ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಸಿಧ್ಧಿಯ ನೆಲೆಯಲ್ಲಿ ಗುರುತಿಸಲ್ಪಡುವ ಕಲಾವಿದ ಕಪ್ಪೆಕೆರೆ ಮಹಾದೇವ ಹೆಗಡೆ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಬುಧವಾರ, ಡಿಸೆ೦ಬರ್ 18 , 2013

ಸಿಧ್ಧಿಯೂ ಇಲ್ಲದೆ ಸಾಧನೆಯೂ ಇಲ್ಲದೆ ಕೇವಲ ಯೋಗದಿಂದಲೆ ಯೋಗ್ಯತೆಯಿಲ್ಲದೆ ಪ್ರಸಿಧ್ಧಿಗೆ ಬರುವವರು ಬಹಳಷ್ಟು ಮಂದಿ ಕಲಾವಿದರು ನಮ್ಮ ಮುಂದಿದ್ದಾರೆ. ಬಡಗುತಿಟ್ಟಿನ ಯಕ್ಷಗಾನ ರಂಗದ ಹಿಮ್ಮೇಳ ಹಾಗು ಮುಮ್ಮೇಳಗಳೆರಡಕೂ ಗಣನೀಯ ಕೊಡುಗೆ ನೀಡಿದ ಉತ್ತರ ಕನ್ನಡ ಜಿಲ್ಲೆಯ ಕಪ್ಪೆಕೆರೆ ಕುಟು೦ಬದ ಕಲಾವಿದರು ಸಿಧ್ಧಿಯ ನೆಲೆಯಲ್ಲಿ ಗುರುತಿಸಲ್ಪಡುವ ಕಲಾವಿದರು. ಅಪ್ರತಿಮ ಕಲಾಸಿಧ್ಧಿಯಿಂದ ಮತ್ತು ಸ್ವಸಾಧನೆಯಿಂದ ಯಕ್ಷಗಾನ ರಂಗದಲ್ಲಿ ತಮ್ಮದೆ ಆದ ಛಾಪನ್ನು ಒತ್ತಿದವರು ಇದೆ ಕುಟುಂಬದ ಕಪ್ಪೆಕೆರೆ ಮಹಾದೇವ ಈಶ್ವರ ಹೆಗಡೆಯವರು.

ಹೊನ್ನಾವರ ತಾಲೂಕಿನ ಹಡಿನಬಾಳ ಎಂಬಲ್ಲಿ 1950ರಲ್ಲಿ ‌ಈಶ್ವರ ಹೆಗಡೆ ಮತ್ತು ಗೋಪಿ ದಂಪತಿಗಳ ಸುಪುತ್ರನಾಗಿ ಜನಿಸಿದ ಮಹಾದೇವ ಹೆಗಡೆಯವರಿಗೆ ಈಗ 61ರ ಹರೆಯ. ಪ್ರೌಡ ಶಿಕ್ಷಣ ಪಡೆದ ಇವರು ತನ್ನ 18ನೇ ವಯಸ್ಸಿನಲ್ಲಿ ಬಣ್ಣದ ಲೋಕ ಪ್ರವೇಶಿಸಿದ ಶಿಷ್ಟ ಕಲಾವಿದರು. ಹೆಗಡೆಯವರ ಕುಟುಂಬವೇ ಒಂದು ಯಕ್ಷಗಾನ ಮೇಳವೆಂಬಂತಿತ್ತು. ಇವರ ತಾಯಿಯ ತಂದೆ ಯಕ್ಷಗಾನದ ಮಹಾನ್ ಕಲಾವಿದರು. ಹಾಗಾಗಿ ಅಜ್ಜನ ವರ್ಚಸ್ಸು ಮೊಮ್ಮಗನ ಮೇಲೆ ಗಾಢ ಪರಿಣಾಮ ಬೀರಿತು. ಇವರ ಅಣ್ಣ ಕಪ್ಪೆಕೆರೆ ಸುಬ್ರಾಯ ಭಾಗವತರು ಹೆಸರಾಂತ ಭಾಗವತರಾಗಿದ್ದು ಅಮೃತೇಶ್ವರಿ ಮೇಳದಲ್ಲಿ ನಾರ್ಣಪ್ಪ ಉಪ್ಪೂರರ ಸಹವರ್ತಿಯಾಗಿದ್ದು ಹೆಸರು ಮಾಡಿದ್ದರು.

ಅಭಿನವ ಮಹಾಬಲ ಹೆಗಡೆಯವರೆಂದೇ ಯಕ್ಷಗಾನ ವಲಯದಲ್ಲಿ ಗುರುತಿಸಲ್ಪಟ್ಟ ಹೆಗಡೆಯವರನ್ನು ಮಹಾಬಲ ಹೆಗಡೆಯವರ ಉತ್ತರಾಧಿಕಾರಿಯಾಗಿ ಜನ ಗುರುತಿಸಿದ್ದಾರೆ. ಅವರ ರಂಗದ ನೆಡೆ, ಆಳ್ತನ ವೇಷದ ಆಕಾರ ನಿಲುವುಗಳಲ್ಲಿ ಮಹಾಬಲ ಹೆಗಡೆಯವರ ವೇಷದ ಛಾಯೆಯನ್ನು ಗುರುತಿಸಬಹುದಾಗಿದೆ. ಇದಕ್ಕೂ ಕಾರಣ ಇಲ್ಲದಿಲ್ಲ. ಸ್ವತಹ ಮಹಾಬಲ ಹೆಗಡೆಯವರ ಗರಡಿಯಲ್ಲಿ ಪಳಗಿದ ಇವರು ಅವರೊಂದಿಗೆ ಇಡಗುಂಜಿ, ಶಿರಸಿ, ಕಮಲಶಿಲೆ, ಮುಂತಾದ ಮೇಳಗಳಲ್ಲಿ ದೀರ್ಘ ಕಾಲ ತಿರುಗಾಟ ಮಾಡಿದ್ದಾರೆ.

ಭೀಷ್ಮ, ಅಶ್ವತ್ಥಾಮ, ವಲಲ ಮುಂತಾದ ಇವರ ಪಾತ್ರಗಳು ಮಹಾಬಲ ಹೆಗಡೆಯವರ ಪಡಿಯಚ್ಚು ಎನ್ನಬಹುದಾಗಿದೆ. ನಾಯಕ ಪ್ರತಿನಾಯಕ ಎರಡೂ ಪಾತ್ರಗಳನ್ನು ಸಮಾನವಾಗಿ ತೆಗೆದುಕೊಂಡ‌ ಇವರ ಭೀಮ, ವಲಲ, ಸುಗ್ರೀವ, ವಾಲಿ. ರಾಮ, ಮಹೋಗ್ರ, ಜಮದಗ್ನಿ, ರಾವಣ, ಮಾಗದ, ಹರಿಶ್ಚಂದ್ರ, ವಿಶ್ವಾಮಿತ್ರ ಮುಂತಾದ ಪಾತ್ರಗಳು ಪ್ರೇಕ್ಷಕರ ಕಣ್ಣಲ್ಲಿ ಅಚ್ಚೊತ್ತಿದೆ. ಪ್ರಖರವಾದ ಪ್ರತ್ಯುತ್ಪನ್ನತೆ. ಪಾಂಡಿತ್ಯದ ಅರ್ಥಗಾರಿಕೆ, ಪಾತ್ರ ಪಂಚಾಂಗ, ಗ೦ಭೀರ ನಿಲುವುಗಳು ಪುರಾಣದ ಪಾತ್ರಗಳಿಗೆ ಹೊಸ ಹುಟ್ಟು ನೀಡಿದೆ.

ಸುದೀರ್ಘ 40 ವರ್ಷ ಕಲಾಸೇವೆ ಮಾಡಿರುವ ಇವರು ಸದ್ಯ ಬಡಗುತಿಟ್ಟಿನ ಮಂದಾರ್ತಿ ಒಂದನೇ ಮೇಳದ ಪ್ರಧಾನ ಎರಡನೆ ವೇಷದಾರಿಯಾಗಿ ಸೇವೆ ಸಲ್ಲಿಸುತಿದ್ದಾರೆ. ಸದಾ ಹಸನ್ಮುಖಿಯಾದ ಇವರು ಸರ್ವ ಕಲಾವಿದರ ನೆಚ್ಚಿನ ಕಲಾವಿದರು. ಶಿರಸಿ ಮಾರಿಕಾಂಬ ಮೇಳವನ್ನು ಎರಡು ವರುಷ ಸಂಚಾಲಕರಾಗಿ ನಡೆಸಿದ ಇವರು ಯಜಮಾನಿಕೆಯ ಸಿಹಿ ಕಹಿಯನ್ನು ಸಹ ಉಂಡವರು. ಬಣ್ಣದ ವೇಷ ಸ್ತ್ರೀವೇಷಗಳನ್ನು ಸಹ ಮಾಡಿದ ಇವರು ಗುರುಗಳಾಗಿ ನೂರಾರು ಕಲಾವಿದರನ್ನು ರೂಪಿಸಿದ್ದಾರೆ. ಪತ್ನಿ ಶಾರದೆ ನಾಲ್ವರು ಗಂಡು ಮಕ್ಕಳ ಚೊಕ್ಕ ಸಂಸಾರ ಇವರದ್ದು. ಹೆಗಡೆಯವರ ಕಲಾಸಿರಿಗೆ ನಾಡಿನ ಹಲವಾರು ಸಂಘ ಸಂಸೆಗಳು ಬಿರುದು ನೀಡಿ ಸನ್ಮಾನಿಸಿವೆ.

ಕಪ್ಪೆಕೆರೆ ಮಹಾದೇವ ಈಶ್ವರ ಹೆಗಡೆ
ಜನನ : 1950
ಜನನ ಸ್ಥಳ : ಹಡಿನಬಾಳ
ಹೊನ್ನಾವರ ತಾಲೂಕು
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ : ಇಡಗುಂಜಿ, ಶಿರಸಿ, ಕಮಲಶಿಲೆ, ಮುಂತಾದ ಮೇಳಗಳಲ್ಲಿ ದೀರ್ಘ ಕಾಲ ದುಡಿಮೆ.
ಪ್ರಶಸ್ತಿಗಳು:
ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ


****************

ಕಪ್ಪೆಕೆರೆ ಮಹಾದೇವ ಈಶ್ವರ ಹೆಗಡೆಯವರ ಕೆಲವು ಛಾಯಾಚಿತ್ರಗಳು








Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
gopalakrishna karanth k(5/3/2014)
Ivara vesha brahmakapalada eshwara idagunjimeladalli shambu hegadeyavara gantalu ketta dina koteshwaradalli nodiddu ennu nenspide. Devaru nimmannu chennagittirali
dr.s.govinda bhat(12/19/2013)
I feel that this artiste has not received the recognition which he should have received. Really one of the greatest artistes. Thanks for introducing Kappekere.




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ