ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಕಣ್ಮರೆಯಾದ ಯಕ್ಷ ಭಂಡಾರ ಐರೋಡಿ ರಾಮ ಗಾಣಿಗ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಸೋಮವಾರ, ಒಕ್ಟೋಬರ್ 24 , 2016

ಯಕ್ಷಗಾನದ ಚಲಿಸುವ ವಿಶ್ವಕೋಶ ಎಂದೇ ಖ್ಯಾತರಾದ ಸುಮಾರು 95 ವರ್ಷ ಪ್ರಾಯದ ಹಿರಿಯ ಕಲಾಜೀವಿ ಶಿಕ್ಷಕ ರಾಷ್ಟೀಯ ಪ್ರಶಸ್ತಿ ಪುರಸ್ಕ್ರತ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಐರೋಡಿ ರಾಮ ಗಾಣಿಗರು ಇನ್ನಿಲ್ಲ. ಅವರ ನಿಧನದಿಂದ ಯಕ್ಷಗಾನದ ಹವ್ಯಾಸಿ ರಂಗಭೂಮಿಯ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.

ಅಧ್ಯಾಪಕ ವೃತ್ತಿ, ಯಕ್ಷಗಾನ ಪ್ರವೃತ್ತಿ

ಉಡುಪಿ ಜಿಲ್ಲೆ ಐರೋಡಿಯಲ್ಲಿ 1909ರಲ್ಲಿ ಪುಟ್ಟಯ್ಯ ಗಾಣಿಗ ವೆಂಕಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಗಾಣಿಗರು ಪ್ರಾಥಮಿಕ ವಿದ್ಯಾಬ್ಯಾಸದ ಹಚಿತದಲ್ಲೇ ಯಕ್ಷಗಾನದತ್ತ ಆಕರ್ಷಿಸಲ್ಪಟ್ಟವರು. ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಹಾರಾಡಿ ರಾಮಗಾಣಿಗರ ಸಹಿತ ಹಾರಾಡಿ ಪರಂಪರೆಯ ಅನೇಕ ಕಲಾವಿದರು ಉತ್ತುಂಗದಲ್ಲಿದ್ದ ಕಾಲವದು. ಅವರೆಲ್ಲರಿಂದ ಪ್ರೇರೇಪಿತರಾದ ಇವರು ಆಗಿನ ಪ್ರಸಿದ್ದ ಭಾಗವತ ಶ್ರೀನಿವಾಸ ಉಪ್ಪೂರರಿ೦ದ ತಾಳ ಲಯಗಳನ್ನೂ ನಂತರ ಅಂಪಾರು ಕೃಷ್ಣ ವೈದ್ಯರು, ವಾಸುದೇವ ಹೆಬ್ಬಾರರಿಂದ ಭಾಗವತಿಕೆ, ಮದ್ದಳೆವಾದನ ಹೀಗೆ ಯಕ್ಷಗಾನದ ವಿವಿಧ ಮಜಲುಗಳನ್ನು ಅಭ್ಯಸಿಸಿದರು.

ಹದಿನಾರನೇ ವಯಸ್ಸಿನಲ್ಲಿ ಮೇಳದ ತಿರುಗಾಟ ನಡೆಸಿದ ಅವರು ಅಮೃತೇಶ್ವರಿ, ಸೌಕೂರು, ಮಂದಾರ್ತಿ ಮಾರಣಕಟ್ಟೆ ಮೇಳಗಳಲ್ಲಿ ತಿರುಗಾಟ ಮಾಡಿ, ಬಳಿಕ ಮೇಳ ತೊರೆದು ಶಿಕ್ಷಕ ವೃತ್ತಿಯತ್ತ ತೊಡಗಿದ ಅವರು ಅಧ್ಯಾಪಕ ವೃತ್ತಿಯೊಂದಿಗೆ ಯಕ್ಷಗಾನವನ್ನು ಪ್ರವೃತ್ತಿಯನ್ನಾಗಿಸಿಕೊಂಡರು.

ದೇಶ-ವಿದೇಶದಲ್ಲೂ ಯಕ್ಷಗಾನದ ಕಂಪು

ಗಾಣಿಗರ ಕಂಠ ಮಾಧುರ್ಯಕ್ಕೆ ಮರುಳಾಗಿ ಡಾ. ಶಿವರಾಮ ಕಾರಂತರು ಅವರ ತಂಡಕ್ಕೆ ಸೇರಿಸಿಕೊಂಡ ಪ್ರಯುಕ್ತ ಕಾರಂತರೊಂದಿಗೆ ಭಾರತದಾದ್ಯಂತ ಹಾಗೂ ವಿದೇಶದಲ್ಲೂ ಯಕ್ಷಗಾನದ ಕಂಪನ್ನು ಹರಿಸಿದರು. ಉಪ್ಪಿನಕುದ್ರು ಕೊಗ್ಗ ಕಾಮತರ ಬೊಂಬೆಯಾಟ ತಂಡದಲ್ಲೂ ಭಾಗವತರಾಗಿ ಕಾಣಿಸಿಕೊಂಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಂತರಾಷ್ಟ್ರೀಯ ಸಾಂಸ್ಕ್ರತಿಕ ವಿನಿಮಯ ತಂಡದಲ್ಲಿ ಕಲಾವಿದರಾಗಿ ದೇಶಾದ್ಯಂತ ತಿರುಗಾಟ ಹಾಗೂ ದೆಹಲಿಯಲ್ಲಿ ಪ್ರಥಮ ಬಾರಿಗೆ ಹಿಂದಿಯಲ್ಲಿ ಯಕ್ಷಗಾನ ಪ್ರಯೋಗಮಾಡಿದ ಹೆಗ್ಗಳಿಕೆಗೆ ಪಾತ್ರರಾದರು. ಘೋರ ಬೀಷಣ ಕಾಳಗ, ವಿಶ್ವರೂಪ ದರ್ಶನ, ಕುಂಭಾಶಿ ಕ್ಷೇತ್ರ ಮಹಾತ್ಮೆ ಮುಂತಾದ ಪ್ರಸಂಗಗಳನ್ನೂ ರಚಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತೆ ರೋಹಿಣಿ ಹಟ್ಟಿಯಂಗಡಿಯವರ ಟೆಲಿಚಿತ್ರದಲ್ಲಿ ಅಭಿನಯಿಸಿದ್ದಾರೆ.

ತಮ್ಮ ಸಿರಿಕಂಠದ ಅನೇಕ ದ್ವನಿ ಸುರುಳಿಗಳು ಆ ಕಾಲದಲ್ಲೇ ಅಚ್ಚಾಗಿದ್ದವು. ಉಡುಪಿ ಯಕ್ಷಗಾನ ಕಲಾರಂಗ ಇಪ್ಪತ್ತು ವರ್ಷದ ಹಿಂದೆ ಎಂಟು ಹಿರಿಯ ಭಾಗವತರ ಗಾನವೈವಿಧ್ಯದಲ್ಲಿ ಇವರೂ ಕೂಡ ಒಬ್ಬರಾಗಿದ್ದು ಅಂದು ಅವರು ಪೂರ್ವಿರಾಗದಲ್ಲಿ ಪ್ರಸ್ತುತ ಪಡಿಸಿದ ಕರ್ಣಾರ್ಜುನದ “ಅರಸ ಧರ್ಮಜನಂತೆ ವರ ವ್ರಕೋದರನಂತೆ” ಪದ್ಯ ಅನೇಕ ಶೋತೃಗಳನ್ನು ರಂಜಿಸಿತ್ತು.

ಐರೋಡಿ ರಾಮ ಗಾಣಿಗ
ಜನನ : 1909
ಜನನ ಸ್ಥಳ : ಐರೋಡಿ
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಅಮೃತೇಶ್ವರಿ, ಸೌಕೂರು, ಮಂದಾರ್ತಿ ಮಾರಣಕಟ್ಟೆ ಮೇಳಗಳಲ್ಲಿ ತಿರುಗಾಟ ಮಾಡಿ, ಬಳಿಕ ಶಿಕ್ಷಕ ವೃತ್ತಿಯತ್ತ ತೊಡಗಿದ ಗಾಣಿಗರು ರಾಷ್ಟೀಯ ಪ್ರಶಸ್ತಿ ಪುರಸ್ಕ್ರತರು. ಡಾ. ಶಿವರಾಮ ಕಾರಂತರೊಂದಿಗೆ ದೇಶ-ವಿದೇಶದಲ್ಲೂ ಯಕ್ಷಗಾನದ ಕಂಪನ್ನು ಹರಿಸಿದ್ದಾರೆ.
ಮರಣ ದಿನಾ೦ಕ : ಒಕ್ಟೋಬರ್ 20, 2014
ಅವರ ಸಾಹಿತ್ಯಕ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಉಡುಪಿ ಯಕ್ಷಗಾನ ಕಲಾರಂಗದ ನಾರಣಪ್ಪ ಉಪ್ಪೂರ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ಅವರ ಮುಡಿಗೇರಿದ್ದವು. ಅವರ ಹೆಸರಿನಲ್ಲಿ ಅವರ ಪುತ್ರರು ಸ್ಥಾಪಿಸಿದ ದತ್ತಿ ನಿಧಿಯಿ0ದ ಯಕ್ಷಗಾನ ಕಲಾರಂಗ ಕಳೆದ ಹತ್ತು ವರ್ಷದಿಂದ ಪ್ರತೀ ವರ್ಷ ಓರ್ವ ಕಲಾವಿದರನ್ನು ಸನ್ಮಾನಿಸುತಿದ್ದಾರೆ. ನಾಡು ನ್ಮಡಿಗೆ ಸುದೀರ್ಘ ಸೇವೆ ಸಲ್ಲಿಸಿದ ಗಾಣಿಗರ ನಿಧನ ಯಕ್ಷಲೋಕಕ್ಕೆ ಬಹುದೊಡ್ದ ನಷ್ಟ.


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ