ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಅಜೆಕಾರಿನಲ್ಲಿ ಯಕ್ಷಲೋಕ ಸಷ್ಟಿಸಿದ ಯಕ್ಷ ಪಂಚಾಮೃತ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಒಕ್ಟೋಬರ್ 2 , 2013
ಒಕ್ಟೋಬರ್ 2 , 2013

ಅಜೆಕಾರಿನಲ್ಲಿ ಯಕ್ಷಲೋಕ ಸಷ್ಟಿಸಿದ ಯಕ್ಷ ಪಂಚಾಮೃತ

ಕಾರ್ಕಳ : ಗಚೆಂಡೆ ಮದ್ದಳೆ ಹಾಗೂ ತಾಳಗಳ ಅಬ್ಬರ ನಾದ ಒಂದೆಡೆಯಾದರೆ, ಮನಸ್ಸಿಗೆ ಮುದ ನೀಡಿದ ನಾಟ್ಯಾಭಿನಯ, ಇದೆಲ್ಲದಕ್ಕೂ ಮಿಗಿಲಾಗಿ ಅತ್ಯಾಕರ್ಷಕವಾದ ಬೆಳಕಿನಲ್ಲಿ ರಂಗಸಜ್ಜಿಕೆಯಲ್ಲಿ ದಿಗ್ಗಜರ ನಡುವಿನ ಮಾತಿನ ಸಮರದ ಅಬ್ಬರ. ತೆಂಕುತಿಟ್ಟು ಮತ್ತು ಬಡಗುತಿಟ್ಟು ಕಲಾವಿದರ ಅಮೋಘ ಸಂಗಮದಿಂದ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ಅನಾವರಣಗೊಂಡ ಯಕ್ಷಲೋಕದ ವೈಭವ.

ಅಪಾರ ಜನಸ್ತೋಮವನ್ನು ನಿರಂತರ 9 ಗಂಟೆಗಳ ಕಾಲ ಕಟ್ಟಿ ಹಾಕುವಂತಹ ಶಕ್ತಿಯು ಈ ಕಲಾಪ್ರದರ್ಶನಕ್ಕೆ ಇತ್ತು. ತೆಂಕು ಮತ್ತು ಬಡಗು ತಿಟ್ಟಿನ ದಿಗ್ಗಜ ಕಲಾವಿದರ ಕೂಡುವಿಕೆಯಿಂದ ರಂಗಸಜ್ಜಿಕೆಯಲ್ಲಿ ಯಕ್ಷಲೋಕವೇ ಸೃಷ್ಟಿಯಾಗಿತ್ತು, ಮಾತ್ರವಲ್ಲದೇ ಸುಮಾರು ಎರಡೂ ಸಾವಿರಕ್ಕೂ ಹೆಚ್ಚು ನೆರೆದಿದ್ದ ಕಲಾರಸಿಕರನ್ನು ನಿರಂತರ 9 ಗಂಟೆಗಳ ಕಾಲ ತನ್ಮಯಗೊಳಿಸಿದ್ದು ಮಾತ್ರ ನಿಜಕ್ಕೂ ವಿಸ್ಮಯ. ಅಜೆಕಾರು ಹಾಗೂ ಎಣ್ಣೆಹೊಳೆಯ ಯಕ್ಷಾಭಿಮಾನಿ ಬಳಗ ವತಿಯಿಂದ ಪ್ರಥಮ ಬಾರಿಗೆ ಯಕ್ಷಗಾನ ರಂಗದಲ್ಲಿ ತೆಂಕು ಬಡಗುತಿಟ್ಟುಗಳ ಸಮಾಗಮದಲ್ಲಿ ಯಕ್ಷಗಾನ ಆಯೋಜಿಸಲಾಗಿತ್ತು.

ಅಜೆಕಾರು ಸುಭವಿ ದಿ.ಕೊರಗ ಶೆಟ್ಟಿ ವೇದಿಕೆಯಲ್ಲಿ ಹೆಸರಾಂತ ಭಾಗವತರ ಪೆಪೋಟಿಯ ಗಾನವೆಭವ, ತೆಂಕು ಹಾಗೂ ಬಡಗು ತಿಟ್ಟುಗಳ ಚಂಡೆ-ಮದ್ದಳೆಗಳ ಜುಗಲ್‌ಬಂದಿ ವಾದನ, ಖ್ಯಾತ ಹಾಸ್ಯ ಕಲಾವಿದರಾದ ಸಿದ್ದಕಟ್ಟೆ ಪದ್ಮನಾಭ ಶೆಟ್ಟಿಗಾರ್ ಹಾಗೂ ಸೀತಾರಾಮ ಕುಮಾರ್ ಕಟೀಲುರವರ ಹಾಸ್ಯ ರಸಾಯನ, ತೆಂಕುತಿಟ್ಟಿನ ಪ್ರಧಾನ ಸ್ತ್ರೀವೇಷದಾರಿ ಹಿಲಿಯಾಣ ಸಂತೋಷ್ ಹಾಗೂ ಬಡಗುತಿಟ್ಟಿನ ಹಕ್ಲಾಡಿ ರವೀಂದ್ರ ಅವರ ಅಮೋಘ ಸ್ತ್ರೀವೇಷ ನಾಟ್ಯಾಭಿನಯ ನೆರೆದಿದ್ದ ಜನರನ್ನು ಮಂತ್ರಮುಗ್ದಗೊಳಿಸಿತ್ತು. ಒಂದು ಗಂಟೆ ಕಾಲಮಿತಿಯಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ತೆಂಕುತಿಟ್ಟಿನ ಶ್ರೀದೇವಿ ಮಹಾತ್ಮೆ ಹಾಗೂ ಗದಾಯದ್ದ, ಹಾಗೂ ಬಡಗಿನ ಶ್ರೀನಿವಾಸ ಕಲ್ಯಾಣ ಹಾಗೂ ಚಕ್ರವ್ಯೆಹ ಎಂಬ ಪೌರಾಣಿಕ ಕಥಾನಕದ ಮೂಲಕ ಪ್ರೇಕ್ಷಕರಿಗೆ ಕಲೆಯ ರಸದೌತಣ ಉಣಬಡಿಸಿದರು. ಬಳಿಕ ತೆಂಕುತಿಟ್ಟು ಹಾಗೂ ಬಡಗುತಿಟ್ಟುಗಳ ಕಲಾವಿದರ ಹಾಗೂ ಹಿಮ್ಮೇಳದ ಕೂಡುವಿಕೆಯಿಂದ ಮಹಾಭಾರತದ ಕುರುಕ್ಷೇತ್ರ ಕಥಾಪ್ರಸಂಗವನ್ನು ಸಾದರಪಡಿಸಿದರು.

ಯಕ್ಷಗಾನ ಪ್ರದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರಿಂದ ಯಕ್ಷಗಾನವು ನೇಪಥ್ಯಕ್ಕೆ ಸರಿಯುತ್ತಿದೆ ಎನ್ನುವ ಕೂಗು ಸುಳ್ಳಾಗಿದೆ. ಕೆಲಸದ ಒತ್ತಡದಿಂದ ರಾತ್ರಿಯಿಡೀ ಯಕ್ಷಗಾನ ವೀಕ್ಷಿಸುವ ಜನರು ಕಡಿಮೆಯಾಗಿ ದ್ದಾರೆಯೇ ಹೊರತು ಯಕ್ಷಗಾನವನ್ನು ಕಾಲ ಮಿತಿಯೊಳಗೆ ತಂದರೆ ಯಕ್ಷಗಾನವು ತನ್ನದೇ ಆದ ಅಸಂಖ್ಯ ಅಭಿಮಾನಿ ಬಳಗವನ್ನು ಹೊಂದಿದೆ ಎನ್ನುವುದಕ್ಕೆ ಅಜೆಕಾರಿನ ವಿನೂತನ ಯಕ್ಷಪ್ರಯೋಗ ಸಾಕ್ಷಿಯಾಯಿತು.

ಕೃಪೆ : http://vijaykarnataka.indiatimes.com/


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ