ಅದರ ಸವಿನೆನಪಿಗಾಗಿ ಇದೇ ಅಕ್ಟೋಬರ್ 28 ಉಡುಪಿ ಪುತ್ತೂರಿನಲ್ಲಿ ಈ ಕಾರ್ಯಕ್ರಮದ ಐನೂರರ ಸಂಭ್ರಮ. ಅನೇಕ ಕಾರ್ಯಕ್ರಮದಲ್ಲಿ ತನ್ನ ಚುರುಕು ನೃತ್ಯದಿಂದ ಮನಸೆಳೆದ ತೆಂಕು ಬಡಗುತಿಟ್ಟುಗಳ ಸವ್ಯಸಾಚಿ ಸ್ತ್ರೀ ವೇಷಧಾರಿ ಮೋಹಕ ಕಲಾವಿದ ಸಂತೋಷ ಕುಲಶೇಖರ ಇವರಿಗೆ ``ಯಕ್ಷ ಮೇನಕಾ`` ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಬಾಲ್ಯ , ಶಿಕ್ಷಣ ಹಾಗೂ ಕಲಾಸೇವೆ
ತನ್ನ ಮೋಹಕ ರೂಪ ಆಳಂಗ ಸ್ತ್ರೀ ಸಹಜ ನಿಲುವು. ಭಾವಪೂರ್ಣ ಅಭಿನಯದಿಂದ ಸಹಸ್ರಾರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದವರು ತೆಂಕು ಬಡಗಿನ ಯುವ ಪ್ರತಿಭೆ ಸಂತೋಷ ಕುಲಶೇಖರ ಇವರು. ಹವ್ಯಾಸಿ ತಾಳಮದ್ದಳೆ ಅರ್ಥದಾರಿ ನಾರಾಯಣ ಪೂಜಾರಿ ಮತ್ತು ಇಂದಿರಾ ದಂಪತಿಗಳ ಪುತ್ರನಾದ ಇವರು 16ನೇ ವಯಸ್ಸಿನಲ್ಲಿ ವಿದ್ಯಾಭ್ಯಾಸ ಮೊಟುಕುಗೊಳಿಸಿ ಪ್ರಸಿದ್ದ ಸ್ತ್ರೀ ವೇಷಧಾರಿ ರಮೇಶ ಕುಲಶೇಖರ ಇವರ ಪ್ರೋತ್ಸಾಹ ಪ್ರೇರಣೆಯೊಂದಿಗೆ ತೆಂಕಿನ ಸಸಿಹಿತ್ಲು ಮೇಳದಲ್ಲಿ ಪೀಠೀಕಾ ಸ್ತ್ರೀ ವೇಷಧಾರಿಯಾಗಿ ಸೇರಿಕೊಂಡರು.
ಮುಂದೆ ತಳಕಳ ಮೇಳದ ಮುಖ್ಯ ಸ್ತ್ರೀ ವೇಷಧಾರಿಯಾಗಿ ಮೂಡಿಬಂದರು. ಭೆಂಕಿನಾಥೇಶ್ವರ ಮೇಳದ ಯಜಮಾನರಾದ ಸುರೇಂದ್ರ ಮಲ್ಲಿ ಅವರಿಂದ ರಂಗಪ್ರಜ್ಞೆ ಭಾವಾಭಿನಯ ಭಾಷಾಪ್ರಯೋಗ ಪಾತ್ರ ಪೋಷಣೆಯನ್ನು ಕಲಿತ ಅವರು ಬಪ್ಪನಾಡು ಮೇಳದಲ್ಲಿ ಎಂಟು ವರ್ಷ ಸ್ತ್ರೀ ವೇಷಧಾರಿಯಾಗಿ ರಂಜಿಸಿದರು. ಚಿಕ್ಕಮೇಳದಲ್ಲಿ ಸಮರ್ಥ ಸ್ತ್ರೀ ವೇಷಧಾರಿಯಾಗಿ ಗುರುತಿಸಿಕೊಂಡ ಅವರನ್ನು ದಿ. ಶಶಿದರ ಪಡುಕೋಣೆ ಅವರು ಬಡಗಿನ ಹಾಲಾಡಿ ಮೇಳಕ್ಕೆ ಪರಿಚಯಿಸಿದರು.
ಬಡಗುತಿಟ್ಟಿನ ಹಾಲಾಡಿಮೇಳದಲ್ಲಿ ಸಮರ್ಥ ಸ್ತ್ರೀ ವೇಷಧಾರಿಯಾಗಿ ಗುರುತಿಸಿಕೊಂಡ ಅವರು ಶ್ರೀ ಮಂದಾರ್ತಿ ಮೇಳಕ್ಕೆ ಸೇರಿ ಅಲ್ಲಿ ಹಿರಿಯ ಸ್ತ್ರೀ ವೇಷಧಾರಿ ಜಯಾನಂದ ಹೊಳೆಕೊಪ್ಪದವರ ಸಹಚರ್ಯದಿಂದ ಅನೇಕ ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿದರು. ಶೃಂಗಾರ ಪ್ರಧಾನ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಲುತಿದ್ದ ಅವರ ``ವಿಶ್ವಾಮಿತ್ರ ಮೇನಕಾ``ದ ಮೇನಕೆ, ಮಾಯ ಹಿಡಿಂಬೆ, ಮಾಯಾ ಶೂರ್ಪನಖಿ, ಮಾಯಾ ಪೂತನಿ, ಅಜಮುಖಿ, ಊರ್ವಸಿ, ರತಿ, ಮುಂತಾದ ಪಾತ್ರಗಳು ಅಪಾರ ಜನಮನ್ನಣೆ ಪಡೆದಿವೆ.
|
ಸಂತೋಷ ಕುಲಶೇಖರ |
|
ಜನನ |
: |
ಎಪ್ರಿಲ್ 12, 1986 |
ಕಲಾಸೇವೆ:
ಸಸಿಹಿತ್ಲು, ತಳಕಳ, ಭೆಂಕಿನಾಥೇಶ್ವರ, ಹಾಲಾಡಿ ಮೇಳಗಳಲ್ಲಿ ದುಡಿದು ಪ್ರಸ್ತುತ ಮ೦ದಾರ್ತಿ ಮೇಳದಲ್ಲಿ ಸ್ತ್ರೀವೇಷಧಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಬಹು ಜನಾಕರ್ಷಣೆಯ ಯಕ್ಷನಾಟ್ಯಗಳ ಪ್ರದರ್ಶನಗಳಲ್ಲಿ ಬಹು ಬೇಡಿಕೆಯ ಕಲಾವಿದ.
|
|
|