ಉಡುಪಿ ರಾಜಾಂಗಣದಲ್ಲಿ ಧಾರೇಶ್ವರ ಬಳಗದ ಶ್ರೀ ಕೃಷ್ಣ ಅಷ್ಟಾಹದ ಸಮಾರೋಪ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಜುಲೈ 15 , 2016
|
ಜುಲೈ 15 , 2016
|
ಉಡುಪಿ ರಾಜಾಂಗಣದಲ್ಲಿ ಧಾರೇಶ್ವರ ಬಳಗದ ಶ್ರೀ ಕೃಷ್ಣ ಅಷ್ಟಾಹದ ಸಮಾರೋಪ
ಉಡುಪಿ :
ಶ್ರೀ ಧಾರೇಶ್ವರ ಯಕ್ಷಗಾನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಡುಪಿ ರಾಜಾಂಗಣದಲ್ಲಿ ಎಂಟು ದಿನ ಪರ್ಯಂತ ಶ್ರೀ ಕೃಷ್ಣ ಪುರಾಣ ಆದಾರಿತ ಎಂಟು ಪ್ರಸಂಗಗಳ ಪ್ರದರ್ಶನದ ಸಮಾರೋಪ ಸಮಾರಂಭ ಉಡುಪಿಯಲ್ಲಿ ಪರ್ಯಾಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳ ಆಶೀರ್ವಚನದೊಂದಿಗೆ ಸಮಾಪನಗೊಂಡಿತು. ಪೂಜ್ಯ ಶ್ರೀಗಳು ಆಶೀರ್ವಚನ ನೀಡಿ ಹಿಮ್ಮೇಳ ಮುಮ್ಮೇಳ ಹೀಗೆ ಸರ್ವ ಅಂಗಗಳಲ್ಲು ಇದೊಂದು ಯಶಸ್ವಿ ಪ್ರಯೋಗ ಎಂದು ತಿಳಿಸಿ ಭಾಗವಹಿಸಿದ ಎಲ್ಲಾ ಕಲಾವಿದರನ್ನು ಸನ್ಮಾನಿಸಿದರು. ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥರು ಉಪಸ್ಥಿತರಿದ್ದರು.
ಯಕ್ಷಗಾನ ವಿಮರ್ಶಕ ಮಣಿಪಾಲ ಎಂ. ಐ. ಟಿ ಪ್ರಾದ್ಯಾಪಕ ಎಸ್. ವಿ. ಉದಯ ಕುಮಾರ ಶೆಟ್ಟರು ಎಂಟೂ ದಿನದ ಕಾರ್ಯಕ್ರಮ ವೀಕ್ಷಿಸಿ ಅವಲೋಕನದ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಜ್ಯೋತಿಸಿ ಕಬ್ಯಾಡಿ ಜಯರಾಮ ಆಚಾರ್ಯ, ಮತ್ತು ಮೇಳಗಳ ಯಜಮಾನ ಪಿ. ಕಿಶನ್ ಹೆಗ್ಡೆ ಉಪಸ್ಥಿತರಿದ್ದರು. ಮುರಳಿ ಕಡೆಕಾರ್ ಸ್ವಾಗತಿಸಿ ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ಸಂಯ್ಯೋಜನೆ ಮಾಡಿದರು. ಬಳಿಕ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ನೆರವೇರಿತು. ಹಿರಿಯ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ, ಹಳ್ಳಾಡಿ ಜಯರಾಮ ಶೆಟ್ಟಿ, ತೀರ್ಥಳ್ಳಿ ಗೋಪಾಲ ಆಚಾರ್ಯ, ಯಲ್ಗುಪ್ಪ ಸುಬ್ರಮಣ್ಯ ಹೆಗಡೆ ಮುಂತಾದವರು ವಿವಿಧ ದಿನಗಳಲ್ಲಿ ಭಾಗವಹಿಸಿದ್ದರು.
|
|
|