ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಕುಮಟಾ ಪಟ್ಟಣದಲ್ಲಿ ಮನರಂಜಿಸಿದ ಶ್ರೀಕಷ್ಣ ಕಥಾಮತ ಯಕ್ಷಗಾನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ನವ೦ಬರ್ 26 , 2014
ನವ೦ಬರ್ 26, 2014

ಕುಮಟಾ ಪಟ್ಟಣದಲ್ಲಿ ಮನರಂಜಿಸಿದ ಶ್ರೀಕಷ್ಣ ಕಥಾಮತ ಯಕ್ಷಗಾನ

ಕುಮಟಾ : ಪಟ್ಟಣದಲ್ಲಿ ಕಲಾಗಂಗೋತ್ರಿ ಆಶ್ರಯದಲ್ಲಿ ಶ್ರೀ ಪೆರ್ಡೂರು ಮೇಳದ ಕಲಾವಿದರಿಂದ ಏರ್ಪಡಿಸಿದ್ದ ಶ್ರೀಕಷ್ಣ ಕಥಾಮತ'' ಯಕ್ಷಗಾನ ಪ್ರೇಕ್ಷಕರನ್ನು ಮನರಂಜಿಸಿತು.

ಕಲಾಗಂಗೋತ್ರಿಯ ವಿಶಿಷ್ಟ ಪರಿಕಲ್ಪನೆಯಲ್ಲಿ ಮೂರು ರಂಗಸ್ಥಳಗಳಲ್ಲಿ ವಿವಿಧ ದಶ್ಯಾವಳಿಗಳು ಮೂಡಿ ಬಂದವು. ಕಾರಾಗೃಹದಲ್ಲಿ ಕಂಸನು ವಸುದೇವ-ದೇವಕಿಯರನ್ನು ಬಂಧಿಸಿರುವುದು. ಕಂಸನು 6 ಶಿಶುಗಳನ್ನು ಭೀಭತ್ಸ್ಯವಾಗಿ ಹತ್ಯೆ ಮಾಡಿರುವುದು, ವಸುದೇವನು ಬಾಲಕಷ್ಣನನ್ನು ಬುಟ್ಟಿಯಲ್ಲಿ ಹೊತ್ತುಕೊಂಡು ಹೋಗುವಾಗ ಯಮುನಾ ನದಿ ದಾರಿ ಬಿಡುವುದು. ಬುಟ್ಟಿಯಲ್ಲಿದ್ದ ಬಾಲಕಷ್ಣನ ರಕ್ಷಿಸುವ ಆದಿಶೇಷ, ರಕ್ಕಸಿ ಪೂತನಿಯ ಸಂಹಾರ, ಕಾಳಿಂಗ ಮರ್ದನ, ಶ್ರೀಕಷ್ಣನು ಶಕಟಾಸುರ, ಬಕಾಸುರ ಇನ್ನಿತರ ರಾಕ್ಷಸರನ್ನು ಹನನ ಮಾಡುವ ದಶ್ಯಾವಳಿಗಳ ಯಕ್ಷಗಾನದ ಹೊಸ ಕಲೆಯ ಅನಾವರಣಗೊಂಡಿತು. ಗೋಪಿಕಾ ಸ್ತ್ರೀಯರೊಡನೆ ವಿವಿಧ ವಿನೋದಾವಳಿ, ಗೋವರ್ಧನ ಗಿರಿಯನ್ನು ಕಿರುಬೆರಳಿಂದ ಮೇಲೆತ್ತುವ ದಶ್ಯ ಪ್ರೇಕ್ಷಕರಿಗೆ ದ್ವಾಪರಯುಗದ ಕಲ್ಪನೆ ನೀಡಿತು.

ಕುಮಟಾದ ಉದಯೋನ್ಮುಖ ಕಲಾವಿದ ಭಗವಾನ ಅವರಿಂದ ವಿವಿಧ ದಶ್ಯಾವಳಿ ನಿನಾದ ರಾಮಣ್ಣರವರ ಧ್ವನಿ- ಬೆಳಕಿನಲ್ಲಿ ನೆಜತೆ ಪಡೆದುಕೊಂಡ ''ಶ್ರೀಕಷ್ಣ ಕಥಾಮತ''ವನ್ನು ಸವಿದು ಪ್ರೇಕ್ಷಕರು ಸಂತಪ್ತರಾದರು. ಕಂಸನ ಪಾತ್ರದಲ್ಲಿ ಶ್ರೀಪಾದ ಭಟ್ಟ ಥಂಡಿ ಅಮೋಘವಾಗಿ ಅಭಿನಯಿಸಿದರು. ವಸುದೇವನಾಗಿ ಸ್ಥಳೀಯ ಕಲಾವಿದ ವಸಂತ ಹೆಗಡೆ ಬುಟ್ಟಿಯಲ್ಲಿ ಬಾಲಕಷ್ಣನನ್ನು ಹೊತ್ತೊಯ್ಯುವ ಪಾತ್ರ ನಿರ್ವಹಿಸಿದರು. ಕಷ್ಣಲೀಲೆಯ ಕಷ್ಣನಾಗಿ ಉದಯ ಹೆಗಡೆ ಕಡಬಾಳ, ಮಾಯಾಪೂತನಿಯಾಗಿ ನೀಲ್ಕೋಡ್ ಶಂಕರ, ಕಂಸವಧೆಯ ಕಷ್ಣನಾಗಿ ಕಣ್ಣೀಮನೆ ಸ್ವಯಂವರದ ಕಷ್ಣನಾಗಿ ಗೋಪಾಲಾಚಾರ್ಯ, ಅಕ್ರೂರನಾಗಿ ಕೊಂಡದಕುಳಿ ತಮ್ಮ ಅಭಿನಯದ ಮೂಲಕ ಜನಮನ ಗೆದ್ದರು. ಕಂಸವಧೆ ಕಂಸನಾಗಿ ವಿದ್ಯಾಧರ, ರುಕ್ಮನಾಗಿ ತೋಟಿ, ಹಾಸ್ಯಗಾರರಾದ ಚಪ್ಪರಮನೆ, ಕಾಸರಕೋಡ ಕ್ಯಾದಗಿ ದೇವಾಡಿಗ ಹಾಸ್ಯದ ಹೊನಲು ಹರಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಭಾಗವತರಾದ ಬ್ರಹ್ಮೂರು ಸುರೇಶ ಶೆಟ್ಟಿ, ರಾಘವೇಂದ್ರ ಆಚಾರರ ತ್ರಿವಳಿ ಗಾನ ಸುಧೆಯಲ್ಲಿ ಪ್ರೇಕ್ಷಕರು ಮಿಂದೆದ್ದರು. ಸುನಿಲ್ ಭಂಡಾರಿ, ಪ್ರಶಾಂತ ಭಂಡಾರಿ ರಾಜೇಶ್ವರ ಮದ್ದಳೆ-ಚೆಂಡೆವಾದನ ಕರ್ಣಾನಂದ ನೀಡಿತು. ಕಲಾ ಗಂಗೋತ್ರಿ ಕಲಿಕಾ ಕೇಂದ್ರದ ''ದ್ಯಾರ್ಥಿನಿಯರು ಹಾಗೂ ಇನ್ನಿತರ ಕಲಾವಿದರ ಶ್ರೇಷ್ಠ ಮಾತುಗಾರಿಕೆ ಮತ್ತು ಅಭಿನಯದಿಂದ ಕೂಡಿದ ಅಪರೂಪದ ಯಕ್ಷಗಾನ ವೀಕ್ಷಿಸಿದವರ ಮನದಲ್ಲಿ ಅಚ್ಚಾಗಿ ಉಳಿಯುವಂತೆ ಮಾಡಿತು.

ಬುದ್ಧಿಮಾಂಧ್ಯ ಮಕ್ಕಳ ಶಾಲೆ ದಯಾನಿಲಯದ ಸಂಸ್ಥಾಪಕ ಸಿರಿಲ್ ಸಾಲು ಲೋಪಿಸ್ ಅಳ್ವೆಕೋಡಿ ಅವರಿಗೆ ಕಲಾಗಂಗೋತ್ರಿ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು:

ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಇದೇ ಮೊದಲಬಾರಿಗೆ ಯುವ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಲು ಕಲಾ ಗಂಗೋತ್ರಿ ಯುವ ಪ್ರಶಸ್ತಿ ಪ್ರಾರಂಭಿಸಿದೆ. ಕಳೆದ 3 ವರ್ಷಗಳಿಂದ ತಾಲೂಕಿನ ಅಳ್ವೆಕೋಡಿಯಲ್ಲಿ 30 ಬುದ್ದಿಮಾಂದ್ಯ ಮಕ್ಕಳಿಗೆ ಖಿನ್ನತೆ ದೂರ ಮಾಡಿ ಇತರ ಮಕ್ಕಳಂತೆ ಬಾಳುವಂತೆ ತರಬೇತಿ ನೀಡಲು ''ದಯಾನಿಲಯ'' ''ಶೇಷ ಶಾಲೆಯನ್ನು ನಡೆಸುತ್ತ ಯುವ ಜನಾಂಗಕ್ಕೆ ಮಾದರಿಯಾಗಿ ಸಮಾಜ ಸೇವೆ ಸಲ್ಲಿಸುತ್ತಿರುವ 29 ರ ಯುವಕ ಸಿರಿಲ್ ಲೋಪಿಸ್ ಅವರಿಗೆ ರೂ 10,000 ನಗದು ಸಹಿತ ''ಕಲಾಗಂಗೋತ್ರಿ ಯುವ ಪ್ರಶಸ್ತಿ'' ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಲಾ ಗಂಗೋತ್ರಿಯ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿ, ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಹೆಚ್ಚಿನ ಕಲಾಭಿಮಾನಿಗಳನ್ನು ಯಕ್ಷಗಾನ ಕಲೆಯತ್ತ ಸೆಳೆಯುವ ಉದ್ದೇಶ ಹೊಂದಿ ಕಲಾ ಗಂಗೋತ್ರಿಯು ಇಂಥ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು. ವೇದಿಕೆಯಲ್ಲಿ ಕುಮಟಾ ಪಿ. ಎಸ್. ಐ ಶಿವಕುಮಾರ, ಯುವ ಮುಖಂಡ ಸೂರಜ್ ನಾಯ್ಕ ಸೋನಿ, ಕಲಾ ಗಂಗೋತ್ರಿ ಕೋಶಾಧ್ಯಕ್ಷ. ಆರ್. ಡಿ ಪೆ, ಗೌರವ ಸಲಹೆಗಾರ ಆರ್. ಜಿ ಭಟ್ಟ, ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಲಾಗಂಗೋತ್ರಿ ಉಪಾಧ್ಯಕ್ಷ ಗಣೇಶ ಭಟ್ಟ ವಂದಿಸಿದರು. ಗಣೇಶ ಪಟಗಾರ ನಿರೂಪಿಸಿದರು.ಕೃಪೆ : http://www.vijaykarnataka.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ