ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಅಕಾಡೆಮಿಗಳ ಕೆಲಸ

ಲೇಖಕರು :
ಡಾ. ಎಂ. ಪ್ರಭಾಕರ ಜೋಶಿ
ಶನಿವಾರ, ಜನವರಿ 3 , 2015
ಜನವರಿ 2, 2015

ಅಕಾಡೆಮಿಗಳ ಕೆಲಸ

ರಾಜ್ಯದಲ್ಲಿ ಇರುವ ಸಾಂಸ್ಕೃತಿಕ ಕ್ಷೇತ್ರದ ಹಲವು ಅಕಾಡಮಿಗಳ ಕಾರ್ಯವಿಧಾನ ಮತ್ತು ಚಟುವಟಿಕೆಗಳು ಹಲವು ಬಾರಿ ತಪ್ಪು ಕಾರಣಗಳಿಗಾಗಿ ಚರ್ಚೆಯಾಗುತ್ತವೆ. ಇದಕ್ಕೆ ಸರಕಾರದ ಧೋರಣೆಗಳು, ಅಕಾಡಮಿಗಳು, ಅವುಗಳ ಕುರಿತು ಇರುವ ಜನಪ್ರಿಯ ಗ್ರಹಿಕೆಗಳು - ಎಲ್ಲವೂ ಕಾರಣ.

ಅಕಾಡಮಿಗಳ ಕೆಲಸವೆಂಬುದು ಮುಖ್ಯವಾಗಿ - ಅಕಾಡಮಿಕ್‌, ಶೈಕ್ಷಣಿಕ, ಅಧ್ಯಯನಾತ್ಮಕ, ಕಲಾ ಸಂರಕ್ಷಣ, ವರ್ಧನಗಳಿಗೆ ಬೌದ್ಧಿಕಕಾರ್ಯ. ಎರಡನೆಯದು ಪ್ರಶಸ್ತಿಗಳು ಮತ್ತು ಆಯ್ದ ಪ್ರದರ್ಶನಗಳಿಗೆ ಅವಕಾಶ. ಈ ಉದ್ದೇಶಗಳಿಗಾಗಿ ಸಂಸ್ಥೆಗಳ ಜತೆ ಸಹಯೋಗ ಸೂಕ್ತ ನಿಬಂಧನೆಗಳೊಂದಿಗೆ. ಆದರೆ ಹಲವು ಬಾರಿ ಇದು ನಡೆಯುವುದಿಲ್ಲ. ರಾಜನೀತಿ ಸಹಿತ ಹಲವು ಸಹಜ ಕಾರಣಗಳಿರುತ್ತವೆ.

ಆದರೆ ಕಲಾವಿದರಿಗೆ ನೆರವು ಕೊಡುವುದು (ಆಪತ್ಸಹಾಯ, ಬಡತನ ನಿವಾರಣೆಗೆ), ಬೇರೆ ಪ್ರಶಸ್ತಿಗಳಿಗೆ (ಅಕಾಡಮಿಯೇತರ) ವ್ಯವಸ್ಥೆ ಇವು ಅಕಾಡೆಮಿಗಳ ಕೆಲಸವಲ್ಲ. ಆ ವಿಚಾರದಲ್ಲಿ ಅಕಾಡಮಿಗಳಿಗಿರುವುದು ಸಲಹೆ ನೀಡುವ ಸಾಧ್ಯತೆ ಮಾತ್ರ. ಹಾಗಾಗಿ ಅಕಾಡಮಿಗಳು ಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗಿಲ್ಲ ಎಂದು ತಿಳಿದವರೇ ಹೇಳುತ್ತಿರುವುದು ಅನುಚಿತ. ಅಕಾಡಮಿಗಳನ್ನು ಸರಕಾರ ಬದಲಾವಣೆಗೆ ಜೋಡಿಸಿ ಬದಲಿಸುವುದು ತಪ್ಪು. ಈ ಪ್ರಕ್ರಿಯೆಯ ಇತಿಹಾಸವು ಪರಿಶೀಲನಾರ್ಹ, ವಿಮಶಾìರ್ಹ.

ಆದರೆ ಅದರಿಂದಾಗಿ, ಹೊಸದಾಗಿ ನೇಮಕಗೊಂಡ ತಜ್ಞರ (ಉದಾ - ಯಕ್ಷಗಾನ ಅಕಾಡಮಿಯ ಡಾ| ಬೆಳಗಲ್‌ ವೀರಣ್ಣ) ಬಗೆಗೆ ಸಣ್ಣ ಮಾತು ಸಲ್ಲದು. ಅವರೂ ಸಮರ್ಥರು, ಕಲಾವಿದರು.

ಅಕಾಡಮಿಗಳು ತಾವೇನು, ತಾವೆಷ್ಟು ಎಂದು ಕಂಡುಕೊಂಡು ಕಾರ್ಯನಿರ್ವಹಿಸಬೇಕು, ಅವುಗಳಿಗೂ ದೊಡ್ಡ ಮಿತಿಗಳಿವೆ. ನೀಡಲಾದ "ಅನುದಾನ' ಬಹು ಅಲ್ಪ. ಆರು ಕೋಟಿ ಜನಸಂಖ್ಯೆಯ ಒಂದು ರಾಜ್ಯದ, ಸಾಂಸ್ಕೃತಿಕ ಅಕಾಡಮಿಯೊಂದು 50-60 ಲಕ್ಷ, 1 ಕೋಟಿ ಅನುದಾನದಲ್ಲಿ ಏನು ಮಾಡೀತು? ಅರ್ಧಾಂಶ ನಿತ್ಯವೆಚ್ಚ ಉಳಿದುದರಲ್ಲಿ - ಅಕಾಡಮಿಕ್ಸ್‌, ಪ್ರದರ್ಶನ, ಒತ್ತಡದ ಹಂಚುವಿಕೆ, ಪ್ರಾದೇಶಿಕ ನ್ಯಾಯ ಎಲ್ಲಾ ಆಗಬೇಕು.

ಯಕ್ಷಗಾನ ಅಕಾಡಮಿಯ ಮೂಲಕ ಯಕ್ಷಗಾನವನ್ನು ದೇಶ ಮತ್ತು ವಿಶ್ವಮಟ್ಟದಲ್ಲಿ ಮುಂದಿಡುವ -ಪ್ರೊಜೆಕ್ಟ್ ಮಾಡುವ -ಉದ್ದೇಶ ಇದ್ದರೆ ವರ್ಷಕ್ಕೆ ಕನಿಷ್ಠ ನೂರು ಕೋಟಿ ಅನುದಾನವನ್ನಾದರೂ ಕೊಡಲೇಬೇಕು.

ಸರಕಾರಕ್ಕೂ ತನ್ನ ಧೋರಣೆಗಳಿವೆಯಲ್ಲ?



ಕೃಪೆ : http://udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ