ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಶ್ರೀ ಗಣಪತಿ ಭಾಗ್ವತ್ ಕವಾಳೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಜುಲೈ 25 , 2013

ಕೃಷಿಯಲ್ಲಿ ಒ೦ದು ಕಣ್ಣು ಕಳೆದುಕೊ೦ಡಿದ್ದರೂ, ಯಕ್ಷಗಾನದಲ್ಲಿ 40 ವರ್ಷಗಳಿ೦ದ ಪ್ರಸಿದ್ಧ ಚೆ೦ಡೆ-ಮದ್ದಳೆವಾದಕರಾಗಿ ಸೇವೆ ಸಲ್ಲಿಸುತ್ತಿರುವ `ಶ್ರೀ ಗಣಪತಿ ಭಾಗ್ವತ್ ಕವಾಳೆ` ಯವರು ಅಭಿನ೦ದನೀಯರು. ಶ್ರೀಯುತರು ಯಕ್ಷಗಾನ ಮೂಲದ ಕುಟುಂಬದಲ್ಲಿ ಜನಿಸಿದರು. ಕೃಷಿಯಲ್ಲಿ ತೊಡಗಿದ್ದಾಗ ಒಂದು ಕಣ್ಣನ್ನು ಕಳೆದುಕೊಂಡರು. ಇವರ ಗುರು ದಿವಂಗತ ದುರ್ಗಪ್ಪ ಗುಡಿಗಾರರ ಸವಿನೆನಪಿಗಾಗಿ ``ಸಾಕ್ಷರತಾ ಮಹಿತ್ಮೆ`` ಎಂಬ ಪ್ರಸಂಗವನ್ನು ರಚಿಸಿದ್ದಾರೆ. ಇವರದ್ದು ತುಂಬು ಕುಟುಂಬ, ಒಬ್ಬ ಮಗಳು ಮತ್ತು ಒಬ್ಬ ಮಗ. ಯಕ್ಷಗಾನದಲ್ಲಿ ಆಸಕ್ತಿಯನ್ನು ಹೊಂದಿದ್ದ ಬುಡಕಟ್ಟು ಜನಾಂಗದವರಾದ ಕುಣಬಿ, ಮರಾಠಿ ಜನರಿಗೆ ಮೃದಂಗ, ಚಂಡೆ, ಕುಣಿತದ ತರಬೇತಿಯನ್ನು ನೀಡಿರುತ್ತಾರೆ. ಸದ್ಯ ಇವರು ದಾಂಡೇಲಿಯಲ್ಲಿ ಯಕ್ಷಗಾನ ತರಬೇತಿಯನ್ನು ನಡೆಸುತ್ತಿದ್ದಾರೆ.

ತಂದೆ : ರಾಮಚಂದ್ರ ಭಾಗ್ವತ (ಹಿರಿಯ ಯಕ್ಷಗಾನ ಭಾಗವತರು)
ತಾಯಿ : ಶಾರದಾ ಭಾಗ್ವತ
ಪತ್ನಿ : ಜಾಹ್ನವಿ ಭಾಗ್ವತ
ವಿದ್ಯಾಭ್ಯಾಸ : 7 ನೇ ತರಗತಿ
ಯಕ್ಷಗಾನದ ಗುರುಗಳು : ಶ್ರೀ ತಿಮ್ಮಪ್ಪ ನಾಯಕ, ಶ್ರೀ ಮಂಜುನಾಥ ಭಾಗ್ವತ ಹೊಸ್ತೋಟ, ಶ್ರೀ ದುರ್ಗಪ್ಪ ಗುಡಿಗಾರ
ಪ್ರೇರಣೆ : ತಂದೆ ಶ್ರೀ ರಾಮಚಂದ್ರ ಭಾಗ್ವತ, ಶ್ರೀ ಉಪ್ಪೂರು ಭಾಗವತರು, ಶ್ರೀ ದುರ್ಗಪ್ಪ ಗುಡಿಗಾರ್
ಕಲಿತ ಶಾಲೆ : ಹಂಗಾರಕಟ್ಟೆ ಯಕ್ಷಗಾನ ಕೇಂದ್ರ , ಉಡುಪಿ
ಪಾದಾರ್ಪಣೆ : 14ನೇ ವರ್ಷದಿಂದ
ಅನುಭವ :
  • 1974ರಿಂದ ಖ್ಯಾತ ಯಕ್ಷಗಾನ ಭಾಗವತರಾದ ಶ್ರೀ ನಾರ್ಣಪ್ಪ ಉಪ್ಪೂರರ ಸಹಾಯಕನಾಗಿ ಅಮ್ರತೇಶ್ವರಿ ಮೇಳದಲ್ಲಿ 3 ವರ್ಷ ಸಂಗೀತ,
  • 1 ವರ್ಷ ಮದ್ದಲೆ ಹಾಗೂ ಚೆಂಡೆ ವಾದಕನಾಗಿ ಕಾರ್ಯ ನಿರ್ವಹಣೆ,
  • 1980 ರಿಂದ ಕೆರೆಮನೆ ದಿ. ಶಂಭು ಹೆಗಡೆಯವರ ಮೇಳದಲ್ಲಿ ಮದ್ದಲೆವಾದಕನಾಗಿ 3 ವರ್ಷ ತಿರುಗಾಟ,
  • 1984 ರಿಂದ 1988 ರವರೆಗೆ ಬಚಗಾರ ಮೇಳದಲ್ಲಿ ಮದ್ದಲೆ,
  • 1988 ರಲ್ಲಿ ಹೊಸ್ತೋಟ ಮಂಜುನಾಥ ಭಾಗವತರ “ನಿಸರ್ಗ ಸಂಧಾನ” ಎಂಬ ಯಕ್ಷಗಾನ ಪ್ರದರ್ಶನದಲ್ಲಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಅನೇಕ ಕಡೆಗಳಲ್ಲಿ ತಿರುಗಾಟ,
  • ಒಂದು ವರ್ಷ ಸಿರ್ಸಿ ಮೇಳದಲ್ಲಿ ಭಾಗವತಿಕೆ,
  • ಕುಮಟ ಗೋವಿಂದ ನಾಯ್ಕರ ಮೇಳದಲ್ಲಿ ಒಂದು ವರ್ಷ ಮದ್ದಲೆ,
  • 1993 ರಿಂದ 1995 ರ ವರೆಗೆ ಪೆರ್ಡೂರು ಮೇಳದಲ್ಲಿ ಮದ್ದಲೆ,
  • 2002 ರಿಂದ 2005ರ ವರೆಗೆ ಗುಂಡಬಾಳ ಮೇಳದಲ್ಲಿ ಮದ್ದಲೆ ವಾದಕ ಹಾಗೂ ಭಾಗವತನಾಗಿ ಸೇವೆ,
  • 2008 ರಿಂದ ಎರಡು ವರ್ಷ ಮಂದರ್ತಿ ಮೇಳದಲ್ಲಿ ಮದ್ದಲೆ,
  • 2011 ರಲ್ಲಿ ನೀಲಾವರ ಮೇಳದಲ್ಲಿ ಭಾಗವತಿಕೆ.
ಗಣಪತಿ ಭಾಗ್ವತ್ , ಕವಾಳೆ
ಜನನ ದಿನಾ೦ಕ : ಮೇ 11, 1959
ಜನನ ಸ್ಥಳ : ಕವಾಳೆ, ಯಲ್ಲಾಪುರ, ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ : ಭಾಗವತಿಕೆ
ಮೃದಂಗ
ಯಕ್ಷಗಾನ ತರಬೇತಿ
ಪುರಸ್ಕಾರ:
ಆಕಾಶವಾಣಿ ಬೆಂಗಳೂರು, ಮು೦ಬಯಿ, ಮಂಗಳೂರು, ಉಡುಪಿ, ಯಲ್ಲಾಪುರ, ಸಿರಸಿ ಮುಂತಾದ ಕಡೆಗಳಲ್ಲಿ ಸನ್ಮಾನ
ಅಂಚೆ ವಿಳಾಸ : ಕವಾಳೆ
ಚಂದಗುಳಿ ಅಂಚೆ
ಯಲ್ಲಾಪುರ ತಾಲೂಕು
ಉತ್ತರ ಕನ್ನಡ ಜಿಲ್ಲೆ - 581359
ದೂರವಾಣಿ – 08419-261920
ಕ್ರತಿ ರಚನೆ : ಮೇಳದ ತಿರುಗಾಟದಲ್ಲಿರುವಾಗ ನೂರಾರು ಯಕ್ಷಗಾನ ಮಟ್ಟಿನ ಸಂದರ್ಭೋಚಿತ ಪದ್ಯಗಳ ರಚನೆ, “ ಶ್ರೀ ಲಕ್ಷೀ ಸಂವಾದ ಮತ್ತು ಸಾಕ್ಷರತಾ ಮಹಾತ್ಮೆ” ಎಂಬ ಪ್ರಸಂಗ ರಚನೆ.
ಯಕ್ಷಗಾನ ಕಲಾವಿದರ ಒಡನಾಟ :
  • ರಾಷ್ಟ್ರ ಪ್ರಶಸ್ತಿ ವಿಜೇತ ಕೆರೆಮನೆ ಶ್ರೀ ಶಂಭು ಹೆಗಡೆ
  • ಕೆರೆಮನೆ ಶ್ರೀ ಮಹಾಬಲ ಹೆಗಡೆ
  • ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ
  • ಶ್ರೀ ಪಿ.ವಿ. ಹಾಸ್ಯಗಾರ
  • ಶ್ರೀ ಶ್ರೇಣಿ ಗೋಪಾಲಕೃಷ್ಣ ಭಟ್
  • ಶ್ರೀ ವಾಸುದೇವ ಸಾಮಗ
  • ಶ್ರೀ ನೆಬ್ಬೂರು ಭಾಗವತರು
  • ಶ್ರೀ ಕೊಳಗಿ ಅನಂತ ಹೆಗಡೆ
  • ಈಗಿನ ವೃತ್ತಿ ಹವ್ಯಾಸದಲ್ಲಿರುವ ಎಲ್ಲ ಕಲಾವಿದರು
ಧ್ವನಿ ಸುರುಳಿ : 50ಕ್ಕೂ ಹೆಚ್ಚು ಯಕ್ಷಗಾನ ಸಿ.ಡಿ ಮತ್ತು ಕ್ಯಾಸೆಟಗಳು ಬಿಡುಗಡೆಯಾಗಿವೆ.
ತರಬೇತಿ ನೀಡಿದ ಅನುಭವ :
  • ಸಚ್ಚಿತಾನಂದ ಸರಸ್ವತಿ ಯಕ್ಷಗಾನ ಮೇಳ ಮುಂಬೈ
  • ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ಮುಂಬೈ
  • ಯಕ್ಷ ಕಲಾತರಂಗ ಮುಂಬೈ
  • ಕಾಶ್ಯಪ ಯಕ್ಷಗಾನ ಮಂಡಳಿ ಭೈರುಂಬೆ(ಸಿರಸಿ)
  • ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ಅಣಲಗಾರ(ಯಲ್ಲಾಪುರ)
  • ರಾಮಲಿಂಗೇಶ್ವರ ಯಕ್ಷಗಾನ ಮಂಡಳಿ ಬಿಲ್ಲಿಗದ್ದೆ(ಯಲ್ಲಾಪುರ)
ಕಲಾವಿದರು ತರಬೇತಿ ನೀಡಿದ ಈ ಮೇಲಿನ ಎಲ್ಲ ಹವ್ಯಾಸಿ ಮೇಳಗಳು ಅಸ್ತಿತ್ವದಲ್ಲಿದ್ದು ಯಕ್ಷಗಾನ ಕಲೆಗೆ ತಮ್ಮ ನಿರಂತರ ಸೇವೆಯನ್ನು ಸಲ್ಲಿಸುತ್ತಿವೆ. ಹಾಗೂ 500 ಕ್ಕೂ ಹೆಚ್ಚು ರಂಗಕಲಾವಿದರನ್ನು ತರಬೇತಿಗೊಳಿಸಿದ್ದು ಮತ್ತು 50 ಕ್ಕೂ ಹೆಚ್ಚು ಹಿಮ್ಮೇಳ ಕಲಾವಿದರನ್ನು ರಂಗಸ್ಥಳಕ್ಕೆ ಅನುಗೊಳಿಸಿದ್ದು.


ಕೃಪೆ : ರಮೇಶ್ ಭಾಗ್ವತ್


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ