ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಯಕ್ಷಗಾನ ಮೂಲಸ್ವರೂಪ ಬದಲಿಸುವುದು ಸರಿಯಲ್ಲ:ಶಿವಾನಂದ ಹೆಗಡೆ ಕೆರೆಮನೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ನವ೦ಬರ್ 14 , 2013
ಯಾವುದೇ ಕಲಾಪ್ರಾಕಾರದ ಕುರಿತು ಚಿಂತನೆಗಳು,ಚರ್ಚೆಗಳು ಆಗಬೇಕಾದ ಅವಶ್ಯಕವಿದ್ದು ಆದರೆ ಅದರ ಆವರಣ ಹೊರತುಪಡಿಸಿ ಬದಲಾವಣೆ ಮಾಡುವುದು ಸೂಕ್ತವಲ್ಲ ಎಂದು ಗುಣವಂತೆಯ ಮಯ ಯಕ್ಷಗಾನ ಕೇಂದ್ರದ ನಿರ್ದೇಶಕ ಶಿವಾನಂದ ಹೆಗಡೆ ಕೆರಮನೆ ಹೇಳಿದರು.

ತಾಲೂಕಿನ ಭುವನಗಿರಿಯಲ್ಲಿ ಭುವನೇಶ್ವರಿ ತಾಳಮದ್ದಳೆ ಕೂಟ ಏರ್ಪಡಿಸಿದ್ದ ಎರಡು ದಿನಗಳ ತಾಳಮದ್ದಳೆ ಸಮ್ಮೇಳನ ಹಾಗೂ ರಜತ ಸಂಭ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

ಯಕ್ಷಗಾನದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿದ್ದು, ಪೌರಾಣಿಕ ಪ್ರಸಂಗಗಳ ಜಾಗದಲ್ಲಿ ಸಿನೆಮಾ ಕತೆಗಳು ಬರುತ್ತಿವೆ, ಪ್ರೇಕ್ಷಕರಿಗಾಗಿ ಈ ಬದಲಾವಣೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಪ್ರೇಕ್ಷಕರಿಗಾಗಿ ಯಕ್ಷಗಾನದ ಮೂಲಸ್ವರೂಪ ಬದಲಿಸುವುದು ಸರಿಯಲ್ಲ,ಕೆಲವೊಂದು ಪ್ರಾಕಾರಗಳು ಮೂಲ ಸ್ವರೂಪದಲ್ಲಿದ್ದರೆ ಚೆಂದ,ಪ್ರೇಕ್ಷಕರೂ ಅದನ್ನೇ ಒಪ್ಪುತ್ತಾರೆ ಎಂದು ಅವರು ಹೇಳಿದರು.

ತಾಳಮದ್ದಳೆಗೆ ಹಲವಾರು ಆಯಾಮಗಳಿದ್ದು,ಇದು ತರ್ಕ ಪ್ರಧಾನವೋ?ಭಾವ ಪ್ರಧಾನವೋ? ಎನ್ನುವ ಗೊಂದಲ ಬೇಡ. ಕೊನೆಯವರೆಗೆ ಪ್ರೇಕ್ಷಕರಿಗೆ ಮನರಂಜನೆ, ಚಿಂತನೆ ಹೆಚ್ಚಿಸುವ ರೀತಿಯಲ್ಲಿ ತರ್ಕ ಹಾಗೂ ಭಾವಗಳು ಇದ್ದರೆ ಅದು ಸಮಂಜಸ. ತಾಳಮದ್ದಳೆ ಒಂದು ವಿಶಿಷ್ಟ ಪ್ರಾಕಾರವಾಗಿದ್ದು, ಮಾತಿನಲ್ಲಿ,ಭಾವದಲ್ಲಿ ದಶ್ಯವನ್ನು ಕಟ್ಟಿಕೊಡುವುದು ಸುಲಭದ ಕೆಲಸವಲ್ಲ ಎಂದು ಅವರು ಹೇಳಿದರು.

ಯಕ್ಷಗಾನದ ಒಂದು ಕವಲಾದ ತಾಳಮದ್ದಳೆಯಲ್ಲಿ ಉ.ಕ. ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದಾರೆ ಆದರೆ ಹಿತ್ತಲ ಗಿಡ ಮದ್ದಲ್ಲ ಎಂಬ ನಾಣ್ಣುಡಿಯಂತೆ ನಾವು ದಕ್ಷಿಣಕನ್ನಡದ ಕಲಾವಿದರಿಗೆ ಮಣೆ ಹಾಕುತ್ತಿದ್ದೇವೆ. ನಮ್ಮಲ್ಲಿನ ಪ್ರತಿಭೆಗಳು ಬೆಳೆಯಲು ಅವಕಾಶ ಮಾಡಿಕೊಡಬೇಕು. ತಾಳಮದ್ದಳೆ ಅಚ್ಚ ಕನ್ನಡದ ಕಲೆಯಾಗಿದ್ದು ಅದನ್ನು ಉಳಿಸಿ ಬೆಳೆಸ ಬೇಕಾದ ಸಾಧ್ಯತೆಯನ್ನು ಅನುಕರಿಸಬೇಕು ಎಂದು ಅವರು ಹೇಳಿದರು.

ಸಮ್ಮೇಳನಾಧ್ಯಕ್ಷ ಪ್ರೊ.ಎಂ.ಎ. ಹೆಗಡೆ ದಂಟಕಲ್ ಸಮಾರೋಪದ ಅಧ್ಯಕ್ಷತೆವಹಿಸಿದ್ದರು. ಭುವನೇಶ್ವರಿ ದೇವಸ್ಥಾನದ ಅಧ್ಯಕ್ಷ ವಿ. ಎಸ್ ಹೆಗಡೆ ಸಾತನಕೇರಿವಹಿಸಿದ್ದರು. ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ,ಯಕ್ಷವಿದ್ವಾಂಸ ಜಿ.ಮಹಾಬಲೇಶ್ವರ ಭಟ್ಟ ನಡಗೋಡ ಸಮ್ಮೇಳನದ ಅವಲೋಕನ ಮಾಡಿದರು.

ಕೂಟದ ಹಿರಿಯ ಸದಸ್ಯ ಕಾಶ್ಯಪ ಪರ್ಣಕುಟಿ ಸ್ವಾಗತಿಸಿದರು. ಇನ್ನೋರ್ವ ಸದಸ್ಯ ಜಯರಾಮ ಭಟ್ಟ ಗುಂಜಗೋಡ ಪ್ರಾಸ್ತಾವಿಕ ಮಾತನಾಡಿದರು. ಗಣಪತಿ ಹೆಗಡೆ ಗುಂಜಗೋಡ ನಿರೂಪಿಸಿದರು.

ಯಶಸ್ವಿ ಸಮ್ಮೇಳನ ಭುವನೇಶ್ವರಿ ತಾಳಮದ್ದಳೆ ಕೂಟದವರು ಎರಡು ದಿನಗಳ ಕಾಲ ನಡೆಸಿದ ಸಮ್ಮೇಳನದಲ್ಲಿ ತಾಳಮದ್ದಳೆ ಮುಂದಿನ ತಲೆಮಾರಿಗೆ, ತಾಳಮದ್ದಳೆ ಸ್ವರೂಪ, ತಾಳಮದ್ದಳೆಯ ಹಿಮ್ಮೇಳ ಎಂಬ ಮೂರು ಗೋಷ್ಠಿಗಳನ್ನು ಆಯೋಜಿಸಲಾಗಿತ್ತು, ಪ್ರತಿಯೊಂದು ಗೋಷ್ಠಿಗೂ ಯಕ್ಷಗಾನದ ವಿದ್ವಾಂಸರನ್ನೆ ಆಯ್ಕೆ ಮಾಡಿದ್ದರಿಂದ ಗೋಷ್ಠಿಗಳು ತಾಳಮದ್ದಳೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಅನುಕೂಲವಾಗಿತ್ತು. ಪ್ರತಿದಿನ ತಾಳಮದ್ದಳೆಯನ್ನು ಆಯೋಜಿಸಿದ್ದರಿಂದ ಹಲವು ಖ್ಯಾತ ಅರ್ಥದಾರಿಗಳ ಮಾತನ್ನು ಆಸ್ವಾದಿಸುವ ಅವಕಾಶವು ಪ್ರೇಕ್ಷಕರಿಗಾಗಿತ್ತು.

ಭುವನೇಶ್ವರಿ ತಾಳಮದ್ದಳೆ ಕೂಟದ ಸದಸ್ಯರಲ್ಲದೆ ಭುವನೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ,ಗುಂಜಗೋಡಿನ ಅಶೋಕ ಯುವಕ ಸಂಘದವರು ಸಮ್ಮೇಲನದ ಯಶಸ್ಸಿಗೆ ಶ್ರಮಿಸಿದರು. ಒಟ್ಟಿನಲ್ಲಿ ಭಾರತೀಯ ಕಲಾಪ್ರಾಕಾರದಲ್ಲಿ ಒಂದಾದ ತಾಳಮದ್ದಳೆಯನ್ನು ಉಳಿಸಿ,ಬೆಳೆಸುವುದರಲ್ಲಿ ಈ ಸಮ್ಮೇಳನ ಗನಾರ್ಹ ಹೆಜ್ಜೆಯನ್ನೇ ಇಟ್ಟಿದೆ ಎನ್ನಬಹುದು.ಕೃಪೆ : http://www.vijaykarnataka.com

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ