ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಕಟೀಲು ಮೇಳಗಳ ಯಕ್ಷ ಪರ್ಯಟನೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ನವ೦ಬರ್ 9 , 2013
ನವ೦ಬರ್ 9 , 2013

ಕಟೀಲು ಮೇಳಗಳ ಯಕ್ಷ ಪರ್ಯಟನೆ

ಬಜಪೆ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಸನ್ನಿಧಿಯಲ್ಲಿ ಶುಕ್ರವಾರ ರಾತ್ರಿ ಅಕ್ಷರಶಃ ಯಕ್ಷಲೋಕವೇ ಅವಧರಿಸಿದಂತಿತ್ತು. ಕಟೀಲು ದಶಾವತಾರ ಯಕ್ಷಗಾನ ಮಂಡಳಿಗೆ ಈ ಬಾರಿ ಆರನೆಯ ಮೇಳ ಸಮರ್ಪಣೆಯಾಗಿದೆ. ಶ್ರೀ ದೇವಿಯ ದಿವ್ಯ ಸನ್ನಿಧಿಯಲ್ಲಿ ಸಾಂಪ್ರದಾಯಿ ಕವಾಗಿ ಗೆಜ್ಜೆ ಕಟ್ಟಿದ ಬಳಿಕ ಆರು ಮೇಳಗಳ ಯಕ್ಷ ತಿರುಗಾಟಕ್ಕೆ ಸಂಭ್ರಮದ ಮುನ್ನುಡಿ ಬರೆಯಲಾಯಿತು.

ರಥ ಬೀದಿಯಲ್ಲಿ ಅತ್ಯಾಕರ್ಷಕವಾಗಿ ನಿರ್ಮಿಸಲಾದ ಝಗಮಗಿಸುವ ಆರೂ ರಂಗಸ್ಥಳಗಳಲ್ಲಿ ಏಕಕಾಲದಲ್ಲಿ ಯಕ್ಷಗಾನ ಸಂಪನ್ನಗೊಳ್ಳುವುದು ಭಾವುಕ ಮನಗಳಿಗೆ ಮಹದಾನಂದ. ಏಕ ಕಾಲದಲ್ಲಿ ಆರು ಭಾಗವತರು, ಆರು ಚೆಂಡೆ-ಮದ್ಧಳೆ, ಹನ್ನೆರಡು-ಹದಿನೆಂಟು ಕಲಾವಿದರು ಸೇರಿದ್ದ ಜನಸಾಗರವನ್ನು ಮೋಡಿ ಮಾಡಿದರು.

ಆಟದ ಚೌಕಿ ದೇಗುಲಕ್ಕೆ ಸಮಾನ ಅಂತಾರೆ. ಇಲ್ಲಿ ಆಟ ಆರಂಭಕ್ಕೆ ಮುನ್ನ ಮೇಳದ ದೇವರಿಗೆ ಪೂಜೆ ನಡೆಯುತ್ತದೆ. ಬಳಿಕ ಯಜಮಾನರಾದಿಯಾಗಿ ಸೇವಾಕರ್ತರಿಗೆ ಪ್ರಸಾದ ವಿತರಣೆ ನಡೆಯುತ್ತದೆ. ನೀಡಿದ ಮಂತ್ರಾಕ್ಷತೆಯನ್ನು ಮೇಳದ ಎಲ್ಲ ಪರಿಕರಗಳಿಗೆ ಮುಟ್ಟಿಸಿ ಸಮರ್ಪಿಸಿದ ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪಾದಾರವಿಂದಕ್ಕೆ ಗೋವಿಂದಾ ಎನ್ನಿ ಗೋವಿಂದಾ ಎಂಬ ಉದ್ಗೋಷ ಮೊಳಗುತ್ತದೆ. ಬಳಿಕ ರಂಗಸ್ಥಳದಲ್ಲಿ ಪೂಜೆ ನಡೆದು ಯಕ್ಷಗಾನ ಪ್ರಾರಂಭ. ಆಟ ಮುಗಿದ ಬಳಿಕವೂ ಇಲ್ಲಿ ಚೌಕಿ ಪೂಜೆ ನಡೆಯುವುದು ಸಂಪ್ರದಾಯ. ಆರು ರಂಗಸ್ಥಳಗಳಲ್ಲಿ ಮುನ್ನೂರಕ್ಕೂ ಹೆಚ್ಚು ಕಲಾವಿದರು ಪ್ರಸಂಗದಲ್ಲಿ ಪ್ರಸ್ತುತರಾಗುತ್ತಾರೆ.

ಸಿಂಪಲ್ ಆಗಿ *ಆಟ-ಊಟ-ಪಾಠ*ಕ್ಕೆ ಕಟೀಲು ಹೆಸರುವಾಸಿ ಎನ್ನಬಹುದು. ಶನಿವಾರ ಬೆಳಗ್ಗೆ ಎಲ್ಲ ಆರೂ ಮೇಳಗಳು ಶುಭ ಮುಹೂರ್ತದಲ್ಲಿ ತಿರುಗಾಟಕ್ಕೆ ಹೊರಟಿವೆ.

ಕೃಪೆ : http://www.http://vijaykarnataka.indiatimes.com/


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
akarsh j shetty(6/17/2015)
1 idda mela ega 6 agi beledu nintide.kateelu meladalli uttama kalavidariddare.adare avarannu sariyagi niyojisilla.ondu meladalli tumba uttama kalavidariddare mattondu mela dalli illa.udaharanege 5 mattu 6 tumba uttama set galu.4 mattu 2ne set kooda swalpa uttama.1 ne set paravagilla.adare 3 ne mela swalpa sudharisikollabeku.
praveen(11/21/2013)
hwdu, nanu ide modala asala seveyaat nodoke hogidde, yako thayi sannidiyalli ervga nidreye barlilla, full belligge thanaka nodidde
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ