ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ನೀಲಾವರ ಲಕ್ಷ್ಮೀನಾರಾಯಣಯ್ಯರವರಿಗೆ ಸಕ್ಕಟ್ಟು ಪ್ರಶಸ್ತಿ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶನಿವಾರ, ಒಕ್ಟೋಬರ್ 18 , 2014

ಬಡಗುತಿಟ್ಟು ಯಕ್ಷಗಾನ ರಂಗವನ್ನು ತನ್ನ ಬಣ್ನದ ಆರ್ಭಟದಿಂದ ಬೆರಗುಗೊಳಿಸಿ ಬಡಗುತಿಟ್ಟಿಗೊಬ್ಬರೇ ಸಕ್ಕಟ್ಟು ಎಂಬಷ್ಟು ಕೀರ್ತಿ ಗಳಿಸಿದ ಹಾರಾಡಿರಾಮ ಗಾಣಿಗ ಪ್ರಶಸ್ತಿ ಪುರಸ್ಕ್ರತ ಸಕ್ಕಟ್ಟು ಇಂದು ನಮ್ಮೊಂದಿಗಿಲ್ಲ. ಅವರ ಕುಟುಂಬದವರು ಅವರ ಹೆಸರಿನಲ್ಲಿ ಸಕ್ಕಟ್ಟು ಪ್ರತಿಷ್ಟಾನ ಹುಟ್ಟುಹಾಕಿ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಬಂದಿದೆ. ಅದರಲ್ಲಿ ಪ್ರತೀ ವರ್ಷ ಸಕ್ಕಟ್ಟು ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನವೂ ಒಂದು.

ಪ್ರತೀ ವರ್ಷ ಈ ಪ್ರಶಸ್ತಿಗೆ ಬಡಗಿನ ಹಿರಿಯ ಕಲಾವಿದರೊಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಈ ಸಾಲಿಗೆ ಈ ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆಯಾದವರು ಹಿರಿಯ ಭಾಗವತ ಗಮಕಿ ಶಿಕ್ಷಕ ಸುಮಾರು 90 ವರ್ಷ ಪ್ರಾಯದ ವಯೋವೃದ್ದ ನೀಲಾವರ ಲಕ್ಷ್ಮೀನಾರಾಯಣ ರಾವ್.

ಪ್ರಶಸ್ತಿ ಪ್ರದಾನ, ತಾಳಮದ್ದಳೆ ಮತ್ತು ಯಕ್ಷಗಾನ ಪ್ರದರ್ಶನ ಕಾರ್ಯಕ್ರಮಗಳು ಶ್ರೀ ಸೌಕೂರು ದುರ್ಗಾಪರಮೇಶ್ವರಿಯ ಸನ್ನಿದಾನದಲ್ಲಿ ನವೆ೦ಬರ್ 2 ಬಾನುವಾರ ಜರಗಲಿದೆ.

ಐಗಳ ಕುಟು೦ಬಸ್ಥರು

ಬಡಗುತಿಟ್ಟು ಯಕ್ಷಗಾನದ ಆಡೊಂಬಲವಾದ ಉಡುಪಿ ತಾಲೂಕು ನೀಲಾವರದಲ್ಲಿ ಸೋಮೇಶಯ್ಯ ಮತ್ತು ಮಹಾಲಕ್ಷ್ಮಿ ದಂಪತಿಗಳ ದ್ವಿತೀಯಪುತ್ರನಾಗಿ 1925ರಲ್ಲಿ ಲಕ್ಷ್ಮೀನಾರಾಯಣಯ್ಯನವರ ಜನನವಾಯಿತು. ಅವರ ಅಣ್ಣ ಬಡಗುತಿಟ್ಟಿನ ಕುಂಜಾಲು ಶೈಲಿಯ ಖ್ಯಾತ ಭಾಗವತ ಮತ್ತು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗಿದ್ದ ನೀಲಾವರ ರಾಮಕೃಷ್ಣಯ್ಯನವರು. ಸಂಗೀತ ವಿದ್ವಾಂಸರಾದ ಅವರು ಡಾ. ಕಾರಂತರೊಂದಿಗೆ ವಿದೇಶದಲ್ಲೂ ಆ ಕಾಲದಲ್ಲಿ ಯಕ್ಷಗಾನ ಕಾರ್ಯಕ್ರಮ ಮಾಡಿದ್ದು ಮಾತ್ರವಲ್ಲದೇ ನೂರಾರು ಶಿಷ್ಯರನ್ನ ತರಬೇತು ಗೊಳಿಸಿದ್ದಾರೆ.

ಮೂಲತ ಇವರೆಲ್ಲರೂ ಬೈಕಾಡಿಯ ಕಾಮೇಶ್ವರ ಯಕ್ಷಗಾನ ಮತ್ತು ಐಗಳ ಮಠದ ಸ್ಥಾನಿಕ ಬ್ರಾಹ್ಮಣರು. 120 ವರ್ಷಗಳ ಹಿಂದೆ ನೀಲಾವರಕ್ಕೆ ಬಂದ ಇವರ ಹಿರಿಯರು ಆ ಕಾಲದಲ್ಲಿ ಶಾಲೆಗಳು ಇಲ್ಲದ್ದರಿಂದ ಐಗಳಾಗಿ ಊರಿನ ಜನತೆಗೆ ವಿದ್ಯೆ ಮತ್ತು ಕಲೆಯನ್ನು ಭೋದಿಸುತಿದ್ದರು. 1917ರಲ್ಲಿ ಊರಿನ ಹಿರಿಯರಾದ ಸುಬ್ಬಣ್ಣ ಶೆಟ್ಟರು ಶಾಲೆ ಸ್ಥಾಪಿಸಿದ್ದರಿಂದ ಇವರ ಐಗಳತನ ಕೊನೆಗೊಂಡಿತು. ಇವರ ಅಜ್ಜ ರಾಮಣ್ಣಯ್ಯನವರು ಹಾರಾಡಿಯಲ್ಲಿ ಐಗಳಾಗಿದ್ದು ಊರಿನ ಜನಗಳಿಗೆ ವಿದ್ಯಾಬ್ಯಾಸ ಮತ್ತು ಯಕ್ಷಗಾನದ ಹಾಡು ಕಲಿಸುತಿದ್ದರು. ಪ್ರಸಿದ್ದ ಕಲಾವಿದ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಹಾರಾಡಿ ರಾಮ ಗಾಣಿಗರು ಇವರ ಶಿಷ್ಯ. ಇವರು ತಾಳೆ ಓಲೆಗಳಲ್ಲಿ ಪ್ರಸಂಗ ಬರೆದು ರಾಮಗಾಣಿಗರಿಗೆ ನೀಡುತಿದ್ದರು

ಭಾಗವತ ಕುಟು೦ಬದ ಕುಡಿ

ಲಕ್ಷ್ಮೀ ನಾರಾಯಣಯ್ಯನವರ ತಂದೆ ಸೋಮೇಶಯ್ಯನವರು ಯಕ್ಷಗಾನ ಅಭ್ಯಾಸ ಮಾಡಿ ವೃತ್ತಿ ಮೇಳದಲ್ಲಿ ತಿರುಗಾಟ ಮಾಡಿದವರು. ದಾಸರ ಪದ ಮತ್ತು ಭಜನೆಯಲ್ಲೂ ನಿಷ್ಣಾತರು. ಅಣ್ಣ ನೀಲಾವರ ರಾಮಕೃಷ್ಣಯ್ಯರವರಿ೦ದ ಯಕ್ಷಗಾನ ಭಾಗವತಿಕೆಯನ್ನೂ, ಗೊದ್ದನಕಟ್ಟೆ ಸುಬ್ರಾಯರಿಂದ ಮದ್ದಳೆವಾದನವನ್ನೂ, ವಿದ್ವಾನ್ ನೀಲಾವರ ಶ್ರೀನಿವಾಸ ಕಲ್ಕೂರರಿಂದ ಕರ್ನಾಟಕಿ ಸಂಗೀತವನ್ನೂ, ಬಾರಕೂರು ಆನಂದರಾಯರಿಂದ ತಬಲಾವಾದನವನ್ನೂ ಕಲಿತು ಬಡಗುತಿಟ್ಟಿನ ಕುಂಜಾಲು ಶೈಲಿಯ ಪ್ರಾತಿನಿಧಿಕ ಭಾಗವತರೆಂದು ಗುರುತಿಸಲ್ಪಟ್ಟವರು. ಭಾಗವತಿಕೆಯೊಂದಿಗೆ ವಯಲಿನ್ ಸಾಥಿಗೊಳಿಸಿ ಕ್ರಾಂತಿ ಮಾಡಿದವರು.

ನೀಲಾವರ ಲಕ್ಷ್ಮೀನಾರಾಯಣಯ್ಯ
ಜನನ : 1925
ಜನನ ಸ್ಥಳ : ನೀಲಾವರ
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಸಾಹಿತ್ಯ ಸಂಗೀತ ಗಮಕ ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸೇವೆ

ಪ್ರಶಸ್ತಿಗಳು:
ಕರ್ನಾಟಕ ಸರಕಾರ 2001ರ ಸಾಲಿನ ರಾಜ್ಯ ಪ್ರಶಸ್ತಿಯೂ ಸೇರಿದ೦ತೆ ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ

ಮರಣ ದಿನಾ೦ಕ : ಡಿಸೆ೦ಬರ್ 27, 2014
ದೀರ್ಘಕಾಲ ವಿವಿಧ ಮೇಳಗಳಲ್ಲಿ ಭಾಗವತರಾಗಿ, ಮದ್ದಳೆಗಾರರಾಗಿ ದುಡಿದು ಅನಾರೋಗ್ಯದಿಂದ ಮೇಳಬಿಟ್ಟು 1976ರಿಂದ 1986ರವರೆಗೆ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗಿ ಕಾರಂತರ ಯಕ್ಷರಂಗದ ಭಾಗವತರಾಗಿ ದೇಶ ವಿದೇಶದಲ್ಲಿ ಯಕ್ಷಗಾನದ ಕಂಪನ್ನು ಬೀರಿದರು. ಒಟ್ಟಾರೆ ಇವರ ಕುಟುಂಬವೇ ಯಕ್ಷಗಾನದ ತವರುಮನೆ.

ಸಾಹಿತ್ಯ, ಸಂಗೀತ, ಗಮಕ ಯಕ್ಷಗಾನದಲ್ಲಿ ಸೇವೆ

ಸ್ವತಹ ಶಿಕ್ಷಕರಾದ ಲಕ್ಷ್ಮೀನಾರಾಯಣರಾಯರು 1945ರಿಂದ 1951ರವರೆಗೆ ನೀಲಾವರ ಮಹಿಷಮರ್ದಿನಿ ಪ್ರಾಥಮಿಕ ಶಾಲೆಯಲ್ಲಿ 36 ವರ್ಷ ಅದ್ಯಾಪಕ ವೃತ್ತಿ ಮಾಡಿ 55ನೇ ವಯಸ್ಸಿನಲ್ಲಿ ನಿವೃತ್ತಿಹೊಂದಿದರು.

ಈ ಅವಧಿಯಲ್ಲಿ ಅಣ್ಣ ರಾಮಕೃಷ್ಣಯ್ಯನವರಿಂದ ಯಕ್ಷಗಾನ ಭಾಗವತಿಕೆ, ತಂದೆಯಿಂದ ಷಟ್ಪದಿ ಕಾವ್ಯವಾಚನ, ಶ್ರೀನಿವಾಸ ಕಲ್ಕೂರರಿಂದ ಸಂಗೀತ, ಗಮಕಿ ಚಂದ್ರಯ್ಯನವರಿಂದ ಗಮಕವನ್ನು ಅಭ್ಯಾಸಮಾಡಿ 11 ವರ್ಷಗಳ ಕಾಲ ಕೊಕ್ಕರ್ಣೆ ಶಿಕ್ಷಕ ತರಬೇತಿ ಸಂಸ್ಥೆಯಲ್ಲಿ, ಬಾರಕೂರು, ಮ೦ದಾರ್ತಿ, ಆರೂರು, ಉಡುಪಿಯಲ್ಲಿ ಗಮಕ ಪ್ರವೇಶ ಪ್ರೌಢ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ತರಬೇತುದಾರರಾಗಿ, ಗಮಕ ಪ್ರಚಾರ ಮತ್ತು ಆಸಕ್ತರಿಗೆ ಸಂಗೀತ ಅಭ್ಯಾಸವನ್ನೂ ಮಾಡಿಸಿದರು.

ಆಸುಪಾಸಿನ ಶಾಲೆಗಳಲ್ಲಿ ವಾರ್ಷಿಕೋತ್ಸವಕ್ಕೆ ಹಿಮ್ಮೇಳವಾದಕರಾಗಿ ಸಹಕರಿಸಿದರು. ಪ್ರತೀವರ್ಷ ಬಾಳೆಕುದ್ರ್ ಶ್ರೀರಾಮ ಭಜನಾ ವಿಶ್ವಸ್ಥ ಮಂಡಳಿಯ 7 ದಿನಗಳ ಅಹೋರಾತ್ರಿ ಭಜನೆಯಲ್ಲಿ ನಿರಂತರ 55 ವರ್ಷ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಆರೂರು ಪಟ್ಟಾಬಿಯವರ ತುಳು ಚಿತ್ರ “ಕರಿಯಣಿ ಕಟ್ಟಂದಿ ಕಂಡಣಿ”ಸಂಗೀತ ಅದ್ಯಾಪಕರಾಗಿ ಕಾಣಿಸಿಕೊಂಡಿದ್ದರು. 1980ರಿಂದ ಮಂಗಳೂರು ಆಕಾಶವಾಣಿ ಬಿ ಹೈಗ್ರೇಡ್ ಕಲಾವಿದರಾಗಿಕಾಣಿಸಿಕೊಂಡ ಇವರು 1983ರಿಂದ ಉ‌ಡುಪಿ ಯಕ್ಷಗಾನ ಕೇಂದ್ರದಲ್ಲಿ ಭಾಗವತಿಕೆ ಶಿಕ್ಷಕರಾಗಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಬಹುಮುಖಿ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಸರಕಾರ 2001ರ ಸಾಲಿನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಸಾಹಿತ್ಯ ಸಂಗೀತ ಗಮಕ ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಲಕ್ಷ್ಮೀ ನಾರಾಯಣಯ್ಯನವರಿಗೆ ಸಕ್ಕಟ್ಟು ಪ್ರಶಸ್ತಿ ಯೋಗ್ಯವಾಗೀಯೆ ಸಂದಿದೆ.
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Harish kakkunje(10/19/2014)
He deserves the award . Not only this according to me he should be felicitated with the Rajya prashasti and even Rastra prashasti for the service rendered by their family to the great art of Karnataka .
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ