ಮೋಹನದಾಸ ಶೆಣೈಗೆ ಭೋಜಪ್ಪ ಸುವರ್ಣ ಪ್ರಶಸ್ತಿ
ಲೇಖಕರು : ಕನ್ನಡಪ್ರಭ
ಬುಧವಾರ, ಜನವರಿ 22 , 2014
|
ಜನವರಿ 22, 2014
|
ಮೋಹನದಾಸ ಶೆಣೈಗೆ ಭೋಜಪ್ಪ ಸುವರ್ಣ ಪ್ರಶಸ್ತಿ
ಉಡುಪಿ :
ಉಡುಪಿ- ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರ ವತಿಯಿಂದ ನೀಡಲಾಗುವ ಸಂಘ ಸ್ಥಾಪಕ ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿಗೆ ಬಡಗುತಿಟ್ಟಿನ ಪ್ರಸಿದ್ಧ ಎರಡನೇ ವೇಷಧಾರಿ ಆರ್ಗೋಡು ಮೋಹನದಾಸ ಶೆಣೈ ಆಯ್ಕೆಯಾಗಿದ್ದಾರೆ.
ಭಾಗವತ ಆರ್ಗೋಡು ಗೋವಿಂದರಾಯ ಶೈಣೈ ಮತ್ತು ಮಹಾಬಲ ದೇವಾಡಿಗರಲ್ಲಿ ಯಕ್ಷಗಾನ ಅಭ್ಯಾಸ ಮಾಡಿರುವ ಮೋಹನದಾಸ ಶೆಣೈ ಹಿರಿಯಡಕ, ಸಾಲಿಗ್ರಾಮ, ಮೂಲ್ಕಿ, ಪೆರ್ಡೂರು, ಶಿರ್ಸಿ, ಮಂದಾರ್ತಿ, ಕಮಲಶಿಲೆ ಮೇಳಗಳಲ್ಲಿ ದುಡಿದಿದ್ದು, ಪ್ರಸ್ತುತ ಅಮೃತೇಶ್ವರೀ ಮೇಳದಲ್ಲಿ ಎರಡನೇ ವೇಷಧಾರಿಯಾಗಿ ಕಲಾಸೇವೆ ಮಾಡುತ್ತಿದ್ದಾರೆ. ಪ್ರಶಸ್ತಿಯನ್ನು ಫೆಬ್ರವರಿಯಲ್ಲಿ ಜರುಗಲಿರುವ ಕಲಾಕ್ಷೇತ್ರದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಕಾರ್ಯದರ್ಶಿ ಬೆಲ್ಪತ್ರೆ ಕೇಶವ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಪೆ :
http://www.kannadaprabha.com
|
|
|