ಯಕ್ಷಗಾನ ಕಲಾರಂಗದ ಅವಳಿ ಕಾರ್ಯಕ್ರಮಗಳ ಅವಲೋಕನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಜುಲೈ 14 , 2016
|
ಜುಲೈ 14 , 2016
|
ಯಕ್ಷಗಾನ ಕಲಾರಂಗದ ಅವಳಿ ಕಾರ್ಯಕ್ರಮಗಳ ಅವಲೋಕನ
ಉಡುಪಿ :
ಯಕ್ಷಗಾನ ಕಲಾರಂಗ (ರಿ. ) ಉಡುಪಿ ಇದರ ಮಳೆಗಾಲದ ತೆಂಕು ಮತ್ತು ಬಡಗುತಿಟ್ಟುಗಳ ಎರಡು ಕಾರ್ಯಕ್ರಮಗಳ ಅವಲೋಕನೆ ಮತ್ತು ವಿಮರ್ಶಾ ಕಾರ್ಯಕ್ರಮ ಕಲಾರಂಗದ ಕಛೇರಿಯಲ್ಲಿ ನೆಡೆಯಿತು. ತೆಂಕುತಿಟ್ಟಿನ ಕಲಾವಿದರು ಪ್ರದರ್ಶಿಸಿದ ``ನಳ ದಮಯಂತಿ`` ಕಾರ್ಯಕ್ರಮದ ವಿಮರ್ಶೆಯನ್ನು ಸಂಗೀತ ವಿಮರ್ಶಕಿ ಪ್ರತಿಭಾ ಎಂ. ಎಲ್. ಸಾಮಗ ಮತ್ತು ಬಾಯಾರು ಗುರುರಾಜ ಹೊಳ್ಳರು ನೆರವೇರಿಸಿದರು.
ಬಡಗುತಿಟ್ಟಿನ ``ವೀರ ದಶರಥ ನೃಪತಿ`` ಪ್ರಸಂಗವನ್ನು ಹಿರಿಯ ವಿಮರ್ಶಕ ಮಣಿಪಾಲದ ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟರು ನೆರವೇರಿಸಿದರು. ಮೂವರು ವಿಮರ್ಶಕರು ಎರಡು ಕಾರ್ಯಕ್ರಮಗಳ ಒಳಿತು ಕೆಡುಕುಗಳ ಬಗ್ಗೆ ಬೆಳಕು ಚೆಲ್ಲಿದರು. ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಕಾರ್ಯಕ್ರಮ ಸಂಯ್ಯೋಜಿಸಿದರು. ಅನೇಕ ಯಕ್ಷಗಾನಾಭಿಮಾನಿಗಳು ಚರ್ಚೆಯಲ್ಲಿ ಪಾಲ್ಗೊಂಡರು.
|
|
|