ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಬದುಕಿನ ಶತಮಾನವನ್ನು ಸಂಭ್ರಮಿಸಿದ `ದೇವೀ ಭಟ್ಟರು`

ಲೇಖಕರು : ವಾಮನ ಕರ್ಕೇರ ಕೊಲ್ಲೂರು
ಬುಧವಾರ, ನವ೦ಬರ್ 6 , 2013

ದೇವಿ ಮಹಾತ್ಮೆಯ ಮೊದಲ ದೇವಿ ಎಂದೇ ಪ್ರಸಿದ್ಧರಾದ ಕಡಂದೇಲು ಪುರುಷೋತ್ತಮ ಭಟ್ಟರಿಗೆ ಇಂದು ಶತಕದ ಸಂಭ್ರಮ. ಇದೀಗ ಕಟೀಲಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಭಟ್ಟರು ಪುತ್ತೂರು ಪಾಣಾಜೆ ಸಮೀಪದ ಕಡಂದೇಲು ಎಂಬಲ್ಲಿ ಶಿಕ್ಷಕ ವೆಂಕಟರಮಣ ಭಟ್ಟ- ಭಾಗೀರಥಿಯಮ್ಮನ ಮಗನಾಗಿ ಜನಿಸಿದರು. ಇದೀಗ ಇವರು ಪತ್ನಿ ಕುಮುದಮ್ಮ ಐವರು ಪುತ್ರರು, ಓರ್ವ ಪುತ್ರಿ ಅಲ್ಲದೆ ಅಸಂಖ್ಯ ಅಭಿಮಾನಿಗಳ ಸಮ್ಮುಖದಲ್ಲಿ ಬದುಕಿನ ಶತಮಾನವನ್ನು ಸಂಭ್ರಮಿಸಲು ಮುಂದಾಗಿದ್ದಾರೆ.

1943ರಲ್ಲಿ ಕಿನ್ನಿಗೋಳಿಯಲ್ಲಿ ಜರಗಿದ ಐದು ದಿನಗಳ ದೇವೀ ಮಹಾತ್ಮೆಯಲ್ಲಿ ಅನಿರೀಕ್ಷಿತವಾಗಿ ದೇವೀ ಪಾತ್ರ ನಿರ್ವಹಿಸಿದ್ದು ಪುರುಷೋತ್ತಮ ಭಟ್ಟರ ಬದುಕಿನ ಮಹತ್ವದ ಕ್ಷಣ. ಪುರುಷೋತ್ತಮ ಭಟ್ಟರ 'ದೇವೀ' ಪಾತ್ರದಲ್ಲಿ ಇದ್ದ ನೆಜತೆಗೆ ಕಲಾಭಿಮಾನಿಗಳು ಭಕ್ತಿ ಪರವಶರಾಗುತ್ತಿದ್ದರು. ದೇವಿ ಪ್ರತ್ಯಕ್ಷದ ಸಂದರ್ಭ ಪುಳಕಿತರಾಗಿ, ಜಯಘೋಷ, ಪ್ರಣಾಮಗಳಿಗೆ ಮುಂದಾಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳುತ್ತಾರೆ.

ಇವರು ದೇವಿ ಪಾತ್ರ ಅಲ್ಲದೆ ಇನ್ನೂ ಅನೇಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 'ನನಗೆ ದೇವಿ, ಕೆಕೇಯಿ, ಶಕುಂತಳೆ, ಮಂಡೋದರಿ, ಸೀತೆ, ಚಂದ್ರಮತಿ, ದ್ರೌಪದಿ, ಚಿತ್ರಾಂಗದೆ ಪಾತ್ರಗಳು ಹೆಸರು ಹಾಗೂ ಮಾನಸಿಕ ಸಂತೋಷ ನೀಡಿವೆ. ರಾಮ, ವಲಲ, ಚಂಡಾಮಕರ, ಬ್ರಹ್ಮಕಪಾಲದ ಬ್ರಹ್ಮ, ವಿಶ್ವಾಮಿತ್ರ, ದೂರ್ವಾಸ ಮುಂತಾದ ಪಾತ್ರಗಳು ಆನಂದ ಕೊಟ್ಟಿವೆ' ಎಂದು ಭಟ್ಟರು ಈಗಲೂ ಸ್ಮರಿಸುತ್ತಾರೆ.

ಆರಂಭದ ದಿನಗಳಲ್ಲಿ ಇವರ ಸ್ತ್ರೀ ಪಾತ್ರಗಳಿಗೆ ಮಹಿಳೆಯರೇ ಸಹಕರಿಸುತ್ತಿದ್ದರಂತೆ. ಶ್ರೀಮಂತರ ಆಟವಾದರೆ ಹೊಸ ಸೀರೆ ಕೊಟ್ಟು ಅವರೇ ಉಡಿಸುತ್ತಿದ್ದುದೂ ಇದೆ ಅನ್ನುವುದನ್ನು ಭಟ್ಟರ ನೆನಪು. ಅಳಿಕೆ ರಾಮಣ್ಣ ರೆಗಳು ಇವರ ಯಕ್ಷಗಾನದ ಗುರುಗಳು. ಯಕ್ಷಪಾತ್ರಧಾರಿಯಾಗಿ ಮುಂಬಯಿ - ಚೆನ್ನೈಗಳಲ್ಲಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ತಮಿಳಿನ ಮೇರುನಟ ಎಂ.ಜಿ.ಆರ್. ಚೆನ್ನೈನಲ್ಲಿ ಕೋಳ್ಯೂರರ ಅಜಮುಖಿ ಜೊತೆ ತನ್ನ ದೂರ್ವಾಸನ ಪಾತ್ರವನ್ನು ಕೊಂಡಾಡಿದ್ದನ್ನು ನೆನಪಿಸುತ್ತಾರೆ.

ಇವತ್ತಿಗೂ ಮೂರ‍್ನಾಲ್ಕು ಕಿಲೋಮೀಟರ್ ನಡೆದುಕೊಂಡು ಹೋಗಿ ಬರುವ ಭಟ್ಟರು ದೇವಿ, ಕೈಕೆ, ಶಕುಂತಲೆ, ಅಂಬೆ, ಮಂಡೋದರಿ, ಚಂದ್ರಮತಿ, ಸೀತೆ, ದ್ರೌಪದಿ, ಚಿತ್ರಾಂಗದೆ ಮುಂತಾದ ಪಾತ್ರಗಳಲ್ಲಿ ಪ್ರಸಿದ್ಧರಾಗಿದ್ದರು. 1970 ಮೇ 25ರಂದು ಮೇಳಕ್ಕೆ ವಿದಾಯ ಹೇಳಿದರು.

ಪೇಜಾವರ ಮಠದ ಹಿರಿಯ ಸ್ವಾಮೀಜಿ ಒಮ್ಮೆ ಆಟಕ್ಕೆ ಬಂದಿದ್ದರು. ರಾಮ ವನವಾಸಕ್ಕೆ ಹೋಗಬೇಕಾಗಿ ಬರುವ ಸಂದರ್ಭ, ಭಟ್ಟರು ಕೈಕೆಯಾಗಿ ಪಾತ್ರ ನಿರ್ವಹಿಸಿದ್ದರು. ಪ್ರಸಂಗದ ಭಾಗ ಮುಗಿದು ಹೊರಡುವ ವೇಳೆ ಸ್ವಾಮೀಜಿ ಕರೆದು ಹೇಳಿದರು. ’ಕಲ್ಲು ಸಿಗಲಿಲ್ಲ’ ಇಲ್ಲದಿದ್ದರೆ ಹೊಡೆಯುತ್ತಿದ್ದೆ ಎಂದರು. ಬಹುಶಃ ಕೈಕೆ ಪಾತ್ರ ಅಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿರಬೇಕು ಎಂದು ಖಷಿಪಟ್ಟುಕೊಳ್ಳುವ ಪುರುಷೋತ್ತಮ ಭಟ್ಟರು ರಾಮ, ವಲಲ, ಚಂಡಾಮರ್ಕ, ಬ್ರಹ್ಮಕಪಾಲದ ಬ್ರಹ್ಮ, ವಿಶ್ವಾಮಿತ್ರ, ದೂರ್ವಾಸ ಮುಂತಾದ ಪುರುಷ ಪಾತ್ರಗಳನ್ನೂ ನಿರ್ವಹಿಸಿದವರು. ಇಂತಹ ಕಡಂದೇಲು ಪುರುಷೋತ್ತಮ ಭಟ್ಟರಿಗೆ ಮುಕ್ಕಾಲು ಶತಮಾನದ ಹಿಂದಿನ ಯಕ್ಷಗಾನ ಪ್ರಪಂಚದ ಸಾಕ್ಷಿಯಾಗಿ ಇವತ್ತಿಗೂ ಅನೇಕ ಸಂಗತಿಗಳನ್ನು ಹೇಳುವ ಮಾಹಿತಿ ಕಣಜ.
ಕಡಂದೇಲು ಪುರುಷೋತ್ತಮ ಭಟ್ಟ
ಜನನ : ನವ೦ಬರ್ 5, 1913
ಜನನ ಸ್ಥಳ : ಪಾಣಾಜೆ ಗ್ರಾಮ
ಪುತ್ತೂರುತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ : ಮೂಲ್ಕಿ, ಕೊರಕ್ಕೋಡು, ಕೂಡ್ಲು, ಕಟೀಲು, ಇರಾ-ಕುಂಡಾವು ಮೇಳಗಳಲ್ಲಿ ಕಲಾವಿದರಾಗಿ ದುಡಿಮೆ.
ಪ್ರಶಸ್ತಿಗಳು:
ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿ, ಬೆಳುವಾಯಿಯ ಶ್ರೀ ಯಕ್ಷ ದೇವ ಪ್ರಶಸ್ತಿ, ಕಟೀಲು ದೇವಸ್ಥಾನ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ
ಮರಣ ದಿನಾ೦ಕ : ಜುಲೈ 5, 2014
ವಾರ್ ಫಂಡ್‌ಗಾಗಿ ಮುಲ್ಕಿ- ಕಟೀಲು ಮೇಳಗಳ ಜೋಡಾಟ ಬಜಪೆಯಲ್ಲಿ ನಡೆದಾಗ ಹೊಸಹಿತ್ಲು ಮಹಾಲಿಂಗ ಭಟ್ಟರ ತಂದೆ ಹೊಸಹಿತ್ಲು ಗಣಪತಿ ಭಟ್ಟರ ಜತೆ ಪ್ರಭಾವತಿ ಪಾತ್ರ ಇನ್ನೂ ಮರೆಯದ ನೆನಪು. ಈ ಆಟಕ್ಕೇ ಆಗಿನ ಕಲೆಕ್ಟರ್ ಸಹಿತ ಉನ್ನತೋನ್ನತ ಅಕಾರಿಗಳ ಉಪಸ್ಥಿತಿ ಇತ್ತು. ಮೂಲ್ಕಿ, ಕೊರಕ್ಕೋಡು, ಕೂಡ್ಲು, ಕಟೀಲು, ಇರಾ-ಕುಂಡಾವು ಮೇಳಗಳಲ್ಲಿ ತಿರುಗಾಡಿದ ಅನುಭವ.

ಯಾರ ಅನುಕರಣೆಯು ಇಲ್ಲದ ಪಾತ್ರ ಚಿತ್ರಣ,ರಂಗನಡೆ ಭಾವನತ್ಮಕ ಗಾಂಭಿರ್ಯ, ಚುಟುಕಾದ ಮಾತು ಇವರ ವಿಶೇಷ. ದೊಡ್ಡ ಸಾಮಗರ ಹರಿಶ್ಚಂದ್ರನಿಗೆ ಚಂದ್ರಮತಿಯಾಗಿ ನಿರ್ವಹಿಸಿದ್ದು 'ಹೊಟ್ಟೆ ತುಂಬಿದ ವೇಷ' ಎಂದು ಉದ್ಗರಿಸುತಾರೆ. ಗ್ಯಾಸ್ ಲೆಟ್‌ಗೂ ಮೊದಲು ಗ್ಲೋಬ್ ಲೆಟ್ ವ್ಯವಸ್ತೆಯಲ್ಲಿ ಮೈಕ್ ಇಲ್ಲದ ಕಾಲದಲ್ಲಿ ಇವರು ಪ್ರೇಕ್ಷಕರನ್ನು ರಂಜಿಸಿದ್ದರು.

ಪುರುಷೋತ್ತಮ ಭಟ್ಟರಿಗೆ ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿ, ಬೆಳುವಾಯಿಯ ಶ್ರೀ ಯಕ್ಷ ದೇವ ಪ್ರಶಸ್ತಿ, ಕಟೀಲು ದೇವಸ್ಥಾನ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ಓಂ ಮಾಯಲೀಲಾ, ಭಾಮಿನೀ ಷಟ್ಪದಿ ಯಲ್ಲಿ ’ಶ್ರೀ ದೇವಿ ಸ್ತುತಿ’ ಕೃತಿ ಪ್ರಕಟಿಸಿದ್ದಾರೆ. ಕಟೀಲು ದುರ್ಗೆಗೆ ಸಂಬಂಧಿಸಿದ ಭಕ್ತಿಗೀತೆ ಗಳ ಸಿಡಿ ಬಿಡುಗಡೆಯಾಗಿದೆ.****************

ಕಡಂದೇಲು ಪುರುಷೋತ್ತಮ ಭಟ್ಟರವರ ಕೆಲವು ಭಾವಚಿತ್ರಗಳುವಳವೂರುಗುತ್ತು ರಾಮಣ್ಣ ರೈ ಸಂಸ್ಮರಣಾ ಸಮಿತಿ ವತಿಯಿಂದ ಪುರುಷೋತ್ತಮ ಭಟ್ಟರಿಗೆ ಗೃಹಸಮ್ಮಾನ
ಕೃಪೆ : http://vijaykarnataka.com/ , http://shrikateelu.blogspot.in/ , http://jayakirana.com/


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ