ಕಲಾಭಿಮಾನಿಗಳ ಸಹಾಯದ ನಿರೀಕ್ಷೆಯಲ್ಲಿ ಬೆದ್ರಳ್ಳಿ ಚಂದ್ರ ಶೆಟ್ಟಿ
ಲೇಖಕರು : ಜಾನ್ ಡಿಸೋಜ, ಕುಂದಾಪುರ
ಗುರುವಾರ, ಮೇ 26 , 2016
|
ಬಡಗುತಿಟ್ಟಿನ ಪ್ರಸಿದ್ಧ ಹಾಸ್ಯಗಾರ, ಮಡಾಮಕ್ಕಿ ಮೇಳದ ಕಲಾವಿದ ಬೆದ್ರಳ್ಳಿ ಚಂದ್ರ ಶೆಟ್ಟಿ ಸಂಕಷ್ಟಕ್ಕೀಡಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ತನ್ನದೆ ಛಾಪು ಮೂಡಿಸಿದ್ದ ಅವರಿಗೆ ತೀವ್ರ ತೆರನಾದ ಅನಾರೋಗ್ಯ ರಂಗಸ್ಥಳದಿಂದ ವಿಮುಖಗೊಳಿಸಿದೆ. ಕಳೆದ 50 ವರ್ಷಗಳಿಂದ ರಂಗದಲ್ಲಿ ಕಸುವು ಮಾಡಿರುವ ಅವರೀಗ ಕಿಡ್ನಿ, ಹೃದಯ ಬೇನೆಯಿಂದ ಬಳಲುತ್ತಿದ್ದು ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಲಾಗದೆ ಕಷ್ಟಕ್ಕೆ ಸಿಲುಕಿದ್ದಾರೆ.
|
ಹೊಸಂಗಡಿ ಕೊರಗಯ್ಯ ಶೆಟ್ಟಿ ಮತ್ತು ಲಚ್ಚಮ್ಮ ಶೆಡ್ತಿಯ ಪುತ್ರನಾಗಿ ಜನಿಸಿ 5ನೇ ತರಗತಿ ವರೆಗೆ ವಿದ್ಯಾಭ್ಯಾಸ ಪಡೆದು ಯಕ್ಷಗಾ ನದತ್ತ ಮುಖ ಮಾಡಿದ ಅವರು, ಒಬ್ಬ ಪ್ರಬುದ್ಧ ಹಾಸ್ಯಗಾರನಾಗಿ ಗುರುತಿಸಿಕೊಂಡ ವರು. 15ನೇ ವಯಸ್ಸಿನಲ್ಲಿ ದರ್ಲೆಹಾಡಿ ಹಾಸ್ಯಗಾರ ನಾಗಯ್ಯ ಶೆಟ್ಟಿಯವರ ಶಿಷ್ಯನಾಗಿ ಗುರುತಿಸಿಕೊಂಡು ಸೌಕೂರು ಮೇಳದಲ್ಲಿ ಪ್ರಥಮ ಬಾರಿಗೆ ಬಣ್ಣ ಹಚ್ಚಿದವರು. ಬಳಿಕ ಕಳವಾಡಿ, ಅಮೃತೇಶ್ವರಿ, ಕಮಲಶಿಲೆ ಮೇಳದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದರು.
ಹಾಸ್ಯ ಕೂಡ ವೌಲ್ಯಯುತ ಎಂದು ತೋರಿಸಿಕೊಟ್ಟ ಬೆರಳೆಣಿಕೆಯ ಸಜ್ಜನಿಕೆಯ ಕಲಾವಿದರಲ್ಲಿ ಚಂದ್ರ ಶೆಟ್ಟಿ ಒಬ್ಬರು. ಕಲಾವಿದ ನಾಗಿ ಅಷ್ಟೇ ಅಲ್ಲ ಉತ್ತಮ ಪ್ರಸಂಗಕರ್ತನಾ ಗಿಯೂ ಗುರುತಿಸಿಕೊಂಡವರು. ದೈವಸಂಕಲ್ಪ, ಸೌಮ್ಯಸುಗಂಧಿ, ಜ್ಯೋತಿಚಂದ್ರಮ, ನಾಗದರ್ಶನ, ಸೌಮ್ಯಶ್ರೀ ಎಂಬ ಯಕ್ಷಗಾನ ಪ್ರಸಂಗ ರಚಿಸಿ ಖ್ಯಾತಿ ಗಳಿಸಿದವರು. ಹಿರಿಯ ಕಲಾವಿದರಾದ ದಿ.ಅರಾಟೆ ಮಂಜುನಾಥ, ದಿ.ಕೋಟ ವೈಕುಂಠ, ಎಂ.ಎ.ನಾಯ್ಕ, ನಗರ ಜಗನ್ನಾಥ ಶೆಟ್ಟಿ, ನರಾಡಿ ಭೋಜರಾಜ ಶೆಟ್ಟಿ ಅವರ ಸಾಂಗತ್ಯದಿಂದ ಉತ್ತಮ ಕಲಾವಿದರಾಗಿ ಬೆಳೆದವರು. ಮುಂಬಯಿ, ಬೆಂಗಳೂರು ಸೇರಿದಂತೆ ನಾನಾ ಕಡೆ ತಮ್ಮದೆ ಆದ ಅಭಿಮಾನಿ ವರ್ಗ ಹೊಂದಿದ್ದಾರೆ. ಬಾಹುಕ, ನಕ್ಷತ್ರಿಕ, ವಿಜಯ, ಕಾಶಿಮಾಣಿ, ಪಾಪಣ್ಣ, ನಾರದ, ವಾಲ್ಮೀಕಿ ಪಾತ್ರಗಳಿಗೆ ಜೀವ ತುಂಬಿದವರು. ಪ್ರಚಾರದಿಂದ ಬಹುದೂರವೇ ಉಳಿದಿದ್ದ ಅವರು ಪ್ರಸ್ತುತ ಮಡಾಮಕ್ಕಿ ಮೇಳದಲ್ಲಿ ಸೇವೆ ಮಾಡಿಕೊಂಡಿದ್ದು ಇತ್ತೀಚೆಗೆ ತೀವ್ರ ತೆರನಾದ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.
|
|
ಚಿಕಿತ್ಸೆಗೂ ತತ್ವಾರ
ಅನಾರೋಗ್ಯದ ಕಾರಣ ಕಳೆದ 2-3 ವರ್ಷಗಳಿಂದ ಸರಿಯಾಗಿ ಕೆಲಸ ಮಾಡಲಾಗದೆ ಅವರು ವೈದ್ಯಕೀಯ ಚಿಕಿತ್ಸೆಗೋಸ್ಕರ ಸಂಕಷ್ಟ ಎದುರಿಸುತ್ತಿದ್ದಾರೆ. ಕಿಡ್ನಿ, ಹೃದಯ ಬೇನೆ ಚಿಕಿತ್ಸೆಗೋಸ್ಕರ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗದೆ ಒದ್ದಾಡುತ್ತಿದ್ದಾರೆ. ಕುಟುಂಬವೂ ತೊಂದರೆಯಲ್ಲಿದೆ. ಸಂಕಷ್ಟಕ್ಕೆ ಸ್ಪಂದಿಸುವವರು ಕರ್ಣಾಟಕ ಬ್ಯಾಂಕ್ ಸಿದ್ದಾಪುರ ಶಾಖೆ ಉಳಿತಾಯ ಖಾತೆ ನಂಬ್ರ 7062500101060301 (ಐಎಫ್‌ಎಸ್‌ಸಿ ಕೋಡ್- KARB0000706)ಗೆ ಪಾವತಿಸಬಹುದು.
****************
ಕೃಪೆ :
vijaykarnataka
|
|
|