ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಕಲಾ ಕೌಶಿಕ ಸೂರಿಕುಮೇರು ಗೋವಿ೦ದ ಭಟ್

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ನವ೦ಬರ್ 23 , 2012

ಎಲ್ಲ ಪ್ರತಿರೋಧಗಳಿಗೂ ಸಡ್ಡು ಹೊಡೆದು ಜೀವಿತಾವಧಿಯಲ್ಲಿ ಗುರಿಸಾಧನೆಯ ಹಾದಿಯನ್ನು ಉಪಕ್ರಮಿಸಲು ಹೋರಾಟವನ್ನೇ ಅನಿವಾರ್ಯವಾಗಿಸುವ ವ್ಯಕ್ತಿತ್ವ ಹಲವು ಸಲ ಗೋಚರಿಸಬಹುದು. ತಾನು ಉನ್ನತಿಯಲ್ಲಿದ್ದರೂ ಜೇವನದಲ್ಲಿ ಅತ್ಯುನ್ನತಿ ಎಂಬುದು ಇನ್ನೊಂದಿದೆ ಎಂಬುದರ ಅರಿವಾಗುವಾಗ ಅದರ ಬೆನ್ನತ್ತಿ ಹೋಗಿ, ಅದನ್ನು ವಶವಾಗಿಸುವಲ್ಲಿ ತನ್ನ ಅರ್ಹತೆಯನ್ನು ಸರಿದೂಗಿಸಿ ಪರಿಸ್ಥಿತಿಯನ್ನು ಎಲ್ಲಾ ಪ್ರತಿರೋಧದ ನಡುವೆ ಗೆಲ್ಲುವ ಛಲ ಇದು ಮಹತ್ತರ ಸಾಧನೆಗೆ ನಿಮಿತ್ತವಾಗುತ್ತದೆ. ಪೌರಾಣಿಕದಲ್ಲಿ ಬರುವ ರಾಜಾ ಕೌಶಿಕನ ವ್ಯಕ್ತಿತ್ವ ಆ ಬಗೆಯದು. ಬ್ರಹ್ಮಋಷಿ ಪದವಿ ಎಂಬುದೊಂದು ಇದೆ ಎಂದು ಅರಿವಾದಾಗ ಅದನ್ನು ಹೊಂದಿಕೊಳ್ಳಲು ಕಠಿಣ ಸಾಧನೆಗೆ ಉಪಕ್ರಮಿಸುವ ಕೌಶಿಕ ವಿಶ್ವಾಮಿತ್ರನಾಗಿ ಬ್ರಹ್ಮಋಷಿಯಾಗುವ ಹಾದಿ ಆ ವ್ಯಕ್ತಿತ್ವದ ಸತ್ವವನ್ನು ಬಹಿರಂಗಗೊಳಿಸುತ್ತದೆ.

ಅದೇಬಗೆಯಲ್ಲಿ ಯಕ್ಷಗಾನದಲ್ಲಿ ಕೌಶಿಕನಾಗಿ ಮೆರೆದವರು ನಮ್ಮ ಗೋವಿಂದಣ್ಣ. ಧರ್ಮಸ್ಥಳ ಮೇಳದ ಮಹಾಬ್ರಾಹ್ಮಣ ಪ್ರಸಂಗದ ರಾಜಾ ಕೌಶಿಕನ ಪಾತ್ರದಂತೆ, ನಿಜ ಬದುಕಿನ ಹಾದಿಯಲ್ಲೂ ಕೌಶಿಕನ ಛಲವನ್ನು ತೋರಿದವರು ಇಂದಿಗೂ ರಾಜಾ ಕೌಶಿಕನಾಗಿ ಯಾವುದೇ ಎಗ್ಗಿಲ್ಲದೆ ರಂಗಸ್ಥಳವನ್ನೇರುವ ಗೋವಿಂದಣ್ಣನ ರಂಗಸ್ಥಳದ ಆ ನಿಲುಮೇ ಮತ್ತು ಅತಿ ದೀರ್ಘ ಬದುಕು ಸಾಮಾನ್ಯರಿಗೆ ಕೈಗೆಟುಕದ ರೀತಿಯದ್ದು.


ಇಂದಿಗೂ ಇವರ ರಾಜ ಠೀವಿಯ ರಂಗಸ್ಥಳ ಪ್ರವೇಶವನ್ನು ನೋಡುವುದು ಒಂದು ಬಗೆಯ ಸಂಭ್ರಮ. ಪ್ರವೇಶದಲ್ಲೇ ಸರಳವಾಗಿ ಕುಣಿದು ಭಲ್ಲಿರೇನಯ್ಯಾ.. ಎಂದು ತೊಡಗುವಾಗ ಯಕ್ಷಗಾನ ಒಂದು ನಿಜ ವೇಷ ಅನಾವರಣಗೊಂಡ ಅನುಭವವಾಗುತ್ತದೆ.ಯಕ್ಷಗಾನ ವೇಷವೆಂದರೆ ನನಗೆ ಗೋವಿಂದಣ್ಣನ ಮುಖದ ವೇಷವೇ ಮೊದಲಿಗೆ ನೆನಪಿಗೆ ಬರುವುದು. ಇದು ಇವರಲ್ಲಿ ಯಕ್ಷಗಾನ ಕಲೆ ಆವಾಹನೆಗೊಂಡ ಪರಿ.
ಇನ್ನೋಂದು ಬಹಳವಾಗಿ ನಾನು ಗಮನಿಸಿದ ಮಾತ್ರವಲ್ಲ ಕೌತುಕದ ವಿಚಾರವೆಂದರೆ, ಇಷ್ಟು ವರ್ಷದ ದೀರ್ಘವಾದ ರಂಗ ಪರಂಪರೆಯಿರುವ ಗೋವಿಂದಣ್ಣ ರಂಗಸ್ಥಳದಲ್ಲಿ ಸುಸ್ತಾದವರಂತೆ ಕುಳಿತದ್ದು ಯಾರಾದರೂ ಕಂಡಿದ್ದಿರಾ? ಇದು ಅವರ ದೈಹಿಕ ಕ್ಷಮತೆ. ಒಂದು ವಿಧದ ದಣಿವರಿಯದ ಕಲಾವಿದ.

ಬಾಲ್ಯ ಮತ್ತು ಶಿಕ್ಷಣ

 

ವೃತ್ತಿ ಹಾಗೂ ಕಲಾಸೇವೆ

 

ಸೂರಿಕುಮೇರು ಗೋವಿ೦ದ ಭಟ್
ಜನನ ದಿನಾ೦ಕ :  
ಜನನ ಸ್ಥಳ :  
ಕಲಾಸೇವೆ :  
ಪ್ರಶಸ್ತಿಗಳು:
     
 
ಈ ಲೇಖನಕ್ಕೆ ಸ೦ಪೂರ್ಣ ವಿವರಗಳು ಲಭ್ಯವಾಗಿಲ್ಲ. ಆಸಕ್ತರು ಯಾವುದೇ ಮೌಲ್ಯಯುತ ಮಾಹಿತಿಗಳನ್ನು ಕಳುಹಿಸಬೇಕಾಗಿ ವಿನ೦ತಿ.

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಕೃಷ್ಣಪ್ರಕಾಶ ಬೊಳುಂಬು(1/5/2014)
ಕಲಾವಿದರ ಕುರಿತು ವಿವರವಾದ ಮಾಹಿತಿಗಳನ್ನು ಸೇರಿಸಿರಿ. ಚಿತ್ರದ ಕೆಳಗಡೆ ಹೆಸರುಗಳು ಕಾಣುವಂತೆ ಸಂಯೋಜಿಸಿರಿ.




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ