ಮಂದಾರ್ತಿಯಲ್ಲಿ ಗುರುವಂದನೆ ಮತ್ತು ಕಲಾವಂದನೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಸೆಪ್ಟೆ೦ಬರ್ 10 , 2016
|
ಸೆಪ್ಟೆ೦ಬರ್ 10 , 2016
|
ಮಂದಾರ್ತಿಯಲ್ಲಿ ಗುರುವಂದನೆ ಮತ್ತು ಕಲಾವಂದನೆ
ಮಂದಾರ್ತಿ :
ಮಣಿಪಾಲ ಎಂ. ಐ. ಟಿ. ಪ್ರಾದ್ಯಾಪಕ ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟಿ ಮತ್ತು ನೀರಜಾ ಉದಯಕುಮಾರ್ ದಂಪತಿಗಳ ವೈವಾಹಿಕ ಜೀವನದ ರಜತ ಸಂಭ್ರಮದಂದು ಈರ್ವರು ಅದ್ಯಾಪಕರಿಗೆ ಗುರುವಂದನೆ, ಮತ್ತು ಮೂವರು ಕಲಾಸಾದಕರನ್ನು ಗೌರವಿಸಲಾಯಿತು. ಗೌರಿ ಚತುರ್ಥಿಯ ಶುಭದಿನದಂದು ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ ಪೂರ್ವಾಹ್ನ ಪ್ರಧಾನ ಅರ್ಚಕ ಶ್ರೀಪತಿ ಅಡಿಗರ ನೇತೃತ್ವದಲ್ಲಿ ಚಂಡಿಕಾಯಾಗ ಸಂಪನ್ನಗೊಂಡಿತು. ಅಪರಾಹ್ನ ಶ್ರೀ ಕ್ಷೇತ್ರದ ಧರ್ಮದರ್ಶಿ ಎಚ್ ಧನಂಜಯ ಶೆಟ್ಟಿಯವರ ಅದ್ಯಕ್ಷತೆಯಲ್ಲಿ ಗುರುವಂದನೆ-ಕಲಾವಂದನೆ, ಗೃಹಿಣಿಯರಿಗೆ ಗೌರವಾರ್ಪಣೆ ಮತ್ತು ಪ್ರತಿಭಾ ಪುರಸ್ಕಾರ ನೆರವೇರಿತು.
ಮಂದಾರ್ತಿ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ನಿವೃತ್ತ ಕನ್ನಡ ಅಧ್ಯಾಪಕ ಕೆ. ಬಲರಾಮ ಕಲ್ಕೂರ ಮತ್ತು ಗಣಿತ ಅದ್ಯಾಪಕ ಸುಬ್ರಹ್ಮಣ್ಯ ಪಡಿತ್ತಾಯ ಇವರನ್ನು ಉದಯ ಕುಮಾರ ಶೆಟ್ಟರ ಪರವಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಕೋಟ ಶ್ರೀಧರ ಹಂದೆಯವರು ಸನ್ಮಾನಿಸಿದರು. ಯಕ್ಷಗಾನ ಕಲಾಸಂಘಟಕ ಎಸ್. ವಿಶ್ವೇಶ್ವರ ಭಟ್, ಶ್ರೀ ಮಂದಾರ್ತಿ ಮೇಳದ ಹಿರಿಯ ಕಲಾವಿದ ಆಜ್ರಿ ಗೋಪಾಲ ಗಾಣಿಗ ಮತ್ತು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನರನ್ನು, ಕ್ರಮವಾಗಿ ಶ್ರೀ ಸಾಲಿಗ್ರಾಮ ಮೇಳದ ವ್ಯವಸ್ಥಾಪಕ ಪಳ್ಳಿ ಕಿಷನ್ ಹೆಗ್ಡೆ, ಶ್ರೀ ಕೆ. ಎಂ. ಉಡುಪ ಮತ್ತು ತಲ್ಲೂರು ಶಿವರಾಮ ಶೆಟ್ಟರು ಸನ್ಮಾನಿಸಿ ಕಲಾಗೌರವ ನೀಡಿದರು.
ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಅಭಿನಂದನಾ ಬಾಷಣ ಮಾಡಿದರು. ರಾಜ್ಯ ಬಿ. ಜೆ. ಪಿ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲಾ ಕುಂದರ್ ಮತ್ತು ಸುಪ್ರಿಯಾ ಸದಾನಂದ ಪಾಟೀಲ್ ಇವರಿಗೆ ಮುತ್ತೈದೆ ಬಾಗಿನ ನೀಡಿ ಗೌರವಿಸಲಾಯಿತು. ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಸಂಸ್ಕ್ರತದಲ್ಲಿ ಶೇ. 100 ಅಂಕಗಳಿಸಿದ ಪಿ. ಯು. ಸಿಯಲ್ಲಿ ಶೇ. 97 ಅಂಕ ಪಡೆದ ಬೀಜಾಪುರ ಮೂಲದ ಮೂಲಭೂತ ಸೌಕರ್ಯವಿಲ್ಲದೆ ವಿದ್ಯಾಭ್ಯಾಸ ಮಾಡುತ್ತಿರುವ ಕು. ಮಂಜುಳಾ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕರ್ನಾಟಕ ನೀರಾವರಿ ನಿಗಮದ ಸಿ. ಏ. ಓ. ಶಾನಾಡಿ ಅಜಿತ ಕುಮಾರ ಹೆಗ್ಡೆಯವರು ಶುಭಾಶಂಸನೆ ಮಾಡಿದರು.
ಮಣಿಪಾಲ ಎಂ. ಐ. ಟಿ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ/ ಕೆ. ಜಗನ್ನಾಥ್, ಅಮೃತೇಶ್ವರಿ ಕ್ಷೇತ್ರದ ಆನಂದ ಕುಂದರ್. ಕಮಲಶಿಲೆ ಕ್ಷೇತ್ರದ ಪ್ರಸಾದ್ ಛಾತ್ರ, ಗೋಳಿಗರಡಿ ಕ್ಷೇತ್ರದ ವಿಠಲ ಪೂಜಾರಿ, ಮಣಿಪಾಲದ ಉದ್ಯಮಿ ಜಯರಾಜ ಹೆಗ್ಡೆ, ಉಡುಪಿ ಜಿಲ್ಲಾ ಬಿ. ಜೆ. ಪಿ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ. ರಾಜ್ಯ ಬಿ. ಜೆ. ಪಿ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲಾ ಕುಂದರ್. ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಆಡಿಗರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.
ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರರು ಉದಯಕುಮಾರ್ ಶೆಟ್ಟಿ ದಂಪತಿಗಳಿಗೆ ಗಾನಾಭಿವಂದನೆ ಸಲ್ಲಿಸಿ ಸನ್ಮಾನಿಸಿದರು. ಕಾರ್ಯಕ್ರಮ ನಿರೂಪಣೆ ಮಾಡಿದ ಸದಾನಂದ ಪಾಟೀಲ್ ಮತ್ತು ಬಸವರಾಜ ಶೆಟ್ಟಿಗಾರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಸಂಘಟಿಸಿದ ಎಸ್. ವಿ ಉದಯಕುಮಾರ ಶೆಟ್ಟಿ ಸ್ವಾಗತಿಸಿದರು ಮಯೂರ್.ಯು.ಶೆಟ್ಟಿ ಮತ್ತು ಮಾಣಿಕ್ಯ.ಯು.ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ನೀರಜಾ ಉದಯ ಕುಮಾರ ಶೆಟ್ಟಿ ಧನ್ಯವಾದ ನೀಡಿದರು. ಬಳಿಕ ಪ್ರಸಿದ್ದ ಕಲಾವಿದರಿಂದ ``ಮಹಾಸತಿ ಮಂಡೋದರಿ`` ಯಕ್ಷಗಾನ ತಾಳಮದ್ದಳೆ ನೆರವೇರಿತು.
|
|
|