ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ವ್ಯಕ್ತಿ ವಿಶೇಷ
Share
ಹಿರಿಯ ಪ್ರಸಾದನ ತಜ್ಞ ಹಂದಟ್ಟು ಗೋವಿಂದ ಉರಾಳ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶನಿವಾರ, ಜನವರಿ 18 , 2014

ಅಂಬಲಪಾಡಿ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಬಡಗುತಿಟ್ಟಿನ ಹಿರಿಯ ಪ್ರಸಾದನ ಕಲಾವಿದ, ಭಾಗವತ, ಗುರು ಹಂದಟ್ಟು ಗೋವಿಂದ ಉರಾಳರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಜ. 26ರವಿವಾರ ಕಲಾಮಂಡಳಿಯ ವಾರ್ಷಿಕೋತ್ಸವದಂದು ನೆರವೇರಲಿದೆ.

ಉಡುಪಿ ತಾಲೂಕು ಕೋಟದಲ್ಲಿ ಮಾದವ ಉರಾಳ ಮತ್ತು ಇಂದಿರಮ್ಮ ದಂಪತಿಗಳ ಪುತ್ರನಾಗಿ 1950ರಲ್ಲಿ ಜನಿಸಿದ ಗೋವಿಂದ ಉರಾಳರು ಯಕ್ಷಗಾನದ ವಿವಿದ ಅಂಗಗಳಲ್ಲಿ ಪರಿಣತಿ ಪಡೆದ ಬಹುಮುಖಿ ಕಲಾವಿದರು. ಬೇಸಾಯ, ಭಾಗವತಿಕೆ, ಪ್ರಸಾದನ, ತರಭೇತಿ, ನಿರ್ದೇಶನ ಹೀಗೆ ವಿವಿದ ಕ್ಷೇತ್ರಗಳಲ್ಲಿ ಪರಿಣತಿ ಪಡೆದವರು. ಹಿರಿಯ ಭಾಗವತ ಗೋರ್ಪಾಡಿ ವಿಠಲ ಪಾಟೀಲ ಮತ್ತು ಮದ್ದಳೆಯ ಕಾರಂತರಿಂದ ತಾಳ ನೃತ್ಯ ಅಭ್ಯಾಸ ಮಾಡಿದ ಇವರು ಯಕ್ಷ ತರಂಗ ಕೋಟ, ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಮಣೂರು, ಕಲಾಪೀಠ ಕೋಟ, ರಾಮ ಪ್ರಸಾದ ಯಕ್ಷಗಾನ ಮಂಡಳಿ ಕೋಡಿ ಕನ್ಯಾಣ, ಮುಂತಾದ ಸಂಸ್ಥೆಗಳಲ್ಲಿ ಭಾಗವತರಾಗಿ ದುಡಿದಿದ್ದಾರೆ.

ತನ್ನದೇ ಆದ ಪ್ರಸಾದನ ಸಂಸ್ಥೆಯನ್ನು ಸ್ಥಾಪಿಸಿ ಉರಾಳ ಬಳಗ ಎಂಬ ಹೆಸರಿನಲ್ಲಿ ನಾಡಿನಾದ್ಯಂತ ಶಾಲಾ ಕಾಲೇಜುಗಳಿಗೆ ಸಂಘ ಸಂಸ್ಥೆಗಳಿಗೆ ವೇಷ ಭೂಷಣ ನಾಟಕ ಹಾಗೂ ಯಕ್ಷಗಾನ ಕಾರ್ಯಕ್ರಮಗಳಿಗೆ ನೀಡಿ ಮನೆ ಮಾತಾಗಿದ್ದಾರೆ. ಉಡುಪಿ ಜಿಲ್ಲಾ ಪಂಚಾಯತ್‌ ಶಾಲೆಗಳಾದ ಬೇಳೂರು, ಮೂಡುಗಿಳಿಯಾರು, ಕಾರ್ಕಡ, ಚಿತ್ರಪಾಡಿ, ಗುಂಡ್ಮಿ, ವಡ್ದರ್ಸೆ, ತೆಕ್ಕಟ್ಟೆ, ಬಾರ್ಕೂರು ಜಾನುವಾರುಕಟ್ಟೆ, ಮಾಬುಕಳ, ಆವರ್ಸೆ, ಉಳ್ತೂರು ಮುಂತಾದ ಕಡೆ, ವಿವೇಕ ಹೈಸ್ಕೂಲ್ ಕೋಟ, ಭಂಡಾರ್ ಕಾರ್ಸ್ ಕಾಲೇಜು, ಕುಂದಾಪುರ, ಕೊರವಡಿ ಬನ್ನಾಡಿ ಮದುವನ, ಮುಂತಾದ ಕಡೆ ಶಾಲಾ ಮಕ್ಕಳಿಗೆ ಯಕ್ಷಗಾನ ತರಭೇತಿ ನೀಡುತಿದ್ದಾರೆ. ಸಿದ್ದೇಶ್ವರ ಯಕ್ಷರಂಗ ಬನ್ನಾಡಿ, ಕೆದೂರು ಯುವಕ ಮಂಡಳ, ಗೆಳೆಯರ ಬಳಗ ಕಾರ್ಕಡ ಕಲಾಪೀಠ ಕೋಟ ಸಹಿತ ಹಲವಾರು ಸಂಸ್ಥೆಗಳಲ್ಲಿ ಯಕ್ಷಗಾನ ಗುರುಗಳಾಗಿ ಸೇವೆ ಸಲ್ಲಿಸುತಿದ್ದಾರೆ.

ಕರಾವಳಿ ಯಕ್ಷಗಾನ ಸಮ್ಮೇಳನ, ಕಲ್ಯಾಣೋತ್ಸವ ಶಿವಮುಗ್ಗ, ಪೂರ್ಣಚಂದ್ರ ಕಲಾ ಪ್ರತಿಷ್ಟಾನ ಕೊಂಡದಕುಳಿ ಯಕ್ಷಗಾನ ಪ್ರಸಾದನ ಕಾರ್ಯಾಗಾರ ಮುಂತಾದ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಾಗವಹಿಸಿದ ಇವರು, ವಿಶ್ವಕರ್ಮ ಕಲಾವೃ೦ದ ಸಾಲಿಗ್ರಾಮ, ಜನಾರ್ದನ ಯಕ್ಷಗಾನ ಸಂಘ ಉಪ್ರಳ್ಳಿ, ಗಣೇಶೋತ್ಸವ ಸಮಿತಿ ಸಾಸ್ತಾನ, ಲಾವಣ್ಯ ಬೈಂದೂರು, ಉಡುಪಿ ಜಿಲ್ಲಾ ಬ್ರಾಹ್ಮಣ ಸಮಿತಿ ಸಾಲಿಗ್ರಾಮ, ತಂತ್ರಾಡಿ ಮಕ್ಕಳ ಮೇಳ ಸಹಿತ ಹಲವಾರು ಕಡೆ ಸನ್ಮಾನಿತರಾಗಿದ್ದಾರೆ. ಸದಾ ನಗುಮುಖದಿಂದ ತರಬೇತಿ ನೀಡುವ ಇವರು ಯಕ್ಷಗಾನ ವಲಯದಲ್ಲಿ ಅಜಾತಶತ್ರುವಾಗಿ ಗುರುತಿಸಿಕೊಂಡಿದ್ದಾರೆ.

ಹಂದಟ್ಟು ಗೋವಿಂದ ಉರಾಳ
ಜನನ : 1950
ಜನನ ಸ್ಥಳ : ಕೋಟ, ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ವೃತ್ತಿ, ಸಾಧನೆ:
ಬಹುಮುಖಿ ಕಲಾವಿದರು, ಬೇಸಾಯ, ಭಾಗವತಿಕೆ, ಪ್ರಸಾದನ, ತರಭೇತಿ, ನಿರ್ದೇಶನ ಹೀಗೆ ವಿವಿದ ಕ್ಷೇತ್ರಗಳಲ್ಲಿ ಪರಿಣತಿ.

ಪ್ರಶಸ್ತಿಗಳು:
ಹಲವಾರು ಸ೦ಘ-ಸ೦ಸ್ಥೆಗಳಿ೦ದ ಪ್ರಶಸ್ತಿಗಳು ಹಾಗೂ ಸನ್ಮಾನ


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ