ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಕಲಾವಿದರ ಸಾಮೂಹಿಕ ಪರಿಶ್ರಮವೇ ಪ್ರಸಂಗದ ಯಶಸ್ಸಿಗೆ ಕಾರಣ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಮೇ 23 , 2016
ಮೇ 23 , 2016

ಕಲಾವಿದರ ಸಾಮೂಹಿಕ ಪರಿಶ್ರಮವೇ ಪ್ರಸಂಗದ ಯಶಸ್ಸಿಗೆ ಕಾರಣ

ಸಾಸ್ತಾನ : ಯಕ್ಷಗಾನ ಕಲಾವಿದರು ಹಿಮ್ಮೇಳ ಮುಮ್ಮೇಳದ ಸಾಂಗತ್ಯದಲ್ಲಿ ಸಾಮೂಹಿಕ ಪರಿಶ್ರಮಪಟ್ಟಲ್ಲಿ‌ಆದುನಿಕ ಪ್ರಸಂಗಗಳು ಯಶಸ್ವಿಯಾಗಬಲ್ಲವು. ಕೇವಲ ಪ್ರಸಂಗಕರ್ತರೊಬ್ಬರಿಂದಲೇ ಪ್ರಸಂಗ ಯಶಸ್ವಿಯಾಗದು. ಮೇಳದ ವ್ಯವಸ್ಥಾಪಕರು ಮತ್ತು ಕಲಾವಿದರ ಹೊಣೆಗಾರಿಕೆಯೂ ಅಷ್ಟೇ ಮುಖ್ಯ. ಗೋಳಿಗರಡಿ ಮೇಳದ ದಕ್ಷ ಯಜಮಾನರಾದ ವಿಠಲ ಪೂಜಾರಿಯವರ ನೇತ್ರತ್ವದಲ್ಲಿ ಮೂರು ಹೊಸ ಪ್ರಸಂಗಗಳು ಯಶಸ್ವಿಯಾದದ್ದು ಮೇಳಕ್ಕೂ ಕಲಾವಿದರಿಗೂ ಘನತೆಯನ್ನು ತಂದಿದೆ ಎಂದು ಯಕ್ಷಗಾನ ವಿಮರ್ಶಕ ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟಿಯವರು ಹೇಳಿದರು.

ಅವರು ಶ್ರೀ ಗೋಳಿಗರಡಿ ಮೇಳದ ಕೊನೆಯ ದೇವರಸೇವೆಯಂದು ಮೇಳಕ್ಕೆ ಪ್ರಸಂಗಗಳನ್ನು ನೀಡಿದ ಕೊಡವೂರು ದಿನೇಶ ಸುವರ್ಣ,ಯಕ್ಷಾನಂದಕುತ್ಪಾಡಿಯವರನ್ನು ಮೇಳದ ವತಿಯಿಂದ ಸನ್ಮಾನಿಸಿ ಮಾತನಾಡಿದರು. ಗೋಳಿಗರಡಿ ಮೇಳದ ಯಜಮಾನರಾದ ಜಿ. ವಿಠಲ ಪೂಜಾರಿ ಅದ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲಾವಿದ ಐರೋಡಿ ಗೋವಿಂದಪ್ಪ ಆಗಮಿಸಿದ್ದರು. ಗರಡಿಯ ಪಾತ್ರಿ ಶಂಕರ ಪೂಜಾರಿ,ಸಮಿತಿಯ ಸದಸ್ಯರಾದ ಗಣಪಯ್ಯ ಆಚಾರ್ಯ,ಕೇಶವ ಆಚಾರ್ಯ,ಶಂಕರ ಕುಲಾಲ್,ರಾಜು ಪೂಜಾರಿ ಉಪಸ್ಥಿತರಿದ್ದರು. ಶ್ರೀ ಗಣೇಶ ಪಾಂಡೇಶ್ವರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ