ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಬಡಗಿನ ಪ್ರಧಾನ ಪುರುಷ ವೇಷಧಾರಿ ಕಕ್ಕುಂಜೆ ಅನಂತ್ ಕುಲಾಲ್

ಲೇಖಕರು :
ನಾಗರಾಜ ಶೆಟ್ಟಿ
ಮ೦ಗಳವಾರ, ಒಕ್ಟೋಬರ್ 14 , 2014

ಯಕ್ಷಗಾನದ ಜನಪ್ರೀಯತೆಯನ್ನು ಡೇರೆಮೇಳಗಳು ಹೆಚ್ಚಿಸಿವೆ ಆದರೂ ಯಕ್ಷಗಾನದ ಜನ್ಮಭೂಮಿ ಬಯಲಾಟ ಮೇಳಗಳು. ಡೇರೆ ಮೇಳದ ಪ್ರತಿಯೊಬ್ಬ ಕಲಾವಿದನು ಬಯಲಾಟ ಮೇಳಗಳಲ್ಲಿ ಸೇವೆ ಸಲ್ಲಿಸಿದವರೇ. ಆದರೆ ಪ್ರೋತ್ಸಾಹಕರ ಕೊರತೆಯಿಂದ ಅದೆಷ್ಟೊ ಪ್ರತಿಭೆಗಳು ಬಯಲಾಟ ಮೇಳಗಳಲ್ಲಿ ಸ್ತುಪ್ತವಾಗಿಯೇ ಉಳಿದಿವೆ. ಅಂತಹ ಸಾಲಿನಲ್ಲಿ ಅನಂತ್ ಕುಲಾಲ್ ಕೂಡ ಒಬ್ಬರು. ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ ಪ್ರಸಂಗ ವೀಕ್ಷಿಸದ ಯಕ್ಷ ಪ್ರೇಮಿ ಬಹು ವಿರಳ. ಕ್ಷೇತ್ರ ಮಹಾತ್ಮೆ ಪ್ರಸಂಗದ ಕೋಲಾಮುನಿ ಪಾತ್ರ ಕೀರ್ತಿ ತಂದುಕೊಟ್ಟಿದ್ದು ಮಾತ್ರವಲ್ಲ ಪಾತ್ರಕ್ಕೊಂದು ಪರಿಪೂರ್ಣ ನ್ಯಾಯಕೊಟ್ಟವರು.

ಬಾಲ್ಯ ಮತ್ತು ಶಿಕ್ಷಣ

ಅನಂತ ಕುಲಾಲರು 1956 ಪೆಬ್ರವರಿ 26ರಂದು ಬಚ್ಚ ಕುಲಾಲ್ ಮತ್ತು ದ್ಯಾವಮ್ಮ ಕುಲಾಲ್ತಿಯರ 3ನೇ ಸುಪುತ್ರರಾಗಿ ಉಡುಪಿ ತಾಲೂಕಿನ ಕಕ್ಕುಂಜೆ ಗ್ರಾಮದಲ್ಲಿ ಜನಿಸಿದರು. ಕಕ್ಕುಂಜೆ ಶಾಲೆಯಲ್ಲಿ 6ನೇ ತರಗತಿಯವರೆಗೆ ಅಭ್ಯಸಿಸಿದ ಇವರನ್ನು ಸೆಳೆದದ್ದು ಯಕ್ಷಗಾನ. ಆಗಿನ ಕಾಲದಲ್ಲಿ ಯಕ್ಷಗಾನ ಕಲಿಯುವಿಕೆಗೆ ಮನೆಯಲ್ಲೆ ಭಾರಿ ವಿರೋಧವಿತ್ತು. ತಮ್ಮ ಉತ್ಕ್ರಷ್ಟ ಇಚ್ಚೆಯಿಂದಾಗಿ ಯಕ್ಷಗಾನಕ್ಕೆ ಆಕರ್ಷಿತರಾದರು.

ವೃತ್ತಿ ಹಾಗೂ ಕಲಾಸೇವೆ

ದಶಾವತಾರಿ ಗುರು ವೀರಭದ್ರ ನಾಯಕರ ಗರಡಿಯಲ್ಲಿ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಅಭ್ಯಸಿಸಿದ ಕುಲಾಲರು ತಮ್ಮ 15ನೇ ವಯಸ್ಸಿಗೆ ಶ್ರಿ ಕ್ಷೇತ್ರ ಅಮೃತೇಶ್ವರಿ ಮೇಳದಲ್ಲಿ ಗೆಜ್ಜೆ ಕಟ್ಟುವ ಮೂಲಕ ರಂಗಸ್ಥಳಕ್ಕೆ ಪ್ರವೇಶ ಪಡೆದರು. ದಿ. ಶಿರಿಯಾರ ಮಂಜು ನಾಯ್ಕರು, ದಿ. ವಂಡಾರು ಬಸವ, ಕೋಟ ವೈಕುಂಠ, ಹಳ್ಳಾಡಿ ಕುಷ್ಟರ ಅನುಪಮ ವೇಷಗಳಿಗೆ ಮಾರು ಹೋಗಿ ಪ್ರೇರಣೆಗೊಂಡರು. ಅಮೃತೇಶ್ವರಿ, ಹಿರಿಯಡ್ಕ, ಸಾಲಿಗ್ರಾಮ, ಪೇರ್ಡೂರು, ಹಾಲಾಡಿ, ಮಾರಣಕಟ್ಟೆ ಮೇಳಗಳಲ್ಲಿ ಯಕ್ಷ ತಿರುಗಾಟ ಪೂರೈಸಿದ ಕೀರ್ತಿ ಇವರದ್ದು. ಪ್ರಸ್ತುತ ಮಾರಣಕಟ್ಟೆ ಮೇಳದಲ್ಲಿ ಪ್ರಧಾನ ಪುರುಷ ವೇಷಧಾರಿಯಾಗಿ 33ವರ್ಷಗಳಿಂದ ಸೇವೆ ಸಲ್ಲಿಸುತಿದ್ದಾರೆ. ಎಂ ಎಂ ಹೆಗ್ಡೆಯವರ ಪ್ರೀತಿಪಾತ್ರ ಕಲಾವಿದರಾದ ಕುಲಾಲರು ತಮ್ಮ ಕಲಾ ಬದುಕಿನಲ್ಲಿ ಎಂ ಎಂ ಹೆಗ್ಡೆಯವರ ಮಾರ್ಗದರ್ಶನವನ್ನು ಸದಾ ಸ್ಮರಿಸುತ್ತಾರೆ.

ಅಂದಿನ ಕಾಲದಲ್ಲಿ ಮಾರಣಕಟ್ಟೆ ಮೇಳದಲ್ಲಿದ್ದ ನರಸಿಂಹ ದಾಸರು ಮರವಂತೆ, ಮರಿಯಪ್ಪಾಚಾರ್, ಮಾರ್ಗೋಳಿ ಗೋವಿಂದ ಸೇರೆಗಾರ್, ವಂಡ್ಸೆ ನಾಣು, ಅರಾಟೆ ಮಂಜು ಇವರ ಒಡನಾಟವನ್ನು ನೆನೆಯುತ್ತಾರೆ. ತಮ್ಮ 43ವರ್ಷದ ಕಲಾಬದುಕಿನಲ್ಲಿ ಶ್ರೀರಾಮ, ಶ್ರೀಕೃಷ್ಣ, ಸುಧನ್ವ, ಹರಿಶ್ಚಂದ್ರ, ರಾಜಾ ವಿಕ್ರಮ, ಋತುಪರ್ಣ, ಕೌಂಡ್ಲಿಕ, ಧರ್ಮಾಂಗಧ, ದುಷ್ಯಂತ, ಅರ್ಜುನ, ದೇವವೃತ, ದ್ರೋಣ, ಮಾರ್ತಾಂಡತೇಜ, ಕೋಲಮುನಿ, ಕಂಸ, ಬ್ರಹ್ಮ, ಬ್ರಹ್ಮಲಿಂಗೇಶ್ವರ ಮುಂತಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಮಟಪಾಡಿ ಶೈಲಿಯ ಕಿರುಹೆಜ್ಜೆಗಳನ್ನು ಇವರ ಕುಣಿತದಲ್ಲಿ ಕಾಣಬಹುದು. ಇವರ ಕೃಷ್ಣನ ವೇಷದಲ್ಲಿ ಶಿರಿಯಾರ ಮಂಜುನಾಯ್ಕರ ಹೋಲಿಕೆಯನ್ನು ಗುರುತಿಸಬಹುದು. ಸ್ಪಷ್ಟವಾದ ಉಚ್ಛಾರ, ನಿರರ್ಗಳ ಮಾತುಗಾರಿಕೆ, ಹಿತಮಿತ ಕುಣಿತ, ಸುಂದರ ರೂಪ, ಅಪಾರ ಜ್ಞಾನಸಂಪತ್ತು ಇವರ ವಿಶೇಷತೆಗಳಾಗಿವೆ. ಕಿರಿಯ ಕಲಾವಿದರನ್ನು ಕುಗ್ಗಿಸದೆ ಸೂಕ್ತ ಮಾರ್ಗದರ್ಶನ ನೀಡಿ ತಿದ್ದುವ ರೀತಿ ಅನನ್ಯ.

ಕಕ್ಕುಂಜೆ ಅನಂತ್ ಕುಲಾಲ್
ಜನನ : ಪೆಬ್ರವರಿ 26, 1956
ಜನನ ಸ್ಥಳ : ಕಕ್ಕುಂಜೆ ಗ್ರಾಮ
ಉಡುಪಿ ತಾಲೂಕು
ಕರ್ನಾಟಕ ರಾಜ್ಯ
ಕಲಾಸೇವೆ:
ಅಮೃತೇಶ್ವರಿ, ಹಿರಿಯಡ್ಕ, ಸಾಲಿಗ್ರಾಮ, ಪೇರ್ಡೂರು, ಹಾಲಾಡಿ ಮೇಳಗಳಲ್ಲಿ ಯಕ್ಷ ತಿರುಗಾಟ ಪೂರೈಸಿ, ಪ್ರಸ್ತುತ ಮಾರಣಕಟ್ಟೆ ಮೇಳದಲ್ಲಿ ಪ್ರಧಾನ ಪುರುಷ ವೇಷಧಾರಿಯಾಗಿ 33ವರ್ಷಗಳಿಂದ ಸೇವೆ ಸಲ್ಲಿಸುತಿದ್ದಾರೆ
ಪ್ರಶಸ್ತಿಗಳು:
ಹಲಾವಾರು ಸ೦ಘ-ಸ೦ಸ್ಥೆಗಳಿ೦ದ ವಿವಿಧ ಪ್ರಶಸ್ತಿಗಳು.

ಪುರಸ್ಕಾರ ಹಾಗೂ ಸನ್ಮಾನಗಳು

ಬೇಂಗಳೂರು, ಮಂಬೈ, ಗೋವಾ, ಪುಣೆ, ಇತರೆಡೆಗಳಲ್ಲಿ ತಮ್ಮ ಪಾತ್ರ ಪರಿಚಯವನ್ನು ಕಲಾರಸಿಕರಿಗೆ ಉಣಬಡಿಸಿದ್ದಾರೆ. ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ, ಉಡುಪಿ ಶ್ರೀ ಕೃಷ್ಣಮಠದ ಸಂದ್ಯಾ ಸಪ್ತಾಹ, ರಜತಾದ್ರಿ ಯಕ್ಷ ಮಿತ್ರ ಮಂಡಳಿ ಬೆಂಗಳೂರು, ಅಯ್ಯಪ್ಪ ಸ್ವಾಮಿ ಭಕ್ತವೃಂದ ಹೊಸೂರು, ಮಾರಣಕಟ್ಟೆ ಶ್ರೀಧರ ಮಂಜರು ಮತ್ತು ಸಹೋದರರು. ಮೊಳಹಳ್ಳಿ ಮಾವಿನಕಟ್ಟೆ ಕನ್ನಡ ಬರಹಗಾರರರ ಪ್ರಶಸ್ತಿ 2013 ಮುಂತಾದ ಪುರಸ್ಕಾರ ಹಾಗೂ ಸನ್ಮಾನಗಳನ್ನು ಪಡೆದಿದ್ದಾರೆ.

ಪ್ರಸ್ತುತ ಕಲಾಸೇವೆಯೊಂದಿಗೆ ಪತ್ನಿ ಮತ್ತು ಪುತ್ರರೊಂದಿಗೆ ಮೊಳಹಳ್ಳಿಯ ಹೊರ್ನಾಡಿಯಲ್ಲಿ ವಾಸವಾಗಿದ್ದಾರೆ.

****************






















Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Umesh shetty(10/16/2014)
#ಅನಂತ್_ಕುಲಾಲ್ ಶ್ರೀ ಬ್ರಹ್ಮಲಿಂಗೇಶ್ವರನು ಆಯೂರಾರೋಗ್ಯ,ಐಶ್ವರ್ಯವನ್ನು ಕರುಣಿಸಿ ಇನ್ನೂ ಹಲವು ವರ್ಷಗಳ ಕಾಲ ನಿಮ್ಮಿಂದ ಕಲಾಸೇವೆಯನ್ನು ಪಡೆಯಲಿ ಎಂದು ಆಶಿಸುತ್ತೆನೆ... ಎಲೆಮರೆಯ ಕಾಯಿಯಂತಿರುವ ಕಲಾವಿದನಿಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೀರಿ ಈ ಕಾರ್ಯ ಹೀಗೆ ಮುಂದುವರಿಯಲಿ #ನಾಗರಾಜ್
raghu shetty(10/16/2014)
ಇವರ ಹಲವಾರು ವೇಷಗಳನ್ನು ಬಾಲ್ಯದಿಂದಲೇ ಕಂಡವನು ನಾನು ಇವರ ಹಿತ ಮಿತವಾದ ಮಾತು..ಅಪಾರ ಅನುಭವ ನಿಜಕ್ಕೂ ಪ್ರಶಂಸನಿಯ.. ಸೌಮ್ಯ ಸ್ವಭಾವದ ಕುಲಾಲರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿ ಸಿಗಲಿ.. ಶ್ರೀ ದೇವರ ದಯೆ ಇರಲಿ.... ಇಂತಹ ಬಯಲಾಟದ ಬಗ್ಗೆ ಹಲವಾರು ಲೇಖನಗಳು ನಿಮ್ಮ ಮೂಲಕ ಮೂಡಿಬರಲಿ ನಾಗರಾಜ್ ಶೆಟ್ಟಿಯವರೆ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ