ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ವ್ಯಕ್ತಿ ವಿಶೇಷ
Share
ಸಾಂಸ್ಕೃತಿಕ ರಂಗದಲ್ಲಿ ಯಜಮಾನ : ಕಲ್ಲಾಡಿ ವಿಠಲ ಶೆಟ್ಟಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಸೆಪ್ಟೆ೦ಬರ್ 26 , 2013

ತುಳುನಾಡಿನ ಒಬ್ಬ ಅನಕ್ಷರಸ್ತನೂ ಇಂದು ಹಿಂದೂ ಪುರಾಣಗಳನ್ನು ಬೇರೆ ನಾಡಿನ ಅಕ್ಷರಸ್ತರಿಗಿಂತಲೂ ಚೆನ್ನಾಗಿ ತಿಳಿದುಕೊಂಡಿದ್ದಾನೆ ಎಂದಾದರೆ ಅದಕ್ಕಿರುವುದು ಎರಡೇ ಕಾರಣ. ಒಂದು ನಮ್ಮ ಭವ್ಯ ಪರಂಪರೆಯಾದ ಯಕ್ಷಗಾನ. ಇನ್ನೊಬ್ಬ ಪುರಾಣ ಕಥೆಗಳನ್ನು ತುಳುನಾಡಿನ ಮನೆಯ ಮನಸಿನಲ್ಲಿ ನಾಟಿ ನಿಲ್ಲುವಂತೆ ಮಾಡಿದ ಕಲ್ಲಾಡಿ ವಿಠಲ ಶೆಟ್ಟಿ ಓರ್ವ ಅಸಾಮಾನ್ಯ ವ್ಯಕ್ತಿ. ಸೌಮ್ಯವಾದಿಯಾಗಿದ್ದ ಅವರು ಯಕ್ಷಗಾನಕ್ಕೆ ಹೊಸಮುಖವನ್ನು ಪರಿಚಯಿಸುವುದರೊಂದಿಗೆ ನೂರಾರು ಕಲಾವಿದರನ್ನು ಯಕ್ಷಗಾನ ರಂಗಕ್ಕೆ ನೀಡಿದರು. ಯಕ್ಷಗಾನದ ಹಿಂದಿನ ಜಟಿಲ ಸಮಸ್ಯೆಗಳಿಗೆ ವಿಠಲ ಶೆಟ್ಟಿ ಸೇವೆ ಅಮೋಘವಾಗಿದ್ದು, ಕಲಾವಿದರಿಗೆ ಜೀವನಕ್ಕೆ ಭರವಸೆ ನೀಡಿದವರು. ಸಾಂಸ್ಕೃತಿಕ ರಂಗದಲ್ಲಿ `ಯಜಮಾನ` ಎಂಬ ಬಿರುದು ಸುಲಭವಾಗಿ ಸಿಗುವಂತದಲ್ಲ. ಕಟೀಲು ಮೇಳದಲ್ಲಿ ಸಾಂಪ್ರದಾಯಿಕ ಯಕ್ಷಗಾನ ಮತ್ತು ಸೀನುಸೀನರಿಯ ಯಕ್ಷಗಾನಕ್ಕೆ ಚಾಲನೆ ನೀಡುವ ಮೂಲಕ ಕಲ್ಲಾಡಿ ವಿಠಲ ಶೆಟ್ಟರಿಗೆ ಯಜಮಾನಿಕೆ ಸ್ಥಾನ ಸಿಕ್ಕಿದೆ. ಕಲೆ ಮತ್ತು ಕಲಾವಿದ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಇಂದಿಗೂ ಮುಂದುವರೆಯಲು ಕಲ್ಲಾಡಿ ವಿಠಲ ಶೆಟ್ಟಿಯವರು ಹಾಕಿಕೊಟ್ಟ ಭದ್ರ ಅಡಿಪಾಯ ಕಾರಣ.

1964ರಲ್ಲಿ ಅಪ್ಪ ಕಲ್ಲಾಡಿ ಕೊರಗ ಶೆಟ್ಟಿ ಮೇಳದ ಯಜಮಾನಿಕೆಯನ್ನು ತನ್ನ ಮಗನಾದ ವಿಠಲ ಶೆಟ್ಟಿ ಅನ್ನುವ ಉತ್ಸಾಹಿ ತರುಣನ ಹೆಗಲಿಗೆ ಹೊರಿಸಿಬಿಡುತ್ತಾರೆ.ಅಪ್ಪನ ತನ್ನಲ್ಲಿಟ್ಟ ಭರವಸೆಗೆ ಕುಂದು ಬಾರದಂತೆ ತನ್ನ ಕೆಲಸವನ್ನು ತಪಸ್ಸಾಗಿ ಸ್ವೀಕರಿಸಿ ಬಿಡುತ್ತಾನೆ ಆ ಹುಡುಗ. ಆತ ಕೈಗೊಂಡ ತಪಸ್ಸು ಸುಳ್ಳಾಗಲಿಲ್ಲ ನೋಡು ನೋಡುತ್ತಿದ್ದಂತೆ ಯಕ್ಷಲೋಕವೇ ಧರೆಗೆ ಇಳಿದು ಬರುತ್ತದೆ.ಮೂರು ಲೋಕವನ್ನೂ ಒಂದೇ ರಂಗಸ್ಥಳದಲ್ಲಿ ತೂರಿ ಬಿಟ್ಟಂತೆ ನೋಡುಗರಲ್ಲಿ ಭ್ರಮೆ ಮತ್ತು ಸಂಭ್ರಮವನ್ನು ಮೂಡಿಸುತ್ತಾರೆ, ಸಾಕ್ಷಾತ್ ದೇವಿಯೇ ಬಂದು ರಂಗಸ್ಥಳದಲ್ಲಿ ಬಂದು ನೆಲೆಸಿದಂತೆ ಪುನೀತವಾದ ದೇವಭಾವ ಮೂಡಿಸುವಲ್ಲಿ ಸಫಲರಾಗುತ್ತಾರೆ. ಇಂದಿನಂತೆ ಅಂದಿನ ಕಾಲದಲ್ಲಿ ಓಡಾಡಲು ವಾಹನಗಳಿಲ್ಲದಿದ್ದರೂ ಜನ ಹಲವಾರು ಮೈಲು ನಡೆದುಕೊಂಡು ಬಯಲಾಟ ನೋಡಲು ಬರುತ್ತಿದ್ದರು.

ಯಕ್ಷಗಾನ ರಂಗದ ದಿಗ್ಗಜ ಕಲ್ಲಾಡಿ ವಿಠಲ ಶೆಟ್ಟಿ ಅಂದಿನ ಕಾಲದ ತುರ್ತು ಸ್ಥಿತಿಯಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದವರು. ಹೀಗೆ ಜನಮನದ ಅಂತರಾಳದಲ್ಲಿ ನೆಲೆಸಿಕೊಂಡ ಮೇಳ 1975 ರಲ್ಲಿ ಬಹುಜನರ ಒತ್ತಾಯದ ಮೇರೆಗೆ ಇನ್ನೊಂದು ಮೇಳವನ್ನು ತೆರೆಯುತ್ತದೆ. ಆದರೂ ಜನ ಹರಕೆಗಳನ್ನು ತೀರಿಸಿಕೊಳ್ಳಲಾಗದೆ ಕಾಯ ತೊಡಗಿದಾಗ 1982 ರಲ್ಲಿ ತನ್ನ ಮೂರನೇ ಮೇಳವನ್ನು ಭಕ್ತರ ಸೇವೆಗೆಗಾಗಿ ತುಳುನಾಡಿಗೆ ಅರ್ಪಿಸುತ್ತಾರೆ. ಆದರೆ ದೇವಿ ಮಹಿಮೆಯೋ ಏನೋ ಅನ್ನುವಂತೆ ಹರಕೆಗಳು ದಿನೇ ದಿನೇ ಅಕ್ಷಯವಾಗಿ ವೃಧ್ಧಿಗೊಂಡಾಗ 1993 ರಲ್ಲಿ ನಾಲ್ಕನೇ ಮೇಳ ಜನ್ಮ ತಾಳುತ್ತದೆ.

ಕಳೆದ ವರ್ಷ ಐದನೇ ಮೇಳ ಸೇವಾಕಾರ್ಯ ಆರಂಭಿಸುವುದರೊಂದಿಗೆ ಅದರ ಜನಪ್ರೀಯತೆಯನ್ನು ನೀವೇ ಲೆಕ್ಕ ಹಾಕಿ, ಐದು ಮೇಳಗಳಿದ್ದರೂ ಇಪ್ಪತ್ತೈದು ವರ್ಷಗಳ ಕಾಲ ಮುಂಗಡವಾಗಿ ನೊಂದಾವನೆಯಾಗಿದೆ ಅಂದರೆ ನೀವೇ ಅಂದಾಜು ಮಾಡಿ ಅದರ ಜನಪ್ರೀಯತೆಯ ಉತ್ತುಂಗವನ್ನು ಕಲ್ಲಾಡಿ ಕೊರಗ ಶೆಟ್ಟಿ ತುಳು ಯಕ್ಷಗಾನವನ್ನು ಮೊದಲ ಬಾರಿಗೆ ತುಳುನಾಡಿನಲ್ಲಿ ಪರಿಚಯ ಮಾಡಿಕೊಟ್ಟವರು. ನಮ್ಮ ತುಳುನಾಡಿನ ವೀರ ಬಿರುವರಾದ ಕೋಟಿ ಚೆನ್ನಯವನ್ನು ತುಳುವಿನಲ್ಲಿ ಆಡಿ ಎಲ್ಲರಿಂದ ಮೆಚ್ಚುಗೆಯನ್ನು ಗಳಿಸಿ ತುಳು ಯಕ್ಷಗಾನಗಳ ಜನಪ್ರಿಯತೆಗೆ ಪಂಚಾಂಗ ಹಾಕಿದವರು ಅಂದರೆ ತಪ್ಪಾಗದು. ಮುಂದೆ ಅದೆಷ್ಟೋ ಕಾಲ ತುಳು ಯಕ್ಷಗಾನ ಮೇಳಗಳ ಕಾಲ. ಅಪ್ಪನ ದಾರಿಯಲ್ಲಿ ನಡೆದ ವಿಠಲ ಶೆಟ್ಟಿ ತಮ್ಮದೇ ಆದ ಕರ್ನಾಟಕ ಯಕ್ಷಗಾನ ಸಭಾ ಅನ್ನುವ ತುಳು ಯಕ್ಷಗಾನ ಮೇಳವನ್ನು ತುಳುನಾಡಿಗೆ ಪರಿಚಯಿಸಿ ಹಲವು ಕಾಲ ತುಳು ಯಕ್ಷ ಲೋಕವನ್ನು ಅಳುತ್ತಾರೆ.

ಕಲ್ಲಾಡಿ ವಿಠಲ ಶೆಟ್ಟಿ
ಜನನ : -
ಜನನ ಸ್ಥಳ : ಕಲ್ಲಾಡಿ, ಇರಾ
ಬ೦ಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ : ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ದಶಾವತಾರ ಮ೦ಡಳಿ ಕಟೀಲು, ಕರ್ನಾಟಕ ಯಕ್ಷಗಾನ ನಾಟಕ ಸಭಾ ಮು೦ತಾದ ಮೇಳಗಳ ಸ೦ಚಾಲಕತ್ವ
ಪ್ರಶಸ್ತಿಗಳು:
ಹಲವಾರು ಸ೦ಘ-ಸ೦ಸ್ಥೆಗಳಿ೦ದ ಪ್ರಶಸ್ತಿ-ಪುರಸ್ಕಾರಗಳು
ಪ್ರಸ್ತುತ ಐದೂ ಮೇಳಗಳು ಇವರ ಪುತ್ರ ದೇವಿಪ್ರಸಾದ ಶೆಟ್ಟಿಯವರ ಸ೦ಚಾಲಕತ್ವದಲ್ಲಿ ನಡೆಯುತ್ತಿದೆ. ಪ್ರಸಕ್ತ ದಿನಗಳಲ್ಲಿ ಆನ್‌ಲೆನ್ ವ್ಯವಸ್ಥೆ ಇದ್ದರೂ ಕಟೀಲು ಮೇಳದಲ್ಲಿ ಇಂದಿಗೂ ಸಂಪ್ರದಾಯ ಮುರಿದಿಲ್ಲ. ವಿಠಲ ಶೆಟ್ಟರ ಪುತ್ರ ದೇವಿಪ್ರಸಾದ್ ಶೆಟ್ಟಿ ಅವರ ಕಾರ್ಯವೆಖರಿ ಕಲಾವಿದರಿಗೆ ಕಲಾಸಂಘಟಕರಿಗೆ ಕೊಡುತ್ತಿರುವ ಗೌರವ ಅಪಾರವಾದುದು. ದಿನದಿ೦ದ ದಿನಕ್ಕೆ ಹರಕೆ ಬಯಲಾಟಗಳ ನೋ೦ದಣಿ ಏರುತ್ತಿರುವುದರಿ೦ದ , ಈ ವರ್ಷದಿ೦ದ 6ನೇ ಮೇಳವು ಶುರುವಾಗಿದೆ. ಕಲ್ಲಾಡಿ ಕೊರಗ ಶೆಟ್ಟಿ ಮತ್ತು ವಿಠ್ಠಲ ಶೆಟ್ಟಿ ಯಕ್ಷ ಪ್ರತಿಷ್ಠಾನದ ಮೂಲಕ ವರ್ಷ೦ಪ್ರತಿ ಹಲವಾರು ಕಲಾವಿದರಿಗೆ ಪ್ರಶಸ್ತಿಗಳ ಗೌರಾವಾರ್ಪಣೆ ಮಾಡುತ್ತಿದ್ದಾರೆ.

ಕೃಪೆ : ಅ೦ತರ್ಜಾಲದಲ್ಲಿರುವ ಮಾಹಿತಿ

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ