ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ರಂಗಭೂಮಿ ಫೈನ್‌ ಆರ್ಟ್ಸ್ ನವಿಮುಂಬಯಿ ವತಿಯಿಂದ ಸರಣಿ ಯಕ್ಷಗಾನ ಬಯಲಾಟ ಸಪ್ತಾಹ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಒಕ್ಟೋಬರ್ 26 , 2013
ಒಕ್ಟೋಬರ್ 26 , 2013

ರಂಗಭೂಮಿ ಫೈನ್‌ ಆರ್ಟ್ಸ್ ನವಿಮುಂಬಯಿ ವತಿಯಿಂದ ಸರಣಿ ಯಕ್ಷಗಾನ ಬಯಲಾಟ ಸಪ್ತಾಹ

ನವಿ ಮುಂಬಯಿ : ರಂಗಭೂಮಿ ಫೈನ್‌ ಆರ್ಟ್ಸ್ ನವಿಮುಂಬಯಿ ಇದರ ವತಿಯಿಂದ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಕೊಲ್ಲಾಂಗಾನ ಕಾಸರಗೋಡು ಹಾಗೂ ರಂಗಭೂಮಿ ಕಲಾವಿದರ ಕೂಡುವಿಕೆಯಲ್ಲಿ ಸರಣಿ ಯಕ್ಷಗಾನ ಬಯಲಾಟ ಸಪ್ತಾಹವು ಅ. 25 ರಿಂದ ನ. 1 ರವರೆಗೆ ನೆರೂಲ್‌ ಶನೀಶ್ವರ ಮಂದಿರದಲ್ಲಿ ನಡೆಯಲಿದೆ.

ಅ. 25 ರಂದು ಸಂಜೆ 5 ಗಂಟೆಗೆ ಸರಣಿ ಯಕ್ಷಗಾನ ಬಯಲಾಟ ಸಪ್ತಾಹವು ಉದ್ಘಾಟನೆಗೊಳ್ಳಲಿದ್ದು, ಈ ಸಂದರ್ಭದಲ್ಲಿ ಓಂ ನಮೋ ಶಿವಾಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಅ. 27 ರಂದು ನೆರೂಲ್‌ ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೇಬಲ್‌ ಟ್ರಸ್ಟ್‌ ಅವರ ಪ್ರಾಯೋಜಕತ್ವದಲ್ಲಿ ಸುದರ್ಶನೋಪಾಖ್ಯಾನ, ಅ. 28 ರಂದು ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಪ್ರಾಯೋಜಕತ್ವದಲ್ಲಿ ದಕ್ಷಯಜ್ಞ-ಅಗ್ರಪೂಜೆ, ಅ. 29 ರಂದು ನವಿಮುಂಬಯಿ ಹೆಗ್ಡೆ ಫ್ರೆಂಡ್ಸ್‌ ಅವರ ಪ್ರಾಯೋಜಕತ್ವದಲ್ಲಿ ಕೃಷ್ಣಲೀಲೆ-ಕಂಸವಧೆ, ಅ. 30 ರಂದು ಸತೀಶ್‌ ಪೂಜಾರಿ ನೆರೂಲ್‌ ಅವರ ಪ್ರಾಯೋಜಕತ್ವದಲ್ಲಿ ಸೀತಾ ಕಲ್ಯಾಣ-ಇಂದ್ರಜಿತು ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಅ. 31 ರಂದು ಕೃಷ್ಣ ಎಂ. ಪೂಜಾರಿ ನೆರೂಲ್‌ ಅವರ ಪ್ರಾಯೋಜಕತ್ವದಲ್ಲಿ ಶಶಿಪ್ರಭಾ-ಕುಶಲವ, ನ. 1 ರಂದು ರಂಗಭೂಮಿಯ ವಾರ್ಷಿಕಕೋತ್ಸವದ ಅಂಗವಾಗಿ ಪ್ರಹ್ಲಾದ ಚರಿತ್ರೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಮೇಳದ ಯಜಮಾನರಾದ ಗಣಾಧಿರಾಜ ತಂತ್ರಿ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಸಪ್ತಾಹವನ್ನು ವಿಶ್ವೇಶ್ವರ ಭಟ್‌ ಕಾರ್ಗಲ್‌ ಅವರು ನಿರ್ದೇಶಿಸಿದ್ದು, ಶಂಭಯ್ಯ ಕಂಜರ್ಪಣೆ ಅವರು ಸಂಯೋಜಿಸಲಿದ್ದಾರೆ.

ಹಿಮ್ಮೇಳದಲ್ಲಿ ಭಾಗವತರಾಗಿ ಮನೋಹರ ಬಲ್ಲಾಳ್‌, ರವಿಶಂಕರ ಆಚಾರ್ಯ, ಚೆಂಡೆಯಲ್ಲಿ ಶ್ರೀಧರ ಪಡ್ರೆ, ಮದ್ದಳೆಯಲ್ಲಿ ತಿರುಮಲೇಶ್‌, ಹಾಸ್ಯದಲ್ಲಿ ಮಹಾಬಲೇಶ್ವರ ಭಟ್‌ ಭಾಗಮಂಡಲ, ಸುಬ್ರಹ್ಮಣ್ಯ ಭಟ್‌ ಪೆರೋಡಿ, ಚಂದ್ರಹಾಸ ಶೆಟ್ಟಿ ದೆಪ್ಪುಣಿಗುತ್ತು, ಸ್ತಿÅàವೇಷದಲ್ಲಿ ಸಂತೋಷ್‌ ಕುಲಶೇಖರ್‌, ರವಿ ಸಂಪಾಜೆ ಅವರು ಸಹಕರಿಸಲಿದ್ದಾರೆ.

ಕಲಾವಿದರುಗಳಾಗಿ ಗಣಾಧಿರಾಜ ತಂತ್ರಿ, ಕೊಳ್ತಿಗೆ ನಾರಾಯಣ ಗೌಡ, ವಿಶ್ವೇಶ್ವರ ಭಟ್‌, ಕಾರ್ಗಲ್‌ ಗೋಪಾಲ್‌ ಭಟ್‌, ಶಂಭಯ್ಯ ಕಂಜರ್ಪಣೆ, ವಿನೋದ್‌ ರೈ ಸೊರಕೆ, ಶಶಿಕಿರಣ್‌, ಶೇಖರ್‌, ಮಹೇಶ್‌ ಪಿ., ಪ್ರಕಾಶ್‌ ನಿರ್‌ಚಾಳ್‌, ಈಶ್ವರ ಭಟ್‌, ಅನಿಲ್‌ ಕುಮಾರ್‌ ಹೆಗ್ಡೆ, ಜಗದೀಶ್‌ ಶೆಟ್ಟಿ ಪನ್ವೇಲ್‌, ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ, ಪ್ರಶಾಂತ್‌ ಶೆಟ್ಟಿ, ರಂಜಿತ್‌ ಶೆಟ್ಟಿ, ಲಕ್ಷ¾ಣ್‌ ದೇವಾಡಿಗ, ಹರೀಶ್‌ ಶೆಟ್ಟಿ, ಕೃಷ್ಣ ಕೋಟ್ಯಾನ್‌, ವಿಶ್ವನಾಥ ಉಪ್ಪುಂದ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಕೃಪೆ : http://www.udayavani.com/


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ