ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಪ್ರಸ೦ಗ
Share
ಶ್ವೇತಕುಮಾರ ಚರಿತ್ರೆ ಅಥವಾ ಶಿವಪಂಚಾಕ್ಷರೀ ಮಹಾತ್ಮೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಜನವರಿ 1 , 2013

ಪ್ರಸ೦ಗ ಕತೃ : ಶ್ರೀ ಕೀರಿಕ್ಕಾಡು ವಿಷ್ಣು ಭಟ್

ಶ್ವೇತಕುಮಾರ ಚರಿತ್ರೆ ಅಥವಾ ಶಿವಪಂಚಾಕ್ಷರೀ ಮಹಾತ್ಮೆ ಯಕ್ಷಗಾನ ಪ್ರಸಂಗಗಳಲ್ಲಿ ವಿಶಿಷ್ಟವಾದುದು. ಶಿವನ ಪಂಚಾಕ್ಷರೀ ಬೀಜಮಂತ್ರದ ಮಹಿಮೆಯನ್ನು ಈ ಪ್ರಸಂಗ ಸಾರುತ್ತದೆ.

ಶ್ವೇತಕುಮಾರನೆಂಬ ರಾಜ ತನ್ನ ರಾಜ್ಯವನ್ನು ಸುಭಿಕ್ಷವಾಗಿ ಆಳುತ್ತಿದ್ದ. ಒಮ್ಮೆ ಕಾಡಿನಲ್ಲಿ ಬೇಟೆಯಾಡಲು ಹೋಗಿದ್ದಾಗ ಋಷಿ ಕನ್ಯೆಯೊಬ್ಬಳನ್ನು ಕಂಡು ಮೋಹಗೊಂಡು ಆಕೆಯನ್ನು ವರಿಸುತ್ತಾನೆ. ಆದರೆ, ಮತ್ತೊಮ್ಮೆ ಕಾಡೊಳಗೆ ಸುತ್ತಾಡುತ್ತಿದ್ದಾಗ ಯಕ್ಷ ಸ್ತ್ರೀಯೊಬ್ಬಳಿಂದ ಮೋಹಗೊಂಡು ಮಾಡಬಾರದ ಅಪರಾಧಗಳನ್ನು ಮಾಡುತ್ತಾನೆ. ಹೀಗಿರಲೊಮ್ಮೆ ಆ ರಾಜ್ಯಕ್ಕೆ ಅಸುರನೊಬ್ಬನ ಪ್ರವೇಶವಾಗುತ್ತದೆ. ಆತ ಸಿಕ್ಕಸಿಕ್ಕವರನ್ನೆಲ್ಲ ವಧಿಸುತ್ತಾ ಶ್ವೇತಕುಮಾರನನ್ನೂ ಯುದ್ಧಕ್ಕೆ ಆಹ್ವಾನಿಸುತ್ತಾನೆ. ಯುದ್ಧದಲ್ಲಿ ಶ್ವೇತಕುಮಾರ ಮಡಿಯುತ್ತಾನೆ. ಅಸುರ ಶ್ವೇತಕುಮಾರನ ಪತ್ನಿಯನ್ನು ಕದ್ದೊಯ್ದು ಸೆರೆಯಲ್ಲಿಡುತ್ತಾನೆ. ಶ್ವೇತಕುಮಾರನ ಆತ್ಮ ನೇರವಾಗಿ ಯಮಲೋಕ ಸೇರುತ್ತದೆ.

ಆತ ಮಾಡಿದ ಪುಣ್ಯ-ಪಾಪಗಳ ಲೆಕ್ಕವಾಗಿ ಆತನಿಗೆ 1 ವರ ಮತ್ತು ನರಕದಲ್ಲಿ ಶಿಕ್ಷೆ ನೀಡುವುದೆಂದು ನಿರ್ಧಾರವಾಗುತ್ತದೆ. 2ರಲ್ಲಿ ಒಂದನ್ನು ಮೊದಲು ಆರಿಸಿಕೊಳ್ಳಲು ಯಮಧರ್ಮ ಶ್ವೇತಕುಮಾರನಿಗೆ ಅವಕಾಶ ನೀಡಿದಾಗ ಆತ, ತನಗೆ ೊ ರಾತ್ರಿ ರಂಭೆಯ ಜೊತೆ ಕಳೆಯಬೇಕೆಂಬ ಬೇಡಿಕೆ ಮುಂದಿಡುತ್ತಾನೆ. ಯಮದೂತರು ಆತನನ್ನು ರಂಭೆಯ ಅಂತಃಪುರಕ್ಕೆ ಬಿಡುತ್ತಾರೆ. ರಂಭೆಗೋ ಈತನನ್ನು ಕಂಡು ಒಂದೆಡು ಮರುಕ ಮತ್ತೊಂದೆಡೆ ಸಿಟ್ಟು. ತಾನು ಹೇಳಿದಂತೆ ಕೇಳಿದರೆ ಮಾತ್ರ ಆತನಿಗೆ ದೇಹಸುಖ ನೀಡುವುದಾಗಿ ರಂಭೆ ಷರತ್ತು ವಿಧಿಸುತ್ತಾಳೆ. ಷರತ್ತು ಇಷ್ಟೆ "ಓಂ ನಮಃ ಶಿವಾಯ" ಎಂಬ ಮಂತ್ರವನ್ನು ರಂಭೆ ಸೂಚನೆ ಕೊಡುವವರೆಗೂ ಹೇಳುತ್ತಲೇ ಇರಬೇಕು. ಕೆಲವೇ ಕ್ಷಣಗಳಲ್ಲಿ ಶ್ವೇತಕುಮಾರ ಪಂಚಾಕ್ಷರೀ ಮಂತ್ರದಲ್ಲಿ ತಲ್ಲೀನನಾಗುತ್ತಾನೆ. ಬೆಳಗ್ಗೆ ಯಮದೂತರು ಬರುವವರೆಗೂ.

ಶ್ವೇತಕುಮಾರ ಚರಿತ್ರೆ
ಪ್ರಮುಖ ಪಾತ್ರಗಳು : ಶ್ವೇತಕುಮಾರ
ಯಮಧರ್ಮ
ರಂಭೆ
ಶಿವ
ಪ್ರೇತ
ಇತರ ಪಾತ್ರಗಳು :
ಯಮದೂತರು ಶ್ವೇತಕುಮಾರನನ್ನು ಎಳೆದೊಯ್ಯಲು ಶಿವಗಣಗಳು ಬಂದು ಅವರನ್ನು ತಡೆಯುತ್ತಾರೆ. ಯಾವನೇ ವ್ಯಕ್ತಿ ಎಂಥ ಪಾಪ ಮಾಡಿದ್ದರೂ ಆತ ಶಿವಧ್ಯಾನ ಮಾಡಿದಲ್ಲಿ ಪಾಪದಿಂದ ವಿಮೋಚನೆ ಪಡೆಯುತ್ತಾನೆ. ಹೀಗಾಗಿ ಶ್ವೇತಕುಮಾರ ಶಿವಲೋಕಕ್ಕೆ ಬರುವುದೇ ಸರಿ ಎಂದು ಶಿವನ ಬಳಿ ಕರೆದೊಯ್ಯುತ್ತಾರೆ. ಶಿವ ಶ್ವೇತಕುಮಾರನಿಗೆ ಮತ್ತೆ ಭೂಮಿಯಲ್ಲಿ ಜನಿಸುವಂತೆ ಅನುಗ್ರಹಿಸಿ "ನಿನ್ನನ್ನು ವಧಿಸಿದ ರಾಕ್ಷಸ ಒಮ್ಮೆ ಸತ್ತು ಬದುಕಿದವರಿಂದಲೇ ಸಾವು ಬರುವಂಥ ವರ ಪಡೆದಿದ್ದ. ಮತ್ತೆ ಭೂಮಿಯಲ್ಲಿ ಜನ್ಮ ತಳೆದು ಆ ಅಸುರನನ್ನು ವಧಿಸು" ಎಂದು ಶಿವ ಹರಸುತ್ತಾನೆ. ಮತ್ತೆ ಭೂಮಿಗೆ ಬರುವ ಶ್ವೇತಕುಮಾರ ಅಸುರನನ್ನು ವಧಿಸಿ ತನ್ನ ರಾಜ್ಯವನ್ನು ಮತ್ತೆ ಸಂಪಾದಿಸಿಕೊಳ್ಳುತ್ತಾನೆ.

ಕೃಪೆ : http://dheemkita.blogspot.in


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪ್ರಸ೦ಗಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ