ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಯಕ್ಷಗಾನದ ಮೇರು ಸ್ತ್ರೀವೇಷಧಾರಿ ಕೊಕ್ಕರ್ಣೆ ನರಸಿಂಹ ಕಾಮತ್

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಜುಲೈ 13 , 2014

ಸುಮಾರು 130 ವರ್ಷಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನದ ಅಗ್ರಪಂಕ್ತಿಯ ಸ್ತ್ರೀವೇಷದಾರಿಯಾಗಿ ದಂತಕತೆಯಾಗಿ ಮೆರೆದ ಕೊಕ್ಕರ್ಣೆ ನರಸಿಂಹ ಕಾಮತರು ಕೀರ್ತಿಯ ಉತ್ತುಂಗಕ್ಕೇರಿ ಬಡಗುತಿಟ್ಟಿನ ಹೆಸರನ್ನು ನಾಡಿನಾದ್ಯಂತ ಪಸರಿಸಿದವರು.

ಕೊಕ್ಕರ್ಣೆ ನರಸಿಂಹ ಕಾಮತರು ಇಂದು ನಮ್ಮನ್ನಗಲಿದ ಬಡಗುತಿಟ್ಟಿನ ಅಗ್ರಮಾನ್ಯ ಸ್ತ್ರೀವೇಶದಾರಿಗಳಲ್ಲಿ ಅಗ್ರಮಾನ್ಯರು. ಈ ಸಾಲಿನಲ್ಲಿ ಬರುವ ಇನ್ನಿಬ್ಬರು ಕಲಾವಿದರೆಂದರೆ ದಿ. ಕೊಳ್ಕೆಬೈಲು ಶೀನ ನಾಯ್ಕರು ಮತ್ತು ದಿ. ಹಾರಾಡಿ ನಾರಯಣ ಗಾಣಿಗರು. ಇವರೆಲ್ಲರು ನಾವು ಹುಟ್ಟುವ ಮೊದಲೇ ಇಹಲೋಕವನ್ನು ತ್ಯಜಿಸಿದವರು. ಸುಮಾರು 130 ವರ್ಷಗಳ ಹಿಂದೆ ಉಡುಪಿ ತಾಲೂಕಿನ ಮಂದಾರ್ತಿ ಸಮೀಪ ಕೊಕ್ಕರ್ಣೆಯಲ್ಲಿ ಶ್ರೀ ನಾಗಪ್ಪ ಕಾಮತ್ ಮತ್ತು ಮಂಜಮ್ಮ ದಂಪತಿಗಳ ಮಗನಾಗಿ ಜನಿಸಿದ ಕಾಮತರ ಸಾದನೆಗೆ ಬೆನ್ನೆಲುಬಾಗಿ ನಿಂತವರು ಪತ್ನಿ ಗುಲಾಬಿ ಅಮ್ಮನವರು.

ಕಾಮತರು ಬಾಲ್ಯದಿಂದಲೇ ಪ್ರತಿಭಾವಂತರಾಗಿದ್ದು ಯಕ್ಷಗಾನ ಕಲೆ ಇವರನ್ನು ಕೈಬೀಸಿ ಕರೆಯಿತು. ಸ್ತ್ರೀ ವೇಶಕ್ಕೆ ಬೇಕಾದ ಲಜ್ಜೆ ಲಾವಣ್ಯ, ಅಂಗ ಸೌಷ್ಟವ, ಅವರನ್ನು ಪರಿಪೂರ್ಣ ಸ್ತ್ರೀವೇಷಕ್ಕೆ ತನ್ನನ್ನು ಅರ್ಪಿಸಿಕೊಂಡಿತು. ತನ್ನ ಅಭಿನಯ ಮಾತುಗಾರಿಕೆಯಿಂದ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸುತಿದ್ದ ಇವರು ಮಂದಾರ್ತಿ, ಸೌಕೂರು, ಅಮೃತೇಶ್ವರಿ, ಪೆರ್ಡೂರು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರ ಸುದೀರ್ಘ ಸೇವೆ ಸೌಕೂರು ಮೇಳಕ್ಕೆ ಸಂದಿದೆ ಮಾತ್ರವಲ್ಲದೆ, ಸೌಕೂರು ಮೇಳವನ್ನು ಕೆಳಕಾಲ ಯಜಮಾನರಾಗೀಯೂ ಮುನ್ನೆಡೆಸಿದ್ದರು. ಕಾಮತರಿಗೆ ಅತೀ ಪ್ರಸಿದ್ದಿಯನ್ನು ತಂದುಕೊಟ್ಟ ಪಾತ್ರ ಶಶಿಪ್ರಭಾ ಪರಿಣಯದ ಶಶಿಪ್ರಭೆ ಮತ್ತು ಅರಗಿನಾಲಯದ ಮಾಯ ಹಿಡಿಂಬೆ. ಚಿತ್ರಾಂಗದೆ, ಮೀನಾಕ್ಷಿ, ಕಯಾದು ಚಂದ್ರಮತಿ ಮುಂತಾದ ಪಾತ್ರಗಳನ್ನು ಅಷ್ಟೇ ವಿಭಿನ್ನವಾಗಿ ಅಭಿನಯಿಸುತಿದ್ದರು ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲ ಬಲ್ಲವರ ಅನಿಸಿಕೆ.

ಸುಮಾರು ನೂರು ವರ್ಷದ ಹಿಂದೆ ಯಕ್ಷಗಾನ ಕಲಾವಿದರಿಗೆ ಇಂದು ದೊರೆಯುತ್ತಿರುವ ಯಾವ ಸೌಲಭ್ಯವೂ ಇಲ್ಲ. ಅಂತಹ ಕಷ್ಟಕರ ಕಾಲದಲ್ಲಿ ತಮ್ಮ ಗಂಟುಮೂಟೆಗಳನ್ನು ತಾವೇ ಹೊತ್ತುಕೊಂಡು ಈ ಕಲೆಗಾಗಿ ಜೀವನವನ್ನೇ ಮೂಡುಪಾಗಿಟ್ಟ ಕಲಾವಿದರಿಗೆ ಯಾವ ಸನ್ಮಾನವಾಗಲಿ ಬಿರುದು ಬಾವಲಿಗಳಾಗಲಿ ಇಲ್ಲವಿತ್ತು. ಆದರೂ ಸಹ ಕಾಮತರ ಅಭಿನಯಕ್ಕೆ ತಲೆದೂಗಿದ ಉಡುಪಿ ಮಠದ ಅಂದಿನ ಸ್ವಾಮಿಗಳು ಸುಮಾರು 120 ವರ್ಷದ ಹಿಂದೆ ಅವರನ್ನು ಸನ್ಮಾನಿಸಿ ಗೌರವಿಸಿದ್ದು ಅವರ ಕಲಾಪ್ರತಿಭೆಗೆ ದ್ಯೋತಕ. ಹಿರಿಯ ಕಲಾವಿದರಾದ ಕೆರೆಮನೆ ಬಂಧುಗಳು, ಶೇಣಿ ಗೋಪಾಲಕೃಷ್ಣ ಭಟ್ಟರು, ಹಾರಾಡಿ ಕಲಾವಿದರು, ವೀರಭದ್ರ ನಾಯ್ಕರು, ಶಿರಿಯಾರ ಮಂಜುನಾಯ್ಕರಂತ ಅವರ ಕಿರಿಯ ತಲೆಮಾರಿನ ಕಲಾವಿದರು ಅವರನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

ಕೊಕ್ಕರ್ಣೆ ನರಸಿಂಹ ಕಾಮತ್
ಜನನ : ಸುಮಾರು 1883
ಜನನ ಸ್ಥಳ : ಕೊಕ್ಕರ್ಣೆ, ಮಂದಾರ್ತಿ,
ಉಡುಪಿ ತಾಲೂಕು & ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಅಗ್ರಪಂಕ್ತಿಯ ಸ್ತ್ರೀವೇಷದಾರಿಯಾಗಿ ಮಂದಾರ್ತಿ, ಸೌಕೂರು, ಅಮೃತೇಶ್ವರಿ, ಪೆರ್ಡೂರು ಮೇಳಗಳಲ್ಲಿ ಕಲಾಸೇವೆ.
ಪ್ರಶಸ್ತಿಗಳು:
ಉಡುಪಿ ಮಠದ ಅಂದಿನ ಸ್ವಾಮಿಗಳು ಸುಮಾರು 120 ವರ್ಷದ ಹಿಂದೆ ಅವರನ್ನು ಸನ್ಮಾನಿಸಿ ಗೌರವಿಸಿದ್ದರು.
ಅವರ 130ನೇ ಜಯಂತಿಯು ಕಳೆದ ವರ್ಷ ಕೊಕ್ಕರ್ಣೆಯಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು, ದುರ್ಗಾಪರಮೇಶ್ವರೀ ಮಹಿಳಾ ಯಕ್ಷಗಾನ ಸಂಘ, ಜ್ಯೋತಿ ಮಹಿಳಾ ಮಂಡಳ ಮುಂತಾದ ಸಹ ಸಂಸ್ಥೆಗಳ ಸಹಯೋಗದೊಂದಿಗೆ ಸಾಕಾರಗೊಂಡಿತು. ಸಂಸ್ಕ್ರತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಯಕ್ಷಗಾನ ಭಾವನಾತ್ಮಕ ಲೋಕಕ್ಕೆ ಸೆಳೆದೊಯ್ಯಬಲ್ಲ ಕಲೆ ಎಂದರು. ಯಕ್ಷಗಾನ ಅಕಾಡೆಮಿ ಅದ್ಯಕ್ಷ ಎಮ್. ಎಲ್. ಸಾಮಗ ಅದ್ಯಕ್ಶತೆ ವಹಿಸಿದ್ದರು. ಹಿರಿಯ ಕಲಾವಿದ ಹಿರಿಯಡ್ಕ ಗೋಪಾಲರಾಯರಿಗೆ ಕಾಮತ್ ಸಂಸ್ಮರಣಾ ಪ್ರಶಸ್ತಿ ನೀಡಲಾಯಿತು. ಕೋಳ್ಯೂರು ರಾಮಚಂದ್ರರಾವ್, ಮುಂತಾದ ಹಿರಿಯ ಕಲಾವಿದರನೇಕರು ಕಾಮತರ ಗುಣಗಾನ ಕಲಾನೈಪುನ್ಯತೆಯನ್ನು ನೆನಪಿಸಿಕೊಂಡರು. ದೀರ್ಘಕಾಲದ ನಂತರ ಕಾಮತರ ಮೊಮ್ಮಕ್ಕಳು ಹಾಕಿಕೊಟ್ಟ ಈ ಮಾದರಿಯ ಕಾರ್ಯಕ್ರಮ ಇತರರಿಗೆ ಮೇಲ್ಪಂಕ್ತಿಯಾಗಿದೆ. ಪ್ರತೀವರ್ಷ ಅವರ ಸಂಸ್ಮ್ರರಣೆ ಮಾಡಬೇಕಾದದ್ದು ಪ್ರತೀ ಒಬ್ಬ ನಾಗರೀಕನ ಆದ್ಯ ಕರ್ತವ್ಯವಾಗಿದೆ.


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ