ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಮೇಳ
Share
ಶ್ರೀ ಇಡಗು೦ಜಿ ಮಹಾಗಣಪತಿ ಯಕ್ಷಗಾನ ಮ೦ಡಳಿ ಕೆರೆಮನೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಆಗಸ್ಟ್ 21 , 2013

1934 ರಲ್ಲಿ ಸ್ಥಾಪನೆಯಾದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ(ರಿ.) ಎಂಬ ಮೇಳಗಳಲ್ಲಿ ಎಲ್ಲ ಮೇಳಗಳಿಗಿಂತ ಹಳೆಯದಾದ ಮೇಳ ತನ್ನ ಚೈತನ್ಯದಾಯಕ ಪ್ರದರ್ಶನಗಳಿಂದ ಎಲ್ಲರ ಗಮನ ಸಳೆಯುತ್ತಿದೆ. ದಿ| ಶ್ರೀ. ಕೆರೆಮನೆ ಶಿವರಾಮ ಹೆಗಡೆಯವರಿಂದ ಸ್ಥಾಪಿಸಲ್ಪಟ್ಟ ಈ ಮಂಡಳಿಯು ಅವರ ಮಗ ಶ್ರೀ ಕೆರೆಮನೆ ಶಂಭು ಹೆಗಡೆ ಇವರ ಮುಂದಾಳತ್ವದಲ್ಲಿ ಅಪಾರ ಸಾಧನೆ ಮಾಡಿ ಇಂದು ಅವರ ಮೊಮ್ಮಗ ಶ್ರೀ ಕೆರೆಮನೆ ಶಿವಾನಂದ ಹೆಗಡೆಯವರ ಮುಂದಾಳತ್ವದಲ್ಲಿ ಈಗ ನಡೆಸಲ್ಪಡುತ್ತಿದೆ.

ಅನನ್ಯ ಸಾಧನೆಗಳು

ಮಂಡಳಿಯ ಹುಟ್ಟಿನ ನಂತರ ಸುಧೀರ್ಘ ಅವಧಿಯಲ್ಲಿ ಅದು ಭಾರತೀಯ ಪುರಾಣಕಥೆಗಳ ಯಕ್ಷಗಾನವನ್ನು ಮಾತ್ರ ಮಾಡುತ್ತ ಬಂದಿದೆ. ಮಂಡಳಿಯ ಸಾಂಪ್ರದಾಯಿಕ ಚೌಕಟ್ಟಿನೊಳಗಿನ ಪ್ರಯೋಗಗಳು ಮತ್ತು ಸಾಂಪ್ರದಾಯಿಕ ಪಾವಿತ್ರ್ಯವನ್ನು ಉಳಿಸಿಕೊಂಡು ಬಂದಿವೆ. ಈವರೆಗೆ ಮಂಡಳಿಯು ಸುಮಾರು 9000ಕ್ಕೂ ಮೇಲ್ಪಟ್ಟು ಪ್ರದರ್ಶನಗಳನ್ನು ನೀಡಿದೆ. ಯಕ್ಷಗಾನ ಕಲೆಯನ್ನು ಜನಪ್ರೀಯಗೊಳಿಸಲೋಸುಗ ದೇಶದ ಉದ್ದಗಲದಲ್ಲಿ ಮಾತ್ರವಲ್ಲದೇ ಇಂಗ್ಲೆಂಡ್, ಪ್ರಾನ್ಸ್, ಚೀನಾ, ನೇಪಾಳ, ಬಹ್ರೇನ, ಸ್ಪೇನ್, ಬಾಂಗ್ಲಾದೇಶ್, ಅಮೇರಿಕಾ, ಇಂಡೋನೇಷ್ಯಾ ಮೊದಲಾದ ವಿದೇಶಿ ನೆಲದಲ್ಲಿ ಕೂಡ ಯಕ್ಷಗಾನವನ್ನು ಪ್ರದರ್ಶಸಿದೆ.

ಮಂಡಳಿಯ ಶುದ್ಧ ಪ್ರಯೋಗಗಳು ಬುದ್ಧಿಜೀವಿಗಳಲ್ಲದೇ ಸಾಮಾನ್ಯರನ್ನೂ ತಲುಪಿಸಿ ರಂಜಿಸುವಲ್ಲಿ ಸಶಕ್ತವಾಗಿವೆ. ಮಂಡಳಿಯ ಪ್ರಯೋಗಗಳು, ಹೊಸ ಅನ್ವೇಷಣೆಗಳು ಮತ್ತು ರಂಗ ಮಾಧ್ಯಮದ ಮೇಲೆ ಪ್ರಭಾವಗಳು ಒಬ್ಬ ಸಂಶೋದಕರ ಪ್ರಬಂಧಕ್ಕೂ ಆಕರವಾಗಿವೆ. ಅವರ ಈ ಸಂಶೋದನ ಪ್ರಬಂಧವು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದ ಡಾಕ್ಟರೇಟ್ ಗೌರವಕ್ಕೆ ಪಾತ್ರವಾಗಿದೆ. ಸಂಶೋದನಾ ಗ್ರಂಥ ಯಕ್ಷಗಾನಕ್ಕೆ ಶ್ರೀ ಇಡಗುಂಜಿ ಮೇಳದ ಕೊಡುಗೆ, 1998ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಮಂಡಳಿ ಸುಸಜ್ಜಿತ,'ಶ್ರೀ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರ' ರಂಗಮಂದಿರ ಹೊದಿದ್ದು,ಕಳೆದ 26 ವರುಷಗಳಿಂದ ಯಕ್ಷಗಾನ ಕಲಾಕೇಂದ್ರ ನಡೆಸುತ್ತ ಹಲವಾರು ವಿಧದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ.

ವಿಳಾಸ : ಶ್ರೀ ಇಡಗು೦ಜಿ ಮಹಾಗಣಪತಿ ಯಕ್ಷಗಾನ ಮ೦ಡಳಿ ಕೆರೆಮನೆ
ಅ೦ಚೆ - ಗುಣವ೦ತೆ
ಹೊನ್ನಾವರ ತಾಲೂಕು
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಪಿನ್ ಕೋಡ್ : 581348
ದೂರವಾಣಿ : 08387-234180 , 234144
ಮೊಬೈಲ್ : 9448189140
ಈಮೇಲ್ : idagunjimela@gmail.com
keremane@yahoo.com
ಅ೦ತರ್ಜಾಲ : www.keremaneyakshagana.com


ಮಂಡಳಿಯ ಸಂಸ್ಥಾಪಕರಾದ ದಿ|| ಕೆರೆಮನೆ ಶಿವರಾಮ ಹೆಗಡೆ ಮತ್ತು ಸಂಸ್ಥಾಪಕ ನಿರ್ದೇಶಕರಾದ ದಿ|| ಕೆರೆಮನೆ ಶಂಭು ಹೆಗಡೆ, ಯಕ್ಷಗಾನ ಕ್ಷೇತ್ರಕ್ಕೆ ತಮ್ಮ ವಿಶಿಷ್ಟ ಕೊಡುಗೆಗಳಿಗಾಗಿ ಕೇಂದ್ರದ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಶಂಭು ಹೆಗಡೆಯವರು ಯಕ್ಷಗಾನಕ್ಕೆ ನೀಡಿದ ಕೊಡುಗೆ ಕುರಿತು ನಡೆಸಿದ ಸಂಶೋಧನೆಗೆ ಡಾಕ್ಟರೇಟ್ ದೊರಕಿದೆ. ಮಂಡಳಿಯ ಹೆಮ್ಮೆಯ ಕಲಾವಿದರಾದ ಡಾ.ಮಹಾಬಲ ಹೆಗಡೆಯವರಿಗೆ ಕೇಂದ್ರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ , ಗೌರವ ಡಾಕ್ಟರೇಟ್ ದೊರಕಿದೆ.

ಉದ್ದೇಶ

ಯಕ್ಷಗಾನದ ಶಿಕ್ಷಣ (Education), ರಕ್ಷಣೆ (Protection) ಹಾಗೂ ಪ್ರಸರಣ (Popularization) ಇದು ಮಂಡಳಿಯ ಒಟ್ಟೂ ಗುರಿಯಾಗಿದೆ.

ನಿರ್ದೇಶಕ, ಕಲಾವಿದ, ಕೆರೆಮನೆ ಶಿವಾನಂದ ಹೆಗಡೆ

ಕೆರೆಮನೆ ಶಿವಾನಂದ ಹೆಗಡೆ
ಯಕ್ಷಗಾನ ಕಲಾಕುಟುಂಬದ ಮೂರನೇ ಪೀಳಿಗೆಯವರಾದ ಶ್ರೀ ಕೆರೆಮನೆ ಶಿವಾನಂದ ಹೆಗಡೆ ಸಹಜವಾಗಿಯೇ ಯಕ್ಷಗಾನವನ್ನು ತಮ್ಮ ವೃತ್ತಿಯಾಗಿ ಸ್ವೀಕರಿಸಿದವರು. ಬಿ.ಎ. ಪೂರೈಸಿದ ಇವರು ತಂದೆಯ ದಾರಿಯನ್ನೇ ಹಿಡಿದರು. ಶ್ರೀಮತಿ ಮಾಯಾರಾವ್ ಅವರ ನಿರ್ದೇಶನದಲ್ಲಿ ಕೋರಿಯೋಗ್ರಫಿ ಡಿಪ್ಲೋಮಾ ಹಾಗೂ ಕಥಕ್ ನ್ರತ್ಯ ಅಭ್ಯಸಿಸಿದರು ಹಾಗೂ ಭಾರತದ ಹಲವಾರು ಜನಪದ ರಂಗಭೂಮಿಗಳ ಅಧ್ಯಯನ ಮಾಡಿದರು. ಅಪ್ರತಿಮ ಕಲಾವಿದ, ಅಜ್ಜ ಶಿವರಾಮ ಹೆಗಡೆ ಮತ್ತು ತಂದೆ, ಶಂಭು ಹೆಗಡೆ ಅವರ ಮಾರ್ಗದರ್ಶನ ಶಿವಾನಂದ ಹೆಗಡೆಯವರ ವೃತ್ತಿ ಜೀವನ ರೂಪುಗೊಳಿಸಿದವು.

ತಂದೆಯವರೊಂದಿಗೆ ದೇಶ ವಿದೇಶದಲ್ಲಿ ಯಕ್ಷಗಾನ ಪ್ರದರ್ಶಿಸುವುದರೊಂದಿಗೆ ಅವರು ಆಧುನಿಕ ರಂಗಕ್ಕೂ ತಮ್ಮನ್ನು ತೆರೆದುಕೊಂಡರು. ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಆಂಡ್ ಕೋರಿಯೋಗ್ರಫಿ ತಂಡ, ನಾಟ್ಯ ಬ್ಯಾಲೆಟ್ ಸೆಂಟರ್ ತಂಡ ಮತ್ತು ಇಂಡಿಯನ್ ರಿವೈವಲ್ ಗ್ರೂಪ್, ಹೊಸದೆಹಲಿ ತಂಡದೊಂದಿಗೆ ಭಾರತವಿಡೀ ಸುತ್ತಿದ್ದಾರೆ. ಹಲವಾರು ದೂರದರ್ಶನ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ನಾಟಕಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಇಂಡೋನೇಷ್ಯಾದಲ್ಲಿ ನಡೆದ ಭಾರತ ಉತ್ಸವಕ್ಕೆ ಮಂಡಳಿಯನ್ನು ಒಯ್ದಿದ್ದು ಈ ಉತ್ಸವದಲ್ಲಿ ಯಕ್ಷಗಾನಕ್ಕೆ ವ್ಯಾಪಕ ಮನ್ನಣೆ ದೊರೆತಿದೆ.

ವಿವಿಧ ಆಧುನಿಕ ರಂಗ ಕಾರ್ಯಾಗಾರಗಳಲ್ಲಿನ ಇವರ ಭಾಗವಹಿಸುವಿಕೆ ಗಮನೀಯ. ಇವರು ಅಮೇರಿಕಾದ ಯುನಿವರ್ಸಿಟಿ ಆಫ್ ಲಾಸ್ ಎಂಜಲೀಸನವರು 1996ರಲ್ಲಿ ನಡೆಸಿದ ಅಪೆಕ್ಸ್ ಕಾರ್ಯಾಗಾರಕ್ಕೆ ಆಯ್ಕೆಯಾದ ಇಬ್ಬರು ಪ್ರತಿಭಾನ್ವಿತ ಯುವ ಭಾರತೀಯ ಕಲಾವಿದರಲ್ಲಿ ಒಬ್ಬರಾಗಿದ್ದರು. ಈ ಉತ್ಸಾಹಿ ಕಲಾವಿದ, ಮಂಡಳಿಯ ಮತ್ತು ಯಕ್ಷಗಾನ ತರಬೇತಿ ಕೇಂದ್ರದ ಈಗಿನ ನಿರ್ದೇಶಕರಾಗಿದ್ದಾರೆ.

ಮಂಡಳಿಯ ಗುರಿಗಳು ಮತ್ತು ಯೋಜನೆಗಳು

ಸಾಂಪ್ರದಾಯಿಕ ಯಕ್ಷಗಾನ ಕಲೆಯನ್ನು ಉಳಿಸುವುದು, ತರಬೇತಿ ಕೊಡುವುದು ಮತ್ತು ಆಸಕ್ತ ಜನರ ಅಳವಡಿಕೆಯನ್ನು ಹೆಚ್ಚಿಸುವುದು, ತರಬೇತಿ ಪಡೆದವರ ಪ್ರದರ್ಶನ ಘಟಕಗಳ ಮೂಲಕ ಅವಕಾಶ ಒದಗಿಸುವುದು ಮಂಡಳಿಯ ಉದ್ದೇಶವಾಗಿದೆ.

ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಮಂಡಳಿ ವಹಿಸಿದ ಪಾತ್ರ ಚರಿತ್ರೆಯಲ್ಲಿಯೂ ದಾಖಲಾಗಿದೆ. ಮಂಡಳಿಯ ಕಳೆದ ವರ್ಣರಂಜಿತ ಆರು ದಶಕಗಳ ಚರಿತ್ರೆಯಲ್ಲಿ ಯಕ್ಷಗಾನದ ರಕ್ಷಣೆ, ಪ್ರಸರಣೆ ಮತ್ತು ಅಭಿವೃದ್ಧಿಗಾಗಿ ಹಲವಾರು ಸಂವಾದಗಳು, ಯಕ್ಷಗಾನ ಪ್ರಾತ್ಯಕ್ಷಿಕೆಗಳು, ಮತ್ತು ಕಾಲಕಾಲಕ್ಕೆ ಕಲಾವಿದರ ಸನ್ಮಾನ ಕಾರ್ಯಕ್ರಮಗಳನ್ನು ಮಂಡಳಿ ನಿರಂತರವಾಗಿ ನಡೆಸಿಕೊಂಡು ಬಂದಿದೆ. ಯಕ್ಷಗಾನ ಶಾಲೆಯ ವಾರ್ಷಿಕ ಪ್ರದರ್ಶನವು ಪ್ರತಿ ಸಲವೂ ಹೊರಹೊಮ್ಮುವುದನ್ನು ಹಲವಾರು ವಿಮರ್ಶಕರು ಮೆಚ್ಚಿದ್ದಾರೆ.

ಕೆಳಕಂಡ ಹಲವಾರು ಮಹಾತ್ವಾಕಾಂಕ್ಷಿ ಯೋಜನೆಗಳನ್ನು ಮಂಡಳಿಯು ಸದ್ಯದಲ್ಲೇ ಕೈಗೆತ್ತಿಕೊಳ್ಳುವ ಹಂಬಲ ಹೊಂದಿದೆ.

  • ಸರ್ವ ವ್ಯವಸ್ಥೆಗಳನ್ನು ಹೊಂದಿದ ವಿದ್ಯಾರ್ಥಿನಿಲಯ, ನೃತ್ಯ ಕೊಠಡಿ, ಹಾಡುಗಾರಿಕೆ ಮತ್ತು ಚಂಡೆ/ಮದ್ದಲೆ ಕಲಿಕಾ ಕೊಠಡಿಗಳು, ಸಮಾವೇಶ ಪ್ರಾಂಗಣ ಮುಂತಾದವುಗಳ ನಿರ್ಮಾಣ.
  • ಯಕ್ಷಗಾನದ ವಿದ್ವಾಂಸರಿಗೆ ಮತ್ತು ಆಸಕ್ತರಿಗೆ ಉಪಯುಕ್ತವಾಗುವ ಗ್ರಂಥಾಲಯದ ನಿರ್ಮಾಣ.
  • ಯಕ್ಷಗಾನದ ಸಂಬಂಧಿಸಿದ ನಿಯತಕಾಲಿಕ ಪ್ರಕಾಶನ
  • ಆಸಕ್ತ ಜನರಿಗಾಗಿ ಯಕ್ಷಗಾನದ ಸೂಕ್ಷ್ಮಗಳನ್ನು ತಿಳಿಸಬಲ್ಲ ಚಿಕ್ಕ ಕೋರ್ಸ್`ಗಳು,
  • ಯಕ್ಷಗಾನಕ್ಕೆ ಮೀಸಲಾದ ಮ್ಯೂಸಿಯಮ್, ದಾಖಲೀಕರಣ ಸಂಗ್ರಹಾಲಯ, ಮುಂತಾದವು.

2013-2014 ನೇ ಸಾಲಿನ ಸಂಸ್ಥೆಯ ಪ್ರಮುಖ ಯೋಜನೆಗಳು

  • ಶ್ರೀಮಯ ಯಕ್ಷಗಾನ ರಂಗ ಶಿಕ್ಷಣ ಕೇಂದ್ರ. (ಒಂದು ವರುಷ ಗುರುಕುಲ ಮಾದರಿಯಲ್ಲಿ ಯಕ್ಷಗಾನ ರಂಗಶಿಕ್ಷಣ ಉಚಿತವಾಗಿ ಆಸಕ್ತರಿಗೆ ನೀಡುವುದು)
  • 'ಶ್ರೀ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-5'-5ದಿನಗಳ ಸಾಂಸ್ಕ್ರತಿಕ ಉತ್ಸವ.
  • ಆಟವೇ ಪಾಠ (ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನದ ಮೂಲಕ ನಮ್ಮ ಸಂಸ್ಕ್ರತಿ ,ಕಲೆಯ ಪರಿಚಯ)
  • 'ಭಾಸಂ'- ಯಕ್ಷಗಾನ ಭಾಗವತಿಕೆಯ ಸಂಶೋಧನ ಮತ್ತು ಅಧ್ಯಯನ ಯೋಜನೆ.
  • ಮಂಡಳಿಯ ವಿವಿಧ ಚಟುವಟಿಕೆಯ ಮೂಲಕ ಯಕ್ಷಗಾನ ಶಿಕ್ಷಣ, ಪ್ರಸರಣ, ಮತ್ತು ರಕ್ಷಣೆ.
  • ಪ್ರತೀ ವರುಷ ನಾಡಿನ ಗಣ್ಯರಿಗೆ ಶ್ರೀ ಕೆರೆಮನೆ ಶಿವರಾಮ ಹೆಗಡೆ ಮತ್ತು ಶ್ರೀ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ.
  • ಅಶಕ್ತ ಕಲಾವಿದರಿಗೆ ಅಥವಾ ಸಮಾಜಿಕ ಕಾರ್ಯಕ್ಕೆ ಆರ್ಥಿಕ ಸಹಾಯ ನೀಡಲು ಮಂಡಳಿ ಕಾರ್ಯಕ್ರಮ ಏರ್ಪಡಿಸುವುದು.

ಮೇಳದ ಪ್ರಸ್ತುತ ಕಲಾವಿದರು

ಹಿಮ್ಮೇಳದಲ್ಲಿ ಕಲಾವಿದರು

  • ಭಾಗವತರು : ಅನ೦ತ ಹೆಗಡೆ, ದ೦ತಳಿಕೆ
  • ಮದ್ದಳೆ : ಪರಮೇಶ್ವರ ಹೆಗಡೆ, ತಾರೇಸರ
  • ಚೆ೦ಡೆ : ಗಜಾನನ ಹೆಗಡೆ, ಮುರೂರು

ಮುಮ್ಮೇಳದಲ್ಲಿ ಕಲಾವಿದರು

  • ಸ್ತ್ರೀ ಪಾತ್ರ : ಸದಾಶಿವ ಭಟ್ಟ ಯಲ್ಲಾಪುರ , ಮಾರುತಿ ನಾಯ್ಕ ಬಯಲಗದ್ದೆ
  • ಹಾಸ್ಯ : ಸೀತಾರಾಮ ಹೆಗಡೆ, ಮುಡಾರೆ

ಪ್ರಮುಖ ಕಲಾವಿದರು

  • ಶ್ರೀಪಾದ ಹೆಗಡೆ, ಹಡಿನಬಾಳ
  • ಶಿವಾನ೦ದ ಹೆಗಡೆ , ಕೆರೆಮನೆ
  • ತಿಮ್ಮಪ್ಪ ಹೆಗಡೆ, ಶಿರಳಗಿ
  • ಅನ೦ತ ಹೆಗಡೆ, ನಿಟ್ಟೂರು
  • ರಾಘವ ಹೆಗಡೆ, ಬ್ರಹ್ಮೂರು
  • ಈಶ್ವರ ಭಟ್ಟ , ಹ೦ಸಳ್ಳಿ
  • ಚ೦ದ್ರಶೇಖರ ಉಪ್ಪಾರ
  • ಅನ೦ತ ಕುಣಬಿ
  • ವಿನಾಯಕ ನಾಯ್ಕ, ಗು೦ಡಿಬೈಲ್



ಕೆರೆಮನೆ ಶಿವರಾಮ ಹೆಗಡೆ ರ೦ಗಮ೦ದಿರ



ಕೆರೆಮನೆ ಆವರಣದಲ್ಲಿ ಪ್ರದರ್ಶನವನ್ನು ಸವಿಯುತ್ತಿರುವ ಕಲಾಭಿಮಾನಿಗಳು



ಯುವ ಉತ್ಸಾಹಿಗಳಿಗೆ ಯಕ್ಷಗಾನ ತರಬೇತಿ




Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ