ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಾಂಗಣದಲ್ಲಿ ನೃತ್ಯ ನಾಟಕಗಳ ಭರಪೂರ ಸೊಬಗು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಜನವರಿ 23 , 2014
ಜನವರಿ 23, 2014

ಯಕ್ಷಾಂಗಣದಲ್ಲಿ ನೃತ್ಯ ನಾಟಕಗಳ ಭರಪೂರ ಸೊಬಗು

ಹೊನ್ನಾವರ: ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ನಡೆಯುತ್ತಿರುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ನಾಲ್ಕನೇ ದಿನವೂ ಕಲಾಸಕ್ತರಿಗೆ ಗಾಯನ, ನತ್ಯ ನಾಟಕಗಳ ಸೊಬಗು ಉಣ ಬಡಿಸಿತು. ದಿನಕ್ಕಿಂತ ಹೆಚ್ಚು ಸಂಖ್ಯೆಯಲ್ಲಿಮ ಕಿಕ್ಕರಿದು ಪ್ರೇಕ್ಷಕರು ಸೇರಿದ್ದರು.

ಬೆಳಿಗ್ಗೆ 10 ಗಂಟೆಗೆ ರವಿ ಅಲೆವೊರಾಯ ವರ್ಕಾಡಿಯವರಿಂದ ನಡೆದ ಸ್ತ್ರೀ ಪಾತ್ರ ಕೇಂದ್ರೀಕತ ಏಕವ್ಯಕ್ತಿ ಯಕ್ಷಗಾನ ಯಕ್ಷಗಾನ ಕಲಾ ಪ್ರೇಮಿಗಳ ಮನ ಸೂರೆಗೊಂಡಿತು. ಬೆಳಿಗ್ಗೆ ಮಿತ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರು ಅಧ್ಯಯನ ಮುಖಿಯಾಗಿರುವ ಇಂಥ ಕಾರ್ಯಕ್ರಮಗಳನ್ನು ಸಂಘಟಿಸಿರುವ ಕರೆಮನೆ ಶಿವಾನಂದ ಹೆಗಡೆಯವರ ಪ್ರಯತ್ನವನ್ನು ಪ್ರಶಂಸಿಸಿದರು. ಸಂಜೆ ಎಂದಿನಂತೆ ಮೊದಲು ಸಭಾ ಕಾರ್ಯಕ್ರಮ, ಸನ್ಮಾನ ನಡೆದವು.

ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡವು. ಅಷ್ಟುಹೊತ್ತಿಗಾಗಲೇ ಸಂಭಾಂಗಣ ಪ್ರೇಕ್ಷಕರಿಂದ ತುಂಬಿಹೋಯಿತು. ಮೊದಲು ಖ್ಯಾತ ಹಿಂದೂಸ್ಥಾನಿ ಗಾಯಕ ಪಂ. ಶ್ರೀಪಾದ ಹೆಗಡೆ ಕಂಪ್ಲಿಯವರು ಹಿಂದೂ ಸ್ಥಾನಿ ಶಾಸ್ತ್ರೀಯ ಸಂಗೀತ ಗಾಯನ ಸುಧೆ ಹರಿಸಿದರು. ಅವರಿಗೆ ನಾಗವೇಣಿ ಶ್ರೀಪಾದ ಹೆಗಡೆ ಕಂಪ್ಲಿ ಹಾರ್ಮೋನಿಯಂ ಸಾಥ್, ಬೆಂಗಳೂರಿನ ಗುರುಮೂರ್ತಿ ವೆದ್ಯ ತಬಲಾ ಸಾಥ್ ಉತ್ತಮವಾಗಿ ನೀಡಿದರು. ನಂತರ ಸಾಗರದ ನಾಟ್ಯ ತರಂಗ ಟ್ರಸ್ಟ್ ತಂಡದಿಂದ ನತ್ಯ ರೂಪಕ. ಮುಕ್ಕಾಲು ಗಂಟೆಗಿಂತಲೂ ಹೆಚ್ಚು ಕಾಲ ನಡೆದ ನತ್ಯ ರೂಪಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿತು.

ನಂತರದ ಸರದಿ ಹೆದರಾಬಾದಿನ ವೆಂಕಟೇಶ್ವರ ನಾಟ್ಯ ಮಂಡಳಿ ಸುರಭಿ ತಂಡದವರಿಂದ ಪಾತಾಳ ಬೆರವಿ ನಾಟಕ ಪ್ರದರ್ಶನ. ಅಲ್ಲಿಯ ಭಾಷೆ ಇಲ್ಲಯವರಿಗೆ ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟವಾಯಿತು. ಆದರೆ ಭಾಷಾ ಭಿನ್ನತೆ ಮೀರಿ ನಾಟಕ ಜನಮನ ಸೂರೆಗೊಂಡಿತು. ಅಭಿನಯ, ನಾಟಕದ ಪರಿಕರಗಳ ಜೋಡಣೆ, ವೇಷಭೂಷಣ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಕೃಪೆ : http://www.vijaykarnataka.com

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ