ಒಂದು ದಿನ ಮಹಾರಣ್ಯಪುರದ ಅಧಿಕಾರಿ ಕಂಹಾಸುರನ ಸಹೋದರಿ ಮಹಿದಾನವಿ ಕಾನನದಲ್ಲಿ ಸಂಚರಿಸುತ್ತಿರುವಾಗ ತಪಸ್ಸಿನಲ್ಲಿ ಲೀನವಾಗಿರುವ, ದಿವ್ಯ ತೇಜಸ್ಸಿನಿಂದ ಹೊಳೆಯುತ್ತಿದ್ದ ಕೋಲಮುನಿಯನ್ನು ನೋಡಿ ಆಕರ್ಷಿತಳಾಗುತ್ತಾಳೆ. ತ್ರಿಕಾಲ ಜ್ಞಾನಿಯಾದ ಕೋಲಮುನಿಯು ತನ್ನನ್ನು ಬಯಸಿ ಬಂದ ಹೆಣ್ಣು ಮಹಿದಾನವಿ ಎಂಬುದನ್ನು ಅರ್ಥೆಸಿಕೊಳ್ಳುತ್ತಾನೆ. ಕೋಪಗೊಂಡು ಅಸುರ ಕುಲವೇ ನಶಿಸಲಿ ಎಂಬ ಶಾಪವನ್ನು ಕೊಡುತ್ತಾನೆ. ಹತಾಶೆಯಿಂದ ಮಹಿದಾನವಿ ಕೋಲಮುನಿಯು ತನ್ನನ್ನು ಬಯಸಿ ಬಂದ ಎಂಬುದಾಗಿ ಕಂಹಾಸುರನಲ್ಲಿ ಸುಳ್ಳನ್ನು ಹೇಳುತ್ತಾಳೆ. ಕೋಪಗೊಂಡ ಕಂಹಾಸುರ ತನ್ನ ಸಹಚರರೊಂದಿಗೆ ಕೋಲಮುನಿಯನ್ನು ಕೊಲ್ಲಲು ಮುಂದಾಗುತ್ತಾನೆ. ಕಂಹಾಸುರನ ವರಬಲವನ್ನು ಅರಿತ ಕೋಲಮುನಿ ತಪ್ಪಿಸಿಕೊಂಡು ಕೊಡಚಾದ್ರಿಯ ಚಿತ್ರಮೂಲಕ್ಕೆ ತೆರಳುತ್ತಾನೆ.
ಇತ್ತ ಕಂಹಾಸುರನು ಅಸುರರನ್ನು ಕೂಡಿಕೊಂಡು ಇಂದ್ರನನ್ನು ಸೋಲಿಸಿ ದೇವಲೋಕವನ್ನು ವಶಪಡಿಸಿಕೊಳ್ಳುತ್ತಾನೆ. ದಿಕ್ಕು ತೋಚದಂತಾದ ದೇವತೆಗಳು ವಿಷ್ಣುವಿನ ಸಹಾಯದ ಮೊರೆ ಹೋಗುತ್ತಾರೆ. ಕಂಹಾಸುರನ ವರಬಲವನ್ನು ಅರಿತ ಮಹಾವಿಷ್ಣು ತ್ರಿಶಕ್ತಿಯರಾದ ಉಮೆ, ರಮೆ, ವಾಣಿಯರಲ್ಲಿ ಕಂಹಾಸುರನನ್ನು ಸಂಹರಿಸುವಂತೆ ಹೇಳುತ್ತಾನೆ. ಇತ್ತ ಕಂಹಾಸುರನು ಮತ್ತೆ ವರವನ್ನು ಪಡೆಯಲು ಪರಮೇಶ್ವರನನ್ನು ಕುರಿತು ತಪಸ್ಸನ್ನು ಆಚರಿಸುತ್ತಾನೆ. ಇದರಿಂದ ಆಗಬಹುದಾದ ಅನಾಹುತವನ್ನು ಮನಗಂಡ ವಿಷ್ಣುವು ವಾಗ್ದೇವಿಯನ್ನು ಕರೆದು ಕಂಹಾಸುರನು ವರ ಕೇಳದಂತೆ ತಡೆಯಲು ಹೇಳುತ್ತಾನೆ. ಇದರಿಂದಾಗಿ ಕಂಹಾಸುರನು ಮೂಕನಾಗುತ್ತಾನೆ. ಇತ್ತ ಹರಿ, ಹರ, ಬ್ರಹ್ಮರು ದೇವತೆಗಳೊಂದಿಗೆ ಕೋಲವನದಲ್ಲಿ ದೇವಿಯನ್ನು ಪ್ರಾರ್ಥಿಸುತ್ತಾರೆ. ದೇವತೆಗಳಿಗೆ ಅಭಯವನ್ನು ನೀಡಿ ಜಗನ್ಮಾತೆಯು ಸಿಂಹವಾಹಿನಿಯಾಗಿ ಕಂಹಾಸುರನನ್ನು ಸಂಹರಿಸಲು ಬರುತ್ತಾಳೆ. ಆಕೆಯ ಬರುವಿಕೆಯನ್ನು ನೋಡಿ ಕಂಹಾಸುರನು ತನ್ನ ಸಾವು ಸಮೀಪಿಸಿದೆ ಎಂಬುದನ್ನು ಅರಿತು ಮರಣ ಹೊಂದುವ ಮೊದಲು ಮಾತನಾಡುವ ಶಕ್ತಿಯನ್ನು ಅನುಗ್ರಹಿಸುವಂತೆ ಕೇಳುತ್ತಾನೆ.
ಆತನ ಇಚ್ಚೆಯಂತೆಯೆ ತಾಯಿ ಕಂಹಾಸುರನಿಗೆ ಮಾತನಾಡುವ ಶಕ್ತಿಯನ್ನು ಅನುಗ್ರಹಿಸುತ್ತಾಳೆ. ತನ್ನ ದುರುಳ ತನ್ನಕ್ಕೆ ಪಶ್ಚಾತಾಪ ಪಟ್ಟು ಕಂಹಾಸುರನು ಮೋಕ್ಷಕ್ಕಾಗಿ ಪ್ರಾರ್ಥಿಸುತ್ತಾನೆ. ಹಾಗೆಯೇ ತನ್ನ ಕೀರ್ತಿಯು ಅಳಿದುಹೋಗಬಾರದು, ತನ್ನ ಹೆಸರು ಆಚಂದ್ರಆರ್ಕವಾಗಿ ಉಳಿಯುವಂತೆ ಅನುಗ್ರಹಿಸುವಂತೆ ಕೇಳುತ್ತಾನೆ. ಅದಕ್ಕೆ ದೇವಿಯು ಈ ಯುದ್ಧ ನಡೆದ ಸ್ಥಳವು ಮುಂದೆ ಮಾರಣಕಟ್ಟೆಯಾಗಿ ಪ್ರಸಿದ್ದಿ ಪಡೆಯುತ್ತದೆ. ಅಲ್ಲಿ ಬ್ರಹ್ಮಶಿಲೆಯಾಗಿ ಬಿದ್ದಿರುವ ನಿನ್ನನ್ನು ಯೋಗಿಯೊರ್ವನು ಪ್ರತಿಷ್ಟಾಪನೆ ಮಾಡುತ್ತಾನೆ ಎನ್ನುವುದಾಗಿ ಭರವಸೆ ಕೊಟ್ಟು ಕಂಹಾಸುರನನ್ನು ಸಂಹರಿಸುತ್ತಾಳೆ.
ಹಲವು ಸಮಯದ ನಂತರ ಅದ್ವೈತ ಮತ ಸ್ಥಾಪಕರಾದ ಶ್ರೀ ಶಂಕರಾಚಾರ್ಯರು ಕೋಲವನಕ್ಕೆ ಬಂದು ಜ್ಯೋತಿರ್ಲಿಂಗವನ್ನು ಪೂಜಿಸುತ್ತಾರೆ. ಭಕ್ತಿಗೆ ಒಲಿದ ದೇವಿ ಪ್ರತ್ಯಕ್ಷವಾಗಿ ಪಂಚಲೋಹದ ವಿಗ್ರಹವನ್ನು ತಯಾರಿಸಿ ಜ್ಯೋತಿರ್ಲಿಂಗದ ಬಳಿ ಪ್ರತಿಷ್ಟಾಪಿಸಲು ಹೇಳುತ್ತಾಳೆ. ಅಂತೆಯೇ ಮಾರಣಕಟ್ಟೆಯಲ್ಲಿರುವ ಬ್ರಹ್ಮಶಿಲೆಯನ್ನು ಪ್ರತಿಷ್ಟಾಪಿಸುವಂತೆ ಸೂಚಿಸುತ್ತಾಳೆ. ತಾಯಿಯ ಆಜ್ಞೆಯಂತೆ ಶಂಕರಾಚಾರ್ಯರು ಮಾರಣಕಟ್ಟೆಗೆ ಬರುತ್ತಾರೆ. ತಡರಾತ್ರಿ ಬ್ರಹ್ಮಗುಂಡಿಯ ಸನಿಯ ಮಲಗಿರಲು ಭೂತ ಪ್ರೇತಗಳ ಕಾಟಕ್ಕೆ ಒಳಗಾಗುತ್ತಾರೆ. ಅವುಗಳ ಮನದ ಇಂಗಿತವನ್ನು ಅರಿತ ಶಂಕರಾಚಾರ್ಯರು ಮುಂದೊಂದು ದಿನ ಧರಣಿಪಾಲಕನೊಬ್ಬ ಬ್ರಹ್ಮಲಿಂಗೇಶ್ವರನಿಗೆ ದೇಗುಲವನ್ನು ಕಟ್ಟಿಸುತ್ತಾನೆ, ಪರಿವಾರ ಗಣಗಳಾದ ನಿಮಗೆಲ್ಲರಿಗೂ ಗುಡಿಯನ್ನು ಕಟ್ಟಿಸುತ್ತಾನೆ ಎಂಬ ಆಶ್ವಾಸನೆ ನೀಡುತ್ತಾರೆ.
|
ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ |
 |
ಪ್ರಮುಖ ಪಾತ್ರಗಳು
ಈಶ್ವರ
ಪಾರ್ವತಿ
ಕೊಲ್ಲಾ೦ಬಿಕೆ
ಕೋಲಮುನಿ
ಶ೦ಕರಾಚಾರ್ಯ
ಮೂಕಾಸುರ
ಮೂಕಾ೦ಬಿಕೆ
ಮ೦ಜು
ಮ೦ಜಿ
ಬ್ರಹ್ಮಲಿ೦ಗ
ಸ್ಕ೦ದ
ಕ೦ಹಾಸುರ
ದೇವೇ೦ದ್ರ
ಮ೦ಜಯ್ಯ ಶೆಟ್ಟಿ
ಚ೦ದ್ರಯ್ಯ ಶೆಟ್ಟಿ
ಮಹಿದಾನವಿ
|
ಇತರ ಪಾತ್ರಗಳು
ಬ್ರಹ್ಮ ,ಯಮ
ಸರಸ್ವತಿ, ವಿಷ್ಣು
ಲಕ್ಷ್ಮಿ, ನಾರದ
ನ೦ದಿ, ಮ೦ಜರು
ಸಿ೦ಹ, ವೀರಭದ್ರ
ಹ೦ಡಾಸುರ, ಹು೦ಡಾಸುರ
ದೇವದೂತ, ಅಗ್ನಿ
ವಾಯು, ಕುಬೇರ, ವಾಗ್ದೇವಿ
ಭೂತ, ಯಕ್ಷಿ, ಹ್ರಾಗುಳಿ
ಚಿಕ್ಕು, ಹುಲಿ
ಆಳ್ವ, ಕಳ್ಳರು
ರವಿಕೀರ್ತಿ, ಶಶಿಕೀರ್ತಿ |
|
|