ಹೊರ ಜಿಲ್ಲೆಗಳಲ್ಲಿ ಯಕ್ಷಗಾನದ ಕಂಪನ್ನು ಹರಡುವಲ್ಲಿ ಪ್ರವಾಸಿ ಯಕ್ಷಗಾನ ಮೇಳಗಳ ಜವಬ್ದಾರಿ ಹೆಚ್ಚಿನದ್ದು
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಜುಲೈ 12 , 2016
|
ಜುಲೈ 12 , 2016
|
ಹೊರ ಜಿಲ್ಲೆಗಳಲ್ಲಿ ಯಕ್ಷಗಾನದ ಕಂಪನ್ನು ಹರಡುವಲ್ಲಿ ಪ್ರವಾಸಿ ಯಕ್ಷಗಾನ ಮೇಳಗಳ ಜವಬ್ದಾರಿ ಹೆಚ್ಚಿನದ್ದು
ಕೊಕ್ಕರ್ಣೆ :
`` ಉಡುಪಿ ಸಹಿತ ಕರ್ನಾಟಕದ ಕೇವಲ ಮೂರು ನಾಲ್ಕು ಜಿಲ್ಲೆಗಳಿಗೆ ಮಾತ್ರ ಸೀಮಿತವಾದ ಯಕ್ಷಗಾನ ಕಲೆಯನ್ನು ಹೊರಜಿಲ್ಲೆಯ ಸಹಿತ ಕರ್ನಾಟಕದ ಮೂಲೆ ಮೂಲೆಗಳಿಗೆ ಪಸರಿಸುವಲ್ಲಿ ಮಳೆಗಾಲದಲ್ಲಿ ನೆಡೆಯುವ ಪ್ರವಾಸಿ ಮೇಳಗಳ ಕೊಡುಗೆ ಗಣನೀಯವಾದದ್ದು. ಈ ಹಿಂದೆ ದಿ. ಅರಾಟೆ ಮಂಜುನಾಥ ಮುಂತಾದ ಹಿರಿಯ ಕಲಾವಿದರು ಇದರಲ್ಲಿ ಯಶಸ್ಸನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಭಾಗವತ ಸದಾಶಿವ ಅಮೀನರ ಈ ಹೊಸ ಸಂಸ್ಥೆ ನಾಡಿನಾದ್ಯಂತ ಯಕ್ಷಗಾನದ ಕಂಪನ್ನು ಹರಡಲಿ. ಅನೇಕ ಕಲಾವಿದರಿಗೆ ಮಳೆಗಾಲದಲ್ಲಿ ಈ ಸಂಸ್ಥೆ ಆಶ್ರಯ ತಾಣವಾಗಲಿ `` ಎಂದು ಯಕ್ಷಗಾನದ ಹಿರಿಯ ವಿಮರ್ಶಕ ಮಣಿಪಾಲ ಎಂ. ಐ. ಟಿ. ಪ್ರಾದ್ಯಾಪಕ ಎಸ್. ವಿ. ಉದಯ ಕುಮಾರ ಶೆಟ್ಟಿಯವರು ಹೇಳಿದರು.
ಅವರು ಕೊಕ್ಕರ್ಣೆ ಮೊಗವೀರಪೇಟೆಯಲ್ಲಿ ನೂತನವಾಗಿ ಪ್ರಾರಂಭವಾದ ಕಪ್ಪಣ್ಣಸ್ವಾಮಿ ಪ್ರವಾಸಿ ಮೇಳದ ಉದ್ಘಾಟನೆಯಲ್ಲಿ ಭಾಗವಹಿಸಿ ಭಾಗವತ ಸದಾಶಿವ ಅಮೀನರನ್ನು ಸನ್ಮಾನಿಸಿ ಶುಬಾಶಂಸನೆಯ ಮಾತನಾಡಿದರು. ಉದ್ಯಮಿ ಉಡುಪಿಯ ಪ್ರಸಾದರಾಜ್ ಕಾಂಚನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಜಿಲ್ಲಾಪಂಚಾಯತ್ ಸದಸ್ಯ ಮೈರ್ಮಾಡಿ ಸುದಾಕರ ಶೆಟ್ಟಿಯವರು ವಹಿಸಿದ್ದರು. ಭಾಗವತ ಸದಾಶಿವ ಅಮೀನರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಗುಣಕರ ರಾವ್, ಭುಜಂಗ ಶೆಟ್ಟಿ, ದೇವಕಿ ಕೋಟ್ಯಾನ್ ಆಗಮಿಸಿದ್ದರು. ಪ್ರವಾಸಿ ಮೇಳದ ಪಾಲುದಾರರಾದ ಸುದೇಶ ಶೆಟ್ಟಿ, ರಘು ಕುಂದರ್ ಉಪಸ್ಥಿತರಿದ್ದರು. ದೇವಸ್ಥಾನದ ಮುಖ್ತೇಸರ ಆನಂದ ಸ್ವಾಗತಿಸಿ ನಾಗೇಶ ಗುರಿಕಾರ್ ವಂದಿಸಿದರು. ಬಳಿಕ ಖ್ಯಾತ ಕಲಾವಿದರಿಂದ ಮೊಗವೀರ ಬಾಲೆ ಎಂಬ ಯಕ್ಷಗಾನ ನೆರವೇರಿತು.
|
|
|