ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಯಕ್ಷರಂಗದ ಯುವಪ್ರತಿಭೆ ಸಂತೋಷ ಕುಲಶೇಖರ ಇವರಿಗೆ ಯಕ್ಷಮೇನಕೆ ಪ್ರಶಸ್ತಿ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಮ೦ಗಳವಾರ, ಒಕ್ಟೋಬರ್ 18 , 2016

ಶ್ರೀ ಮಂದಾರ್ತಿ ಮೇಳದ ಪ್ರಧಾನ ಭಾಗವತ ನಗರ ಸುಬ್ರಮಣ್ಯ ಆಚಾರ್ಯ ಇವರ ಕನಸಿನ ಕೂಸು ನಡುಮನೆಯಲ್ಲಿ ಯಕ್ಷಗಾಯನ ಈ ಕಾರ್ಯಕ್ರಮಕ್ಕೆ ಈಗ ಐನೂರರ ಸಂಭ್ರಮ. ಮೂರು ವರ್ಷಗಳ ಹಿಂದೆ ಯಕ್ಷಗಾನದ ಹಿಮ್ಮೇಳದ ಕಂಪನ್ನು ಮನೆಮನೆಗೆ ತಲುಪಿಸುವ ಉದ್ದೇಶದಿಂದ ಹುಟ್ಟಿಕೊಂಡ ಈ ಸಂಸ್ಥೆ ಸುಮಾರು ಎರಡುತಾಸು ಮನೆಮನೆಯಲ್ಲಿ ಪೌರಾಣಿಕ ಪ್ರಸಂಗಗಳ ಹಾಡನ್ನು ಹಾಡಿ ಜನರಂಜಿಸಿ ಮೊದಲ ಮಳೆಗಾಲದಲ್ಲೇ ನೂರು ಕಾರ್ಯಕ್ರಮ ನೀಡಿದ್ದರು. ಕಳೆದೆರಡು ವರ್ಷದಿಂದ ಇನ್ನೂ ಮುಂದೆ ಹೋಗಿ ಯಕ್ಷನಾಟ್ಯವನ್ನು ಅಳವಡಿಸಿ ಕೊಂಡು ಅದಕ್ಕೊಂದು ಹೊಸ ರೂಪ ನೀಡಿದ್ದಾರೆ.

ಅದರ ಸವಿನೆನಪಿಗಾಗಿ ಇದೇ ಅಕ್ಟೋಬರ್ 28 ಉಡುಪಿ ಪುತ್ತೂರಿನಲ್ಲಿ‌ ಈ ಕಾರ್ಯಕ್ರಮದ ಐನೂರರ ಸಂಭ್ರಮ. ಅನೇಕ ಕಾರ್ಯಕ್ರಮದಲ್ಲಿ ತನ್ನ ಚುರುಕು ನೃತ್ಯದಿಂದ ಮನಸೆಳೆದ ತೆಂಕು ಬಡಗುತಿಟ್ಟುಗಳ ಸವ್ಯಸಾಚಿ ಸ್ತ್ರೀ ವೇಷಧಾರಿ ಮೋಹಕ ಕಲಾವಿದ ಸಂತೋಷ ಕುಲಶೇಖರ ಇವರಿಗೆ ``ಯಕ್ಷ ಮೇನಕಾ`` ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಬಾಲ್ಯ , ಶಿಕ್ಷಣ ಹಾಗೂ ಕಲಾಸೇವೆ

ತನ್ನ ಮೋಹಕ ರೂಪ ಆಳಂಗ ಸ್ತ್ರೀ ಸಹಜ ನಿಲುವು. ಭಾವಪೂರ್ಣ ಅಭಿನಯದಿಂದ ಸಹಸ್ರಾರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದವರು ತೆಂಕು ಬಡಗಿನ ಯುವ ಪ್ರತಿಭೆ ಸಂತೋಷ ಕುಲಶೇಖರ ಇವರು. ಹವ್ಯಾಸಿ ತಾಳಮದ್ದಳೆ ಅರ್ಥದಾರಿ ನಾರಾಯಣ ಪೂಜಾರಿ ಮತ್ತು ಇಂದಿರಾ ದಂಪತಿಗಳ ಪುತ್ರನಾದ ಇವರು 16ನೇ ವಯಸ್ಸಿನಲ್ಲಿ ವಿದ್ಯಾಭ್ಯಾಸ ಮೊಟುಕುಗೊಳಿಸಿ ಪ್ರಸಿದ್ದ ಸ್ತ್ರೀ ವೇಷಧಾರಿ ರಮೇಶ ಕುಲಶೇಖರ ಇವರ ಪ್ರೋತ್ಸಾಹ ಪ್ರೇರಣೆಯೊಂದಿಗೆ ತೆಂಕಿನ ಸಸಿಹಿತ್ಲು ಮೇಳದಲ್ಲಿ ಪೀಠೀಕಾ ಸ್ತ್ರೀ ವೇಷಧಾರಿಯಾಗಿ ಸೇರಿಕೊಂಡರು.

ಮುಂದೆ ತಳಕಳ ಮೇಳದ ಮುಖ್ಯ ಸ್ತ್ರೀ ವೇಷಧಾರಿಯಾಗಿ ಮೂಡಿಬಂದರು. ಭೆಂಕಿನಾಥೇಶ್ವರ ಮೇಳದ ಯಜಮಾನರಾದ ಸುರೇಂದ್ರ ಮಲ್ಲಿ ಅವರಿಂದ ರಂಗಪ್ರಜ್ಞೆ ಭಾವಾಭಿನಯ ಭಾಷಾಪ್ರಯೋಗ ಪಾತ್ರ ಪೋಷಣೆಯನ್ನು ಕಲಿತ ಅವರು ಬಪ್ಪನಾಡು ಮೇಳದಲ್ಲಿ ಎಂಟು ವರ್ಷ ಸ್ತ್ರೀ ವೇಷಧಾರಿಯಾಗಿ ರಂಜಿಸಿದರು. ಚಿಕ್ಕಮೇಳದಲ್ಲಿ ಸಮರ್ಥ ಸ್ತ್ರೀ ವೇಷಧಾರಿಯಾಗಿ ಗುರುತಿಸಿಕೊಂಡ ಅವರನ್ನು ದಿ. ಶಶಿದರ ಪಡುಕೋಣೆ ಅವರು ಬಡಗಿನ ಹಾಲಾಡಿ ಮೇಳಕ್ಕೆ ಪರಿಚಯಿಸಿದರು.

ಬಡಗುತಿಟ್ಟಿನ ಹಾಲಾಡಿಮೇಳದಲ್ಲಿ ಸಮರ್ಥ ಸ್ತ್ರೀ ವೇಷಧಾರಿಯಾಗಿ ಗುರುತಿಸಿಕೊಂಡ ಅವರು ಶ್ರೀ ಮಂದಾರ್ತಿ ಮೇಳಕ್ಕೆ ಸೇರಿ ಅಲ್ಲಿ ಹಿರಿಯ ಸ್ತ್ರೀ ವೇಷಧಾರಿ ಜಯಾನಂದ ಹೊಳೆಕೊಪ್ಪದವರ ಸಹಚರ್ಯದಿಂದ ಅನೇಕ ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿದರು. ಶೃಂಗಾರ ಪ್ರಧಾನ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಲುತಿದ್ದ ಅವರ ``ವಿಶ್ವಾಮಿತ್ರ ಮೇನಕಾ``ದ ಮೇನಕೆ, ಮಾಯ ಹಿಡಿಂಬೆ, ಮಾಯಾ ಶೂರ್ಪನಖಿ, ಮಾಯಾ ಪೂತನಿ, ಅಜಮುಖಿ, ಊರ್ವಸಿ, ರತಿ, ಮುಂತಾದ ಪಾತ್ರಗಳು ಅಪಾರ ಜನಮನ್ನಣೆ ಪಡೆದಿವೆ.

ಸಂತೋಷ ಕುಲಶೇಖರ
ಜನನ : ಎಪ್ರಿಲ್ 12, 1986
ಕಲಾಸೇವೆ:
ಸಸಿಹಿತ್ಲು, ತಳಕಳ, ಭೆಂಕಿನಾಥೇಶ್ವರ, ಹಾಲಾಡಿ ಮೇಳಗಳಲ್ಲಿ ದುಡಿದು ಪ್ರಸ್ತುತ ಮ೦ದಾರ್ತಿ ಮೇಳದಲ್ಲಿ ಸ್ತ್ರೀವೇಷಧಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಬಹು ಜನಾಕರ್ಷಣೆಯ ಯಕ್ಷನಾಟ್ಯಗಳ ಪ್ರದರ್ಶನಗಳಲ್ಲಿ ಬಹು ಬೇಡಿಕೆಯ ಕಲಾವಿದ.

ಜನಮನ್ನಣೆ ಪಡೆದ ಯಕ್ಷನಾಟ್ಯ

ಭರತನಾಟ್ಯವನ್ನು ಅಭ್ಯಸಿಸಿದ ಅವರು ಶಾಸ್ತ್ರೀಯ ಯಕ್ಷ ನೃತ್ಯದೊಂದಿಗೆ ಹೊಸ ಶೈಲಿಯನ್ನು ಮೈಗೂಡಿಸಿಕೊಂಡ ಅಪರೂಪದ ಸ್ತ್ರೀ ವೇಷಧಾರಿ. ಅನೇಕ ಕಲಾವಿದರಿಗೆ ಹೊಸ ಸ್ಫೂರ್ತಿಯನ್ನು ನೀಡಿ ಕಲಾವಿದರನ್ನಾಗಿ ರೂಪಿಸಿದ ಭಾಗವತ ಸುಬ್ರಮಣ್ಯ ಆಚಾರ್ಯರ ನೂರ ಐವತ್ತಕ್ಕೂ ಮಿಕ್ಕಿ ಯಕ್ಷನಾಟ್ಯದಲ್ಲಿ ಸ್ತ್ರೀ ವೇಷಧಾರಿಯಾಗಿ ಕಾಣಿಸಿಕೊಂಡ ಭವಿಷ್ಯದ ಉತ್ತಮ ಯುವ ಪ್ರತಿಭಾವಂತ ಕಲಾವಿದ ಸಂತೋಷ ಕುಲಶೇಖರ ಇವರಿಗೆ ``ಯಕ್ಷಮೇನಕಾ`` ಪ್ರಶಸ್ತಿ ಯೋಗ್ಯವಾಗಿಯೇ ಸಲ್ಲುತ್ತಿದೆ.

****************

ಸಂತೋಷ ಕುಲಶೇಖರರವರ ಕೆಲವು ದೃಶ್ಯಾವಳಿಗಳು










****************

ಸಂತೋಷ ಕುಲಶೇಖರರವರ ಕೆಲವು ಭಾವಚಿತ್ರಗಳು


( ಕೃಪೆ : ಪವನ್ ರಾಜ್ ಮತ್ತು ಅ೦ತರ್ಜಾಲದಲ್ಲಿ ಲಭಿಸಿದ ಸ೦ಗ್ರಹದಿ೦ದ )





















Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
SHRIPATHI RAO(10/18/2016)
Very fine article of SRI Santhosh Kulshekara




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ