಯರಾತ್ರಿ 12ರ ವರೆಗೆ ಪ್ರದರ್ಶನ ನೀಡಲು ತೀರ್ಮಾನಿಸಲಾಗಿದೆ. ಇದು ಕಾಲಮಿತಿಯ ಕುರಿತು ಹೊಸ ಚರ್ಚೆಗೆ ಪುನರ್‌ನಾಂದಿ ಹಾಡಿದೆ. ಐದು ದಿನಗಳ ಕಾಲ ನಡೆಯುತ್ತಿದ್ದ ದೇವಿ ಮಹಾತ್ಮೆ ನಂತರ ಮೂರು, ಎರಡು ದಿನಗಳ ಕಾಲ ನಡೆದು 1 ದಿನದ ದೇವಿಮಹಾತ್ಮೆ ಜನಪ್ರಿಯವಾಯಿತು.
ಯಕ್ಷಗಾನ ಗಂಡು ಕಲೆಯೇ? ಮಹಿಳಾ ಯಕ್ಷಗಾನ ಸಾಧುವೇ ?
ಯಕ್ಷಗಾನವು ಗಂಡುಕಲೆಯೆಂಬ ಮಾತು ಜನಸಾಮಾನ್ಯರು ತಮಗೆ ಅನಿಸಿದಂತೆ ಈ ಕಲೆಯ ಸ್ವರೂಪವನ್ನು ಗುರುತಿಸುವಾಗ ಹೇಳಿದ ಮಾತೇ ಹೊರತೂ ಯಾವುದೇ ಶಾಸ್ತ್ರ ಗ್ರಂಥದಲ್ಲಾಗಲೀ ಅಧಿಕೃತವಾಗಿ ಬಂದದ್ದಲ್ಲ. ಇಲ್ಲಿ `ಗಂಡು` ಎಂಬ ಪದ ಆಡು ಭಾಷೆಯಲ್ಲಿ ಮತ್ತು ಗ್ರಂಥಸ್ಥ ಭಾಷೆಯಲ್ಲಿ `ಗಂಡಸು` `ಪುರುಷ` ಎಂಬ ಅರ್ಥದಲ್ಲಿ ಅಷ್ಟೇ ಅಲ್ಲದೇ ಇನ್ನೂ ಕೆಲವು ಅರ್ಥದಲ್ಲಿಯೂ ಬಳಕೆಯಾಗುವುದಿದೆ. ಇಂಗ್ಲಿಷ್ನ ಮಸ್ಕ್ಯುಲಾಯಿನ್ ಎಂಬ ಪದಕ್ಕೆ ಸಮಾನಾರ್ಥಕವಾಗಿ ಕೂಡ ಇದು ಬಳಕೆಯಾಗುವುದಿದೆ. `ಗಟ್ಟಿಯಾದದ್ದು`, `ಪ್ರಮುಖ` ಎಂಬ ಅರ್ಥದಲ್ಲಿಯೂ ಬಳಕೆಯಾಗುವುದಿದೆ.
ರಸರಾಗ ಚಕ್ರವರ್ತಿ ಕಾಳಿಂಗ ನಾವಡರ 25ನೇ ಪುಣ್ಯ ಸಂಸ್ಮರಣೆ
ಬಡಗುತಿಟ್ಟಿನ ಮೇರು ಕಲಾವಿದರಲ್ಲಿ ಮಹಾ ಗಾಯಕ ಗುಂಡ್ಮಿ ಕಾಳಿಂಗ ನಾವಡರದ್ದು ಅಗ್ರಮಾನ್ಯ ಹೆಸರು. ತನ್ನದೇ ಶೈಲಿಯೊಂದನ್ನು ಪ್ರವರ್ತನಗೊಳಿಸಿ ಜನಮಾನಸದಲ್ಲಿ ಸ್ಥಿರಗೊಳಿಸಿ ಯುವ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟು ಅಪಾರ ಸಂಖ್ಯೆಯ ಹೊಸ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಕಾಳಿಂಗ ನಾವಡ ಎಂಬುದು ತಾರಾಮೌಲ್ಯದ ಮಾಂತ್ರಿಕ ಸ್ಪರ್ಷದ ಪವಾಡ ಸದ್ರಶ ಹೆಸರು. ಇಂತಹ ಕ್ರಾಂತಿಕಾರಿ ಬಾಗವತ ಯಕ್ಷಗಾನ ಜಗತ್ತನ್ನು ಅಗಲಿ ವರ್ಷ ಇಪ್ಪತ್ತ ಐದು ಸಂದಿದೆ. ಅಲ್ಲಲ್ಲಿ 25ನೇ ವರ್ಷದ ಸಂಸ್ಮರಣೆಗಳು ನೆರವೇರುತ್ತಿವೆ. ನಾವಡರ ಅಗಲಿಕೆಯ 25ನೇ ವರ್ಷದ ಸಂದರ್ಭದಲ್ಲಿ ನಾವಡರನ್ನು ನೆನಪಿಸುವ ಕಾರ್ಯಕ್ರಮಗಳು ತುರ್ತಾಗಿ ಆಗಬೇಕಾಗಿರುವುದು ಅನಿವಾರ್ಯ.
ಕಲಾ ಬದುಕಿನ ಮರು ಓದು - ``ತೊಳಲಾಟ``
ಹದಿಮೂರು ನಿಮಿಷದ ಕಿರು ಚಿತ್ರ ``ತೊಳಲಾಟ``. ಯಕ್ಷಗಾನ ಕಲಾವಿದನೊಬ್ಬನ ಕಲಾ ಬದುಕಿನ ಕುತೂಹಲದ ಸುತ್ತ ಸುತ್ತುವ ಝಲಕ್ ಕಥಾವಸ್ತು. ಇಲ್ಲಿ ಕಲಾವಿದ ನಾಯಕ. ಸೂಕ್ಷ್ಮತೆಯ ಬಲೆಯೊಳಗೆ ಚಿತ್ರ ಆತುಕೊಂಡಿದೆ. ಬದುಕನ್ನು ಅಕ್ಷರಕ್ಕಿಳಿಸುವ ಪಣತೊಟ್ಟ ಲೇಖಕ ಮುಖಾಮುಖಿಯಾಗುವ ಮೊದಲ, ನಂತರದ ಮುಜುಗರ ಸ್ಥಿತಿ. ಮನದ ಭಾವಗಳಿಗೆ ಭಾಷೆ ಕೊಡುವ ಮನಃಸ್ಥಿತಿ. ಮೌನದಲ್ಲಿ ಪ್ರತಿಫಲಿಸುವ ಸುಭಗತೆ. ಫಕ್ಕನೆ ಅರ್ಥವಾಗದ ಸೂಕ್ಷ್ಮ ಸಂವೇದನೆ. ಒಂದೆರಡು ಬಾರಿ ವೀಕ್ಷಿಸಿದರೂ ತಕ್ಷಣ ಗ್ರಹಿಕೆಗೆ ನಿಲುಕದ ಒಳನೋಟ. ವೀಕ್ಷಕನಿಗೂ ತೊಳಲಾಟ!
ಕಾಳಿಂಗ ಎಂಬ ಚಿಕ್ಕಪ್ಪಯ್ಯನ ನೆನಪಲ್ಲಿ
ಅವರು ಬದುಕಿದ್ದು ಕೇವಲ ಮೂವತ್ತೆರಡು ವರ್ಷ ಮಾತ್ರ. ಭೌತಿಕವಾಗಿ ನಮ್ಮನ್ನಗಲಿ ಈಗ 25 ವರ್ಷಗಳೇ ಕಳೆದಿವೆಯೆಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಅಂತಹ ಅಳಿಸಲಾಗದ ನೆನಪನ್ನು ಯಕ್ಷಗಾನ ರಂಗದಲ್ಲಿ ಹಾಗೂ ಪ್ರೀತಿಪಾತ್ರರಲ್ಲಿ ಉಳಿಸಿ ಹೋದವರು ಕಾಳಿಂಗ ನಾವಡ. ಈ ಹೆಸರು ಕೇಳುತ್ತಿದ್ದ ಹಾಗೆ ಯಕ್ಷಗಾನ ಪ್ರಿಯರ ಮೈ-ಮನ ರೋಮಾಂಚಗೊಳ್ಳುತ್ತದೆ. ಅಂತಹ ಅದ್ಭುತ ಕಂಚಿನ ಕಂಠದಿಂದ ಯಕ್ಷಗಾನ ಭಾಗವತರಾಗಿ ಅವರು ಜನಪ್ರಿಯರಾದವರು. ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ವಿರಾಜಮಾನರಾಗಿದ್ದಾರೆ. ಇಂತಹ ಕಲಾವಿದನ ಮನೆಯ ಕುಟುಂಬದ ಸದಸ್ಯನಾಗಿರುವುದು ನನಗೆ ಹೆಮ್ಮೆ. ಕಾಳಿಂಗ ನಾವಡ ನನ್ನ ಪ್ರೀತಿಯ ಚಿಕ್ಕಪ್ಪ.
ಕಲಾಭಿಮಾನಿಗಳ ಸಹಾಯದ ನಿರೀಕ್ಷೆಯಲ್ಲಿ ಶಶಿಕಿರಣ ಕಾವು
ಕಟೀಲು ಮೇಳ ಸಂಖ್ಯೆ 4ರಲ್ಲಿ ಬಣ್ಣದ ವೇಷಧಾರಿಯಾಗಿದ್ದ ಶಶಿಕಿರಣ ಕಾವು ಅವರು ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಆದ ವೈಶಿಷ್ಟ್ಯಪೂರ್ಣ ಮುಖವರ್ಣಿಕೆ, ನಾಟ್ಯ ಮತ್ತು ಹಾವ ಭಾವಾಭಿವ್ಯಕ್ತಿಗಳಿಂದ ಒಳ್ಳೆಯ ಕಲಾವಿದರೆಂದೆನಿಸಿಕೊಂಡವರು. ಆದರೆ, ಇಂದೀಗ ನಮ್ಮ ಪ್ರೀತಿಯ ಶಶಿಕಿರಣ ಕಾವು ಅವರು ಅನಾರೋಗ್ಯಪೀಡಿತರಾಗಿದ್ದಾರೆ. ಇಂತಹ ಒಳ್ಳೆಯ ಕಲಾವಿದನಿಗೆ ಒಬ್ಬ ಒಳ್ಳೆಯ ವ್ಯಕ್ತಿಗೆ ನಮ್ಮಿಂದಾಗುವ ಸಹಾಯವನ್ನು ಮಾಡೋಣ.
ಮತ್ತೆ ಮಳೆ ಹೊಯ್ಯುತಿದೆ ಚೆಂಡೆಮದ್ದಳೆ ಗುಂಯ್‌ಗುಡುತಿದೆ
ಕಲಾವಿದರು, ವಿದ್ವಾಂಸರು ತಮ್ಮ ಪ್ರತಿಭೆಗೆ ಅವಕಾಶಗಳನ್ನು ಹುಡುಕಿಕೊಂಡು ದೇಶಸಂಚಾರ ನಡೆಸುವುದು ಸಹಜವಷ್ಟೇ. ಹೀಗೆ, ತಿರುಗಾಟ ಆರಂಭಿಸಿದ ಕರಾವಳಿಯ ಯಕ್ಷಗಾನ ಕಲೆ ಬೆಂಗಳೂರಿನಲ್ಲಿ ದೊಡ್ಡಮಟ್ಟದ ಜನಪ್ರಿಯತೆ ಗಳಿಸಿದೆ. ಈ ಪ್ರಸಿದ್ಧಿಯ ಹಿಂದೆ ಕಲೆಯ ಪರ್ಯಟನೆಯಷ್ಟೇ ಅಲ್ಲ; ಒಂದು ಸಮುದಾಯದ ಬಹುದೊಡ್ಡ ಭಾಗವೇ ನೆಲೆ ಬದಲಿಸಿದ ಸೂಕ್ಷ್ಮವಿದೆ. ಈ ಬದಲಾವಣೆಯ ಪಥದಲ್ಲಿ ಯಕ್ಷಗಾನ ವರ್ಷ ಪೂರ್ತಿ ಪ್ರದರ್ಶನಗೊಳ್ಳುವ ಕಲೆಯಾಗಿ ಬದಲಾಗಿದೆ.
ಅವಧೂತ ಯಕ್ಷಗುರು ಹೊಸ್ತೋಟರಿಗೆ ಪದ್ಮಶ್ರೀ ಬರಲಿ
ತಮ್ಮ ಇಡಿಯ ಜೀವನವನ್ನೇ ಯಕ್ಷಗಾನಕ್ಕಾಗಿ ಮುಡಿಪಾಗಿಟ್ಟ ಎಪ್ಪತ್ತೈದರ ವಯೋವೃದ್ಧ ಅವಧೂತ ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಯಕ್ಷಗಾನಕ್ಕೆ ಹೊಸತೇನೂ ಅಲ್ಲ. ಡಾ.ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೊಳ್ಯೂರು ರಾಮಚಂದ್ರ ರಾವ್ ಮೊದಲಾದ ನಾಮಾಂಕಿತರನ್ನು ಈಗಾಗಲೇ ಯಕ್ಷಗಾನದ ಸೇವೆಗಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗುರುತಿಸಿ ಗೌರವಿಸಿದೆ. ಇದೀಗ ಹೊಸ್ತೋಟದವರಿಗೆ ಅದು ಸಂದಿದೆ. ಚಿಟ್ಟಾಣಿಯವರಿಗೆ ಪದ್ಮಶ್ರೀ ಬಂದ ಮೇಲೆ ಯಕ್ಷಗಾನಕ್ಕೆ ಬಂದ ಮತ್ತೊಂದು ರಾಷ್ಟ್ರ ಪ್ರಶಸ್ತಿ ಇದಾದುದರಿಂದ ಇದು ಹೊಸ್ತೋಟರ ಕಿರೀಟಕ್ಕಷ್ಟೇ ಅಲ್ಲ ಯಕ್ಷಗಾನದ ಮುಕುಟಕ್ಕೂ ಮತ್ತೊಂದು ಗರಿ.
ಸಮಗ್ರ ಲೇಖನ : ಯಕ್ಷಗಾನ ಶಿಕ್ಷಣ ಹೇಗಿರಬೇಕು? (ಭಾಗ-2)
ಸಾಂಪ್ರದಾಯಿಕ ಅಂಶಗಳಿಗೆ ಮಹತ್ವವಿಲ್ಲವಾಗಿ ಪಾರಂಪರಿಕ ಪದ್ಧತಿಗಳನ್ನು ಹೇಗೆ ಬೇಕಾದರೂ ಪ್ರಸ್ತುತಪಡಿಸಬಹುದೆಂಬ ಸ್ಥಿತಿ ಕಲೆಯ ಮುಖ್ಯ ವಾಹಿನಿಯಲ್ಲಿದ್ದಾಗ ಅದನ್ನು ಗಂಭೀರವಾಗಿ ಕಲಿಯಬೇಕಾದ ಅನಿವಾರ್ಯತೆ ಆಸಕ್ತರಿಗೆ ಉಂಟಾಗುವುದಿಲ್ಲ. ಯಕ್ಷಗಾನದಂತಹ ಕಲೆಗಳಲ್ಲಿ ಗುರುಮುಖೆನ ಕಲಿಯುವುದಕ್ಕಿಂತಲೂ ಅನುಭವದಿಂದ ಗಳಿಸುವುದು ಬಹಳವಿದೆ ಎಂಬ ಮನೋಧರ್ಮವು ವ್ಯವಸ್ಥಿತವಾದ ಕಲಿಕೆಯು ಅನವಶ್ಯಕವೆಂಬ ಮನೋಭಾವವನ್ನು ಬೆಳೆಸುತ್ತದೆ. ಯಕ್ಷಗಾನದ ಕಲಿಕಾ ವಲಯದಲ್ಲಿಯೂ ಸರಿಸುಮಾರು ಇಂತಹದ್ದೇ ಮನೋಧರ್ಮ ಪ್ರಚಲಿತದಲ್ಲಿರುವಂತೆ ಕಾಣುತ್ತದೆ.
ಸಮಗ್ರ ಲೇಖನ : ಯಕ್ಷಗಾನ ಶಿಕ್ಷಣ ಹೇಗಿರಬೇಕು? (ಭಾಗ-1)
ಯಾವುದೇ ಕಲೆಯ ಕಲಿಕೆಯಾಗಲೀ ಔಪಚಾರಿಕವಾದ ಕಲಿಕೆಗೆ ಒಗ್ಗುವಂತಹುದಲ್ಲ. ಬಹುಶಃ ಕಲಾ ಪರಿಣತಿಯು ಹೆಚ್ಚಾಗಿ ಅಮೂರ್ತವಾದ ಸೂತ್ರಗಳಿಗನುಗುಣವಾಗಿ ನಡೆಯುವ ಪ್ರಾಯೋಗಿಕ ಪರಿಣತಿಯಾಗಿರುವುದರಿಂದ ಹೀಗಿರಬಹುದು. ಪ್ರಾಚೀನಕಾಲದಿಂದಲೂ ನಮ್ಮ ದೇಶದಲ್ಲಿಯಂತೂ ಕಲೆಗಳು ಪರಭಾರೆಯಾಗುತ್ತಿದ್ದುದು ಅನೌಪಚಾರಿಕವಾದ ಗುರುಶಿಷ್ಯಪರಂಪರೆಯಲ್ಲಿಯೇ ಸರಿ. ಸಾಮಾನ್ಯವಾಗಿ ಹಿರಿಯ ಸಂಗೀತಗಾರನೋ, ಕಲಾವಿದನೋ ನರ್ತಕನೋ ತನ್ನ ಜೊತೆಗೆ ತಾನು ಇಷ್ಟಪಟ್ಟ ವಿದ್ಯಾಕಾಂಕ್ಷಿಯನ್ನು ಜೊತೆಯಲ್ಲಿಯೇ ಇಟ್ಟುಕೊಂಡು ಕಲಿಸುವುದೇ ಗುರು-ಶಿಷ್ಯ ಪರಂಪರೆ. ಹೀಗೆ ದೊಡ್ಡ ಕಲಾವಿದನ ಅಧಿಕೃತ ಶಿಷ್ಯನ ಸ್ಥಾನ ದೊರೆಯುವುದೆಂದರೆ ಅದು ಯೋಗಾಯೋಗವೆಂದೇ ಪರಿಗಣಿಸಲ್ಪಡುತ್ತಿತ್ತು ಕಾಲವೊಂದಿತ್ತು.
ಯಕ್ಷಮಿತ್ರ ವಾಟ್ಸಪ್‌ ಬಳಗದ ಯಕ್ಷ ಸತ್ಸಂಗ
ವಾಟ್ಸಪ್‌! ತಿಂಗಳಿಗೆ 800 ಮಿಲಿಯ ಮಂದಿ ಉಪಯೋಗಿಸುವ ಪ್ರಭಾವೀ ಸಂವಹನ ಸಾಮಾಜಿಕ ಮಾಧ್ಯಮ. ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆದ ಘಟನೆ ಕ್ಷಣಾರ್ಧದಲ್ಲಿ ನಮ್ಮ ಮೊಬೈಲ್‌ ಪರದೆಯಲ್ಲಿ ಗೋಚರವಾಗುವಂತೆ ಮಾಡುವ ಕ್ಷಿಪ್ರ ಸಂವಹನಕಾರಿ ಮಾಧ್ಯಮ. ಇಂತಹ ಮಾಧ್ಯಮ ತಟಸ್ಥ , ಬಳಕೆಯ ಒಳಿತು - ಕೆಡುಕು ಬಳಸುವವರ ಕೈಯಲ್ಲಿದೆ. ವಾಟ್ಸಪ್‌ ಗ್ರೂಪ್‌ನ ಸದಸ್ಯರು ಒಟ್ಟು ಸೇರಿ ಮಾನವೀಯ ನೆರವನ್ನು ನೀಡಿದ, ಸಭೆ ಸೇರಿದ, ಟ್ರಕ್ಕಿಂಗ್‌ ಮಾಡಿದ, ಪಿಕ್ನಿಕ್‌ ಹೋದ ಉದಾಹರಣೆಗಳಿವೆ. ಅಂಥವುಗಳಲ್ಲೊಂದು ವಿಶಿಷ್ಟ , ಸರ್ವ ಪ್ರಥಮ - ವಾಟ್ಸಪ್‌ ಬಳಗದ ಮುನ್ನಲೆಯಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನ.
ಹನುಮಚರಿತ ಜ್ಞಾನಸತ್ರ
ಹಿರಿಯ ಅರ್ಥಧಾರಿ, ಪ್ರವಚನಕಾರ ಅಂಬಾತನಯ ಮುದ್ರಾಡಿಯವರ ಹಿತಮಿತ ಮೃದು ವಚನಗಳು, ಕಾವ್ಯಮಯ ಶೈಲಿ, ವ್ಯಾಖ್ಯಾನದ ಪ್ರಗಲತೆ ತಾಳಮದ್ದಳೆಯಲ್ಲಿ ಇನ್ನೊಂದು ವಿಶೇಷ ಆಕರ್ಷಣೆ ಎನಿಸಿತು. ಸೀತಾನ್ವೇಷಣೆ ಹುಡುಗಾಟದ್ದಲ್ಲ, ಹುಡುಕಾಟದ್ದು. ಕಪಿಗಳೂ ಇಂತಹ ಶ್ರೇಷ್ಠ ಹಾದಿ ಹಿಡಿದದ್ದು ನೋಡಿ ನಾಲ್ಕೂ ವರ್ಣದವರಿಗೆ ಅಚ್ಚರಿಯಾಯಿತಂತೆ. ಮಲಯಾಚಲದ ಅಮೃತಮಯ ಪ್ರಕೃತಿಯ ವರ್ಣನೆಯೊಂದಿಗೆ ತಮ್ಮ ಸುಂದರ ಮಾತಿನ ಮೋಡಿಯನ್ನು ಮಾಡಿದರು.
``ಪಾದ ಪ್ರತೀಕ್ಷ `` ಹೊಸ ಪ್ರತೀಕ್ಷೆಗಳೊಂದಿಗೆ
ಶ್ರೀರಾಮ ಕಂಡ ವಿವಿಧ್ಯಮಯ ವ್ಯಕ್ತಿತ್ವದ ಶಬರಿಯ ಈ ಕಥಾನಕವೇ ಹೊಸನಗರ ಮೇಳದ “ಪಾದ ಪ್ರತೀಕ್ಷ” ಎಂಬ ಪ್ರಸಂಗ. ಒಂದಿಷ್ಟು ಅಬ್ಬರ, ಒಂದಿಷ್ಟು ಹಾಸ್ಯ ಶೃಂಗಾರ ಹೀಗೆ ಆರಂಭದಲ್ಲಿ ಕಂಡು ಬರುವ ಈ ಪ್ರಸಂಗ ಅಂತ್ಯದಲ್ಲಿ ಬಹಳ ಅರ್ಥಗರ್ಭಿತ ಮಂಗಳ ಹಾಡುತ್ತದೆ. ರಾಮಾಯಣ ಪ್ರಸಂಗಗಳಲ್ಲಿ ಶಬರೀ ಪ್ರಸಂಗ ಯಕ್ಷಗಾನದ ಬಯಲಾಟದಲ್ಲಿ ರಂಗವೇರುವುದು ಬಹಳ ಅಪರೂಪ. ಅಪರೂಪದ ಪ್ರಸಂಗ ರಂಗದ ಮೇಲೆ ತಂದ ಕಾರ್ಯ ಶ್ಲಾಘನೀಯ. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಯೋಗಿಸುವ ನಿಟ್ಟಿನಲ್ಲಿ ಸಾಗಬೇಕು.
ಯಕ್ಷಗಾನಕ್ಕೆ ಪ್ರೇಕ್ಷಕರು ಹೆಚ್ಚಿದ್ದಾರೆಯೇ ?
ಇತ್ತೀಚೆಗೆ ಬಹಳ ದೊಡ್ಡ ಧ್ವನಿಯಲ್ಲಿ ಕೇಳಿ ಬರುತ್ತಿರುವ ಮಾತಿದು. ಈಗ ಮೊದಲಿನ ಕಾಲದ ಹಾಗಲ್ಲ, ಇತ್ತೀಚೆಗೆ ಯಕ್ಷಗಾನಕ್ಕೆ ಪ್ರೇಕ್ಷಕರು ಹೆಚ್ಚಾಗಿದ್ದಾರೆ. ಯುವಪೀಳಿಗೆ ದೊಡ್ಡ ಸಂಖ್ಯೆಯಲ್ಲಿ ಯಕ್ಷಗಾನದತ್ತ ಆಕರ್ಷಿಸಲ್ಪಟ್ಟಿದೆ. ಆದರೆ ಒಂದು ಹೊಸ ಆಯಾಮದೊಂದಿಗೆ ಎಂಬ ಕೂಗು, ಘೋಷಣೆ ಬಹಳವಾಗಿ ಕೇಳಿ ಬರುತ್ತಿದೆ. ನಿಜವಾಗಿಯೂ ಯಕ್ಷಗಾನ ಕಲೆಗೆ, ಸಮಗ್ರ ಯಕ್ಷಗಾನ ಕಲೆಯನ್ನು ಮೆಚ್ಚಿ, ಸಮಗ್ರವಾದ ಯಕ್ಷಗಾನವನ್ನು ಆಸ್ವಾದಿಸುವ ಪ್ರೇಕ್ಷಕರು ಹೆಚ್ಚಿದ್ದಾರೆಯೇ? ಕೇವಲ ಯಕ್ಷಗಾನ ಪ್ರದರ್ಶನ ನಡೆಯುವ ಸ್ಥಳದಲ್ಲಿ ಇರುವ ಜನಸಂಖ್ಯೆಯನ್ನೇ ನಾವು ಯಕ್ಷಗಾನದ ಪ್ರೇಕ್ಷಕರು ಎಂಬುದಾಗಿ ತಪ್ಪಾಗಿ ಅರ್ಥೈಸಿಕೊಂಡಿದ್ದೇವೆಯೇ?
ಬಲಿಪ ಅಮೃತ ಭವನ
ಜನ ಜೀವನದಲ್ಲಿ ಸಂಸ್ಕೃತಿ ಜೀವಂತವಾಗಿ ಇದೆ ಎಂದಾದರೆ ಅಲ್ಲಿ ಕಲೆಯೂ ತನ್ನ ಪ್ರಭಾವವನ್ನು ಬೀರಿ ಬೆಳೆದಿದೆ ಎಂದರ್ಥ. ಕಲೆಗೂ ಜನ ಜೀವನಕ್ಕೂ, ಆ ಜೀವನವು ಬಿಂಬಿಸುವ ಸಂಸ್ಕೃತಿಗೂ ಅವಿನಾಭಾವ ಸಂಬಂಧ. ಅದಕ್ಕಾಗಿ ಕಲೆಯನ್ನು ಜನಜೀವನದ ಕನ್ನಡಿ ಎಂದು ಕರೆಯುವುದು. ಸಂಸ್ಕೃತಿಯ ಬೇರುಗಳು ಜನ ಜೀವನದಲ್ಲಿ ವಿಶಾಲವಾಗಿಯೂ ಆಳವಾಗಿಯೂ ಹಬ್ಬಿರುತ್ತದೆ. ಕಲೆ, ಆ ಬೇರಿಗೆ ಜೀವ ಜಲದಂತೆ. ಒಬ್ಬ ಕಲಾವಿದ ಸಮಾಜದಿಂದ ಗುರುತಿಸಲ್ಪಟ್ಟಾಗ, ಆತನ ಕಲೆಯನ್ನು ಗುರುತಿಸಿದಂತೆ. ಆ ಕಲಾವಿದನನ್ನು ಅಂಗೀಕರೀಸಿದಾಗ ಆ ಕಲೆ ಆತನಿಂದ ಜೀವಸೆಲೆಯನ್ನು ಹೀರಿಕೊಂಡಿದೆ ಎಂದು ಭಾವಿಸಬಹುದು.
ವಿಶಿಷ್ಟ ಸಂಯ್ಯೋಜನೆಯ ಹಿಮ್ಮೇಳವಿಲ್ಲದ ತರ್ಕ ಮದ್ದಳೆ : ``ಉರ್ವಶಿಯ ಸುತ್ತಮುತ್ತ ``
ಸದಾ ಹೊಸತನಗಳ ಅನ್ವೇಷಣೆಯಲ್ಲಿರುವ ಖ್ಯಾತ ರಂಗಕರ್ಮಿ ಉದ್ಯಾವರ ಮಾಧವಾಚಾರ್ಯರ ಚಿಂತನೆಯ ಪಲವಾಗಿ, ಸಮೂಹ ಸಂಯ್ಯೋಜನೆಯಲ್ಲಿ ಮೂಡಿಬಂದ ಇಡೀ ದಿನದ “ಉರ್ವಶಿಯ ಸುತ್ತಮುತ್ತ” ಎಂಬ ಚಿಂತನ ಮಂಥನ ಪ್ರದರ್ಶನದ ಅಂಗವಾಗಿ ಪ್ರದರ್ಶಿಸಲ್ಪಟ್ಟ, ಯಕ್ಷಗಾನ ರಂಗಭೂಮಿಯ ವಿಶಿಷ್ಟ ಪ್ರಯೋಗ. ಚೆಂಡೆ ಮದ್ದಳೆ ಭಾಗವತಿಕೆ ಇಲ್ಲದೇ ಪ್ರಣಯ ಪರಿತ್ಯಕ್ತೆಯ ಒಳಬೇಗುದಿಗೆ ಕೇವಲ ವಿಶಿಷ್ಟ ಸಂಭಾಷಣಾ ಸ್ಪರ್ಶ ನೀಡಲು ಪ್ರಯತ್ನಿಸಿದ ವಿಶಿಷ್ಟ “ತರ್ಕ ಮದ್ದಳೆ” ಕಾರ್ಯಕ್ರಮವು ಶೋತೃಗಳನ್ನು ಯಕ್ಷಗಾನ ರಂಗಭೂಮಿಯಲ್ಲಿ ಹೊಸತನದ ಲೋಕಕ್ಕೆ ಸೆಳೆದೊಯ್ಯಿತು.
ಲಾರಿಯಲ್ಲಿ ಮೇಳವಿಸಿದೆ ಯಕ್ಷಗಾನದ ಮೊಬೈಲ್ ಚೌಕಿ
ಅತ್ತ ತೀರ್ಥಹಳ್ಳಿಯ ಗುತ್ಯಮ್ಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ಲಾರಿಯಲ್ಲಿ ರಂಗಸ್ಥಳ ರೂಪಿಸಿ ಗಮನ ಸೆಳೆದಿದ್ದರೆ ಇತ್ತ ಕುಂದಾಪುರ ತಾಲೂಕಿನ ಆಜ್ರಿ ಚೋನಮನೆ ಶನೀಶ್ವರ ಕಪಾಪೋಷಿತ ಯಕ್ಷಗಾನ ಮಂಡಳಿಯವರು ಚೌಕಿಯನ್ನೇ ಲಾರಿಯಲ್ಲಿ ರೂಪಿಸಿ ಗಮನಸೆಳೆದಿದ್ದಾರೆ. ಇದೊಂದು ಸಂಚಾರಿ(ಮೊಬೈಲ್) ಚೌಕಿ ಎಂಬ ಖ್ಯಾತಿ ಸಂಪಾದಿಸಿದೆ. ಕರಾವಳಿಯ ಯಕ್ಷಗಾನ ವಲಯದಲ್ಲೇ ಮೊದಲ ಬಾರಿಗೆ ಯಕ್ಷಗಾನ ಮೇಳವೊಂದರ ಚೌಕಿ ಲಾರಿ ಮೇಲೇರಿಸಿದ ಕೀರ್ತಿಗೆ ಆಜ್ರಿ ಚೋನಮನೆ ಮೇಳ ಪಾತ್ರವಾಗಿದೆ.
2013-14ರಲ್ಲಿ ಯಕ್ಷಗಾನ ರಂಗದಲ್ಲಿ ಆದ ಸಿತ್ಯಂತರಗಳು ಮತ್ತು ಘಟನೆಗಳು
ಕಳೆದ ಒಂದು ಯಕ್ಷಗಾನೀಯ ವರ್ಷದಲ್ಲಿ ಅಂದರೆ 2013 ನವೆಂಬರ್ ನಿಂದ 2014 ದಶಂಬರ್ ವರೆಗೆ ಕರಾವಳಿಯ ಯಕ್ಷಗಾನ ರಂಗದಲ್ಲಿ ಹಲವಾರು ಸಿತ್ಯಂತರಗಳು ಬದಲಾವಣೆಗಳು ಆಗಿದೆ. ``ಯಕ್ಷಗಾನಕ್ಕೆ ಕಾಲಮಿತಿ ಅನಿವಾರ್ಯವೇ `` ಈ ಬಗ್ಗೆ ವಿಶೇಷ ಕಮ್ಮಟಗಳು, ಪ್ರಾರಂಭವಾದ ಹೊಸ ಹೊಸ ಮೇಳಗಳು, ಕನಿಷ್ಟ ಇನ್ನು ಹತ್ತು ವರ್ಷ ದುಡಿಯಬಲ್ಲ ಯೋಗ್ಯತೆ ಇದ್ದರೂ ನಿವೃತ್ತಿಯನ್ನು ಘೋಷಿಸಿದ ಕಲಾವಿದರು, ಮೇಳಗಳ ವಿವಿಧ ನೂತನ ಪ್ರಸ೦ಗಗಳು, ಯಕ್ಷಗಾನದಲ್ಲಿ ಯೋಗ್ಯರಿಗೆ ಸ೦ದ ಹಲವು ಪ್ರಶಸ್ತಿ ಪುರಸ್ಕಾರಗಳು, ಅಗಲಿದ ಕಲಾಚೇತನಗಳು...ಈ ಎಲ್ಲಾ ವಿಷಯಗಳ ಸಮಗ್ರ ಪಕ್ಷಿನೋಟ...
ಹರಿಲೀಲೆ - ದಂಪತಿಗಳ ಯಕ್ಷ ಸೇವೆ
ಗಂಡಸರ ಕಲೆಗೆ ಹೆಂಗಸರ ಪ್ರವೇಶ. ಯಕ್ಷಗಾನದ ಹಿಮ್ಮೇಳ, ಮುಮ್ಮೇಳದಲ್ಲಿ ಈಗ ಲೇಡಿಸ್ಸೂ ಫಸ್ಟೇ. ಅದರಲ್ಲೂ ಅಲ್ಲಲ್ಲಿ ದಂಪತಿಗಳು ಯಕ್ಷ ಸೇವೆಯಲ್ಲಿ ತೊಡಗಿಸಿಕೊಂಡು ಅಚ್ಚರಿ ಹುಟ್ಟಿಸುತ್ತಾರೆ. ಅಂಥ ಮುಖಗಳ ಸಾಲಲ್ಲಿ ಕೆ. ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀಲಾ ಬೈಪಾಡಿತ್ತಾಯ ದಂಪತಿಯೂ ಸೇರುತ್ತಾರೆ. ಹಿಮ್ಮೇಳದಲ್ಲಿ ಪಳಗಿದ ಈ ದಂಪತಿಯ ಯಕ್ಷಸೇವೆ ಗಂಡು ಮೆಟ್ಟಿನ ಕಲೆಯ ಮೈಲುಗಲ್ಲು ಎಂದರೂ ತಪ್ಪಾಗಲಾರದು.
ಬಣ್ಣದ ಬಿನ್ನಾಣದ ಬೆರಗಿನ ಚಿತ್ರಗಳು
ಯಕ್ಷಗಾನದಂಥ ಜನಪದ ಕಲೆಯಲ್ಲಿ ರಾವಣನ ಪಾತ್ರಧಾರಿಯೊಬ್ಬ ರಂಗದ ಮೇಲೆ ನಾಟ್ಯ, ವಾಚಿಕಾದಿಗಳಿಂದ ತನ್ನೊಳಗಿನ ಕಲಾವಿದನನ್ನು ಅನಾವರಣಗೊಳಿಸುತ್ತಿರುವಂತೆಯೇ ಮುಖದ ಮೇಲಿನ ಬಣ್ಣಗಾರಿಕೆಯಿಂದ ತಾನೊಬ್ಬ ಚಿತ್ರಕಾರ ಎಂಬುದನ್ನೂ ತೋರಿಸಿಕೊಡುತ್ತಾನೆ. ತೆಂಕುತಿಟ್ಟು ಯಕ್ಷಗಾನದಲ್ಲಿ ದೈತ್ಯ ಪಾತ್ರಗಳು ಚುಟ್ಟಿ ಇಟ್ಟು ರಂಗದ ಮೇಲೆ ಕಾಣಿಸಿಕೊಳ್ಳುವ ಪರಿಪಾಠವಿದೆ. ಸ್ಥೂಲವಾಗಿ ನೋಡಿದರೆ ಎಲ್ಲ ಪಾತ್ರಗಳು ಅಕ್ಕಿಹಿಟ್ಟನ್ನು ಕಲಸಿದ ಮಿಶ್ರಣವನ್ನು ಗಂಟೆಗಟ್ಟಲೆ ಮುಖದ ಮೇಲೆ ಅಂಟಿಸುತ್ತ ಒಂದೇ ರೀತಿಯ ‘ಮುಳ್ಳು’ಗಳನ್ನು ಇಟ್ಟುಕೊಂಡು ಬಂದಂತೆ ತೋರುತ್ತವೆ.
ಅಕ್ಷರ ಯಕ್ಷಗಾನ : ಮಾತು ಜ್ಯೋತಿರ್ಲಿ೦ಗ
ಸಾಮಗ ಶೇಣಿಗಳೆ೦ದರೆ ಹಳೇಬೇರು ಹೊಸಚಿಗುರು. ಯಕ್ಷಗಾನದ ತಾಳಮದ್ದಳೆ ಎ೦ಬ ಶ್ರೀಮ೦ತ ಪ್ರಕಾರದ ಪೂರ್ವೋತ್ತರ ರೂಪಗಳು. ಪೂರ್ವದಿ೦ದ ಉತ್ತರಕ್ಕೆ ಪೂರ್ತಿ ಒ೦ದು ಸುತ್ತು ಪ್ರದಕ್ಷಿಣೆ. ಪ್ರಾಯಃ ಇನ್ನೂ ಹೊಸಬಗೆಯ ಜಾಣ ಪ್ರಯೋಗಕ್ಕೆ ಅರ್ಥ ಪ್ರಪ೦ಚದಲ್ಲಿ ಜಾಗ ಇಲ್ಲ. "ಮಾತಾಪೂರ್ವ ರೂಪ೦""ಪಿತೋತ್ತರ ರೂಪ೦" ಎನ್ನುತ್ತದೆ ತೈತ್ತಿರೀಯ ಶ್ರುತಿ. ಸಾಮಗರು ತಾಯಿ, ಮಿತ್ರ ಸಮ್ಮಿತ ಬೋಧನೆ. ಶೇಣಿ ತ೦ದೆ, ಪ್ರಭುಸಮ್ಮಿತ, ಶೋಧನೆ.
ಯುನೆಸ್ಕೋ ಮನ್ನಣೆ ಎನ್ನುವ ಯಕ್ಷ ಸ್ವಪ್ನ
ಯುನೆಸ್ಕೋ ಮನ್ನಣೆ ಎನ್ನುವುದು ಕಲಾ ಪ್ರಕಾರವೊಂದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಈ ಮನ್ನಣೆಗೆ ಅರ್ಹವಾದ ಅನೇಕ ಕಲಾಪ್ರಕಾರಗಳು ಕರ್ನಾಟಕದಲ್ಲಿವೆ. ಆದರೆ, ಅವುಗಳಿಗೆ ಯುನೆಸ್ಕೋ ಗೌರವವನ್ನು ದೊರಕಿಸಿಕೊಡುವ ಪ್ರಯತ್ನಗಳು ನಡೆದಿಲ್ಲ. ಇಂಥ ಪ್ರಯತ್ನ ನಡೆಸಿದ ಯಕ್ಷಗಾನ ಪ್ರಿಯರ ಕನಸು ಕೂಡ ನನಸಾಗಲಿಲ್ಲ. ಇದಕ್ಕೆ ಕಾರಣಗಳನ್ನು ವಿಶ್ಲೇಷಿಸುವ ಈ ಬರಹ, ಯುನೆಸ್ಕೋ ಪಟ್ಟಿಯನ್ನು ಸೇರುವ ಮಾರ್ಗಗಳು ಹಾಗೂ ಅದರಿಂದ ಲಭ್ಯವಾಗುವ ಪ್ರಯೋಜನಗಳ ಕುರಿತೂ ಬೆಳಕು ಚೆಲ್ಲುತ್ತದೆ.
ನಾವಿದ್ದಲ್ಲೇ ತಾಳಮದ್ದಲೆ
ಎರಡು ದಶಕಗಳ ಹಿಂದೆ ಕರಾವಳಿ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ಯಕ್ಷಗಾನ ಅಬ್ಬರ ಮೇಳೈಸುತ್ತಿದ್ದರೆ, ಮಳೆಗಾಲದಲ್ಲಿ ತಾಳಮದ್ದಲೆಯ ಖದರು. ಇಡೀ ದಿನ ಒಂದೇ ಶೃತಿಯಲ್ಲಿ ಸುರಿವ ಮಳೆ. ಕೃಷಿ ಕೆಲಸಕ್ಕೂ ವಿರಾಮ. ದೊಡ್ಡ ಮನೆಯ ವಿಶಾಲ ಪಡಸಾಲೆಗಳಲ್ಲಿ, ದೇವಸ್ಥಾನ, ಭಜನಾ ಮಂದಿರಗಳಲ್ಲಿ ತಾಳಮದ್ದಳೆ ಗಮ್ಮತ್ತು. ತಾಳಮದ್ದಳೆಯಲ್ಲಿ ಚೆಂಡೆಯ ಪೆಟ್ಟಿಗೆ ಧೀಂಗಿಣ ಕುಣಿಯುವ ವೇಷಗಳಿಲ್ಲ. ಬದಲಿಗೆ ವಾಚಿಕದ ಅತ್ಯುನ್ನತ ಎತ್ತರವಿದೆ. ಅಂದಿದ್ದ ಕಾಲ, ದೇಶಸ್ಥಿತಿ ಇಂದಿಲ್ಲ. ಬದುಕಿನ ಆದ್ಯತೆ ಬದಲಾಗಿದೆ. ವಿದ್ಯಾವಂತ ಯುವ ವರ್ಗ ಪಟ್ಟಣದ ಕಡೆಗೆ ಶಿಫ್ಟ್ ಆಗುತ್ತಿರುವಂತೆ ತಾಳಮದ್ದಳೆ ಪರಂಪರೆ ಊರಲ್ಲಿ ಹಿಂದಿನಂತೆಯೇ ನಡೆಯುತ್ತಿದೆಯಾ? ಅಥವಾ ಹಿರಿಯರಷ್ಟೇ ಅದರಲ್ಲಿದ್ದರಾ?
ಬಡಗುತಿಟ್ಟು ಯಕ್ಷಗಾನ ವೇಷಭೂಷಣ ತಯಾರಿಕಾ ತರಬೇತಿ ಕಾರ್ಯಗಾರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮತ್ತು ಶ್ರೀ ದಾರೇಶ್ವರ ಯಕ್ಷ ಬಳಗ ಚಾರಿಟೇಬಲ್ ಟ್ರಸ್ಟ್, ಕಿರಿಮಂಜೇಶ್ವರ ಕುಂದಾಪುರ ಇವರ ಸಹಯೋಗದೊಂದಿಗೆ 23-07-2014 ರಿಂದ 01-08-2014 ರ ತನಕ ಕಿರಿಮಂಜೇಶ್ವರ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಇಂದಿಗೆ ಉಪಯುಕ್ತವಾದ ಬಡಗುತಿಟ್ಟು ಯಕ್ಷಗಾನ ವೇಷಭೂಷಣ ತಯಾರಿಕಾ ತರಬೇತಿ ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರಕ್ಕೆ ಹತ್ತು ಜನ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದಾರೆ. ಇವರಲ್ಲಿ ಪ್ರಮುಖವಾದ ಕಾರವಾರ ಜಿಲ್ಲೆಯ ಹಳಸೆಮಕ್ಕಿಯ ರಾಮ ಹೆಗಡೆ ಮೂರೂರುರವರು.
ಒಂದು ಯುಗಾಂತ್ಯ ಕಥನ
ಸ್ಥಿತ ಪ್ರಜ್ಞತೆ ಮನುಷ್ಯನ ಪರಿಪಕ್ವತೆಯನ್ನು ತೋರಿಸುತ್ತದೆ. ಹರುಷಕ್ಕೆ ಹಿಗ್ಗದ ದುಃಖಕ್ಕೆ ಬಗ್ಗದ, ನೋವು ನಲಿವಿಗೆ ಸ್ಥಿರವಾಗಿ ನಿಲ್ಲುವವನನ್ನು ಸ್ಥಿತ ಪ್ರಜ್ಞ ಎಂದು ಹೇಳಬಹುದು. ಈ ಪರಿಪಕ್ವತೆ ಸುಲಭವಾಗಿ ಸಿದ್ಧಿಸುವುದಿಲ್ಲ. ಜೀವನಾನುಭವದ ರಸಭಾವವನ್ನು ಹೀರಿ ಸ್ವೀಕರಿಸಿದ ರೀತಿಯಲ್ಲಿ ಈ ಸಾಧನೆಯ ಗುರಿ ಅಡಗಿದೆ. ಬೆಂಕಿಯೆಂದು ತಿಳಿಯದೆ ಪತಂಗ ಹಾರುವುದುಂಟು. ಮನುಷ್ಯ ಮಾತ್ರ ಬೆಂಕಿ ಎಂದು ತಿಳಿದು, ಆ ಸುಡುವ ಅನುಭವವಾದರೂ ಅದೇ ಬೆಂಕಿಗೆ ಹಾರುವಲ್ಲಿ ಸ್ವಾರ್ಥಿಯಾಗಿಬಿಡುತ್ತಾನೆ. ಪರಿಣಾಮ ಅರಿತಿದ್ದರೂ ಸ್ವಾರ್ಥ ಅಳಿಸುವುದಿಲ್ಲ. ಇದು ಬದುಕಿನ ವಾಸ್ತವ ದರ್ಶನ ಅಂತ ಹೇಳಬಹುದಾದರೂ ಇದನ್ನೆಲ್ಲ ಮೀರಿ ನಿಂತ ವ್ಯಕ್ತಿತ್ವದ ದರ್ಶನ ಮತ್ತದರ ಅನುಭವವಾಯಿತು. ಇದು ಮಧುರ ಅನುಭವವೋ ಅಲ್ಲ ವಾಸ್ತವದ ಅರಿವೋ ನನ್ನ ಮನಸ್ಸು ಗೊಂದಲದಲ್ಲಿ ಮುಳುಗುತ್ತದೆ.
ತಾಳಮದ್ದಳೆಗಳು ಕಲಾತ್ಮಕತೆ ಕಳೆದುಕೊಳ್ಳುತ್ತಿವೆಯೇ?
ಯಕ್ಷಗಾನ ಬಯಲಾಟಗಳಲ್ಲಿ ಕಲೆಯ ಸ್ವರೂಪ ನಷ್ಟವಾಗುತ್ತಿರುವ ಬಗ್ಗೆ ಚಿಂತೆ, ಕಾಳಜಿ, ಅಸಹನೆಗಳು ವ್ಯಕ್ತವಾಗುತ್ತಿರುವುದನ್ನು ಈ ದಿನಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದೇವೆ. ಆದರೆ ಯಕ್ಷಗಾನ ತಾಳಮದ್ದಳೆಗಳಲ್ಲಿ ಕೂಡ ಅದರ ಕಲಾಸ್ವರೂಪ ನಷ್ಟಗೊಳ್ಳುತ್ತಿರುವ ಪ್ರಕ್ರಿಯೆ, ಬಹಳ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಇಂದಿನ ತಾಳಮದ್ದಳೆಗಳು ಒಂದು ಕಲಾಕೃತಿಯಾಗಿ ಮೂಡಿಬರುವುದು ಬಹಳ ವಿರಳವಾಗಿದೆ. ಮಾತೇ ಪ್ರಧಾನವಾಗಿರುವ ತಾಳಮದ್ದಳೆಯಲ್ಲಿ ಅರ್ಥ ಹೇಳುವುದು ಕೆಲವರಿಗೆ ಭಾಷಣ ಮಾಡಿದಂತೆ, ಟಿಪ್ಪಣಿ ಮಾಡಿದಂತೆ ಅತ್ಯಂತ ಸಲೀಸಾದ ಕ್ರಿಯೆ. ಭಾವಾಭಿವ್ಯಕ್ತಿ, ಸನ್ನಿವೇಶ ಚಿತ್ರಣ, ರಸಸೃಷ್ಟಿ ಇತ್ಯಾದಿಗಳ ಬಗ್ಗೆ ಗೊಡವೆಯೇ ಇಲ್ಲದೆ, ``ವಾಕ್ಚಾತುರ್ಯ ಮೆರೆಯುವುದೇ ತಾಳಮದ್ದಳೆಯ ಉದ್ದೇಶ`` ಎಂದು ಅನೇಕರು ಭಾವಿಸಿರುವಂತಿದೆ.
ದಾಮೋದರ ಮಂಡೆಚ್ಚರವರು ``ಮತ್ತೊ೦ದು ಬಗೆಯ ಕಾಯಕವನ್ನು`` ಧರಿಸಿದ ಕ್ಷಣ
ಯಕ್ಷಗಾನದ ಭಾಗವತರಲ್ಲಿ ದಿ|| ದಾಮೋದರ ಮಂಡೆಚ್ಚ ಅವರದ್ದು ಚಿರಸ್ಥಾಯಿಯಾಗಿ ಉಳಿಯುವ ಹೆಸರು. ರಂಗಸ್ಥಳದಲ್ಲಿ ಹಾಡುತ್ತಿರುವಾಗಲೇ ಪರಮಾತ್ಮನಲ್ಲಿ ಐಕ್ಯವಾದ ಪುಣ್ಯಾತ್ಮ. ನನ್ನ ಮದ್ದಳೆಯ ಗುರುಗಳಾದ ಶ್ರೀಯುತ ಪುಂಡಿಕ್ಕಾಯಿ ಕೃಷ್ಣ ಭಟ್ ಅವರ ಒಡನಾಡಿಗಳು. ಅಂತರ್ಜಾಲದಲ್ಲಿ ಕೈಯ್ಯಾಡಿಸುತ್ತಿರುವಾಗ ಮಂಡೆಚ್ಚರ ಬಗ್ಗೆ ಲೇಖಕರೊಬ್ಬರು ಬರೆದ ಬರಹವೊಂದು ಸಿಕ್ಕಿತು. ಓದಿದಾಗ ಮನಃ ಪ್ಪಟಲ ಘಟನೆಯಸುತ್ತಸುಳಿದು ಎತ್ತಲೋ ಸಾಗಿತು. ಆ ಬರಹವನ್ನು ಇಲ್ಲಿ ಹಂಚಿದ್ದೇನೆ.
ಈ ಹಾಸ್ಯಪಾತ್ರಗಳ ಸರ್ಕಸ್‌ ಲೆಕ್ಕವೇ ಅಲ್ಲ!
ಇತ್ತೀಚೆಗೆ ಯಕ್ಷಗಾನದಲ್ಲಿ ಹಾಸ್ಯ ಪಾತ್ರದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಇದೊಂದು ಕಿರು ಪ್ರತಿಕ್ರಿಯೆ. ``ದಕ್ಷಯಜ್ಞ`` ಪ್ರಸಂಗದಲ್ಲಿ ದಕ್ಷನು ಈಶ್ವರನನ್ನು ಛೇಡಿಸುವ ಭಾಗದಲ್ಲಿಯೂ ಕೆಲವೊಮ್ಮೆ ಲೌಕಿಕ ಸಂಗತಿಗಳು ಬರುವುದನ್ನು ಕಂಡಿದ್ದೇವೆ. ಶಿವ - ದಾಕ್ಷಾಯಿಣಿಯರ ಸಂವಾದ ಸಾಮಾನ್ಯ ಗಂಡ- ಹೆಂಡಿರ ಸಂಭಾಷಣೆಯಂತೆ ನಿರೂಪಿಸಲ್ಪಡುತ್ತದೆ. ವೀರಭದ್ರ ಅರಳು ಮೆದ್ದು, ಬಾಳೆಹಣ್ಣು ತಿಂದು ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಾನೆ. ಕೆಲವೊಮ್ಮೆ ಅದನ್ನು ಸಭಿಕರತ್ತ ಬೀಸಾಡಿ ತಮಾಷೆ ಮಾಡುತ್ತಾನೆ.
ಹಾಸ್ಯ ಮತ್ತು ಔಚಿತ್ಯ : ಅತಿನಿಯಮ ಬೇಡ
``ದಕ್ಷಯಜ್ಞ`` ಯಕ್ಷಗಾನ ಆಟದ ಹಾಸ್ಯ ಸನ್ನಿವೇಶವೊಂದರ ಬಗೆಗೆ ನಡೆದಿರುವ ಚರ್ಚೆಯಲ್ಲಿ ಕಲಾವಿದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರ ಬರಹ ಬಹಳ ಚೊಕ್ಕ, ಸುಟ ಮತ್ತು ಸಮತೋಲ ವಿಮರ್ಶೆಯ ಮಾದರಿಯಾಗಿದೆ. ಅಭಿನಂದನೆಗಳು. ಹಾಸ್ಯಕ್ಕೆ ಔಚಿತ್ಯದ ಸೀಮೆ ಇದೆ, ನಿಜ. ಆದರೆ ಅದು ಬೇರೆ ರೀತಿ. ಔಚಿತ್ಯಪೂರ್ಣವಾದ ಅನೌಚಿತ್ಯವೇ ಹಾಸ್ಯ. ವಿಚಿತ್ರ ವೇಷ, ಮಾತು, ವಕ್ರ ವಿಕಾರಗಳೇ ಹಾಸ್ಯಕ್ಕೆ ದ್ರವ್ಯವೆಂದು ನಾಟ್ಯ ಶಾಸ್ತ್ರವೂ ಹೇಳಿದೆ. ಭಾರತೀಯ ರಂಗ ಕಲೆಗಳ ಲ್ಲೆಲ್ಲ ಸುಮಾರಾಗಿ ಹಾಸ್ಯದ ಸ್ಥೂಲವಾದ ರೂಪವು ಒಂದೇ ಆಗಿದೆ. ಕಟ್ಟುಹಾಸ್ಯಗಳೂ ಒಂದೇ ತೆರನಾಗಿವೆ.
ದಕ್ಷಯಜ್ಞ ಹೀಗೂ ಇದ್ದಲ್ಲಿ ಬದಲಾಗುವುದೇ ಸರಿಯಲ್ಲವೆ?
ಹಾಸ್ಯದ ಹೆಸರಿನಲ್ಲಿ ಪಾತ್ರವೊಂದನ್ನು ಅಷ್ಟು ಕೀಳುಮಟ್ಟಕ್ಕೆ ಇಳಿಸಿದ ಬಳಿಕ ದೇವರ ಮಡದಿ ದಾಕ್ಷಾಯಿಣಿ ಅವರಿಗೆಲ್ಲಾ ನಮಸ್ಕರಿಸುವುದು, ಅವರಿಂದ ಹರಸಲ್ಪಡುವುದು ಇತ್ಯಾದಿಗಳು ಅಲ್ಲಿ ಸೇರಿದ ನಮ್ಮೆಲ್ಲರ ಭಾವನೆ ಹಾಗೂ ನಂಬಿಕೆಗಳಿಗೆ ಘಾಸಿಯುಂಟು ಮಾಡಿತು. ಇದು ಖಂಡಿತಕ್ಕೂ ಸಲ್ಲ ಮಾತ್ರವಲ್ಲ, ಅಪರಾಧ. ಹಾಗಾಗಿಯೇ ಪ್ರಜಾ ಪ್ರಭುತ್ವದಲ್ಲಿ ವಾಕ್‌ ಸ್ವಾತಂತ್ರ್ಯ ಎಂಬುದು ವ್ಯಕ್ತಿ ಯೊಬ್ಬನ ಮೂಲಭೂತವಾದ ಹಕ್ಕೇ ಆಗಿದ್ದರೂ ಅದರಿಂದ ಇನ್ನೊಬ್ಬರ ನಂಬಿಕೆಗೆ ಧಕ್ಕೆಯಾಗುವುದಿದ್ದಲ್ಲಿ ಹಕ್ಕನ್ನು ಕಸಿಯಲು ಕಾನೂನಿನ ಅವಕಾಶ ಕೊಟ್ಟಿರುವುದು.
ಸಿದ್ಧಕಟ್ಟೆಯವರ ಅರ್ಥಗಾರಿಕೆಯ ಶಿಸ್ತು ಮತ್ತು ಬದ್ಧತೆ
ಕೆಲವು ವರ್ಷಗಳ ಹಿಂದಿನ ಘಟನೆ. ಮೂಡಬಿದಿರೆಯ ಸಮೀಪದ ಅಶ್ವತ್ಥಪುರದಲ್ಲಿರುವ ಪ್ರಭಾಕರ ಭಟ್ಟರ ಮನೆಯಲ್ಲಿ ‘ಶಂಕರ ವಿಜಯ’ ತಾಳಮದ್ದಳೆ ನಡೆದಿತ್ತು. ಕೊರ್ಗಿ,ಮೇಲುಕೋಟೆ, ಜೋಷಿ ಮತ್ತು ಮೂಡಂಬೈಲು ಈ ಕೂಟವನ್ನು ಬಹಳ ಸಮರ್ಥವಾಗಿ ಮತ್ತು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಈ ಕೂಟದಲ್ಲಿ ಆರಂಭದಿಂದ ಕೊನೆಯವರೆಗೂ. ಒಬ್ಬ ಸಾಮಾನ್ಯ ಪ್ರೇಕ್ಷಕನಂತೆ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿಯವರು ಉಪಸ್ಥಿತರಿದ್ದರು. ಕೂಟ ಮುಗಿದ ಮೇಲೆ ತನ್ನ ಸಂದೇಹಗಳನ್ನು ತನ್ನ ಗುರುಗಳಾದ ಕೊರ್ಗಿಯವರ ಜೊತೆ ಚರ್ಚಿಸಿದರು. ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮದ ಸಂಯೋಜಕರಾದ ಮೇನಕಾ ಟೆಕ್ಸ್ ಟೈಲ್ಸ್ ನ ಸದಾಶಿವ ಭಟ್ ಅವರು ಚೆನ್ನಪ್ಪ ಶೆಟ್ಟಿಯವರರಿಗೆ ಶಾಲು ಹೊದಿಸಿ ,ಅವರ ಉಪಸ್ಥಿತಿಯನ್ನು ಗೌರವಿಸಿದರು. ಆಗಲೇ ಚೆನ್ನಪ್ಪ ಶೆಟ್ಟಿಯವರು ಒಳ್ಳೆಯ ತಾರ ಮೌಲ್ಯ ಹೊಂದಿದ ‘ಎ’ ಗ್ರೇಡ್ ಕಲಾವಿದರಾಗಿದ್ದರು.
ಯಕ್ಷಗಾನದ ವಿಷಯಾಂತರಗಳ ಒಂದು ಪ್ರವರ
ಯಕ್ಷಗಾನ ಅಸ್ವಾದನೆಯೂ ಒಂದು ವಿದ್ಯೆ ಎಂದು ಹಲವು ಸಲ ಅನ್ನಿಸಿದ್ದಿದೆ. ಯಕ್ಷಗಾನದಲ್ಲಿ ಬಹು ಮುಖೀ ರಂಜನೆ ಇದೆಯೇನೋ ಸತ್ಯ. ನಾಟ್ಯ ಗಾಯನ ನಾಟಕೀಯತೆಯಂತೆ, ವಿನೋದ ಭಾವುಕ ಅದರ ಜತೆಗೆ ಚಿಂತನೆ ರಂಜನೆ ಯಕ್ಷಗಾನವನ್ನು ಪರಿಪಕ್ವ ಕಲೆಯ ಶಿಖರವನ್ನಾಗಿಸಿದೆ. ಆದರೂ ಇಂತಹ ಕಲೆಯ ಅಸ್ವಾದನೆ ತಿಳಿಯದೇ ಇದ್ದಲ್ಲಿ ಆ ಪರಿಪಕ್ವತೆ ಅಪೂರ್ಣವೆಂದೇ ಅನಿಸಲ್ಪಡುತ್ತದೆ. ಮಿತ್ರರೊಬ್ಬರು, ಇವರು ಮಿತ್ರವರ್ಗಕ್ಕೆ ತನ್ನನ್ನು ತಾನು ಸೇರಿಸಿಕೊಂಡವರು ಎಂದರೂ ಸೂಕ್ತ, ಅವರು ಕರೆ ಮಾಡಿ ನಿತ್ಯವು ನನ್ನಿಂದ ಸಿಗುವ ಯಕ್ಷಗಾನ ಪದಗಳ ಬಗ್ಗೆ ಮಾತನಾಡತೊಡಗಿದರು. ಎಂದೋ ಮರೆತು ಹೋಗಿದ್ದ ಮಂಡೆಚ್ಚ, ಕಡತೋಕರ ಸ್ವರವನ್ನು ಕೇಳಿದಾಗ ತಮ್ಮ ಬಾಲ್ಯದ ದಿನಗಳನ್ನು ನೆನಸಿಕೊಂಡರು.
ಲಾರಿಯ ಮೇಲೇರಿ ಹೊರಡಲಿದೆ ಯಕ್ಷ ರಂಗಸ್ಥಳ
ಬಲ್ಲಿರೇನಯ್ಯ... ಕೂಲಿ ಕಾರ್ಮಿಕರ ಕೊರತೆ ಕೇವಲ ಕೃಷಿ ಚಟುವಟಿಕೆಗೆ ಮಾತ್ರವಲ್ಲ ಯಕ್ಷಗಾನದಂತಹ ಸಾಂಸ್ಕೃತಿಕ ಚಟುವಟಿಕೆಗಳಿಗೂ ತಟ್ಟಿದೆ. ಟೆಂಟ್ ಮೇಳಗಳಲ್ಲಿ ಅಥವಾ ಸಣ್ಣಪುಟ್ಟ ತಿರುಗಾಟದ ಮೇಳಗಳಲ್ಲಿ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ರಂಗಸ್ಥಳ ನಿರ್ಮಾಣ ಹಾಗೂ ಬಿಚ್ಚುವ ಕೆಲಸ ಪ್ರಯಾಸವಾಗುತ್ತಿರುವ ಸಂದರ್ಭ ತೀರ್ಥಹಳ್ಳಿಯ ಮೇಳದ ವ್ಯವಸ್ಥಾಪಕರೊಬ್ಬರು ಲಾರಿಯನ್ನೇ ಬಳಸಿ ಮೊಬೈಲ್ ರಂಗಸ್ಥಳ ನಿರ್ಮಾಣ ಮಾಡಿ ಈಗ ಸುದ್ದಿಯಲ್ಲಿದ್ದಾರೆ.
ಯಕ್ಷಗಾನದಲ್ಲಿ ನಾಯಕನ ಆರಾಧನೆ
ಕೆಲದಿನಗಳ ಹಿಂದೆ ಕುಮಟಾದಲ್ಲಿ ಜರುಗಿದ್ದ ಯಕ್ಷಗಾನ ಪ್ರದರ್ಶವೊಂದಕ್ಕೆ ಹೋಗಿದ್ದೆ . ಆಗ ಆಲ್ಲಿ ಆಟ ಪ್ರದರ್ಶನಗೊಂಡ ಬಗೆ ಅಲ್ಲಿಯ ಪ್ರೇಕ್ಷಕ ವರ್ಗದ ನಡವಳಿಕೆಯನ್ನು ನೋಡಿ ನಿಜಕ್ಕೂ ಬೆಚ್ಚಿ ಬಿದ್ದೆ ! ತಮ್ಮ ನೆಚ್ಚಿನ ನಟನ ಪ್ರತಿ ಕುಣಿತಕ್ಕೂ ಪ್ರತಿ ನಿಮಿಷವೂ ಅವರು ಚೀರುತ್ತಿದ್ದ ರೀತಿ ಉಳಿದ ಯಾವ ಪಾತ್ರಗಳನ್ನೂ ನೋಡಲು ಕೇಳಲು ಕೊಡದ ನೀತಿ ಅಭಿಮಾನಿಗಳ ಮಾಫಿಯಾವನ್ನು ನೆನಪಿಗೆ ತರುತ್ತಿತ್ತು. ಅವರನ್ನು ಆ ರೀತಿ ಪ್ರೇರಿಸುತ್ತಿದ್ದ, ಚೀರುವಿಕೆಯಿಂದ ಪುಳಕಗೊಳ್ಳುವ ಕಲಾವಿದರು ಕಲೆಯ ಶವ ಪೆಟ್ಟಿಗೆಯ ಮೊಳೆಯಂತಿದ್ದರು. ಯಕ್ಷಗಾನದ ಇಂದಿನ ಸಂದರ್ಭವನ್ನು ಹತ್ತಿರದಿಂದ ಬಲ್ಲವರಿಗೆ ಈ ಮಾತು ಅರ್ಥವಾಗುತ್ತದೆ! ಬೆಂಗಳೂರಿನ ಕೆಲ ಚಲನಚಿತ್ರ ಗೃಹಗಳಲ್ಲಿ ಡಾ. ರಾಜಕುಮಾರರ ಚಿತ್ರಗಳನ್ನು ನೋಡು ವಾಗ ಅಲ್ಲಿನ ಕೆಲ ಪ್ರೇಕ್ಷಕರ ನಡವಳಿಕೆ ಹೀಗೇ ಇರುತ್ತದೆ!
ಯಕ್ಷಲೋಕದ ಮುತ್ತುಗಳು ಪೋಣಿಸಲ್ಪಡಲಿ
ಯಕ್ಷಗಾನ ಲೋಕದಲ್ಲಿ ದಂತಕಥೆಯಾಗಿರುವ ಕೆರೆಮನೆ ಶಿವರಾಮ ಹೆಗಡೆಯವರ ಹೆಸರಿನಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನೀಡುವ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ಶನಿವಾರ ಯಕ್ಷಗಾನ ಲೋಕದ ಸಾಮ್ರಾಟ, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ಪ್ರದಾನವಾಗಲಿದೆ. ಈವರೆಗೆ ವಿವಿಧ ಕ್ಷೇತ್ರದ ಹಲವು ಗಣ್ಯರು ಶಿವರಾಮ ಹೆಗಡೆ ಪ್ರಶಸ್ತಿ ಪಡೆದಿದ್ದರೂ ಚಿಟ್ಟಾಣಿ ಈ ಪ್ರಶಸ್ತಿ ಪಡೆಯುತ್ತಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ. ಶಿವಾನಂದ ಹೆಗಡೆ ಮತ್ತು ಸ್ನೇಹಿತರು ಅಳುಕುತ್ತಲೇ ಚಿಟ್ಟಾಣಿಯವರ ಮನೆಗೆ ಹೋಗಿ ಪ್ರಶಸ್ತಿ ಸ್ವೀಕರಿಸಲು ಬರಬೇಕು ಎಂದು ಆಹ್ವಾನಿಸಿದಾಗ ತಕ್ಷಣ ಒಪ್ಪಿಕೊಂಡ ಚಿಟ್ಟಾಣಿ ಶಿವರಾಮ ಹೆಗಡೆ ನನ್ನ ಅಂತರಂಗದ ಗುರುಗಳು. ಸಂತೋಷದಿಂದ ಪ್ರಶಸ್ತಿ ಸ್ವೀಕರಿಸುತ್ತೇನೆ ಎಂದರು.
ಉಳಿಯ ಯಕ್ಷಗಾನ ಸಂಘ : ಮೆರೆದು ಮಿರುಗಿದ ಸುವರ್ಣ
ಮಧೂರು ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘವು ಕಳೆದ ವಾರ ಚಿನ್ನದ ಹೊಳಪಿನಿಂದ ಮೆರೆಯಿತು. ವೈವಿಧ್ಯ ಹೂರಣಗಳಿಂದ ಮೆರೆಸಿತು. ಬಹುಕಾಲ ಮೆರುಗುವಂತೆ ಮಾಡಿತು. ಸಂಘವೊಂದರ ಗರಿಷ್ಠ ಸಾಧ್ಯತೆಗಳನ್ನು ಸಾಕಾರಗೊಳಿಸಿತು. ಎಷ್ಟು ಬೇಕೋ ಅಷ್ಟು ಸಭಾ ಕಲಾಪ. ಒಂದು ನೆನಪು ಸಂಚಿಕೆ ಅನಾವರಣಕ್ಕೆ, ಇನ್ನೊಂದು ಸಮಾರೋಪ. ಮಿಕ್ಕ ಸಮಯವೆಲ್ಲವೂ ಯಕ್ಷಗಾನದ ವಿವಿಧ ವೈವಿಧ್ಯಗಳ ಪ್ರಸ್ತುತಿ. ಹಿರಿಯ ಕಲಾವಿದರ ಉಪಸ್ಥಿತಿ. ಕಾಪಿಟ್ಟ ಕಲಾ ಔಚಿತ್ಯದ ಮಿತಿ.
ಶಂಭು ಹೆಗಡೆ ಎಂಬ ಕೃಷ್ಣನನ್ನು ಹುಡುಕುತ್ತಾ..
ನಾನು ಅಲ್ಲಿಗೆ ಕಾಲಿಟ್ಟಾಗ ಕತ್ತಲು ನಿಧಾನವಾಗಿ ಊರಿಗೆ ಊರನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿತ್ತು. ಅಷ್ಟು ದೂರದಿಂದ ಬಂದಿದ್ದ ನಾನು ಆಸೆಯಿಂದಲೇ ಅವರ ಮನೆಯ ಬಾಗಿಲು ಬಡಿದೆ. ಬಾಗಿಲು ತೆರೆಯಿತಾದರೂ ನನಗೆ ಬೇಕಾದವರು ಇರಲಿಲ್ಲ. ನಾನು ಹಾಗೆ ಅಷ್ಟು ದೂರದಿಂಡ ತಹತಹಿಸಿ ಬಂದದ್ದು ಕೃಷ್ಣನ ದರ್ಶನಕ್ಕಾಗಿ. ’ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ, ಕೃಷ್ಣಾ ಎನಬಾರದೆ’ ಎನ್ನುವ ಸಾಲುಗಳನ್ನ ಸದಾ ನೆಂಚಿಕೊಳ್ಳುತ್ತಲೇ ಬಂದ ನಾನು ನೇರವಾಗಿ ಆ ಕೃಷ್ಣನ ಮನೆಯ ಬಾಗಿಲಿಗೇ ಬಂದು ನಿಂತಿದ್ದೆ. ಆದರೆ ಹಾಗೆ ನಾನು ಕೃಷ್ಣನನ್ನು ಹುಡುಕುತ್ತಾ ಬಂದದ್ದು ದ್ವಾರಕೆಗಲ್ಲ… ಕೆರೆಮನೆಗೆ.
ಬಲಿಪ್ಪಜ್ಜನಿಗೆ 75 ಅಂತೆ!!!!
ಯಕ್ಷಗಾನ ಎಂದರೆ ಪರಂಪರೆಯಿಂದ ಬಂದ ಜಾನಪದ ಕಲೆ. ಈ ಪರಂಪರೆಯಲ್ಲಿ ಯಕ್ಷಗಾನ ಪರಂಪರೆಯ ಉತ್ತರದಾಯಿತ್ವದಿಂದ ಕಲೆಯ ರೂವಾರಿಯಾಗಿ ಮೆರೆದವರು ಹಿರಿಯ ಭಾಗವತ ಶ್ರೀ ಬಲಿಪ ನಾರಾಯಣ ಭಾಗವತರು. ಯುಕ್ಷಗಾನದಲ್ಲಿ ಹಾಡುಗಾರಿಕೆಯಿಂದ ರಂಗಸ್ಥಳದ ಸೂತ್ರಧಾರನಾಗಿ ಅತ್ಯುನ್ನತ ಸ್ಥಾನ ಭಾಗವತರದ್ದು. ಹಾಗಾಗಿ ಇಲ್ಲಿ ಆ ಸ್ಥಾನದಲ್ಲಿ ಇದ್ದವರನ್ನು “ ಭಾಗವತ್ರೆ....” ಅಂತ ಗೌರವದಿಂದ ಸಂಭೋಧಿಸುವುದು ಕೂಡ ಒಂದು ಪರಂಪರೆಯ ಅಂಗ. ಆದರೆ ಹೀಗೆ ಕರೆಯುವಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಸಂಭೋಧಿಸಿ ಕರೆಯುವಂತಹ ಸ್ಥಾನ ವ್ಯಕ್ತಿತ್ವ ಗಳಿಸಿಕೊಂಡಿದ್ದರೆ ಅದು ಬಲಿಪ್ಪರು ಮಾತ್ರ. ಯಾಕೆಂದರೆ ಇವರನ್ನು ಭಾಗವತ ಎಂದು ಕರೆದರೆ ಅದಕ್ಕೆ ಯಕ್ಷಗಾನ ಪ್ರಪಂಚಕ್ಕೆ ಹೊರತಾಗಿಯೂ ಆಕ್ಷೇಪ ಇರಲಾರದು.
ಯಕ್ಷಕಾಶಿ ಗುಂಡಬಾಳದ ಮುಖ್ಯಪ್ರಾಣ ಸನ್ನಿಧಿ
ಯಕ್ಷಗಾನದ ಪರಂಪರಾಗತ ಪಾಠಶಾಲೆ ಎಂದು ಪ್ರಸಿದ್ಧವಾದ, ಯಕ್ಷಕಾಶಿ ಎಂದು ಕಲಾವಿದರು, ಕಲಾಪ್ರೇಮಿಗಳು ಗೌರವದಿಂದ ಕರೆಯುವ ಗುಂಡಬಾಳದ ಮುಖ್ಯಪ್ರಾಣ ಶ್ರೀ ಲಕ್ಷ್ಮಿ ವೆಂಕಟೇಶ ದೇವರ ಸಮ್ಮುಖದಲ್ಲಿ ದೇವರಿಗೆ ಅತ್ಯಂತ ಪ್ರಿಯವಾದ ಯಕ್ಷಗಾನ ಇಂದಿನಿಂದ ಆರು ತಿಂಗಳುಗಳ ಕಾಲ ನಿತ್ಯ ನಡೆಯಲಿದೆ. ಈ ಸನ್ನಿಧಿಯಲ್ಲಿ ಕಲಾವಿದರಾಗಿ ಆಟ ಕುಣಿಯುವುದು, ಸೇವಾದಾರನಾಗಿ ಆಟ ಆಡಿಸುವುದು, ಪ್ರೇಕ್ಷಕನಾಗಿ ಆಟ ನೋಡುವುದು ಸಹ ಸೇವೆಯೇ ಆಗಿದೆ.
ಆಧುನಿಕ ಯಕ್ಷಗಾನದಲ್ಲಿ ``ಕ್ಷೇತ್ರ ಮಹಾತ್ಮೆ``ಗಳ ಪಾತ್ರ.
ವಾದ್ಯ ಘೋಷಗಳ ಶಬ್ದ, ಸಿಡಿಮದ್ದುಗಳ ಆರ್ಭಟ, ಕೈಯಲೊಂದು ದೊಂದಿ, ರಂಗಸ್ಥಳದ ಎದುರಿನಿಂದ ಅಬ್ಬರದ ವೇಷಗಳ ಪ್ರವೇಶ. ಎಂತಹ ಪ್ರೇಕ್ಷಕನಾದರೂ ಆತನ ಮೈ ರೊಮಾಂಚನಗೊಳ್ಳುವುದು ಸಹಜ. ಈಗಲೂ ಯಕ್ಷಗಾನದಲ್ಲಿ ಕ್ಷೇತ್ರ ಮಹಾತ್ಮೆ ಅಭಿಮಾನಿಗಳ ಪ್ರತ್ಯೇಕವಾದ ಪ್ರೇಕ್ಷಕ ವರ್ಗವಿದೆ. ಎಷ್ಟು ನೋಡಿದರು ಮತ್ತೊಮೆ ನೋಡಬೇಕೆನಿಸುವ ``ಕ್ಷೇತ್ರ ಮಹಾತ್ಮೆ``ಗಳು ಯಕ್ಷರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಹಲವಾರು ದೇವಳಗಳ ``ಕ್ಷೇತ್ರ ಮಹಾತ್ಮೆ``ಗಳು ಇಂದಿಗೂ ತನ್ನ ಖ್ಯಾತಿಯನ್ನ ಉಳಿಸಿಕೊಂಡಿದೆ. ಆದರೆ ಇಂದಿನ ಸಾಮಾಜಿಕ ಕಥನಗಳು ಇಂತಹ ಆರ್ಭಟಿಯ ವಸ್ತುಗಳಿಂದ ದೂರಗೊಂಡಿದೆ. ಅಬ್ಬರದ ವೇಷಗಳನ್ನು ಬಯಸಿ ಬರುವ ಪ್ರೇಕ್ಷಕನ ಹಸಿವನ್ನು ಸಾಮಾಜಿಕ ಕಥನಗಳು ನೀಗಿಸಲಾಗುತ್ತಿಲ್ಲ.
ಯಕ್ಷಗಾನದ ಚೌಕಿಪೂಜೆಗೂ ತಟ್ಟಲಿದೆಯಾ. . . ಮೂಢನಂಬಿಕೆಯ ಬಿಸಿ
ಮಡೆ-ಮಡೆಸ್ನಾನ, ಗಣೇಶ ಹಾಲು ಕುಡಿಯುವಿಕೆ, ಹೀಗೆ ಹತ್ತು ಹಲವಾರು ಮೂಲ ಹಾಗೂ ಮೂಢನಂಬಿಕೆಗಳ ಪರ-ವಿರುದ್ಧ ಹಾರಾಟ-ಹೋರಾಟ, ಧರಣಿ ಹಾಗೂ ಕಾನೂನಿನ ಬಗ್ಗೆ ರಾಜ್ಯ ಮಟ್ಟದಲ್ಲಿ ಬಿಸಿಬಿಸಿ ಚರ್ಚೆ ಆಗುತ್ತಿರುವಾಗಲೇ, ಪಶ್ಚಿಮ ಘಟ್ಟದ ತಪ್ಪಲು, ರಾಜ್ಯಕ್ಕೆ ಈಗಿನ ಕನ್ನಡ ಸಾಹಿತ್ಯ ಅಧ್ಯಕ್ಷರಾದ ಹಾಲಂಬಿಯವರನ್ನು ನೀಡಿದ ಹಾಲಾಡಿ-ಶಂಕರನಾರಾಯಣದ ಸಮೀಪದ ಸಿದ್ಧಾಪುರದಲ್ಲಿ ಜರುಗಿದ 13ನೇ ವರ್ಷದ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಯಕ್ಷಗಾನದ ಗೋಷ್ಠಿಯಲ್ಲಿ, ಯಕ್ಷಗಾನದ ಚೌಕಿಗೂ, ಅಲ್ಲಿ ಜರುಗುವ ಗಣಪತಿ ಪೂಜೆಗೂ ವಿಚಾರವಾದದ ಹೆಸರಲ್ಲಿ, ಮೂಲ ಹಾಗೂ ಮೂಢನಂಬಿಕೆಯ ಹೊಯ್ದಾಟದಲ್ಲಿ ಬಿಸಿ ಮುಟ್ಟಲಿದೆಯಾ, ಎಂಬ ಸಾಮಾಜಿಕ ಕಳವಳ ಹುಟ್ಟಿಕೊಂಡಿದ್ದು, ಇದು ಹೊಸದೊಂದು ಚಿಂತನೆಯ ಮಜಲಿಗೆ ತೆರೆದುಕೊಂಡು, ಸಾಹಿತ್ಯ-ಸಮ್ಮೇಳನಗಳು ಕೇವಲ ಆಡಂಬರವಾಗಿರದೆ, ಜನಪರ ಚಿಂತನೆಗಳಿಗೆ ಒಡ್ಡಿಕೊಂಡು, ಜನಸ್ನೇಹಿ ಕಮ್ಮಟಗಳಾಗುತ್ತವೆ ಎಂಬುದನ್ನು ಶೃತಪಡಿಸಿತು.
ಯಕ್ಷಗಾನದಲ್ಲಿ ಉಚ್ಚಾರ ಶುದ್ದಿ
ಒಂದು ಯಕ್ಷಗಾನ ಬಯಲಾಟ. ಪುಂಡು ವೇಶದ ಪ್ರವೇಶ. ತಾಯಿ ಕರೆದಾಗ ಬರುವ ವೇಷವದು. ಕೋಲ್ಮಿಂಚಿನಂತೆ ಪ್ರವೇಶಿಸಿದ ವೇಶ ಒಂದಷ್ಟು ಹೊತ್ತು ಪ್ರೇಕ್ಷಕರ ಕೈ ಬಾಯಿ ದಣಿಯುವಹಾಗೆ ದಿಗಿಣ ಸುತ್ತಿ ನಿಂತುಬಿಟ್ಟಿತು. ಕುಣಿತ ಬಹಳ ಆಕರ್ಷಕವಾಗಿತ್ತು. ಕುಣಿತವೊಂದೇ ಎಲ್ಲವನ್ನು ಹೇಳುವಂತಿದ್ದರೆ ಅನ್ನಿಸಿದ್ದು ಮಾತನಾಡಲು ತೊಡಗುವಾಗ. ಆ ಪಾತ್ರ ಮಾತನಾಡ ತೊಡಗಿದ್ದು ಹೀಗೆ “ ಅಮ್ಮಾ....ನೀಣು ಕರೆದಾಗ ಓಡೋಡಿ ಬಂದೆ............ಜೋರು ಹಸಿವಾಗುತ್ತಿದೆಯಮ್ಮ. ನಾಣು ಹೇನನ್ನು ತಿನ್ನಲಿ?” ಎಂತಹಾ ಆಭಾಸ ! ಪ್ರಾಥಮಿಕ ಶಿಕ್ಷಣದ ತಳಹದಿ ಕುಸಿದ ಅನುಭವವಾಗುತ್ತದೆ.
ಶೇಣಿ ಗೋಪಾಲಕೃಷ್ಣ ಭಟ್ ರ ಬಪ್ಪ ಬ್ಯಾರಿಯ ಮಾನವ ಧರ್ಮ ಸ೦ದೇಶ
ಶೇಣಿಯವರ ಮಾತುಗಾರಿಕೆ ನೀಡುವ `ಕಿಕ್‌` ಅದನ್ನು ಅನುಭವಿಸಿದವರಿಗೆ ಮಾತ್ರ ತಿಳಿದೀತು. ಬಹುಶಃ ಅದನ್ನು ಯಕ್ಷಗಾನಾಸಕ್ತರಿಗೆ ಮಾತ್ರ ಅನುಭವಿಸಲು ಸಾಧ್ಯವಾಗುವುದು. ಕೇಳುವವರ ಆಸಕ್ತಿಗೆ ಅನುಗುಣವಾಗಿ ಶೇಣಿಯವರ ಅರ್ಥಗಾರಿಕೆಯಿಂದ ಅರ್ಥಶಾಸ್ತ್ರ, ತತ್ವ ಶಾಸ್ತ್ರ, ಮಾನವತಾವಾದ, ಕಾವ್ಯ ಮೀಮಾಂಸೆಗಳನ್ನೆಲ್ಲ ಬಗೆದು ತೆಗೆಯಬಹುದು. ಒಟ್ಟಾಗಿ ಅರ್ಥ ಕೇಳುತ್ತಿದ್ದರೆ ಒಬ್ಬೊಬ್ಬ ಸ್ನೇಹಿತರು ಒಂದೊಂದು ವಿಚಾರ ಗುರುತಿಸುತ್ತಿದ್ದುದುಂಟು.
ಹಾಸ್ಯಗಾರರಿಂದ ``ಗದಾಯುದ್ದ`` ಪ್ರಸಂಗದ ಪ್ರಧರ್ಶನ ಸಾಧುವೇ?
ಮಹಾಭಾರತ ಕುರುಕ್ಷೇತ್ರ ಯುದ್ದದ ಪರ್ವಗಳಲ್ಲಿ ಗದಾಪರ್ವವು ವಿಶಿಷ್ಟವೂ ಅರ್ಥಪೂರ್ಣವೂ ಆದ ಕಥಾ ಪ್ರಸಂಗ. ಮಹಾಭಾರತದುದ್ದಕ್ಕೂ ಖಳನಾಯಕನೆಂದು ಬಿಂಬಿಸಲ್ಪಟ್ಟ ಕೌರವನ ಉದಾತ್ತ ಗುಣವಿಶೇಷಣಗಳೂ, ಕರುಣಾಜನಕ ಸನ್ನಿವೇಶಗಳು, ಇಲ್ಲಿ ಬಹಳ ಸುಂದರವಾಗಿ ಅಭಿವ್ಯಕ್ತವಾಗಿದೆ. ರನ್ನ ಮಹಾಕವಿಯ "ಗದಾಯುದ್ದ" ಕಾವ್ಯವನ್ನು ನಮ್ಮ ಯಕ್ಷಗಾನ ಕವಿಗಳು, ಕಲಾವಿದರು ಯಥಾವತ್ತಾಗಿ ರಂಗಕ್ಕೆ ತಂದಿದ್ದಾರೆ. ಪ್ರಬುದ್ಧ ಕಲಾವಿದರು ಈ ಪಾತ್ರದಲ್ಲಿ ಕಾಣಿಸಿಕೊಂಡಾಗ ಈ ಎಲ್ಲಾ ಭಾವನೆಗಳನ್ನು ಪ್ರೇಕ್ಷಕರಿಗೆ ಮನಮುಟ್ಟುವಂತೆ ತಲುಪಿಸಲು ಸಾಧ್ಯವಾಗುತ್ತದೆ.
ಮರಿ ಚಿಟ್ಟಾಣಿ ಯಕ್ಷ ರಂಗಪ್ರವೇಶ
ಯಕ್ಷ ದಿಗ್ಗಜ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಮೊಮ್ಮಗ ಕಾರ್ತಿಕ್ ಸುಬ್ರಹ್ಮಣ್ಯ ಹೆಗಡೆ ಗೆಜ್ಜೆ ಕಟ್ಟುವ ಮೂಲಕ ಚಿಟ್ಟಾಣಿ ಕುಟುಂಬದಿಂದ ಮತ್ತೊಂದು ಯಕ್ಷ ಪ್ರತಿಭೆ ರಂಗಪ್ರವೇಶ ಮಾಡಿದೆ. ಚಿಟ್ಟಾಣಿಯವರ ಮಕ್ಕಳು, ಮೊಮ್ಮಕ್ಕಳು, ಮನೆಯ ಹೆಣ್ಮಕ್ಕಳು ಸಹಿತ ಎಲ್ಲರೂ ಯಕ್ಷಗಾನ ಕಲಿತವರೇ ಆದರೂ ಕೆಲವರಷ್ಟೆ ಪೂರ್ಣವಾಗಿ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಉಳಿದವರು ಬೇರೆ ಬೇರೆ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈಗ ಕಾರ್ತಿಕ್ ಹೆಗಡೆ ಎಂಬ ಹುಡುಗ ಪೂರ್ಣವಾಗಿ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದು, ಅಜ್ಜ ಮತ್ತು ಅಪ್ಪನ ಜತೆಗೆ ರಂಗದಲ್ಲಿ ಮೆರುಗು ಮೂಡಿಸುತ್ತಿದ್ದಾರೆ.
ಪುನರುಜ್ಜೀವನದೊಂದಿಗೆ ದಿಗ್ವಿಜಯಕ್ಕೆ ಹೊರಟ ಪುರಾತನ ಗೋಳಿಗರಡಿ ಮೇಳ
ಗೋಳಿ ಗರಡಿ ಎಂದಾಗ ಯಕ್ಷಗಾನ ಪ್ರೀಯರಿಗೆ ತಟ್ಟನೆ ನೆನಪಿಗೆ ಬರುವುದು ಅವಿಭಜಿತ ದ. ಕ. ಜಿಲ್ಲೆಯ ಸುಮಾರು 210 ಗರಡಿಗಳಲ್ಲಿ ಯಕ್ಷಗಾನ ಮೇಳ ಹೊಂದಿದ ಏಕಮೇವ ಗರಡಿ ಉಡುಪಿ ಜಿಲ್ಲೆಯ ಸಾಸ್ತಾನದ ಗೋಳಿಗರಡಿ. ಸುಮಾರು 150ಕ್ಕೂ ಅಧಿಕ ವರ್ಷದ ಇತಿಹಾಸವಿರುವ ಕ್ಷೇತ್ರದ ಅದಿದೈವ ಪಂಜುರ್ಲಿ ದೈವದ ಹೆಸರಿನ ``ಶ್ರೀ ಪಂಜುರ್ಲಿ ಕ್ರಪಾ ಪೋಷಿತ ಯಕ್ಷಗಾನ ಮಂಡಳಿ``ಗೆ ತನ್ನದೇ ಆದ ಇತಿಹಾಸವಿದೆ. ಯಕ್ಷಗಾನ ಕಲೆಯನ್ನು ಸೇವೆಯಾಗಿ, ಬಯಲಾಟವಾಗಿ ಪ್ರದರ್ಶಿಸುತ್ತಾ ಬಂದ ಮೇಳಗಳಲ್ಲಿ ಗರಡಿಯೊಂದರ ಆಶ್ರಯದಲ್ಲಿ ನೆಡೆಸಲ್ಪಡುವ ಏಕೈಕ ಮೇಳ ಇದಾಗಿದೆ. ಒಂದುವರೆ ಶತಮಾನಗಳ ಇತಿಹಾಸವಿರುವ ಈ ಮೇಳದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಧ್ರುವತಾರೆಯಾಗಿ ಮೆರೆದ ಘಟಾನುಘಟಿ ಕಲಾವಿದರು ಗೆಜ್ಜೆ ಕಟ್ಟಿ ಕುಣಿದಿದ್ದಾರೆ. ತಾಳ ಹಿಡಿದು ಭಾಗವತರಾಗಿದ್ದಾರೆ.
ಯಕ್ಷಗಾನದಲ್ಲಿ ಆಧುನಿಕ ಅಭಾಸಗಳು : ಪ್ರೇಕ್ಷಕರು ಮತ್ತು ಮೇಳದ ಯಜಮಾನರು ( ಭಾಗ-3)
ಕಲೆಗೆ ಬೆಲೆ ಸಿಗುವುದು ಅದನ್ನು ಅಸ್ವಾದಿಸುವ ಪ್ರೇಕ್ಷಕರಿಂದ. ಕೃತಿಗೆ ಹೇಗೆ ಕೊಂಡು ಓದುವವ ಬೇಕೋ ಹಾಗೇಯೇ ಕಲೆಗೆ ಬಂದು ನೋಡುವವ ಬೇಕು. ಅಪಾರ ಓದುಗರಿದ್ದಾರೆಂಬುವುದು, ಅಪಾರ ಪ್ರೇಕ್ಷಕರಿದ್ದರೆಂಬುದು ಕೃತಿಯ ಯಾ ಕಲೆಯ ಮಾನದಂಡವಾಗಲಾರದು. ಅನೇಕ ಸಲ ಒಳ್ಳೆಯ ಪುಸ್ತಕ, ಸೃಷ್ಟಿಶೀಲ ಪ್ರದರ್ಶನಗಳು ವನಸುಮವಾಗಿ ಕಳಪೆ ಪ್ರದರ್ಶನಗಳು ಚೆನ್ನಾಗಿ ಹಣ ಗಳಿಸಿದ ಉದಾಹರಣೆಗಳಿವೆ. ಯಕ್ಷಗಾನ ಕಲೆಯು ಪ್ರೇಕ್ಷಕರ ಒಲವಿನ ಬಲವನ್ನಷ್ಟೆ ಅವಲಂಬಿಸಿದೆ. ಇದಕ್ಕೆ ಸರಕಾರದ ಪ್ರೋತ್ಸಾಹವಿಲ್ಲ, ಆಶ್ರಯವಿಲ್ಲ. ಪ್ರೇಕ್ಷಕರನ್ನು ಸೆಳೆಯದ ಹೊರತು ಕಲಾವಿದ ಬದುಕುವಂತಿಲ್ಲ. ಅದಕ್ಕಾಗಿ ರಂಗಸ್ಥಳ ಸೃಷ್ಟಿಶೀಲವಾಗದೆ ನಿರ್ವಾಹವಿಲ್ಲ.
ಯಕ್ಷಗಾನವನ್ನು, ಕಲಾವಿದರನ್ನು ಹಾಳು ಮಾಡೋರೇ ಪ್ರೇಕ್ಷಕರು!
ಯಕ್ಷಗಾನದ ರಂಗವೇರಿದಾಗ ಅದರ ಇತಿಮಿತಿಯೊಳಗೆಯೇ ಇರಬೇಕು, ಅವರು ಆ ಸೀಮಾ ರೇಖೆಯನ್ನು ದಾಟಿದ ತಕ್ಷಣ ಈಚೆಗೆ ಎಳೆಯುವ ಒಂದು ಶಕ್ತಿ ಅಲ್ಲಿರಬೇಕು ಎಂದಿದ್ದಾರವರು. ಈಗೇನಾಗುತ್ತಿದೆ? ಯಕ್ಷಗಾನದ ವೇದಿಕೆಯಲ್ಲಿ ಸಿನಿಮಾದಂತೆ ಹಾಡುಗಳನ್ನು ಎಳೆ ಎಳೆದು ಹಾಡಲಾಗುತ್ತದೆ; ಪೌರಾಣಿಕ ವೇಷಧಾರಿಗಳೂ ಸಮಕಾಲೀನ ರಾಜಕೀಯವನ್ನು ರಂಗಕ್ಕೆಳೆದು ತರುತ್ತಾರೆ, ಆಕ್ಷೇಪಾರ್ಹ ಎನ್ನಬಹುದಾದ, ಅಥವಾ ನೇರವಾಗಿ ಅಶ್ಲೀಲ ಅನ್ನಿಸಬಹುದಾದ ಹಾಸ್ಯದ ತುಣುಕುಗಳೂ ರಂಗದ ಮೇಲೆ ಸರಿದುಹೋಗುತ್ತವೆ, ಅಸಮರ್ಪಕವಾದ (ಪೂರ್ಣ ಸುತ್ತು ಇಲ್ಲದ) ದಿಗಿಣ ಹಾಕಿ, ಇದುವೇ ಯಕ್ಷಗಾನದ ದಿಗಿಣ ಎಂಬಂತೆ ಬಿಂಬಿತವಾಗುತ್ತಿದೆ
ಯಕ್ಷಗಾನ ಹಿಮ್ಮೇಳ ಭಾಗವತಿಕೆ ಮತ್ತು ವಾದನದ ಆಭಾಸಗಳು (ಭಾಗ-2)
ಯಕ್ಷಗಾನದಲ್ಲಿ ಭಾಗವತಿಕೆಯಷ್ಟು ಕುಲಗೆಟ್ಟ ಅಂಗ ಬೇರೊಂದಿಲ್ಲ. ಕನಿಷ್ಟ ಶ್ರುತಿ ಲಯದ ಜ್ಝಾನವಿಲ್ಲದ ಪ್ರೇಕ್ಷಕರ ಸಿಳ್ಳು ಚಪ್ಪಾಳೆಯೇ ತಮಗೆ ದೊರೆತ ಪ್ರೋತ್ಸಾಹವೆಂದು ಗೊತ್ತಿರುವರಾಗವನ್ನು ಬೇಕಾಬಿಟ್ಟಿ ಎಳೆಯುವ ಭಾಗವತರೇ ಇಂದು ಎಲ್ಲೆಡೆ ಕಾಣುತ್ತಾರೆ. ಪ್ರೇಕ್ಷಕರ ಚಪ್ಪಳೆ ಬರುವ ವರೆಗೆ ಅವರ ಆಲಾಪನೆ ನಿಲ್ಲದು. ಕಾಳಿಂಗ ನಾವಡರು ಭಾಗವತಿಕೆಯಲ್ಲಿ ಕ್ರಾಂತಿ ಮಾಡಿದವರು. ಹೊಸ ಹೊಸ ರಾಗಗಳನ್ನು ಸಂದರ್ಭಾನುಸಾರ ಬಳಸಿದ್ದು ಮಾತ್ರವಲ್ಲದೆ ಹಳೆಯ ರಾಗಗಳಿಗೆ ಹೊಸ ಸಂಚಾರವನ್ನೂ ನೀಡಿದವರು. ಇಂದು ಎಲ್ಲೆಡೆ ಮರಿ ನಾವಡರೆ. ಬಡಗುತಿಟ್ಟು ಭಾಗವತರಲ್ಲಿ ಒಬ್ಬ ಭಾಗವತನೂ ಸಹ ಮರವಂತೆ ನರಸಿಂಹ ದಾಸರು, ನೆಲ್ಲೂರು ಮರಿಯಪ್ಪ ಅಚಾರರು, ಜಾನುವಾರುಕಟ್ಟೆಯವರ ದಾರಿಯಲ್ಲಿ ಸಾಗಿದವರಿಲ್ಲ.
ಯಕ್ಷಗಾನದಲ್ಲಿ ಆಧುನಿಕ ಅಭಾಸಗಳು ಮತ್ತು ಪರಿಹಾರ (ಭಾಗ-1)
ಸೃಜನಶೀಲತೆಯಿಂದಾಗಿ ನಿತ್ಯ ನೂತನತೆಯಿದ್ದು ಮನರಂಜನೆಯಷ್ಟೇ ಅಲ್ಲದೆ ಮನೋಧರ್ಮ ಪ್ರಯೋಗಕ್ಕೂ ಅವಕಾಶವಿರುವುದೇ ಯಕ್ಷಗಾನದ ವಿಶೇಷತೆ. ಈಗ ಕಾಲಚಕ್ರದ ಉರುಳುವಿಕೆಗೆ ಸಿಕ್ಕಿ ಇತಿಹಾಸವಾಗುತ್ತಿದೆ. ಈ ವಿಶಿಷ್ಟತೆಯೇ ಯಕ್ಷಗಾನ ಕಲೆಯ ಜೀವಾಳ. ಕಲೆಗಳಿಗೆ ಮರುಹುಟ್ಟು ನೀಡುವುದು ಅಸಾದ್ಯ. ಆದ್ದರಿಂದ ಯಕ್ಷಗಾನ ಇತಿಹಾಸ ಸೇರುವ ಪ್ರಕ್ರಿಯೆಯನ್ನು ನಿಲ್ಲಿಸಿ ಈ ಕಲೆಯ ಸಾಂಪ್ರದಾಯಕ ಸ್ವರೂಪ ಉಳಿಯುವಂತೆ ಮಾಡುವ ಸವಾಲು ನಮ್ಮ ಮುಂದಿದೆ. ಇದು ಸಾದ್ಯವೇ? ಇದು ಯಾರಿಗಾಗಿ? ಇದು ಹೇಗಾಗಬೇಕು? ಯಾರಿದನ್ನು ಮಾಡುವವರು? ಮುಂತಾದ ಪ್ರಶ್ನೆಗಳು ಸಾಧುವಾದದ್ದೆ.
ಗೆಜ್ಜೆ ಕಟ್ಟಲು ಯಕ್ಷಗಾನ ಮೇಳಗಳ ಸಿದ್ಧತೆ
ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆಯ ಕೂಗು ಕೇಳಿಬರುತ್ತಿರುವ ಈ ದಿನಗಳಲ್ಲಿ ಕರಾವಳಿಯಲ್ಲಿ 45ಕ್ಕೂ ಅಧಿಕ ಯಕ್ಷಗಾನ ಮೇಳಗಳು ಮುಂದಿನ 6 ತಿಂಗಳ ತಿರುಗಾಟಕ್ಕೆ ಸಿದ್ಧತೆ ನಡೆಸಿವೆ. ತೆಂಕು ಹಾಗೂ ಬಡಗು ಎರಡು ತಿಟ್ಟಿನ ಮೇಳಗಳು ನವೆಂಬರ್‌ನಲ್ಲಿ ಗೆಜ್ಜೆ ಕಟ್ಟಿ ತಿರುಗಾಟ ನಡೆಸಲಿವೆ. ದ.ಕ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಇಡೀ ರಾತ್ರಿ ಯಕ್ಷಗಾನ ಪ್ರದರ್ಶನ ನೀಡುವುದು ಕರಾವಳಿಯಲ್ಲಿ ನಡೆದುಕೊಂಡು ಬಂದ ಸಂಪ್ರದಾಯ. ಟೆಂಟ್ ಮೇಳ ಟಿಕೆಟ್ ಇಟ್ಟು ಪ್ರದರ್ಶನಗೊಂಡರೆ, ಬಯಲಾಟ ಮೇಳ ಹರಕೆ ರೂಪದಲ್ಲಿ ಪ್ರದರ್ಶನ ನೀಡುತ್ತದೆ. ಇದರ ಜತೆಗೆ ಕೆಲವು ಮೇಳಗಳು ಕಾಲಮಿತಿಯ (ಸಂಜೆಯಿಂದ ಮಧ್ಯರಾತ್ರಿವರೆಗೆ) ಪ್ರದರ್ಶನ ನೀಡುತ್ತವೆ.
ರಾಮ ನಿನ್ನ ಬಾಣ ತಾಗಿದಾಮೇಲೆ..............
ರಾಮ ನಿನ್ನ ಬಾಣ ತಾಗಿದಾ ಮೇಲಿನ ಪಾರಮಾರ್ಥಿಕದ ಬಗ್ಗೆ ಹೇಳುವಾಗ, ರಂಗದ ಮೇಲೆ ಮೋಕ್ಷ ಸಾಧನೆಯ ಮಾತನ್ನಾಡುವಾಗ ಒಂದು ಕ್ಷಣವಾದರೂ ಈ ಜೀವಭಾವದ ಸಂಭಂಧದ ಅರಿವಾಗದದಿರುತ್ತದೆಯೆ? ಮನುಷ್ಯನ ಹುಟ್ಟು ಸಾವಿನ ನಡುವಿನ ನಶ್ವರ ಜೀವನದ ಅರ್ಥವೇನು ಎಂದರಿವಾಗಿರುತ್ತದೆ. ಒಂದು ವೇಳೆ ಇದರ ಅರಿವಾಗದೇ ಇದ್ದರೆ, ಕಲಾವಿದನಾಗಿ ವಾಲಿಯಾಗಿ ಪರಕಾಯ ಪ್ರವೇಶ ಸಾಧ್ಯವಾಗುವುದಿಲ್ಲ. ಮಾತ್ರವಲ್ಲ ಪರಿ ಪೂರ್ಣ ವಾಲಿಯ ಪಾತ್ರವೂ ಅಗುವುದಕ್ಕೆ ಸಾಧ್ಯವಿಲ್ಲ. ರಂಗದ ಮೇಲಿನ ವಾಲಿಯ ಮಾತಿಗೆ ನಾವು ಆಸನದ ತುದಿಗೆ ಬಂದು , ಕಣ್ಣು ತುಂಬಿ ಭಾವಪರವಶರಾಗಿ ಚಪ್ಪಾಳೆ ಹೊಡೆಯುತ್ತೇವೆ. ಭಾಗವತರು ಮಂಗಳ ಹಾಡಿದಾಗ ನಮ್ಮ ಭಾವನೆಗಳಿಗೂ ಮಂಗಳ ಹಾಡಿಬಿಡುತ್ತೇವೆ. ಮತ್ತೆ ಯಥಾ ಪ್ರಕಾರ ರಾಗದ್ವೇಷದ ಪ್ರಪಂಚದ ಒಳ ಹೊಕ್ಕು ಸಾಮನ್ಯರೇ ಆಗಿಬಿಡುತ್ತೇವೆ. ಇದಲ್ಲವೇ ವಿಪರ್ಯಾಸ?
ಪಾತ್ರಾವಲೋಕನ
``ಕೇಳು ಜನಮೇಜಯನೆ ಕುರುಕುಲ ಮಾನಧನನಿಗೆ ಗೈದ ದ್ರೋಹವ...`` ಕುರುಕ್ಷೇತ್ರದ ಯುದ್ದದ ಕೊನೆಯಲ್ಲಿ ಭೀಮನಿಂದ ಕೌರವ ಹತನಾದಾಗ ದ್ರೋಣ ಪುತ್ರ ಅಶ್ವತ್ಥಾಮ ಕ್ರೋಧಗೊಂಡು ಸಿಡಿಲಿನಂತೆ ಪ್ರವೇಶಿಸುವ ಸನ್ನಿವೇಶದ ಪದವಿದು. ಆರಂಭದಿಂದಲೇ ಪ್ರಸಂಗಕ್ಕೆ ಕಿಚ್ಚು ಹಚ್ಚಿದಂತಾಗಿ ಪ್ರಸಂಗ ನಡೆ ತೀವ್ರವಾಗಿರುತ್ತದೆ. ರೋಮಾಂಚಿತನಾಗುವ ಪ್ರೇಕ್ಷಕ ವೃಂದ ಪ್ರಸಂಗದ ಮುಂದಿನ ನಡೆಗೆ ಕಾತುರವಾಗುತ್ತ ಬಂದ ಅಶ್ವತ್ಥಾಮನ ದಿಗಿಣವನ್ನು ನೋಡುತ್ತದೆ. ಈ ದಿಗಿಣದಿಂದಲೇ ಕಥೆಯ ಮುಂದಿನ ಹಂದರವನ್ನು ಮರೆಯಬಾರದಲ್ಲ? ಕುರುಕ್ಷೇತ್ರದ ಯುದ್ದ ಮುಗಿದ ನಂತರ ಕೊನೆಯದಿನ ರಾತ್ರಿ ಅಶ್ವತ್ಥಾಮನ ರಾತ್ರಿಯಾಗಿಬಿಡುತ್ತದೆ. ತಾನು ಬ್ರಾಹ್ಮಣನೆಂಬುದನ್ನು ಮರೆತು ಪೈಶಾಚಿಕ ಕೃತ್ಯವನ್ನೇ ಎಸಗಿಬಿಡುತ್ತಾನೆ. ಘೋರ ರಾತ್ರಿಯ ಭೀಭತ್ಸ ಸನ್ನಿವೇಶದ ಚಿತ್ರಣವೇ ರಕ್ತ ರಾತ್ರಿ ಪ್ರಸಂಗ. ರನ್ನನ ಗಧಾಯುದ್ದದ ಹಲವಾರು ಪದಗಳನ್ನು ಹೊಸೆದು ಸೃಷ್ಟಿಸಿದ ಜನಪ್ರಿಯ ಪ್ರಸಂಗವಿದು.
ಮೌನ ಮಕ್ಕಳ ಧಮನಿಯಲ್ಲಿ ಉಕ್ಕಲಿದೆ ಯಕ್ಷ ವಾರಿಧಿ
ಈ ಮಕ್ಕಳಿಗೆ ಕಿವಿ ಕೇಳಿಸೋದಿಲ್ಲ. ಮಾತು ಬರೋದಿಲ್ಲ. ವಾಕ್-ಶ್ರವಣ ದೋಷ ಇರುವ ವಿಶೇಷ ಮಕ್ಕಳಿವರು. ಆದರೆ ಇವರು ಮಾಡಲು ಹೊರಟಿರುವ ಕೆಲಸದ ಬಗ್ಗೆ ನೋಡಿದರೆ ಆಶ್ಚರ್ಯವಾಗುತ್ತದೆ! ಇದು ಸಾಧ್ಯನಾ ಎಂಬ ಆತಂಕವೂ ಮೂಡುತ್ತದೆ. ಆದರೂ ಇದು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಲು ಹೊರಟಿದ್ದಾರೆ ಈ ಮಕ್ಕಳು. ಅವರ ಕೈಯಿಂದ ಅಸಾಧಾರಣ ಕೆಲಸ ಮಾಡಿಸಲು ಹೊರಟಿದ್ದಾರೆ ಗುರುಗಳು. ಮಾತಿನಲ್ಲೇ ಮಂಟಪ ಕಟ್ಟುವ, ಅಭಿನಯದಲ್ಲಿ ಹೊಸ ಲೋಕ ಸೃಷ್ಟಿಸುವ ಯಕ್ಷಗಾನ ಕಲೆಗೆ ವಾಕ್-ಶ್ರವಣ ಎರಡೂ ಶಕ್ತಿ ತೀರಾ ಅಗತ್ಯ. ವಿಶೇಷವೆಂದರೆ ಇವೆರಡೂ ಇಲ್ಲದ ವಿಶೇಷ ಮಕ್ಕಳು ಯಕ್ಷಗಾನ ಮಾಡಲು ಹೊರಟು ನಿಂತಿದ್ದಾರೆ. ಇದಕ್ಕಾಗಿಯೇ ಆರು ತಿಂಗಳಿಂದ ಕಠಿನ ಅಭ್ಯಾಸದಲ್ಲಿ ತೊಡಗಿದ್ದಾರೆ.
ಕಾಲಮಿತಿಗಿಂತ ಮೊದಲು ಪುನರುತ್ಥಾನದ ಚಿಂತನೆ ನಡೆಯಲಿ
ಯಕ್ಷಗಾನ ಪ್ರದರ್ಶನಗಳಿಗೆ ನಡುವಿರುಳು ಕಳೆದ ಬಳಿಕ ಪ್ರೇಕ್ಷಕರು ಇರುವುದಿಲ್ಲ ಎಂಬ ಕಳವಳ ಕಳೆದ ಹತ್ತಾರು ವರ್ಷಗಳಿಂದಲೇ ಕೇಳಿಬರುತ್ತಿದೆ. ಆದರೆ, ನಿರ್ವಹಣೆಯ ಮಟ್ಟವನ್ನು ಹೆಚ್ಚಿಸುವ ಪ್ರಸ್ತಾಪವಾಗಲಿ, ಪ್ರಯತ್ನವಾಗಲಿ ನಡೆದುದಿಲ್ಲ. ದೂರನ್ನೆಲ್ಲಾ ಪೇಕ್ಷಕರ ಮೇಲೆ ಹೊರಿಸಿ ಹೊಸ ದಾರಿ ಹುಡುಕುವ ತವಕದಲ್ಲಿದ್ದೇವೆ ಎಂದು ಭಾಸವಾಗುತ್ತದೆ.
ಯಕ್ಷಗಾನ ಬಯಲಾಟದ ಅವಧಿಯನ್ನು ಮೊಟಕುಗೊಳಿಸುವ ಅಥವಾ ಕಾಲಮಿತಿಗೊಳಪಡಿಸುವ ಕುರಿತು ಚಿಂತನಾ ಸಭೆಗಳು ಆರಂಭವಾಗಿವೆ. ಅನಿವಾರ್ಯ ಕಾರಣಗಳಿಂದ ಸಭೆಯಲ್ಲಿ ಪಾಲ್ಗೊಳ್ಳಲು ಕೆಲವರಿಗೆ ಅಸಾಧ್ಯವಾಗಬಹುದು. ಅಂಥವರು ಅನಿಸಿಕೆಗಳನ್ನು ವ್ಯಕ್ತಪಡಿಸುವ ತುಡಿತವಿದ್ದಲ್ಲಿ ಪತ್ರಿಕೆಯೇ ಸೂಕ್ತದ್ವಾರ ಎಂದು ಭಾವಿಸಿ ಈ ಲೇಖನ.
ಬಡಗುತಿಟ್ಟು ಯಕ್ಷಗಾನ : ಪಾತ್ರದಾರಿಗಳಿಂದ ಪದ್ಯದ ಎತ್ತುಗಡೆ ಒಂದು ಜಿಜ್ಙಾಸೆ
ಯಕ್ಷಗಾನ ದಿನದಿಂದ ದಿನಕ್ಕೆ ತನ್ನ ಮೌಲ್ಯವನ್ನು ಕಳೆದು ಕೊಳ್ಳುತ್ತಿದೆ ಎಂಬ ಕೂಗು ಒಂದಡೆ ಯಾದರೆ ಪರಂಪರೆಯನ್ನು ಉಳಿಸುವ ಕೆಲಸ ಸಾಕಷ್ಟು ಅಲ್ಲಲ್ಲಿ ಆಗುತ್ತಿವೆ ಎಂಬ ಸಮಾದಾನ ಇನ್ನೊಂದಡೆ .

ಪರಂಪರೆ ಎಂದಾಗ ಎಲ್ಲವೂ ಕಲಾಪೂರ್ಣವೆನ್ನಲಾಗದು. ಯಾವುದು ಕಲೆಯ ಸೌಂದರ್ಯಕ್ಕೆ ಅಗತ್ಯವೊ, ಅದನ್ನು ಉಳಿಸಿ ಕೊಳ್ಳುವುದು ಅತ್ಯಗತ್ಯ. ಈ ಪರಂಪರೆಯ ಮೌಲ್ಯ ನಶಿಸುವುದಕ್ಕೆ ಕಲಾವಿದರಷ್ಟೆ ಕಾರಣರಲ್ಲ; ಪ್ರೆಕ್ಷಕರ ಪಾಲುದಾರಿಕೆಯೂ ಇದರಲ್ಲಿದೆ ಯಕ್ಷಗಾನ ರಂಗವಿಂದು ಕಳೆದುಕೊಳ್ಳುತ್ತಿರುವ ``ಪದ್ಯದ ಎತ್ತುಗಡೆ`` ಯ ಬಗ್ಗೆ ಒಂದಿಷ್ಟು ವಿವೇಚಿಸಿದಾಗ ಈ ವಿಷಯ ಸ್ಪಟ್ಟವಾಗುತ್ತದೆ
ಯಕ್ಷಲೋಕದ ಅನರ್ಘ್ಯ ರತ್ನ
ಶೇಣಿಯವರ ಪೌರಾಣಿಕ ಪಾತ್ರಗಳ ನಿರೂಪಣೆಯಲ್ಲಿ ಸಿಗುವ ಒಳನೋಟಗಳು ಯಾವುದೇ ಶ್ರೇಷ್ಠ ಸಾಹಿತ್ಯ ಕೃತಿಗಳಲ್ಲಿ ಸಿಗುವ ಒಳನೋಟಗಳಿಗಿಂತ ಕಡಿಮೆ ಯೇನಲ್ಲ. ಆ ಒಳನೋಟಗಳ ಮೂಲಕ ಕೇಳುಗರ ಚಿಂತನೆಯನ್ನು ಅವರು ರೂಪಿಸಿ ದ್ದಾರೆ. ಯಕ್ಷಗಾನದ ಮೂಲಕ ಸಾಮಾಜಿಕ ಸಂದೇಶವನ್ನು ನೀಡುವ ಪ್ರಯತ್ನಗಳು ಆಗಾಗ ನಡೆದಿವೆ. ಅದಕ್ಕಾಗಿ ಪ್ರತ್ಯೇಕ ಪ್ರಸಂಗಗಳನ್ನೂ ರಚಿಸಲಾಗಿದೆ. ಅವುಗಳ ಯಶಸ್ಸು ಮತ್ತು ಔಚಿತ್ಯ ಮಾತ್ರ ಇನ್ನೂ ಪ್ರಶ್ನಾರ್ಹ. ಆದರೆ ಬಪ್ಪ ಬ್ಯಾರಿ ಪಾತ್ರದ ಮೂಲಕ ಶೇಣಿಯವರು ನೀಡಿದ ಮತೀಯ ಸಾಮರಸ್ಯದ ಸಂದೇಶ ಬಹುಶಃ ಯಕ್ಷಗಾನದ ಮೂಲಕ ಪ್ರಸಾರವಾದ ಸಾಮಾಜಿಕ ಸಂದೇಶಕ್ಕೊಂದು ಅತ್ಯುತ್ತಮ ಉದಾಹರಣೆ. ಅದು ಅರ್ಥವಾಗಬೇಕಾದರೆ ಆ ಪ್ರಸಂಗದ ಸಂಪೂರ್ಣ ಮಾತುಗಾರಿಕೆಯನ್ನು ಕೇಳಬೇಕು. ಒಟ್ಟು ಸಂದೇಶ ಅಲ್ಲಿ ಶೇಣಿಯವರು ಮಲಯಾಳಂ ಭಾಷೆಯಲ್ಲಿ ಆಡುವ ಒಂದು ವಾಕ್ಯದಲ್ಲಿ ಅಡಗಿದೆ: `ಮತಮೇದಾಯಾಲುಂ ಮನುಷ್ಯರೊನ್ನಾಗಣಂ` (ಧರ್ಮ ಯಾವುದೇ ಇರಲಿ, ಮನುಷ್ಯರೆಲ್ಲಾ ಒಂದೇ).
ಭಟ್ಟರು ಹಿಡಿದ ಪಟ್ಟಿಗೆ ಉತ್ತರಿಸಲು ಶೇಣಿಯವರಿಗೂ ಕಷ್ಟವಾಗಿತ್ತು !
ತಿಟ್ಟು ಲೆಕ್ಕಾಚಾರಗಳನ್ನು ಬದಿಗಿಟ್ಟ ನಂತರವೂ ಯಕ್ಷಗಾನವನ್ನು ಎರಡು ರೀತಿಯಲ್ಲಿ ವಿಂಗಡಿಸುವುದಕ್ಕೆ ಸಾಧ್ಯ. ಹೌದು, ಯಕ್ಷಗಾನ ತಾಳಮದ್ದಳೆ ಅನ್ನುವುದು ಯಕ್ಷಗಾನದಷ್ಟಲ್ಲದಿದ್ದರೂ ಸಾಕಷ್ಟು ಪ್ರಸಿದ್ಧಿಯನ್ನು ಪಡೆದ ಯಕ್ಷಲೋಕದ ಒಂದು ಭಾಗ. ಯಕ್ಷಗಾನಕ್ಕೆ ಜನ ಬರುವುದು ವೇಷಭೂಷಣಗಳನ್ನೊಳಗೊಂಡ ಕುಣಿತ, ನಾಟ್ಯಗಳಿಗಾಗಿ ಮಾತ್ರ ಅನ್ನುವ ಕಲ್ಪನೆಯಿದ್ದರೆ ಅದು ತಪ್ಪು ಅನ್ನುವುದಕ್ಕೆ ಸಾಕ್ಷಿ ತಾಳಮದ್ದಳೆಗಳು. ನಮಗೆಲ್ಲಾ ತಿಳಿದಿರುವಂತೆ ತಾಳಮದ್ದಳೆಗಳಲ್ಲಿ ಯಾವುದೇ ಕುಣಿತ ಇಲ್ಲ, ವೇಷ ಭೂಷಣಗಳಿಲ್ಲ; ಇರುವುದು ಕೇವಲ ಭಾಗವತಿಕೆ ಮತ್ತು ಅರ್ಥಗಾರಿಕೆ. ಆದರೂ ಇದಕ್ಕೆ ಅಸಂಖ್ಯ ಜನ ಸೇರುತ್ತಾರೆಂದರೆ ಯಕ್ಷಗಾನದ ಮೂಲದಲ್ಲಿರುವ ಆಕರ್ಷಣೆಯನ್ನು ಸ್ಪಷ್ಟವಾಗಿ ಗಮನಿಸಬಹುದು.
ದುರ್ಬಲ ಪ್ರಸಂಗ
ಕಲಾವಿದ ಎಂದ ಮೇಲೆ ಒಂದಲ್ಲ ಒಂದು ಗಂಭೀರವಾದ ದೌರ್ಬಲ್ಯ ಹೊಂದಿರಬೇಕೆಂಬ ಸಹಜ ನಿಯಮವಿದೆ. ಕಲೆಯೇ ಒಂದು ದೌರ್ಬಲ್ಯವಾಗಿ ಅದಕ್ಕೆ ಸಮಾನಾಂತರವಾಗಿ ಇನ್ನೊಂದು ದೌರ್ಬಲ್ಯ ಜತೆಯಲ್ಲೇ ಇದ್ದು ಕೊಂಡು ಇನ್ನೊಂದು ಸಮಾನಾಂತರದ ಹಾದಿಯನ್ನು ಕ್ರಮಿಸದಂತೆ ಪ್ರೇರೇಪಿಸುತ್ತದೆ. ಇದು ಅರಿವಿದ್ದೂ ಅನಿವಾರ್ಯವೆಂಬಂತೆ ಅಪ್ಪಿಕೊಳ್ಳುವುದು ಮನಸ್ಸಿನ ದಾಸ್ಯವನ್ನು ಬಿಂಬಿಸುತ್ತದೆ. ಯಾವುದೇ ದೌರ್ಬಲ್ಯವೆಂದು ಪರಿಗಣಿಸಲ್ಪಡುತ್ತದೋ ಅದು ಎಂದು ಮುಖ್ಯ ಕ್ರಿಯೆಗೆ ಪೂರಕವಾಗಿರುವುದಕ್ಕೆ ಸಾಧ್ಯವೇ ಇಲ್ಲ. ಎಣ್ಣಿ ಬತ್ತಿದ ದೀಪ ತಾನಾಗಿ ಆರಿಹೋದ ಮೇಲೆ ಅದಕ್ಕೆ ಎಣ್ಣೆಯ ಬದಲು ನೀರು ಹಾಕಿದರೂ ಅಲ್ಲಿದ್ದ ಎಣ್ಣೆ ಸತ್ವವನ್ನು ಹೀರಿ ಮೊದಲಿನ ಪ್ರಭೆಯಲ್ಲೇ ಕ್ಷಣ ಹೊತ್ತು ಉರಿಯುತ್ತದೆ.
“ಅಭಿಮಾನಂ ದಂತ ಭಗ್ನಂ “
``ಕಲಾವಿದ`` ಎಂದರೆ ಕಲೆಯನ್ನು ತನ್ನೊಳಗೆ ಆವಾಹಿಸುವವನು ಎಂದು ಕರೆಸಲ್ಪಡುತ್ತಾನೆ. ಪ್ರಕೃತಿ ಸಹಜವಲ್ಲದ, ಇತರರಿಗಿಲ್ಲದ ಗುಣಗಳನ್ನು ವಿಶಿಷ್ಟ ರೂಪದಲ್ಲಿ ತನ್ನಲ್ಲಿ ಹೊಂದಿಕೊಂಡು ಇರುವ ಗುಣಗಳು ಕಲೆ ಎನಿಸಲ್ಪಡುತ್ತದೆ. ತನ್ನಲ್ಲಿರುವ ಗುಣ ಯಾವುದೇ ಆದರೂ ಕಲೆ ಎನಿಸಿಕೊಳ್ಳಬೇಕಿದ್ದರೆ ಅದರ ವೈಶಿಷ್ಟ್ಯತೆಯನ್ನು ಅನುಭವಿಸುವರಿರಬೇಕು. ಇಲ್ಲಿ ಕಲಾವಿದ ಮತ್ತು ಪ್ರೇಕ್ಷಕ ಒಂದು ತಕ್ಕಡಿಯ ತಟ್ಟೆಗಳಿದ್ದಂತೆ. ಇವುಗಳು ಸಮಾನ ಮಟ್ಟದಲ್ಲಿದ್ದರೆ ಅದು ಸಂತುಲನೆಯನ್ನು ಕಾಯ್ದುಕೊಳ್ಳುತ್ತದೆ. ಆದರೆ ಇದರಲ್ಲಿ ಒಂದು ಪರಿಮಿತಿಯನ್ನು ದಾಟಿದಾಗ ಅಸಹಜವಾಗಿ ಸಂತುಲನೆಯನ್ನು ಕಳೆದುಕೊಂಡು ಕಲೆ ಎಂಬುದು ಯಾವುದರಿಂದ ಗುರುತಿಸಲ್ಪಡಬೇಕೋ ಅಲ್ಲಿ ಅದು ಅದಾಗಿರುವುದೇ ಇಲ್ಲ.
ಅಜೆಕಾರು ಕಲಾಭಿಮಾನಿ ಬಳಗ - ಸರಣಿ ಅ ದಶಕದ ಸಾಧನೆ
ಕರ್ನಾಟಕದ ರಂಗಕಲೆಗಳಿಗೆ ವಿಸ್ತಾರವಾದ ಹರಹು ನೀಡಿದ ಮತ್ತೂಂದು ಪ್ರದೇಶವಿದ್ದರೆ ಅದು ಮುಂಬಯಿ ನಗರ. ಕರಾವಳಿಯ ಯಕ್ಷಗಾನಕ್ಕಂತೂ ಅಲ್ಲಿ ರಾಜ ಮರ್ಯಾದೆ. ಕಳೆದ ಹಲವು ದಶಕಗಳಿಂದ ಮುಂಬಯಿಯಲ್ಲಿ ನೆಲೆಸಿರುವ ಬಹುಪಾಲು ತುಳು-ಕನ್ನಡಿಗರು ಯಕ್ಷಗಾನ ಕಲೆಗೆ ನೀಡುತ್ತಿರುವ ಬೆಂಬಲ, ಕಲೆ-ಕಲಾವಿದರ ಬಗ್ಗೆ ತಳೆದಿರುವ ಆದರ- ಅಭಿಮಾನ ಸ್ಮರಣೀಯ. ಹೆಚ್ಚಿನ ಯಕ್ಷಗಾನ ಕಲಾವಿ ದರು ಮತ್ತು ಮೇಳಗಳು ಮುಂಬಯಿಯಲ್ಲಿ ಪ್ರದರ್ಶನ ನೀಡಿ, ಮೆಚ್ಚುಗೆ ಗಳಿಸಿರುವುದು ಎಲ್ಲರಿಗೂ ತಿಳಿದ ಸಂಗತಿ.
ಯಕ್ಷಗಾನ ಕ್ಷೇತ್ರದ ಈಶ್ವರ - `ಕುರಿಯ ವಿಠಲ ಶಾಸ್ತ್ರಿ`
ಕರ್ನಾಟಕದ ದಕ್ಷಿಣದಲ್ಲಿರುವ ಕಾಸರಗೋಡು ಬೆಟ್ಟ ಗುಡ್ಡಗಳ, ತಗ್ಗು ತಪ್ಪಲುಗಳ ಪ್ರದೇಶ. ಇದು ದಕ್ಷಿಣ ಕನ್ನಡಕ್ಕೆ ಹೊಂದಿಕೊಂಡಂತೆಯೇ ಇದೆ. ಅಡಿಕೆ, ತೆಂಗಿನ ತೋಟಗಳು, ರಭಸದಿಂದ ಹರಿಯುವ ನದಿ ತೋಡುಗಳು, ಹಸಿರು ರಾಶಿ ಹಾಕಿದಂತೆ ಕಾಡುಗಳು ಇಲ್ಲಿ ಎಲ್ಲೆಡೆ ಕಾಣಿಸುತ್ತವೆ.

ಕುಂಬಳೆ ಸೀಮೆ ಕರಾವಳಿಯಾದರೆ, ವಿಟ್ಲ ಸೀಮೆ ಬೆಟ್ಟ ಬಯಲುಗಳ ಭಾಗ. ಎಲ್ಲ ಕಡೆ ಊರಿಗೊಂದು ದೇವಾಲಯ, ಅದಕ್ಕೊಂದು ಕಥೆ. ಪ್ರತಿ ಮನೆಗೂ ಒಂದು ಹೆಸರು, ಎಲ್ಲಕ್ಕೂ ಒಂದೊಂದು ಕಥೆ. ಸಾಹಸ, ಶೌರ್ಯ, ಪರಾಕ್ರಮಗಳು ಇಲ್ಲಿನ ಕಥೆಗಳಲ್ಲಿವೆ. ಜನರೂ ಹಾಗೇ ಸಾಹಸಿಗಳು, ಪರಿಶ್ರಮಿಗಳು, ಕಲಾ ಪ್ರೇಮಿಗಳು. ಕಲಾವಿದರು.
ಅಗರಿ ರಘುರಾಮ ಭಾಗವತರ ನೆನಪುಗಳು
ಸುಮಾರು 60 ವರ್ಷಗಳ ಹಿಂದೆ ಜಗಲಿಯಲ್ಲಿ ನಡೆದ ತಾಳಮದ್ದಳೆಯೊಂದರ ದೃಶ್ಯ ಕಲ್ಪಸಿಕೊಳ್ಳಿ. ಭಾರವಾಯಿತು ಗಧೆ. ಧೈರ್ಯ ಹಿಂಗೊಳಿಸಿತು..ಕೌರವಾದ್ಯರ ಕೊಲ್ಲಲಾರೆ.. ಎಂದು ಹೇಳುವ ಪದ್ಯವೊಂದು ಕೃಷ್ಣ ಸಂಧಾನ ಪ್ರಸಂಗದಲ್ಲಿ ಬರುತ್ತದೆ. ಬಹು ಪ್ರದರ್ಶಿತ ಯಕ್ಷಗಾನಗಳಲ್ಲಿ ಒಂದಾದ ಕೃಷ್ಣ ಸಂಧಾನದ ಈ ಪದ್ಯ ವಿಷಾದ ಯೋಗದ ಭೀಮನ ಅಭಿವ್ಯಕ್ತಿಯಾಗಿ ಬರುವಂಥ ಪದ್ಯ.
ರಾಜ್ಯಭ್ರಷ್ಟರಾಗಿ ವಸವಾಸ ಮುಗಿಸಿ ಬರುವ ಪಾಂಡವರು ಧರ್ಮರಾಯನ ಆಶಯದಂತೆ ಕೌರವ-ಪಾಂಡವರ ನಡುವಿನ ವ್ಯಾಜ್ಯಕ್ಕೆ ಶ್ರೀ ಕೃಷ್ಣನನ್ನು ಸಂಧಾನಕಾರನಾಗಿ ಕಳುಹಿಸುವ ಸಂದರ್ಭ. ತುಂಬಿದ ಸಭೆಯಲ್ಲಿ ಸೀರೆ ಎಳೆದು ಮಾನ ಕಳೆಯಲು ಪ್ರಯತ್ನಿಸದ ಕೌರವರೊಂದಿಗೆ ಮತ್ತೆ ಸಂಧಾನ ಎಂಬುದು ದ್ರೌಪದಿಗೆ ಸ್ವಲ್ಪವೂ ಸರಿ ಕಾಣುವುದಿಲ್ಲ. ಪಾಂಡವರಲ್ಲಿ ತನಗೆ ಅತ್ಯಂತ ಇನಿಯನಾದ ಭೀಮನಲ್ಲಿ ತನ್ನ ಮನದಾಳ ಹೇಳಿ, ಸಂಧಾನದ ವಿರುದ್ಧ ಭೂಮಿಕೆಯನ್ನು ಬಿತ್ತಲು ಪ್ರಯತ್ನಿಸುವ ಸನ್ನಿವೇಶ ತಾಳಮದ್ದಳೆ ವೀಕ್ಷರಿಗೆ ಹೊಸದಲ್ಲ.ಅದೊಂದು ವಿಶಿಷ್ಟ ದಾಂಪ್ಯ ಗೀತೆಯೂ ಹೌದು.
ಹಿರಿಯ ಯಕ್ಷಗಾನ ಸೇವಕ ಕಸ್ತೂರಿ ವರದರಾಯ ಪೈ
ತೆಂಕುತಿಟ್ಟು ಯಕ್ಷಗಾನದಲ್ಲಿ ಶ್ರೀ ಮಹಮ್ಮಾಯಿ ಕೃಪಾಪೋಷಿತ ಯಕ್ಷಗಾನ ಮೇಳ ಸುರತ್ಕಲ್ ಇದಕ್ಕೆ ವಿಶಿಷ್ಟ ಸ್ಥಾನಮಾನ. ತೆಂಕುತಿಟ್ಟಿನ ಪ್ರಖ್ಯಾತ ಮತ್ತು ಹಿರಿಯ ಕಲಾವಿದರೆಲ್ಲರಿಗೂ ಸುರತ್ಕಲ್ ಮೇಳದ ನಂಟು ಇದ್ದೇ ಇದೆ. ಅದೊಂದು ರೀತಿಯಲ್ಲಿ ಉತ್ತಮ ತರಬೇತಿ ಕೇಂದ್ರವೂ ಹೌದು ಎಂದು ಹೇಳಬಹುದು. ಘಟ್ಟದ ಮೇಲೆ ವಿಶೇಷವಾಗಿ ಜನಮೆಚ್ಚುಗೆ ಪಡೆದು ಯಕ್ಷಗಾನ ಸೇವೆ ಮಾಡಿಕೊಂಡು ಬಂದಿರುವ ಈ ಮೇಳ ಸುಮಾರು ಒಂದು ದಶಕದ ಹಿಂದೆ ನೇಪಥ್ಯಕ್ಕೆ ಸರಿದಿದ್ದರೂ ಅದು ಜನರ ನೆನಪಲ್ಲಿ ಇನ್ನೂ ವಿಶೇಷ ಸ್ಥಾನ ಮಾನದೊಂದಿಗೆ ರಾರಾಜಿಸುತ್ತಿದೆ.
ಸುರತ್ಕಲ್ ಮೇಳದ ಬಗ್ಗೆ ಹೇಳುವಾಗ ಅದರ ಸ್ಥಾಪಕರಾದ ಕಸ್ತೂರಿ ವರದರಾಯ ಪೈ ಅವರ ಬಗ್ಗೆ ಉಲ್ಲೇಖ ಮಾಡಲೇಬೇಕಾಗುತ್ತದೆ. ಕಸ್ತೂರಿ ವೆಂಕಟ್ರಮಣ ಪೈ ಮತ್ತು ಕಮಲಾ ಭಾಯಿ ದಂಪತಿ ಪುತ್ರನಾಗಿ 1924ರಲ್ಲಿ ಜನಿಸಿರುವ ಕಸ್ತೂರಿ ವರದರಾಯ ಪೈ ಅವರು ನಾಲ್ಕು ದಶಕಗಳ ಕಾಲ ಸುರತ್ಕಲ್ ಮೇಳವನ್ನು ಯಶಸ್ವಿಯಾಗಿ ಮುನ್ನಡೆಸಿದವರು. ಇವರ ತಂದೆ ವೆಂಕಟ್ರಮಣ ಪೈ ಅವರು ಕೂಡ ಭಾಗವತರಾಗಿ, ಚೆಂಡೆಮದ್ದಳೆವಾದಕರಾಗಿ ಗುರುತಿಸಿಕೊಂಡವರು.
ಶೀನಪ್ಪ ಭಂಡಾರಿಗಳ ಮೇಳ - ಹಳ್ಳಿಗಳ ಸಾಂಸ್ಕೃತಿಕ ಉಸಿರು
ಪುತ್ತೂರು ಶೀನಪ್ಪ ಭಂಡಾರಿ (ಶೀನಪ್ಪಣ್ಣ, ಶೀನಣ್ಣ) ಇನ್ನಿಲ್ಲ. ಜೂನ್‌ 24ರಂದು ವಿಧಿವಶ. ಅರ್ಧ ಶತಮಾನಕ್ಕೂ ಮಿಕ್ಕಿ ಸದ್ದಿಲ್ಲದೆ ಕರಾವಳಿಯುದ್ದಕ್ಕೂ ಯಕ್ಷಗಾನ ಮೇಳವನ್ನು ಒಯ್ದಿದ್ದಾರೆ. ಸಾರಿಗೆಯ ತೊಂದರೆಯಿಂದಾಗಿ ದೊಡ್ಡ ಮೇಳ ಗಳು ಹೋಗಲಾಗದ ಸ್ಥಳಗಳಲ್ಲಿ ಟೆಂಟ್‌ ಊರಿದ್ದಾರೆ. ಇವರ ಮೇಳದ ಸರಕು ಸಾಗಾಟಕ್ಕೆ ಎತ್ತಿನ ಗಾಡಿ ಹೋಗುವಷ್ಟು ದಾರಿ ಸಾಕು. ಹೀಗಾಗಿ ನಗರಕ್ಕಿಂತಲೂ ಹಳ್ಳಿಯ ಜನ ಸುಬ್ರಹ್ಮಣ್ಯ ಮೇಳವನ್ನು ಒಪ್ಪಿ , ಅಪ್ಪಿಕೊಂಡಿದ್ದರು. ಸಾರಿಗೆ ಬಂತು. ವ್ಯವಸ್ಥೆಗಳು ದಾಂಗುಡಿಯಿಟ್ಟವು. ಮೇಳಗಳ ಸಂಖ್ಯೆ ಬೆಳೆದುವು. ವೈವಿಧ್ಯ ಪ್ರಸಂಗ ಗಳು ಪ್ರದರ್ಶಿತಗೊಂಡುವು. ರಂಗುರಂಗಿನ ವೇಷ ಭೂಷಣಗಳು, ರಂಗವೇದಿಕೆಗಳು ಪ್ರೇಕ್ಷಕರನ್ನು ಹಿಡಿದಿಟ್ಟವು. ಇವುಗಳ ಮಧ್ಯೆ ಭಂಡಾರಿಗಳ ಮೇಳ ಯಾವ ಪ್ರಚಾರ ರಂಪಾಟಕ್ಕೂ ಸಿಕ್ಕದೆ ಹಳ್ಳಿಯ ಪ್ರೇಕ್ಷಕರನ್ನು ನಂಬಿತು. ಕಿಸೆ ತುಂಬಿ ತುಳುಕದಿದ್ದರೂ, ಎಂದೂ ಖಾಲಿಯಾದುದಿಲ್ಲ; ಅರೆಹೊಟ್ಟೆಯಲ್ಲಿ ನಿದ್ರಿಸಲಿಲ್ಲ, ಮನೆಮಂದಿ ಉಪವಾಸ ಕೂರಲಿಲ್ಲ ಎನ್ನುವುದು ಗಮನಾರ್ಹ.
ಪಾರ್ತಿಸುಬ್ಬ ಮಲತಾಯಿ ಮಗನೇ?
ಕರ್ನಾಟಕದ ಶ್ರೀಮಂತ ಕಲೆಗಳಲ್ಲಿ ಒಂದಾದ ಯಕ್ಷಗಾನಕ್ಕೆ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಸೂಕ್ತ ನ್ಯಾಯ ದೊರೆತಿದೆಯೇ? ಈ ಅನನ್ಯ ಕಲೆಗೆ ಸಲ್ಲಬೇಕಾದ ಮನ್ನಣೆ ದೊರೆತಿದೆಯೇ? ಈ ಪ್ರಶ್ನೆಗಳು ಅನುರಣಿಸಿದ್ದು ಪುತ್ತಿಗೆ ರಘುರಾಮ ಹೊಳ್ಳರ ಅಭಿನಂದನೆ ಸಂದರ್ಭದಲ್ಲಿ. ಈಚೆಗೆ ಮಂಗಳೂರಿನಲ್ಲಿ ನಡೆದ ಅಭಿನಂದನಾ ಸಮಾರಂಭದ ಭಾಗವಾಗಿ ಯಕ್ಷಗಾನ ಕ್ಷೇತ್ರದ ವಿದ್ವಾಂಸರ ಗೋಷ್ಠಿ ನಡೆಯಿತು. ಗೋಷ್ಠಿಯಲ್ಲಿ ಒಮ್ಮತದಿಂದ ವ್ಯಕ್ತವಾದ ಅನಿಸಿಕೆ- ಯಕ್ಷಗಾನಕ್ಕೆ ಸಲ್ಲಬೇಕಾದ ಮರ್ಯಾದೆ ಸಂದಿಲ್ಲ ಎನ್ನುವುದು.
ಸಾವಿರ ಯಕ್ಷಗಾನ ಪುಸ್ತಕಗಳ ಸರದಾರ
ಅವರಿಗೆ ಯಕ್ಷಗಾನ ತಾಳ ಮದ್ದಳೆ ಎಂದರೆ ಅಪಾರ ಪ್ರೀತಿ. ಚಿಕ್ಕ ವಯಸ್ಸಿನಿಂದಲೇ ತನ್ನ ಗಮನ ಅದರತ್ತ ಹರಿಸಿದ್ದರು. ಕರಾವಳಿ ಗಂಡು ಕಲೆ ಯಕ್ಷಗಾನ, ತಾಳಮದ್ದಳೆ ಕಲಿಯಬೇಕೆಂದು ಪಣ ತೊಟ್ಟರು. ಕಲಿಕೆಗಾಗಿ ರಾತ್ರಿ ಹಗಲು ಪರಿಶ್ರಮ ಪಟ್ಟರು. ಸಾವಿರಾರು ಪುಸ್ತಕಗಳ ಸಂಗ್ರಹಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದರು. ಇದರ ಪರಿಣಾಮವೆಂಬಂತೆ ಅವರ ಮನೆಯ ಒಂದು ಕೊಠಡಿ ಯಕ್ಷಗಾನದ ಸಣ್ಣ ಗ್ರಂಥಾಲಯವಾಗಿ ಮಾರ್ಪಾಡಾಗಿದೆ. ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನದ ವೇಷ ಭೂಷಣ ಹಾಗು ತಾಳಮದ್ದಳೆಯ ಮಾತುಗಾರಿಕೆಗೆ ಮನಸೋತು ಅದನ್ನು ಕರಗತ ಮಾಡುವ ನಿಟ್ಟಿನಲ್ಲಿ ಸಾವಿರ ಪುಸ್ತಕಗಳ ಖರೀದಿಸಿ ಶ್ರಮವಹಿಸಿ ಅಭ್ಯಾಸಿಸಿ ಯಶಸ್ವಿಯಾದ ಯಕ್ಷಪ್ರತಿಭೆ ಮಂಜುನಾಥ್ ಭಟ್ ಅಂತರ. ಅವರು ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪವಿರುವ ಮಾಲಾಡಿಯರು.
ಋತುಪರ್ಣನನ್ನು ಕಾಣುವಾಗ ನೆನಪಾಗುವುದು ರೈಗಳು!
ನಮ್ಮ ರಾಜ್ಯದಲ್ಲಿ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡಗಳೆಂಬ ಎರಡು ಜಿಲ್ಲೆಗಳಿವೆಯಲ್ಲ ನಿಜಕ್ಕೂ ಇವು ಕಲಾಮಾತೆಯ ರಂಗಭೂಮಿಯೇ ಹೌದು. ನೀವು ಬೇಕಾದರೆ ಯೋಚಿಸಿ ನೋಡಿ. ನೃತ್ಯ, ನಾಟಕ, ಸಂಗೀತ…ಹೀಗೆ ಎಲ್ಲವೂ ಇಲ್ಲೇ ಮನೆಮಾಡಿವೆ. ಯಕ್ಷಗಾನವಂತೂ ಇಲ್ಲಿ ಅಬ್ಬರಿಸಿ ಕುಣಿಯುತ್ತದೆ. ಈಗ ಯಕ್ಷಗಾನ ತುಸು ಕಳೆಗುಂದಿದಂತೆ ಕಾಣುತ್ತಿರುವುದು ಹೌದಾದರೂ ಒಂದು ಕಾಲದಲ್ಲಿ ಈ ಎರಡೂ ಕನ್ನಡಗಳ ಯಾವುದೇ ಮನೆಯ ಮುಂದೆ ಹೋಗಿ ಚೆಂಡೆ ಬಾರಿಸಿದರೂ ಅಲ್ಲೊಬ್ಬ ಕಲಾವಿದನ ಪ್ರವೇಶವಾಗುತ್ತಿತ್ತು! ಅಂಥ ಸಮೃದ್ಧ ಸಿರಿಯ ಬೀಡು ಈ ಎರಡು ಕನ್ನಡಗಳು! ತಮಾಷೆಯೆಂದರೆ ಈಗಲೂ ಹಿರಿಯರೆಲ್ಲಾ ಒಂದೆಡೆ ಕೂತು ಮಾತನಾಡಲು ತೊಡಗಿದರೆ ಮಾತಿನ ಮಧ್ಯದಲ್ಲಿ ಯಕ್ಷಗಾನದ ಪ್ರವೇಶ ಆಗದಿರದು. ತೀರಾ ಇತ್ತೀಚೆಗಿನ ತಲೆಮಾರನ್ನು ಬಿಟ್ಟರೆ ಎಲ್ಲರೂ ಯಕ್ಷಗಾನದ ಹುಚ್ಚರೇ!
ಭಾಗವತೋ ಅಭಿನಂದನಮ್
ನಮ್ಮ ಮಿತ್ರರ ಅಥವ ನಮ್ಮ ಆತ್ಮೀಯರಲ್ಲಿ ಯಾರೋ ಒಬ್ಬರು ಮದುವೆಯಾಗಲು ಯೋಗ ಕೂಡಿಬರದೆಯೋ ಸಂಗಾತಿಯ ಹೊಂದಾಣಿಕೆಯಾಗದೆಯೋ ಹಲವರ ಮರುಕಕ್ಕೆ ಕಾರಣರಾಗುತ್ತಾರೆ. ಎಲ್ಲಾ ಅರ್ಹತೆ ಇದ್ದು ಮದುವೆಯ ಯೋಗ ಕೂಡದೇ ಇದ್ದಲ್ಲಿ ಏನು ಮಾಡೋಣ? ಮದುವೆಯಾಗಲಿಲ್ಲ ಹೆಣ್ಣು ಅಥವಾ ಗಂಡು ಸಿಗಲಿಲ್ಲ ಎಂದು ಆತ ತನ್ನ ಸ್ವಭಾವ ಬದಲಿಸಿ ಕೆಟ್ಟವನಾಗುವುದಕ್ಕೆ ಸಾಧ್ಯವೇ? ಬಂದದ್ದು ಅನುಭವಕ್ಕೆ ಎಂದು ಪ್ರಾರಭ್ದದ ಹಾದಿಯನ್ನು ಸವೆಸುತ್ತಾ ಬದುಕುವುದು ರೂಢಿ. ಆದರೆ ಅಂಥವನು ಒಂದು ದಿನ ತನ್ನ ಮದುವೆ ಆಮಂತ್ರಣ ಹಿಡಿದು ಕೈ ಮುಂದೆ ಒಡ್ದಿದಾಗ ಕಿರುನಗುವೊಂದು ಬರದೆ ಉಳಿಯಲು ಸಾಧ್ಯವೇ? ಆ ಆಮಂತ್ರಣ ಓದುತ್ತಿದ್ದಂತೆ ಸಂಭ್ರಮಿಸುವ ಮನಸ್ಸಾಗುತ್ತದೆ. ಮದುವೆಯ ದಿನಾಂಕ ನೋಡಿ ತಮ್ಮ ಪುರುಸೊತ್ತನ್ನು ಲೆಕ್ಕ ಹಾಕುತ್ತದೆ ನಮ್ಮ ಮನಸ್ಸು. ಇತ್ತೀಚೆಗೆ `` ರಘುರಾಮಾಭಿನಂದನಮ್`` ಎಂಬ ಆಮಂತ್ರಣದ ಕರೆಯೋಲೆ ನೋಡಿದಾಗಲೂ ಇದೇ ಭಾವ ಸುಳಿದುದಕ್ಕೆ ಅಚ್ಚರಿ ಪಡಬೇಕೋ ತಿಳಿಯದು. ಯಾಕೆಂದರೆ ಯಕ್ಷಗಾನದ ತಮ್ಮ ಪ್ರತಿಭೆಯಿಂದ ಹಿರಿಯ ದೈತ್ಯ ಭಾಗವತ ಅಂತಲೇ ಹೇಳಬಹುದು ಶ್ರೀ ಪುತ್ತಿಗೆ ರಘುರಾಮ ಹೊಳ್ಳರು ಸನ್ಮಾನಿಸಲ್ಪಡುತ್ತಾರೆ ಎಂದಾಗ ಮುಖದಲ್ಲಿ ಕಿರುನಗುವೊಂದು ಮೂಡದೇ ಇದ್ದರೆ, ಅವರ ಹಾಡುಗಾರಿಕೆಗೆ ಕೈಚಪ್ಪಾಳೆ ತಟ್ಟಿದುದಕ್ಕೆ ಅರ್ಥಉಂಟೇ?
ಯಕ್ಷಗಾನದ ಸುವರ್ಣ ಯುಗಕ್ಕೆ ಸಾಕ್ಷಿ ` ಕುಂಬಳೆ ಸುಂದರ ರಾವ್‌ ಮತ್ತು ಸೂರಿಕುಮೇರು ಗೋವಿಂದ ಭಟ್ `
ನಾನು ಯಕ್ಷಗಾನ ನೋಡಲು ಆರಂಭಿ ಸಿದ್ದು ಬಹುಮಟ್ಟಿಗೆ 1959-60ರ ಸುಮಾರಿ ನಲ್ಲಿ ಎಂದು ನನ್ನ ನೆನಪು. ಅಂದಿನಿಂದ ಇಂದಿನವರೆಗೆ ಕಳೆದ 50 ವರ್ಷಗಳಲ್ಲಿ ನಾನು ನೂರಾರು ಯಕ್ಷಗಾನಗಳನ್ನು ನೋಡಿದ್ದೇನೆ, ತಾಳಮದ್ದಳೆಗಳ ವಾದ ವಿವಾದಗಳಿಗೆ ಕಿವಿ ಗೊಟ್ಟಿದ್ದೇನೆ. ಹವ್ಯಾಸಿ ಕಲಾವಿದರೊಂದಿಗೆ ಅವಕಾಶ ಸಿಕ್ಕಿದಾಗಲೆಲ್ಲ ಗೆಜ್ಜೆ ಕಟ್ಟಿ, ಕುಣಿದು, ಅರ್ಥ ಹೇಳಲು ಹೆಣಗಿದ್ದೇನೆ. ಯಕ್ಷಗಾನದ ಬಗ್ಗೆ ದೇಶ-ವಿದೇಶ ಗಳ ವಿದ್ವಾಂಸರಿಗೆ ನನಗೆ ತಿಳಿದ ಮಾಹಿತಿ ನೀಡಿದ್ದೇನೆ, ಕಲಾವಿದ ರೊಂದಿಗೆ ವಿದೇಶ ಸುತ್ತಿದ್ದೇನೆ.

ಈಗ 2010ರ ಕೊನೆಯಲ್ಲಿ ಒಂದು ಕ್ಷಣ ನಿಂತು ಹಿಂದಿರುಗಿ ನೋಡಿದರೆ, ನಾನು ಮತ್ತು ನನ್ನ ತಲೆಮಾರಿನ ಜನರು ಯಕ್ಷಗಾನ ನೋಡುತ್ತಿದ್ದ ಕಾಲವು ಯಕ್ಷಗಾನದ ಸುವರ್ಣ ಯುಗ ಆಗಿತ್ತೇ ಎಂಬ ಭಾವ ಬಲವಾಗಿ ಮೂಡುತ್ತಿದೆ. ಏಕೆಂದರೆ ನಾವೆಲ್ಲ ದಾಮೋದರ ಮಂಡೆಚ್ಚ, ಕಡತೋಕ ಮಂಜುನಾಥ ಭಾಗವತ, ಬಲಿಪ ನಾರಾಯಣ ಭಾಗವತ, ಅಗರಿ, ಪುತ್ತಿಗೆ, ಪದ್ಯಾಣ, ಉಪ್ಪೂರು, ಕಾಳಿಂಗ ನಾವುಡ, ನೀಲಾವರ ಮೊದಲಾದ ಸಾರ್ವಕಾಲಿಕ ಮಹತ್ವದ ಭಾಗವತರ ಹಾಡುಗಳಿಗೆ ಕಿವಿ ಕೊಟ್ಟಿದ್ದೇವೆ.
ದಕ್ಷಯಜ್ಞ ಯಕ್ಷಗಾನ ನೋಡಿ‌ ಖುದ್ದು ಕ್ರುಶ್ಚೇವ್ ಕೈಕುಲುಕಿದ್ದರು - ಪೆರುವೋಡಿ ನಾರಾಯಣ ಭಟ್ಟ
ಅಭಿನಯದ ಸಹಜತೆ, ಅರ್ಥಗಾರಿಕೆಯಲ್ಲಿನ ಪಾತ್ರೌಚಿತ್ಯಗಳನ್ನು ಸದಾ ಕಾಪಾಡಿಕೊಂಡು ಬಂದ ಅಜಾತಶತ್ರು, ಯಕ್ಷಗಾನ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ಟರದ್ದು ಯಕ್ಷಲೋಕದಲ್ಲಿ ದೊಡ್ಡ ಹೆಸರು. ಕಡಲ ತೀರದ ಭಾರ್ಗವ ಡಾ.ಶಿವರಾಮ ಕಾರಂತರು ಚಿತ್ರೀಕರಿಸಿದ ಯಕ್ಷಗಾನ ಸಿನಿಮಾದಿಂದ ಹಿಡಿದು ಯಕ್ಷಗಾನದ ಯಾವುದೇ ಪ್ರಸಂಗಕ್ಕೂ ಸೈ ಎನ್ನುವ ಭಟ್ಟರನ್ನು ಹಲವು ಪ್ರಶಸ್ತಿ, ಪುರಸ್ಕಾರಗಳು ಅರಸಿಕೊಂಡು ಬಂದಿದೆ. ಈ ಯಕ್ಷರಂಗದ ದಿಗ್ಗಜ ಪತ್ರಿಕೋದ್ಯಮದ ಇನ್ನೋರ್ವ ದಿಗ್ಗಜ ಪದ್ಯಾಣ.ಗೋಪಾಲಕೃಷ್ಣರ ಕುರಿತು ಆತ್ಮೀಯತೆಯಿಂದ ಬರೆದ ಪ.ಗೋ ಕುರಿತಾದ ಭಟ್ಟರ ಮಾತುಗಳು.
ಆಪ್ತ ಭಾಗವತ ಪುತ್ತಿಗೆ ರಘುರಾಮ ಹೊಳ್ಳ
ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದ ಧರ್ಮದೇವತೆಗಳು, ಗದಾಯುದ್ಧ ಪ್ರಸಂಗದ ಕೌರವ, ಭರತಾಗಮನದ ಭರತ, ದ್ರುಪದ ಗರ್ವಭಂಗದ ಏಕಲವ್ಯ, ತ್ರಿಪುರ ಮಥನದ ಚಾರ್ವಾಕ, ಭೌಮಾಸುರ... ಪಾತ್ರಗಳು ರಂಗದಲ್ಲಿ ಮಾತ್ರವಲ್ಲ, ಮನದಲ್ಲೂ ನಿತ್ಯ ಕುಣಿಯುತ್ತವೆ. ಅಭಿನಯ ಮಾಡುತ್ತವೆ. ಮಾತನಾಡುತ್ತವೆ. ಇದರ ಹಿಂದೆ ಪಾತ್ರಧಾರಿಯ ಸಾಮರ್ಥ್ಯದೊಂದಿಗೆ ಭಾಗವತನ ನಿರ್ದೇಶನವೂ ಮಿಳಿತಗೊಂಡಿರುತ್ತದೆ. ಇದು ಅಜ್ಞಾತ. ಒಟ್ಟೂ ಪ್ರದರ್ಶನ ವನ್ನು ಆಕಳಿಸದೆ ಆಸ್ವಾದಿಸಿದರೆ ಮಾತ್ರ ಗೋಚರ.
ಪುರುಷ ಯಕ್ಷಿ
ಹೆಸರಿಗೆ ಟೈಲರಿಂಗ್ ವೃತ್ತಿ. ಮನದೊಳಗೆ ಯಕ್ಷರಂಗದ್ದೇ ಗುಂಗು. ನಾನೂ ರಂಗದಲ್ಲಿ ಮೆರೆಯಬೇಕು ಎಂಬ ತುಡಿತ. ಹೆಣ್ಣೇ ನಾಚುವಂತಹ ಸ್ತ್ರೀವೇಷಧಾರಿಯಾಗಬೇಕು ಎಂಬ ಕನವರಿಕೆ. ಸಾಗಿದ್ದು ಕಲ್ಲುಮುಳ್ಳಿನ ಹಾದಿಯಲ್ಲಿ. ದಶಕದಲ್ಲೇ ಕನಸು ನನಸಾದ ಸಾರ್ಥಕ ಭಾವ. ಈಗ ಆತ `ಯಕ್ಷಚಂದ್ರಿಕೆ`! . ಇದು ಯಕ್ಷಗಾನ ರಂಗದ ಸ್ತ್ರೀವೇಷಧಾರಿ ಶಶಿಕಾಂತ ಶೆಟ್ಟಿ ಕಾರ್ಕಳ ಅವರ ಪ್ರವರ. ಅವರು ನಾಲ್ಕು ಗೋಡೆಗಳೊಳಗೆ ಕಲಿತದ್ದು ಅಲ್ಪಸ್ವಲ್ಪ. 13 ವರ್ಷಗಳ ಹಿಂದೆ `ವಾಮನ`ನಂತೆ ರಂಗಕ್ಕೆ ಬಂದ ಯುವಕ ಈಗ ರಂಗದ ಮೇರು ಸ್ತ್ರೀವೇಷಧಾರಿ. ರಂಗದಲ್ಲಿ ಅವರು ಹೆಣ್ಣಿನ ಪ್ರತಿರೂಪ. ಹುಡುಗಿಯರೇ ಹೊಟ್ಟೆ ಕಿಚ್ಚು ಪಡುವಂತಹ ಲಜ್ಜೆ, ಒನಪು ವಯ್ಯಾರ, ಬೆಡಗು ಬಿನ್ನಾಣ. `ಅಂಬೆ`, `ಚಂದ್ರಮತಿ`, `ದ್ರೌಪದಿ`, `ಸಾವಿತ್ರಿ` ಯಾದಾಗ ಪ್ರೇಕ್ಷಕರ ಸಾಲಿನಲ್ಲೂ ಕಣ್ಣೀರು!
ಸರ್ವ ವರ್ಣಿಕ ಕಲೆ ಯಕ್ಷಗಾನ
ಕಲಾವಿದ ಸಂಜೀವ ಸುವರ್ಣರು ಯಕ್ಷಗಾನದ ನಾಂದಿ ಪೂಜೆಗೆ ಚೆಂಡೆ ಬಡಿಯುವ ಸಲುವಾಗಿ ದೇವಸ್ಥಾನದ ಒಳಹೋಗಲು ಹಿಂಜರಿದ ಬಗೆಯನ್ನು ಉಲ್ಲೇಖಿಸಿದ್ದಾರೆ. ಅವರು ಹಿಂದುಳಿದ ಬಿಲ್ಲವ ಸಮಾಜಕ್ಕೆ ಸೇರಿದವರಾದುದರಿಂದ ದೇವಸ್ಥಾನ ಪ್ರವೇಶಕ್ಕೆ ನಿಷೇಧವಿದ್ದಿರಬೇಕು. ಬಿಲ್ಲವರಿಗೆ ಕೇವಲ ದೇವಸ್ಥಾನ ಪ್ರವೇಶ ನಿಷೇಧವಷ್ಟೇ ಅಲ್ಲದೆ ದೇವಸ್ಥಾನದ ವತಿಯಿಂದ ನಡೆಸಲಾಗುವ ಕೆಲವು ಮೇಳಗಳಲ್ಲಿ ವೇಷ ಹಾಕುವ ಅವಕಾಶವೂ ಇಲ್ಲ. ಒಂದೆರಡು ವರ್ಷಗಳ ಹಿಂದೆ ಪ್ರಸಿದ್ಧ ಮಂದಾರ್ತಿ ಮೇಳದಲ್ಲಿ ಭಾಗವಹಿಸಲು ಖ್ಯಾತ ಕಲಾವಿದ ಐರೋಡಿ ಗೋವಿಂದಪ್ಪ ಅವರಿಗೆ ಅವಕಾಶ ಕೊಡದೇ ಇದ್ದದ್ದು ಮತ್ತು ಅದೊಂದು ದೊಡ್ಡ ವಿವಾದವಾಗಿ ಬೆಳೆದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ದೊಡ್ಡ ಹೆಸರು ಮಾಡಿದ ಸಣ್ಣ ಸಾಮಗರು
ನಮ್ಮನ್ನಗಲಿದ `ಸಣ್ಣ ಸಾಮಗ`ರದ್ದು ಯಕ್ಷಗಾನ ರಂಗದಲ್ಲಿ ದೊಡ್ಡ ಹೆಸರು. ಅದು ಹೇಗೆ ಎಂದು ಯಕ್ಷಗಾನದ ಹೊರಗಿನವರಿಗೆ ವಿವರಿಸುವುದು ಕಷ್ಟ. ಯಕ್ಷಗಾನ ಪ್ರೇಮಿಗಳಿಗೆ ಮಾತ್ರ `ಸಾಮಗ` ಎಂಬ ಹೆಸರಷ್ಟೇ ಸಾಕು. ಬೇರೆ ವಿವರಣೆ ಅಗತ್ಯವಿಲ್ಲ. ಯಕ್ಷಗಾನದಲ್ಲಿ ಅವರೊದ್ದೊಂದು ವಿಶಿಷ್ಟ ಶೈಲಿ. ನೋಡಿ ಅನುಭವಿಸಿದರಷ್ಟೇ ತಿಳಿಯುವ ಒಂದು ವಿಭಿನ್ನ ಶೈಲಿ. ಮಲ್ಪೆ ರಾಮದಾಸ ಸಾಮಗರು `ಸಣ್ಣ ಸಾಮಗ` ಆಗಿದ್ದು ಅವರ ಅಣ್ಣ ದಿವಂಗತ ಮಲ್ಪೆ ಶಂಕರನಾರಾಯಣ ಸಾಮಗ ಅವರು ಯಕ್ಷಗಾನದಲ್ಲಿ `ದೊಡ್ಡ ಸಾಮಗರಾಗಿದ್ದರು` ಎಂಬ ಕಾರಣಕ್ಕೆ. ಸಾಧನೆ ಇಬ್ಬರದ್ದು ದೊಡ್ಡದೇ. ಅವರದೇ ಆದ ರೀತಿಯಲ್ಲಿ. ಸಣ್ಣ ಸಾಮಗರು ಯಕ್ಷಗಾನದಲ್ಲಿ ಹೆಸರು ಗಳಿಸಿದ್ದು ತಮ್ಮ ಮಾತುಗಾರಿಕೆಯ ಮೂಲಕ.
ಯಕ್ಷಮೇರು - ವಯಸ್ಸು 76, ಮೇಳದ ತಿರುಗಾಟ 64!
ಯಕ್ಷಗಾನ ರಂಗದಲ್ಲಿ 64 ವರ್ಷ ಸುದೀರ್ಘ ಕಾಲ ತಿರುಗಾಟ ಮಾಡಿದವರು ತೆಂಕು ತಿಟ್ಟಿನ ಅಗ್ರಮಾನ್ಯ ಕಲಾವಿದ ಸೂರಿಕುಮೇರು ಕೆ.ಗೋವಿಂದ ಭಟ್. ಶ್ರೀಧರ್ಮಸ್ಥಳ ಮೇಳವೊಂದರಲ್ಲೇ ಕಳೆದ 45 ವರ್ಷದಿಂದ ಕಲಾಸೇವೆಯಲ್ಲಿದ್ದಾರೆ. ಪ್ರಸಕ್ತ 76ರ ಇಳಿವಯಸ್ಸಿನಲ್ಲಿರುವ ಕೆ.ಗೋವಿಂದ ಭಟ್ಟರು ಇಂದಿಗೂ ರಂಗಸ್ಥಳ ರಾಜ. ಅವರ ಕೌರವ, ಋತುಪರ್ಣ, ಕುಮಾರಯ್ಯ ಹೆಗ್ಗಡೆ ವೇಷಗಳು ಕಲಾಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ. ಗೋವಿಂದಣ್ಣನ ಶರೀರ ಮಾಗಿದರೂ ಮಾತು, ನಡೆ, ನುಡಿ, ಕುಣಿತ ಯೌವನದಲ್ಲೇ ಇದೆ. ದಣಿವರಿಯದ ಕಲಾವಿದ ಕೆ.ಗೋವಿಂದ ಭಟ್ ನಿವೃತ್ತಿ ಬಯಸುತ್ತಿದ್ದರೂ ಕಲಾಭಿಮಾನಿಗಳ ಒತ್ತಾಸೆ ಅವರನ್ನು ಮತ್ತೆ ಮತ್ತೆ ರಂಗಸ್ಥಳದಲ್ಲಿ ಕುಣಿಸುವತ್ತಿದೆ. ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದಾರೆ
ಯಕ್ಷಗಾನ ಇತಿಹಾಸದಲ್ಲೇ ವಿನೂತನ ಪ್ರಯೋಗ : ಎನಿಮೇಶನ್ ತಂತ್ರಜ್ಞಾನದಲ್ಲಿ ಚೀತ್ರೀಕರಿಸಲ್ಪಟ್ಟ ಪ್ರಥಮ ಯಕ್ಷಗಾನ – ‘ಶ್ರೀ ಹರಿಮಾಯೆ’
ಇಂದಿನ ವೇಗದ ಯುಗದಲ್ಲಿ ಏನಿದ್ದರೂ ತಂತ್ರಜ್ಞಾನದ್ದೇ ಕಾರುಬಾರು.ಮುಖ್ಯವಾಗಿ ಇಂದು ಕಲಾರಂಗದಲ್ಲಿ ಅನಿಮೇಶನ್ ಹಾಗೂ ಗ್ರಾಫಿಕ್ಸ್ ತಂತ್ರಜ್ಞಾನವು ಹೇರಳವಾಗಿ ಬಳಸಲಾಗುತ್ತಿದೆ.ವಿದೇಶಗಳಲ್ಲಿ ಇಂಗ್ಲೀಷ್ ಚಿತ್ರಗಳಲ್ಲಿ ಬಳಕೆಯಾಗುತ್ತಿದ್ದ ಅನಿಮೇಶನ್ ಹಾಗೂ ಗ್ರಾಫಿಕ್ಸ್ ತಂತ್ರಜ್ಞಾನ ಈಗ ಕನ್ನಡ ಚಿತ್ರರಂಗದಲ್ಲೂ ಬಳಕೆಯಾಗುತ್ತಿದ್ದು,ಈ ನಿಟ್ಟಿನಲ್ಲಿ ಕರಾವಳಿಯ ಗಂಡು ಮೆಟ್ಟಿದ ಕಲೆ ಎಂದೇ ಹೆಸರುವಾಸಿಯಾಗಿರುವ ಯಕ್ಷಗಾನ ಕಲೆಯಲ್ಲೂ ಅನಿಮೇಶನ್ ತಂತ್ರಜ್ಞಾನ ಬಳಕೆಯಾದರೆ ಹೇಗಿರಬಹುದು.ಇಂತಹ ಒಂದು ಮಹತ್ವದ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತಂದವರು ಯಕ್ಷಗಾನ ಕಲಾವಿದ ಮುಂಬೈನ ಕಟೀಲು ಸದಾನಂದ ಶೆಟ್ಟಿ.
ಶೇಣಿ ಎ೦ಬ ಯಕ್ಷಗಾನ ಲೋಕದ ಭೀಷ್ಮ
ಯಕ್ಷಗಾನ ರ೦ಗದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರೆ೦ಬುದಕ್ಕಿ೦ತಲೂ “ ಬಪ್ಪ ಬ್ಯಾರಿ“ ಎ೦ಬುದೇ ಅವರ ಜನಪ್ರಿಯ ಹೆಸರು. ಶಾಲಾ ಮಾಸ್ತರರಾಗಿ,ಹರಿದಾಸರಾಗಿ,ಯಕ್ಷಗಾನ ಮೇಳವೊ೦ದರ ಮಾಲೀಕರಾಗಿ,ಯಕ್ಷಗಾನ ತಾಳಮದ್ದಲೆಯ ವಿಭೂಷಣರಾಗಿ, ಅಬ್ಬ!ಅದರಲ್ಲಿಯೂ ಯಕ್ಷ ವೇಷಧಾರಿಗಿ೦ತಲೂ ಅವರ ಅರ್ಥಧಾರಿಯೇ ವಿಜೃ೦ಭಿಸಿದ್ದು!ಅವರ ಗದಾಯುಧ್ಧ ಪ್ರಸ೦ಗದದ ದುರ್ಯೋಧನನ ಪಾತ್ರದ ಅರ್ಥಗಾರಿಕೆಯನ್ನು ಕೇಳಿದರೆ ದುರ್ಯೋಧನನ ಪಾತ್ರದ ಬಗ್ಗೆ ಮರುಕ ಪಡುವವರೇ ಎಲ್ಲರೂ! ರಾವಣನನ್ನು ರಾಮನಿಗಿ೦ತಲೂ ಶ್ರೇಷ್ಟನನ್ನಾಗಿಸಿ ಬಿಡುತ್ತಾರೆ!ಅ೦ಥ ಅರ್ಥಗಾರಿಕೆ ಶೇಣಿಯವರದ್ದು!ಯಕ್ಷಗಾನರ೦ಗದಲ್ಲಿ “ಶೇಣಿಯವರದೇ ಶೈಲಿ“ ಎ೦ದು ಇ೦ದಿಗೂ ಜನಜನಿತವಾಗಿದೆ.ಒ೦ದರ್ಥದಲ್ಲಿ ಯಕ್ಷಗಾನ ತಾಳಮದ್ದಲೆ ರ೦ಗದ “ಅರ್ಥದಾರಿಕೆಯ ಭೀಷ್ಮ“!
ಇರುವುದು ಒಂದೇ ದೀಪವು ....
78 ವಸಂತಗಳಲ್ಲಿ 61 ವಸಂತಗಳನ್ನು ಯಕ್ಷಗಾನಕ್ಕಾಗಿಯೇ ಮೀಸಲಿಟ್ಟು, ಬದುಕಿನ ಬವಣೆಗಳ ಮಧ್ಯೆಯಲ್ಲೂ ತನ್ನೊಳಗಿನ ಕಲಾವಿದನನ್ನು ಕುಣಿಸಿ ಯಕ್ಷಪ್ರೇಮಿಗಳನ್ನು ರಂಜಿಸಿದ ವ್ಯಕ್ತಿಗೆ, ಕರ್ನಾಟಕ ಸರಕಾರದ ’ಯಕ್ಷಗಾನ ಬಯಲಾಟ ಅಕಾಡೆಮಿ’ ವತಿಯಿಂದ ಅಭಿನಂದನಾ ಕಾರ್ಯಕ್ರಮವಿದ್ದಿದ್ದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ. ಯಕ್ಷಗಾನಕ್ಕೆ ಪ್ರಥಮವಾಗಿ ಪದ್ಮಶ್ರೀಯನ್ನು ದೊರಕಿಸಿಕೊಟ್ಟ ಆ ವ್ಯಕ್ತಿಯ ಬಗೆಗೆ ಹೊಸದಾಗಿ ಪರಿಚಯಿಸುವ ಅಗತ್ಯ ಬೀಳುವುದಿಲ್ಲ! ಯಾಕೆಂದರೆ ಸಾಮಾನ್ಯವಾಗಿ ಅವರ ಹೆಸರನ್ನು ಕೇಳಿರದ ಕನ್ನಡ ಜನವಿಲ್ಲ! ’ಪದ್ಮಶ್ರೀ’ ಎಂಬ ಪ್ರಶಸ್ತಿಯ ಬಗ್ಗೆ ಏನೂ ಅರಿತಿರದ ಮುಗ್ಧ ಕಲಾವಿದನಿಗೆ ಅನಿರೀಕ್ಷಿತವಾಗಿ ಮತ್ತು ಅತಿಸಹಜವಾಗಿ ಈ ಪ್ರಶಸ್ತಿ ಒದಗಿಬಂದಿದ್ದು ಪ್ರಶಸ್ತಿಗೇ ಸಂದ ಗೌರವ ಎಂದರೆ ಆಶ್ಚರ್ಯವೆನಿಸುವ ಅಗತ್ಯವೂ ಕಾಣುವುದಿಲ್ಲ.
ಸುಭದ್ರೆಯ ಮೇಲೆ ಒರಗಿ ತೀರಿದ ಅರುವ ನಾರಾಯಣ ಶೆಟ್ಟರು
ಕೆಲವು ವರ್ಷಗಳ ಹಿಂದಿನ ಘಟನೆ. ತೆಂಕು ತಿಟ್ಟಿನ ಪೂರ್ವ ಸೂರಿಗಳಾದ ಕುರಿಯ ವಿಠಲ ಶಾಸ್ತ್ರಿಗಳ ಸ್ಮರಣಾರ್ಥ ಕನ್ಯಾನದಲ್ಲಿ ಒಂದು ಯಕ್ಷಗಾನವನ್ನು ಆಯೋಜಿಸಲಾಗಿತ್ತು. ಪ್ರಸಂಗ ದಕ್ಷ ಯಜ್ಞ. ತೆಂಕಿನ ಎಲ್ಲ ಘಟಾನುಘಟಿ ಕಲಾವಿದರೂ ಆ ಪ್ರಸಂಗದಲ್ಲಿ ಭಾಗವಹಿಸಿದ್ದರು. ಆ ಪ್ರಸಂಗದ ಈಶ್ವರನ ಪಾತ್ರ ಯಾರ ನಿರ್ವಹಿಸುತ್ತಾರೆ ಎಂದು ಎಲ್ಲರಿಗೂ ಕುತೂಹಲ. ಏಕೆಂದರೆ ಇಡಿಯ ಯಕ್ಷಗಾನ ವಲಯದಲ್ಲೇ ಕುರಿಯ ಶಾಸ್ತ್ರಿಗಳ ಈಶ್ವರ ಹೆಸರಾದದ್ದು. ಹಾಗಾಗಿ ಅವರ ಸ್ಮರಣಾರ್ಥ ನಡೆಯುವ ಪ್ರಸಂಗದಲ್ಲಿ ಆ ಪಾತ್ರದ ಕುರಿತು ನಿರೀಕ್ಷೆ ಅಪಾರ. ಅಂದು ಈಶ್ವರನ ಪಾತ್ರದಲ್ಲಿ ಕಾಣಿಸಿಕೊಂಡು ಆ ದಿನದ ಆಟದ ಯಶಸ್ಸಿಗೆ ಕಾರಣರಾದವರು ಅರುವ ನಾರಾಯಣ ಶೆಟ್ಟಿಯವರು.
ಯಕ್ಷಗಾನದ ಅಜೇಯ : ಕೆರೆಮನೆ ಮಹಾಬಲ ಹೆಗಡೆ
ಧರಣೀ ಮಂಡಲ ಧರೆಗೆ ಬಂದುದೋ ಯೆಂಬತೆರನಂತೆ |
ಕುರುಕುಲಾನ್ವಯ ದೀಪ ಗಂಗಾ | ತರಳ ಸ್ಯಂದನದಿಂದಲೈತರೆ ||
ಕೆರೆಮನೆ ಮಹಾಬಲ ಹೆಗಡೆಯವರನ್ನು ‘ಭೀಷ್ಮ ವಿಜಯ’ದ ಈ ಪದ್ಯದ ಮೂಲಕವೇ ಪರಿಚಯಿಸುವುದು ಸಮರ್ಪಕ. ವಿಕ್ರಮವೇ ಫಣ ಎಂಬ ಸ್ವಯಂವರದಲ್ಲಿ ಧುಃತ್ರೆಂದು ಭೀಷ್ಮ ಪ್ರತ್ಯಕ್ಷವಾಗಿ, "ಸುತ್ತ ನೋಡುತ ಗಂಗಾ ತರಳನು..." ರಂಗದ ಮಧ್ಯದಲ್ಲಿ ದೃಷ್ಟಿ ಹಾಯಿಸುತ್ತಾ ಒಮ್ಮೆಲೇ ಕಂಚಿನ ಕಂಠ ತರೆದು “ಅರರೆ ಕಾಶೀಸನು ಗರ್ವದಿ..." ಹಾಡಿದ ತಕ್ಷಣ ಮುಂದೆಲ್ಲಾ ಇಡೀ ರಂಗದಲ್ಲಿ ಭೀಷ್ಮ ಆವರಿಸಿಕೊಳ್ಳುತ್ತಾನೆ. ಪರಿಸ್ಥಿತಿಯ ಕೈಗೊಂಬೆಯಾದ ಅಂಬೆಯ ಅಸಹಾಯಸ್ಥಿತಿ ಭೀಷ್ಮನ ವ್ಯಕ್ತಿತ್ವವನ್ನು ಕಿಂಚಿತ್ತು ಅಲುಗಾಡಿಸುವುದಿಲ್ಲ. ಸ್ವತಃ ಭೀಷ್ಮನೇ ಈ ಸಂದರ್ಭಕ್ಕೆ ಕಾರಣವಾದ ಅಂಶವನ್ನು ನೆನೆಯುತ್ತಾ ‘ಕಾಲಾಯ ತಸ್ಮ ನಮಃ’ ಎಂದು ದೀರ್ಘ ನಿಟ್ಟುಸಿರು ಬಿಡುತ್ತಾ ಒಳಸಾಗಿದರೆ ಪ್ರೇಕ್ಷಕರು ಕೆಲ ನಿಮಿಷಗಳ ಕಾಲ ಚಿತ್ರಪಟಗಳಂತೆ ತಮ್ಮ ತಮ್ಮ ಖುರ್ಚಿಗಳಲ್ಲೇ ಕುಳಿತಿರುತ್ತಾರೆ.
ಎತ್ತಿದ ಕೈಯ ಕೂಸು, ಅದಕ್ಕೀಗ ರಜತಾರೋಹಣ
``ಯಾವ ಪಾತ್ರೆಯಲ್ಲಿ ಎಂತಹ ಎಣ್ಣೆ ಕುದಿಯುತ್ತಿದೆಯೆಂದು ಹೇಳಲಾಗದು. ಹಾಗೆಯೇ ಯಾರ ಅಂತರಂಗದಲ್ಲಿ ಅದಿನ್ನೆಂತಹ ಬೇಗುದಿ ಇದೆಯೆಂದೂ ಊಹಿಸಲಾಗದು`` ಇದು ರವೀಜಿ ಬೆಳೆಗೆರೆಯವರ ``ಬಾಟಂ ಐಟಂ`` ಕಾಲಂ ಒಂದರಲ್ಲಿ ಬಂದ ವಿಚಾರ. ತಾತ್ಪರ್ಯ ಇಷ್ಟೇ. ಇನ್ನೊಬ್ಬರ ಬಗ್ಗೆ ಆಡಿಕೊಳ್ಳುವಾಗ, ಅಣಕಿಸುವಾಗ ತುಸು ಯೋಚಿಸುವುದು ಒಳಿತು. ಹೊರನೋಟಕ್ಕೆ ಚೆನ್ನಾಗಿ ಕಾಣುವವನನ್ನು ``ಅವನಿಗೇನೋ ಪೊಗದಸ್ತಾಗಿದ್ದಾನೆ`` ಎನ್ನುವುದು ತಪ್ಪಾದೀತು. ಹೇಗೆ ಹೇಗೋ ಇರುವವನನ್ನು ಹಗುರವಾಗಿ ನಡೆಸಿಕೊಳ್ಳುವುದೂ ರಿಸ್ಕು.
ಸಾವಿರ ಮಂಟಪ ಕಟ್ಟಿದ ಪ್ರಭಾಕರ
ಕರಾವಳಿಯ ಆ ಹುಡುಗ ಯೌವ್ವನದ ಉತ್ತುಂಗ ಶಿಖರ ಏರುತ್ತಿದ್ದ. ಸ್ತ್ರೀವೇಷ ಮಾಡಿಕೊಂಡು ರಂಗಸ್ಥಳಕ್ಕೆ ಹೋದರೆ ಯಾರಾದರೂ ಹಾರಿಸಿಕೊಂಡು ಹೋಗುವಂತಹ ಮೋಹಕ ರೂಪ. ಬೆನ್ನಿಗೆ ಅಂಟಿಕೊಂಡಿದ್ದ ಸ್ಟಾರ್ ಪಟ್ಟವೆಂಬ ಭ್ರಮೆ. ಎಲ್ಲಿಯೇ ಆಟವಾದರೂ ಮಂಟಪ ಬಂದ ದಾರಿ ಬಿಡಿ... ಎನ್ನುವಷ್ಟು ಜನಪ್ರಿಯತೆ.

ನಿಜಕ್ಕೂ ಅಂದು ಯಕ್ಷಗಾನಕ್ಕೆ ಬೇಕಾದ ದಂತದ ಗೊಂಬೆಯಂಥ ಅಂಗಸೌಷ್ಠವದ ಕಲಾವಿದ ಸಿಕ್ಕಿದ್ದ. ಅವನ ಅವಶ್ಯಕತೆ ಯಕ್ಷಗಾನದವರಿಗೂ ಇತ್ತು. ಆದರೆ, ಕಲಾವಿದನಿಗೆ ತನ್ನ ಬದುಕಿನ ಪಥ ಬದಲಿಸಿಕೊಳ್ಳುವ ಪ್ರಜ್ಞೆ ಜಾಗೃತವಾಗಿತ್ತು. ಹೀಗಾಗಿ ರಂಗದಿಂದಲೇ ವಿಮುಖನಾಗಿ ಬೆಂಗಳೂರು ಬಸ್ ಹತ್ತಿದ. ಆಗ ಅವನ ಕಿವಿಯಲ್ಲಿ ತಾನು ಕುಣಿದು ದಣಿಯುತ್ತಿದ್ದಾಗ ಪ್ರೇಕ್ಷಕರು ಹಾಕುತ್ತಿದ್ದ ಶಿಳ್ಳೆ, ಚಪ್ಪಾಳೆಗಳು ರಿಂಗಣಿಸುತ್ತಿದ್ದವು.
ಹಡಗಿನ ಬಾಗಿಲಿನ ಸ್ವಾಭಿಮಾನಿ ಕಲಾವಿದ
ಕಂಡದ್ದನ್ನು ಕಂಡ ಹಾಗೆ ಖಡಕ್ ಆಗಿ ಹೇಳುವ ನಿಷ್ಠುರವಾದಿ. ಆತ್ಮಾಭಿಮಾನಕ್ಕೆ ಪೆಟ್ಟು ಕೊಡುವ ಮಾತನ್ನು ಯಾರೇ ಆಡಿದರೂ ಸಹಿಸುವ ಜಾಯಮಾನದವರಲ್ಲ. ಸಹೃದಯಿ. ಭಾವಜೀವಿ. ಎಲ್ಲಕ್ಕಿಂತ ಮುಖ್ಯವಾಗಿ ಕೊಟ್ಟ ಪಾತ್ರವನ್ನು ಅತ್ಯಂತ ಚೊಕ್ಕದಾಗಿ ನಿರ್ವಹಿಸುವ ಪ್ರಾಮಾಣಿಕ.

ಯಕ್ಷಗಾನ ಕಲಾವಿದ ಹಡಿನಬಾಳು ಶ್ರೀಪಾದ ಹೆಗಡೆ ಅವರ ವ್ಯಕ್ತಿತ್ವಕ್ಕೆ ಇದಕ್ಕಿಂತ ಹೊರತಾದ ಚೌಕಟ್ಟು ಕಟ್ಟಲು ಸಾಧ್ಯವಾಗುವುದಿಲ್ಲ. ಉತ್ತರ ಕನ್ನಡದ ಹೊನ್ನಾವರ ತಾಲೂಕಿನಲ್ಲಿ ಬ್ರಿಟೀಷರ ಕಾಲದಲ್ಲಿ ‘ಹಡಗಿನ ಬಾಗಿಲು’ ಎಂದಿದ್ದ ಊರು ವ್ಯತ್ಯಸ್ಥಗೊಂಡು ಹಡಿನಬಾಳು ಆಗಿದೆ. ಈ ಕಡಲ ಕಿನಾರೆಯಿಂದ ಬಂದಿರುವ ಶ್ರೀಪಾದ ಹೆಗಡೆ ಅವರದ್ದು ಯಕ್ಷಗಾನದಲ್ಲಿ ಅಲೆ ಎಬ್ಬಿಸಿದ ಜನಪ್ರಿಯ ಹೆಸರಲ್ಲ. ಆದರೆ, ಅವರು ‘ಜನ ಪ್ರೀತಿ’ ಗಳಿಸಿದ ಕಲಾವಿದ.
ಪರಂಪರೆಯ ಯಕ್ಷಗಾನ ಹಾಗೂ ಸೃಜನ ಶೀಲತೆ
ಇದು ಬಹಳ ಚರ್ಚೆಯಲ್ಲಿರುವ ವಿಷಯ. ಮೊದಲಾಗಿ ಈ ಪರಂಪರೆಯ ಆರಂಭ ಎಲ್ಲಿಂದ ಆಯಿತು ಒಂದು ಕಾಲದಿಂದ ಒಂದು ಕ್ರಮ ಬೆಳೆದು ಬಂದು ಮುಂದಿನ ತಲೆಮಾರಿಗೆ ಅದುವೇ ಒಂದು ಪರಂಪರೆಇದುಯಾಯಿತು. ಯಕ್ಷಗಾನದಲ್ಲೂ ಅದೇ ಪರಂಪರೆ ಶುರುವಾಯಿತು. ಅ ಕ್ಷೇತ್ರದ ಯುಗ ಪ್ರವರ್ತಕರಿಂದ ಬದಲಾವಣೆಯನ್ನು ಕಂಡು ಬೆಳೆಯುತ್ತಾ ಬಂತು.ಹೀಗಿದ್ದರೂ ಪ್ರತಿಯೊಂದು ಆವಿಷ್ಕಾರವಾದಾಗಲೂ ವಿವಾದಗಳು ಅದರ ಜತೆಯಲ್ಲೇ ಉಂಟಾಗಿತ್ತು.

ಇಂದು ಯಾವುದೇ ಕಲೆಗೆ ನವೀಕರಣಕ್ಕೆ ಮಾದರಿಯಾದ ಕ್ಷೇತ್ರ ಚಲನ ಚಿತ್ರ.. ಈ ಸಿನಿಮ ಎಂಬ ಕ್ಷೇತ್ರ ಹಲವು ಕಲೆಯ ಬದಲಾವಣೆಯಲ್ಲಿ ಪ್ರಧಾನ ಪಾತ್ರವಹಿಸಿದೆ. ಮೊದಲು ಭಾರತಿಯ ಸಿನಿಮಾ, ಕಥೆ ಪೌರಾಣಿಕ ಘಟನೆಗಳನ್ನೇ ಅವಲಂಬಿಸಿತ್ತು.
`ಬೊಳ್ಳಿಂಬಳ ಪ್ರಶಸ್ತಿ` ಪುರಸ್ಕೃತ ಭಾಗವತ ಕೊರಗಪ್ಪ ನಾಯ್ಕ
ಚಿಕ್ಕ ಹಳ್ಳಿ ಮನೆ. ಜಗಲಿನಲ್ಲಿ ಭಾಗವತ ಕೊರಗಪ್ಪ ನಾಯ್ಕರು ಕುಳಿತು ಯೋಚಿಸಿದಂತೆ ಭಾಸವಾಗುತ್ತದೆ. ನೆನಪಿನ ಗೆರೆಗಳು ಮಸುಕಾಗಿವೆ. ಅಪರೂಪಕ್ಕೆ ಗೆರೆಯು ಮಿಂಚಿ ಮರೆಯಾದಾಗ ವಿಷಣ್ಣ ಮುಖ ಅರಳುತ್ತದೆ. ನೆನಪುಗಳು ರಾಚಿ ಬರುತ್ತವೆ. ಅದನ್ನು ಹಂಚಿಕೊಳ್ಳಲು ಸಾಧ್ಯವಾಗದೆ ಚಡಪಡಿಸುತ್ತಾರೆ. ನಿಮಿಷದ ಬಳಿಕ ಮತ್ತದೇ ಪೂರ್ವಸ್ಥಿತಿ.

ಒಂದು ಕಾಲಘಟ್ಟದ ರಂಗ ಬದುಕಿನಲ್ಲಿ ರಾತ್ರಿಯಿಡೀ ಭಾಗವತಿಕೆ ಮಾಡಿದ ನಾಯ್ಕರು ಮಾತನಾಡಲು ಅಶಕ್ತರು. ಹತ್ತು ವರುಷಗಳಿಂದ ಬಾಧಿಸಿದ ಅಸೌಖ್ಯತೆ. ನಿತ್ಯ ಆಸ್ಪತ್ರೆ ಅಲೆದಾಟ. ಗುಣವಾಗುವ ನಿರೀಕ್ಷೆಯಲ್ಲಿ ವೈದ್ಯರುಗಳ ಭೇಟಿ. ಶುಶ್ರೂಷೆ. ಈಗ ಅತ್ತಿತ್ತ ನಡೆಯುವಷ್ಟು, ಗ್ರಹಿಸುವಷ್ಟು ಶಕ್ತ. ನೆನಪು ಮಾತ್ರ ದೂರ, ಬಹುದೂರ.
ಹಳ್ಳಿಗಾಡಲ್ಲೊಂದು ಸಂಚಾರಿ ತಾಳ ಮದ್ದಳೆ ಯಾತ್ರೆ
``ಇದು ಸರಿಯಾದ ಸುಸಂಸ್ಕೃತ ಜನರಿಗೆ ತಲುಪಿದರೆ ಸಾಕು. ಸಿಳ್ಳೆ ಹೊಡೆಯೋರು ಬೇಡ, ಇದು ಸಾಂಸ್ಕೃತಿಕ ತಿರುಗಾಟ. ಕಾರ್ಯಕ್ರಮಕ್ಕಾಗಿ ಕಾರ್ಯಕ್ರಮವಾಗುವುದು ಬೇಡ... ಮದುವೆ ಮನೆಯಲ್ಲಿ, ಜಾತ್ರೆಯಲ್ಲಿ, ಭೂತಕೊಲದ ಎಡೆಯಲ್ಲಿ ತಾಳ ಮದ್ದಳೆ... ನಾವು ಇದಕ್ಕೆ ಖಂಡಿತ ವಿರೋಧಿಸುತ್ತೇವೆ...``
ಹೀಗೆನ್ನುತ್ತಾ ಪ್ರಾಸ್ತಾವಿಕ ನುಡಿಯಲ್ಲೇ ಏನೋ ಗಂಭೀರವಾದ ಮಾತನ್ನು ಏರು ಧ್ವನಿಯಲ್ಲಿ ಹೇಳುತ್ತಾ ಒಂದು ಬಲವಾದ ಆಯಾಮ ಸೃಷ್ಟಿ ಮಾಡುವವರು `ಸಂ ಯ ಮಂ` [ಸಂಚಾರಿ ಯಕ್ಷಗಾನ ಮಂಡಳಿ] ನೇತೃತ್ವ ವಹಿಸಿದ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗರು. ಹೀಗನ್ನುತ್ತಲೇ ಸಂಚಾರಿ ಕಲಾವಿದರೆಲ್ಲರೂ ತಾಳಮದ್ದಳೆಗಾಗಿ ವಿನ್ಯಾಸಗೊಳಿಸಿದ ವಿಶಿಷ್ಟ ಎತ್ತರದ ಪೀಠ ಏರುತ್ತಾರೆ. ಇಲ್ಲಿ ಲೈಟಿಂಗ್, ಕಲಾವಿದರ ಹಾವಭಾವ ಎಲ್ಲವೂ ಸ್ಪೆಷಲ್...
ಏಳು ದಶಕಗಳ ಯಕ್ಷ ಸೇವೆ: ಬನಾರಿ ಗೋಪಾಲಕೃಷ್ಣ ಕಲಾಸಂಘ
ಒಂದು ಯಕ್ಷಗಾನ ಸಂಘವು ಸುಮಾರು ಎಪ್ಪತ್ತು ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತ ನಿರಂತರವಾಗಿ ಕ್ರಿಯಾಶೀಲವಾಗಿದೆ ಎಂದರೆ ಅದು ಗಿನ್ನೆಸ್ ದಾಖಲೆಯೇ ಆಗದೆ? ಅಂಥದ್ದಕ್ಕೆ ಒಂದು ಉದಾಹರಣೆ ಇಲ್ಲಿದೆ.
ಸುಳ್ಯ ತಾಲೂಕಿನ ದೇಲಂಪಾಡಿ ಎಂಬ ಪುಟ್ಟ ಗ್ರಾಮದಲ್ಲಿ ಜೀವನ ನಿರ್ವಹಣೆಯೇ ಉದ್ದೇಶವಾಗಿ ವಲಸೆ ಬಂದದ್ದಾದರೂ ಕೀರಿಕ್ಕಾಡು ಮಾಸ್ಟರ್ ವಿಷ್ಣು ಭಟ್ಟರು ತಮ್ಮೊಡನೆ ಯಕ್ಷಗಾನ ಕಲೆಯನ್ನೂ ಹೊತ್ತು ತಂದಿದ್ದರು. ಹಾಗಾಗಿ ಮಣ್ಣಿನಲ್ಲಿ ಅಡಿಕೆ ಗಿಡ ನೆಡುವುದರೊಂದಿಗೆ ಸ್ಥಳೀಯ ಜನರ ಬದುಕಿನಲ್ಲಿ ಯಕ್ಷಗಾನ ಕಲೆಯ ಬೀಜಗಳನ್ನೂ ಬಿತ್ತಿದರು. ಈ ಕಲೆಯ ಕೃಷಿಗೆ ನೀರು - ನೆರಳು ನೀಡುವುದಕ್ಕಾಗಿ 1943 ರಲ್ಲಿ ಅವರೇ ಹುಟ್ಟು ಹಾಕಿದ ಬನಾರಿ ಶ್ರೀ ಗೊಪಾಲಕೃಷ್ಣ ಯಕ್ಷಗಾನ ಕಲಾಸಂಘವು ಇಂದಿಗೂ ಒಂದು ಆಧಾರ ಶಕ್ತಿಯಾಗಿ ಯಕ್ಷಗಾನವನ್ನು ಬೆಳೆಸಿಕೊಂಡು ಬಂದಿರುವುದು ಒಂದು ದಾಖಲೆಯೇ ಸರಿ.
ಶೇಣಿ ಮಹಾರಾಜರು
ಯಕ್ಷಗಾನ ಕ್ಷೇತ್ರದಲ್ಲಿ ಕೋಟಿ ಕೋಟಿ ಹೃದಯಗಳನ್ನು ಗೆದ್ದ ಶೇಣಿ ಗೋಪಾಲಕೃಷ್ಣ ಭಟ್ಟರು "ಲಿವಿ೦ಗ್ ಲೆಜೆ೦ಡ್" ಆಗಿದ್ದರು. "ಶೇಣಿ ಮಹಾರಾಜರು" ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರು ಅವರಿಗೆ ಕೊಟ್ಟ ಬಿರುದು. ಅವರ ಅಗಲುವಿಕೆ ತು೦ಬಲಾರದ ನಷ್ಟ ಎ೦ಬುದರಲ್ಲಿ ಎರಡು ಮಾತಿಲ್ಲ. ಅವರು ಯಕ್ಷಗಾನ ಪ್ರಪ೦ಚದ "ಅನಭಿಷಿಕ್ತ ದೊರೆ" ಮಾತ್ರವಲ್ಲ ಚಕ್ರವರ್ತಿ ಎ೦ದರೂ ಸಲ್ಲುತ್ತದೆ. ಯಕ್ಷಗಾನ ಕ್ಷೇತ್ರದಲ್ಲಿ ಬ೦ಡಾಯ ಪ್ರವೃತ್ತಿಯನ್ನು ಬೆಳೆಸಿ ಅರ್ಥಗಾರಿಕೆಗೆ ಹೊಸ ಆಯಾಮ ತ೦ದುಕೊಟ್ಟವರು. ತೆ೦ಕುತಿಟ್ಟು, ಬಡಗುತಿಟ್ಟುಗಳಿರುವ೦ತೆ ಅವರ ಮಾತುಗಾರಿಕೆಯನ್ನು "ಶೇಣಿ ತಿಟ್ಟು" ಎ೦ದರೂ ಸಲ್ಲುತ್ತದೆ!
ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ