ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಪ್ರದರ್ಶನಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ಸ೦ಘಗಳು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಜೂನ್ 15 ಸಿದ್ದಾಪುರದಲ್ಲಿ ಯಕ್ಷ ವೈಭವ-ಅಭಿನಂದನೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಜೂನ್ 12 , 2016
ಜೂನ್ 12 , 2016

ಜೂನ್ 15 ಸಿದ್ದಾಪುರದಲ್ಲಿ ಯಕ್ಷ ವೈಭವ-ಅಭಿನಂದನೆ

ಸಿದ್ದಾಪುರ : ಶ್ರೀ ಮಂದಾರ್ತಿ ಮೇಳದ ಕಲಾವಿದರಾದ ಆಜ್ರಿ ಉದಯ ಶೆಟ್ಟಿ ಮತ್ತು ಮೂರೂರು ರಮಾಕಾಂತ ಮಡಿವಾಳರ ಸಂಯ್ಯೋಜನೆಯಲ್ಲಿ ಸಿದ್ದಾಪುರದ ರಂಗನಾಥ ಸಬಾಂಗಣದಲ್ಲಿ ಇದೇ ಜೂನ್ ೧೫ ಬುಧವಾರ ಮಳೆಗಾಲದ ಅದ್ದೂರಿಯ ಯಕ್ಷಗಾನ ನೆರವೇರಲಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಗೆ ನೂತನವಾಗಿ ಆಯ್ಕೆಗೊಂಡ ಹಾಲಾಡಿ ತಾರಾನಾಥ ಶೆಟ್ಟಿ ಮತ್ತು ತಾಲೂಕು ಪಂಚಾಯತ್ ಗೆ ಆಯ್ಕೆಗೊಂಡ ವಾಸುದೇವ ಪೈಗಳನ್ನು ವಿದಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ‌ ಅಧ್ಯಕ್ಷತೆಯಲ್ಲಿ ‌ಅಭಿನಂದಿಸಲಾಗುವುದು. ಮಣಿಪಾಲ‌ಎಂ. ಐ. ಟಿ. ಪ್ರಾದ್ಯಾಪಕ ಎಸ್. ವಿ. ಉದಯಕುಮಾರ ಶೆಟ್ಟಿಯವರು ಅಭಿನಂದನಾ ಬಾಷಣ ಮಾಡಲಿರುವರು.

ಮುಖ್ಯ ಅತಿಥಿಗಳಾಗಿ ಕಮಲಶಿಲೆ ದೇವಸ್ಥಾನದ ದರ್ಮದರ್ಶಿ ಸಚ್ಚಿದಾನಂದ ಛಾತ್ರ, ಉದ್ಯಮಿ ಕಿರಣ್ ಕೊಡ್ಗಿ. ಡಿ. ಭರಥ್ ಕುಮಾರ್ ಕಾಮತ್, ಕಮಲಶಿಲೆ ನಾರಾಯಣ ಶೆಟ್ಟಿ, ಮುಂತಾದವರು ಬಾಗವಹಿಸಲಿರುವರು. ಬಳಿಕ ಖ್ಯಾತ ಕಲಾವಿದರಿಂದ ಲಂಕಾದಹನ ಎಂಬ ಯಕ್ಷಗಾನ ನೆರವೇರಲಿದೆ. ವಿಶೇಷ ಆಕರ್ಷಣೆಯಾಗಿ 20 ವರ್ಷಗಳ ನಂತರ ಹಿರಿಯ ಕಲಾವಿದ ಎಂ. ಎ. ನಾಯ್ಕರು ಸೀತೆಯಾಗಿ, ಖ್ಯಾತ ಸ್ತ್ರೀ ವೇಷಧಾರಿ ಶಶಿಕಾಂತಶೆಟ್ಟಿ ಹನುಮಂತನಾಗಿ, ಪ್ರಸನ್ನ ಶೆಟ್ಟಿಗಾರ್ ಸುಂದರ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಂಪ್ರದಾಯದ ಹಿರಿಯ ಭಾಗವತ ನಾಗೇಶ ಕುಲಾಲ್ ಬಳಗದವರ ಹಿಮ್ಮೇಳವಿದೆ ಎಂದು ಸಂಘಟಕರು ತಿಳಿಸಿದ್ದಾರೆ


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ