ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ವ್ಯಕ್ತಿ ವಿಶೇಷ
Share
ಯಕ್ಷ ಸಾಧಕ ಕೋಲ್ಯಾರು ರಾಜು ಶೆಟ್ಟಿ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಫೆಬ್ರವರಿ 2 , 2014

ಉಡುಪಿ ಜಿಲ್ಲೆಯ ಕುಗ್ರಾಮವೊಂದರಲ್ಲಿ ಜನಿಸಿ ಐವತ್ತು ವರ್ಷಗಳ ಹಿಂದೇಯೇ ದೂರದ ಮುಂಬೈ ಸೇರಿ ಕಡು ಬಡತನದಲ್ಲೇ ಮಹಾನ್ ಸಾಧಕನಾಗಿ, ಕವಿಯಾಗಿ , ಪ್ರಸಂಗಕರ್ತನಾಗಿ, ತಾಳ ಮದ್ದಳೆ ಅರ್ಥಧಾರಿಯಾಗಿ, ಮೆರೆದ ಹಿರಿಯ ಚೇತನ ಕೊಲ್ಯಾರು ರಾಜು ಶೆಟ್ಟರ ಜೀವನ ಚರಿತ್ರೆಯೇ ಬರೆದರೆ ಒಂದು ಪ್ರಸಂಗವಾದೀತು.

ಬಾಲ್ಯ , ಶಿಕ್ಷಣ, ಯಕ್ಷಗಾನ ಕಲಾಸಕ್ತಿ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲೂಕಿನ ಭೊಮ್ಮರಬೆಟ್ಟು ಗ್ರಾಮದ ಮೇಲುಕೊಲ್ಯಾರು ಪಡುಮನೆ ಅಬ್ಬಕ್ಕ ಶೆಡ್ತಿ, ಮತ್ತು ನಾವೆರ್ ಕೋಡ್ ಶೀನ ಶೆಟ್ಟಿಯವರ ದ್ವಿತೀಯ ಪುತ್ರನಾಗಿ 1944ರಲ್ಲಿ ಜನಿಸಿದ ರಾಜು ಶೆಟ್ಟರಿಗೆ ಈಗ 68ರ ಹರೆಯ . ಪ್ರಾಥಮಿಕ ಅಬ್ಯಾಸವನ್ನು ಪೆರ್ಡೂರು ಮಿಶನ್ ಶಾಲೆಯಲ್ಲಿ ಪ್ರಾರಂಬಿಸಿ ಬೋರ್ಡ್ ಹಾಯರ್ ಎಲಿಮೆಂಟರಿ ಶಾಲೆ ಹಿರಿಯಡ್ಕ ಇಲ್ಲಿ ನಾಲ್ಕನೇ ತರಗತಿಯಲ್ಲಿ ಉತ್ತೀರ್ಣರಾಗುತ್ತಲೇ ಶಾಲೆ ಸ್ಥಗಿತವಾಗಿ ಕಡು ಬಡತನದಲ್ಲೇ 1952ರಲ್ಲಿ ತನ್ನ ಹದಿಮೂರನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಪುನಾ ನಗರ ಸೇರಿ ಹೋಟೆಲ್ ನಲ್ಲಿ ಬಾಲಕಾರ್ಮಿಕನಾಗಿ ಕೆಲಸಕ್ಕೆ ಸೇರಿದರು. ಎಲ್ಲವನ್ನು ತಿಳಿಯುವ ಕುತೂಹಲ ಉತ್ತಮ ಸ್ಮರಣ ಶಕ್ತಿಯಿಂದಾಗಿ ಅಲ್ಪಾವಧಿಯಲ್ಲೇ ಅಲ್ಲಿಯ ಆಡು ಭಾಷೆಯಾದ ಮರಾಠಿ ಓದಲು ಬರೆಯಲು ಕಲಿತುದಲ್ಲದೆ ಮರಾಠಿಯ ಉತ್ತಮ ಲೇಖಕರ ಕೃತಿಗಳ ಅಧ್ಯಯನವನ್ನೂ ಮಾಡಿದರು.

1959ರಲ್ಲಿ ಮುಂಬಯಿಗೆ ಬಂದ ಶೆಟ್ಟರು ಹೋಟೆಲ್ ಉದ್ಯಮದ ಜೊತೆಯಲ್ಲಿ ಹಿಂದಿ, ಇಂಗ್ಲೀಷ್, ಭಾಷೆಗಳನ್ನು ಕಲಿತದ್ದು ಮಾತ್ರವಲ್ಲದೆ ಕನ್ನಡದ ಲಕ್ಷ್ಮೀಶ, ರಾಘವಾಂಕ, ಕುಮಾರವ್ಯಾಸ, ಮೊದಲಾದ ಕವಿಗಳ ಗ್ರಂಥಗಳನ್ನು ತನ್ನ ಬಿಡುವಿನ ವೇಳೆಯಲ್ಲಿ ಆಳವಾದ ಅಧ್ಯಯನ ನಡೆಸಿ ಯಕ್ಷಗಾನ ಸಂಘ ಸಂಸ್ಥೆಗಳಲ್ಲಿ ಸದಸ್ಯನಾಗಿ ತೆಂಕು-ಬಡಗುತಿಟ್ಟುಗಳ ನಾಟ್ಯ, ಸಾಹಿತ್ಯ ಅಭ್ಯಾಸಮಾಡಿ ಉತ್ತಮ ತಾಳ ಮದ್ದಳೆ ಅರ್ಥಧಾರಿಗಳಾಗಿ ಮೂಡಿಬಂದರು. ಯಕ್ಷಗಾನ ಬಯಲಾಟದಲ್ಲಿ ಚಾರಿತ್ರಿಕ ಪಾತ್ರಗಳನ್ನು ನಿರ್ವಹಿಸಿ ಪ್ರಸಿಧ್ಧಿ ಪಡೆದರು. ರಾಮಾಯಣ, ಮಹಾಭಾರತ ಹರಿಶ್ಚಂದ್ರ ಕಾವ್ಯಗಳ ಸತತ ಅಧ್ಯಯನದಿಂದ ಅವರ ಅರ್ಥಗಾರಿಕೆಗೆ ಮೆರುಗು ಬರುತಿತ್ತು. ಕಂಬದಕೋಣೆ ರಾಮದಾಸ ಪ್ರಭುಗಳಿಂದ ಬಡಗುತಿಟ್ಟು ನಾಟ್ಯವನ್ನೂ, ಕಾವೂರು ಕೇಶವರಲ್ಲಿ ತೆಂಕುತಿಟ್ಟು ನಾಟ್ಯವನ್ನು ಕಲಿತು ಉಭಯತಿಟ್ಟುಗಳ ಪರಿಪೂರ್ಣ ಕಲಾವಿದರಾಗಿ ಮೂಡಿಬಂದರು.

ಕನ್ನಡ ಸಾಹಿತ್ಯ ಸೇವೆ

ಯಕ್ಷಗಾನ ಕಲಾಸಕ್ತ ಮನೆತನದಿಂದ ಬಂದವರಾದ್ದರಿಂದ ಬಹುಬೇಗನೆ ಕಲಾವಿದರಾಗಿ ಮುಂಬೈ ಮಹಾನಗರಿಯಲ್ಲಿ ತನ್ನನ್ನು ಗುರುತಿಸಿಕೊಂಡ ಇವರು ಬರಹಗಾರರಾಗಿ ಗುರುತಿಸಿಕೊಂಡು ಹಲವಾರು ವಿಮರ್ಶಾ ಲೇಖನ ಕಲಾವಿದರ ಪರಿಚಯ ಲೇಖನ ಹಾಗು ಇತರ ವಿಚಾರಪೂರ್ಣ ಲೇಖನಗಳನ್ನು ನಾಡಿನ ಅನೇಕ ಪತ್ರಿಕೆಗಳ ಮೂಲಕ ಪ್ರಕಟಿಸಿದ್ದಾರೆ. ಜನ ಸಾಮಾನ್ಯರಿಗೆ ಅರ್ಥವಿಸಲು ಕಷ್ಟವಾಗಿದ್ದ ಅನೇಕ ಕನ್ನಡ ಕಾವ್ಯಗಳನ್ನು ಸರಳಾನುವಾದಗೊಳಿಸಿ ಮುದ್ರಿಸಿ ಪ್ರಕಟಿಸಿದ್ದಾರೆ. ಸೌರಭ ಪ್ರಕಾಶನದ ಮೂಲಕ ಹನ್ನೊಂದು ಗ್ರಂಥ ಪ್ರಕಟಿಸಿದ್ದು ಅನ್ಯಭಾಷಾ ಪ್ರದೇಶದಲ್ಲಿ ಸಾಹಸವೆಂದೇ ಹೇಳಬಹುದು. ಯಕ್ಷಗಾನ ಪೀಠೀಕಾ ಸೌರಭ, ಶನಿಮಹಾತ್ಮೆ ಅರ್ಥ ಸಹಿತ, ಜೈಮಿನೀ ಭಾರತ ಸರಳಾನುವಾದ ವೀರೇಶ ಚರಿತ್ರೆ, ಯಕ್ಷ ಶೋಭಾ, ಯಕ್ಷ ಪ್ರಶ್ನಾವಳಿ, ಹರಿಶ್ಚಂದ್ರ ಕಾವ್ಯ ಕಥಾ ಸೌರಭ, ಅಮರ ಸಿಂದೂದ್ಬವ ಗ್ರಂಥಗಳು ಪ್ರಮುಖವಾದವುಗಳು.

ಕೋಲ್ಯಾರು ರಾಜು ಶೆಟ್ಟಿ
ಜನನ : 1994
ಜನನ ಸ್ಥಳ : ಮೇಲುಕೊಲ್ಯಾರು , ಭೊಮ್ಮರಬೆಟ್ಟು ಗ್ರಾಮ
ಉಡುಪಿ ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ : ಮುಂಬೈಯಲ್ಲಿ ಸಾದನೆಗೈದ ಹಿರಿಯ ಕನ್ನಡಿಗ, ಕವಿಯಾಗಿ , ಪ್ರಸಂಗಕರ್ತನಾಗಿ, ತಾಳ ಮದ್ದಳೆ ಅರ್ಥಧಾರಿಯಾಗಿ, ಮೆರೆದ ಹಿರಿಯ ಚೇತನ
ಪ್ರಶಸ್ತಿಗಳು:
 • 1990ರಲ್ಲಿ ಪ್ರತಿಷ್ಟಿತ ಸೀತಾನದಿ ಪ್ರಶಸ್ತಿ
 • 2009ರಲ್ಲಿ ವಿಶ್ವೇಶ್ವರ ಪ್ರಶಸ್ತಿ
 • 2010ರ ಸೇವಾ ಭಾರತಿ ಪ್ರಶಸ್ತಿ
 • 2011ರ ಯಕ್ಷರಾಜ ಪ್ರಶಸ್ತಿ
 • 2013ರ ಮುಂಬೈ ಮಹಾನಗರದಲ್ಲಿ ಬಿಸುಪರ್ಬದಂದು ನೀಡುವ ಪ್ರತಿಷ್ಟಿತ ಕಣಂಜಾರು ಆನಂದ ಶೆಟ್ಟಿ ಪ್ರಶಸ್ತಿ
 • ಮುಂಬೈ ಪೂನಾಗಳಲ್ಲಿ ಹದಿನೈದಕ್ಕೂ ಮಿಕ್ಕಿ ಸಂಘಸಂಸ್ಥೆಗಂದ ಪುರಸ್ಕಾರ
ಆಗಿನ ನವಭಾರತ ಉದಯವಾಣಿ, ಸಂಯುಕ್ತ ಕರ್ಣಾಟಕ, ಕನ್ನಡ ಪ್ರಭ, ತರಂಗ ಪತ್ರಿಕೆಗಳಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ. ಅನ್ನದಾತ ಮತ್ತು ನಮ್ಮ ತುಳುನಾಡು ಎಂಬ ಬ್ರಹತ್ ಗ್ರಂಥಗಳನ್ನು ರಚಿಸಿದ ಇವರ ಒಂದು ಕಾದಂಬರಿ ದಾರಾವಾಹಿಯಾಗಿ ಪ್ರಕಟಗೊಂಡಿದೆ. ಬಡಗುತಿಟ್ಟಿನ ಅರಾಟೆ ಮಂಜುನಾಥ ಮತ್ತು ತೆಂಕುತಿಟ್ಟಿನ ಸಂಜಯ ಕುಮಾರ್ ಶೆಟ್ಟರ ಒಡನಾಡಿಯಾಗಿ ತೆಂಕು, ಬಡಗಿನ ಅನೇಕ ಪ್ರದರ್ಶನಗಳನ್ನು ಮುಂಬೈ ಮಹಾನಗರಿಯ ನಾಗರಿಕರಿಗೆ ಉಣಬಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಕೇವಲ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಇವರು ಮುಂಬೈ ವಿಶ್ವ ವಿದ್ಯಾನಿಲಯದಲ್ಲಿ ಶಿಖರೋಪನ್ಯಾಸ ನೀಡಿ ವಿದ್ವಾಂಸರಿಂದ ಮನ್ನಣೆ ಪಡೆದವರು. ಮುಂಬೈ ಮಹಾನಗರದಲ್ಲಿ ಹಲವಾರು ಶಿಷ್ಯರಿಗೆ ಮಾರ್ಗದರ್ಶನ ನೀಡುತ್ತಿರುವ ಇವರು ಓರ್ವ ಹೃದಯವಂತ ಹಿರಿಯ ಕಲಾವಿದ ತನ್ನಲ್ಲಿರುವ ಅಮೂಲ್ಯ ಕಲಾಸಂಗ್ರಹಗಳನ್ನು ಸಂಘ ಸಂಸ್ಥೆಗಳಿಗೆ ಉದಾರವಾಗಿ ದಾನ ಮಾಡಿದ ಇವರದ್ದು ಕೃತಜ್ಜತೆಯನ್ನು ಸಹ ಬಯಸದ ಉದಾರ ಗುಣ. ಜೈಮಿನಿ ಭಾರತ ಕಥಾ ಸೌರಭ ಗ್ರಂಥವು ಪಾಂಡಿತ್ಯ ಬಹುಶ್ರುತತೆ, ಗ್ರಂಥ ಸಂಪಾದನಾ ಪ್ರಾವಿಣ್ಯಗಳಿಗೆ ರುಜುವಾತು ನೀಡುವ ಗ್ರಂಥವಾಗಿದೆ. ಪ್ರಾಮಾಣಿಕ ವ್ಯಗ್ರತೆ, ಸಂವೇದನೆಯ ಅಲೆಗಳ ಎಲ್ಲೆಗಳ ಕುರಿತಗೊಂದಲ ಚಿಂತನೆಯನ್ನು ಅನುಭವವಾಗಿಸುವ ಹಂಬಲ-ಸ್ಪಂದಿಸುತ್ತಿರುವ ಕವಿಯೊಬ್ಬನ ಲಕ್ಷಣಗಳನ್ನು ಸಾರುವ ಗ್ರಂಥವಾಗಿ ಮೂಡಿಬಂದಿದೆ.

ಪ್ರಶಸ್ತಿ , ಪುರಸ್ಕಾರಗಳು

1990ರಲ್ಲಿ ಸೌರಭಾ ಪ್ರಕಾಶನ ಸಂಸ್ಥೆ ಸ್ಥಾಪಿಸಿ ಹನ್ನೊಂದು ಗ್ರಂಥಗಳನ್ನು ಮುದ್ರಿಸಿದ ಇವರಿಗೆ ಅದೇ ವರ್ಷ ಪ್ರತಿಷ್ಟಿತ ಸೀತಾನದಿ ಪ್ರಶಸ್ತಿ ಲಬಿಸಿತ್ತು. ಮುಂಬೈ ಪೂನಾಗಳಲ್ಲಿ ಹದಿನೈದಕ್ಕೂ ಮಿಕ್ಕಿ ಸಂಘಸಂಸ್ಥೆಗಂದ ಪುರಸ್ಕ್ರತರಾಗಿದ್ದರು. ಯಕ್ಷ ಶೋಭಾ ಅಬಿನಂದನಾ ಗ್ರಂಥ ಅರ್ಪಿಸಿ ಅದ್ದೂರಿಯ ಸನ್ಮಾನಗೊಂಡ ಇವರಿಗೆ 2009ರಲ್ಲಿ ವಿಶ್ವೇಶ್ವರ ಪ್ರಶಸ್ತಿ, 2010ರ ಸೇವಾ ಭಾರತಿ ಪ್ರಶಸ್ತಿ, 2011ರ ಯಕ್ಷರಾಜ ಪ್ರಶಸ್ತಿ ಲಬಿಸಿತ್ತು. ಮುಂಬೈ ಮಹಾನಗರದಲ್ಲಿ ಬಿಸುಪರ್ಬದಂದು ನೀಡುವ ಪ್ರತಿಷ್ಟಿತ ಕಣಂಜಾರು ಆನಂದ ಶೆಟ್ಟಿ ಪ್ರಶಸ್ತಿ ಕೋಲ್ಯಾರರ ಕಿರೀಟಕ್ಕೆ ಇನ್ನೋಂದು ಗರಿ ಮೂಡಿಸಿದೆ.
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ