ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ವಿದ್ಯಾಮಾನ್ಯ ಪ್ರಶಸ್ತಿ ಪುರಸ್ಕ್ರುತ ಹಿರಿಯ ಸ್ತ್ರೀ ವೇಷಧಾರಿ ಪಾತಾಳ ವೆಂಕಟರಮಣ ಭಟ್

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶನಿವಾರ, ಡಿಸೆ೦ಬರ್ 20 , 2014

ಉಡುಪಿಯ ಯಕ್ಷರಂಗಸ್ಥಳ (ರಿ. ) ಫ಼ಲಿಮಾರು ಮಠದ ಸಹಯೋಗದೊಂದಿಗೆ ಪ್ರತಿ ವರ್ಷ ನೀಡುತ್ತಿರುವ ವಿದ್ಯಾಮಾನ್ಯ ಪ್ರಶಸ್ತಿಗೆ ಈ ವರ್ಷ ತೆಂಕುತಿಟ್ಟಿನ ಹಿರಿಯ ಸ್ತ್ರೀ ವೇಷಧಾರಿ ಪಾತಾಳ ವೆಂಕಟರಮಣ ಭಟ್ಟರು ಆಯ್ಕೆಯಾಗಿದ್ದಾರೆ. ಇದೇ ದಶಂಬರ್ 25ರಂದು ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಕಾಣಿಯೂರು ಮಠಾದೀಶ ವಿದ್ಯಾವಲ್ಲಭ ಶ್ರೀಪಾದಂಗಳ ಉಪಸ್ಥಿತಿಯಲ್ಲಿ ಪಲಿಮಾರು ಮಠಾದೀಶ ವಿದ್ಯಾದೀಶ ಶ್ರೀಪಾದಂಗಳವರು ಪ್ರಶಸ್ತಿ ಪ್ರದಾನ ಮಾಡುವರು.

ಉಭಯ ತಿಟ್ಟುಗಳಲ್ಲೂ ಪ್ರಸಿಧ್ಧಿ

ಸ್ತ್ರೀವೇಷಧಾರಿಯಾಗಿ ಸುದೀರ್ಘ ಮೂರು ದಶಕಗಳ ಕಾಲ ರಂಗಸ್ಥಳದಲ್ಲಿ ಮಿಂಚಿದ ಪಾತಾಳ ವೆಂಕಟರಮಣ ಭಟ್ಟರು ಹಳೆಗಾಲದ ಯಕ್ಷಗಾನ ರಂಗರಸಿಕರ ಕನಸಿನ ಕನ್ಯೆ. ಕಾಂಚನ ಮೇಳ, ಬಡಗಿನ ಸೌಕೂರು ಮೇಳ, ಮೂಲ್ಕಿ ಸುರತ್ಕಲ್, ದರ್ಮಸ್ಥಳ ಮೇಳಗಳಲ್ಲಿ ತಿರುಗಾಟ ಮಾಡಿದ ಇವರು ಉಭಯ ತಿಟ್ಟಿನಲ್ಲಿ ರಂಗ ಸಾಮ್ರಾಜ್ನಿಯಾಗಿ ಮೆರೆದವರು. ಸ್ತ್ರೀ ಪಾತ್ರವಲ್ಲದೆ ಸಾತ್ವಿಕ ಪುಂಡುವೇಷಗಳಾದ ರಾಮ, ಲಕ್ಷ್ಮಣ, ವಿಷ್ಣು, ಕೃಷ್ಣ ಮುಂತಾದ ಪಾತ್ರಗಳಲ್ಲೂ ಮಿಂಚಿದವರು.

ಬಾಲ್ಯ, ಶಿಕ್ಷಣ, ಯಕ್ಷಾಗಾನ ಅರ್ರಗ್ರೇಟ೦

ಬಿ. ರಾಮಭಟ್, ಹೇಮಾವತಿ ಅಮ್ಮನವರ ಪುತ್ರನಾಗಿ 1933 ರಲ್ಲಿ ಜನಿಸಿದ ಭಟ್ಟರಿಗೆ ಈಗ ಎಂಬತ್ತೊಂದರ ಹರೆಯ. ಈಗಲೂ ಕುಣಿದು ಅಭಿನಯಿಸಿ ಯಕ್ಷಗಾನದ ಪಾರಂಪರಿಕ ಸೊಗಸನ್ನು ಪ್ರಕಟಿಸುವಾಗ ಬೆರಗು ಮೂಡಿಸುತ್ತದೆ. ಕಲಿತದ್ದು 8ನೇ ತರಗತಿ ಆದರೂ ಅನಂತರದ ವಿದ್ಯಾರ್ಜನೆ ಯಕ್ಷಗಾನವೆಂಬ ಬಯಲು ರಂಗಸ್ಥಳದಲ್ಲಿ. ಅಡುಗೆ ಭಟ್ಟರಾಗಿ ಮೇಳ ಸೇರಿದ ಇವರು ಕುಣಿತ ಕಲಿತದ್ದು ಪುತ್ತೂರು ಕೃಷ್ಣ ಭಟ್ ಮತ್ತು ಉಳ್ತೂರು ಸೀತಾರಾಮನವರಿಂದ. ವಿಠಲ ಮಾಸ್ತರರಿಂದ ಭರತನಾಟ್ಯದ ಮುದ್ರೆಗಳನ್ನು ಕಲಿತ ಇವರು ಲಾಲಿತ್ಯಪೂರ್ಣ ಕುಣಿತ ಅಭಿನಯಗಳಿಗೆ ಹೆಸರಾದವರು.

ಮೋಹಕ ರೂಪ ಮದುರ ಕಂಠ ಇವರ ಹೆಚ್ಚುಗಾರಿಕೆ. ಬೇಲೂರು ಶಿಲಾಬಾಲಿಕೆಯರ ಸೌಂದರ್ಯಕ್ಕೆ ಬೆರಗಾಗಿ ತನ್ನ ಪಾತ್ರಗಳಿಗೆ ಚೆಲುವಾದ ಆಹಾರ್ಯವನ್ನು ನಿರ್ಮಿಸಿಕೊಂಡು ಯಕ್ಷಗಾನದಲ್ಲಿ ಹೊಸದೊಂದು ಕ್ರಾಂತಿ ಮೂಡಿಸಿದವರು. ಅತ್ಯಂತ ನಿಷ್ಟಾವಂತ ಕಲಾವಿದರಾದ ಇವರು ತನ್ನ ಮಗನಾದ ಅಂಬಾಪ್ರಸಾದರಿಗೆ ಕಲಾದೀಕ್ಷೆ ನೀಡಿದ್ದಾರೆ. ಸದ್ಯ ಹೊಸನಗರ ಮೇಳದ ಕಲಾವಿದರಾದ ಅಂಬಾಪ್ರಸಾದರು ಬಡಗುತಿಟ್ಟಿನಲ್ಲೂ ತಿರುಗಾಟ ಮಾಡಿದ ಕಲಾವಿದರು. ಸಿರಸಿ ಮೇಳದಲ್ಲಿ ಪ್ರದರ್ಶಿಸುತಿದ್ದ ಭಾಗ್ಯ-ಭಾರತಿ ಪ್ರಸಂಗದ ಪಾತ್ರ ಇವರಿಗೆ ಖ್ಯಾತಿ ತಂದಿತ್ತ ಪಾತ್ರ.

ದರ್ಮಸ್ಥಳ ಮೇಳದಲ್ಲಿ ವೈವಿದ್ಯಮಯ ಪಾತ್ರಗಳು

ದರ್ಮಸ್ಥಳ ಮೇಳದಲ್ಲಿ ಸುದೀರ್ಘಕಾಲ ತಿರುಗಾಟ ಮಾಡಿದ ಪಾತಾಳದವರು ಕುರಿಯ ವಿಠಲ ಶಾಸ್ರಿಗಳಿಂದ ಪ್ರೇರೆಪಿತರಾಗಿ ಭರತ ನಾಟ್ಯದ ಹೆಜ್ಜೆಗಳನ್ನು ಯಕ್ಷಗಾನೀಯವಾಗಿ ಬಳಸಿದವರು. ಕಡತೋಕ ಮಂಜುನಾಥ ಬಾಗವತ, ಚಿಪ್ಪಾ‌ರು ಕೃಷ್ಣಯ್ಯ ಬಲ್ಲಾಳರ ಹಿಮ್ಮೇಳದಲ್ಲಿ ಗೋವಿಂದ ಭಟ್, ವಿಟ್ಲ ಗೋಪಾಲಕೃಷ್ಣ ಶಾಸ್ತ್ರಿ, ಕುಂಬ್ಳೆ ಸುಂದರ ರಾವ್, ಎಂಪೆಕಟ್ಟೆ ರಾಮಯ್ಯ ರೈ, ಪುತ್ತೂರು ನಾರಾಯಣ ಹೆಗ್ಡೆ, ಕಡಬ ಸಾಂತಪ್ಪ ಮುಂತಾದ ಸಹ ಕಲಾವಿದರೊಂದಿಗೆ ದರ್ಮಸ್ಥಳ ಮೇಳದಲ್ಲಿ ಇವರು ಇವರು ಮಾಡುತಿದ್ದ ದೇವಿ ಮಹಾತ್ಮೆಯ ದೇವಿ, ದಾಕ್ಷಾಯಣಿ, ಸೀತೆ, ದಮಯಂತಿ, ಕ್ಷೇತ್ರ ಮಹಾತ್ಮೆಯ ಬಲ್ಲಾಳ್ತಿ, ನೇತ್ರಾವತಿ ಪಾತ್ರಗಳು ಅಪಾರ ಜನಮನ್ನಣೆ ಪಡೆದಿತ್ತು.

ಪಾತಾಳ ವೆಂಕಟರಮಣ ಭಟ್
ಜನನ : 1933
ಜನನ ಸ್ಥಳ : ಪಾತಾಳ, ಪುತ್ತೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:

ಮೂರು ದಶಕಗಳ ಕಾಲ ಅಪ್ರತಿಮ ಸ್ತ್ರೀ ವೇಷಧಾರಿಯಾಗಿ ತೆ೦ಕು - ಬಡಗು ತಿಟ್ಟುಗಳಲ್ಲಿ ಕಲಾಸೇವೆ

ಪ್ರಶಸ್ತಿ, ಪುರಸ್ಕಾರಗಳು :
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಯಕ್ಷಗಾನ ಅಕಾಡೆಮಿ ಪ್ರಶಸ್ತಿ
  • ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ
  • ವಿಟ್ಲ ಗೋಪಾಲಕೃಷ್ಣ ಭಟ್ ಪ್ರತಿಷ್ಟಾನ ಪ್ರಶಸ್ತಿ
  • ಫ಼ಲಿಮಾರು ಮಠದ ]ವಿದ್ಯಾಮಾನ್ಯ ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನಗಳು

ಪ್ರಶಸ್ತಿ, ಪುರಸ್ಕಾರಗಳು

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ವಿಟ್ಲ ಗೋಪಾಲಕೃಷ್ಣ ಭಟ್ ಪ್ರತಿಷ್ಟಾನ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾದ ಇವರಿಗೆ ಉಡುಪಿಯ ಹಿರಿಯ ಯತಿವರಣ್ಯರ ಹೆಸರಿನ ವಿದ್ಯಾಮಾನ್ಯ ಪ್ರಶಸ್ತಿ ಸಹಜವಾಗಿ ಸಲ್ಲಿತ್ತಿದೆ.

***************

ಪಾತಾಳ ವೆಂಕಟರಮಣ ಭಟ್'ರವರ ಕೆಲವು ಛಾಯಾ ಚಿತ್ರಗಳು( ಕೃಪೆ : ಅ೦ತರ್ಜಾಲದ ಯಕ್ಷಗಾನಾಭಿಮಾನಿಗಳು )

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ